130 ಚಂದ್ರಿಕೆಯಲ್ಲಿ ಬೆಳೆದ ರೇಷ್ಮೆಗೂಡುನ್ನು ಮಾರಿ ಕೊಡುಗು ಹಾಗೂ ಕೇರಳದಜನತಯೆ ಮುಖ್ಯ ಮಂತ್ರಿ ಪರಿಹಾರ ನಿಧಿ 28860ರೂ ನೀಡದ ಮಳವಳ್ಳಿ ರೈತ ಹೆಚ್ ಬಸವರಾಜು.
ಮಳವಳ್ಳಿ: ತಾನು ಕಷ್ಟಪಟ್ಟು ಬೆಳೆದ ರೇಷ್ಮೆಗೂಡುನ್ನು ಮಾರಿ ಮಹಾಮಳೆಯಿಂದ ಕಂಗಾಲಾಗಿ ನಿರಾಶ್ರಿತರರಾಗಿರುವ ಕೊಡುಗು ಹಾಗೂ ಕೇರಳದಜನತಯೆ ಮುಖ್ಯ ಮಂತ್ರಿ ಪರಿಹಾರ ನಿಧಿಗಾಗಿ ರೈತನೊಬ್ಬ ತಹಸೀಲ್ದಾರ್ ಮೂಲಕ ಡಿಡಿ ನೀಡಿ ಮಾನವೀಯತೆ ಮೆರೆದರು .ಕಳೆದ ಒಂದು ವಾರದ ಹಿಂದೆ ಮಳವಳ್ಳಿಪಟ್ಟಣದ ಪೇಟೆ ಬೀದಿ ಹೆಚ್.ಬಸವರಾಜು ರವರು 130 ಚಂದ್ರಿಕೆಯಲ್ಲಿ ಬೆಳೆದ ರೇಷ್ಮೆಗೂಡುನ್ನು ನೆರೆಪರಿಹಾರ ನೀಡಲಾಗುವುದು ಎಂದು ಘೋಷಣೆ ಮಾಡಿದ್ದರು. ಇಂದು ಕೊಡುಗು ನಿರಾಶ್ರಿತರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಗಳ ಮೂಲಕ 28860ರೂ ಗಳನ್ನು ಹಾಗೂ ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿ 2000 ರೂ ಡಿಡಿ ಯನ್ನು ತಹಸೀಲ್ದಾರ್ ದಿನೇಶ್ ಚಂದ್ರರವರ ಮೂಲಕ ನೀಡಲಾಯಿತು.
ಈ ಸಂದರ್ಭದಲ್ಲಿ ಮಹದೇವ,ಮಧು, ನಾಗರಾಜು, ಸೇರಿದಂತೆ ಮತ್ತಿತರರು ಇದ್ದರು.