ರಾಜ್ಯಸುದ್ದಿ
ಕೋರಮಂಡಲ್ ಸಕ್ಕರೆ ಕಾರ್ಖಾನೆಯ ನೌಕರರ ವಿವಿಧ- ಉದ್ದೇಶ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ವಿ.ಜೆ.ರವಿ, ಉಪಾಧ್ಯಕ್ಷರಾಗಿ ಎಚ್.ಎಮ್ ಶಿವರಾಮ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೆ.ಆರ್.ಪೇಟೆ: ತಾಲೂಕಿನ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ನೌಕರರ ವಿವಿಧ- ಉದ್ದೇಶ ಸಹಕಾರ ಸಂಘಧ ಈ ಹಿಂದಿನ ಆಡಳಿತ ಮಂಡಳಿ ಅಧಿಕಾರಾವಧಿ ಮುಗಿದ ಬಳಿಕ ನೂತನ ಆಡಳಿತ ಮಂಡಳಿಗೆ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ನಿರ್ದೇಶಕರನ್ನು ಕೂಡ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾರ್ಖಾನೆಯ ಉಪಾಧ್ಯಕ್ಷರಾಗಿರುವ ವಿ.ಜೆ ರವಿ ಅಧ್ಯಕ್ಷ ಸ್ಥಾನಕ್ಕೆ, ಮುಖ್ಯ ಇಂಜಿನಿಯರ್ ಎಚ್.ಎಮ್ ಶಿವರಾಮ್ ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಕಾರಣ ವಿ.ಜೆ.ರವಿ ಅವರನ್ನು ಅಧ್ಯಕ್ಷರಾಗಿ, ಎಚ್.ಎಮ್ ಶಿವರಾಮ್ ರನ್ನು ಉಪಾಧ್ಯಕ್ಷರನ್ನಾಗಿ ಚುನಾವಣಾಧಿಕಾರಿ ಘೋಷಿಸಿದ್ದಾರೆ.ನಿರ್ದೇಶಕರಾದ ಕಬ್ಬು ವಿಭಾಗದ ಮುಖ್ಯಸ್ಥ ಬಾಬುರಾಜು, ಕಬ್ಬು ಸಾಗಾಣಿಕೆ ವಾಹನಗಳ ನಿಯಂತ್ರಣಾಧಿಕಾರಿ ಮಾಕವಳ್ಳಿ ಪುಟ್ಟೇಗೌಡ, ಎಚ್.ಆರ್.ಮಂಜುನಾಥ್, ಕೆಮಿಷ್ಟ್ ನಾಗರಾಜು ಸೇರಿದಂತೆ ಎಲ್ಲಾ ನಿರ್ದೇಶಕರು , ಕಾರ್ಖಾನೆಯ ನೌಕರರ ವರ್ಗ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಸಿಲಿಕಾನ್ ಸಿಟಿ ಬೆಂಗಳೂರಿಗೆ ಈ ವರ್ಷದ ಮೊದಲ ಮಳೆಯ ಸಿಂಚನವಾಗಿದೆ. ಬಿಸಿಲ ಬೇಗೆಯಿಂದ ಬಸವಳಿದಿದ್ದ ಇಳೆಗೆ ಸಂಜೆ 5 ಗಂಟೆ ವೇಳೆಗೆ ತಂಪೆರೆದ ಮಳೆರಾಯ.ನಗರದ ಹಲವೆಡೆ ಧರೆಗುರುಳಿದ ಮರಗಳು.
ಬೆಂಗಳೂರು: ನಗರದ ಮೂಡಲಪಾಳ್ಯ, ನಾಗರಬಾವಿ, ಬನಶಂಕರಿ, ರಾಜಾಜಿನಗರ, ಮಾರ್ಕೆಟ್, ಮೆಜೆಸ್ಟಿಕ್, ಮಲ್ಲೇಶ್ವರಂ, ಜಯನಗರ, ಕಂಠೀರವ ಸ್ಟುಡಿಯೋ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಸಂಜೆಯಿಂದ ಸಣ್ಣಗೆ ಮಳೆಯಾಗಿದ್ದು, ಕೆಲ ಭಾಗದಲ್ಲಿ ಭಾರೀ ಮಳೆ ಕೂಡ ಸುರಿದಿದೆ. ಈ ಮೂಲಕ ವರ್ಷದ ಮೊದಲ ವರ್ಷಧಾರೆಗೆ ಜನ ಹರ್ಷಿತರಾಗಿದ್ದಾರೆ.ನಗರದ ಹಲವೆಡೆ ವರುಣನ ಆರ್ಭಟಕ್ಕೆ ಮರಗಳು ಧರೆಗುರುಳಿವೆ. ಹೊಸೂರು ರಸ್ತೆಯ ನಿಮಾನ್ಸ್ ಆಸ್ಪತ್ರೆ, ಬಸವನಗುಡಿಯ ಬಲ್ ಟೆಂಪಲ್, ರಾಜಾಜಿನಗರದ ಎಂ.ಇ ಪಾಲಿಟೆಕ್ನಿಕ್ ಕಾಲೇಜು ಬಳಿ ಮರಗಳು ಧರೆಗುರುಳಿವೆ. ಇನ್ನು ಫ್ರೀಡಂ ಪಾರ್ಕ್, ಗಾಂಧಿನಗರದಲ್ಲಿ ಮರ ಬಿದ್ದು ಒಂದು ಕಾರ್ 4 ಬೈಕ್ ಜಖಂ ಆಗಿವೆ.ಕಳೆದೆರಡು ದಿನಗಳಿಂದ ನಗರದಲ್ಲಿ ಬಿಸಿಲಿನ ತಾಪಮಾನ ಹೆಚ್ಚಿದ್ದು, ಇಂದು ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿತ್ತು. ಆದರೆ ಸಂಜೆ ವೇಳೆಗೆ ಮಳೆಹನಿಗಳು ಧರೆಗಿಳಿದು ಇಳೆಯನ್ನು ತಂಪಾಗಿಸಿದೆ. ಗುಡುಗು ಸಹಿತ ಮಳೆಯಾಗುತ್ತಿದ್ದು ಮಳೆಯ ಪ್ರಮಾಣ ಹೆಚ್ಚಿದರೆ ಸಂಚಾರ ದಟ್ಟಣೆ ನಿರ್ಮಾಣವಾಗುವ ಸಾಧ್ಯತೆ ಇದೆ.ವಾತಾವರಣದಲ್ಲಿ ಗಾಳಿಯ ಒತ್ತಡ (ಟ್ರಫ್) ಕಡಿಮೆಯಾದ ಹಿನ್ನೆಲೆಯಲ್ಲಿ ಮಾಲ್ಡೀವ್ಸ್ನಿಂದ ಅರಬ್ಬೀ ಸಮುದ್ರದವರಗೆ ಗಾಳಿಯ ಒತ್ತಡ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಫೆ.11ರವರೆಗೆ ರಾಜ್ಯದ ಹಲವೆಡೆ ಹಗುರ ಹಾಗೂ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.
ಜೈ ಭೀಮ್ ಗ್ರಾಮೀಣಾಭಿವೃದ್ಧಿ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ 10ನೇ ವರ್ಷದ ರಂಗ ಗೀತೆಗಳ ಉತ್ಸವ ಕಾರ್ಯಕ್ರಮ ಮಳವಳ್ಳಿ ತಾಲ್ಲೂಕಿನ ಪೂರಿಗಾಲಿ ಗ್ರಾಮದಲ್ಲಿ ನಡೆಸಲಾಯಿತು.
ಮಳವಳ್ಳಿ: ತಾಲ್ಲೂಕಿನ ಪೂರಿಗಾಲಿ ಗ್ರಾಮದ ಸ ಹಿ ಪ್ರಾ.ಶಾ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ರಾಜ್ಯ ಲೆಕ್ಕ ಪತ್ರ ಇಲಾಖೆಯ ನಿವೃತ್ತ ಲೆಕ್ಕಾಧಿಕಾರಿಗಳಾದ ಶ್ರೀಯುತ ನಾಗರಾಜು ರವರು ಉದ್ಘಾಟಿಸಿದರು.ನಂತರ ಮಾತನಾಡಿದ ನಾಗರಾಜು ರವರು ಪ್ರಸ್ತುತ ದಿನಗಳಲ್ಲಿ ಚಿತ್ರೋಧ್ಯಮ.ಟಿ.ವಿ. ವ್ಯಾಟ್ಸಪ್.ಫೇಸ್ ಬುಕ್ ಮೊದಲಾದ ಮಾಧ್ಯಮಗಳಿಂದ ಗ್ರಾಮೀಣ ಕಲೆಗಳಾದ ರಂಗ ನಾಟಕ.ರಂಗ ಗೀತೆಗಳು.ಜಾನಪದ ಗೀತೆಗಳು ಗ್ರಾಮಾಂತರ ಪ್ರದೇಶಗಳಲ್ಲಿ ತೀರ ಕಡಿಮೆಯಾಗುತ್ತಿದೆ.ಮಕ್ಕಳು ಮತ್ತು ವಯಸ್ಕರು ಸೇರಿದಂತೆ ಎಲ್ಲಾ ವರ್ಗದ ಜನರು ಟಿ.ವಿ ಮತ್ತು ಚಲನಚಿತ್ರ ಮೊದಲಾದ ಮನರಂಜನೆ ಕಾರ್ಯಕ್ರಮಕ್ಕೆ ಆಕರ್ಷಿತರಾಗಿದ್ದಾರೆ .ಸಾವಿರಾರು ವರ್ಷಗಳಿಂದ ಬೆಳೆದು ಬಂದಿರುವ ಈ ನಾಡಿನ ಗ್ರಾಮೀಣ ಕಲೆಗಳಾದ ರಂಗಗೀತೆ.ಜಾನಪದ ಗೀತೆಗಳು ತುಂಬ ಕಡಿಮೆಯಾಗುತ್ತಿದೆ ಆದ್ದರಿಂದ ಗ್ರಾಮೀಣ ಕಲೆಗಳನ್ನು ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮಗಳಿಗೆ ಹೆಚ್ಚು ಪ್ರೋತ್ಸಾಹ ಸಿಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾದ ವೆಂಕಟರಾಜು ರವರು ವಹಿಸಿದ್ದರು.ತಾ.ಪಂ.ಉಪಾಧ್ಯಕ್ಷ ಮಾಧು.ಗ್ರಾ.ಪಂ.ಅಧ್ಯಕ್ಷೆ ಪುಟ್ಟಮ್ಮಣ್ಣಿ.ತಾ.ಪಂ.ಸದಸ್ಯೆ ಆಶಾ ಪ್ರಭುಸ್ವಾಮಿ.ಟ್ರಸ್ಟ್ ಅಧ್ಯಕ್ಷ ಹಾಗೂ ಮಾಜಿ ಜಿಲ್ಲಾ ಪರಿಷತ್ ಸದಸ್ಯರಾದ ಜಯರಾಜು.ನಿವೃತ್ತ ಪ್ರಾಂಶುಪಾಲ ಮಂಚಯ್ಯ.ಡಾ.ಪ್ರಸಾದ್. ಮೊದಲಾದವರು ಉಪಸ್ಥಿತರಿದ್ದರು.
ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಎಸ್ ಶರತ್ ಕುಮಾರ್ ರವರು ಇಂದು ಅಧಿಕಾರ ಸ್ವೀಕರಿಸಿದರು.
ಮಳವಳ್ಳಿ : ಮಳವಳ್ಳಿ ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಎಸ್.ಶರತ್ ಕುಮಾರ್ ರವರು ಇಂದು ಅಧಿಕಾರ ಸ್ವೀಕರಿಸಿದರು. ಕಳೆದ ಸಾಮಾನ್ಯ ಸಭೆಯಲ್ಲಿ ಒಪ್ಪಂದದಂತೆ ಈ ಹಿಂದೆ ಇದ್ದ ಸ್ಥಾಯಿ ಸಮಿತಿಯ ಅಧ್ಯಕ್ಷ ದೊಡ್ಡಯ್ಯ ರಾಜೀನಾಮೆ ನೀಡಿದ್ದ ಹಿನ್ನೆಲೆ ಸಭೆಯಲ್ಲಿ ಶರತ್ ಕುಮಾರ್ ರವರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು. ಇಂದು ಅಧಿಕಾರವನ್ನು ಸ್ವೀಕರಿಸಿದ ಹಿನ್ನಲೆಯಲ್ಲಿ ತಾ.ಪಂ ಅಧ್ಯಕ್ಷ ನಾಗೇಶ್ ,ಉಪಾಧ್ಯಕ್ಷ ಮಾಧು, ಸದಸ್ಯರಾದ ಪುಟ್ಟಸ್ವಾಮಿ, ರತ್ನಮ್ಮ, ಮುಖಂಡರಾದ ಗವಿಸಿದ್ದಯ್ಯ ಸೇರಿದಂತೆ ಹಲವು ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಸಹ ಅಭಿನಂದಿಸಿದರು.
ವಿದ್ಯಾ ಪ್ಯಾರ ಮೆಡಿಕಲ್ ಕಾಲೇಜು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನವನ್ನು ಮಳವಳ್ಳಿಪಟ್ಟಣದ ವಿದ್ಯಾ ಪ್ಯಾರ ಮೆಡಿಕಲ್ ಕಾಲೇಜು ನಲ್ಲಿ ಆಚರಿಸಲಾಯಿತು.
ಮಳವಳ್ಳಿ: ಮಳವಳ್ಳಿ ಪಟ್ಟಣದ ವಿದ್ಯಾ ಪ್ಯಾರ ಮೆಡಿಕಲ್ ಕಾಲೇಜು ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನವನ್ನು ಆಚರಿಸಲಾಯಿತು.ಕಾರ್ಯಕ್ರಮ ದಲ್ಲಿ ವಿದ್ಯಾ ಪ್ಯಾರ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಚಂದ್ರಮೋಹನ್ ರವರು ಮಾತನಾಡಿ ಜಂತುಹುಳು ಮನುಷ್ಯನನ್ನು ಹೇಗೆ ಕಾಡುತ್ತದೆ ಎಂಬ ಬಗ್ಗೆ ತಿಳಿಸಿಕೊಟ್ಟರು. ಇನ್ನೂ ತಾಲ್ಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ ಮಾತನಾಡಿ , ಸಣ್ಣ ಮಕ್ಕಳಿಂದ 19 ವರ್ಷದೊಳಗೆ ಮಕ್ಕಳಿಗೆ ಜಂತುಹುಳು ನಿವಾರಣೆ ಗೆ ವರ್ಷಕ್ಕೆ ಎರಡು ಬಾರಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಅದಕ್ಕಾಗಿ ದೇಶವ್ಯಾಪ್ತಿ ಫೆಬ್ರವರಿ ಹಾಗೂ ಆಕ್ಟೋಬರ್ ತಿಂಗಳನಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನವನ್ನು ಆಚರಸಲಾಗುತ್ತಿದೆ. ಈ ಹಿಂದೆ ಬಯಲು ಶೌಚಾಲಯ ದಿಂದ ಜಂತುಹಳು ಮನುಷ್ಯನನ್ನು ಬೇಗ ಅವರಿಸಿಕೊಳ್ಳುತ್ತಿತ್ತು. ಇಂದಿನಿಂದ ಆರು ದಿನಗಳ ಕಾಲ ಈ ಜಂತುಹುಳು ನಿವಾರಣೆ ಮಾಡಲು ಇಲಾಖೆ ಕ್ರಮ ಕೈಗೊಳ್ಳುತ್ತದೆ ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ತೆರಳಿ ಮಾತ್ರೆಗಳನ್ನು ಉಚಿತವಾಗಿ ನೀಡುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ಶಿಕ್ಷಣಾಧಿಕಾರಿ ವೀರಣ್ಣಗೌಡ ,ಕಾಲೇಜ ಸಿಬ್ಬಂದಿ ಮತ್ತು ಮಕ್ಕಳು ಸೇರಿದಂತೆ ಮತ್ತಿತ್ತರು ಹಾಜರಿದ್ದರು.
ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಮಹಾಂಸ್ಥಾನ ಪೀಠದ ಶ್ರೀ ಶಂಕರ ಬಸವೇಶ್ವರಸ್ವಾಮಿ ದೇವಾಲಯ ಶಿವಾಚಾರ್ಯಸ್ವಾಮಿಗಳವರ ನೇತೃತ್ವದಲ್ಲಿ ಲೋಕಾರ್ಪಣೆ.
ಮಳವಳ್ಳಿ: ಮಳವಳ್ಳಿ ಪಟ್ಟಣದ ಕೋಟೆಯ ತ್ಯಾಗರಾಜ ರಸ್ತೆಯಲ್ಲಿರುವ ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಮಹಾಂಸ್ಥಾನ ಪೀಠದ ಶಾಖಾ ಮಠವಾದ ಶ್ರೀ ಶಂಕರ ಮಠದ ಆವರಣದಲ್ಲಿ ಪುನರುಜ್ಜೀವನಗೊಳಿಸಿರುವ ಶ್ರೀ ಶಂಕರ ಬಸವೇಶ್ವರಸ್ವಾಮಿ ದೇವಾಲಯವನ್ನು ಮತ್ತು ಭಕ್ತ ಮಹಾಶಯರ ಹಾಗೂ ದಾನಿಗಳ ಸಹಕಾರದೊಂದಿಗೆ ನೂತನವಾಗಿ ನಿರ್ಮಾಣಗೊಂಡಿರುವ ಶಂಕರ ಮಠದ ಕಟ್ಟಡವನ್ನು ಧನಗೂರು ಮಠದ ಶ್ರೀ ಷ ಬ್ರ ಶ್ರೀ ಮುಮ್ಮಡಿ ಷಡಕ್ಷರದೇಶಿಕೇಂದ್ರ ಶಿವಾಚಾರ್ಯಸ್ವಾಮಿಗಳವರ ನೇತೃತ್ವದಲ್ಲಿ ಲೋಕಾರ್ಪಣೆ ಮಾಡಲಾಯಿತು. ಇದಲ್ಲದೆ ಶಂಕರ ಮಠದ ಆವರಣದಲ್ಲಿ ಹೋಮಹವನವನ್ನು ನಡೆಸಲಾಯಿತು ಪ್ರಾತ:ಕಾಲ ಮೂರ್ತಿ ಪ್ರತಿಷ್ಠಾಪನೆ ಕಲಶಾರೋಹಣ ಕಾರ್ಯಕ್ರಮನಡೆಸಲಾಯಿತು ಕೆ.ಎಂ ದೊಡ್ಡಿ ಶಿವಪಾರ್ವತಿ ಮಹಿಳೆಯರ ತಂಡದಿಂಧ ಭಜನಾ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮ ದಲ್ಲಿ ನೂರಾರು ಭಕ್ತರು ಆಗಮಿಸಿ ದೇವಾಲಯದಲ್ಲಿ ಪೂಜೆಸಲ್ಲಿಸಿದರು ಆಗಮಿಸಿದ ಭಕ್ತರಿಗೆ ಮಠವತಿಯಿಂದ ಪ್ರಸಾದವಿನಿಯೋಗ ಮಾಡಲಾಗಿತ್ತು.
ಭತ್ತ ಖರೀದಿ ಕೇಂದ್ರ ತೆರೆವಂತೆ ಒತ್ತಾಯಿಸಿ ಭತ್ತ ಬೆಳೆಗಾರರ ಹೋರಾಟ ಸಮಿತಿ. ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ. ಮಳವಳ್ಳಿ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಭತ್ತ ಖರೀದಿ ಕೇಂದ್ರ ತೆರೆವಂತೆ ಒತ್ತಾಯಿಸಿ ಭತ್ತ ಬೆಳೆಗಾರರ ಹೋರಾಟ ಸಮಿತಿ. ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು ಪ್ರತಿಭಟನಾಕಾರರು ಸರ್ಕಾರ ವಿರುದ್ದ ಘೋಷಣೆ ಕೂಗಿದ್ದರು. ರೈತನೊಬ್ಬ ಸ್ಥಳೀಯ ಶಾಸಕರು ರೈತರ ಮೇಲೆ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಲವು ಸಮಯದವರೆಗೂ ಪ್ರತಿಭಟನಾ ಸ್ಥಳಕ್ಕೆ ಬರದಿದ್ದ ಕಾರಣ ರೊಚ್ಚಿಗೆದ್ದ ರೈತರು ತಹಸೀಲ್ದಾರ್ ಕಚೇರಿಗೆ ಬೀಗ ಹಾಕಲು ಯತ್ನಿಸಿದರು ಈ ಸಂದರ್ಭದಲ್ಲಿ. ಪೊಲೀಸರು ಹಾಗೂ ಪ್ರತಿಭಟನಾಕಾರ ನಡುವೆ ಮಾತಿನ ಚಕಮುಕಿ ನಡೆಯಿತು ಈ ಸಂದರ್ಭದಲ್ಲಿ ಇನ್ಸ್ ಪೆಕ್ಟರ್ ರಮೇಶ್ ರವರು ಶಾಂತಿಯುತ ಪ್ರತಿಭಟನೆ ಮಾಡಿ ಬೀಗ ಹಾಕಲು ಯತ್ನಿಸಿದರೆ ಕಾನೂನು ರೀತಿ ನಿಮ್ಮ ಮೇಲೆ ಕೇಸು ಹಾಕಬೇಕಾಗುತ್ತದೆ ಎಂದಾಗ. ಪ್ರತಿಭಟನಾಕಾರರು ರೈತರಿಗೆ ಭತ್ತ ಖರೀದಿ ಮಾಡುತ್ತೇನೆ ಎಂದು ನೊಂದಾಣಿ ಮಾಡಿಸಿಕೊಂಡ ತಾಲ್ಲೂಕು ಮಟ್ಟದ ಅಧಿಕಾರಿಗಳು, ಹಾಗೂ ಮುಖ್ಯಮಂತ್ರಿಗಳ ನಮಗೆ ವಂಚನೆ ಮಾಡಿದ್ದಾರೆ ಅವರ ಮೇಲೆ 420 ಕೇಸು ಹಾಕಿ ಎಂದಾಗ. ದೂರು ನೀಡಿ ಕೇಸು ಹಾಕುತ್ತೇನೆ ಎಂದರು. ಇದೇ ಸಮಯಕ್ಕೆ ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಚಂದ್ರಮೌಳಿ ಬೇಟಿ ಮನವೊಲಿಕೆ ಯತ್ನಿಸಿದರು. ಸ್ಥಳದಲ್ಲೇ ಭತ್ತ ಖರೀದಿಸಲು ಪ್ರತಿಭಟನಾಕಾರ ಒತ್ತಾಯ ಮಾಡಿದರು. ನಂತರ ಮಾತನಾಡಿದ ತಹಸೀಲ್ದಾರ್ ಚಂದ್ರಮೌಳಿ ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಸಭೆಯೂ ನಡೆಯುತ್ತಿದೆ ಈಗಾಗಾಲೇ ಕಿರುಗಾವಲು ಗ್ರಾಮದಲ್ಲಿ ಭತ್ತ ಖರೀದಿಸಲು ಕೇಂದ್ರ ತೆರೆದಿದೆ ಇನ್ನೂ ಎರಡು ಮೂರು ದಿನಗಳಲ್ಲಿ ಇನ್ನೂ ಮೂರು ಕೇಂದ್ರಗಳನ್ನು ತೆರೆಯಲಾಗುವುದು ಎಂದರು.ನಂತರ ಈ ತಕ್ಷಣ ಭತ್ತವನ್ನು ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಬೇಕು ಹಾಗೂ ಜೊತೆಗೆ ಒಬ್ಬ ರೈತರಿಗೆ 40 ಕ್ವೀಟಾಲ್ ಮಾತ್ರ ಭತ್ತ ಖರೀದಿಸಲು ಷರತ್ತುಯನ್ನು ವಾಪಸ್ಸು ಪಡೆಯಬೇಕು ಎಂದರು ಒತ್ತಾಯಿಸಿದರು. ಸರಿ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ತಹಸೀಲ್ದಾರ್ ತಿಳಿಸಿದ ನಂತರ. ಪತ್ರಿಭಟನಾಕಾರರು ಪ್ರತಿಭಟನೆ ಕೈಬಿಡಲಾಯಿತು.
ಮಳವಳ್ಳಿತಾಲ್ಲೂಕಿನ ಸುಜ್ಜಲೂರು ಗ್ರಾಮಪಂಚಾಯಿತಿ ಉಪಾಧ್ಯಕ್ಷರಾಗಿ ಜಯಲಕ್ಷ್ಮಿನಾಗರಾಜು ರವರು ಅವಿರೋಧವಾಗಿ ಆಯ್ಕೆಯಾದರು
ಮಳವಳ್ಳಿ: ತಾಲ್ಲೂಕಿನ ಸುಜ್ಜಲೂರು ಗ್ರಾಮಪಂಚಾಯಿತಿ ಉಪಾಧ್ಯಕ್ಷರಾಗಿ ಜಯಲಕ್ಷ್ಮಿನಾಗರಾಜು ರವರು ಅವಿರೋಧವಾಗಿ ಆಯ್ಕೆಯಾದರು .ಹಿಂದೆ ಇದ್ದ ಶಿವಮ್ಮರವರು ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನಲೆಯಲ್ಲಿ ತಿಂಗಳಗಳಿಂದ ತೆರುವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ತಾಲ್ಲೂಕು ಪಂಚಾಯಿತಿ ಇಒ ಹಾಗೂ ಚುನಾವಣಾಧಿಕಾರಿ ಸತೀಸ್ ರವರು ಚುನಾವಣೆ ನಿಗಧಿ ಪಡಿಸಿದ್ದರು. ಸಾಮಾನ್ಯ ಮಹಿಳೆ ವರ್ಗಕ್ಕೆ ಮೀಸಲು ಗಿದ್ದು ಒಟ್ಟು 20 ಸದಸ್ಯರ ಪೈಕಿ ಜಯಲಕ್ಷ್ಮಿ ನಾಗರಾಜು ಮಾತ್ರ ನಾಮಪತ್ರ ಸಲ್ಲಿಸಿದ್ದರು . ಈ ಹಿನ್ನಲೆಯಲ್ಲಿ ಚುನಾವಣಾಧಿಕಾರಿ ಸತೀಸ್ ರವರು ಜಯಲಕ್ಷ್ಮಿ ನಾಗರಾಜು ರವರು ಅವಿರೋದವಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಣೆ ಮಾಡಿದರು.ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಜಿ.ಪಂಸದಸ್ಯರು ತಾಲ್ಲೂಕುಪಂಚಾಯಿತಿ ಉಪಾಧ್ಯಕ್ಷ ಮಾಧು ,ಮುಖಂಡ ಚನ್ನಪಿಳ್ಳೆಕೊಪ್ಪಲುಸಿದ್ದೇಗೌಡರು ಸೇರಿದಂತೆ ಗ್ರಾಮದ ಮುಖಂಡರು ನೂತನ ಉಪಾಧ್ಯಕ್ಷರಿಗೆ ಅಭಿನಂದಿಸಿದರು.