ಹಾಸನ

ತಪ್ಪಿದ ಭಾರೀ ಅನಾಹುತ ಕ್ಷಣಾರ್ಧದಲ್ಲಿ ಪಾಸಾದ ಕೆಎಸ್ಆರ್ಟಿಸಿ ಬಸ್ ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ

ಚನ್ನರಾಯಪಟ್ಟಣ : ವಿದ್ಯುತ್ ಶಾಕ್ ಹೊಡೆದು ಒಂದೇ ಕುಟುಂಬದ ಮೂವರ ಸಾವು.
ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಹೋಬಳಿಯ. ಅಗಸರಹಳ್ಳಿಯಲ್ಲಿ ಇಂದು ಮುಂಜಾನೆ 6.30 ರ ಸುಮಾರಿನಲ್ಲಿ ಘಟನೆ ನಡೆದಿದೆ.

ಮೃತರು ತಾಯಿ ಭಾಗ್ಯಮ್ಮ, ಮಗಳು ದಾಕ್ಷಾಯಿಣಿ, ಮಗ ದಯಾನಂದ. ಮಗಳು ದಾಕ್ಷಾಯಿಣಿ ಬೆಳಗ್ಗೆ ಹೊಗೆದ ಬಟ್ಟೆಗಳನ್ಮು ಮನೆಯಿಂದ ವಿದ್ಯುತ್ ಕಂಬಕ್ಕೆ ಕಟ್ಟಲಾಗಿದ್ದ ತಂತಿಗೆ ಬಟ್ಟೆ ಒಣ ಹಾಕಲು ಹೋದಾಗ ತಂತಿಯಲ್ಲಿ ಪ್ರಸರಿಸುತ್ತಿದ್ದ ವಿದ್ಯುತ್ ಮೊದಲಿಗೆ ದಾಕ್ಷಾಯಣಿಯನ್ನು ಹಿಡಿದುಕೊಂಡಿದೆ. ಇದನ್ನು ನೋಡಿ ಗಾಬರಿಯಿಂದ ತಾಯಿ ಮಗ ಅವಳನ್ನು ಬಿಡಿಸಲು ಹೋಗಿದ್ದಾರೆ. ಅವಳನ್ನು ಮುಟ್ಟಿದ ಈರ್ವರಿಗೂ ವಿದ್ಯುತ್ ಶಾಕ್ ಹೊಡೆದು ಮೂವರೂ ಸಾವನ್ನಪಿದ್ದಾರೆ.
ಗ್ರಾಮಾಂತರ ಠಾಣೆ ವ್ಯಾಪ್ತಿ.

ಹಾಸನ: ಶ್ರವಣಬೆಳಗೊಳದಲ್ಲಿ ಸಿನಿಮೀಯ ರೀತಿಯಲ್ಲಿ ವೃದ್ಧೆಯ 50 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾದ ಖದೀಮರು.

ಹೋಬಳಿಯ ದಮ್ಮನಿಂಗಳ ಗ್ರಾಮದ ಕೆಂಗಮ್ಮ ಚಿನ್ನದ ಸರ ಕಳೆದುಕೊಂಡ ವೃದ್ಧೆ.

ಅಪರಿಚಿತ ಓರ್ವ ಮಹಿಳೆ ಹಾಗೂ ಓರ್ವ ಯುವಕನಿಂದ ಕೃತ್ಯ. ಈ ಗ್ಯಾಂಗ್ ನಲ್ಲಿ ಇನ್ನೂ ನಾಲ್ಕೈದು ಜನರಿರುವುದು ಸಿಸಿ ಕ್ಯಾಮೆರಾದಲ್ಲಿ ಪತ್ತೆಯಾಗಿದೆ.

ರಸ್ತೆಯಲ್ಲಿ ಪರ್ಸ್ ಸಿಕ್ಕಿದೆ ಇಬ್ಬರು ಹಂಚಿಕೊಳ್ಳೋಣ ಎಂದು ಅಪರಿಚಿತ ಮಹಿಳೆ ವೃದ್ಧೆಯನ್ನು ಸಮೀಪದ ಪಾರ್ಕ್ ಗೆ ಕರೆದೊಯ್ದಿದ್ದಾರೆ.

ಆಗ ಅಲ್ಲಿಗೆ ಬಂದ ಅಪರಿಚಿತ ಯುವಕ ನನ್ನ ಪರ್ಸ್ ನಿಮಗೆ ಸಿಕ್ಕಿದೆಯಾ ಎಂದು ಕೇಳಿಕೊಂಡು ಬಂದಿದ್ದಾನೆ. ಆ ಮಾಂಗಲ್ಯದ ಆಣೆ ಮಾಡುವ ನೆಪದಲ್ಲಿ ಚಿನ್ನದ ಸರವನ್ನು ಬಿಚ್ಚಿಸಿಕೊಂಡು ಪರಾರಿಯಾಗಿದ್ದಾರೆ.

ಶ್ರವಣಬೆಳಗೊಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಖದೀಮರ ಪತ್ತೆಗೆ ಬಲೆ ಬಿಸಿದ್ದಾರೆ.

ಆಧಾರ್ ಕಾರ್ಡ್ ಮಾಡಿಸಲು ಸಾರ್ವಜನಿಕರು ಪರದಾಟ. ಸುಮ್ಮನೆ ಕೈ ಕಟ್ಟಿ ಕುಳಿತ ಜಿಲ್ಲಾಡಳಿತ.....

ಚನ್ನರಾಯಪಟ್ಟಣ:  ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಆಧಾರ್ ಕಾರ್ಡ್ ಮಾಡಿಸಲು ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಇದೆ ದಿನ ನಿತ್ಯ ಸುತ್ತಮುತ್ತಲಿನ ಗ್ರಾಮಿಣ ಪ್ರದೇಶದ ರೈತರು ಶಾಲ ಮಕ್ಕಳು, ಗೃಹಿಣಿಯರು ಬಂದು ಸರತಿ ಸಾಲಿನಲ್ಲಿ ನಿಂತು ಕಾಯುವ ಕೆಲಸವೇ ನೆಡೆಯುತ್ತಿದೆ .

ಬೆಳಗ್ಗೆ 6 ಗಂಟೆಯಿಂದ ಕಾಯುವವರಿಗೆ ದಿನಕ್ಕೆ 25 ಜನಕ್ಕೆ ಮಾತ್ರ ಟೋಕನ್ ನೀಡುತ್ತಿದ್ದು, ಪ್ರತಿದಿನ250 ಜನ ಸಾಲಿನಲ್ಲಿ ನಿಂತು ನಂತರ ನಿರಾಸೆಯಿಂದ ಮನೆಗೆಹೊಗುವ ಪರಿಸ್ಥಿತಿ ಇದೆ .ಇತ್ತ ತಾಲೂಕು ಅಡಳಿತ ಗಮನ ಹರಿಸದೆ ಸುಮ್ಮನೆ ಕೈ ಕಟ್ಟಿ ಕುಳಿತಿದೆ . ಶಾಸಕರನ್ನು ಬೇಟಿ ಮಾಡಿದ ಜನರಿಗೆ ಶಾಸಕರು ಅದಕ್ಕೂ ನನಗೂ ಸಂಬಂಧವಿಲ್ಲ ಅದು ಸರ್ಕಾರಿ ಕಚೇರಿಯಲ್ಲಿ ಕೇಳಿ ಎಂದು ಉತ್ತರಿಸುತ್ತಿದ್ದಾರೆ ಎಂದು ಕೆಂಡಮಂಡಲವಾಗಿದ್ದಾರೆ.

ಇನ್ನೂ ಜಿಲ್ಲ ಅಡಳಿತ ಎಲ್ಲಾ ಗ್ರಾಮ ಪಂಚಾಯತಿ ಮಟ್ಟದಲ್ಲಿ ಅಧಾರ್ ಕೇಂದ್ರ ಗಳನ್ನು ತೆರೆಯಬೇಕು ಇಲ್ಲ ದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸಾರ್ವಜನಿಕರ ಅಧಿಕಾರಿಗಳಿ ಎಚ್ಚರಿಕೆ ನೀಡಿದ್ದಾರೆ.

ಇನ್ನಾದರೂ ಜಿಲ್ಲಾಡಳಿತ ಕ್ರಮಕೈಗೊಳ್ಳುತ್ತಾ ಕಾದು ನೊಡಬೇಕಿದೆ ...     ಸುದ್ದಿಜಾಲ ನ್ಯೂಸ್ ಹಾಸನ

ಕಾಡಾನೆಯೊಂದು ಮುಂಭಾಗದ ಎಡ ಕಾಲು ಮುರಿದು ನರಕಯಾತನೆ ಪಡುತಿದ್ದು ನುರಿತ ವೈದ್ಯಕೀಯ ತಜ್ಞರು ಹಾಗೂ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗಿದೆ.

ಸುಳ್ಯ:  ತಾಲೂಕಿನ ಬಾಳುಗೋಡು ಎಂಬಲ್ಲಿ ಕಾಡಾನೆಯೊಂದು ಮುಂಭಾಗದ ಎಡ ಕಾಲು ಮುರಿದು ನರಕಯಾತನೆ ಪಡುತಿದ್ದು ನುರಿತ ವೈದ್ಯಕೀಯ ತಜ್ಞರು ಹಾಗೂ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗಿದೆ.ಬಾಳುಗೋಡು ಗ್ರಾಮ ಸಮೀಪದ ಪದಕ ಎಂಬಲ್ಲಿ ಗಂಡು ಕಾಡಾನೆಯೊಂದು ಕಾಲು ಗಾಯಗೊಂಡು ನಡೆದಾಡಲೂ ಆಗದೆ ಯಾತನೆ ಪಡುತ್ತಿತ್ತು.

ಈ ಸ್ಥಳವು ಸುಬ್ರಹ್ಮಣ್ಯ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವ ಪ್ರದೇಶವಾಗಿದ್ದು ಅರಣ್ಯ ಇಲಾಖೆ ಅಧಿಕಾರಿಗಳ ಮೂರು ದಿನಗಳ ನಿರಂತರವಾದ ಪರಿಶ್ರಮದ ನಂತರ ಇಂದು ಚಿಕಿತ್ಸೆ ನೀಡಲಾಗಿದೆ.ನಾಗರಹೊಳೆಯಿಂದ ನುರಿತ ವೈದ್ಯಕೀಯ ತಜ್ಞರಾದ ಡಾಕ್ಟರ್ ಮುಜೀಬ್ ಹಾಗೂ ಗುತ್ತಿಗಾರು ಪಶುವೈದ್ಯ ಡಾಕ್ಟರ್ ವೆಂಕಟಾಚಲಪತಿಯವರ ಹಾಗೂ ಸುಬ್ರಹ್ಮಣ್ಯ ಮತ್ತು ಪಂಜ ವಲಯದ ಅರಣ್ಯಾಧಿಕಾರಿಗಳು ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾದರು.

ದಟ್ಟ ಅರಣ್ಯ ಪ್ರದೇಶದಲ್ಲಿ ಅರಿವಳಿಕೆ ತಜ್ಞರು ಅರಿವಳಿಕೆ ಔಷಧಿ ನೀಡುವ ಮೂಲಕ ಆನೆಯನ್ನು ತಮ್ಮ ನಿಯಂತ್ರಣಕ್ಕೆ ತಂದು ವೈದ್ಯಕೀಯ ಚಿಕಿತ್ಸೆ ನೀಡಲಾಗಿತ್ತು. ಮುಂದಿನ ದಿನಗಳಲ್ಲಿ ಆನೆಯ ಚಲನವಲನಗಳನ್ನು ಗಮನಿಸಲು ಅರಣ್ಯಾಧಿಕಾರಿಗಳ ತಂಡವನ್ನು ಈ ಪ್ರದೇಶದಲ್ಲಿ ನಿಯೋಜನೆ ಮಾಡಲಾಗಿದೆ.

ಕಾರ್ಯಾಚರಣೆಯಲ್ಲಿ ಸುಬ್ರಹ್ಮಣ್ಯ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಆಸ್ಟೀನ್ ಪಿ ಸೋನ್ಸ್, ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ್, ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ತ್ಯಾಗರಾಜ್, ಪಂಜ ಅರಣ್ಯ ರಕ್ಷಕ ಹಾಗೂ ಅರಣ್ಯ ‌ವೀಕ್ಷಕರಾದ ಸಂತೋಷ್, ಸುಬ್ರಹ್ಮಣ್ಯ ಮತ್ತು ಪಂಜ ವಲಯಗಳ ಅರಣ್ಯ ರಕ್ಷಕರು, 25 ಕ್ಕೂ ಹೆಚ್ಚಿನ ಸಿಬ್ಬಂದಿಗಳು ಸಾರ್ವಜನಿಕರು ಭಾಗವಹಿಸಿದರು.

 ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಕಾರನ್ನು ಹಾಸನ ಗಡಿ ಹಿರೀಸಾವೆ ಚೆಕ್ ಪೋಸ್ಟ್ ನಲ್ಲಿ ತಡೆದು ಚುನಾಚಣಾ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

ಹಾಸನ: ಸಿಎಂ ಕುಮಾರಸ್ವಾಮಿ ಅವರು ಜಿಲ್ಲೆಯ ಚನ್ನರಾಯಪಟ್ಟಣಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಹಿರೀಸಾವೆ ಚೆಕ್ ಪೋಸ್ಟ್ ಬಳಿ ಸಿಎಂ ಕಾರು ಬರುತ್ತಿದ್ದಂತೆಯೇ, ಅದನ್ನು ತಡೆದು ಪೊಲೀಸ್ ಹಾಗೂ ಚುನಾವಣಾ ಸಿಬ್ಬಂದಿ ವಾಹನವನ್ನು ತಪಾಸಣೆ ಮಾಡಿದ್ದಾರೆ.ಕುಮಾರಸ್ವಾಮಿ ಅವರು ಶಿವಮೊಗ್ಗಕ್ಕೆ ಹೋಗುವ ಮಾರ್ಗದಲ್ಲಿ ಚನ್ನರಾಯಪಟ್ಟಣದಲ್ಲಿರುವ ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಮನೆಗೆ ಹೋಗಿದ್ದರು. ಅಲ್ಲಿ ಉಪಹಾರ ಸೇವನೆ ಬಳಿಕ ಕಾರ್ಯಕರ್ತರೊಂದಿಗೆ ಚುನಾವಣೆ ಸಂಬಂಧ ಚರ್ಚೆ ನಡೆಸಿದ್ದಾರೆ. ಬಳಿಕ ಅರಸೀಕೆರೆ ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳಲಿದ್ದಾರೆ.

ಚನ್ನರಾಯಪಟ್ಟಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಇಂದು ಶಿವಮೊಗ್ಗದಲ್ಲಿ ಮದುಭಂಗಾರಪ್ಪ ನಾಮಪತ್ರ ಸಲ್ಲಿಸಲಿದ್ದಾರೆ. ಅಲ್ಲಿಂದ ಕುಂದಾಪುರದಲ್ಲಿ ಮೀನುಗಾರರ ಸಮಾವೇಶ ಇದೆ. ಹೀಗಾಗಿ ಗೋಕರ್ಣದಲ್ಲಿ ವಾಸ್ತವ್ಯ ಮಾಡುತ್ತೇನೆ. ಇಂದಿನ ಲೋಕಸಭಾ ಚುನಾವಣೆಯಲ್ಲಿ ನಮ್ಮೆಲ್ಲ ಅಭ್ಯರ್ಥಿಗಳು ಯಾರು ಕಣದಲ್ಲಿದ್ದಾರೆ. ಅವರೆಲ್ಲರ ಕ್ಷೇತ್ರಗಳಿಗೂ ಭೇಟಿ ನೀಡುತ್ತೇನೆ. ನಮಗೆ ಹೆಲಿಕಾಪ್ಟರ್ ಭೇಟಿ ಬಳಸುವುದಕ್ಕೆ ಬಿಜೆಪಿ-ಕೇಂದ್ರ ಸರ್ಕಾರ ತಡೆ ನೀಡಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.

 ನನ್ನ ಮಂಡ್ಯ ಜನತೆ ಮಾದ್ಯಮಗಳ ಎಪಿಸೋಡ್ ಗೆ ಬದಲಾಗಲ್ಲಾ.ಮೇ 23ಕ್ಕೆ ಫಲಿತಾಂಶ ಬಂದಾಗ ವಾಹಿನಿಗಳ ಮಾಲೀಕರು ನಿರಾಸೆಗೊಳಗಾಗುತ್ತೀರಿ.ಮಾಧ್ಯಮಗಳ ವಿರುದ್ಧ ಸಿಎಂ ಅಸಮಾಧಾನ.

ಹಾಸನ: ಚನ್ನರಾಯಪಟ್ಟಣ ದಲ್ಲಿ ಇಂದು ಸಿಎಂ ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಾಧ್ಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೀವು ಏನೇ ಪ್ರಯತ್ನ ಪಟ್ಟರೂ, ಎಷ್ಟೇ ಅಪಪ್ರಚಾರ ಮಾಡಿದರೂ ಮಂಡ್ಯ ಜನತೆಯನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ದಿನ ಬೆಳಗಾದರೆ ಮಂಡ್ಯದ್ದೇ ಸುದ್ದಿ. ಚುನಾವಣೆ ಬರಿ ಮಂಡ್ಯದಲ್ಲಿ ನೆಡಯುತ್ತಿದೆ ದೇಶದಲ್ಲಿ ನೆಡಯುತ್ತಿಲ್ಲ ಎಂಬತ್ತೆ ಬಿಂಬಿಸಿ ಎಪಿಸೋಡ್ ಮಾಡಿ ಮಂಡ್ಯ ಜನರನ್ನು ಬದಲಿಸಲು ನೊಡತ್ತಿದ್ದು ವಾಹಿನಿಗಳ ಮಾಲೀಕರು ನಿರಾಸೆಗೊಳಗಾಗುತ್ತೀರಿ. ನಾನೇನು ಗಾಬರಿ ಆಗಿಲ್ಲ ಹಾಗೂ ಆತಂಕಗೊಂಡಿಲ್ಲ. ಮೇ 23ಕ್ಕೆ ಫಲಿತಾಂಶ ಬಂದಾಗ ಎಲ್ಲವೂ ಗೊತ್ತಾಗುತ್ತದೆ. ಮಂಡ್ಯದಲ್ಲಿ ಕೆಲವು ಸಮಸ್ಯೆಗಳಾಗುತ್ತಿವೆ. ಇದರಿಂದ ಅಕ್ಕಪಕ್ಕದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಮಸ್ಯೆಯಾಗದಂತೆ ನಾನೇ ಖುದ್ದು ಬಗೆಹರಿಸುತ್ತಿದ್ದೇನೆ ಎಂದು ಹೇಳಿದರು.

ನರೇಂದ್ರ ಮೋದಿಗೂ ಇದು ಸುಲಭದ ಚುನಾವಣೆ ಅಲ್ಲ. ಏಕೆಂದರೆ 2014ಕ್ಕೂ 2019ಕ್ಕೂ ಸಾಕಷ್ಟು ಬದಲಾವಣೆ ಆಗಿದೆ. ನಮ್ಮನ್ನು ಕಿಚಡಿ ಪಾರ್ಟಿ ಅಂತಾರೆ. ಅವರು ಕಳೆದ ಐದು ವರ್ಷದಲ್ಲಿ ಅಭಿವೃದ್ಧಿ ಮಾಡಿದರೆ ಪ್ರಾದೇಶಿಕ ಪಕ್ಷಗಳ ಮುಂದೆ ಹೋಗಿ ನಿಲ್ಲಬೇಕಿರಲಿಲ್ಲ. ರೈತರು ಈ ಬಿಜೆಪಿ ಅಧಿಕಾರದಿಂದ ನೊಂದಿದ್ದಾರೆ. ದೇವೇಗೌಡರಿಗೆ ರಾಷ್ಟ್ರ ರಾಜಕಾರಣದಲ್ಲಿ ವಿಶೇಷ ಶಕ್ತಿ ಬರೋ ವಾತಾವರಣ ಬರಲಿದೆ. ಹಾಗಂತ ಪ್ರಧಾನಿ ಆಗ್ತಾರೆ ಎಂದು ನಾನು ಹೇಳುತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

 

 ರಾತ್ರೊ ರಾತ್ರಿ ಲಾಯರ್ ಕೂಲೆ .! ಮಾಡಿದ್ದು ಯಾರು.??? ಆಸ್ತಿಗಾಗಿ ಅಣ್ಣನೇ ತಮ್ಮನನ್ನು ಕೊಲೆ ಮಾಡಿರುವ ಶಂಕೆ...‌

ಕೆ.ಆರ್.ಪೇಟೆ :ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ನಾಗರಘಟ್ಟ ಗ್ರಾಮದ  ಸತೀಶ್ (೩೮) ಕೊಲೆಯಾಗಿರೊ ವಕೀಲ.ಚನ್ನರಾಯಪಟ್ಟಣ, ಮೈಸೂರು, ಬೆಂಗಳೂರು ಮತ್ತಿತರ ಕಡೆಗಳಲ್ಲಿ ವಕೀಲ ವೃತ್ತಿ ಮಾಡುತ್ತಿದ್ದ ವಕೀಲ ಸತೀಶ್ ಸೋಮವಾರ ರಾತ್ರಿ ನಾಗರಘಟ್ಟ ಗ್ರಾಮಕ್ಕಾಗಿ ಬಂದಿದ್ದಾಗ ನಡೆದಿರುವಂಥ ಘಟನೆ.  

ಘಟನೆ ವಿವರಣೆ: ನಾಗರಘಟ್ಟ ಗ್ರಾಮದ ಲೇ ರಾಜೇಗೌಡ್ ರ ಮಕ್ಕಳಾದ ಸತೀಶ್ ಮತ್ತು ಉಮೇಶ್ ಎಂಬ ಇಬ್ಬರೂ ಮಕ್ಕಳು ಮೂಲತಹ ಸತೀಶ್ ವಕೀಲ ಕೆಲಸಮಾಡತ್ತಿದ್ದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ವಾಸವಾಗಿದ್ದು. ಚನ್ನರಾಯಪಟ್ಟಣ, ಮೈಸೂರು, ಬೆಂಗಳೂರು ಮತ್ತಿತರ ಕಡೆಗಳಲ್ಲಿ ವಕೀಲ ವೃತ್ತಿ ಮಾಡುತ್ತಿದ್ದರು.ಗ್ರಾಮದಲ್ಲಿ ಹಬ್ಬವಿರುವ ಕಾರಣ ಸೋಮವಾರ ರಾತ್ರಿ ನಾಗರಘಟ್ಟ ಗ್ರಾಮಕ್ಕೆ ಬಂದಿದ್ದಾಗ ನಡೆದಿರುವಂಥ ಘಟನೆ .

ತಮ್ಮ ನ ಹೇಳಿಕೆ : ಮನೆಯಲ್ಲಿ ಅಣ್ಣ ಮತ್ತು ತಮ್ಮ ಇಬ್ಬರೆ ಇದ್ದು ನಾನು ಮೇಲಿನ ರೂಮಿನಲ್ಲಿ ಇದ್ದೆ. ಸುಮಾರು ರಾತ್ರಿ ಹನ್ನೆರಡು ಗಂಟೆ ಸಮಯದಲ್ಲಿ  ಯಾರೊ ನಾಲ್ಕು ಜನ ನಮ್ಮ ಅಣ್ಣ ಬಳಿ ಬಂದು ಹಣಕಾಸಿನ ವಿಚಾರವಾಗಿ ಗಲಾಟೆ ಮಾಡುತ್ತಿದ್ದರು ನಾನು ನಮ್ಮ ಅಣ್ಣ ಮಾತನಾಡತ್ತಿರಲ್ಲಿಲಾ ಅದ್ದರಿಂದ ನಾನು  ಗಲಾಟೆ ನಡೆಯುತ್ತಿದ್ದ ಸ್ಥಳಕ್ಕೆ ನಾನು ಹೊಗಲಿಲ್ಲಾ  ಬೆಳ್ಳಗೆ ನೊಡಿದ್ದಾಗ ನನ್ನ ಅಣ್ಣ ರಕ್ತ ದ ಮಡುವಿನಲ್ಲಿ ಬಿದ್ದಿದ್ದರು ನಂತರ ಗ್ರಾಮಸ್ಥರಿಗೆ ತಿಳಿಸಿದೆ ಎಂದು ಹೇಳಿಕೆ ನೀಡಿದ್ದು.

ಸಹೋದರನ ಹೇಳಿಕೆಯ ಮೇಲೆ ಸಂಶಯ ವ್ಯಕ್ತಪಡಿಸಿರುವ ಪೊಲೀಸರು ಮೃತ ವಕೀಲನ ಸಹೋದರನನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ.ಹತ್ಯೆಸ್ಥಳಕ್ಕೆ ಹಾಸನ ಜಿಲ್ಲಾ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ಆಗಮಿಸಿ ಕೊಲೆ ಆರೋಪಿಗಳ ಪತ್ತೆಗಾಗಿ ತೀವ್ರ ಶೋಧ ಕಾರ್ಯಕೈಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ನೂರಾರು ಜನರು ಜಮಾವಣೆಗೊಂಡು .ಗ್ರಾಮದಲ್ಲಿ ಉದ್ವಿಗ್ನ ವಾತಾವರಣವಿದೆ. ಪೋಲಿಸ್ ರ ತನಿಖೆ ಯಿಂದ ಅಪರಾಧಿಯಾರು ಎಂದು ತಿಳಿಯಬೇಕಿದೆ.ಕೃಷ್ಣರಾಜಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

 

Page 1 of 3

Visitors Counter

252205
Today
Yesterday
This Week
This Month
Last Month
All days
310
143
612
3130
5621
252205

Your IP: 44.220.247.152
2024-09-19 13:56

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles