ಶೌಚಾಲಯ ಉದ್ಘಾಟನಾ ನಾಮಪಲಕಕ್ಕೆ ಮಾಜಿ ಶಾಸಕ ನರೇಂದ್ರಸ್ವಾಮಿರವರ ಹೆಸರು ಕೈ ಬಿಟ್ಟಿದ್ದಾರೆ ಎಂದು ಮಳವಳ್ಳಿ ಬ್ಲಾಕ್ ಕಾಂಗ್ರೆಸ್‌ ಆರೋಪ.

 ಮಳವಳ್ಳಿ ಸಾರ್ವಜನಿಕ ಶೌಚಾಲಯ ಉದ್ಘಾಟನಾ ನಾಮಪಲಕ್ಕೆ ಮಾಜಿ ಶಾಸಕ ನರೇಂದ್ರಸ್ವಾಮಿರವರ ಹೆಸರು ಕೈ ಬಿಟ್ಟಿದ್ದಾರೆ ಎಂದು ಮಳವಳ್ಳಿ ಬ್ಲಾಕ್ ಕಾಂಗ್ರೆಸ್‌ ಆರೋಪ.

ಮಳವಳ್ಳಿ:  ಶಂಕುಸ್ಥಾಪನೆ ನಾಮಪಲಕ ಹಾಕದೆ  ಉದ್ಘಾಟನೆ ನಾಮಫಲಕ ಮಾತ್ರ ಹಾಕಿ  ಮಾಜಿ ಶಾಸಕ ನರೇಂದ್ರಸ್ವಾಮಿರವರ ಹೆಸರನ್ನು  ಕೈಬಿಟ್ಟು   ಪುರಸಭೆ ಆಡಳಿತ ಸಾರ್ವಜನಿಕ ಶೌಚಾಲಯವನ್ನು ಉದ್ಘಾಟನೆ ಮಾಡಲು ತಂತ್ರ ನಡೆಸಿದ್ದಾರೆ ಎಂದು ಮಳವಳ್ಳಿ  ಬ್ಲಾಕ್ ಕಾಂಗ್ರೆಸ್‌  ಆರೋಪಿಸಿದೆ.ಮಳವಳ್ಳಿಪಟ್ಟಣದ ಕೊಳ್ಳೇಗಾಲ ರಸ್ತೆಯಲ್ಲಿ  10 ಲಕ್ಷ ರೂ ವೆಚ್ಚದ  ಸಾರ್ವಜನಿಕ ಶೌಚಾಲಯವನ್ನು  ಈ ಹಿಂದೆ ಇದ್ದ ಶಾಸಕ ಪಿ. ಎಂ ನರೇಂದ್ರಸ್ವಾಮಿರವರಾಗಿದ್ದಾಗ. ಗುದ್ದಲಿಪೂಜೆ  ನೇರವೆರಿಸಿದ್ದರು.  ಇಂದು  ಈಗಿನ ಶಾಸಕ  ಡಾ.ಕೆ.ಅನ್ನದಾನಿರವರು ಉದ್ಘಾಟನೆ ಮಾಡುತ್ತಿದ್ದು, ಇದಕ್ಕೆ ಶಂಕುಸ್ಥಾಪನೆ ನಾಮಫಲಕವನ್ನು ಹಾಕದೆ  ಉದ್ಘಾಟನೆ ಮಾಡಲು ಹೊರಟಿದ್ದು, ಇದನ್ನು ಕೆಲವು ಕಾಂಗ್ರೆಸ್ ಪಕ್ಷದ ಮುಖಂಡರು , ಪುರಸಭೆ ಸದಸ್ಯರು ವಿರೋಧ ವ್ಯಕ್ತಪಡಿಸಿದರು.ಯಾವುದೇ ಸರ್ಕಾರಿ ಕಟ್ಟಡದ ಉದ್ಘಾಟನೆ ಯಾದರೆ ಶಂಕುಸ್ಥಾಪನೆ ನಾಮಫಲಕ ಹಾಗೂ ಉದ್ಘಾಟನೆ ನಾಮಫಲಕ ಎರಡು ಇರುತ್ತದೆ. ಆದರೆ  ಇಂದು ಉದ್ಘಾಟನೆ ಯಾಗುತ್ತಿರುವ  ಸಾರ್ವಜನಿಕ ಶೌಚಾಲಯ ಕ್ಕೆ ಕೇವಲ ಉದ್ಘಾಟನೆ ನಾಮಫಲಕ ವನ್ನು ಮಾತ್ರ ಹಾಕಿ ಉದ್ಘಾಟನೆ ಮಾಡುವ ಬಗ್ಗೆ  ನಮ್ಮ ಗಮನಕ್ಕೆ ಬಂದಿದೆ ಒಂದು ವೇಳೆ  ಶಂಕುಸ್ಥಾಪನೆ ನಾಮಫಲಕವನ್ನಯ ಹಾಕದೆ  ಉದ್ಘಾಟನೆ ಮಾಡಿದರೆ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ. ಕೆ.ಜೆ ದೇವರಾಜು ತಿಳಿಸಿದರು.  ಸರ್ಕಾರಿ  ಕಾರ್ಯಕ್ರಮದಲ್ಲಿ  ಪೋಟೊಕಾಲ್ ಪ್ರಕಾರ ಹಾಕದೆ ಶಾಸಕ ಡಾ.ಕೆ ಅನ್ನದಾನಿ ದುರಾಢಳಿತ ನಡೆಸುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿದ್ದರೂ  ಈ ರೀತಿ ನಡೆದುಕೊಂಡಿರುವುದು ಅವರ ಘನತೆಗೆ ಗೌರವವಲ್ಲ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ  ಅಂಬರೀಶ ಆರೋಪಿಸಿದರು.   ಪುರಸಭೆ ಸಾಮಾನ್ಯ ಸಭೆಗೆ ತರದೆ ಏಕಾಏಕಿ ಶೇ 3 ರ ಅನುದಾನದಲ್ಲಿ ವಿಕಲಚೇತನರಿಗೆ ಸ್ಕೂಟರ್ ವಿತರಣೆ ಮಾಡಲು ಶಾಸಕರುಹಾಗೂ ಪುರಸಭೆ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು ಹೊರಟಿದ್ದಾರೆ ಇದು ಸರಿಯಲ್ಲ  ಎಂದು ಪುರಸಭೆ ಸದಸ್ಯ ಕಿರಣ್ ಶಂಕರ್ ಆರೋಪಿಸಿದರು. ಸಭೆಯಲ್ಲಿ ಯಾವುದೇ ಪಟ್ಟಿ ಆಯ್ಕೆಯಾಗದೆ ಈ ರೀತಿ  ವಿತರಣೆ ಮಾಡಿರುವ ಬಗ್ಗೆ ಈಗಾಗಲೇ  ಸಂಬಂದಪಟ್ಟ ಪೌರಾಢಳಿತ ಇಲಾಖೆಗೆ ಹಾಗೂ  ನ್ಯಾಯಾಲಯದಲ್ಲಿ ಮೊಕದ್ದಮೆ ಮೊರೆಹೋಗುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮಾರೇಹಳ್ಳಿ ಬಸವರಾಜು, ಕೃಷ್ಣಪ್ಪ ಸೇರಿದಂತೆ ಅನೇಕರು ಇದ್ದರು.

Share this article

About Author

Madhu
Leave a comment

Write your comments

Visitors Counter

285503
Today
Yesterday
This Week
This Month
Last Month
All days
488
219
1876
4945
3051
285503

Your IP: 18.217.178.138
2025-05-09 20:39

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles