.ದಿನೆ ದಿನೆ ಹೇಚ್ಚುತ್ತಿರುವ ವರದಿಗಾರ ಮೇಲೆ ಹಲ್ಲೆ ,ಖಾಸಗಿ ವಾಹಿನಿ(TV5) ಕ್ಯಾಮರಾಮನ್ ಸುರೇಶ ಚಿನಗುಂಡಿ ಮೇಲೆ ಪೊಲೀಸರ ದರ್ಪ ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ.
ವಿಜಯಪುರ: ನಗರದ ಭೂತನಾಳ ಕೆರೆ ರಸ್ತೆಯಲ್ಲಿ ನಾಲ್ವರು ಪೊಲೀಸ್ ಪೇದೆಗಳು ಖಾಸಗಿ ವಾಹಿನಿ(TV5) ಕ್ಯಾಮರಾಮನ್ ಸುರೇಶ ಚಿನಗುಂಡಿ ಮೇಲೆ ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.ಭೂತನಾಳ ರಸ್ತೆಯಲ್ಲಿ ಮನೆಯಿಂದ ಕಚೇರಿಗೆ ತೆರಳುತ್ತಿದ್ದ ವೇಳೆ ಕ್ಯಾಮರಾಮನ್ ಇಕ್ಕಟ್ಟಾದ ರಸ್ತೆಯಲ್ಲಿ ಬೈಕ್ ಮೇಲೆ ತೆರಳುತ್ತಿದ್ದಾಗ ಐ.ಆರ್.ಬಿ ವ್ಯಾನ್ ಮೈಮೇಲೆ ಹತ್ತಿಸಲು ಯತ್ನಿಸಿದ ಚಾಲಕ,ಈ ಕುರಿತು ಪ್ರಶ್ನಿಸಿದ ಸುರೇಶ ಮೇಲೆ ನಾಲ್ವರು ಪೊಲೀಸ್ ಪೇದೆಗಳು ಐ.ಆರ್.ಬಿ ವ್ಯಾನ್ನೊಳಗೆ ಎಳೆದೊಯ್ದು ಹಲ್ಲೆ ನಡೆಸಿ ದರ್ಪ ತೋರಿದ ಪೊಲೀಸರು.ಮುಖಕ್ಕೆ ಹಾಗೂ ಬೆನ್ನಿನ ಮೇಲೆ ಹಲ್ಲೆ, ಮೂಗಿನಿಂದ ರಕ್ತಸ್ರಾವ ಗಾಯಗೊಂಡ ಕ್ಯಾಮರಾಮನ್ ಗೆ ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ.ವಿಜಯಪುರ ಗ್ರಾಮೀಣ ಠಾಣೆ ವ್ಯಾಪ್ತಿ ಘಟನೆ.