ಯುವಕ ಮಿತ್ರರು,ಶಿವಣ್ಣ ,ಸುದೀಪ್ ಅಭಿಮಾನಿಗಳು ಮತ್ತು ವಿದ್ಯಾ ಪ್ಯಾರ ಮೆಡಿಕಲ್ ವಿದ್ಯಾರ್ಥಿ ಗಳಿಂದ ಕೊಡಗು ಜಿಲ್ಲೆ ಸಂತ್ರಸ್ತರಿಗೆ ಹಣ ಸಂಗ್ರಹ.
ಮಂಡ್ಯ ಜಿಲ್ಲೆಯ ಮಳವಳ್ಳಿ ಯುವಕ ಮಿತ್ರರು , ಲಯನ್ಸ್ ಕಿಚ್ಚಸುದೀಪ್ ಅಭಿಮಾನಿಬಳಗ, ರಾಶಿರಾಪು ಸೇನಾ ಸಮಿತಿ, ಶಿವರಾಜ್ ಕುಮಾರ್ ಅಭಿಮಾನಿಗಳು, ವಿದ್ಯಾ ಪ್ಯಾರ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಸೇರಿ ಕೊಡುಗು ಜಿಲ್ಲೆಯ ಸಂತ್ರಸ್ತರಿಗೆ ಸಹಾಯ ನೀಡುವಂತೆ ಮಳವಳ್ಳಿ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು.ಮಳವಳ್ಳಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಹಾಯಹಸ್ತಕ್ಕಾಗಿ ಧನ ಸಂಗ್ರಹ ಸೇರಿದಂತೆ ಅನೇಕ ವಸ್ತು ಗಳನ್ನು ಸಂಗ್ರಹ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸಾಲುಮರನಾಗರಾಜು ಮಾತನಾಡಿ, ಕೊಡುಗು ಜನ ನಮ್ಮ ಜನ. ಆಸ್ತಿ ಹಾಗೂ ನಿವೇಶನ ಮನೆ ಕಳೆದುಕೊಂಡವವರು ನಿರಾಸೆಯಾಗದೆ ಧೈರ್ಯದಿಂದ ಇರಿ ನಿಮ್ಮ ಸಹಾಯಕ್ಕೆ ನಾವು ಇದ್ದೇವೆ. ಯಾವುದೇ ಆತಂಕ ಪಡದೆ ಎದೆಗುಂದದೆ ಆತ್ಮ ಸ್ಥೈರ್ಯ ದಿಂದ ಇರುವಂತೆ ಮನವಿಮಾಡಿಕೊಂಡರು. ಪಟ್ಟಣದ ಅಂಗಡಿಗಳಲ್ಲಿ ಹಣ ಸಂಗ್ರಹ ಮಾಡಲಾಯಿತು.
ಕಾರ್ಯಕ್ರಮ ದಲ್ಲಿ ಯುವಮಿತ್ರರು ಪ್ರಭುಸ್ವಾಮಿ,ಕೃಷ್ಣ, ಲಯನ್ಸ್ ಕಿಚ್ಚಸುದೀಪ್ ,ಶಿವಣ್ಣ ಅಭಿಮಾನಿಗಳು ಸೇರಿದಂತೆ ಮತ್ತಿತ್ತರರು ಹಾಜರಿದ್ದರು.