ರಾಜ್ಯಸುದ್ದಿ

Rate this item
(0 votes)

ರೈತ ತಾನು ಕಷ್ಟ ಪಟ್ಟು ಬೆಳೆದ ರೇಷ್ಮೆ ಬೆಳೆಯನ್ನು ಮಾರಿ ಕೊಡುಗು ಹಾಗೂ ಕೇರಳದ ಸಂತ್ರಸ್ತರಿಗೆ ಅರ್ಪಿಸಿ ಮಾನವೀಯತೆ ಮೇರೆದ ಮಂಡ್ಯದ ರೈತ.

ಮಳವಳ್ಳಿ  :ರಾಜ್ಯದಲ್ಲಿ  ಕಳೆದ. 4 ವರ್ಷದಿಂದಲೂ ಮಳೆ ಇಲ್ಲದೆ ರೈತರು ಕಂಗಾಲಾಗಿ  ಜೀವನ ನಡೆಸಲು ಸಂಕಷ್ಟದಲ್ಲಿದ್ದರೂ ಇಲ್ಲೊಬ್ಬ ರೈತ ತಾನು ಬೆಳೆದ ರೇಷ್ಮೆ ಬೆಳೆಯನ್ನು ಮಾರಿ ಕೊಡುಗು ಹಾಗೂ ಕೇರಳದ ಸಂತ್ರಸ್ತರಿಗೆ ಅರ್ಪಿಸಿ ಮಾನವೀಯತೆ ಮೆರೆದಿರುವ ಘಟನೆ ಮಳವಳ್ಳಿ ಪಟ್ಟಣದಲ್ಲಿ ನಡೆದಿದೆ. ಮಳವಳ್ಳಿ ಪಟ್ಟಣದ ಪೇಟೆ ನಿವಾಸಿ ಹೆಚ್. ಬಸವರಾಜು  ಎಂಬುವವರೆ  ಮಾನವೀಯತೆ ಮೆರೆದ ವ್ಯಕ್ತಿ, ಯಾಗಿದ್ದು,  ಆರು ತಿಂಗಳಿನಿಂದ  ಕಷ್ಟಪಟ್ಟು ಬೆಳೆದ  ಸುಮಾರು 130 ಕೆ.ಜಿ ಯಷ್ಟು ರೇಷ್ಮೆ ಬೆಳೆಯನ್ನು ಬಸವರಾಜು ರವರ ತೋಟದ ಮನೆಯಲ್ಲಿ  ಹರಾಜು ಮಾಡಲಾಗಿ ಕೆ.ಜಿ ಗೆ 302 ರೂ ರಂತೆ ಕೂಗಿದರು ಅದರಂತೆ  ಸುಮಾರು 30 ಸಾವಿರ ರೂ ರಷ್ಟು ಅಂದಾಜು ಮಾಡಲಾಗಿದೆ.

  ಇದೇ ಸಂದರ್ಭದಲ್ಲಿ  ರೈತ ಹೆಚ್. ಬಸವರಾಜು  ಮಾತನಾಡಿ,  ಮಂಡ್ಯ ಜಿಲ್ಲೆಯ ರೈತರಿಗೆ  ನೀರು ಪೂರೈಸುವ ಜಿಲ್ಲೆ ಕೊಡುಗು ಈಗ ಕೊಡಗಿನಲ್ಲಿ  ಮಳೆರಾಯನ ಅಟ್ಟಹಾಸಕ್ಕೆ ಅಲ್ಲಿನ ಜನ ಜೀವನ ಅಸ್ತವ್ಯಸ್ತ ವಾಗಿದ್ದು , ಅವರು ನಮ್ಮಂತೆಯೇ ಎಂದು ತಿಳಿದು ನಾನು ಅವರಿಗೆ ನನ್ನ ಕೈಯಲ್ಲಿ ಸಣ್ಣ ಕಿರುಸಹಾಯ ಮಾಡುತ್ತಿದ್ದೇನೆ. ಪ್ರತಿಯೊಬ್ವರು ಸಹ ಅಲ್ಲಿನ ಜನರು ನಮ್ಮವರು ಎಂದು ತಿಳಿದು ಸಹಾಯ ಮಾಡಿ  . ನಾಳೆ ಬೆಳಿಗ್ಗೆ  ತಹಸೀಲ್ದಾರ್ ಮೂಲಕ ಮುಖ್ಯ ಮಂತ್ರಿ  ಪರಿಹಾರ ನಿಧಿ ನೀಡುತ್ತೇವೆ ಎಂದರು. ಇದೇ ಸಂದರ್ಭದಲ್ಲಿ  ರೈತನ ಪತ್ನಿ  ಸುನೀತಾ ರವರು ಸಹ  ನನ್ನ ಗಂಡ ಇಂತಹ ಒಳ್ಳೆಯ ಕೆಲಸ ಮಾಡಿರುವುದಕ್ಕೆ ನನಗೂ ಸಂತೋಷವಾಗಿದೆ. ಎನ್ನುವ ಮೂಲಕ. ರೈತನಿಗೂ ಸಾಥ್ ನೀಡಿ ಮಾನವೀಯತೆ ಮೆರೆದಿದ್ದಾರೆ.

ಇದೇ ಸಂದರ್ಭದಲ್ಲಿ  ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ  ಪುಟ್ಟುಮಾದು, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ರವರು ರೈತ ಕುಟುಂಬಕ್ಕೆ  ಅಭಿನಂದನೆ ಸಲ್ಲಿಸಿದರು.

 

Rate this item
(0 votes)

ಕೆ ಶೆಟ್ಟಹಳ್ಳಿ ಅರಣ್ಯ ವಲಯದ ಬಳಿ ಕಬ್ಬಿನ ಟ್ರಾಕ್ಟರ್ ಗೆ ಕಾರು ಡಿಕ್ಕಿ-ಚಾಲಕ ಗಂಭೀರ ಗಾಯ...

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಶೆಟ್ಟಿಹಳ್ಳಿ ಅರಣ್ಯ ವಲಯದಲ್ಲಿ ಕಬ್ಬು ತುಂಬಿಕೊಂಡು ಸಾಗುತ್ತಿದ್ದ ಟ್ರಾಕ್ಟರ್ ಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿಯಾಗಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ನಡೆದಿದೆ. ಮೈಸೂರಿನ ಖಾಸಗಿ ಟ್ರಾವೆಲ್ಸ್ ಗೆ ಸೇರಿದ ಕಾರು ಇದಾಗಿದ್ದು, ಬೆಂಗಳೂರು ಕಡೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ.ಗಂಭೀರವಾಗಿ ಗಾಯಗೊಂಡಿರುವ ಕಾರಿನ ಚಾಲಕನನ್ನು ಮಂಡ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು,ಹಿಂಬದಿ ಕುಳಿತಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿರುವುದಾಗಿ ತಿಳಿದುಬಂದಿದೆ.

ಈ ಸಂಬಧ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Last modified on 25/08/2018
Rate this item
(0 votes)

ಮೂರು ಕಾಡಾನೆಗಳ ಹಿಂಡು ದಾಳಿಯಿಂದ ಭತ್ತದ ಗದ್ದೆ ನಾಶವಾಗಿರುವ  ಘಟನೆ ತಾಲ್ಲೂಕಿನ ಸೋಲಬ ಗ್ರಾಮದಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಸೋಲಬ ಗ್ರಾಮದಲ್ಲಿ ಮುನಿವೆಂಕಟಯ್ಯ ಎಂಬ ಬಡ ರೈತರ ಜಮೀನಿಗೆ  ಮೂರು ಕಾಡಾನೆಗಳ ಹಿಂಡುಗಳ ದಾಳಿಯಿಂದ ಭತ್ತದ ಗದ್ದೆ ನಾಶವಾಗಿರುವ  ಘಟನೆ ಸೋಲಬ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಮುನಿವೆಂಕಟಯ್ಯ ಎಂಬುವರಿಗೆ ಸೇರಿದ 7 ಗುಂಟೆ ಹಾಕಿದ ಭತ್ತದ ಗದ್ದೆ ನಾಶವಾಗಿದ್ದು , ಸುಮಾರು 30 ಸಾವಿರ ರೂ ನಷ್ಟವಾಗಿದ್ದು, ಮುನಿವೆಂಕಟಯ್ಯ ದೂರಿನ ಮೇರೆಗೆ  ಸ್ಥಳಕ್ಕೆ ಅರಣ್ಯಾಧಿಕಾರಿ ಪ್ರವೀಣ್ ಬೇಟಿ ಪರಿಶೀಲನೆ ನಡೆಸಿದ್ದರು.  ಈ ಕಾಡಾನೆಗಳು ಬಸವನಬೆಟ್ಟದ ಕಡೆಯಿಂದ ಬಂದಿದ್ದು  ಮೂರು ಕಾಡಾನೆಗಳಿದ್ದು ,   ಈಗಾಗಲೇ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಡಾನೆಗಳನ್ನು ಕಾಡಿಗೆ ಕಳುಹಿಸಲು ಹರಸಾಹಸ ಪಡುತ್ತಿದ್ದಾರೆ. ಇದಲ್ಲದೆ ಹಾನಿಗೊಳಗಾದ ರೈತ ಮುನಿವೆಂಕಟಯ್ಯ  ಕೂಡಲೇ ಬೆಳೆಹಾನಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇದಲ್ಲದೆ ಈ ಭಾಗದಲ್ಲಿ ಆಗಾಗ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ರೈತರು ಹಾಗೂ ಸಾರ್ವಜನಿಕರು ಆತಂಕಗೊಂಡಿದ್ದಾರೆ.

 

Rate this item
(0 votes)

ಕೆ.ಆರ್.ಪೇಟೆ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಗವಿ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಜನಪ್ರಸಿದ್ದ ಶ್ರೀ ಗವಿರಂಗನಾಥಸ್ವಾಮಿ ದೇವಾಲಯದಲ್ಲಿ ಕಳ್ಳರು ಕೈಚಳಕ ತೊರಿದ್ದರೆ ನಿನ್ನೆ ರಾತ್ರಿ ದೇವಾಲಯದ ಮುಂಭಾಗದಲ್ಲಿ ಇರುವ ಬೃಹದಾಕಾರದ ಗಂಟೆಸೇರಿದಂತೆ ಹುಂಡಿಹಣವನ್ನು ಸಹ ದೊಚಿಹೊಗಿದ್ದರೆ ‌.ಈ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದು ಇಲಾಖೆ ದೇವಾಲಯದಿಂದ ಬರುತ್ತಿರುವ ಆದಾಯವನ್ನು ಮಾತ್ರವೇ ಪಡೆದು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಲು ವಿಫಲವಾಗಿದೆ ಎಂದು ಸ್ಥಳೀಯರು ಅಧಿಕಾರಿಗಳು ಮೇಲೆ ಕೆಂಡಕಾರಿದ್ದರೆ.

ಈ ದೇವಾಲಯ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು ಸ್ವಚ್ಛತೆ ಇಲ್ಲದೆ ನಾರುತ್ತಿದೆ ಇದು ರಂಗನಾಥಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಂದರು ಪಂಚಾಯತಿ ಅಧಿಕಾರಿಗಳು ನಮಗೂ ದೇವಾಲಯಕ್ಕೆ ಸಂಬಂಧವಿಲ್ಲ ಎಂಬಂತೆ ಮುಜರಾಯಿ ಇಲಾಖೆಯವರು ಅಭಿವೃದ್ಧಿ ಪಡಿಸಬೇಕು ಎಂದು ಕಥೆ ಹೇಳುತ್ತಾರೆ ಎಂದು ಗ್ರಾಮಸ್ಥರು ಮತ್ತು ಭಕ್ತರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.ಕಳ್ಳತನ ವಾಗಿ ಇಷ್ಟುವತ್ತು ಕಳೆದರು ಯಾವುದೇ ಪೋಲಿಸ್ ಅಧಿಕಾರಿಗಳು ಸಹ ಇನ್ನೂ ಬೇಟಿಕೊಟಿಲ್ಲ ಇದು ಪಟ್ಟಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನೆಡೆದಿರುವ ಘಟನೆ ಯಾಗಿದೆ.ಒಟ್ಟು ಎಂಟು ಬೃಹದಾಕಾರದ ಗಂಟೆಗಳು ಮತ್ತು ಹುಂಡಿಹಣದ  ಕಳ್ಳತನವಾಗಿದೆ.

 ಇವಾಗಲಾದರು ಅಭಿವೃದ್ಧಿ ಮಾಡತ್ತಾರ ಕಾದು ನೊಡಬೇಕಿದೆ.

Rate this item
(0 votes)

 ಆರ್​ಟಿಐ ಕಾರ್ಯಕರ್ತ ರವೀಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ ಹಿನ್ನಲೆ ಮಗನ ಬೀಗರ ಔತಣಕೂಟವನ್ನು ಸಚಿವ ಪುಟ್ಟರಾಜು‌ ರದ್ದುಪಡಿಸಿದ್ದಾರೆ ಎನ್ನಲಾಗುತ್ತಿದೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸರ್ಕಾರಿ ಕ್ರೀಡಾಂಗಣದಲ್ಲಿ ನೆಡೆಯಬೇಕಿದ್ದ ತನ್ನ ಮಗನ ಬೀಗರ ಔತಣಕೂಟವನ್ನು ರದ್ದುಗೊಳಿಸಿ ಸಂತ್ರಸ್ತರಿಗೆ ಪರಿಹಾರವಾಗಿ ನೀಡಿದ ಸಚಿವರು ಆರ್​ಟಿಐ ಕಾರ್ಯಕರ್ತ ರವೀಂದ್ರ ದೂರಿಗೆ ಹೆದರಿ ಕಾರ್ಯವನ್ನು ನಿಲ್ಲಿಸಿದರೆ ಎಂಬ ಅನುಮಾನ ವ್ಯಕ್ತವಾಗುತ್ತದೆ .

ಸ್ಥಳೀಯ ಸಂಸ್ಥೆ ಚುನಾವಣೆ ಹೊಸ್ತಿಲಲ್ಲಿ ಬಾಡೂಟ ಅಡುಗೆ ಮಾಡಿಸುತ್ತಿರುವುದಕ್ಕೆ ಆರ್​ಟಿಐ ಕಾರ್ಯಕರ್ತ ರವೀಂದ್ರ ದೂರು ನೀಡಿದ್ದರು. ಅಧಿಕಾರ ದುರ್ಬಳಕೆ ಮಾಡಿಕೊಂಡು ಚುನಾವಣೆಗಾಗಿ ಬಾಡೂಟ ಹಾಕಿಸುತ್ತಿರುವುದಾಗಿ ಅವರು ಆರೋಪಿಸಿದ್ದರು.

ಇದೇ ಭಾನುವಾರ ಪಾಂಡವಪುರ ಸರ್ಕಾರಿ ಕ್ರೀಡಾಂಗಣದಲ್ಲಿ ತನ್ನ ಮಗನ ಬೀಗರ ಔತಣಕೂಟವನ್ನು ಸಚಿವರು ಆಯೋಜಿಸಿದ್ದರು. ಈ ಎಲ್ಲಾ ಘಟನೆ ಹಿನ್ನೆಲೆ ಔತಣಕೂಟ ರದ್ದುಮಾಡಿ ಕೊಡಗು ಸಂತ್ರಸ್ತರ ನಿಧಿಗೆ ಬೀಗರ ಔತಣಕೂಟದ ಹಣ ನೀಡಿ ಸಚಿವರು ತಮ್ಮ ಜಾಣ್ಮೆ ಪ್ರದರ್ಶಿಸಿದ್ದಾರೆ ಎನ್ನಲಾಗ್ತಿದೆ.ಬೀಗರ ಔತಣಕೂಟಕ್ಕಾಗಿ ಕ್ರೀಡಾಂಗಣದಲ್ಲಿ ಮಾಡಲಾಗುತ್ತಿದ್ದ ಸಿದ್ಧತೆ ಕಾರ್ಯ ಸ್ಥಗಿತವಾಗಿದೆ. ಆದರೆ, ಇದಕ್ಕೂ ಮೊದಲು ಬೆಂಗಳೂರು ಅರಮನೆ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಬೀಗರ ಅದ್ಧೂರಿ ಔತಣಕೂಟಕ್ಕೆ ಗಣ್ಯರು, ಹಿತೈಷಿಗಳು ಆಗಮಿಸಿ ಶುಭ ಕೋರಿದ್ದರು.

Rate this item
(0 votes)

ಮಳವಳ್ಳಿಯ ಹೆಬ್ಬಕವಾಡಿ ಸುತ್ತಕಟ್ಟೆಯಲ್ಲಿ ಚಿರತೆ ಶವ ಪತ್ತೆ.ಈ ಚಿರತೆ ಶವ ಎಲ್ಲಿಂದ ಬಂತು ಎಂಬುದು ನಿಗೂಢವಾಗಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿಗೆ ಹಾದು ಬರುವ  ಕೆ.ಆರ್.ಎಸ್ ನ ನೀರಿನ ವಿಸಿ ನಾಲೆಯಲ್ಲಿ ಚಿರತೆ ಶವ ಹರಿದು ಬಂದಿದ್ದು. ಇದನ್ನು ನೋಡಲು ಸಾರ್ವಜನಿಕರು ಮುಗಿಬಿದ್ದ ದೃಶ್ಯ ಕಂಡುಬಂತು.  ಈಗಾಗಲೇ ಕೊಡುಗು ಜಿಲ್ಲೆ  ಮಳೆರಾಯ ಆರ್ಭಟ ಹೆಚ್ಚಾಗಿದ ಹಿನ್ನೆಲೆಯಲ್ಲಿ ಹಲವು ಅನುಮಾನ ಮೂಡಿದ್ದು, ಈ ಚಿರತೆ ಶವ ಎಲ್ಲಿಂದ ಬಂತು ಎಂಬುದು ನಿಗೂಢವಾಗಿದೆ. ಒಟ್ಟಿನಲ್ಲಿ  ಒಂದು ಕಾಡುಪ್ರಾಣಿ  ಬಲಿಯನ್ನು ಕಾವೇರಿ ನೀರು ತೆಗೆದುಕೊಂಡಿತೆ ಅಥವಾ ಜನರೇ ಸಾಯಿಸಿ ಹಾಕಿದರೆ ಇಲ್ಲ ನೀರು ಕುಡಿಯಲು ಬಂದು ಆಯತಪ್ಪಿ ನಾಲೆಗೆ ಬಿತ್ತೆ ಎಂಬ ಪ್ರಶ್ನೆಗೆ ಚಿರತೆ ಮರಣೋತ್ತರ ಪರೀಕ್ಷೆ ಯಿಂದಲೇ ತಿಳಿದುಬರಬೇಕಾಗಿದೆ.

ಶೇಡಬಾಳ ಗ್ರಾಮದ ತುಂಬ ಕೊಳಚೆ ನೀರು ,ಸಾಂಕ್ರಾಮಿಕ ರೋಗಗಳ ಭಯದಲ್ಲಿ ಜನರು ಕೊಳಚೆ ನೀರಿನಿಂದ ಜನರ‌ ಅಕ್ರೋಶ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಶೇಡಬಾಳ ಗ್ರಾಮದಲ್ಲಿ ಹಲವು ವರ್ಷಗಳಿಂದ ಕೊಳಚೆ ನೀರು ಸಂಗ್ರಹ ವಾಗಿದ್ದು ಇಲ್ಲಿಯ ಜನರಿಗೆ ಈ ಸ್ಥಳದಲ್ಲಿ ವಾಸಮಾಡಲು ತೀರಾ ತೊಂದರೆ ಉಂಟಾಗುತ್ತಿದ್ದು ಅದೇ ರೀತಿ ಈ ನಗರದ ಜನರಿಗೆ ಕಾಯಿಲೆಗಳು ಸಹ ಹೇಚ್ಚಾಗುತ್ತಿದ್ದು ಜನರು ಪರದಾಡುವಂತಾಗುತ್ತಿದೇ.ವಿಪರ್ಯಾಸವೆಂದರೆ ಇಲ್ಲಿಯ ಜನರಿಗೆ ದುಡಿದು ತಿನ್ನಬೇಕೆಂದರೆ ಕೆಲಸಗಳಿಲ್ಲ ತಮ್ಮ ಕುಟುಂಬ ನಡೇಸುವುದು ತೀರಾ ಕಷ್ಟವಾಗಿದ್ದು ಇಂತಹದರಲ್ಲಿ ಕೊಳಚೆ ನೀರಿನಿಂದ ಆಗುವ ಪರಿಣಾಮಕ್ಕೆ ಕಾಯಿಲೆಗಳು ಬಂದರೆ ಅಂತು ಮುಗಿದೇ ಹೋಯಿತು, ಜೀವ ಉಳಿಸಿಕೊಳ್ಳಲು ಹೋರಾಟ ಮಾಡಬೇಕು ! ಇಲ್ಲ ಅಂದರೆ ಸಾಲ ಸೂಲ ಮಾಡಿ ಜೀವ ರಕ್ಷಸಿಕೊಳಬೇಕು .ಅಷ್ಟೇ ಅಲ್ಲದೆ ಈ ಪಟ್ಟಣದಲ್ಲಿ ಸರಿಯಾದ ಆಸ್ಪತ್ರೆ ಇಲ್ಲದ ಕಾರಣ ನೆರೆಯ ಗ್ರಾಮಗಳಿಗೆ ತೆರಳಿ ಚಿಕಿತ್ಸೆ ಪಡೇಯುವ ಸಂಗತಿ ಉಂಟಾಗುತ್ತಿದೇ.ಈ ಎಲ್ಲಾ ವಿಷಯದ ಬಗ್ಗೆ ಪಟ್ಟಣ ಪಂಚಾಯತ್ ಗೆ ಹಾಗೂ ತಹಶಿಲ್ದಾರ ಹಾಗೂ ಶಾಸಕರಿಗೆ ಮಾಹಿತಿ ನೀಡಿದರು ಯಾರೊಬ್ಬರೂ ಇತ್ತಕಡೇ ಗಮನ ಹರಿಸುತ್ತಿಲ್ಲ ಎಂದು ಶೇಡಬಾಳ ಗ್ರಾಮದ ಜನರು ಆರೋಪ ಮಾಡಿದ್ದಾರೆ.

ಈ ಎಲ್ಲಾ ಸಮಸ್ಯಗಳಿಂದಾ ಯಾವಾಗ ಮುಕ್ತರಾಗುತ್ತೆವೇಂದು ಶೇಡಬಾಳ ಗ್ರಾಮದ ಗ್ರಾಮಸ್ಥರು ಬೇಸರಗೊಂಡಿದ್ದಾರೆ.

Rate this item
(0 votes)

ಮಳವಳ್ಳಿ ತಾಲ್ಲೂಕಿನಲ್ಲಿ ಕಾವೇರಿ ನದಿಯ ಪ್ರವಾಹದಿಂದ ನೂರಾರು ಎಕರೆ ಜಮೀನು ಮುಳುಗಡೆ ಸಂಕಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರಕ್ಕೆ ಒತ್ತಾಯಿಸಿ ಪ್ರಾಂತ ರೈತ ಸಂಘ ಹಾಗೂ ಗ್ರಾಮಸ್ಥರು ವತಿಯಿಂದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಕೆ.ಎಸ್.ಅರ್.ಟಿ.ಸಿ ನಿಲ್ದಾಣದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಘೋಷಣೆ ಕೂಗುತ್ತಾ ತಾಲ್ಲೂಕು ಕಚೇರಿಗೆ ಮುಂದೆ ಪ್ರತಿಭಟನೆ ನಡೆಸಿದರು. ಇದೇ ಸಂದರ್ಭದಲ್ಲಿ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ಎಲ್.ಭರತ ರಾಜ್ ಮಾತನಾಡಿ, ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು ಅದರ ಪ್ರವಾಹದಿಂದ ನೂರಾರು ಎಕರೆ ಭೂಮಿ ಮುಳಗಡೆಯಾಗಿದ್ದು ರೈತರ ಬೆಳೆಗಳು ಹಾಳಾಗಿದೆ ಅದರೆ ತಾಲ್ಲೂಕು ಆಡಳಿತ ಬಹಳ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.

ರಾಜ್ಯ ಮತ್ತು ನೆರೆ ರಾಜ್ಯಗಳಲ್ಲಿ ವಿಪರೀತ ಮಳೆ ಪರಿಣಾಮದಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು ಅದರ ಪ್ರವಾಹವು ನದಿಯಿಂದ ಕೆಲವು ಕಡೆ ಒಂದು ಕಿಲೊಮೀಟರ್ ಗಳವರೆಗೆ ಹುಲ್ಲಂಬಳ್ಳಿ.ಅಕ್ಕಮಲ್ಲಹುಂಡಿ .ಪೂರಿಗಾಲಿ.ಸೋಮನಹಳ್ಳಿ. ಬಿಳಿಜಗಲಿಮೊಳೆ.ಬೆಳಕವಾಡಿ ಜವನಗಳ್ಳಿಯ ರೈತರ ಭೂಮಿಯನ್ನ ಅವರಿಸಿಕೊಂಡು ರೈತರ ಬೆಳೆಗಳು ಮತ್ತು ನಾಟಿಗಾಗಿ ಭೂಮಿ ಅದಗೊಳಿಸಲು ಮಾಡಿರುವ ಹತ್ತಾರು ಸಾವಿರ ಹಣ ನಷ್ಟವಾಗಿದೆ ಕೆಲವು ಕಡೆ ಅರಿಸಿನ,ಮೆಕ್ಕೆಜೋಳ,ರಾಗಿ,ಭತ್ತದ ವಟ್ಟಲು,ನಾಟಿ ಮಾಡಿರುವ ಬೆಳೆ ಹಾಳಾಗಿದೆ .ತಾಲೂಕಿನ ದಂಡಾಧಿಕಾರಿಗಳು ಬೇಜವ್ದಾರಿಯಾಗಿ ವರ್ತಿಸುತ್ತಿದ್ದು ರೈತರ ಹಿತಕಾಯಲು ವಿಪಲವಾಗಿದ್ದಾರೆ ಅದ್ದರಿಂದ ಜಿಲ್ಲಾಧಿಕಾರಿ ಗಳು ತಕ್ಷಣ ಸ್ಪಂದಿಸಬೇಕು ರೈತರಿಗೆ ಆಗಿರುವ ನಷ್ಟವನ್ನು ವೈಜ್ಞಾನಿಕ ವಾಗಿ ಲೆಕ್ಕ ಹಾಕಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ರೈತ ಸಂಘದ ನಿಯೋಗವು ಪ್ರವಾಹ ಪೀಡಿತ ಸ್ಥಳಕ್ಕೆ ಭೇಟಿ ನೀಡಿ ರೈತರ ಅಭಿಪ್ರಾಯಗಳನ್ನು ಆಲಿಸಿದೆ ಎಂದರು. 

ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಲಿಂಗರಾಜುಮೂರ್ತಿ,ಶಂಕರ್ ನವೀನ್ ಅನಿಲ್.ರವಿ ಮಲ್ಲೇಶ್ ಕುರಿ ನಿಂಗಯ್ಯ ಕೆಂಪರಾಜು.ವೆಂಕಟೇಶ. ಮಹೇಶ್. ಮುಂತಾದವರು ಭಾಗವಹಿಸಿದ್ದರು.

Page 28 of 41

Visitors Counter

228979
Today
Yesterday
This Week
This Month
Last Month
All days
256
292
1733
5380
6704
228979

Your IP: 3.147.42.163
2024-05-18 21:25

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles