ಯುವತಿಯೊಬ್ಬರನ್ನು ಕಿಡ್ನಾಪ್ ಮಾಡಿ, ಅತ್ಯಾಚಾರ ಎಸುಗಿ ವಾಪಸ್ ಕಳುಹಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಅನುವಿನಕೋಡಿ ಗ್ರಾಮದ ಸಂಜು, ಮಹೇಶ್ ಸೇರಿದಂತೆ ಇನ್ನಿಬ್ಬರ ಮೇಲೆ ಪ್ರಕರಣ ದಾಖಲಾಗಿದೆ
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ. ತಾಲೂಕಿನ ಯುವತಿ ತಮ್ಮ ಗ್ರಾಮದಿಂದ ಪಟ್ಟಣಕ್ಕೆ ಬರಲು ಕಳೆದ ಮಂಗಳವಾರ ಗ್ರಾಮದ ಸಮೀಪದಲ್ಲಿರುವ ಗೇಟ್ ಬಳಿ ಬಸ್ಸಿಗೆ ಕಾಯುತ್ತಿರುವಾಗ, ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ಬಾಯಿಗೆ ಬಟ್ಟೆ ತುರುಕಿ ಪಾಂಡವಪುರದ ತನಕ ಕರೆದೊಯ್ದಿದ್ದಾರೆ. ಅಲ್ಲಿಂದ ಮಂಡ್ಯಕ್ಕೆ ಬಸ್ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಸಂಜು ಮತ್ತು ಮಹೇಶ್ ಕಾರಿನಲ್ಲಿ ಕರೆದುಕೊಂಡು ಬೆಂಗಳೂರಿನ ಕೆಂಗೇರಿಯ ರೂಮ್ ಒಂದರಲ್ಲಿ ಕೂಡಿ ಹಾಕಿ, ಸಂಜು ಎಂಬುವರ ಅತ್ಯಾಚಾರ ಎಸಗಿ ಕೆ.ಆರ್.ನಗರದ ಸಂಬಂಧಿಕರ ಮನೆಗೆ ಬಿಟ್ಟು ಹೋಗಿದ್ದಾರೆ ಎಂದು ಯುವತಿ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದಲ್ಲದೆ, ಮಗಳು ಕಾಣುತ್ತಿಲ್ಲ ಎಂದು ಕಿಡ್ನಾಪ್ ಆದ ದಿನ ಪೋಷಕರು ಮಿಸ್ಸಿಂಗ್ ದೂರನ್ನು ನೀಡಿದ್ದರು. ಈ ಸಂಬಂಧ ಎರಡು ಪ್ರಕರಣಗಳು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಿಡ್ನಾಪ್ ಮಾಡಿ ಅತ್ಯಾಚಾರ ಎಸಗಿರುವ ಪ್ರಕರಣದ ತನಿಖೆಯನ್ನು ಸರ್ಕಲ್ ಇನ್ಸ್ಪೆಕ್ಟರ್ ವೆಂಕಟೇಶಯ್ಯ ನಡೆಸುತ್ತಿದ್ದು, ಸಂಜು, ಮಹೇಶ್ ಸೇರಿದಂತೆ ಪ್ರಕರಣಕ್ಕೆ ಸಹಕರಿಸಿದ ಹಲವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.