ರಾಜ್ಯಸುದ್ದಿ
ಕೆ.ಆರ್.ಪೇಟೆ ಪಿ.ಎಲ್.ಡಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಬಂಡಿಹೊಳೆ ನಾಗೇಶ್ ಅವಿರೋಧ ಆಯ್ಕೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಇಂದು ನಡೆದ ಚುನಾವಣೆಯಲ್ಲಿ ಬಂಡಿಹೊಳೆ ಗ್ರಾಮದ ಕಾಂಗ್ರೆಸ್ ಮುಖಂಡ ನಾಗೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಾಂಡವಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ರಾಜು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.ಅಧ್ಯಕ್ಷ ಸ್ಥಾನಕ್ಕೆ ಬಂಡಿಹೊಳೆ ನಾಗೇಶ್ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರವನ್ನು ಸಲ್ಲಿಸದ ಕಾರಣ ಚುನಾವಣಾಧಿಕಾರಿ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು. ನೂತನ ಅಧ್ಯಕ್ಷರನ್ನು ಮಾಜಿಶಾಸಕ ಡಾ.ಕೆ.ಬಿ.ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್, ಕೆ.ಆರ್.ರವೀಂದ್ರಬಾಬು, ಮುಖಂಡರಾದ ಚೇತನಾ ಮಹೇಶ್, ಹರಳಹಳ್ಳಿ ವಿಶ್ವನಾಥ, ಡಾ.ಕೆ.ಎಸ್.ಬಸವೇಗೌಡ, ಕೆ.ಬಿ.ರವಿ ಮತ್ತಿತರರು ಅಭಿನಂದಿಸಿದರು.
ಜಿ.ಪಂ. ಸದಸ್ಯ ಎಚ್.ಟಿ.ಮಂಜು ಮಾಲೀಕತ್ವದ ಜಲ್ಲಿ ಕ್ರಷರ್ ಅಕ್ರಮ ಎಂದು ಅಕ್ಕಪಕ್ಕದ ಗ್ರಾಮಸ್ಥರಿಂದ ಪ್ರತಿಭಟನೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೊಮ್ಮನಾಯಕನಹಳ್ಳಿ ಗ್ರಾಮದಲ್ಲಿ ಜಿ.ಪಂ.ಸದಸ್ಯ ಎಚ್.ಟಿ.ಮಂಜು ಮಾಲೀಕತ್ವದ ಜಲ್ಲಿ ಕ್ರಷರ್ ಅಕ್ರಮ ಎಂದು ಅಕ್ಕಪಕ್ಕದ ಗ್ರಾಮಸ್ಥರಿಂದ ಪ್ರತಿಭಟನೆ.ಶಿವಪುರ ಗ್ರಾಮದ ನಾಗರಾಜು ನೇತೃತ್ವದಲ್ಲಿ ಅಕ್ಕಪಕ್ಕದ ಗ್ರಾಮಗಳಾದ ಶಿವಪುರ, ಬೇಲದಕೆರೆ, ಚಟ್ಟೇನಹಳ್ಳಿ ಮತ್ತು ಕಾಗೆಪುರ ಗ್ರಾಮಸ್ಥರಿಂದ ಪ್ರತಿಭಟನೆ.ಪ್ರತಿಭಟನಾಕಾರ ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ಮೂಲಕ ಆಗಮಿಸಿ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸುವಂತೆ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ನಂತರ ಮಾತನಾಡಿದ ನಾಗರಾಜು, ಕ್ವಾರೆ ನಡೆಸುತ್ತಿರುವ ಜಾಗ ಹಿಂದೆ ಸ್ಮಾಶನಕ್ಕೆ ಮೀಸಲಿಟ್ಟಿದ್ದು,ಕಲ್ಲು ಕ್ರಷರ್ ಶಿವಪುರ ಗ್ರಾಮದ ಹಳೆ ಗ್ರಾಮ ಠಾಣಾ ಆಗಿದ್ದು ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಕೂಡಲೇ ಅಕ್ರಮವಾಗಿ ನಡೆಯುತ್ತಿರುವ ಕ್ರಷರ್ ಅನ್ನು ನಿಲ್ಲಿಸುವಂತೆ ತಹಶೀಲ್ದಾರ್ ಎಂ.ಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಸದನಕ್ಕೆ ಗೈರು ಅನಾರೋಗ್ಯದ ನೆಪ.ಜೆಡಿಎಸ್ ನಾಯಕರ ಸಂಪರ್ಕಕ್ಕೂ ಸಿಗದೆ ದಿಢೀರ್ ಬಾಂಬೆಯತ್ತ ತೆರಳಿರುವ ನಾರಾಯಣ ಗೌಡ.ಪೊನ್ ನಾಟ್ ರಿಚೇಬಲ್.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಜೆಡಿಎಸ್ ಶಾಸಕ ಕೆ.ಸಿ.ನಾರಾಯಣ ಗೌಡ ಅನಾರೋಗ್ಯದ ನೆಪದಲ್ಲಿ ಸದನಕ್ಕೆ ಗೈರಾಗಿರುವ ಹಿನ್ನೆಲೆ. ಅತೃಪ್ತ ಶಾಸಕನ ಕರೆ ತರುವ ಹೊಣೆ ಹೊತ್ತ ಸಣ್ಣ ನೀರಾವರಿ ಖಾತೆ ಸಚಿವ ಸಿ.ಎಸ್.ಪುಟ್ಟರಾಜು ಶಾಸಕನ ಮನೆ ಸರ್ಚಿಂಗ್ ಮಾಡಿ ಶಾಸಕ ಸಿಗದೆ ಬರೀ ಕೈಯಲ್ಲಿ ವಾಪಸ್ಸಾದ ಸಚಿವ. ತೆನೆ ಇಳಿಸಲು ನಿರ್ಧರಿಸಿದರ ಕೆ.ಆರ್.ಪೇಟೆಯ ಜೆಡಿಎಸ್ ಶಾಸಕ ಕೆ.ಸಿ.ನಾರಾಯಣ ಗೌಡ.ಅತೃಪ್ತ ಕೈ ಶಾಸಕರಿಗೆ ಜೆಡಿಎಸ್ ಶಾಸಕನ ಹೋಟೆಲ್ ನಲ್ಲೇ ಆತಿಥ್ಯ!.ಬಾಂಬೆಯಲ್ಲಿ ಹೋಟೆಲ್, ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಶಾಸಕ.ಸಿಎಂ ಹೆಚ್ಡಿಕೆ ನಿರ್ಲಕ್ಷ್ಯಕ್ಕೆ ಬೇಸತ್ತಿದ್ದ ನಾರಾಯಣ ಗೌಡ.ಬಿಜೆಪಿ ಜೊತೆ ಸಂಪರ್ಕದಲ್ಲಿರೋ ಶಂಕೆ.ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಯಡಿಯೂರಪ್ಪರನ್ನ ಹೊಗಳಿದ್ದ ನಾರಾಯಣ ಗೌಡ.ಕ್ಷೇತ್ರದ ಅಭಿವೃದ್ಧಿಗಾಗಿ 40ಕೋಟಿ ಅನುದಾನ ಕೇಳಿದ್ದ ಶಾಸಕ.ಅಭಿವೃದ್ಧಿ, ಚುನಾವಣಾ ಪೂರ್ವ ಭರವಸೆಯಂತೆ ಮನೆ ನಿರ್ಮಾಣಕ್ಕೆ ಅನುದಾನ ಕೇಳಿದ್ದ ಶಾಸಕ.ಪಕ್ಕದ ಮೇಲುಕೋಟೆ ಕ್ಷೇತ್ರಕ್ಕೆ ನೂರಾರು ಕೋಟಿ ಬಿಡುಗಡೆ.ಕೆ.ಆರ್.ಪೇಟೆ ಕ್ಷೇತ್ರ ನಿರ್ಲಕ್ಷ್ಯಕ್ಕೆ ಬೇಸತ್ತಿರೋ .ದಿಢೀರ್ ಬಾಂಬೆಯತ್ತ ತೆರಳಿರುವ ನಾರಾಯಣ ಗೌಡ.ಅತೃಪ್ತ ಶಾಸಕನ ಕರೆ ತರುವ ಹೊಣೆ ಹೊತ್ತ ಸಣ್ಣ ನೀರಾವರಿ ಖಾತೆ ಸಚಿವ ಸಿ.ಎಸ್.ಪುಟ್ಟರಾಜು.ಸದ್ಯಕ್ಕೆ ಶಾಸಕ ನಾರಾಯಣಗೌಡ ನಾಟ್ ರಿಚಬಲ್.
ರಾಜ್ಯದ ರಾಜಕಾರಣದಲ್ಲಿ ನಡೆಯುತ್ತಿರುವ ಏರುಪೇರುಗಳನ್ನು ನಾನು ತಲೆಕೆಡಿಸಿಕೊಳ್ಳುವುದಿಲ್ಲ ನಮ್ಮ ರಾಷ್ಟ್ರದ ಹಾಗೂ ರಾಜ್ಯದ ನಾಯಕರುಗಳು ನೋಡಿಕೊಳ್ಳುತ್ತಾರೆ ಎಂದು ಮಳವಳ್ಳಿ ಕ್ಷೇತ್ರ ಶಾಸಕ ಡಾ.ಅನ್ನದಾನಿ
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಲ್ಕುಣಿ ಗ್ರಾಮದಲ್ಲಿ ರಸ್ತೆ ಕಾಮಗಾರಿ ಗುದ್ದಲಿಪೂಜೆ ನೇರವೇರಿಸಿದ ನಂತರ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯದ ರಾಜಕಾರಣ ನೋಡಿಕೊಳ್ಳಲು ರಾಷ್ಟ್ರದ ನಾಯಕರಾದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು. ಬಿಜೆಪಿ ಪಕ್ಷವೂ ಅಧಿವೇಶನ ಮುನ್ನ ಸರ್ಕಾರವನ್ನು ಉರುಳುತ್ತದೆ ಎಂದು ಹೇಳುತ್ತಿದೆ ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಕೇಳಿದಾಗ ಅದಕ್ಕೆ ಬಿಜೆಪಿ ಬಗ್ಗೆ ನನಗೆ ಗೊತ್ತಿಲ್ಲ ಎಂದಷ್ಟೇ ಹೇಳುವ ಮೂಲಕ ಉತ್ತರಿಸಿದ್ದನ್ನು ನೋಡಿದರೆ ಅನುಮಾನ ವ್ಯಕ್ತವಾಗುತ್ತದೆ ಇನ್ನೂ ಇದಕ್ಕೂ ಮುನ್ನ 18 ಲಕ್ಷ ರೂ ವೆಚ್ಚದ ಪಶು ಚಿಕಿತ್ಸಾ ಕೇಂದ್ರದ ಕಟ್ಟಡ ಕ್ಕೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದ ಶಾಸಕರು ಈ ಭಾಗದ ಜನರು ಇನ್ನೂ ಮುಂದೆ ಒಂದು ಫಸಲು ಮಾತ್ರ ಭತ್ತ ಬೆಳೆಯಬೇಕಾಗುತ್ತದೆ ಈಗಾಗಲೇ ಕೆ.ಆರ್.ಎಸ್ ಅಣೆಕಟ್ಟು ಗೆ ಸಂಬಂಧಿಸಿದಂತೆ ಮೂರುರಾಜ್ಯಗಳ ಸಮಿತಿ ರಚನೆಯಾಗಿದ್ದು ಈಗಾಗಲೇ ನೀರು ಹರಿಸಲು ಬೇರೆ ರಾಜ್ಯಗಳ ಒಪ್ಪಿಗೆ ಬೇಕಾಗುತ್ತದೆ. ಸಮ್ಮುನೆ ಬೆಳೆ ಬೆಳೆಸುತ್ತೇನೆ ಎಂಬ ಕನಸು ಕಾಣಬೇಡಿ ಎಂದರು. ಈಗಾಗಲೇ ಕ್ಷೇತ್ರಕ್ಕೆ ಸಣ್ಣ ನೀರಾವರಿ ಸಚಿವರ ಜೊತೆ ಚರ್ಚೆಮಾಡಿ ಕೆರೆಕಟ್ಟೆಗಳಿಗೆ ನೀರು ಒದಗಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಇನ್ನೂ ಕಿರುಗಾವಲು ಸಂತೆಮಾಳದಲ್ಲಿ ಸುಂದರವಾದ ಹಾಗೂ ಮಾದರಿ ಬಸ್ ನಿಲ್ದಾಣ ಮಾಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಸ್ಥಾಯಿ ಹಾಗೂ ಶಿಕ್ಷಣ ಸಮಿತಿ ಅಧ್ಯಕ್ಷ ಹಾಗೂ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ರವಿ, ಎಸ್ ಸಿ/ಎಸ್ ಡಿ ಅಧ್ಯಕ್ಷ ನಂಜುಂಡುಸ್ವಾಮಿ, ಗ್ರಾಮಪಂಚಾಯಿತಿ ಅಧ್ಯಕ್ಷೆ ರೇಖಾಪುಟ್ಟಸ್ವಾಮಿ, ಲೋಕೋಪಯೋಗಿ ಇಲಾಖೆ ಎಇಇ ಹೆಚ್.ಎಂ ಮಹದೇವಪ್ಪ, ಸಹಾಯಕ ಇಂಜಿನಿಯರ್ ಸೋಮ , ಆನಂದ್ ಕಲ್ಕುಣಿ ಸೇರಿದಂತೆ ಮತ್ತಿತ್ತರು ಇದ್ದರು
ತಾಲ್ಲೂಕು ಲೋಕ ಶಿಕ್ಷಣ ಸಮಿತಿಯ ವತಿಯಿಂದ ಮುಖ್ಯ ತರಬೇತಿದಾರರಿಗೆ ಮೂರು ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿದ ಮಾನ್ಯ ತಹಶಿಲ್ದಾರ್ ಎಂ.ಶಿವಮೂರ್ತಿ.
ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಪಟ್ಟಣದ ಬಿ.ಆರ್.ಸಿ.ಕೇಂದ್ರದಲ್ಲಿ ತಾಲ್ಲೂಕು ಲೋಕ ಶಿಕ್ಷಣ ಸಮಿತಿಯ ವತಿಯಿಂದ ಮುಖ್ಯ ತರಬೇತಿದಾರರಿಗೆ ಮೂರು ದಿನಗಳ ತರಬೇತಿ ಕಾರ್ಯಾಗಾರವನ್ನು ಮಾನ್ಯ ತಹಶಿಲ್ದಾರ್ ಎಂ.ಶಿವಮೂರ್ತಿ ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ತಹಶಿಲ್ದಾರ್ ಶಿವಮೂರ್ತಿ ರವರು ಮುಖ್ಯ ತರಬೇತಿದಾರರು ಬೋಧಕರಿಗೆ ಉತ್ತಮ ಗುಣಮಟ್ಟದ ತರಬೇತಿಯನ್ನು ನೀಡಲು ತಾವು ಸಂಪನ್ಮೂಲ ಶಿಕ್ಷಕರಾಗಿ ಉತ್ತಮವಾದ ಅಂಶಗಳನ್ನು ತರಬೇತಿಯ ಸಮಯದಲ್ಲಿ ಪಡೆದುಕೊಂಡು ಅವುಗಳನ್ನು ವ್ಯವಸ್ಥಿತವಾಗಿ ಮತ್ತು ಸೂಕ್ತ ವಾತಾವರಣದಲ್ಲಿ ಬೋಧಕರಿಗೆ ತರಬೇತಿ ನೀಡಿ. ಗ್ರಾಮ ಮಟ್ಟದಲ್ಲಿ ಅನಕ್ಷರಸ್ಥರಿಗೆ ಒಳ್ಳೆಯ ಕಲಿಕಾ ವಾತಾವರಣ ನಿರ್ಮಿಸಿ ಅವರ ಬಿಡುವಿನ ವೇಳೆಯಲ್ಲಿ ಕಲಿಕೆ ಮಾಡಿಸುವ ಮೂಲಕ ಅವರನ್ನು ನವ ಸಾಕ್ಷರರನ್ನಾಗಿ ಮಾಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸವನ್ನೂ ತೃಪ್ತಿಕರವಾಗಿ ನಿರ್ವಹಿಸಬೇಕು, ಆ ಮೂಲಕ ಸಂಪೂರ್ಣ ಸಾಕ್ಷರತೆಯ ಗ್ರಾಮವಾಗಲು ಗಮನ ಹರಿಸಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಮೌಳಿ. ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಹಾಗೂ ಜಿಲ್ಲಾ ಲೋಕಶಿಕ್ಷಣ ಸಮಿತಿಯ ಸದಸ್ಯ ಅಂ.ಚಿ. ಸಣ್ಣಸ್ವಾಮಿಗೌಡ. ಕ್ಷೇತ್ರ ಸಮನ್ವಯಾಧಿಕಾರಿ. ಲಿಂಗರಾಜು. ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅದ್ಯಕ್ಷ ಪಿ.ಜೆ.ವೆಂಕಟರಾಮು. ತಾಲ್ಲೂಕು ವಯಸ್ಕರ ಶಿಕ್ಷಣಾಧಿಕಾರಿ ಮರುವನಹಳ್ಳಿ ಬಸವರಾಜು ಮತ್ತು ಪಾಂಡವಪುರ ತಾಲ್ಲೂಕು ವಯಸ್ಕರ ಶಿಕ್ಷಣಾಧಿಕಾರಿ ರಾಘವೇಂದ್ರ. ಸೇರಿದಂತೆ ತಾಲ್ಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ್ದ ಸಂಪನ್ಮೂಲ ಶಿಕ್ಷಕರು ಹಾಜರಿದ್ದರು.
ಮಾಳಗೂರು ಗ್ರಾಮದಲ್ಲಿ ಹಸು ಒಂದು ಎರಡು ಕರುಗಳಿಗೆ ಜನ್ಮ ನೀಡಿದೆ ಎರಡು ಕರುಗಳು ಆರೋಗ್ಯವಾಗಿವೆ .
ಮಂಡ್ಯ ಜಿಲ್ಲೆಯ ಕೆ.ಅರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಮಾಳಗೂರು ಗ್ರಾಮದಲ್ಲಿ ಒಂದು ಅಚ್ಚರಿ ನಡೆದಿದೆ. ನಾವು ಮೇಕೆ ಮತ್ತು ಕುರಿಗಳು ಎರಡು ಕರುಗಳನ್ನು ಹಾಕುವುದನ್ನು ನೊಡಿರತ್ತೆವೆ ಅದರೆ ಇಲ್ಲಿ ಹಸು ಎರಡು ಕರುಗಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದೆ. ಇ ಹಸು ಗ್ರಾಮದ ಶೇಕರ್ ಎಂಬುವರಿಗೆ ಸೇರಿದ್ದು ಒಂದು ಗಂಡು ಮತ್ತು ಮತ್ತೊಂದು ಹೆಣ್ಣು ಕರುವಾಗಿದ್ದು ಎರಡು ಕರುಗಳು ಆರೋಗ್ಯ ವಾಗಿದ್ದು ಹಸು ಕೂಡಾ ಆರೋಗ್ಯ ವಾಗಿದೆ .ಇ ಅಚ್ಚರಿಯನ್ನು ನೊಡಲು ಗ್ರಾಮಸ್ಥರು ಮುಗಿಬಿದ್ದಿದಾರೆ.
ಅರಣ್ಯ ಪ್ರದೇಶದಲ್ಲಿ ಯುವತಿಯೊಬ್ಬಳನ್ನು ಅಮಾನುಷವಾಗಿ ಕೊಲೆ. ಮಾಹಿತಿ ನೀಡಲು ಕೋರಿದೆ ಹುಲಿಯೂರು ದುರ್ಗ PSI .
ಕುಣಿಗಲ್: ಕುಣಿಗಲ್ ತಾಲ್ಲೂಕಿನ ಸಂತೆ ಮಾವತ್ತೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಯುವತಿಯೊಬ್ಬಳನ್ನು ಅಮಾನುಷವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಹೊಲದ ಬಳಿ ತೆರಳುತ್ತಿದ್ದ ರೈತರು ಬೆಳಿಗ್ಗೆ ಶವ ಬಿದ್ದಿರುವುದನ್ನು ಪೊಲೀಸರಿಗೆ ತಿಳಿಸಿದ್ದಾರೆ .22 ವರ್ಷ ವಯಸ್ಸಿನ ಹುಡುಗಿಯ ತಲೆಯನ್ನು ಕಲ್ಲಿನಿಂದ ಜಜ್ಜಿ ಅಮಾನುಷವಾಗಿ ಕೊಲೆ ಮಾಡಿದ್ದು ಆಕೆಯ ದೇಹದ ಮೇಲೆ ಎಚ್ ಪಿ ಪೆಟ್ರೋಲ್ ಬಂಕ್ ಎಂದು ಗುರುತು ಇರುವ ಸಮವಸ್ತ್ರದ ಬಟ್ಟೆ ಇದೆ .ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ ಠಾಣೆಗೆ ಮಾಹಿತಿ ನೀಡಲು ಕೋರಿದೆ. PSI ಹುಲಿಯೂರು ದುರ್ಗ .
ವಿದ್ಯಾ ಎಜುಕೇಷನ್ ಟ್ರಸ್ಟ ಹಾಗೂ ತತ್ವ ಪ್ರೀ ಸ್ಕೂಲ್ ವತಿಯಿಂದ ಆರೋಗ್ಯ ವಂತ ಮಗು ಸ್ಪರ್ಧೆ ಮತ್ತು ತತ್ವ ದಿನಾಚರಣೆ ಕಾರ್ಯಕ್ರಮ
ಮಳವಳ್ಳಿ:ಮಳವಳ್ಳಿ ಪಟ್ಟಣದಲ್ಲಿ ವಿದ್ಯಾ ಎಜುಕೇಷನ್ ಟ್ರಸ್ಟ ಹಾಗೂ ತತ್ವ ಪ್ರೀ ಸ್ಕೂಲ್ ವತಿಯಿಂದ ಆರೋಗ್ಯವಂತ ಮಗು ಸ್ಪರ್ಧೆ ಮತ್ತು ತತ್ವ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು.ಪಟ್ಟಣದ ಎನ್.ಇ ಎಸ್ ಬಡಾವಣೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಕ್ಕಳತಜ್ಞ ವೈದ್ಯ ಡಾ.ಮಂಜುನಾಥ ಉದ್ಘಾಟಿಸಿ ಮಾತನಾಡಿ, ಮಗು ಆರೋಗ್ಯ ವಾಗಿರ ಬೇಕಾದರೆ ತಾಯಿಯೂ ಪೌಷ್ಠಿಕಾಂಶದ ಆಹಾರವನ್ನು ಹೇಗೆ ಸೇವಿಸಬೇಕು. ಮಗುವಿಗೆ ಯಾವ ಆಹಾರವನ್ನು ಸೇವಿಸಿದರೆ ಆರೋಗ್ಯವಾಗಿರುತ್ತದೆ ಎಂಬ ಬಗ್ಗೆ ತಿಳಿಸಿಕೊಟ್ಟರು .ಇದೇ ಸಂದರ್ಭದಲ್ಲಿ ವಿದ್ಯಾ ಎಜುಕೇಷನ್ ಟ್ರಸ್ಟ್ ನ ಮುಖ್ಯಸ್ಥೆ ವಿದ್ಯಾಚಂದ್ರಮೋಹನ್ ರವರು ಮಕ್ಕಳನ್ನು ಮಾಡ್ರನ್ ರೀತಿ ತಯಾರು ಮಾಡಬೇಕಾಗಿದೆ. ಎಲ್ಲಾ ಶಾಲೆಗಳಲ್ಲಿಯೂ ಹೊಸಮಾದರಿ ವಿದ್ಯಾಭ್ಯಾಸವನ್ನು ನೀಡಬೇಕು ಜೊತೆಗೆ ದಿನ ನಿತ್ಯದಲ್ಲಿ ಹೇಗೆ ಇರಬೇಕು ಎಂದು ತಿಳಿಸಿಕೊಡಬೇಕು ಎಂದರು ಇದೇ ಸಂದರ್ಭ ದಲ್ಲಿ ತತ್ವ ಶಾಲಾ ಮಕ್ಕಳು ನೃತ್ಯ ಹಾಡುವಮೂಲಕ ರಂಜಿಸಿದರು.
ಕಾರ್ಯಕ್ರಮ ದಲ್ಲಿ ವಿದ್ಯಾಪ್ಯಾರ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಚಂದ್ರಮೊಹನ್ ಸೇರಿದಂತೆ ಹಲವರು ಇದ್ದರು.