ರಾಜ್ಯಸುದ್ದಿ

Rate this item
(0 votes)

ವಾಕಿಂಗ್ ಹೋಗುತ್ತಿದ್ದ ಪಾದಚಾರಿಗೆ ಗೂಡ್ಸ್ ಲಾರಿ ಡಿಕ್ಕಿ ಪಾದಚಾರಿ ಸ್ಥಳದಲ್ಲೇ ಸಾವು.

 ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ವಾಕಿಂಗ್ ಹೋಗುತ್ತಿದ್ದ ಪಾದಚಾರಿಗೆ ಹಿಂದಿನಿಂದ ಅತೀ ವೇಗವಾಗಿ ಬಂದ ಗೂಡ್ಸ್ ಲಾರಿಯೊಂದು ಡಿಕ್ಕಿ ಹೊಡದ ಪರಿಣಾಮ ವ್ಯಕ್ತಿ ಸ್ಥಳದಲ್ಲಿ ಮೃತ ಪಟ್ಟಿದ್ದಾರೆ . ಪಟ್ಟಣದ ಕೋಟೆ ನಿವಾಸಿ ರಾಮಚಂದ್ರ(55) ಮೃತಪಟ್ಟ ದುದೈವಿ . ಸಂಜೆ ವೇಳೆಯಲ್ಲಿ ಮೈಸೂರು  ಮಳವಳ್ಳಿ ರಸ್ತೆಯಲ್ಲಿ  ಶಾಂತಿಕಾಲೇಜು ಕಡೆಗೆ ವಾಕಿಂಗ್ ಹೋಗುತ್ತಿದ್ದಾಗ ಪಾದಚಾರಿ ರಾಮಚಂದ್ರಗೆ ಡಿಕ್ಕಿಹೊಡೆದುಕೊಂಡು  ಗೂಡ್ಸ್ ವಾಹನದೊಂದಿಗೆ ಚಾಲಕ ಪರಾರಿ ಯಾಗಿದ್ದಾನೆ .ಈ ಸಂಬಂಧ ಮಳವಳ್ಳಿ ಪಟ್ಟಣದ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

 

Rate this item
(0 votes)

 ಅಡಕೆ ಕದಿಯಲು ಬಂದಿದ್ದ ಕಳ್ಳನೊಬ್ಬನನ್ನು ಹಿಡಿದು ಕಂಬಕ್ಕೆ ಕಟ್ಟಿಹಾಕಿ ಥಳಿಸಿದಾ ಗ್ರಾಮಸ್ಥರು ಹೊಸಹೊಳಲು ಗ್ರಾಮದ ಚಂದ್ರ ಸಿಕ್ಕಿಬಿದ್ದಿರುವ ಕಳ್ಳ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಅಡಿಕೆ ಕದಿಯುತ್ತಿದ್ದ ಕಳ್ಳನನ್ನು ಗ್ರಾಮಸ್ಥರು ಹಿಡಿದು ಕಂಬಕ್ಕೆ ಕಟ್ಟಿಹಾಕಿದ್ದರು.ಹೊಸಹೊಳಲು ಗ್ರಾಮದ ಯುವಕ ಚಂದು(23) ಅಡಿಕೆ ಕದಿಯುವ ವೇಳೆ ಗ್ರಾಮಸ್ಥರಿಗೆ ಸಿಕ್ಕಿಕೊಂಡು, ಕಂಬಕ್ಕೆ ಕಟ್ಟಿಸಿಕೊಂಡವನು. ಜತೆಯಲ್ಲಿದ್ದ ಈತನ ಸ್ನೇಹಿತರು ಗುಂಡ ಮತ್ತು ಹೇಮಂತ್ ಸೇರಿದಂತೆ ಇತರರು ತಪ್ಪಿಸಿಕೊಂಡು ತಲೆಮರಿಸಿಕೊಂಡಿದ್ದಾರೆ.

ಗ್ರಾಮದಲ್ಲಿ ತಡ ರಾತ್ರಿ ಹೊಸಹೊಳಲು ಗ್ರಾಮದ ಚಂದು ತನ್ನ ಸ್ನೇಹಿತರಾದ ಹೇಮಂತ, ಗುಂಡ ಸೇರಿದಂತೆ ಇತರರೊಂದಿಗೆ ಆಫೆ ಆಟೋವನ್ನು ತೆಗೆದುಕೊಂಡು ವಿರೇಶ್ ಎಂಬುವರ ಮನೆಯ ಅಡಿಕೆ ಗೋದಾಮಿನಲ್ಲಿ ಕಳ್ಳತನಕ್ಕೆ ಮುಂದಾಗಿದ್ದಾರೆ. ಗೋಧಾಮಿನಲ್ಲಿ ಸದ್ದು ಕೇಳಿಸಿದ ಪರಿಣಾಮ ವೀರೇಶ್ ಮತ್ತು ಕುಟುಂಬ ಸದಸ್ಯರು ಎಚ್ಚರಗೊಂಡು ಬಂದು ಕಳ್ಳತನ ಮಾಡುತ್ತಿದ್ದ ಚಂದುನನ್ನು ಹಿಡಿದಿದ್ದಾರೆ. ಉಳಿದವರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ವಿಷಯ ತಿಳಿದ ಗ್ರಾಮಸ್ಥರು ಬಂದು ಚಂದುನನ್ನ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಎಸ್ಐ ಆನಂದ್ ಗೌಡ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಪರಾರಿಯಾಗಿರುವ ಕಳ್ಳರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಒಂದು ತಿಂಗಳ ಹಿಂದೆ ಗ್ರಾಮದಲ್ಲಿ ಹಳೇ ಸ್ಟೇಟ್ ಬ್ಯಾಂಕ್ ಬಳಿಯಿರುವ ನಾಗಣ್ಣ, ಮಾರಿಗುಡಿ ಬಳಿಯಿರುವ ಸತೀಶ್ ಎಂಬುವರ ಮನೆ ಬಳಿಯ ಅಡಿಕೆ ಗೋದಾಮಿನಲ್ಲಿ ಕಳ್ಳತನವಾಗಿತ್ತು. ವಿರೇಶ್ ಮನೆ ಬಳಿ ಕಳ್ಳತನದ ಸಮಯದಲ್ಲಿ ಸಿಕ್ಕಿರುವ ಕಳ್ಳರ ತಂಡವೇ, ಆ ಎರಡು ಕಳ್ಳತನವನ್ನು ಮಾಡಿರುವುದು ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ವಿರೇಶ್ ಮನೆಯಲ್ಲಿ ಸಿಸಿ ಕ್ಯಾಮಾರಾವಿದ್ದು ಪೊಲೀಸರು ಸಿಸಿ ಕ್ಯಾಮಾರವನ್ನು ತನಿಖೆಗೆ ಬಳಸಿಕೊಳ್ಳುತ್ತಿದ್ದಾರೆ. ಈಗ ಚಂದು ಪೊಲೀಸರ ವಶದಲ್ಲಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 

ಗ್ರಾಮದಲ್ಲಿ ಚಂದು ತನ್ನ ಗ್ರಾಮದವರೇ ಆದ ಗುಂಡಾ ಮತ್ತು ಹೇಮಂತ್​ ಎಂಬುವರ ಜತೆಗೂಡಿ ಅಡಕೆ ಕದಿಯುತ್ತಿದ್ದ. ಅದರಂತೆ ಚಂದು ಮತ್ತಾತನ ಸಹಚರರು ಎರಡು ಬೈಕ್​ಗಳು ಮತ್ತು ಒಂದು ಆಪೆ ಆಟೋದೊಂದಿಗೆ ಶುಕ್ರವಾರ ತಡರಾತ್ರಿ ಬೂಕನಕೆರೆ ಗ್ರಾಮದಲ್ಲಿ ಅಡಕೆ ಕದಿಯಲು ಬಂದಿದ್ದರು. ವೀರೇಶ್ ಎಂಬುವರ ಮನೆಯ ಗೋದಾಮಿನಲ್ಲಿ ಕಳ್ಳತನ ಮಾಡುತ್ತಿದ್ದಾಗ ನಿದ್ದೆಯಿಂದೆದ್ದ ವೀರೇಶ್​ ಕಳ್ಳರನ್ನು ಹಿಡಿಯಲು ಮುಂದಾಗಿದ್ದರು. ಆಗ ಚಂದು ಸಿಕ್ಕಿಬಿದ್ದರೆ, ಉಳಿದಿಬ್ಬರು ಕತ್ತಲಲ್ಲಿ ಓಡಿ ಪರಾರಿಯಾದರು ಎನ್ನಲಾಗಿದೆ.

ಈ ತಂಡ ಹಿಂದೆ ಎರಡು ಬಾರಿ ವೀರೇಶ್​ ಅವರ ಮನೆಯ ಗೋದಾಮಿನಲ್ಲಿ ಕಳ್ಳತನ ಮಾಡಿತ್ತು. ಆದರೆ, ಮೂರನೇ ಬಾರಿ ಕಳ್ಳತನ ಮಾಡಲು ಬಂದಾಗ ಅದೃಷ್ಟ ಕೈಕೊಟ್ಟಿತು ಎನ್ನಲಾಗಿದೆ. ಸ್ಥಳಕ್ಕೆ ಬಂದ ಗ್ರಾಮಾಂತರ ಠಾಣೆ ಪೊಲೀಸರು ಚಂದುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

 

Last modified on 02/02/2019
Rate this item
(0 votes)

ಚಿರತೆ ದಾಳಿಗೆ ಮೂರನೇ ಬಲಿ ಇನ್ನೂ ಕ್ರಮಕೈಗೊಳ್ಳದ ಅಧಿಕಾರಿಗಳು.

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಳ್ಳಿ ಹೋಬಳಿಯ ಬಿಕ್ಕಸಂದ್ರ ಗ್ರಾಮದಲ್ಲಿ ಮತ್ತೆ ಚಿರತೆ ದಾಳಿ. ವಜ್ರೇಶ್ ಎಂಬ ರೈತರಿಗೆ ಸೇರಿದ ಕುರಿಯನ್ನು ರೈತನ ಎದುರೆ ಎತ್ತಿ ಕೊಂಡುಹೋದ ಚಿರತೆ. ಚಿರತೆಯನ್ನು ಕಂಡು ಭಯಭೀತರಾಗಿರುವ ರೈತರು . ನಾಲ್ಕು ದಿನದ ಹಿಂದೆಯಷ್ಟೆ ಅದೇ ಗ್ರಾಮದಲ್ಲಿ ಹಸುವಿನ ಮೇಲೆ ದಾಳಿ ಮಾಡಿದ್ದ ಚಿರತೆ ಆದರೂ ಸಹ ಗಮನಹರಿಸದೇ ನಿರ್ಲಕ್ಷ್ಯ ತೋರುತ್ತಿರುವ ಅರಣ್ಯ ಅಧಿಕಾರಿಗಳನ್ನು ತಾರಟೆಗೆ ತೆಗೊದು ಕೊಂಡ ಗ್ರಾಮಸ್ಥರು. ಕೂಡಲೇ ಬೋನು ಅಳವಡಿಸುವ ಭರವಸೆ ನೀಡಿದ ಅಧಿಕಾರಿಗಳು.
ಇನ್ನಾದರೂ ಅರಣ್ಯಅಧಿಕಾರಿಗಳು ಎಚ್ಚೆತ್ತು ಕೊಳ್ಳತ್ತಾರಾ ಕಾದು ನೋಡ ಬೇಕಿದೆ.

 

Last modified on 03/02/2019
Rate this item
(0 votes)

ತಾಲ್ಲೂಕು ಪಂಚಾಯತ ಸಭಾಂಗಣದಲ್ಲಿ ವಯಸ್ಕರ ಶಿಕ್ಷಣ ಇಲಾಖೆಯಿಂದ  ಪ್ರೇರಕರ ಸಭೆ ಇಓ ಚಂದ್ರಮೌಳಿ ,ತಾಲ್ಲೂಕು ವಯಸ್ಕರ ಶಿಕ್ಷಣಾಧಿಕಾರಿ ಮರುವನಹಳ್ಳಿ ಬಸವರಾಜು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ತಾಲ್ಲೂಕು ಪಂಚಾಯತ ಸಭಾಂಗಣದಲ್ಲಿ ಮಾನ್ಯ ಇಓ ಚಂದ್ರಮೌಳಿ ಅವರ ಅಧ್ಯಕ್ಷತೆಯಲ್ಲಿ  ವಯಸ್ಕರ ಶಿಕ್ಷಣ ಇಲಾಖೆಯ  ಪ್ರೇರಕರ ಸಭೆ  ಬಲ್ಲೇನಹಳ್ಳಿ  ಪ್ರೇರಕ ಕುಮಾರ್ ರವರ ಪ್ರಾರ್ಥನೆಯೊಂದಿಗೆ  ಪ್ರಾರಂಭವಾಯಿತು. ನಂತರ ಮಾತನಾಡಿದ ತಾಲ್ಲೂಕು ವಯಸ್ಕರ ಶಿಕ್ಷಣಾಧಿಕಾರಿ ಮರುವನಹಳ್ಳಿ ಬಸವರಾಜು 2018-19 ನೇ ಸಾಲಿಗೆ ವಯಸ್ಕರ ಶಿಕ್ಷಣ ಇಲಾಖೆಯ ವತಿಯಿಂದ ಡಾ.ನಂಜುಂಡಪ್ಪ ವರದಿ ಹಾಗೂ ಶ್ರೀ ಶಕ್ತಿ ಸಹಾಯ ಸಂಘಗಳ ಮೂಲಕ ಅನಕ್ಷರಸ್ಥರನ್ನು ಗುರುತಿಸುವ ಕೆಲಸ ಈಗಾಗಲೇ ಪ್ರಾರಂಭವಾಗಿದ್ದು ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ಅನುಷ್ಠಾನ ಮಾಡುವಂತೆ ಸೂಚಿಸಲಾಗಿದೆ.ಅದಕ್ಕೆ ಪೂರಕವಾಗಿ ಸರ್ಕಾರ ಪ್ರೇರಕರುಗಳನ್ನು ನೇಮಕ ಮಾಡಲು ಈಗಾಗಲೇ ಆದೇಶ ನೀಡಿದ್ದು ಫೆಬ್ರವರಿ ಮೊದಲ ವಾರದಲ್ಲಿ ಪ್ರೇರಕರುಗಳನ್ನು ನೇಮಕ ಮಾಡುವ ಸಂಬಂಧ ಅವರ ಬ್ಯಾಂಕ್ ಹೆಸರು,ಖಾತೆ ಸಂಖ್ಯೆ, ಐಎಫ್.ಎಸ್.ಸಿ.ಕೋಡ್ ಮುಂತಾದ ವಿವರಗಳನ್ನು ನೀಡಬೇಕಾಗಿದ್ದು  ಸರ್ಕಾರದ ಆದೇಶದ ಸುತ್ತೋಲೆಗಳನ್ನು ಎಲ್ಲಾ ಪ್ರೇರಕರಿಗೆ ವಿತರಿಸಿ ಕಾರ್ಯಕ್ರಮ ಅನುಷ್ಠಾನದ ವಿವರಗಳನ್ನು ತಿಳಿಸಲಾಯಿತು ಹಾಗೂ ಸಕಾಲದಲ್ಲಿ ತಾಲ್ಲೂಕು ಲೋಕ ಶಿಕ್ಷಣ ಕೇಂದ್ರಕ್ಕೆ ಮಾಹಿತಿಗಳನ್ನು ಒದಗಿಸಲು  ಮತ್ತು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಪ್ರೇರಕರಿಗೆ ತಿಳಿಸಲಾಯಿತು.

ಸಭೆಯಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಚಂದ್ರಮೌಳಿ ಮಾಜಿ ತಾಲ್ಲೂಕು ಸಂಯೋಜಕ ಹಾಗೂ ತಾಲ್ಲೂಕು ಸೇವಾದಳದ ಅದ್ಯಕ್ಷ ಚಂದ್ರಪ್ಪ ಪ್ರೇರಕರ ಸಂಘದ ಅದ್ಯಕ್ಷ ಅಣ್ಣಪ್ಪ  ಮೋಹನ್ ಸೇರಿದಂತೆ ತಾಲ್ಲೂಕಿನ ಎಲ್ಲಾ ಗ್ತಾ.ಪಂ ವ್ಯಾಪ್ತಿಯ ಪ್ರೇರಕರುಗಳು ಹಾಜರಿದ್ದರು. 

 

Last modified on 02/02/2019

  ವಿಚ್ಛೇದನ ಪಡೆಯಲು ಮುಂದಾದ ಹೆಂಡತಿಯ ಮೇಲಿನ ಸಿಟ್ಟಿಗೆ ಮಾವನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ದಲ್ಲಿ ವಿಚ್ಛೇದನ ಪಡೆಯಲು ಮುಂದಾದ ಹೆಂಡತಿಯ ಮೇಲಿನ ಸಿಟ್ಟಿಗೆ ಮಾವನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.ಅಳಿಯ ಬೀಸಿದ ಮಚ್ಚಿನೇಟಿಗೆ ಮಾವ ಪ್ರಕಾಶ್ (55) ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಪ್ರಾಣಬಿಟ್ಟರೆ, ಪತ್ನಿ 28 ವರ್ಷದ ದಿವ್ಯ ಸ್ಥತಿ ಚಿಂತಾಜನಕವಾಗಿ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಇನ್ನು ಘಟನೆ ನಡೆದ ಸ್ಥಳಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ದೌಡಾಯಿಸಿದ್ದನ್ನು ಕಂಡು ನಂದೀಶ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಆಗಮಿಸಿದ ಚನ್ನರಾಯಪಟ್ಟಣ ನಗರ ಪೊಲೀಸರು ಕೊಲೆಯಾದ ವ್ಯಕ್ತಿಯನ್ನು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಹಾಡ ಹಗಲೇ ನಡು ರಸ್ತೆಯಲ್ಲೇ ಇಬ್ಬರ ಮೇಲೆ ಮನ ಬಂದಂತೆ ಮಚ್ಚು ಬೀಸಿದ್ದಾನೆ. ಇಂತಹ ರಾಕ್ಷಸ ಕೃತ್ಯವೆಸಗಿರು ಈತ ಚನ್ನರಾಯಪಟ್ಟಣ ತಾಲ್ಲೂಕಿನ ಎಲಿಯೂರು ಗ್ರಾಮದವನು. ಸುಮಾರು 12 ವರ್ಷದ ಹಿಂದೆ ತನ್ನದೇ ಊರಿನವಳಾದ ಪಕ್ಕದ ಮನೆಯ ದಿವ್ಯಾ ಎಂಬಾಕೆಯನ್ನ ಪ್ರೀತಿಸಿ ಮದುವೆಯಾಗಿದ್ದ.ಗಂಡ ಹೆಂಡತಿ ಅಂದಿನಿಂದಲೂ ಚನ್ನಾಗಿಯೇ ಬದುಕು ಸಾಗಿಸುತ್ತಿದ್ದರು ಇವರಿಗೆ ನಾಲ್ಕನೇ ತರಗತಿಯ ಹೆಣ್ಣು, ಎರಡನೇ ತರಗತಿ ಓರ್ವ ಮಗನಿದ್ದಾನೆ.

ಸಂಸಾರದಲ್ಲಿ ಅನೇಕ ಬಾರಿ ಮನಸ್ತಾಪ ಉಂಟಾಗಿತ್ತು. ಕಳೆದ ಒಂದು ವಾರದ ಹಿಂದೆ ಜಗಳ ತಾರಕಕ್ಕೇರಿತ್ತು. ಪದೇ ಪದೇ ಜಗಳವಾಗುತ್ತಿದೆ ನಮ್ಮಿಬ್ಬರ ನಡುವೆ ಸಂಸಾರ‌ನಡೆಸುವುದು ಸಾಧ್ಯವಿಲ್ಲ ಎಂದು ದಿವ್ಯಾ ನಿರ್ಧರಿಸಿ ತವರು ಮನೆಗೆ ಬಂದಿದ್ದಾಳೆ.ಇಂದು ದಿವ್ಯಾ ತನ್ನ ತಂದೆಯೊಂದಿದೆ ಚನ್ನರಾಯಪಟ್ಟಣಕ್ಕೆ ತೆರಳಿ ತನ್ನ ಪತಿಯಿಂದ ವಿಚ್ಛೇದನ ಕೊಡಿಸಿ ಎಂದು ನ್ಯಾಯಾಲಯದಲ್ಲಿ ಅರ್ಜಿ ಹಾಕಿಸಿಕೊಡಿ ಎಂದು ವಕೀಲರ ಕಛೇರಿಗೆ ತೆರಳಿದ್ದಾಳೆ. ಇ ಸಂದರ್ಭದಲ್ಲಿ ಬಂದ ಪತಿ ಮನಬಂದಂತೆ ಅಲ್ಲೆ ನೆಡಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

 

Rate this item
(0 votes)

 ವಡ್ಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ನಡೆಯಿತು.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕು ವಡ್ಡರಹಳ್ಳಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಿಕ್ಷಕರ ಒತ್ತಾಸೆಯೊಂದಿಗೆ ಮಕ್ಕಳ ಸಂತೆ ಕಾರ್ಯಕ್ರಮವನ್ನು  ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿತ್ತು. ಮಕ್ಕಳು ಸಂತೆ ನಡೆಸುವ ಪರಿಕಲ್ಪನೆ, ವ್ಯವಹಾರ ನಡೆಸುವ ರೀತಿಯಿಂದ ಹೇಗೆ ಸ್ವಾವಲಂಬನೆ ಆಗಬಹುದು ಎಂದು ಶಿಕ್ಷಕರು ಮಕ್ಕಳಿಗೆ ಮಾಹಿತಿ ನೀಡಿದರು. ಶಿಕ್ಷಕರ ಸಲಹೆಗಳಂತೆ ಮುಗ್ದ ಪುಟಾಣಿ ಮಕ್ಕಳು ತರವಾರಿ ತರಕಾರಿಗಳನ್ನು ಕೊಳ್ಳುವಂತೆ ಬರುತ್ತಿದ್ದ ಗ್ರಾಮಸ್ಥರಿಗೆ ಕೂಗಿ ಮನ ಒಲಿಸುತ್ತಿದ್ದ ಮಕ್ಕಳ ಮುಗ್ದತೆಯು ನಾಗರೀಕರ ಮೆಚ್ಚುಗೆಗೆ ಕಾರಣವಾಯಿತು.

ಮಕ್ಕಳ ಸಂತೆಯಲ್ಲಿ ಎಲ್ಲಾ ವಿಧವಾದ ತರಕಾರಿಗಳು, ದಿನಸಿ ಪದಾರ್ಥಗಳನ್ನು ಮಾರಾಟ ಮಾಡುವ ದೃಶ್ಯಗಳು ನಾಗರೀಕರ ಮೆಚ್ಚುಗೆಗೆ ಪಾತ್ರವಾಯಿತು. ಈ ಮಕ್ಕಳ ಸಂತೆ ಕಾರ್ಯಕ್ರಮ ನೇತೃತ್ವವನ್ನು ಶಿಕ್ಷಕಿ ಶ್ವೇತಕುಮಾರಿ ಹಾಗೂ ರಾಜಶೇಖರ್ ವಹಿಸಿಕೊಂಡು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.

Last modified on 02/02/2019
Rate this item
(0 votes)

ಚಾಲಕನ ನಿಯಂತ್ರಣ ತಪ್ಫೀ ಆಫೆ ಆಟೋ ಪಲ್ಟಿ 7ಜನ ಪ್ರಯಾಣಿಕರಿಗೆ ಗಂಭೀರ ಸ್ವರೂಪದ ಗಾಯ

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದ ದೇವೀರಮ್ಮಣ್ಣಿ ಕೆರೆ ಏರಿಯ ಬಸವನಕಟ್ಟೆ ಬಳಿ ಚಾಲಕನ ನಿಯಂತ್ರಣ ತಪ್ಫೀ ಆಫೆ ಆಟೋ ಮೊಗಚಿ ಏರಿಯಿಂದ ಕೆಳಕ್ಕೆ ಪಲ್ಟಿಯಾಗಿ ಬಿದ್ದ ಕಾರಣ 7ಜನ ಪ್ರಯಾಣಿಕರಿಗೆ ಗಂಭೀರ ಸ್ವರೂಪದ ಗಾಯಗಾಳಾಗಿದ್ದು  ತಕ್ಷಣವೇ ಸಾರ್ವಜನಿಜರು ನೀಡಿದ ಮಾಹಿತಿಯ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂಧಿಗಳ  ಕಾರ್ಯಾಚರಣೆ ಗಾಯಾಳುಗಳು ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರ.ಗಂಭೀರವಾಗಿ ಗಾಯಗೊಂಡ ಗಾಯಾಳುಗಳನ್ನು 108 ಆಂಬ್ಯುಲೆನ್ಸ್ ನಲ್ಲಿ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಗೆ ಗಾಯಾಳುಗಳ ಸ್ಥಳಾಂತರ.ಕೃಷ್ಣರಾಜಪೇಟೆ ಪಟ್ಟಣದಿಂದ ಅಗ್ರಹಾರಬಾಚಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ಪ್ರಯಾಣಿಕರು.ಸ್ವಲ್ಪವೇ ಅಂತರದಲ್ಲಿ ತಪ್ಫೀದ  ಬಾರಿ ಅನಾಹುತ ಯಾವುದೇ ಸಾವು ಸಂಭವಿಸಿಲ್ಲಾ.

 

Last modified on 02/02/2019
Rate this item
(0 votes)

ಎರಡೂ ವರ್ಷ ಕಳೆದರು ಬರಲಿಲ್ಲ ಅಂಗನವಾಡಿ ಶಿಕ್ಷಕಿ , ಸುಮ್ಮನೆ ಕೈ ಕಟ್ಟಿ ಕುಳಿತಾ ತಾಲ್ಲೂಕು ಆಡಳಿತ ಗ್ರಾಮಸ್ಥರು ರಿಂದ ಪ್ರತಿಭಟನೆ.

ಮಂಡ್ಯ ಜಿಲ್ಲೆಯ ಕೆ.ಅರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬಿಲ್ಲೆನಹಳ್ಳಿ ಗ್ರಾಮದಲ್ಲಿ ಸುಮಾರು ಇಪ್ಪತ್ತು ವರ್ಷಗಳಿಂದ ಅಂಗನವಾಡಿ ಕಾರ್ಯ ನಿರ್ವಹಿಸುತ್ತಿದೆ. ಅದರೆ ಈ ಅಂಗನವಾಡಿಗೆ ಎರಡೂ ವರ್ಷ ಗಳಿಂದ ಯಾವುದೇ ಅಂಗನವಾಡಿ ಕಾರ್ಯಕರ್ತೆ ಇಲ್ಲಾ .ಇದ್ದ ಹಳೆಯ ಶಿಕ್ಷಕಿ ರಜೆಮೇಲೆ ತೆರಳಿದ್ದಾರೆ ಎಂದು ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿಗಳು ಹೇಳಿಕೊಂಡು ಇತ್ತ  ಪಕ್ಕದ ಗ್ರಾಮ ಗೊರವಿ ಅಂಗನವಾಡಿ ಶಿಕ್ಷಕಿಯನ್ನು ಪ್ರಭಾರವಾಗಿ ನಿಯೊಜಿಸಿದೇ. ಅದರೆ ಅವರು ತಮ್ಮ ಗ್ರಾಮದ ಅಂಗನವಾಡಿಯಲ್ಲಿ ಕೆಲಸ ಇರುವುದರಿಂದ ಮೂರು ದಿನಕ್ಕೊಮ್ಮೆ ಬರತ್ತಿದ್ದು ಮಕ್ಕಳಿಗೆ ಯಾವ ರೀತಿ ಪಾಠ ಕಲಿಸುತ್ತಾರೆ. ಬೇರೆ ಶಿಕ್ಷಕಿಯನ್ನು ಸಹ ನಿಯೋಜಿಸದೆ ಮಕ್ಕಳ ಭವಿಷ್ಯ ಹಾಳು ಮಾಡುತ್ತಿದ್ದಾರೆ ಎಂದು ಪೋಷಕರು ಮತ್ತು ಗ್ರಾಮಸ್ಥರು ಕಿಡಿಕಾರಿದರು.

ಅದೇ ಗ್ರಾಮದ ಹರೀಶ್ ಮಾತನಾಡಿ ನಾನೆ ಖುದ್ದಾಗಿ ಶಿಶು ಅಭಿವೃದ್ದಿ ಅದಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದರೆ ನಿಮ್ಮ ಗ್ರಾಮದ ಕೆಲಸವನ್ನು ತಡೆಹಿಡಿಯಾಲಗಿದೆ ಎಂದು ಉಡಾಪೆ ಉತ್ತರ ನೀಡುತ್ತಾರೆ. ಇ ಹಿಂದೆ ನಮ್ಮ ಗ್ರಾಮದ ಅಂಗನವಾಡಿಗೆ ಇಪ್ಪತ್ತುಕ್ಕೂ ಹೆಚ್ಚು ಮಕ್ಕಳ ಹಾಜರಾತಿ ಇತ್ತು ಇಂದು ಕೇವಲ ಎರಡು ಮೂರು ಮಕ್ಕಳಿಗೆ ಸೀಮಿತವಾಗಿದೆ ಅಲ್ಲದೇ ನಮ್ಮ ಗ್ರಾಮದ ಅಂಗನವಾಡಿಗೆ ಶಿಕ್ಷಕಿ ಇಲ್ಲದ ಕಾರಣ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಈಗಾಗಲೇ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿ ಇದೆ ಇಂತಹ ಪರಿಸ್ಥಿತಿಯಲ್ಲಿ ಈ ರೀತಿಯ ಘಟನೆ ಗಳು ಪೋಷಕರ ಮೇಲೆ ಪರಿಣಾಮ ಬಿರಿ ಸರ್ಕಾರಿ ಶಾಲೆಗಳು ಮುಚ್ಚುವುದರಲ್ಲಿ ಸಂದೇಹ ವಿಲ್ಲ ಎಂದರು.ಮತ್ತು ಕೊಠಡಿಯ ಕಿಟಕಿ ಬಾಗಿಲುಗಳ ಮುರಿದಿದ್ದು ಕಾಗದದ ಹಾಳೆಗಳಿಂದ ಮುಚ್ಚಲಾಗಿದೆ ಮಳೆ ಬಂದರೆ ಮಕ್ಕಳು ಮಳೆ ನೀರಿನಲ್ಲಿ  ಸ್ನಾನ ಮಾಡು ಸ್ಥಿತಿ ಇದೆ ಕೂಡಲೆ ದುರಸ್ತಿ ಕೆಲಸಮಾಡಿಸಬೇಕು ಎಂದರು.

ನಂತರ ಮಾತನಾಡಿದ ವೆಂಕಟೇಶ ನಮ್ಮ ಗ್ರಾಮದಲ್ಲಿಯೇ ಅನೇಕ ವಿದ್ಯಾವಂತ ಹೆಣ್ಣು ಮಕ್ಕಳ ಇದ್ದು ಅವರಿಗೆ ಈ ಕೆಲಸ ನೀಡಿದರೆ ಮಕ್ಕಳ ಭವಿಷ್ಯ ಮತ್ತು ಸರ್ಕಾರಿ ಶಾಲೆಗಳನ್ನು ಉಳಿಸಿದಂತೆ ಅಗುತ್ತದೆ ಎಂದರು .ನಂತರ ಮಾತನಾಡಿದ ಮಂಜು ನಮ್ಮ ಗ್ರಾಮದ ಅಂಗನವಾಡಿಗೆ ಶಿಕ್ಷಕಿಯನ್ನು ನಿಯೋಜಿಸಿದ ಹೊದರೆ ಅಂಗನವಾಡಿಗೆ ಬೀಗ ಜಡಿದು ತಾಲೂಕು ಶಿಶು ಅಭಿವೃದ್ದಿ ಅಧಿಕಾರಿಗಳು ಮುಂದೆ ದರಣಿ ಕುರುತ್ತೆವೆ ಎಂದು ಎಚ್ಚರಿಕೆ ನೀಡಿದರು ಪ್ರತಿಭಟನೆ ಯಲ್ಲಿ ವೆಂಕಟೇಶ್, ವಾಸು, ಮಂಜು, ಶಶಿಕಲಾ ಮತ್ತಿತರು ಇದ್ದರು.

 

Page 22 of 41

Visitors Counter

286245
Today
Yesterday
This Week
This Month
Last Month
All days
219
384
2618
5687
3051
286245

Your IP: 3.149.7.172
2025-05-11 12:14

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles