ಹಾಸನ

ಹಾಸನದ ದಶಕದ ರಾಜಕೀಯ ದ್ವೇಷ ಕೊನೆಯಾಗುತ್ತಾ.!  ರೇವಣ್ಣ ವಿರುದ್ಧ ಕಾಂಗ್ರೆಸ್ಸಿಗರ ‘ಆಣೆ ಅಸ್ತ್ರ.

ಹಾಸನ : ಹಾಸನದ ರಾಜಕಾರಣದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ರಾಜಿ ಸಂಧಾನದ ಮಾತುಕತೆಗೆ ಕುಳಿತುಕೊಳ್ಳಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯರ ನೇತೃತ್ವದಲ್ಲಿ ನಡೆಯುತ್ತಿರುವ ಸಂಧಾನ ನಡೆಯುತ್ತಿದ್ದು, ಹಳೆಯ ದ್ವೇಷ ಮರೆತು ಜೆಡಿಎಸ್ ಬೆಂಬಲಿಸುವಂತೆ ಮನವೊಲಿಸಲು ಮುಂದಾಗಿದ್ದಾರೆ.

ಸಚಿವ ಹೆಚ್.ಡಿ.ರೇವಣ್ಣರ ಸಮ್ಮುಖದಲ್ಲಿ ಜೆಡಿಎಸ್ ನಾಯಕರಿಂದ ಕಾಂಗ್ರೆಸ್ ಮುಖಂಡರುಗಳಿಗೆ, ಕಾರ್ಯಕರ್ತರಿಗೆ ಏನೆಲ್ಲಾ ಸಮಸ್ಯೆ ಆಗುತ್ತಿದೆ ಎಂಬುದನ್ನು ಮನವರಿಕೆ ಮಾಡಿಕೊಡಲು ತೀರ್ಮಾನಿಸಿದ್ದಾರೆ. ಈ ವೇಳೆ ವಿಪರೀತ ದೇವರನ್ನು ನಂಬುವ ರೇವಣ್ಣ ಕಾಂಗ್ರೆಸ್ ಕಾರ್ಯಕರ್ತರಿಗೆ ಮುಂದೆ ಯಾವುದೇ ತೊಂದರೆ ಕೊಡಲ್ಲ ಅಂತ ಸಚಿವರು ಆಣೆ ಪ್ರಮಾಣ ಮಾಡಲಿ ಎಂದು ಒತ್ತಾಯಿಸಲು ಕೈ ಪಡೆ ಸಜ್ಜುಗೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇತ್ತ ದೋಸ್ತಿಗಳು ಕೈ ಕೊಟ್ಟರೆ ಮಗನ ಗೆಲುವು ಕಷ್ಟ ಎಂದು ಭಾವಿಸಿದ ರೇವಣ್ಣ ಸಿದ್ದರಾಮಯ್ಯ ನಿವಾಸದಲ್ಲಿ ಇಂದು ರಾಜೀ ಪಂಚಾಯ್ತಿಗೆ ಹಾಜರಾಗಲು ಒಪ್ಪಿದ್ದಾರೆ. ಕೇವಲ ಬಾಯಿ ಮಾತಿಗೆ ಹಾಸನದ ದಶಕದ ರಾಜಕೀಯ ದ್ವೇಷ ಕೊನೆಯಾಗುತ್ತಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಪ್ರಾಂಶುಪಾಲರಿಂದ ಕಾಲೇಜು ವಿದ್ಯಾರ್ಥಿಗಳಿಗೆ ಹಲ್ಲೆ ವಿದ್ಯಾರ್ಥಿಗಳನ್ನು ಅಮಾನುಷವಾಗಿ cರೊ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಹಾಸನ: ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ನಿಲ್ಲಿಸಿದ್ದಕ್ಕೆ ಕಾಲೇಜು ಪ್ರಾಧ್ಯಾಪಕ ವರ್ಗದವರಿಂದ ವಿದ್ಯಾರ್ಥಿಗಳ ದ್ವಿಚಕ್ರವಾಹನದ ಗಾಳಿ ಬಿಟ್ಟು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ ಘಟನೆ ಹಾಸನದ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು ಆವರಣದಲ್ಲಿ ನಡೆದಿದೆ.ಇಂದು ಸರ್ಕಾರಿ ಕಲಾ ಕಾಲೇಜಿಗೆ ರಜೆ ಘೋಷಣೆ ಆಗಿದ್ದರೂ ಕೂಡಾ, ವಿದ್ಯಾರ್ಥಿಗಳು ಹೋಳಿ ಹಬ್ಬ ಆಚರಣೆ ಮಾಡಲೆಂದು ಕೆಲ ವಿದ್ಯಾರ್ಥಿಗಳು ಕಾಲೇಜು ಬಳಿ ಬಂದಿದ್ದರು. ಹೋಲಿ ಆಚರಣೆಗೆ ಬಂದ ವಿದ್ಯಾರ್ಥಿಗಳು ಎಂದಿನಂತೆ ತಮ್ಮ ಕಾಲೇಜು ಆವರಣದ ದ್ವಿಚಕ್ರ ವಾಹನ ನಿಲುಗಡೆ ಸ್ಥಳದಲ್ಲಿ ವಾಹನವನ್ನು ನಿಲ್ಲಿಸಿದ್ದಾರೆ.

ವಾಹನ ನಿಲ್ಲಿಸಿದ್ದಕ್ಕೆ ಆಕ್ರೋಶಗೊಂಡ ಕೆಲ ಪ್ರಾಧ್ಯಾಪಕರು ಕಾಲೇಜು ಇಲ್ಲದಿದ್ದರೂ ಕಾಲೇಜು ಆವರಣದಲ್ಲಿ ಬೈಕ್ ನಿಲ್ಲಿಸಿದ್ದಾರೆ ಎಂಬ ಒಂದೇ ಕಾರಣಕ್ಕೆ ವಿದ್ಯಾರ್ಥಿಗಳ ಬೈಕ್ ನ ಟೈಯರ್ ನ ಗಾಳಿ ಬಿಟ್ಟಿದ್ದಾರೆ. ಹೋಳಿ ಮುಗಿಸಿಕೊಂಡು ವಾಹನವನ್ನು ತೆಗೆದುಕೊಳ್ಳಲು ಬಂದ ವಿದ್ಯಾರ್ಥಿಗಳಿಗೆ ದ್ವಿಚಕ್ರವಾಹನದ ಗಾಡಿ ಬಿಟ್ಟಿರುವ ಕಂಡು ಸಿಟ್ಟಾಗಿದ್ದಾರೆ. ಯಾರೋ ಕಿಡಿಗೇಡಿಗಳು ಇಂತಹ ಕೃತ್ಯವನ್ನು ಮಾಡಿದ್ದಾರೆ ಅಂತ ಸಿಟ್ಟಿನಲ್ಲಿ ಸ್ಥಳದಲ್ಲೇ ಕೆಲ ಅವ್ಯಾಚ ಶಬ್ದಗಳಿಂದ ಬೈಯ್ದಿದ್ದಾರೆ ಎನ್ನಲಾಗಿದೆ.

ಸ್ಥಳದಲ್ಲಿಯೇ ಇದ್ದ ಬರುವ ಪ್ರಾಧ್ಯಾಪಕ ತನ್ನ ಮಾತನ್ನು ಕೇಳಿಸಿಕೊಂಡ ಬಳಿಕ ಕುಪಿತಗೊಂಡು ಆತನಿಗೆ ಹಲ್ಲೆ ಮಾಡಿದ್ದಾನೆ. ಇದನ್ನ ಪ್ರಶ್ನೆ ಮಾಡಿದ ವಿದ್ಯಾರ್ಥಿ ಮೇಲೆ ಮತ್ತೆ ಅದೇ ಪ್ರಾಧ್ಯಾಪಕ ಮರು ಹಲ್ಲೆ ಮಾಡಿದ್ದಾನೆ. ಆದರೆ ಇದನ್ನು ಅಲ್ಲೇ ಸ್ಥಳದಲ್ಲಿದ್ದ ಮತ್ತು ಇಬ್ಬರು ವಿದ್ಯಾರ್ಥಿಗಳು ಪ್ರಶ್ನೆ ಮಾಡಿ ಸರ್ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಬೇಡಿ ಎಂದು ಹೇಳಿದ್ದಾರೆ ನಾವು ನಿಲ್ಲಿಸುತ್ತಿರಲಿಲ್ಲ ಆದರೆ ಈಗ ಗಾಳಿ ಇಲ್ಲದ ವಾಹನ ತಳ್ಳುವುದು ತುಂಬಾ ಕಷ್ಟ ಅಂತ ಪ್ರಶ್ನೆ ಮಾಡಿದ್ದಾರೆ.ಇದೆ ವೇಳೆ ಸ್ಥಳಕ್ಕೆ ಆಗಮಿಸಿದ ಪ್ರಾಂಶುಪಾಲ ರಾಜಪ್ಪ ಮತ್ತು ದೈಹಿಕ ಶಿಕ್ಷಕ ಮಹೇಂದ್ರಪ್ಪ, ಸತ್ಯಮೂರ್ತಿ ಹಾಗೂ ಗಿರೀಶ್ ನಮ್ಮನ್ನೇ ಪ್ರಶ್ನೆ ಮಾಡುತ್ತೀಯ ಎಂದು ಆ ನಾಲ್ಕು ಮಂದಿ ಸೇರಿ ಚಂದ್ರಶೇಖರ್ ಎಂಬ ವಿದ್ಯಾರ್ಥಿಯ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದಾರೆ ಜೊತೆಗೆ ಕಾಲಿನಿಂದ ಒದೆಯೂವ ಮೂಲಕ ಗೂಂಡಾ ವರ್ತನೆ ತೋರಿದ್ದಾರೆ.

ಘಟನೆಯ ವಿಡಿಯೋವನ್ನ ಸ್ಥಳದಲ್ಲಿದ್ದ ಕೆಲ ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ಚಿತ್ರಿಕರಿಸಿ ಕ್ಷಣ ಮಾತ್ರದಲ್ಲಿ ನೂರಾರು ವಿದ್ಯಾರ್ಥಿಗಳ ಮೊಬೈಲ್ ಗಳಿಗೆ ಹಾಗೂ ಜಾಲತಾಣಗಳ ಮೂಲಕ ಹರಿ ಬಿಟ್ಟಿದ್ದಾರೆ. ಜೊತೆಗೆ ಕಾಲೇಜು ಮತ್ತು ಪ್ರಾಧ್ಯಾಪಕ ವರ್ಗದವರ ವಿರುದ್ಧ ಕೂಡ ವಿದ್ಯಾರ್ಥಿಗಳು ದೂರು ದಾಖಲು ಮಾಡಲು ಸಾಧ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ವಿದ್ಯಾರ್ಥಿಗಳು ತಪ್ಪು ಮಾಡುವುದು ಸಹಜ ಆದರೆ ಅದನ್ನು ತಿದ್ದಿ ಹೇಳಬೇಕಾದರೆ ಗುರುಗಳೇ ರೌಡಿಗಳು ರೀತಿಯಲ್ಲಿ ವರ್ತನೆ ಮಾಡಿದ್ದು ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು. ಆದರೆ ಇಲ್ಲಿ ಪ್ರಾಧ್ಯಾಪಕರೊಂದಿಗೆ ಪ್ರಾಂಶುಪಾಲರು ಕೂಡ ಸೇರಿ ವಿದ್ಯಾರ್ಥಿಗೆ ಹಲ್ಲೆ ಮಾಡಿದ್ದು, ಬೇಲಿಯೇ ಎದ್ದು ಹೊಲ ಮೇಯ್ದಂತೆ.

ಮುಳುವಾಗುತ್ತಾ ಕುಟುಂಬ ರಾಜಕಾರಣ!?ಪ್ರಜ್ವಲ್ ನಿಂತ್ರೆ ಬಿಜೆಪಿಗೆ ಹೋಗ್ತೀನಿ ಎ.ಮಂಜು
 
ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಬಗ್ಗೆ ಭಾರಿ ಲೆಕ್ಕಾಚಾರ ನಡೆಯುತ್ತಿದ್ದು, ಜೆಡಿಎಸ್ ವಲಯದಲ್ಲಿ ದೇವೇಗೌಡರ ಮೊಮ್ಮಗನಿಗೆ ಕ್ಷೇತ್ರವನ್ನು ತ್ಯಾಗ ಮಾಡಲು ಮುಂದಾಗಿದ್ದಾರೆ. ಆರು ಬಾರಿ ಸ್ಪರ್ಧಿಸಿದ್ದ ದೇವೇಗೌಡ್ರು ಈ ಬಾರಿಯೂ ಕೂಡ ಚುನಾವಣೆಯಲ್ಲಿ ಸ್ಪರ್ಧಿಸಲಿ ಎನ್ನುವುದು ನನ್ನ ಅಭಿಲಾಷೆ ಎಂದು ಮೊನ್ನೆ ಮೊನ್ನೆ ತಾನೆ ಜಿಲ್ಲಾ ಉಸ್ತುವಾರಿ ಸಚಿವರ ಪತ್ನಿ ಭವಾನಿ ರೇವಣ್ಣ ಕೂಡ ಬೇಲೂರಿನಲ್ಲಿ ಮಾತನಾಡಿದ್ದರು.

  ಹಾಡ ಹಗಲೇ ಅಪ್ಪ-ಮಗಳನ್ನ ಕೊಲೆ ಮಾಡಿದ್ದ ಅಳಿಯನನ್ನ 20 ದಿನಗಳ ಬಳಿಕ ಕೊನೆಗೂ ಎಡೆಮುರಿ ಕಟ್ಟುವಲ್ಲಿ ಚನ್ನರಾಯಪಟ್ಟಣ ಪೊಲೀಸ್ರು ಯಶಸ್ವಿಯಾಗಿದ್ದಾರೆ.        

ಹಾಸನ: ಚನ್ನರಾಯಪಟ್ಟಣ ಪಟ್ಟಣ ದಲ್ಲಿ ಜ.30ರಂದು ಸಂಜೆ 4.30ರಲ್ಲಿ ವಿಚ್ಚೇಧನಕ್ಕಾಗಿ ಕರೆಸಿಕೊಂಡಿದ್ದ ನಂದಿಶ್ ಬಳಿಕ ವಕೀಲರ ಕಚೇರಿಗೆ ತರೆಳಿ ವಾಪಸ್ ಹೊರಬರುವ ವೇಳೆ ಪತ್ನಿ ದಿವ್ಯಾ ಮತ್ತು ಮಾವ ಪ್ರಕಾಶ್ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ಪರಿಣಾಮ ರಕ್ತಾಸಿಕ್ತವಾಗಿ ಮಾವ ಸ್ಥಳದಲ್ಲಿಯೇ ಮೃತಪಟ್ಟರೇ, ಹೆಚ್ಚಿನ ಚಿಕಿತ್ಸೆ ಸ್ಪಂದಿಸದೇ ಪತ್ನಿ ದಿವ್ಯಾ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ರು.ಪ್ರಕರಣವಾದ ಬಳಿಕ ಆರೋಪಿಯ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಎನ್.ಪ್ರಕಾಶ್ ಗೌಡ, ಎರಡು ಪ್ರತ್ಯೇಕ ತಂಡಗಳನ್ನ ರಚಿಸಿ ತನಿಖೆ ಆರಂಭಿಸಿದ್ರು. ಕಳೆದ 20 ದಿನಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ನೆನ್ನೆ ಚನ್ನರಾಯಪಟ್ಟಣದ ಉದಯಪುರದ ಫಾಮ್ ಹೌಸ್ ಒಂದರಲ್ಲಿ ಅಡಗಿದ್ದಾನೆಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸ್ರು ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
 

ಚಾಕು ತೋರಿಸಿ ಬೆದರಿಸಿದ್ದ ಆರೋಪಿ: ಬಹುತೇಕ ಮಂದಿ ಪೊಲೀಸ್ರ ಲಾಠಿ ಏಟು ತಿನ್ನೋತನಕ ಹಲವು ಕೃತ್ಯವನ್ನ ಮಾಡ್ತಾನೆ ಇರ್ತಾರೆ. ಇವನು ಕೂಡಾ ಮಾಡಿರೋದು ಅದೇ. ಎರಡು ಕೊಲೆ ಮಾಡಿರೋ ನಾನು ಇದುವರೆಗೂ ಪೊಲೀಸ್ ಕೈಗೆ ಸಿಕ್ಕಿಲ್ಲ ಎಂಬ ಧಿಮಾಕಿನಲ್ಲಿ ತಲೆ ಮರೆಸಿಕೊಂಡಿದ್ದು, ಫೆ.16ರಂದು ಹೊಟ್ಟೆಹಸಿವು ತಾಳಲಾರದೇ ಕೈಯಲ್ಲಿ ದುಡ್ಡಿಲ್ಲದೇ ಉದಯಪುರದ ಸಮೀಪವಿರುವ ಮಾಂಸಹಾರಿ ಹೋಟೆಲ್ ಒಂದಕ್ಕೆ ಹೋಗಿ ಮಾಲೀಕರಿಗೆ ಚಾಕು ತೋರಿಸಿ ಬಳಿಕ ಹೆದ್ರಿಸಿ-ಬೆದರಿಸಿ ಮಾಂಸಹಾರಿ ಊಟವನ್ನ ಪಾರ್ಸಲ್ ಮಾಡಿಸಿಕೊಂಡು ಹೋಗಿದ್ದನಂತೆ.

ಮಸ್ತಿಯಲ್ಲಿ ಕಾದು ಕುಳಿತಿದ್ದ ಪೊಲೀಸ್ರು: ಈ ಬಗ್ಗೆ ಹೋಟೇಲ್ ಮಾಲೀಕ ಚನ್ನರಾಯಪಟ್ಟಣದ ಪೊಲೀಸ್ರಿಗೆ ದೂರು ನೀಡಿದ್ರಂತೆ. ತಕ್ಷಣ ದೂರಿಗೆ ಸ್ಪಂದಿಸಿದ ಪೊಲೀಸ್ರು, ನಂದಿಶನ ಪೋಟೋವನ್ನ ತೋರಿಸಿದಾಗ ಮಾಲೀಕ, ಹೌದು ಸಾರ್ ಇವನೇ ಬಂದಿದ್ದು, ನಾವು ಬಾಗಿಲು ಹಾಕುವ ಸಮಯಕ್ಕೆ ಬಂದು, ಚಾಕು ತೋರಿಸಿ ಬೆದರಿಸಿ ಊಟವನ್ನ ಕಟ್ಟಿಸಿಕೊಂಡು ಇತ್ತಕಡೆ ಹೋದ ಅಂತ ಮಾಹಿತಿ ನೀಡಿದ್ರಂತೆ. ಮತ್ತೇ ಇದೇ ಸ್ಥಳಕ್ಕೆ ಬಂದೇ ಬರುತ್ತಾನೆ ಎಂಬ ಸುಳಿವಿನ ಮೇಲೆ ಮಫ್ತಿಯಲ್ಲಿ ಕಾದು ಕುಳಿತಿದ್ರು ಪೊಲೀಸ್ರು. ಬಳಿಕ ಮತ್ತೆ ಮರುದಿನ ಆತ ಹೋಟೆಲ್ ಸಮೀಪ ಬಂದು, ವಾಪಸ್ ಫಾಮ್ ಹೌಸ್ ಗೆ ಹೋಗುವ ವೇಳೆ ಪೊಲೀಸ್ರನ್ನ ನೋಡಿ ಓಡಿ ಹೋಗಲು ಯತ್ನಿಸಿದ್ದಾನೆ. ಆದ್ರೆ ಆತನ ಪ್ರಯತ್ನ ವಿಫಲವಾಗಿ ಕೊನೆಗೆ ಪೊಲೀಸ್ರ ಬಲೆಗೆ ಬಿದ್ದಿದ್ದಾನೆ.

ಮಹಜರು ಮಾಡಲು ಬಂದಾಗ ಛೀ..ಥೂ ಎಂದ ನಾಗರೀಕರು: ಕರುಣೆಯಿಲ್ಲದೇ ಕಟುಕನಂತೆ ಕುರಿ-ಕೋಳಿಯನ್ನ ಕತ್ತರಿಸುವ ಹಾಗೇ ಮಾರಕಾಸ್ತ್ರಗಳಿಂದ ಕೊಲೆಗೈದಿದ್ದ ನಂದಿಶನನ್ನ ಎಡೆಮುರಿ ಕಟ್ಟಿ ಎಳೆದು ತಂದಿದ್ದ ಪೊಲೀಸ್ರು, ನಾಯಿಗೆ ಚೈನಾಕುವಂತೆ, ಈತನ ಕೈಗೆ ಕಬ್ಬಿಣದ ಕೋಳ ತೊಡಿಸಿ ಮಹಜರು ಮಾಡಲು ರಸ್ತೆಯಲ್ಲಿಯೇ ಮೆರವಣಿಗೆ ಮಾಡಿಸಿಯೇ ಕರೆದುಕೊಂಡು ಬಂದು ಕೊಲೆ ಮಾಡಿದ್ದ ಸ್ಥಳದಲ್ಲಿಯೇ ಆರೋಪಿಯನ್ನ ಮಂಡಿಯೂರಿ ಕೂರಿಸಿದ್ದಾರೆ. ಕೊಲೆ ಮಾಡಿದ ಆರೋಪಿಯನ್ನ ನೋಡಿದ ಸ್ಥಳೀಯರು ಸ್ಥಳದಲ್ಲಿಯೇ ಛೀ…ಥೂ…ಅಂತ ಮಂಗಳಾರತಿ ಮಾಡಿದ್ದಾರೆ. ಇಂತಹ ಕೊಲೆಗಡುಕನಿಗೆ ಕಾನೂನಿನಡಿ ತಕ್ಕ ಶಿಕ್ಷೆಯನ್ನ ಕೊಡಿ ಅಂತ ಆಗ್ರಹಿಸಿದ್ದಾರೆ.
 
ವಿಚ್ಚೇಧನ ಕೇಳಿದ್ದೇ ಬಹುದೊಡ್ಡ ಅಪರಾಧವಂತೆ: ಒಟ್ಟಾರೆ, ಪ್ರೀತಿಸಿ ಮದುವೆಯಾಗಿ, ಕೆಲಸ ವರ್ಷಗಳ ಬಳಿಕ ಕುಡಿತಕ್ಕೆ ದಾಸನಾಗಿದ್ದ ನಂದೀಶ್ ಗೆ ಹಲವಾರು ಬಾರಿ ಯಲಿಯೂರು ಗ್ರಾಮದ ಮುಖಂಡರು ಬುದ್ದಿವಾದ ಹೇಳಿದ್ರು ಕೇಳದೇ ಹೆಂಡತಿಗೆ ನಿತ್ಯ ಕುಡಿದು ಬಂದು ಕಿರುಕುಳ ನೀಡುತ್ತಿದ್ದ. ಇವನ ಕಿರುಕುಳಕ್ಕೆ ಬೇಸತ್ತು ದಿವ್ಯಾ ನಿನ್ನ ಸಹವಾಸವೇ ಬೇಡ, ನನಗೆ ನಿನ್ನಿಂದ ಮುಕ್ತಿ ಬೇಕು ಎಂದು ವಿಚ್ಚೇಧನಕ್ಕೆ ಬೇಡಿಕೆ ಇಟ್ಟಿದ್ಲು. ಆದ್ರೆ ಇದನ್ನೇ ದೊಡ್ಡ ಅಪರಾಧವೆಂಬಂತೆ ಭಾವಿಸಿದ ನಂದಿಶ್, ಕೊಲೆ ಮಾಡಲು ನಿರ್ಧರಿಸಿ, ಪತ್ನಿ ಮತ್ತು ಮಾವನನ್ನ ಚನ್ನರಾಯಪಟ್ಟಣಕ್ಕೆ ಕರೆಸಿಕೊಂಡು ಬರ್ಬರವಾಗಿ ಕೊಲೆ ಮಾಡಿಬಿಟ್ಟ.
 
ಕುಡಿತ ಏನೆಲ್ಲಾ ಮಾಡಿಬಿಡ್ತು ನೋಡಿ, ತನ್ನ ಹೆಂಡತಿ-ಮಾವನನ್ನ ಕೊಲೆ ಮಾಡಿ, ತಾನೂ ಜೀವಂತ ವಿದ್ರು ಕೂಡಾ ಸಮಾಜದಲ್ಲಿ ತಲೆ ಎತ್ತಿ ಬದುಕಲು ಸಾಧ್ಯವಾಗದೇ ಜೀವನವನ್ನ ಹಾಳುಮಾಡಿಕೊಂಡು ಸದ್ಯ ಜೈಲಿನಲ್ಲಿ ಮುದ್ದೆ ಮುರಿಯಲು ಹೊರಟಿದ್ದಾನೆ. ಪಾಪಾ ಆ ಮುಗ್ದ ಮಕ್ಕಳಿಬ್ಬರು ಇತ್ತ ತಾಯಿಯನ್ನ ಕಳೆದುಕೊಂಡು ಬದುಕಿರುವ ಅಪ್ಪನನ್ನ ಕಳೆದುಕೊಂಡು ಮುಂದೆ ಬದುಕುವುದಾದ್ರು ಹೇಗೆ ಹೇಳಿ…..ಕುಡಿತ ಸಂಸಾರವನ್ನೇ ಹಾಳು ಮಾಡುತ್ತೆ ಅನ್ನೋದಿಕ್ಕೆ ಇದಕ್ಕಿಂತ ಸ್ಪಷ್ಪ ಉದಾಹರಣೆ ಬೇಕಿಲ್ಲ ಅನಿಸುತ್ತೆ ಅಲ್ವಾ….
 

  ವಿಚ್ಛೇದನ ಪಡೆಯಲು ಮುಂದಾದ ಹೆಂಡತಿಯ ಮೇಲಿನ ಸಿಟ್ಟಿಗೆ ಮಾವನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ದಲ್ಲಿ ವಿಚ್ಛೇದನ ಪಡೆಯಲು ಮುಂದಾದ ಹೆಂಡತಿಯ ಮೇಲಿನ ಸಿಟ್ಟಿಗೆ ಮಾವನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.ಅಳಿಯ ಬೀಸಿದ ಮಚ್ಚಿನೇಟಿಗೆ ಮಾವ ಪ್ರಕಾಶ್ (55) ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಪ್ರಾಣಬಿಟ್ಟರೆ, ಪತ್ನಿ 28 ವರ್ಷದ ದಿವ್ಯ ಸ್ಥತಿ ಚಿಂತಾಜನಕವಾಗಿ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಇನ್ನು ಘಟನೆ ನಡೆದ ಸ್ಥಳಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ದೌಡಾಯಿಸಿದ್ದನ್ನು ಕಂಡು ನಂದೀಶ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಆಗಮಿಸಿದ ಚನ್ನರಾಯಪಟ್ಟಣ ನಗರ ಪೊಲೀಸರು ಕೊಲೆಯಾದ ವ್ಯಕ್ತಿಯನ್ನು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಹಾಡ ಹಗಲೇ ನಡು ರಸ್ತೆಯಲ್ಲೇ ಇಬ್ಬರ ಮೇಲೆ ಮನ ಬಂದಂತೆ ಮಚ್ಚು ಬೀಸಿದ್ದಾನೆ. ಇಂತಹ ರಾಕ್ಷಸ ಕೃತ್ಯವೆಸಗಿರು ಈತ ಚನ್ನರಾಯಪಟ್ಟಣ ತಾಲ್ಲೂಕಿನ ಎಲಿಯೂರು ಗ್ರಾಮದವನು. ಸುಮಾರು 12 ವರ್ಷದ ಹಿಂದೆ ತನ್ನದೇ ಊರಿನವಳಾದ ಪಕ್ಕದ ಮನೆಯ ದಿವ್ಯಾ ಎಂಬಾಕೆಯನ್ನ ಪ್ರೀತಿಸಿ ಮದುವೆಯಾಗಿದ್ದ.ಗಂಡ ಹೆಂಡತಿ ಅಂದಿನಿಂದಲೂ ಚನ್ನಾಗಿಯೇ ಬದುಕು ಸಾಗಿಸುತ್ತಿದ್ದರು ಇವರಿಗೆ ನಾಲ್ಕನೇ ತರಗತಿಯ ಹೆಣ್ಣು, ಎರಡನೇ ತರಗತಿ ಓರ್ವ ಮಗನಿದ್ದಾನೆ.

ಸಂಸಾರದಲ್ಲಿ ಅನೇಕ ಬಾರಿ ಮನಸ್ತಾಪ ಉಂಟಾಗಿತ್ತು. ಕಳೆದ ಒಂದು ವಾರದ ಹಿಂದೆ ಜಗಳ ತಾರಕಕ್ಕೇರಿತ್ತು. ಪದೇ ಪದೇ ಜಗಳವಾಗುತ್ತಿದೆ ನಮ್ಮಿಬ್ಬರ ನಡುವೆ ಸಂಸಾರ‌ನಡೆಸುವುದು ಸಾಧ್ಯವಿಲ್ಲ ಎಂದು ದಿವ್ಯಾ ನಿರ್ಧರಿಸಿ ತವರು ಮನೆಗೆ ಬಂದಿದ್ದಾಳೆ.ಇಂದು ದಿವ್ಯಾ ತನ್ನ ತಂದೆಯೊಂದಿದೆ ಚನ್ನರಾಯಪಟ್ಟಣಕ್ಕೆ ತೆರಳಿ ತನ್ನ ಪತಿಯಿಂದ ವಿಚ್ಛೇದನ ಕೊಡಿಸಿ ಎಂದು ನ್ಯಾಯಾಲಯದಲ್ಲಿ ಅರ್ಜಿ ಹಾಕಿಸಿಕೊಡಿ ಎಂದು ವಕೀಲರ ಕಛೇರಿಗೆ ತೆರಳಿದ್ದಾಳೆ. ಇ ಸಂದರ್ಭದಲ್ಲಿ ಬಂದ ಪತಿ ಮನಬಂದಂತೆ ಅಲ್ಲೆ ನೆಡಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

 

ಹೆಸರಿಗೆ ಮಾತ್ರವೇ ಪ್ಲಾಸ್ಟಿಕ್ ಮುಕ್ತ ಎಲ್ಲಿ ನೊಡಿದ್ದರು ಬರಿ ಕಸ ಮತ್ತು ಪ್ಲಾಸ್ಟಿಕ್ ತ್ಯಾಜ್ಯ .

 
 
 ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ದಿಂಡಗೂರು ಕೆರೆಯಲ್ಲಿ ಯುವತಿಯ ಶವ ಪತ್ತೆಯಾಗಿದೆ.
 
ಹಾಸನ ಜಿಲ್ಲೆಯ  ಅರಸೀಕೆರೆ ತಾಲೂಕಿನ ಅಮರಗಿರಿ ಮಾಲೆಕಲ್ ತಿರುಪತಿ ಮಹಾರಥೋತ್ಸವ
Page 2 of 3

Visitors Counter

220425
Today
Yesterday
This Week
This Month
Last Month
All days
143
274
2042
3530
4244
220425

Your IP: 3.15.151.214
2024-04-19 21:05

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles