ರಾಜ್ಯಸುದ್ದಿ

Rate this item
(0 votes)

ಜಮ್ಮುಕಾಶ್ಮೀರದ ಫುಲ್ವಾಮದಲ್ಲಿ ಉಗ್ರರು ನಡೆಸಿದ ನರಮೇಧವನ್ನು ಖಂಡಿಸಿದ ಕೃಷ್ಣರಾಜಪೇಟೆ ತಾಲ್ಲೂಕು ಕರವೇ ಅಧ್ಯಕ್ಷ ಹೊನ್ನೇನಹಳ್ಳಿ ವೇಣು ನೇತೃತ್ವದಲ್ಲಿ ಮೌನಾಚರಣೆ ಮೂಲಕ ಶ್ರದ್ಧಾಂಜಲಿ .

ಕೆ.ಆರ್.ಪೇಟೆ :ಜಮ್ಮುಕಾಶ್ಮೀರದ ಫುಲ್ವಾಮದಲ್ಲಿ ಉಗ್ರರು ನಡೆಸಿದ ನರಮೇಧವನ್ನು ಖಂಡಿಸಿದ ಕೃಷ್ಣರಾಜಪೇಟೆ ತಾಲ್ಲೂಕು ಕರವೇ ಅಧ್ಯಕ್ಷ ಹೊನ್ನೇನಹಳ್ಳಿ ವೇಣು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದ ಕರವೇ ಕಾರ್ಯಕರ್ತರು.ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮದ್ದೂರು ತಾಲ್ಲೂಕಿನ ಕೆ.ಎಂ ದೊಡ್ಡಿ ಕಾಲೋನಿಯ ಗುಡಗೇರಿಯ ಗುರು(33)ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಉಗ್ರರ ದಾಳಿಯಿಂದ ವೀರಮರಣವನ್ನಪ್ಪಿ ಹುತಾತ್ಮರಾದ ಸೈನಿಕರ ಆತ್ಮಕ್ಕೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಮರ್ಪಿಸಿದರು.ಬಳಿಕ ಮಾತನಾಡಿದ ತಾಲ್ಲೂಕು ಕರವೇ ಅಧ್ಯಕ್ಷ ಹೊನ್ನೇನಹಳ್ಳಿ ವೇಣು ಜಮ್ಮುವಿನ ಪುಲ್ವಾಮಾ ಪ್ರದೇಶದಲ್ಲಿ ಉಗ್ರರ ದಾಳಿಗೆ ಸಿಆರ್‌ಪಿಎಫ್‌ನ 42 ಯೋಧರು ಹುತಾತ್ಮರಾಗಿರುವುದು ಬಹಳ ವಿಷಾದನೀಯ. ಭಾರತ ದೇಶದಲ್ಲಿ ಪುನಃ ಆತಂಕಕಾರಿ ಭಯೋತ್ಪಾದಕ ಚಟುವಟಿಕೆ ನಡೆಯುತ್ತಿರುವುದು ಕಳವಳಕಾರಿ ಸಂಗತಿ ಎಂದರು. ಪಾಪಿ ಪಾಕಿಸ್ತಾನದ ಕೆಟ್ಟ ಕೃತ್ಯವನ್ನು ಖಂಡಿಸಿ ಭಾರತ ಸರ್ಕಾರವು ಉಗ್ರರ ಸಂಹಾರಕ್ಕೆ ಮುಂದಾಗುವ ಮೂಲಕ ಜಮ್ಮುಕಾಶ್ಮೀರದಲ್ಲಿ ಶಾಂತಿ ಕಾಪಾಡಬೇಕು ಎಂದು ಒತ್ತಾಯಿಸಿದರು.

 

Rate this item
(0 votes)

ವೀರ ಯೋಧ ಮಂಡ್ಯದ ಗುರು ಪಾರ್ಥಿವ ಶರೀರ ಬೆಂಗಳೂರಿಗೆ ಆಗಮನ .ಮಂಡ್ಯದ ಹುಟ್ಟೂರು ಗುಡಿಗೆರೆಗೆ ಕೊಂಡೊಯ್ಯಲಾಗುತ್ತದೆ.

ಬೆಂಗಳೂರು: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಗುರುವಾರ ಸಂಭವಿಸಿದ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧ ಮಂಡ್ಯದ ಗುರು ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಎಚ್​ಎಎಲ್​ ವಿಮಾನ ನಿಲ್ದಾಣಕ್ಕೆ ತರಲಾಯಿತು.ಗುರು ಅವರ ಶರೀರವನ್ನು ಹೊತ್ತ ವಾಯುಪಡೆಯ ವಿಶೇಷ ವಿಮಾನವು ಮಧ್ಯಾಹ್ನ ಒಂದು ಗಂಟೆಗೆ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಮೊದಲಿಗೆ ಪಾರ್ಥಿವ ಶರೀರಕ್ಕೆ ಗೌರವ ನಮನ ಸಲ್ಲಿಸಿದರು.ಇದಾದ ನಂತರ ಗುರು ಅವರ ಶರೀರವನ್ನು ರಸ್ತೆ ಮಾರ್ಗವಾಗಿ ಮಂಡ್ಯದ ಹುಟ್ಟೂರು ಗುಡಿಗೆರೆಗೆ ಕೊಂಡೊಯ್ಯಲಾಗುತ್ತದೆ. ಸದ್ಯ ಗುಡಿಗೆರೆಯಲ್ಲಿ ಯೋಧ ಗುರು ಅವರ ಅಂತ್ಯ ಸಂಸ್ಕಾರಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ  ಅವರ ಅಂತ್ಯಕ್ರಿಯೆ ಮಂಡ್ಯ ಜಿಲ್ಲೆಯ ಗೂಡಿಗೆರೆಯಲ್ಲಿ ಇಂದು ಸಂಜೆ 6.10ಕ್ಕೆ ನಡೆಯಲಿದೆ.ಅಲ್ಲಿನ ಕೆ.ಎಂ. ದೊಡ್ಡಿ ಸಮೀಪದ ಮೆಳ್ಳಹಳ್ಳಿ ಬಳಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಮಾರು 10 ಗುಂಟೆ ಸರ್ಕಾರಿ ಜಾಗದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಪೂರ್ವ-ಪಶ್ಚಿಮಕ್ಕೆ 6 ಅಡಿ, ಉತ್ತರ-ದಕ್ಷಿಣಕ್ಕೆ 9 ಅಡೊ ಅಳತೆಯ ವೇದಿಕೆ ನಿರ್ಮಾಣ ಮಾಡಲಾಗಿದೆ.ಸಿಮೆಂಟ್ ಇಟ್ಟಿಗೆಯಿಂದ ವೇದಿಕೆ ನಿರ್ಮಿಸಲಾಗಿದೆ. ಅದೇ ವೇದಿಕೆಯಲ್ಲಿ ಅಂತ್ಯಕ್ರಿಯೆ ಹಿಂದೂ ಸಂಪ್ರದಾಯದಂತೆ ನೆರವೇರಲಿದೆ. ಹುತಾತ್ಮ ಯೋಧ ಗುರು ಅವರ ಪಾರ್ಥಿವ ಶರೀರಕ್ಕೆ ಸಹೋದರರು ಅಗ್ನಿ ಸ್ಪರ್ಶ ಮಾಡಲಿದ್ದಾರೆ. 


Last modified on 16/02/2019
Rate this item
(0 votes)

ಸಂತೇಬಾಚಹಳ್ಳಿ ಹೋಬಳಿಯ ಸೊಮೇನಹಳ್ಳಿ ಗ್ರಾಮದಲ್ಲಿ ವೃದನ ಮೇಲೆ ಚಿರತೆ ದಾಳಿ ಗಂಭೀರ ಗಾಯ.ಅರಣ್ಯ ಇಲಾಖೆಯ ಅಧಿಕಾರಿಗಳು ವಿರುದ್ಧ ಕಿಡಿಕಾರಿದ ಗ್ರಾಮಸ್ಥರು.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ  ಸೋಮೇನಹಳ್ಳಿ ಗ್ರಾಮದ ಶಿವಣ್ಣ (೬೨) ಎಂಬ ವೃದನ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ಗಂಭೀರವಾಗಿ ಗಾಯಗಾಳಾಗಿದ್ಧು ತುಂಬ ರಕ್ತಸ್ರಾವ ವಾಗಿದ್ದು ತಾಲ್ಲೂಕು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ .ರವಿ ಮತ್ತು ಶಿವಣ್ಣ ಎಂಬ ಇಬ್ಬರೂ ರೈತರು ತಮ್ಮ ಜಮೀನಲ್ಲಿ ಮೇಕೆ ಮೆಯುಸುತ್ತಿದ್ದಾಗ ಮೇಕೆಗಳ ಮೇಲೆ ಎರಡು ಚಿರತೆಗಳು ದಾಳಿಮಾಡಿದ್ದು ರವಿ ತಕ್ಷಣ ಮಚ್ಚಿನಿಂದ ಹೊಡೆಯಲು ಹೋದಾಗ ರವಿ ಮೇಲೆ ಎರಗಿದ ಚಿರತೆ ಕೈಮತ್ತು ಕಾಲುಗಳಿಗೆ ಪರಚಿ ಹೊಡಿಹೊಗಿದೆ ಇನ್ನೊಂದು ಚಿರತೆ ಅಲ್ಲೆ ಪಕ್ಕ ಪಕ್ಕದಲ್ಲಿ ಇದ್ದ ವೃದ ಶಿವಣ್ಣನ ಮೇಲೆ ಎರಗಿ ಕಾಲು ಕುತ್ತಿಗೆ ಕೈ ತೊಡೆಯ ಭಾಗಕ್ಕೆ ಹಲ್ಲೆಮಾಡಿ ವೃದನನ್ನು ಎಳೆದುಕೊಂಡು ಹೊಗತ್ತಿದ್ದಾಗ ಪಕ್ಕದಲ್ಲಿ ಇದ್ದ ರವಿ ಅಕ್ಕಪಕ್ಕದ ಜನರನ್ನು ಕೂಗಿ ಕರೆದು ಚಿರತೆಯನ್ನು ದೊಣ್ಣೆ ಮತ್ತು ಮಚ್ಚುಗಳಿಂದ ಎದುರಿಸಿ ಹೊಡಿಸಿದ್ದಾರೆ ನಂತರ ವೃದನನ್ನು ಅಂಬೂಲೆನ್ಸ್ ಮೂಲಕ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರೆ ಇನ್ನಾದರೂ ಎಚ್ಚೆತ್ತು ಕೊಳ್ಳುತ್ತಾ ಅರಣ್ಣ ಇಲಾಖೆ ಇಷ್ಟು ದಿನ ದನಕರುಗಳ ಮೇಲೆ ಹಲ್ಲೆ ಮಾಡುತ್ತಿದ್ದ ಚಿರತೆಗಳು ಇಂದು ನರಮಾನವರ ಮೇಲೆ ಹಲ್ಲೆಗೆ ಮುಂದಾಗಿ .ಚಿರತೆ ಗಳನ್ನು ಹಿಡಿಯುವ ಅರಣ್ಯ ಅಧಿಕಾರಿಗಳು ಕ್ರಮ ಕೈಗೋಳತ್ತಾರ ಕಾದು ನೊಡಬೇಕಿದೆ.

ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ದನಕರುಗಳ ಮೇಲೆ ದಾಳಿ ಮಾಡಿದರು ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಧಿಕಾರಿಗಳು ವಿರುದ್ಧ ಗ್ರಾಮಸ್ಥರು ಕಿಡಿಕಾರಿದ್ದಾರೆ

Rate this item
(0 votes)

 ಟಿಎಪಿಸಿಎಂಎಸ್ ವತಿಯಿಂದ ನೂತನ ಪೆಟ್ರೋಲ್ ಬಂಕ್  ಶಂಕುಸ್ಥಾಪನೆ.

ಮಳವಳ್ಳಿ : ಮಳವಳ್ಳಿ ಪಟ್ಟಣದ ಮದ್ದೂರು ಮುಖ್ಯರಸ್ತೆಯ ಟಿಎಪಿಸಿಎಂಎಸ್  ಹಳೆಯ ಕಟ್ಟಡದಲ್ಲಿ  ನೂತನ ಪೆಟ್ರೋಲ್ ಬಂಕ್  ಶಂಕುಸ್ಥಾಪನೆಯನ್ನು ಟಿಎಪಿಸಿಎಂಎಸ್ ಅಧ್ಯಕ್ಷ ಡಾ ಚೌಡೇಶ್ ರವರು ನೇರವೇರಿಸಿದರು.  ಮಳವಳ್ಳಿ ಪಟ್ಟಣದ ಮದ್ದೂರು ಮುಖ್ಯ ರಸ್ತೆ ಗೆ ಹೊಂದಿಕೊಂಡಂತೆ ಟಿಎಪಿಸಿಎಂಎಸ್ ಜಾಗದಲ್ಲಿ ಪೆಟ್ರೋಲ್ ಬಂಕ್  ತೆರಯಲು  ಕಮಿಟಿಯಲ್ಲಿ ತೀರ್ಮಾನಿಸಲಾಗಿತ್ತು ಅಂತೆಯೇ ಇಂದು  ಟಿಎಪಿಸಿಎಂಎಸ್ ಅಧ್ಯಕ್ಷ ಡಾ. ಚೌಡೇಶ್ ರವರು  ಶಂಕುಸ್ಥಾಪನೆ ನೇರವರಿಸಿದರು. ನಂತರ ಮಾತನಾಡಿ  ನಮ್ಮ ಟಿಎಪಿಸಿಎಂಎಸ್  ಸಾಕಷ್ಟು ಬೆಳೆದಿದೆ, ಈಗಾಗಲೇ  ಟಿಎಪಿಸಿಎಂಎಸ್ ಮಳಿಗೆ, ತೆರೆದಿದ್ದು, ಅಕ್ಕಿ ಸಂಗ್ರಹ  ಗೋದಾಮು  ಉದ್ಘಾಟಿಸಿದ್ದು.  ಹಂತಹಂತವಾಗಿ  ಪ್ರಗತಿ ಕಾಣುತ್ತಿದೆ  ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸ ನಿರ್ವಹಣೆ ಮಾಡುವುದಾಗಿ ತಿಳಿಸಿದರು.     

ಕಾರ್ಯಕ್ರಮ ದಲ್ಲಿ ಟಿಎಪಿಸಿಎಂಎಸ್  ಉಪಾಧ್ಯಕ್ಷ ಬಸವರಾಜು, ನಿರ್ದೇಶಕ ರಾದ ಕನ್ನಳ್ಳಿಸುಂದ್ರಪ್ಪ,  ಕೆ.ಜೆ ದೇವರಾಜು, ಚಿಕ್ಕರಾಜು  ಸೇರಿದಂತೆ ಮತ್ತಿತ್ತರು ಇದ್ದರು

Rate this item
(0 votes)

ತಾಲ್ಲೂಕು ಕಾರ್ಯನಿರತ ಪತ್ರಕರ್ತರು ಮತ್ತು ಪ್ರೆಸ್ ಕ್ಲಬ್ ವತಿಯಿಂದ ಜಮ್ಮುಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರ ದಾಳಿಗೆ ಬಲಿಯಾದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ .

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರು ಮತ್ತು ಪ್ರೆಸ್ ಕ್ಲಬ್ ವತಿಯಿಂದ ಜಮ್ಮುಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರ ದಾಳಿಗೆ ಬಲಿಯಾದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಮರ್ಪಿಸಿ. ನಂತರ ತಹಶೀಲ್ದಾರ್ ಕಛೇರಿಗೆ ತೆರಳಿ ದೇಶದ್ರೋಹಿಗಳಾದ ಉಗ್ರರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಭಾರತ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಪತಹಶೀಲ್ದಾರ್ಮ ಹದೇವೇಗೌಡ, ಪತ್ರಕರ್ತರಾದ ಮಾಕವಳ್ಳಿರವಿ, ಸಿಂಕಸುರೇಶ್, ಕೆ.ಆರ್.ನೀಲಕಂಠ, ಹೆಚ್.ಬಿ.ಮಂಜುನಾಥ್, ಹೊಸಹೊಳಲು ರಾಜೇಶ್, ಸಯ್ಯದ್ ಖಲೀಲ್ ಸೇರಿದಂತೆ ರೈತಮುಖಂಡರು, ಪ್ರಗತಿಪರ ಚಿಂತಕರು ಉಪಸ್ಥಿತರಿದ್ದರು.

Last modified on 15/02/2019
Rate this item
(0 votes)

ಕೆ.ಆರ್.ಪೇಟೆ ತಾಲ್ಲೂಕಿನ ಪುರಾಣಪ್ರಸಿದ್ಧ ಶರಣಶ್ರದ್ಧಾಕೇಂದ್ರ ಕಾಪನಹಳ್ಳಿ ಗವಿಮಠದ ಪೀಠಾಧಿಪತಿಗಳಾಗಿ ಮಠದ ಅರ್ಚಕರಿಗೆ ಧೀಕ್ಷೆ ನೀಡಿ ಖಾವಿಬಟ್ಟೆ ಹಾಕಿಸಿ ಪೀಠಕ್ಕೆ ಕೂರಿಸಿದ ಕೆಂಗೇರಿಯ ಬಂಡೆಮಠದ ಶ್ರೀಗಳು.ಶ್ರೀ ಸ್ವತಂತ್ರ ಚನ್ನವೀರಯ್ಯ ಸ್ವಾಮೀಜಿಗಳೆಂದು ಹೊಸದಾಗಿ ನಾಮಕರಣ .

ಕೆ.ಆರ್.ಪೇಟೆ: ಕೃಷ್ಣರಾಜಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಶರಣ ಶ್ರದ್ಧಾಕೇಂದ್ರವಾದ ಕಾಪನಹಳ್ಳಿ ಗವಿಮಠದ ನೂತನ ಪೀಠಾಧಿಪತಿಗಳಾಗಿ ಶ್ರೀ.ಸ್ವತಂತ್ರ ಚನ್ನವೀರ ಸ್ವಾಮೀಜಿಗಳ ನೇಮಕ.ಶ್ರೀಮಠದ ವ್ಯಾಪ್ತಿಯ ಒಂಭತ್ತು ಹಳ್ಳಿಗಳ ಸದ್ಭಕ್ತರ ಸಮ್ಮುಖದಲ್ಲಿ ಕೆಂಗೇರಿಯ ಬಂಡೆಮಠದ ಶ್ರೀಗಳಿಂದ ಸ್ವಾಮೀಜಿಗಳಾಗಿ ಧೀಕ್ಷೆ ಸ್ವೀಕರಿಸಿದ ಗವಿಮಠದ ಅರ್ಚಕ ಚನ್ನವೀರಯ್ಯ.ಅರ್ಚಕ ಚನ್ನವೀರಯ್ಯ ಅವರನ್ನು ಶ್ರೀ ಸ್ವತಂತ್ರ ಚನ್ನವೀರಸ್ವಾಮಿಗಳಾಗಿ ಬದಲಾದ ನಾಮಕರಣ.ಗವಿಮಠದ ಸೇವಕನಾಗಿ ನಿಷ್ಠೆಯಿಂದ ಶ್ರೀಮಠವನ್ನು ಮುನ್ನಡೆಸುತ್ತೇನೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಖಾಲಿ ಉಳಿದಿದ್ದ ಶ್ರೀಮಠದ ಪೀಠಾಧಿಪತಿಗಳ ಸ್ಥಾನ.ಹಾರನಹಳ್ಳಿ ಕೋಡಿಮಠದ ಶಾಖಾಮಠವೆಂದು ಕೆ.ಆರ್.ಪೇಟೆ ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿರುವ ಕೋಡಿಶ್ರೀಗಳು.ಗವಿಮಠದ ಸದ್ಭಕ್ತರು ಹಾಗೂ ಸ್ವತಂತ್ರ ಸಿದ್ಧಲಿಂಗೇಶ್ವರರ ಪ್ರೇರಣೆಯಂತೆ ಗವಿಮಠದ ಶ್ರೀಗಳಾಗಿ ಅಧಿಕಾರ ಸ್ವೀಕರಿಸಿದ್ದೇನೆ. ನಾನು ವೇದ, ಮಂತ್ರ ಸಂಸ್ಕೃತಾಭ್ಯಾಸ ಮಾಡಿಲ್ಲ.ಆದರೆ ಕಳೆದ 18ವರ್ಷಗಳಿಂದ ಶ್ರೀಮಠದಲ್ಲಿ ಅರ್ಚಕನಾಗಿ ಕೆಲಸ ಮಾಡಿದ ಅನುಭವವಿದೆ. ಶ್ರೀ ಮಠದ ಅಭಿವೃದ್ಧಿಯೇ ನನ್ನ ಮೂಲಮಂತ್ರವಾಗಿದೆ. ಗವಿಮಠವನ್ನೇ ಜನತೆ ಹಾಗೂ ಭಕ್ತರ ಮನೆಬಾಗಿಲಿಗೆ ಕೊಂಡೊಯ್ದು ಬಿಕ್ಷೆಬೇಡಿಕೊಂಡು ಜೋಳಿಗೆಯಲ್ಲಿ ಬಂದ ಹಣದಿಂದ ಶ್ರೀಮಠವನ್ನು ಮುನ್ನಡೆಸುತ್ತೇನೆ. ಕಾಪನಹಳ್ಳಿ ಗವಿಮಠದಲ್ಲಿ ಕೇವಲ ಸಾಮಾನ್ಯ ಅರ್ಚಕನಾಗಿದ್ದ ನಾನು ಮಠದ ಸ್ವಾಮೀಜಿಯಾಗುತ್ತೇನೆಂದು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ.ಎಲ್ಲಾ ಸಿದ್ಧಲಿಂಗಪ್ಪನ ಇಚ್ಛೆ.ಹೊಸವಿವಾದ ಹುಟ್ಟು ಹಾಕಿದ ಗವಿಮಠದ ಉತ್ತರಾಧಿಕಾರಿ ನೇಮಕ.ಈ ಹಿಂದೆ ಮಠದ ಪೀಠಾಧ್ಯಕ್ಷರಾಗಿದ್ದ ದಿವಂಗತ ಶ್ರೀ ಚಂದ್ರಶೇಖರ ಸ್ವಾಮೀಜಿಗಳ ಸಹೋದರ ಬಸವರಾಜಸ್ವಾಮಿಗಳಿಂದ ನಡೆದ ಪೀಠಾಧಿಪತಿ ನೇಮಕ.ಸ್ಥಳೀಯಚಮುಖಂಡರ ಬೆಂಬಲ ಹಾಗೂ ಮನದಾಸೆಯನ್ನು ಪುರಸ್ಕರಿಸಿ ಅರ್ಚಕ ಚನ್ನವೀರಯ್ಯ ಅವರನ್ನೇ ಸ್ವಾಮೀಜಿಗಳಾಗಿ ಧೀಕ್ಷೆ ನೀಡಿ ಖಾವಿಬಟ್ಟೆ ಹಾಕಿಸಿ ಹೊಸದಾಗಿ ಶ್ರೀ ಸ್ವತಂತ್ರ ಚನ್ನವೀರಸ್ವಾಮೀಜಿಗಳೆಂದು ನಾಮಕರಣ ಮಾಡಿ ಪೀಠಾಧಿಪತಿ ಸ್ಥಾನದಲ್ಲಿ ಕೂರಿಸಿದ ಕೆಂಗೇರಿಯ ಬಂಡೆಮಠದ ಶ್ರೀಗಳು. ಗವಿಮಠದ ಸದ್ಭಕ್ತರಲ್ಲಿ ಬುಗಿಲೆದ್ದ ಭಿನ್ನಮತ.ಕೋಡಿಮಠದ ಶ್ರೀಗಳ ನಡೆ ಇನ್ನೂ ನಿಗೂಢ.

Rate this item
(0 votes)

  ನಡೆದಾಡುವ ದೇವರು , ಕರ್ನಾಟಕ ರತ್ನ  ಪರಮಪೂಜ್ಯ ಶ್ರೀ ಶ್ರೀ ಶ್ರೀ  ಡಾ.ಶಿವಕುಮಾರಸ್ವಾಮಿಜೀರವರ ಪುಣ್ಯಸ್ಮರಣೆಯನ್ನು ಸರ್ವಜನಾಂಗ ಸೇರಿ  ಇದೇ ಫೆ 19 ರಂದು ಮಳವಳ್ಳಿ ಪಟ್ಟಣದಲ್ಲಿ  ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು

ಮಳವಳ್ಳಿ: ಮಳವಳ್ಳಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ  ತಾಲ್ಲೂಕು ಅಧ್ಯಕ್ಷ. ಕುಂದೂರು ಮೂರ್ತಿ ರವರ ಅಧ್ಯಕ್ಷತೆಯಲ್ಲಿ ಶ್ರೀ ಗಳ   ಪುಣ್ಯಸ್ಮರಣೆ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಯಜಮಾನ ವೆಂಕಟಪ್ಪರವರು ಮಾತನಾಡಿ ವೀರಶೈವ ಜನಾಂಗದವರು  ಎಲ್ಲಾ ಸಮಾಜವನ್ನು ಒಗ್ಗೂಡಿಸಲು ಮುಂದಾಗಿರುವುದು  ಸಂತಸದ ವಿಷಯ   ನಾವೆಲ್ಲರೂ ಎಂದಿಗೂ ಜೊತೆಯಾಗಿ ಪಟ್ಟಣ ಹಾಗೂ ತಾಲ್ಲೂಕು ಅಭಿವೃದ್ಧಿ ಮಾಡೋಣ ಎಂದರು. ಇನ್ನೂ  ಹಿರಿಯ ಮುಖಂಡ ಎಂ.ಹೆಚ್ ಕೆಂಪಯ್ಯ  ಮಾತನಾಡಿ , ವೀರಶೈವ ಜನಾಂಗದವರು   ಎಲ್ಲಾ ಜನಾಂಗದ  ಜೊತೆಗೂಡಿ ಶ್ರೀ ಗಳ   ಪುಣ್ಯಸ್ಮರಣೆ  ಮಾಡೋಣ ಎಂದರು ವೀರಶೈವ ಅಭಿವೃದ್ಧಿ ದೃಷ್ಟಿಯಿಂದ  ರಾಜಕೀಯ ಬಿಡುವಂತೆ ಮುಖಂಡರನ್ನು ಮನವಿ ಮಾಡಿದರು  ಶ್ರೀಗಳ  ನೆನಪು ಮಾಡುವ ಕಾರ್ಯಕ್ರಮದಲ್ಲಿ  ನಾವು ಭಾಗವಹಿಸುತ್ತವೆ ಎಂದರು. ಕಾರ್ಯಕ್ರಮಕ್ಕೆ ಸರ್ವಧರ್ಮದ ಜನಾಂಗದ ಸ್ವಾಮೀಜಿ , ಹಿಂದೂ .ಮುಸ್ಲಿಂ , ಕೈಸ್ತ  ಧರ್ಮದ  ಮುಖಂಡರು ಕರೆಯುವಂತೆ ತೀರ್ಮಾನಿಸಲಾಯಿತು.

ಸಭೆಯಲ್ಲಿ  ತಾ.ಪಂ ಉಪಾಧ್ಯಕ್ಷ ಮಾಧು, ವೀರಶೈವ ನೌಕರರ ಸಂಘದ ಅಧ್ಯಕ್ಷ ಗಂಗಾಧರ್,  ಕುಂದೂರು ಪ್ರಕಾಶ, ಪುರಸಭೆ ಸದಸ್ಯರಾದ  ಚಿಕ್ಕರಾಜು, ನಾಗೇಶ್, ಸೇರಿದಂತೆ ಮತ್ತಿತ್ತರು ಇದ್ದರು.

Rate this item
(0 votes)

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಮಂಗನ ಹೊಸಹಳ್ಳಿ ಗ್ರಾಮದ  ಕೃಷ್ಣ (30) ಯುವಕ ಆತ್ಮಹತ್ಯೆ.

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಮಂಗನ ಹೊಸಹಳ್ಳಿ ಗ್ರಾಮದ ಕೃಷ್ಣ (30) ಎಂಬಾತ ಕುಟುಂಬದ ಕಲಹದ ಹಿನ್ನೆಲೆ ತನ್ನ ಜಮೀನಿನ ಮರಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಡೆದಿದೆ.ಗಂಡ ಹೆಂಡಿತಿ ಜಗಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದ ಗ್ರಾಮಸ್ಥರು ಹೇಳುತ್ತಿದ್ದು.ಆತ್ಮಹತ್ಯೆಗೆ ನಿಕರವಾದ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಕಿಕ್ಕೇರಿ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಚಂದ್ರಶೇಖರ್ ಅವರು ಭೇಟಿ ನೀಡಿ ಮುಂದಿನ ತನಿಖೆ ಕೈಕೊಂಡಿದ್ದಾರೆ.

 

 

Page 18 of 41

Visitors Counter

228174
Today
Yesterday
This Week
This Month
Last Month
All days
148
270
928
4575
6704
228174

Your IP: 3.15.21.191
2024-05-15 20:53

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles