ರಾಜ್ಯಸುದ್ದಿ
ತಪ್ಪಿದ ಭಾರೀ ಅನಾಹುತ ಕ್ಷಣಾರ್ಧದಲ್ಲಿ ಪಾಸಾದ ಕೆಎಸ್ಆರ್ಟಿಸಿ ಬಸ್ ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ
ಕೆ.ಆರ್.ಪೇಟೆ ಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಯಿತು.
ಅಧಿಕಾರಿಗಳು ಬದ್ಧತೆಯಿಂದ ಶ್ರೀಸಾಮಾನ್ಯನ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಸೂಚನೆ... ಕೃಷ್ಣರಾಜಪೇಟೆ ಪಟ್ಟಣದ ಪ್ರವಾಸಿಮಂದಿರದ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಮಂಡ್ಯ ಜಿಲ್ಲಾ ಲೋಕಾಯುಕ್ತ ಹಿರಿಯ ಇನ್ಸ್ ಪೆಕ್ಟರ್ ಶಶಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮತ್ತು ಕುಂದುಕೊರತೆಗಳ ನಿವಾರಣಾ ಸಭೆಯು ನಡೆಯಿತು.
ಅಧಿಕಾರಿಗಳು ನಿಗಧಿತ ಅವಧಿಯೊಳಗೆ ಜನಸಾಮಾನ್ಯರ ಕೆಲಸ ಕಾರ್ಯಗಳನ್ನು ಕಾನೂನಿನ ಪರಿಮಿತಿಯೊಳಗೆ ಮಾಡಿಕೊಡುವ ಮೂಲಕ ಬದ್ಧತೆಯನ್ನು ಪ್ರದರ್ಶನ ಮಾಡಬೇಕು. ಲಂಚದ ಹಣಕ್ಕೆ ಒತ್ತಾಯಿಸಿ ಸಂವಿಧಾನಬದ್ಧವಾದ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಸತಾಯಿಸಿದರೆ ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಿದರು. ವಿವಿಧ ಕಛೇರಿಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ನೀಡಿದರೆ ಖಾಲಿ ಹುದ್ದೆಗಳ ಭರ್ತಿಗೆ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಶಶಿಕುಮಾರ್ ತಿಳಿಸಿದರು.
ಸಭೆಯಲ್ಲಿ ಲೋಕಾಯುಕ್ತ ಇನ್ಸ್ ಪೆಕ್ಟರ್ ರವಿಕಿರಣ್, ಬಿಇಓ ಎಸ್.ರೇವಣ್ಣ, ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್, ತಾ.ಪಂ ಇ.ಓ., ಚಂದ್ರಮೌಳಿ, ಕಾರ್ಮಿಕ ನಿರೀಕ್ಷಕ ಮಹೇಶ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಚನ್ನರಾಯಪಟ್ಟಣ : ವಿದ್ಯುತ್ ಶಾಕ್ ಹೊಡೆದು ಒಂದೇ ಕುಟುಂಬದ ಮೂವರ ಸಾವು.
ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಹೋಬಳಿಯ. ಅಗಸರಹಳ್ಳಿಯಲ್ಲಿ ಇಂದು ಮುಂಜಾನೆ 6.30 ರ ಸುಮಾರಿನಲ್ಲಿ ಘಟನೆ ನಡೆದಿದೆ.
ಮೃತರು ತಾಯಿ ಭಾಗ್ಯಮ್ಮ, ಮಗಳು ದಾಕ್ಷಾಯಿಣಿ, ಮಗ ದಯಾನಂದ. ಮಗಳು ದಾಕ್ಷಾಯಿಣಿ ಬೆಳಗ್ಗೆ ಹೊಗೆದ ಬಟ್ಟೆಗಳನ್ಮು ಮನೆಯಿಂದ ವಿದ್ಯುತ್ ಕಂಬಕ್ಕೆ ಕಟ್ಟಲಾಗಿದ್ದ ತಂತಿಗೆ ಬಟ್ಟೆ ಒಣ ಹಾಕಲು ಹೋದಾಗ ತಂತಿಯಲ್ಲಿ ಪ್ರಸರಿಸುತ್ತಿದ್ದ ವಿದ್ಯುತ್ ಮೊದಲಿಗೆ ದಾಕ್ಷಾಯಣಿಯನ್ನು ಹಿಡಿದುಕೊಂಡಿದೆ. ಇದನ್ನು ನೋಡಿ ಗಾಬರಿಯಿಂದ ತಾಯಿ ಮಗ ಅವಳನ್ನು ಬಿಡಿಸಲು ಹೋಗಿದ್ದಾರೆ. ಅವಳನ್ನು ಮುಟ್ಟಿದ ಈರ್ವರಿಗೂ ವಿದ್ಯುತ್ ಶಾಕ್ ಹೊಡೆದು ಮೂವರೂ ಸಾವನ್ನಪಿದ್ದಾರೆ.
ಗ್ರಾಮಾಂತರ ಠಾಣೆ ವ್ಯಾಪ್ತಿ.
ಹಾಸನ: ಶ್ರವಣಬೆಳಗೊಳದಲ್ಲಿ ಸಿನಿಮೀಯ ರೀತಿಯಲ್ಲಿ ವೃದ್ಧೆಯ 50 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾದ ಖದೀಮರು.
ಹೋಬಳಿಯ ದಮ್ಮನಿಂಗಳ ಗ್ರಾಮದ ಕೆಂಗಮ್ಮ ಚಿನ್ನದ ಸರ ಕಳೆದುಕೊಂಡ ವೃದ್ಧೆ.
ಅಪರಿಚಿತ ಓರ್ವ ಮಹಿಳೆ ಹಾಗೂ ಓರ್ವ ಯುವಕನಿಂದ ಕೃತ್ಯ. ಈ ಗ್ಯಾಂಗ್ ನಲ್ಲಿ ಇನ್ನೂ ನಾಲ್ಕೈದು ಜನರಿರುವುದು ಸಿಸಿ ಕ್ಯಾಮೆರಾದಲ್ಲಿ ಪತ್ತೆಯಾಗಿದೆ.
ರಸ್ತೆಯಲ್ಲಿ ಪರ್ಸ್ ಸಿಕ್ಕಿದೆ ಇಬ್ಬರು ಹಂಚಿಕೊಳ್ಳೋಣ ಎಂದು ಅಪರಿಚಿತ ಮಹಿಳೆ ವೃದ್ಧೆಯನ್ನು ಸಮೀಪದ ಪಾರ್ಕ್ ಗೆ ಕರೆದೊಯ್ದಿದ್ದಾರೆ.
ಆಗ ಅಲ್ಲಿಗೆ ಬಂದ ಅಪರಿಚಿತ ಯುವಕ ನನ್ನ ಪರ್ಸ್ ನಿಮಗೆ ಸಿಕ್ಕಿದೆಯಾ ಎಂದು ಕೇಳಿಕೊಂಡು ಬಂದಿದ್ದಾನೆ. ಆ ಮಾಂಗಲ್ಯದ ಆಣೆ ಮಾಡುವ ನೆಪದಲ್ಲಿ ಚಿನ್ನದ ಸರವನ್ನು ಬಿಚ್ಚಿಸಿಕೊಂಡು ಪರಾರಿಯಾಗಿದ್ದಾರೆ.
ಶ್ರವಣಬೆಳಗೊಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಖದೀಮರ ಪತ್ತೆಗೆ ಬಲೆ ಬಿಸಿದ್ದಾರೆ.
ಗಣೇಶ ವಿಸರ್ಜನೆ ಮಾಡಲು ಹೋಗಿ 6 ಮಕ್ಕಳು ನೀರು ಪಾಲು..ಹೃದಯ ಒಡೆದು ಹೋಗುವ ಘಟನೆ...
ಕೋಲಾರ: ಜಿಲ್ಲೆಯ ಕೆ.ಜಿ.ಎಪ್. ನ ಕ್ಯಾಸಂಬಳ್ಳಿ ಸಮೀಪದ ಮರದಗಟ್ಟ ಗ್ರಾಮದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಲು ಹೋಗಿ ಅರು ಮಕ್ಕಳು ಜಲಸಮಾದಿಯಾದ ಘಟನೆ ನೆಡೆದಿದೆ.
ಮೂವರು ಮಕ್ಕಳು ಕೊಳದ ಬಳಿಯೇ ಸಾವು. ಇನ್ನೂಳಿದ ಮುವರು ಮಕ್ಕಳು ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾವು.ಮುಗಿಲು ಮುಟ್ಟಿದ ಪೋಷಕರು ಅಕ್ರಂದನ..
ಅರಳುಕುಪ್ಪೆ ಗ್ರಾಮದಲ್ಲಿ ಸವಿತಾ ಸಮಾಜದ ನಮಫಲಕ ಮತ್ತು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ಕುಲದವರು ಶೌರ್ಯ ಪುತ್ರರು ಎಂದು ತಿಳಿಸಿದ ಮೈಸೂರು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎನ್ ಆರ್ ನಾಗೇಶ್ ಹಾಗೂ ಸವಿತಾ ಸಮಾಜದ ಚಲನಚಿತ್ರ ಹಿರಿಯ ಹಾಸ್ಯ ಕಲಾವಿದರಾದ ಮುತ್ತುರಾಜ್..
ಪಾಂಡುಪುರ: ತಾಲೂಕಿನ ಅರಳುಕುಪ್ಪೆ ಗ್ರಾಮದಲ್ಲಿ ಸವಿತಾ ಸಮಾಜ ನಮಫಲಕ ಮತ್ತು ಧ್ವಜಾರೋಹಣ ಕಾರ್ಯಕ್ರಮವನ್ನು ವಿಜ್ರಂಭಣೆಯಿಂದ ಗ್ರಾಮದ ರಾಜಬೀದಿಯಲ್ಲಿ ವೀರಗಾಸೆ ಮಂಗಳವಾದ್ಯದೊಂದಿಗೆ ಶ್ರೀ ಸವಿತಾ ಸಮಾಜದ ಜ್ಞಾನಭಂಡಾರ ಹಡಪದ ಅಪ್ಪಣ್ಣನವರ ಭಾವಚಿತ್ರದ ಮೆರವಣಿಗೆ ಮೂಲಕ ಕರೆತಂದು ಪೂಜ್ಯ ಶ್ರೀ ಶ್ರೀ ಶ್ರೀ ಗುರು ಸಿದ್ದಲಿಂಗೇಶ್ವರ ಬೇಬಿ ಮಠ ಘನ ಅಧ್ಯಕ್ಷತೆಯಲ್ಲಿ ಗ್ರಾಮದ ಹೆದ್ದಾರಿಯಲ್ಲಿ ಸ್ಥಾಪಿಸಿದ ನಾಮಫಲಕ ಉದ್ಘಾಟಿಸಿ ಗ್ರಾಮದ ಜಯಲಕ್ಷ್ಮಿ ಸಮುದಾಯ ಭವನದಲ್ಲಿ ಸಮಾಜದ ರಾಜ್ಯ ನಾಯಕರಾದ ಎನ್ ಆರ್ ನಾಗೇಶ್ ಮತ್ತು ಚಲನಚಿತ್ರಗಳ ಹಿರಿಯ ಹಾಸ್ಯ ಕಲಾವಿದರಾದ ಮುತ್ತುರಾಜ್ ಜ್ಯೋತಿ ಬೆಳಗುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸವಿತಾ ಸಮಾಜದ ಕುಲದವರು ಸರ್ವ ಜನಾಂಗಕ್ಕೂ ಅತಿಮುಖ್ಯ ಬೇಕಾದ ಸಮಾಜವಾಗಿದ್ದು ಈ ಚಿಕ್ಕ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ಮುಖೇನ ಬೆಳೆಸಿ ಎಂದು ಸ್ಥಳೀಯ ಪತ್ರಕರ್ತರಿಗೆ ಮನವಿ ಮಾಡಿದರು.
ಘನ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕೆಂಪುಗೌಡ ಸಮಾಜದ ನಾಯಕರಾದ ಶಿಕ್ಷಣ ಇಲಾಖೆ ಬಸವರಾಜಪ್ಪ ಮನು ಮಾಕವಳ್ಳಿಮತ್ತು ಅರಳಕುಪ್ಪೆ ಸವಿತಾ ಸಮಾಜದ ಘಟಕ ಗೌರವಅಧ್ಯಕ್ಷರಾದ ಕುಮಾರ್ ಬಿ ಎಂ. ಅಧ್ಯಕ್ಷರಾದ ಎ ಎನ್ ಮಹೇಶ್ . ಉಪಾಧ್ಯಕ್ಷರಾದ ಹೆಚ್ ಆರ್ ಗೋವಿಂದರಾಜು. ಖಜಾಂಚಿ ಎಸ್ ಎನ್ ನಂದೀಶ್ .ಆರ್ ಶಿವಕುಮಾರ್ ಪ್ರಧಾನ ಕಾರ್ಯದರ್ಶಿ .ಹಾಗೂ ಕೆಆರ್ ಪೇಟೆ ತಾಲೂಕಿನ ತಾಲೂಕು ಅಧ್ಯಕ್ಷರಾದ ಸುರೇಶ್ ಮತ್ತು ಸಮಾಜದ ಗಣ್ಯಾತಿಗಣ್ಯರು ಯುವಕರು ಕಾರ್ಯಕ್ರಮಕ್ಕೆ ಭಾಗಿಯಾಗಿ ಮೆರುಗು ತುಂಬಿದರು..
ಕೇಂದ್ರ ಸರ್ಕಾರವು ಕೂಡಲೇ ಇಡಿ ಇಲಾಖೆಗೆ ನಿರ್ದೇಶನ ನೀಡಿ ಡಿ.ಕೆ.ಶಿವಕುಮಾರ್ ಅವರನ್ನು ಬಿಡುಗಡೆಗೊಳಿಸಿ ರಾಜಕೀಯ ದುರುದ್ಧೇಶದಿಂದ ದಾಖಲಿಸಿರುವ ಪ್ರಕರಣವನ್ನು ಕೈಬಿಡಬೇಕು ಎಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಕಿಕ್ಕೇರಿ ಸುರೇಶ್ ಒತ್ತಾಯಿಸಿದರು.
ದುರುದ್ದೇಶಪೂರ್ವಕವಾಗಿ ಬಂಧಿಸಿ ತನಿಖೆಗೆ ಸಹಕಾರ ನೀಡಲಿಲ್ಲವೆಂದು ಸುಳ್ಳು ದೂರನ್ನು ದಾಖಲಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು...
ಪ್ರತಿಭಟನೆಯಲ್ಲಿ ಜಿ.ಪಂ ಮಾಜಿ ಉಪಾದ್ಯಕ್ಷ ಕೆ ಎಸ್ ಪ್ರಭಾಕರ್, ತಾಲ್ಲೂಕು ಪಂಚಾಯಿತಿ ಉಪಾದ್ಯಕ್ಷ ವಡ್ಡರಹಳ್ಳಿ ರವಿ, ಪಿ ಎಲ್ ಡಿ ಬ್ಯಾಂಕ್ ಮಾಜಿ ಅದ್ಯಕ್ಷ ಅರಳಹಳ್ಳಿ ವಿಶ್ವನಾಥ್, ಸಮಾಜ ಸೇವಕ ಮೊಟ್ಟೆ ಮಂಜು ಮುಖಂಡರಾದ ಕಾಯಿ ಮಂಜೇಗೌಡ, ಶೇಖರ್, ಏಜಸ್ ಪಾಷ, ಕಾಯಿ ಸುರೇಶ್, ಮತ್ತು ನೂರಾರು ಕಾರ್ಯಕರ್ತರು ಅಭಿಮಾನಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರಿ...
ಸೂಕ್ತ ಬಂದೂ ಬಸ್ತ್ ನೀಡಲಾಗಿತ್ತು.
ಪಟ್ಚಣದ ಕಾಂಗ್ರೇಸ್ ಕಛೇರಿಯಿಂದ ಮೆರವಣಿಗೆ ಬಂದ ಯುತ್ ಕಾಂಗ್ರೇಸ್ ಮುಖಂಡರು ಟಿ ಮರಿಯಪ್ಪ ವೃತ್ತದಲ್ಲಿ ನಿಂತು ಪ್ರತಿಭಟಿಸಿ ಇಡಿ ಮತ್ತು ಐಟಿ ಅಧಿಕಾರಿಗಳ ವಿರುದ್ದ ದಿಕ್ಕಾರ ಕೂಗಿದರು.
ಐಟಿ ಮತ್ತು ಇಡಿ ಅಧಿಕಾರಿಗಳ ಮೂಲಕ ಬಿಜೆಪಿ ನೀಚ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಗೂ ನಮ್ಮ ನಾಯಕರಾದ ಡಿಕೆ ಶಿವಕುಮಾರ್ ಬಿಜೆಪಿಯವರ ಷಡ್ಯಂತರಕ್ಕೆ ಕುಗ್ಗುವವರಲ್ಲ ಅವರಿಗೆ ಕೋರ್ಟ್ ನಲ್ಲಿ ನ್ಯಾಯ ಸಿಗಲಿದೆ ಶೀಘ್ರವೇ ಅವರನ್ನು ಬಿಡುಗಡೆ ಮಾಡದಿದ್ದರೆ ಉಗ್ರ ಪ್ರತಿಭಟೆ ಮಾಡುತ್ತೆವೆ ಎಂದು ಹೇಳಿದರು
ಪ್ರತಿಭಟನೆಯಲ್ಲಿ ಮುಖಂಡರಾದ ನಾಗನಹಳ್ಳಿ ರಾಜೇಶ್.ತುರಬನಹಳ್ಳಿ ರಾಜೇಗೌಡ.ಕೃಷ್ಣೇಗೌಡ.ರವಿಕಾಂತ. ವಸಂತ್ ಮರಿಸ್ವಾಮಿ,ಶರತ್,