ರಾಜ್ಯಸುದ್ದಿ

Rate this item
(0 votes)

 ತಮ್ಮಡಹಳ್ಳಿ ಗ್ರಾಮದ ಹುಲಿಹಳ್ಳದ ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನದ  8 ನೇ ವರ್ಷದ ವಾರ್ಷಿಕ ಮಹೋತ್ಸವ.

  ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ತಮ್ಮಡಹಳ್ಳಿ ಗ್ರಾಮದ ಹುಲಿಹಳ್ಳದ ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನದ  8 ನೇ ವರ್ಷದ ವಾರ್ಷಿಕ ಮಹೋತ್ಸವ ನಡೆಯಿತು, ಶ್ರೀ ಮಹದೇಶ್ವರ ಸ್ವಾಮಿ ಗೋಪುರ,ಕಳಸ,ಗರುಡಗಂಭ, ಗಣೇಶ ,ಪ್ರತಿಷ್ಠಾಪನೆ, ಶ್ರೀ ಆಂಜನೇಯಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಹಾಗೂ ಅನ್ಬಸಂತರ್ಪಣೆ ಕಾರ್ಯಕ್ರಮ ನಡೆಸಲಾಯಿತು.ಪುರ್ಣಾಹುತಿ,ಕುಂಭಾಂಭಿಷೇಕ, ಶ್ರೀ ಮಹದೇಶ್ವರ ಸ್ವಾಮಿ ಗೋಪುರ ಲೋಕಾರ್ಪಣೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮತ್ತು  ದೊಡ್ಡಕೆರೆಯಿಂದ ಹಾಲರಬಿ,ಬಾಯಿಬೀಗ, ಹಾಗೂ ಬಸಪ್ಪದೊಂದಿಗೆ ಮೆರವಣಿಗೆ ಸಮೇತ ಕಂಸಾಳೆ  ಕುಣಿತ,ಕಾಶಿಕುಣಿತ,ವಳಗೆರೆಹುಚ್ಚಮ್ಮ ಪೂಜೆ ಸಲ್ಲಿಸಿ  ಮಳವಳ್ಳಿ ಪಟ್ಟಣದ ಗಂಗಾಮತ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ತಮ್ಮಡಹಳ್ಳಿ ಗ್ರಾಮಕ್ಕೆ  ಪೂಜಾಕುಣಿತ , ವೀರಗಾಸೆ ಮೂಲಕ ದೇವಸ್ಥಾನಕ್ಕೆ ಕರೆತರಲಾಯಿತು  ಇದೇ ಸಂದರ್ಭದಲ್ಲಿ  ಆಗಮಿಸಿದ ನೂರಾರು ಭಕ್ತರಿಗೆ ಅನ್ನಸಂತರ್ಪಣೆ   ಏರ್ಪಡಿಸಲಾಗಿತ್ತು .ಇದೇ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಗುಡ್ಡದ ಮಾದೇಶರವರು ಮಾತನಾಡಿ  ಕಳೆದ ಎಂಟು ವರ್ಷದಿಂದ ಭಕ್ತರು ದೇವಸ್ಥಾನವನ್ನು ಉನ್ನತಮಟ್ಟಕ್ಕೆ ಬೆಳೆಸಿದ್ದಾರೆ. ಎಂದರು.

ಕಾರ್ಯಕ್ರಮದಲ್ಲಿ  ದೇವಸ್ಥಾನ ಭಕ್ತ ಮಂಡಳಿ ಅಧ್ಯಕ್ಷ  ಮಹದೇಶ , ಮಳವಳ್ಳಿ ಗಂಗಾಮತಬೀದಿ ಯಜಮಾನರು , ತಮ್ಮಡಹಳ್ಳಿ ಗ್ರಾಮದ ಯಜಮಾನರು ಮುಖಂಡರುಗಳು ಇದ್ದರು.

Rate this item
(0 votes)

ಯುವಕ ಮಿತ್ರರು,ಶಿವಣ್ಣ ,ಸುದೀಪ್ ಅಭಿಮಾನಿಗಳು ಮತ್ತು ವಿದ್ಯಾ ಪ್ಯಾರ ಮೆಡಿಕಲ್ ವಿದ್ಯಾರ್ಥಿ ಗಳಿಂದ ಕೊಡಗು ಜಿಲ್ಲೆ ಸಂತ್ರಸ್ತರಿಗೆ ಹಣ ಸಂಗ್ರಹ.

ಮಂಡ್ಯ ಜಿಲ್ಲೆಯ ಮಳವಳ್ಳಿ ಯುವಕ ಮಿತ್ರರು , ಲಯನ್ಸ್ ಕಿಚ್ಚಸುದೀಪ್ ಅಭಿಮಾನಿಬಳಗ, ರಾಶಿರಾಪು ಸೇನಾ ಸಮಿತಿ, ಶಿವರಾಜ್ ಕುಮಾರ್ ಅಭಿಮಾನಿಗಳು, ವಿದ್ಯಾ ಪ್ಯಾರ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಸೇರಿ  ಕೊಡುಗು ಜಿಲ್ಲೆಯ ಸಂತ್ರಸ್ತರಿಗೆ ಸಹಾಯ ನೀಡುವಂತೆ ಮಳವಳ್ಳಿ ಪಟ್ಟಣದಲ್ಲಿ  ಮೆರವಣಿಗೆ ನಡೆಸಲಾಯಿತು.ಮಳವಳ್ಳಿ  ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಹಾಯಹಸ್ತಕ್ಕಾಗಿ ಧನ ಸಂಗ್ರಹ ಸೇರಿದಂತೆ ಅನೇಕ ವಸ್ತು ಗಳನ್ನು ಸಂಗ್ರಹ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸಾಲುಮರನಾಗರಾಜು ಮಾತನಾಡಿ,  ಕೊಡುಗು ಜನ ನಮ್ಮ ಜನ. ಆಸ್ತಿ ಹಾಗೂ ನಿವೇಶನ ಮನೆ ಕಳೆದುಕೊಂಡವವರು ನಿರಾಸೆಯಾಗದೆ ಧೈರ್ಯದಿಂದ ಇರಿ ನಿಮ್ಮ ಸಹಾಯಕ್ಕೆ ನಾವು ಇದ್ದೇವೆ. ಯಾವುದೇ ಆತಂಕ ಪಡದೆ ಎದೆಗುಂದದೆ ಆತ್ಮ ಸ್ಥೈರ್ಯ ದಿಂದ ಇರುವಂತೆ ಮನವಿಮಾಡಿಕೊಂಡರು. ಪಟ್ಟಣದ ಅಂಗಡಿಗಳಲ್ಲಿ  ಹಣ ಸಂಗ್ರಹ ಮಾಡಲಾಯಿತು. 

ಕಾರ್ಯಕ್ರಮ ದಲ್ಲಿ ಯುವಮಿತ್ರರು ಪ್ರಭುಸ್ವಾಮಿ,ಕೃಷ್ಣ, ಲಯನ್ಸ್ ಕಿಚ್ಚಸುದೀಪ್ ,ಶಿವಣ್ಣ ಅಭಿಮಾನಿಗಳು ಸೇರಿದಂತೆ ಮತ್ತಿತ್ತರರು ಹಾಜರಿದ್ದರು.

Rate this item
(0 votes)

 ಶಾಲಾ ಕಾಲೇಜುಗಳಿಗೆ ಹೋಗುವ ಸಮಯದಲ್ಲಿ ಸರಿಯಾದ ಬಸ್ಸುಗಳ ವ್ಯವಸ್ಥೆ ಇಲ್ಲಾ ಎಂದು ವಿದ್ಯಾರ್ಥಿಗಳಿಂದ ಜಾಗಿನಕೆರೆ ಬಳಿ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ತಡೆದು ಪ್ರತಿಭಟನೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಜಾಗಿನಕೆರೆ ಬಳಿ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು. ದಿನನಿತ್ಯ ಕೆ.ಆರ್.ಪೇಟೆಯಲ್ಲಿ ಇರುವ ಶಾಲಾಕಾಲೇಜುಗಳಿಗೆ ಸಾವಿರಾರು ವಿದ್ಯಾರ್ಥಿಗಳು ಬಸ್ಸುಗಳು ಮೂಲಕ ಹೋಗುತ್ತಾರೆ ಅದರೆ ಇವರು ಹೊಗುವ ಸಮಯದಲ್ಲಿ ಅಂದರೆ ಬೆಳ್ಳಿಗೆ ೮:೧೫ ರಿಂದ ೯:೧೦ರ ತನಕ  ಕೇವಲ ಒಂದೇಒಂದು ಬಸ್ಸು ಮಾತ್ರವೇ ಸಂಚರಿಸುತ್ತಿದ್ದು  ಈ ಬಸ್ಸು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಇರುವುದರಿಂದ ಬಸ್ಸು ತುಂಬಿ ಹೋಗಿ ವಿದ್ಯಾರ್ಥಿಗಳಿಗೆ ನಿಲ್ಲಲು ಸಹ ಜಾಗವಿರುವುದಿಲ್ಲ ,ಈ ವಿಷಯವಾಗಿ ಅಧಿಕಾರಿಗಳು ಗಮನಕ್ಕೆ ತಂದರು ಯಾವುದೇ ಹೆಚ್ಚುವರಿಯಾಗಿ ಬಸ್ಸುಗಳನ್ನು ನಿಯೊಜಿಸಿಲ್ಲ. ಅದ್ದರಿಂದ ವಿದ್ಯಾರ್ಥಿಗಳು ಕೆ.ಆರ್.ಪೇಟೆಯಿಂದ ಸಂತೇಬಾಚಹಳ್ಳಿಗೆ ಹೋಗುವ ಎಲ್ಲಾ ಬಸ್ಸು ಗಳನ್ನು ತಡೆದು ಪ್ರತಿಭಟಿಸಿದರು ‌.ನಂತರ ಸ್ಥಳಕ್ಕೆ ಪಟ್ಟಣ ಪೊಲೀಸರು ಮತ್ತು ಡಿಪೊ ಮ್ಯಾನೇಜರ್ ಬಂದು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದು ಪ್ರತಿ ದಿನ ೮:೧೫ಕ್ಕೆ ಒಂದು ಬಸ್ಸು ಮತ್ತು ೮:೪೫ಕ್ಕೆ ಒಂದು ಬಸ್ಸುಗಳನ್ನು ಬಿಡಿವುದಾಗಿ ಭರವಸೆ ಕೊಟ್ಟರು ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟು ತಮ್ಮ ಶಾಲಾ ಕಾಲೇಜುಗಳಿಗೆ ಹೋದರು ‌.

ಪ್ರತಿಭಟನೆಯಲ್ಲಿ  ಶಾಲಾ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.

Last modified on 21/08/2018
Rate this item
(0 votes)

ಕೆ.ಆರ್.ಪೇಟೆ: ಪಟ್ಟಣದ ಶ್ರವಣಬೆಳಗೊಳ ರಸ್ತೆಯ ನಿವಾಸಿ ಕೆ.ಎಸ್.ಕುಮಾರಸ್ವಾಮಿ( ತಾಲ್ಲೂಕು ಆಫೀಸ್ ಸ್ಟಾಂಪ್ ವೆಂಡರ್ )(ಪತ್ರಬರಗಾರರು)(58) ಇವರು ಇಂದು ಹೃದಯಾಘಾತದಿಂದ ನಿಧನರಾಗಿರುತ್ತಾರೆ.ಇವರ ಅಂತ್ಯ ಸಂಸ್ಕಾರವು ಇಂದು ಮಧ್ಯಾಹ್ನ 2ಗಂಟೆಯ ವೇಳೆಗೆ ಪಟ್ಟಣದ ವೀರಶೈವ-ಲಿಂಗಾಯಿತರ  ಸ್ಮಶಾನದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Rate this item
(0 votes)

ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು ಅದರ ಪ್ರವಾಹದಿಂದ ನೂರಾರು ಎಕರೆ ಭೂಮಿ ಮುಳಗಡೆಯಾಗಿದ್ದು ರೈತರ ಬೆಳೆಗಳು ಹಾಳಾಗಿದೆ ಅದರೆ ತಾಲ್ಲೂಕು ಆಡಳಿತ ಬಹಳ ನಿರ್ಲಕ್ಷ್ಯ ವಹಿಸಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಅದ್ಯಕ್ಷರಾದ ಎನ್ ಎಲ್ ಭರತ್ ರಾಜ್ ಆರೋಪಿಸಿದ್ದಾರೆ.

ಮಂಡ್ಯಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಾವೇರಿ ನದಿ ತೀರದಪ್ರದೇಶಗಳಿಗೆ ಬೇಟಿ ನಂತರ. ರಾಜ್ಯ ಮತ್ತು ನೆರೆ ರಾಜ್ಯಗಳಲ್ಲಿ ವಿಪರೀತ ಮಳೆ ಪರಿಣಾಮದಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು ಅದರ ಪ್ರವಾಹವು ನದಿಯಿಂದ ಕೆಲವು ಕಡೆ ಒಂದು ಕಿಲೊಮೀಟರ್ ಗಳವರೆಗೆ ಹುಲ್ಲಂಬಳ್ಳಿ.ಅಕ್ಕಮಲ್ಲಹುಂಡಿ .ಪೂರಿಗಾಲಿ.ಸೋಮನಹಳ್ಳಿ. ಬಿಳಿಜಗಲಿಮೊಳೆ.ಬೆಳಕವಾಡಿ ಜವನಗಳ್ಳಿಯ ರೈತರ ಭೂಮಿಯನ್ನ ಅವರಿಸಿಕೊಂಡು ರೈತರ ಬೆಳೆಗಳು ಮತ್ತು ನಾಟಿಗಾಗಿ ಭೂಮಿ ಅದಗೊಳಿಸಲು ಮಾಡಿರುವ ಹತ್ತಾರು ಸಾವಿರ ಹಣ ನಷ್ಟವಾಗಿದೆ
ಕೆಲವುಕಡೆ ಅರಿಸಿನ ಮೆಕ್ಕೆಜೋಳ. ರಾಗಿ.ಭತ್ತದ ವಟ್ಟಲು.ನಾಟಿ ಮಾಡಿರುವ ಬೆಳೆ ಹಾಳಾಗಿದೆ .ತಾಲೂಕಿನ ದಂಡಾಧಿಕಾರಿಗಳು ಬೇಜವ್ದಾರಿಯಾಗಿ ವರ್ತಿಸುತ್ತ ರೈತರ ಹಿತಕಾಯಲು ವಿಪಲವಾಗಿದ್ದಾರೆ ಅದ್ದರಿಂದ ಜಿಲ್ಲಾಧಿಕಾರಿ ಗಳು ತಕ್ಷಣ ಸ್ಪಂದಿಸಬೇಕು ರೈತರಿಗೆ ಆಗಿರುವ ನಷ್ಟವನ್ನು ವೈಜ್ಞಾನಿಕ ವಾಗಿ ಲೆಕ್ಕಹಾಕಿ ನೀಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸಿದೆ ರೈತ ಸಂಘದ ನಿಯೋಗವು ಪ್ರವಾಹ ಪೀಡಿತ ಸ್ಥಳಕ್ಕೆ ಭೇಟಿ ನೀಡಿ ರೈತರ ಅಭಿಪ್ರಾಯಗಳನ್ನು ಆಲಿಸಿದೆ.

ನಿಯೋಗದಲ್ಲಿ ಶಂಕರ್ ನವೀನ್ ಅನಿಲ್.ರವಿ ಮಲ್ಲೇಶ್ ಕುರಿ ನಿಂಗಯ್ಯ ಕೆಂಪರಾಜು.ವೆಂಕಟೇಶ. ಮಹೇಶ್. ಮುಂತಾದವರು ಭಾಗವಹಿಸಿದ್ದರು.

Rate this item
(0 votes)

 ಕೂಡಲಕುಪ್ಪೆ ಗ್ರಾಮಕ್ಕೆ ಮೂಲಭೂತ ಸೌಕರ್ಯ ನೀಡಿದ್ದರೆ ಚುನಾವಣಾ ಬಹಿಷ್ಕಾರದ ಎಚ್ಚರಿಕೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ವಿಠಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕೂಡಲಕುಪ್ಪೆ ಗ್ರಾಮ ಯಾವುದೇ ಅಭಿವೃದ್ಧಿ ಕಾಣದೆ ಕೆಸರು ಗದ್ದೆಯಾಗಿದೆ.ಈ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ, ಬೀದಿ ದೀಪಗಳ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಒಟ್ಟಿನಲ್ಲಿ ಹೇಳುವುದಾದರೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಅಭಿವೃದ್ಧಿ ಕಾಣದೆ ಸೊರಗಿ ಹೊಗಿದೆ.ಇಲ್ಲಿ ರಾಜಕೀಯ ಪಕ್ಷಗಳು ಮುಖಂಡರು ಚುನಾವಣಾ ಸಮಯದಲ್ಲಿ ಬರಿ ಮಾತಿನಲ್ಲಿ ಬರವಸೆ ನೀಡಿ ಒಟು ಪಡೆದು ನಂತರ ಗ್ರಾಮದ ಕಡೆ ಮುಖ ಕೂಡ ಮಾಡಿಲ್ಲಾ .ಎರಡು ಬಾರಿ ಶಾಸಕರಾಗಿ ಆಯ್ಕೆಯಾದ ನಾರಾಯಣ ಗೌಡರಿಗೆ ಇ ಊರು ಎಲ್ಲಿದೆ ಎಂಬುದೆ ಗೊತ್ತಿಲ್ಲ.ಇದು ವಿಠಲಾಪುರ ಗ್ರಾಮ ಪಂಚಾಯತಿ ಸೇರಿದ್ದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸಹ ಗಮನಹರಿಸುತ್ತಿಲ್ಲಾ.

 ಗ್ರಾಮದಲ್ಲಿ ಮುಖ್ಯ ರಸ್ತೆ ಕೆಸರು ಗದ್ದೆಯಾಗಿದ್ದು ವೃದರು ,ಮಕ್ಕಳು ,ಮಹಿಳೆಯರು ನೆಡೆದಾಡುಲು ಭಯ ಪಡುವ ಪರಿಸ್ಥಿತಿ ಇದೆ .ಮಳೆ ಬಂದರೆ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಮನೆಗಳಿಗೆ ನುಗ್ಗುತ್ತದೆ ,ರಸ್ತೆಗಳು ಕೆರೆಯ ರೀತಿ ಕಾಣುತ್ತದೆ. ಎಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು ಇತ್ತಕಡೆ ಗಮನ ಹರಿಸುತ್ತಿಲ್ಲಾ .ಇನ್ನೂ ನಮ್ಮ ಜನಪ್ರಿಯ ಶಾಸಕರಿಗೂ ಮನವಿ ನಿಡದರೂ ಇತ್ತಕಡೆ ಗಮನಕೊಡುತ್ತಿಲ್ಲ ಎಂದು ಗ್ರಾಮಸ್ಥರು ಶಾಸಕರು ಮತ್ತು ಅಧಿಕಾರಿಗಳು ಮೇಲೆ ಕೆಂಡಕಾರಿದ್ದರೆ .ಮತ್ತು ಗ್ರಾಮದ ರಸ್ತೆಗಳು ಕೆಸರು ಗುಂಡಿಯಾಗಿದ್ದು ಇ ಕೆಸರು ಗುಂಡಿಗೆ ಭತ್ತದ ನಾಟಿ ಮಾಡುವ ಮೂಲಕ ಪ್ರತಿಭಟನೆ ಮಾಡಲು ತೀರ್ಮಾನ ಕೈಗೊಂಡಿದ್ದಾರೆ. ಮತ್ತು ನಮ್ಮ ಗ್ರಾಮವನ್ನು ಅಭಿವೃದ್ಧಿ ಮಾಡದ್ದಿದರೆ ಎಲ್ಲಾ ಚುನಾವಣಾ ಬಹಿಷ್ಕಾರ ಮಾಡಲಾಗುತ್ತದೆ ಎಂದು ಗ್ರಾಮಸ್ಥರು ಅಧಿಕಾರಿಗಳು ಮತ್ತು ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.

ಇವಾಗಲಾದರು ಶಾಸಕರು ಮತ್ತು ಅಧಿಕಾರಿಗಳು ಇತ್ತ ಗಮನಹರಿಸಿ ಅಭಿವೃದ್ಧಿ ಮಾಡತ್ತಾರ ಕಾದುನೊಡಬೇಕಿದೆ..

Rate this item
(0 votes)

ಮಲ್ಲೇಗೌಡನಹಳ್ಳಿಯಲ್ಲಿ ಚಿರತೆ ದಾಳಿ ಮಾಡಿ ಎರಡು ಹಸುವಿನ ಕರುಗಳನ್ನು ಕೊಂದ ಘಟನೆ ನೆಡೆದಿದೆ.

ಮಂಡ್ಯಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹೊನಕೆರೆ ಹೋಬಳಿಯ ಮಲ್ಲೇಗೌಡನಹಳ್ಳಿಯಲ್ಲಿ ಚಿರತೆ ದಾಳಿ ಮಾಡಿ ಎರಡು ಹಸುವಿನ ಕರುಗಳನ್ನು ಕೊಂದು ನಂತರ ಒಂದು ಹಸುವಿನ ಕರುವನ್ನು ಸ್ವಲ್ಪ ದೂರ ಎಳೆದ್ಯೊದು ತಿಂದಿರುವ ಘಟನೆ ನೆಡೆದಿದೆ. ಗ್ರಾಮದ ಕರಿಯಪ್ಪರವರ ಮಗ ವಸಂತ್ ಎಂಬುವರಿಗೆ ಸೇರಿದ ಹಸುಕರುಗಳು ರಾತ್ರಿ ಹೊರಗಡೆಯೆ ಕಟ್ಟಿ ಮಲಗ್ಗಿದ್ದ ವಸಂತ್ ಬೆಳ್ಳಗೆ ಎದ್ದು ನೋಡಿದರೆ ಎರಡು ಹಸು ಕರುಗಳು ಸತ್ತು ಬಿದ್ದಿವೆ.

ಒಂದು ಕರು ಸ್ಥಳದಲ್ಲಿ ಸತ್ತುಹೊಗಿದ್ದು ಮತ್ತೊಂದು ಕರುವನ್ನು ಸ್ವಲ್ಪ ದೂರ ಎಳೆದುಕೊಂಡು ಹೊಗಿ ಬೇಲಿಯ ಮಧ್ಯೆ ತಿಂದು ಹೋಗಿದೆ.ಗ್ರಾಮಸ್ಥರಲ್ಲಿ ಭಯದ ವಾತಾವರಣ ಮನೆಮಾಡಿದೆ ಕೂಡಲೇ ಅರಣ್ಯಧಿಕಾರಿಗಳು ಚಿರತೆಯನ್ನು ಸೆರೆಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಹೊತ್ತಾಯಿಸಿದ್ದರೆ.ಅರಣ್ಯಧಿಕಾರಿಗಳು ಇನ್ನೂ ಸ್ಥಳಕ್ಕೆ ಬೇಟಿ ನೀಡಿಲ್ಲ.

Rate this item
(0 votes)

ಮಳವಳ್ಳಿ ಪಟ್ಟಣದ ಮಾನವ ಹಕ್ಕುಗಳು ಹಾಗೂ ಕಾನೂನಿನ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ.

ಮಂಡ್ಯಜಿಲ್ಲೆಯ ಮಳವಳ್ಳಿ ತಾಲ್ಲೂಕು ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ ಹಾಗೂ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ  ಮಾನವ ಹಕ್ಕುಗಳು ಹಾಗೂ ಕಾನೂನಿನ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಮಳವಳ್ಳಿ ಪಟ್ಟಣದ ಸ್ತ್ರೀ ಶಕ್ತಿಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಡಿವೈಎಸ್ ಪಿ.ಮಲ್ಲಿಕ್ ಉದ್ಘಾಟಿಸಿ ಮಾತನಾಡಿ,ಮಾನವ ಹಕ್ಕು ಉಲ್ಲಂಘನೆಯಾಗುವ ಬಗ್ಗೆ ಸಂಕ್ಷಿಪ್ತ ವಾಗಿ ತಿಳಿಸಿದ ಅವರು ಅದೇ ರೀತಿ ಕಾನೂನಿನ ಬಗ್ಗೆ ಯಾವ ಯಾವ ಸೆಕ್ಷನ್ ಗಳಿವೆ ಎನ್ನುವುದನ್ನು ತಿಳಿಸಿಕೊಟ್ಟರು.  ಇದೇ ಸಂದರ್ಭದಲ್ಲಿ ಮಾನವ ಹಕ್ಕುಗಳ ಸಮಿತಿ ಜಿಲ್ಲಾಧ್ಯಕ್ಷ  ಹೆಚ್.ಎನ್ ಲಕ್ಷ್ಮೀಶ್ ಮಾತನಾಡಿ, ಮಾನವ ಹಕ್ಕುಗಳು ಇನ್ನೂ ಸಂಪೂರ್ಣವಾಗಿ ಬಳಕೆಯಾಗುತ್ತಿಲ್ಲ  ಎಂದು ವಿಷಾದ ವ್ಯಕ್ತಪಡಿಸಿದರು. ಪ್ರತಿಯೊಬ್ಬ ಮಾನವ ಹಕ್ಕುಗಳ  ಚಲಾಯಿಸಿ , ಅದರ ಪ್ರಯೋಜನ ವನ್ನು ಸದುಪಡಿಸಿಕೊಳ್ಳುವಂತೆ  ತಿಳಿಸಿದರು.  ಇದೇ ಸಂದರ್ಭದಲ್ಲಿ  ಮಾಜಿ ಪ್ರಧಾನಿ ಅಟಲ್ ಬಿಹಾರ್ ವಾಜಪೇಯಿರವರು ನಿಧನವಾದ ಹಿನ್ನೆಲೆಯಲ್ಲಿ  ಭಾವಪೂರ್ಣ ಶ್ರದ್ಧಾಂಜಲಿಯನ್ನು ಒಂದು ನಿಮಿಷ ಮೌನ ಅಚರಣೆ ಮೂಲಕ ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ  ಮಾನವ ಹಕ್ಕುಗಳ ಸಮಿತಿ ಜಿಲ್ಜಾಧ್ಯಕ್ಷ  ಹೆಚ್.ಎನ್ ಲಕ್ಷ್ಮೀಶ್, ತಾಲ್ಲೂಕು ಅಧ್ಯಕ್ಷ ಮುದ್ದಮಲ್ಲು, ಜಿಲ್ಲಾಉಪಾಧ್ಯಕ್ಷ ಕೆ.ಸಿ ನಾಗೇಗೌಡ, ಜಯರಾಮೇಗೌಡ, ಜಯಮ್ಮ, ರೋಟರಿ ಸಂಸ್ಥೆ ಅಧ್ಯಕ್ಷ  ಸತೀಸ್ ಪೂಜಾರಿ,ಸಾಲುಮರನಾಗರಾಜು, ಸೇರಿದಂತೆ ಮತ್ತಿತ್ತರರು ಹಾಜರಿದ್ದರು.

Page 29 of 41

Visitors Counter

228988
Today
Yesterday
This Week
This Month
Last Month
All days
265
292
1742
5389
6704
228988

Your IP: 18.189.188.36
2024-05-18 22:55

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles