ರಾಜ್ಯಸುದ್ದಿ
ಕೆ .ಆರ್.ಪೇಟೆ ಪಟ್ಟಣದ ಹಳೆ ಕಿಕ್ಕೆರಿ ರಸ್ತೆಯಲ್ಲಿರುವ ಬಜಾಜ್ ಬೈಕ್ ಷೊರೂಂ ನ ಬೀಗ ಮೂರಿದು ಕಳ್ಳತನ ಲಕ್ಷಾಂತರ ಹಣ ಕಳವು .
ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ಪಟ್ಟಣದ ಹೃದಯ ಭಾಗದಲ್ಲಿ ಇರುವ ಬಜಾಜ್ ಬೈಕ್ ಷೊರೂಂ ನ ಕಬ್ಬಿಣ ದ ರೋಲಿಂಗ್ ಸೆಟ್ಟರ್ ಮೂರಿದು ಲಕ್ಷಾಂತರ ರೂ ಹಣ ಕಳ್ಳತನ ಮಾಡಿರುವ ಘಟನೆ ನೆಡೆದಿದೆ .ಇದು ಪಟ್ಟಣದ ಮಧ್ಯಭಾಗದಲ್ಲಿ ಇದ್ದು ಪೊಲೀಸ್ ಅಧಿಕಾರಿಗಳು ರಾತ್ರಿ ಸಮಯದಲ್ಲಿ ಗಸ್ತು ತಿರುಗುತ್ತಿದ್ದರು ಈ ಘಟನೆ ನಡೆದಿರುವುದು ಸಾರ್ವಜನಿಕರಿಗೆ ಅಂತಕ ಮೂಡಿಸಿದೆ.ರೋಲಿಂಗ್ ಶೆಟರ್ ಅನ್ನು ಕಬ್ಬಿಣದ ಹಾರೆಯಿಂದ ಎತ್ತಿ ಒಳಕ್ಕೆ ನುಗ್ಗಿ ಕಳ್ಳತನ ಮಾಡಿರುವ ಕಿಡಿಗೇಡಿಗಳು.ಪಟ್ಟಣ ಪೋಲಿಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಹೆಚ್.ಎಸ್.ವೆಂಕಟೇಶ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ.
ರಂಗನಾಥಪುರ ಗೇಟ್ ಬಳಿ ನಿಯಂತ್ರಣಾ ತಪ್ಪಿ ಬೈಕಿನಿಂದ ಬಿದ್ದು ಲೈನ್ ಮ್ಯಾನ್ ಅಭಿಷೇಕ್(25) ಸ್ಥಳದಲ್ಲೇ ಸಾವು.
ಮಂಡ್ಯ: ಕೃಷ್ಣರಾಜಪೇಟೆ ತಾಲ್ಲೂಕು ಬೂಕನಕೆರೆ ಹೋಬಳಿ ರಂಗನಾಥಪುರ ಗೇಟ್ ನ ಬಳಿ ಬೈಕಿನಿಂದ ಆಯತಪ್ಪಿಬಿದ್ದು ಸೆಸ್ಕ್ ಲೈನ್ ಮ್ಯಾನ್ ಸ್ಥಳದಲ್ಲಿಯೇ ಸಾವು.ಶೀಳನೆರೆ ಸೆಕ್ಷನ್ ಜೂನಿಯರ್ ಲೈನ್ ಮೈನ್ ಕೆಲಸ ಮಾಡುತ್ತಿರುವ ಅಭಿಷೇಕ್(25) ಮೃತ ದುರ್ದೈವಿಯಾಗಿದ್ದಾನೆ.ಬೂಕನಕೆರೆ ಗ್ರಾಮದ ನಿವಾಸಿಯಾಗಿರುವ ಅಭಿಷೇಕ್ ಕೆ.ಆರ್.ಪೇಟೆ ಪಟ್ಟಣದಲ್ಲಿ ಸ್ನೇಹಿತನ ಮದುವೆ ರಿಸೆಪ್ಷನ್ ಮುಗಿಸಿಕೊಂಡು ಬರುವಾಗ ರಂಗನಾಥಪುರ ಗೇಟಿನಲ್ಲಿರುವ ರಸ್ತೆ ಉಬ್ಬಿನ ಬಳಿ ಬೈಕಿನಿಂದ ಆಯತಪ್ಪಿ ಕೆಳಗೆ ಬಿದ್ದು ಸಾವಿಗೆ ಶರಣಾಗಿದ್ದಾರೆ. ಗ್ರಾಮಾಂತರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಕೆ.ಎನ್.ಗಿರೀಶ್ ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿದ್ದು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಮೃತನ ಬಂಧುಗಳ ಆಕ್ರಂದನವು ಮುಗಿಲು ಮುಟ್ಟಿತ್ತು.
.ದಿನೆ ದಿನೆ ಹೇಚ್ಚುತ್ತಿರುವ ವರದಿಗಾರ ಮೇಲೆ ಹಲ್ಲೆ ,ಖಾಸಗಿ ವಾಹಿನಿ(TV5) ಕ್ಯಾಮರಾಮನ್ ಸುರೇಶ ಚಿನಗುಂಡಿ ಮೇಲೆ ಪೊಲೀಸರ ದರ್ಪ ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ.
ವಿಜಯಪುರ: ನಗರದ ಭೂತನಾಳ ಕೆರೆ ರಸ್ತೆಯಲ್ಲಿ ನಾಲ್ವರು ಪೊಲೀಸ್ ಪೇದೆಗಳು ಖಾಸಗಿ ವಾಹಿನಿ(TV5) ಕ್ಯಾಮರಾಮನ್ ಸುರೇಶ ಚಿನಗುಂಡಿ ಮೇಲೆ ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.ಭೂತನಾಳ ರಸ್ತೆಯಲ್ಲಿ ಮನೆಯಿಂದ ಕಚೇರಿಗೆ ತೆರಳುತ್ತಿದ್ದ ವೇಳೆ ಕ್ಯಾಮರಾಮನ್ ಇಕ್ಕಟ್ಟಾದ ರಸ್ತೆಯಲ್ಲಿ ಬೈಕ್ ಮೇಲೆ ತೆರಳುತ್ತಿದ್ದಾಗ ಐ.ಆರ್.ಬಿ ವ್ಯಾನ್ ಮೈಮೇಲೆ ಹತ್ತಿಸಲು ಯತ್ನಿಸಿದ ಚಾಲಕ,ಈ ಕುರಿತು ಪ್ರಶ್ನಿಸಿದ ಸುರೇಶ ಮೇಲೆ ನಾಲ್ವರು ಪೊಲೀಸ್ ಪೇದೆಗಳು ಐ.ಆರ್.ಬಿ ವ್ಯಾನ್ನೊಳಗೆ ಎಳೆದೊಯ್ದು ಹಲ್ಲೆ ನಡೆಸಿ ದರ್ಪ ತೋರಿದ ಪೊಲೀಸರು.ಮುಖಕ್ಕೆ ಹಾಗೂ ಬೆನ್ನಿನ ಮೇಲೆ ಹಲ್ಲೆ, ಮೂಗಿನಿಂದ ರಕ್ತಸ್ರಾವ ಗಾಯಗೊಂಡ ಕ್ಯಾಮರಾಮನ್ ಗೆ ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ.ವಿಜಯಪುರ ಗ್ರಾಮೀಣ ಠಾಣೆ ವ್ಯಾಪ್ತಿ ಘಟನೆ.
130 ಚಂದ್ರಿಕೆಯಲ್ಲಿ ಬೆಳೆದ ರೇಷ್ಮೆಗೂಡುನ್ನು ಮಾರಿ ಕೊಡುಗು ಹಾಗೂ ಕೇರಳದಜನತಯೆ ಮುಖ್ಯ ಮಂತ್ರಿ ಪರಿಹಾರ ನಿಧಿ 28860ರೂ ನೀಡದ ಮಳವಳ್ಳಿ ರೈತ ಹೆಚ್ ಬಸವರಾಜು.
ಮಳವಳ್ಳಿ: ತಾನು ಕಷ್ಟಪಟ್ಟು ಬೆಳೆದ ರೇಷ್ಮೆಗೂಡುನ್ನು ಮಾರಿ ಮಹಾಮಳೆಯಿಂದ ಕಂಗಾಲಾಗಿ ನಿರಾಶ್ರಿತರರಾಗಿರುವ ಕೊಡುಗು ಹಾಗೂ ಕೇರಳದಜನತಯೆ ಮುಖ್ಯ ಮಂತ್ರಿ ಪರಿಹಾರ ನಿಧಿಗಾಗಿ ರೈತನೊಬ್ಬ ತಹಸೀಲ್ದಾರ್ ಮೂಲಕ ಡಿಡಿ ನೀಡಿ ಮಾನವೀಯತೆ ಮೆರೆದರು .ಕಳೆದ ಒಂದು ವಾರದ ಹಿಂದೆ ಮಳವಳ್ಳಿಪಟ್ಟಣದ ಪೇಟೆ ಬೀದಿ ಹೆಚ್.ಬಸವರಾಜು ರವರು 130 ಚಂದ್ರಿಕೆಯಲ್ಲಿ ಬೆಳೆದ ರೇಷ್ಮೆಗೂಡುನ್ನು ನೆರೆಪರಿಹಾರ ನೀಡಲಾಗುವುದು ಎಂದು ಘೋಷಣೆ ಮಾಡಿದ್ದರು. ಇಂದು ಕೊಡುಗು ನಿರಾಶ್ರಿತರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಗಳ ಮೂಲಕ 28860ರೂ ಗಳನ್ನು ಹಾಗೂ ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿ 2000 ರೂ ಡಿಡಿ ಯನ್ನು ತಹಸೀಲ್ದಾರ್ ದಿನೇಶ್ ಚಂದ್ರರವರ ಮೂಲಕ ನೀಡಲಾಯಿತು.
ಈ ಸಂದರ್ಭದಲ್ಲಿ ಮಹದೇವ,ಮಧು, ನಾಗರಾಜು, ಸೇರಿದಂತೆ ಮತ್ತಿತರರು ಇದ್ದರು.
ಕೆ.ಆರ್.ಪೇಟೆ ಮತ್ತು ಹೊಸಹೊಳಲು ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿಗೆ ಹೆದರಿದ ಜನಸಾಮಾನ್ಯರ.ಕೂಡಲೇ ನಾಯಿಗಳನ್ನು ಹಿಡಿಯದ್ದಿದರೆ ಉಗ್ರವಾಗಿ ಪ್ರತಿಭಟನೆಯ ಎಚ್ಚರಿಕೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಹಾಗೂ ಹೊಸಹೊಳಲು ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿ ಹೊಸಹೊಳಲು ಗ್ರಾಮದ ಪಿಗ್ಮಿ ಕಲೆಕ್ಟರ್ ರಾಜು ಅವರ ಪುತ್ರನಿಗೆ, ಹೂವು ಮಾರುವ ಕಮಲಮ್ಮಗೆ, ಧನಂಜಯ ಹಾಗೂ ರಾಮಯ್ಯ ಎಂಬುವವರಿಗೆ ನಾಯಿ ಕಡಿದ ಪರಿಣಾಮವಾಗಿ ಕೂಡಲೇ ನಾಯಿಗಳನ್ನು ಹಿಡಿದು ಮಕ್ಕಳನ್ನು ರಕ್ಷಣೆ ಮಾಡುವಂತೆ ರಾಜು ಮತ್ತು ಗೆಳೆಯರು ಆಗ್ರಹಿಸಿ ಪುರಸಭೆಯ ಮುಂದೆ ಪ್ರತಿಭಟನೆ ಮಾಡಿದರು. ಕೂಡಲೇ ನಾಯಿಗಳನ್ನು ಹಿಡಿಯದ್ದಿದರೆ ಉಗ್ರವಾಗಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು .ಕೂಡಲೇ ನಾಯಿಗಳನ್ನು ಹಿಡಿದು ಸಾರ್ವಜನಿಕರನ್ನು ರಕ್ಷಿಸುವಂತೆ ಪುರಸಭೆ ಸದಸ್ಯ ಹೆಚ್.ಆರ್.ಲೋಕೇಶ್ ಆಗ್ರಹಿಸಿದ್ದಾರೆ.
ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ಶ್ರೀ ಆಭಯ ಆಂಜನೇಯ ಸ್ವಾಮಿ ಗೆಳೆಯರ ಬಳಗದ ವತಿಯಿಂದ ದೇಣಿಗೆ ಸಂಗ್ರಹ.
ತುಮಕೂರು: ಕೊಡಗು ನೆರೆ ಸಂತ್ರಸ್ತರಿಗೆ ತುಮಕೂರು ಜಿಲ್ಲೆಯ ಚಿಕ್ಕಸೀಬಿ ಗ್ರಾಮದಯುವಕರು ಮತ್ತು ಶ್ರೀ ಅಭಯ ಆಂಜನೇಯ ಸ್ವಾಮಿ ಗೆಳೆಯರ ಬಳಗದ ವತಿಯಿಂದ ದೇಣಿಗೆ ಸಂಗ್ರಹಿಸಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಸುದೀಪ್ ಮತ್ತು ಅವರ ಸ್ನೇಹಿತರ ಪಾಲ್ಗೊಂಡ ಸಂತ್ರಸ್ತರಿಗೆ ಸಹಾಯ ಮಾಡಿದರು.
ಮಳವಳ್ಳಿ ಸಾರ್ವಜನಿಕ ಶೌಚಾಲಯ ಉದ್ಘಾಟನಾ ನಾಮಪಲಕ್ಕೆ ಮಾಜಿ ಶಾಸಕ ನರೇಂದ್ರಸ್ವಾಮಿರವರ ಹೆಸರು ಕೈ ಬಿಟ್ಟಿದ್ದಾರೆ ಎಂದು ಮಳವಳ್ಳಿ ಬ್ಲಾಕ್ ಕಾಂಗ್ರೆಸ್ ಆರೋಪ.
ಮಳವಳ್ಳಿ: ಶಂಕುಸ್ಥಾಪನೆ ನಾಮಪಲಕ ಹಾಕದೆ ಉದ್ಘಾಟನೆ ನಾಮಫಲಕ ಮಾತ್ರ ಹಾಕಿ ಮಾಜಿ ಶಾಸಕ ನರೇಂದ್ರಸ್ವಾಮಿರವರ ಹೆಸರನ್ನು ಕೈಬಿಟ್ಟು ಪುರಸಭೆ ಆಡಳಿತ ಸಾರ್ವಜನಿಕ ಶೌಚಾಲಯವನ್ನು ಉದ್ಘಾಟನೆ ಮಾಡಲು ತಂತ್ರ ನಡೆಸಿದ್ದಾರೆ ಎಂದು ಮಳವಳ್ಳಿ ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ.ಮಳವಳ್ಳಿಪಟ್ಟಣದ ಕೊಳ್ಳೇಗಾಲ ರಸ್ತೆಯಲ್ಲಿ 10 ಲಕ್ಷ ರೂ ವೆಚ್ಚದ ಸಾರ್ವಜನಿಕ ಶೌಚಾಲಯವನ್ನು ಈ ಹಿಂದೆ ಇದ್ದ ಶಾಸಕ ಪಿ. ಎಂ ನರೇಂದ್ರಸ್ವಾಮಿರವರಾಗಿದ್ದಾಗ. ಗುದ್ದಲಿಪೂಜೆ ನೇರವೆರಿಸಿದ್ದರು. ಇಂದು ಈಗಿನ ಶಾಸಕ ಡಾ.ಕೆ.ಅನ್ನದಾನಿರವರು ಉದ್ಘಾಟನೆ ಮಾಡುತ್ತಿದ್ದು, ಇದಕ್ಕೆ ಶಂಕುಸ್ಥಾಪನೆ ನಾಮಫಲಕವನ್ನು ಹಾಕದೆ ಉದ್ಘಾಟನೆ ಮಾಡಲು ಹೊರಟಿದ್ದು, ಇದನ್ನು ಕೆಲವು ಕಾಂಗ್ರೆಸ್ ಪಕ್ಷದ ಮುಖಂಡರು , ಪುರಸಭೆ ಸದಸ್ಯರು ವಿರೋಧ ವ್ಯಕ್ತಪಡಿಸಿದರು.ಯಾವುದೇ ಸರ್ಕಾರಿ ಕಟ್ಟಡದ ಉದ್ಘಾಟನೆ ಯಾದರೆ ಶಂಕುಸ್ಥಾಪನೆ ನಾಮಫಲಕ ಹಾಗೂ ಉದ್ಘಾಟನೆ ನಾಮಫಲಕ ಎರಡು ಇರುತ್ತದೆ. ಆದರೆ ಇಂದು ಉದ್ಘಾಟನೆ ಯಾಗುತ್ತಿರುವ ಸಾರ್ವಜನಿಕ ಶೌಚಾಲಯ ಕ್ಕೆ ಕೇವಲ ಉದ್ಘಾಟನೆ ನಾಮಫಲಕ ವನ್ನು ಮಾತ್ರ ಹಾಕಿ ಉದ್ಘಾಟನೆ ಮಾಡುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ ಒಂದು ವೇಳೆ ಶಂಕುಸ್ಥಾಪನೆ ನಾಮಫಲಕವನ್ನಯ ಹಾಕದೆ ಉದ್ಘಾಟನೆ ಮಾಡಿದರೆ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ. ಕೆ.ಜೆ ದೇವರಾಜು ತಿಳಿಸಿದರು. ಸರ್ಕಾರಿ ಕಾರ್ಯಕ್ರಮದಲ್ಲಿ ಪೋಟೊಕಾಲ್ ಪ್ರಕಾರ ಹಾಕದೆ ಶಾಸಕ ಡಾ.ಕೆ ಅನ್ನದಾನಿ ದುರಾಢಳಿತ ನಡೆಸುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿದ್ದರೂ ಈ ರೀತಿ ನಡೆದುಕೊಂಡಿರುವುದು ಅವರ ಘನತೆಗೆ ಗೌರವವಲ್ಲ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಅಂಬರೀಶ ಆರೋಪಿಸಿದರು. ಪುರಸಭೆ ಸಾಮಾನ್ಯ ಸಭೆಗೆ ತರದೆ ಏಕಾಏಕಿ ಶೇ 3 ರ ಅನುದಾನದಲ್ಲಿ ವಿಕಲಚೇತನರಿಗೆ ಸ್ಕೂಟರ್ ವಿತರಣೆ ಮಾಡಲು ಶಾಸಕರುಹಾಗೂ ಪುರಸಭೆ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು ಹೊರಟಿದ್ದಾರೆ ಇದು ಸರಿಯಲ್ಲ ಎಂದು ಪುರಸಭೆ ಸದಸ್ಯ ಕಿರಣ್ ಶಂಕರ್ ಆರೋಪಿಸಿದರು. ಸಭೆಯಲ್ಲಿ ಯಾವುದೇ ಪಟ್ಟಿ ಆಯ್ಕೆಯಾಗದೆ ಈ ರೀತಿ ವಿತರಣೆ ಮಾಡಿರುವ ಬಗ್ಗೆ ಈಗಾಗಲೇ ಸಂಬಂದಪಟ್ಟ ಪೌರಾಢಳಿತ ಇಲಾಖೆಗೆ ಹಾಗೂ ನ್ಯಾಯಾಲಯದಲ್ಲಿ ಮೊಕದ್ದಮೆ ಮೊರೆಹೋಗುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮಾರೇಹಳ್ಳಿ ಬಸವರಾಜು, ಕೃಷ್ಣಪ್ಪ ಸೇರಿದಂತೆ ಅನೇಕರು ಇದ್ದರು.
ಪ್ರೌಢಶಾಲಾ ಹೋಬಳಿ ಮಟ್ಟದ ಕ್ರೀಡಾ ಕೂಟದಲ್ಲಿ ಮಳವಳ್ಳಿ ಪಟ್ಟಣದ ಆದರ್ಶ ಪ್ರೌಢಶಾಲಾ ವಿದ್ಯಾರ್ಥಿಗಳು ಬಹುಪಾಲು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಮಳವಳ್ಳಿ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿ ನೆಡೆದ ಹೋಬಳಿ ಮಟ್ಟದ ಕ್ರೀಡಾ ಕೂಟ ತಾಲ್ಲೂಕಿನ ಎಲ್ಲಾ ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿಗಳಿಗೆ ಭಾಗಿಯಾಗಿದ್ದರು ಪ್ರೌಢಶಾಲಾ ಹೋಬಳಿ ಮಟ್ಟದ ಕ್ರೀಡಾ ಕೂಟದಲ್ಲಿ ಮಳವಳ್ಳಿ ಪಟ್ಟಣದ ಆದರ್ಶ ಪ್ರೌಢಶಾಲಾ ವಿದ್ಯಾರ್ಥಿಗಳು ಬಹುಪಾಲು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.10 ನೇ ತರಗತಿಯ. ತ್ರಿವಿಧ ಜಿಗಿತದಲ್ಲಿ ಕೆ. ಶಿವಕುಮಾರ. ಪ್ರಥಮ ಸ್ಥಾನ ಬಹುಮಾನ ಪಡೆದರೆ, 200 ಮೀಟರ್ ಎತ್ತರಜಿಗಿತದಲ್ಲಿ ಮಹಮ್ಮದ್ ಶೋಹಬ್ ಪ್ರಥಮಸ್ಥಾನ ಬಹುಮಾನ, 4# 100 ರಿಲೇ ತಂಡ ಮಹಮ್ಮದ್ ನಿಯಾಜ್, ಶಿವಕುಮಾರ್ .ಕೆ, ಶೋಹಿಬ್, ಶ್ರೀನಿವಾಸ್ ಪ್ರಥಮಸ್ಥಾನ, ನಡಿಗೆ ಓಟದಲ್ಲಿ ಡಿ.ರಘುರಾಜ್ (ಪ್ರಥಮ), ಉದ್ದಜಿಗಿತದಲ್ಲಿ ಶಿವಕುಮಾರ್ ಕೆ,(ಪ್ರಥಮಸ್ಥಾನ) ಎಸ್.ಎಲ್ ಶಶಾಂಕ್ ಚಕ್ರ ಎಸೆತದಲ್ಲಿ ದ್ವಿತೀಯ ಹಾಗೂ ಭರ್ಜಿ ಎಸೆತದಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದು, ಚೇತನ್ ಕುಮಾರ, ಉದ್ದಜಿಗಿತದಲ್ಲಿ ತೃತೀಯ ಸ್ಥಾನ ಡಿ.ಎಸ್ ಆನಂದ್ 400 ಮೀಟರ್ ಉದ್ದ ಜಿಗಿತದಲ್ಲಿ ತೃತೀಯ ಸ್ಥಾನ,, ಶ್ರೀನಿವಾಸ್ ತ್ರಿವಿಧ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದುಕೊಂಡು ಬಹುಮಾನಗಳ ಬಹುಪಾಲ ಆದರ್ಶ ಪ್ರೌಢಶಾಲಾ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ತಮ್ಮ ಶಾಲೆಗೆ ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳಿಗೆ ಆಡಳಿತಾಧಿಕಾರಿ ವೈ.ಎಸ್ ಚಲುವರಾಜು, ಮುಖ್ಯ ಶಿಕ್ಷಕ ರಮೀಜ್ ಪಾಷ, ದೈಹಿಕ ಶಿಕ್ಷಕ ಬಿ.ಶಿವಕುಮಾರ ಹಾಗೂ ಶಿಕ್ಷಕರು ಅಭಿನಂದಿಸಿದ್ದರು.