ರಾಜ್ಯಸುದ್ದಿ
ಕೆ.ಆರ್.ಪೇಟೆ ತಾಲ್ಲೂಕಿನ ತೆರ್ನೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಸ ಅಧ್ಯಕ್ಷರಾಗಿ ಎ.ಎಸ್.ಕಲ್ಪನಾ ಬಾಲು ಅವಿರೋಧವಾಗಿ ಆಯ್ಕೆಯಾದರು.
ಕೃಷ್ಣರಾಜಪೇಟೆ ತಾಲ್ಲೂಕಿನ ತೆರ್ನೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಸ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎ.ಎಸ್.ಕಲ್ಪನಾ ಬಾಲು ಅವಿರೋಧವಾಗಿ ಆಯ್ಕೆಯಾದರು ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಎನ್.ಎಲ್.ರವಿ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು .ಅಧ್ಯಕ್ಷ ಸ್ಥಾನಕ್ಕೆ ಕಲ್ಪನ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅನುಸೂಯ ನಾಮಪತ್ರ ಸಲ್ಲಿಸಿದ್ದರು. ಇವರಿಬ್ಬರನ್ನು ಹೊರತುಪಡಿಸಿದರೆ ಇನ್ನೂ ಉಳಿದಂತೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ರವಿ ಅವಿರೋಧ ಅಯ್ಕೆಯನ್ನು ಪ್ರಕಟಿಸಿದರು. ಚುನಾವಣೆಯಲ್ಲಿ ಆಡಳಿತ ಮಂಡಳಿ ಕಾರ್ಯದರ್ಶಿ ಜ್ಯೋತಿ, ನಿರ್ದೇಶಕರಾದ ಲತಾ, ರತ್ನಮ್ಮ, ಪವಿತ್ರ, ಲಕ್ಷ್ಮಮ್ಮ, ಮಮತ, ಸಾವಿತ್ರಮ್ಮ, ಸುಶೀಲಮ್ಮ, ಪದ್ಮಮ್ಮ ಮತ್ತು ವೇದಾವತಿ ಭಾಗವಹಿಸಿದ್ದರು.
ಆಲದ ಮರದಲ್ಲಿ ನೇಣು ಬೀಗಿದ ಸ್ಥಿತಿಯಲ್ಲಿ ಹೊನ್ನಾವರ ಸಿ.ಅರ್.ಪಿ ಅಣ್ಣಪ್ಪಸ್ವಾಮಿ (೩೬) ಶವ ಪತ್ತೆ .
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಮಾಳಗೂರು ಬಸ್ಸು ನಿಲ್ದಾಣದ ಸಮೀಪವಿರುವ ಆಲದ ಮರದಲ್ಲಿ ನೇಣು ಬೀಗಿದ ಸ್ಥಿತಿಯಲ್ಲಿ ಅಣ್ಣಪ್ಪಸ್ವಾಮಿ (೩೬) ಶವ ಪತ್ತೆ ಯಾಗಿದೆ .ಇವರು ಹೊನ್ನಾವರ ಸಿ.ಅರ್.ಪಿ.ಯಾಗಿ ಕಾರ್ಯ ನಿರ್ವಹಿಸುತ್ತಿದ್ದ. ಇವರು ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ಕಂಬದಹಳ್ಳಿ ಗ್ರಾಮದ ನಂಜೇಗೌಡ ಮಾಯಮ್ಮರ ಮಗ ಮತ್ತು ಇವರಿಗೆ ವಿವಾಹ ವಾಗಿದ್ದು ಇವರ ಪತ್ನಿ ಮಧು ಕುಮಾರಿ ಸಹ ಹೊಸಕೊಪ್ಪಲು ಶಾಲೆ ಶಿಕ್ಷಕಿ ಇವರಿಗೆ ಒಂದು ಗಂಡು ಮಗು (೩) ಸಹ ಇದ್ದು ,ಇವರ ತಮ್ಮ ಸಹ ಅರಣ್ಯದಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು , ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೆಡೆಸಿದ ಅಧಿಕಾರಿಗಳು ಇನ್ನೂ ಅತ್ಮಾಹತ್ಯೆಗೆ ನಿಕರವಾದ ಕಾರಣ ತಿಳಿದು ಬಂದಿಲ್ಲಾ ಇವರ ದ್ವಿಚಕ್ರ ವಾಹನ KA51 S 754 ಸಹ ಅಲ್ಲೆ ಇದ್ದು ಪೊಲೀಸ್ ಅಧಿಕಾರಿಗಳು ತನಿಖೆ ನೆಡಸುತ್ತಿದ್ದಾರೆ.
ಪೆಟ್ರೋಲ್, ಡೀಸೆಲ್ ಬೆಲೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರದ ವಿರುದ್ದ ಕೆ.ಆರ್.ಪೇಟೆ ತಾಲ್ಲೂಕು ಕಾಂಗ್ರೆಸ್ ಮತ್ತು ವಿವಿಧ ಸಂಘಟನೆಗಳ ವತಿಯಿಂದ ಪ್ರತಿಭಟನೆ.
ಕೆ.ಆರ್.ಪೇಟೆ : ಪೆಟ್ರೋಲ್, ಡೀಸೆಲ್ ಬೆಲೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ಪಕ್ಷವು ಇಂದು ಭಾರತ್ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ತಾಲ್ಲೂಕು ಕಾಂಗ್ರೆಸ್ ಮತ್ತು ವಿವಿಧ ಸಂಘಟನೆಗಳ ವತಿಯಿಂದ. ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ನೇತೃತ್ವದಲ್ಲಿ ಕೆ.ಆರ್.ಪೇಟೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.ಪಟ್ಟಣದ ತಾಲ್ಲೂಕು ಪಂಚಾಯಿತಿ ವೃತ್ತದಿಂದ ಹೊರಟ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕರವೇ, ಜಯಕರ್ನಾಟಕ ಸಂಘಟನೆ, ಆಟೋ, ಟ್ಯಾಕ್ಸಿ ಚಾಲಕರ ಸಂಘದ ಪ್ರಮುಖ ಬೀದಿಗಳಲ್ಲಿ ಪಾದಾಯಾತ್ರೆ ಮೂಲಕ ತಾಲ್ಲೂಕು ಕಚೇರಿಯ ವರೆಗೆ ಮೆರವಣಿಗೆ ನಡೆಸಿದರು. ಪ್ರವಾಸಿ ಮಂದಿರ ವೃತ್ತ ದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರವಿರುದ್ದ ಘೋಷಣೆ ಕೂಗಿದರು. ಈ ವೇಳೆ ಪ್ರತಿಭಟನಾಕಾರರನ್ನು ಕುರಿತು ಮಾತನಾಡಿದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರು ಈ ಹಿಂದೆ ಯುಪಿಎ ಸರ್ಕಾರ ವಿದ್ದಾಗ ಸ್ವಲ್ಪ ಬೆಲೆ ಹೆಚ್ಚಳ ಮಾಡಿದರೂ ಸಹ ಇದೇ ಬಿಜೆಪಿ ಪಕ್ಷ ನಮ್ಮ ಕಾಂಗ್ರೆಸ್ ಪಕ್ಷ ದ ವಿರುದ್ದ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿತ್ತು. ಈಗ ತಮ್ಮದೇ ಸರಕಾರ ಇದ್ದರೂ ಸಹ ಬೆಲೆ ಏರಿಕೆ ತಡೆಯುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಫಲರಾಗಿದ್ದಾರೆ. ಆಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಉತ್ಪನ್ನ ಬೆಲೆಏರಿಕೆ ಹೆಚ್ಚಾಗಿತ್ತುಆದರೆ ಈಗ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಉತ್ಪನ್ನ ಬೆಲೆ ಕಡಿಮೆ ಇದ್ದರೂ ಪೆಟ್ರೋಲ್ ಡಿಸೇಲ್ ದರ ಗಗನಕ್ಕೆ ಏರಿಕೆ ಮಾಡಿದ್ದಾರೆ ಎಂದು ಆರೋಪಿಸಿದರು. ಇನ್ನಾದರೂ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಬೇಕು ಇಲ್ಲದಿದ್ದರೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ತಂತಾನೆ ಹೆಚ್ಚಾಗಲಿವೆ. ಹಾಗಾಗಿ ತಕ್ಷಣ ಡೀಸೆಲ್, ಪೆಟ್ರೋಲ್ ಬೆಲೆ ಇಳಿಕೆ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಕೆ.ಬಿ.ಚಂದ್ರಶೇಖರ್ ಎಚ್ಚರಿಕೆ ನೀಡಿದರು.ಪ್ರತಿಭಟನೆಯ ನಂತರ ತಾಲ್ಲೂಕು ತಹಸೀಲ್ದಾರ್ ಎಂ.ಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್, ಕರವೇ ಅಧ್ಯಕ್ಷ ಹೊನ್ನೇನಹಳ್ಳಿ ವೇಣು, ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಕೆ.ಎಸ್.ಕುಮಾರ್, ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘದ ಎಸ್.ವಿ.ವಿನಯ್, ಪಿ.ಕೆ.ಜಿ.ಮಹೇಶ್, ಕರವೇ ಉಪಾಧ್ಯಕ್ಷ ಕೆ.ಟಿ.ಶ್ರೀನಿವಾಸ್, ತಾಲ್ಲೂಕು ಕಾರ್ಯದರ್ಶಿ ಟೆಂಪೋ ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿ.ಡಿ.ಹರೀಶ್, ಕಾಂಗ್ರೆಸ್ ಮುಖಂಡರಾದ ಕೆ.ಸಿ.ರಾಮಚಂದ್ರೇಗೌಡ, ಪುರಸಭಾ ಮಾಜಿ ಸದಸ್ಯ ಕೆ.ಸಿ.ಮಂಜುನಾಥ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜಯರಂಗ, ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಉಪಾಧ್ಯಕ್ಷ ಎಸ್.ರವಿ, ಮಹಿಳಾ ಘಟಕದ ಅಧ್ಯಕ್ಷೆ ಮಧು, ಕಾರ್ಯಾಧ್ಯಕ್ಷೆ ಸರಸ್ವತಿ, ನಗರ ಘಟಕದ ಅಧ್ಯಕ್ಷೆ ಮಂಗಳಾ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಳಗೆರೆಮೆಣಸ ಗ್ರಾಮದಲ್ಲಿ ಗೃಹಿಣಿಯೊಬ್ಬರು ಕ್ರಿಮಿನಾಶಕ ವಿಷದ ಮಾತ್ರೆಯನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿ, ಚಿಕಿತ್ಸೆ ಫಲಕಾರಿಯಾಗದ್ದೆ ಮೃತಪಟ್ಟಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ವಳಗೆರೆಮೆಣಸ ಗ್ರಾಮದಲ್ಲಿ ಗೃಹಿಣಿಯೊಬ್ಬರು ಕ್ರಿಮಿನಾಶಕ ವಿಷದ ಮಾತ್ರೆಯನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿ, ಚಿಕಿತ್ಸೆ ಫಲಕಾರಿಯಾಗದ್ದೆ ಮೃತಪಟ್ಟಿದ್ದಾರೆ.ಗ್ರಾಮದ ಲೋಕೇಶ್ ಎಂಬುವರ ಪತ್ನಿ ಹರ್ಷಿತಾ (22) ವಿಷದ ಕಾಳು ನುಂಗಿ ಆತ್ಮಹತ್ಯೆಗೆ ಶರಣಾದವರು.ಲೋಕೇಶ್ನಿಗೆ ತಾಲೂಕಿನ ಮರಡಹಳ್ಳಿ ಗ್ರಾಮದಿಂದ ಹರ್ಷಿತಾರನ್ನು ಕಳೆದ ಮೂರು ವರ್ಷದ ಹಿಂದೆ ವಿವಾಹ ಮಾಡಿಕೊಟ್ಟಿದ್ದರು. ದಂಪತಿಗೆ 1 ವರ್ಷದ ಹೆಣ್ಣುಮಗು ಕೂಡ ಇತ್ತು.ಹರ್ಷಿತಾ ಭಾನುವಾರ ಗಣೇಶನ ಹಬ್ಬಕ್ಕೆ ಬಟ್ಟೆ ತರಲು ಪಟ್ಟಣಕ್ಕೆ ಬಂದಿದ್ದರು. ಬಟ್ಟೆ ತೆಗೆದುಕೊಂಡು, ಜತೆಯಲ್ಲಿ ಕಾಳಿನ ಮಾತ್ರೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಸಂಜೆ ಮಾತ್ರೆಯನ್ನು ನುಂಗಿ, ನೀರನ್ನು ಕುಡಿದ ಮೇಲೆ. ಆರೋಗ್ಯದಲ್ಲಿ ಕೊಂಚ ಬದಲಾವಣೆ ಆದಾಗ ವಿಷ ತೆಗೆದುಕೊಂಡಿರುವ ವಿಷಯವನ್ನು ಮನೆಯವರಿಗೆ ತಿಳಿಸಿದ್ದಾರೆ. ಕೂಡಲೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಚಿಕಿತ್ಸೆ ನೀಡಿ, ಹೆಚ್ಚುವರಿ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಕೊಲಂಬಿಯಾ ಏಷಿಯಾ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಸ್ವಲ್ಪ ಸಮಯಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹವನ್ನು ಕುಟುಂಬದ ಸದಸ್ಯರಿಗೆ ನೀಡಿದೆ. ಹೆಣ್ಣು ಮಗುವಿನ ಹೆಸರಿಗೆ 2 ಲಕ್ಷ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಹಿಡುವುದು. ಅರ್ಧ ಎಕರೆ ತೋಟವನ್ನು ಮಗುವಿಗೆ ಕೊಡುವುದು ಎಂದು ತೀರ್ಮಾನ ಮಾಡಿ ಪ್ರಕರಣವನ್ನು ಸುಖಾಂತ್ಯ ಮಾಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪತಿಯ ಕಿರುಕುಳ ತಾಳಲಾರದೆ ಆತ್ಮಹತ್ಯೆ ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.
ಭಾರತ್ ಬಂದ್ ಹಿನ್ನೆಲೆಯಲ್ಲಿ ಮಳವಳ್ಳಿ ಪಟ್ಟಣದ ಅಂಗಡಿ ಮುಂಗಟ್ಟುಗಳು ಬಂದ್, ಮಾಜಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ .
ಮಳವಳ್ಳಿ: ಕೇಂದ್ರ ಸರ್ಕಾರದ ವಿರುದ್ದ ಇಂದು ಭಾರತ್ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವತಿಯಿಂದ. ಮಾಜಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ನೇತೃತ್ವದಲ್ಲಿ ಮಳವಳ್ಳಿ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ತಾಲ್ಲೂಕು ಪಂಚಾಯಿತಿಯಿಂದ ಕಾಂಗ್ರೆಸ್ ಕಾರ್ಯಕರ್ತರು ಪ್ರಮುಖ ಬೀದಿಗಳಲ್ಲಿ ಬೈಕ್ ಜಾಥ ನಡೆಸಿ ನಂತರ ಅನಂತರಾಂ ವೃತ್ತ ದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರವಿರುದ್ದ ಘೋಷಣೆ ಕೂಗಿದರು ನಂತರ. ಮಾಜಿ ಶಾಸಕ ನರೇಂದ್ರಸ್ವಾಮಿ ಮಾತನಾಡಿ ಈ ಹಿಂದೆ ಯುಪಿಎ ಸರ್ಕಾರ ವಿದ್ದಾಗ ಇದೇ ಬಿಜೆಪಿ ಪಕ್ಷ ನಮ್ಮ ಕಾಂಗ್ರೆಸ್ ಪಕ್ಷ ದ ವಿರುದ್ದ ಹರಿಹಾಯ್ದದಿದ್ದರು ಆಗ ತೈಲ ಉತ್ಪನ್ನ ಬೆಲೆಏರಿಕೆ ಹೆಚ್ಚಾಗಿತ್ತು ಆದರೆ ಈಗ. ಕಡಿಮೆ ಇದ್ದರೂ ಪೆಟ್ರೋಲ್ ಡಿಸೇಲ್ ದರ ಗಗನಕ್ಕೆ ಏರಿಕೆ ಮಾಡಿದೆ ಎಂದು ಆರೋಪಿಸಿದರು.ಮುಂದಿನ ದಿನಗಳಲ್ಲಿ ನಮ್ಮ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಿಜೆಪಿಪಕ್ಷದ ವಿರುದ್ಧ. ಹೋರಾಟ ನಡೆಸುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ತಾ.ಪಂ ಅಧ್ಯಕ್ಷ. ವಿಶ್ವಾಸ್. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ಪುಟ್ಟರಾಮು, ಜಿ.ಪಂ ಸದಸ್ಯರಾದ ಹನುಮಂತ, ಚಂದ್ರಕುಮಾರ, ಸುಜಾತಸುಂದೃಪ್ಪ, ಸುಷ್ಮಾರಾಜು, ಸೇರಿದಂತೆ ಮತ್ತಿತ್ತರರು ಹಾಜರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ವತಿಯಿಂದ 22 ಮನೆಗಳಲ್ಲಿ ಗೋಬರ್ ಗ್ಯಾಸ್ ಅಳವಡಿಕೆ ಹೊಗೆ ರಹಿತ ಶುದ್ಧ ಗ್ರಾಮಕ್ಕೆ ಚಾಲನೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಶೆಟ್ಟಿಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ವತಿಯಿಂದ ಗೋಬರ್ ಗ್ಯಾಸ್ ಮೂಲಕ ಹೊಗೆ ರಹಿತ ಶುದ್ಧ ಗ್ರಾಮಕ್ಕೆ ಚಾಲನೆ ನೀಡಲಾಗಿದೆ.ಮೊದಲೇ ತೈಲ ಬೇಲೆ ಏರಿಕೆ ಮತ್ತು ಇಂದನದ ಕೊರತೆ ನೀಗಿಸಲು ಇದು ಸುಲಭವಾದ ಉಪಾಯವಾಗಿದೆ ಮತ್ತು ಹಸು ಮತ್ತು ಎಮ್ಮೆಗಳ ತ್ಯಾಜ್ಯ ಸಗಣಿಯಿಂದ ಗ್ಯಾಸ್ ಜೊತೆಗೆ ಉತ್ತಮ ಜೈವಿಕ ಗೊಬ್ಬರವನ್ನು ಸಹ ಪಡೆಯಬಹುದಾಗಿದೆ.ಗ್ರಾಮದ ಶೇಕಡ ಐವತ್ತರಷ್ಟು ಮನೆಗಳಲ್ಲಿ ಹಸು ಎಮ್ಮೆಗಳ ಸಗಣಿಯಿಂದ ಜೈವಿಕ ಗೊಬ್ಬರ ಬಳಸಿ ಗ್ಯಾಸ್ ಉತ್ಪಾದನೆ ಮಾಡಿ ಮನೆಗಳಲ್ಲಿ ಅಡುಗೆ ಮಾಡಿಕೊಳ್ಳಲಾಗುತ್ತಿದೆ.
22 ಮನೆಗಳಲ್ಲಿ ಗೋಬರ್ ಗ್ಯಾಸ್ ಅಳವಡಿಕೆ ಮಾಡಲಾಗಿದೆ. ಮತ್ತು ಇನ್ನೂ ಉಳಿದ ಎಲ್ಲಾ ಮನೆಗಳಿಗೂ ಅಳವಡಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೃಷಿ ಅಧಿಕಾರಿ ನಿಂಗಪ್ಪ ಅಗಸರ್ ಮತ್ತು ತಾಲ್ಲೂಕು ಸಂಯೋಜಕ ಸುಧೀರ್ ಜೈನ್ ಅವರ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕರು ಮತ್ತು ಸಂಘಸಂಸ್ಥೆಗಳ ಬೆಂಬಲ ನೀಡಿವೆ.
ಆಕಸ್ಮಿಕವಾಗಿ ಕಾಲು ಜಾರಿ ಕೃಷಿಹೊಂಡಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಹೋಟೆಲ್ ಮಾಲೀಕ ಅಕ್ರಂಪಾಶ(45) ಸಾವು.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ಜಾಮಿಯಾ ಮಸೀದಿ ಹಿಂಭಾಗದಲ್ಲಿ ಮುಲ್ಟ್ರಿ ಹೋಟೆಲ್ ನಡೆಸುತ್ತಿದ್ದ ಅಕ್ರಂಪಾಶ(45) ಆಕಸ್ಮಿಕವಾಗಿ ಕಾಲು ಜಾರಿ ಕೃಷಿಹೊಂಡಕ್ಕೆ ಬಿದ್ದು ಮೃತ ದುರ್ದೈವಿಯಾಗಿದ್ದಾರೆ. ಪಟ್ಟಣದ ಹೇಮಾವತಿ ಬಡಾವಣೆಯ ನಿವಾಸಿಯಾಗಿರುವ ಅಕ್ರಂಪಾಶ ಎಂದಿನಂತೆ ಮುಂಜಾನೆ ಚಿಕ್ಕೋನಹಳ್ಳಿಯ ರೇಷ್ಮೆ ಫಾರಂ ಬಳಿ ವಾಕಿಂಗ್ ಮಾಡಲು ಹೋಗಿದ್ದಾಗ ಶೌಚಕ್ಕೆ ಹೋಗಿ ಅಲ್ಲಿಯೇ ಮೀಸೆ ದೇವೇಗೌಡರ ಜಮೀನಿನಲ್ಲಿರುವ ಕೃಷಿಹೊಂಡದಲ್ಲಿ ನೀರಿಗಾಗಿ ಹೋದಾಗ ಕಾಲುಜಾರಿ ನೀರಿಗೆ ಬಿದ್ದು ಮೃತರಾಗಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಎ.ಎಸ್.ಐ ಈರೇಗೌಡ ಮತ್ತು ಸಿಬ್ಬಂಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಅಕ್ರಂಪಾಶ ಅವರ ಸಾವಿನ ಸುದ್ದಿ ತಿಳಿದ ಮುಸ್ಲಿಂ ಬಾಂಧವರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಅಘಲಯ ಸರ್ಕಾರಿ ಪ್ರೌಢಶಾಲೆ ಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ವತಿಯಿಂದ "ವಚನ ದಿನ' ವನ್ನು ಅಚರಿಸಲಾಯಿತು.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಅಘಲಯ ಸರ್ಕಾರಿ ಪ್ರೌಢಶಾಲೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ವತಿಯಿಂದ "ವಚನ ದಿನ' ವನ್ನು ಅಚರಿಸಲಾಯಿತು.ಗ್ರಾಮ ಪಂಚಾಯತ್ ಅಧ್ಯಕ್ಷರೂ ಅದಾ ಭಾರತಿ ಶ್ರೀಧರ್ ದೀಪ ಬೇಳೆಗಿಸುವ ಮೂಲಕ ಕಾರ್ಯವನ್ನು ಉದ್ಘಾಟನೆ ಮಾಡಿದರು. ನಂತರ ಶರಣ ಸಾಹಿತ್ಯ ಪರಿಷತ್ತು ನ ಅಧ್ಯಕ್ಷರಾದ ಸುಬ್ರಮಣ್ಯ ಮಾತನಾಡಿ ಬಸವಣ್ಣನವರು ೧೨ನೇ ಶತಮಾನದಲ್ಲೇ ಸಮಾಜದ ಅಂಕು ಡೊಂಕುಗಳನ್ನು ತಮ್ಮ ವಚನಗಳಲ್ಲಿ ತಿದ್ದಲು ಪ್ರಯತ್ನಿಸಿದರು ಎಂದರು ,ನಂತರ ಶಾಲ ಮುಖ್ಯ ಶಿಕ್ಷಕರರಾದ ಸೋಮನಾಥ್ ಮಾತನಾಡಿ ಬಸವಣ್ಣನವರು ಎಲ್ಲಾ ಜಾತಿಗಳು ಒಂದೇ ಎಂದು ಎಲ್ಲಾ ಜನಾಂಗದವರನ್ನು ಸಮಾನಾಂತರವಾಗಿ ಕಂಡರು ಎಂದು ಮಕ್ಕಳಿಗೆ ಬಸವಣ್ಣನವರ ವಚನಗಳ ಪರಿಚಯಮಾಡಿ ಕೊಟ್ಟರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರರಾದ ಎ.ಎಲ್.ನಂಜಪ್ಪ, ನಾರಯಣಪುರ ಶಾಲೆಯ ಮು.ಶಿಕ್ಷಕರರಾದ ಚನ್ನರಾಜು ಮತ್ತು ಸುತ್ತಮುತ್ತಲಿನ ಶಾಲೆಗಳ ಶಿಕ್ಷಕರು ಮತ್ತು ಮಕ್ಕಳು ಪೋಷಕರು ಹಾಜರಿದ್ದರು.