ಪ್ರೌಢಶಾಲಾ ಹೋಬಳಿ ಮಟ್ಟದ ಕ್ರೀಡಾ ಕೂಟದಲ್ಲಿ ಮಳವಳ್ಳಿ ಪಟ್ಟಣದ ಆದರ್ಶ ಪ್ರೌಢಶಾಲಾ ವಿದ್ಯಾರ್ಥಿಗಳು ಬಹುಪಾಲು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಮಳವಳ್ಳಿ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿ ನೆಡೆದ ಹೋಬಳಿ ಮಟ್ಟದ ಕ್ರೀಡಾ ಕೂಟ ತಾಲ್ಲೂಕಿನ ಎಲ್ಲಾ ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿಗಳಿಗೆ ಭಾಗಿಯಾಗಿದ್ದರು ಪ್ರೌಢಶಾಲಾ ಹೋಬಳಿ ಮಟ್ಟದ ಕ್ರೀಡಾ ಕೂಟದಲ್ಲಿ ಮಳವಳ್ಳಿ ಪಟ್ಟಣದ ಆದರ್ಶ ಪ್ರೌಢಶಾಲಾ ವಿದ್ಯಾರ್ಥಿಗಳು ಬಹುಪಾಲು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.10 ನೇ ತರಗತಿಯ. ತ್ರಿವಿಧ ಜಿಗಿತದಲ್ಲಿ ಕೆ. ಶಿವಕುಮಾರ. ಪ್ರಥಮ ಸ್ಥಾನ ಬಹುಮಾನ ಪಡೆದರೆ, 200 ಮೀಟರ್ ಎತ್ತರಜಿಗಿತದಲ್ಲಿ ಮಹಮ್ಮದ್ ಶೋಹಬ್ ಪ್ರಥಮಸ್ಥಾನ ಬಹುಮಾನ, 4# 100 ರಿಲೇ ತಂಡ ಮಹಮ್ಮದ್ ನಿಯಾಜ್, ಶಿವಕುಮಾರ್ .ಕೆ, ಶೋಹಿಬ್, ಶ್ರೀನಿವಾಸ್ ಪ್ರಥಮಸ್ಥಾನ, ನಡಿಗೆ ಓಟದಲ್ಲಿ ಡಿ.ರಘುರಾಜ್ (ಪ್ರಥಮ), ಉದ್ದಜಿಗಿತದಲ್ಲಿ ಶಿವಕುಮಾರ್ ಕೆ,(ಪ್ರಥಮಸ್ಥಾನ) ಎಸ್.ಎಲ್ ಶಶಾಂಕ್ ಚಕ್ರ ಎಸೆತದಲ್ಲಿ ದ್ವಿತೀಯ ಹಾಗೂ ಭರ್ಜಿ ಎಸೆತದಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದು, ಚೇತನ್ ಕುಮಾರ, ಉದ್ದಜಿಗಿತದಲ್ಲಿ ತೃತೀಯ ಸ್ಥಾನ ಡಿ.ಎಸ್ ಆನಂದ್ 400 ಮೀಟರ್ ಉದ್ದ ಜಿಗಿತದಲ್ಲಿ ತೃತೀಯ ಸ್ಥಾನ,, ಶ್ರೀನಿವಾಸ್ ತ್ರಿವಿಧ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದುಕೊಂಡು ಬಹುಮಾನಗಳ ಬಹುಪಾಲ ಆದರ್ಶ ಪ್ರೌಢಶಾಲಾ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ತಮ್ಮ ಶಾಲೆಗೆ ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳಿಗೆ ಆಡಳಿತಾಧಿಕಾರಿ ವೈ.ಎಸ್ ಚಲುವರಾಜು, ಮುಖ್ಯ ಶಿಕ್ಷಕ ರಮೀಜ್ ಪಾಷ, ದೈಹಿಕ ಶಿಕ್ಷಕ ಬಿ.ಶಿವಕುಮಾರ ಹಾಗೂ ಶಿಕ್ಷಕರು ಅಭಿನಂದಿಸಿದ್ದರು.