ಶೇಡಬಾಳ ಗ್ರಾಮದ ತುಂಬ ಕೊಳಚೆ ನೀರು ,ಸಾಂಕ್ರಾಮಿಕ ರೋಗಗಳ ಭಯದಲ್ಲಿ ಜನರು ಕೊಳಚೆ ನೀರಿನಿಂದ ಜನರ ಅಕ್ರೋಶ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಶೇಡಬಾಳ ಗ್ರಾಮದಲ್ಲಿ ಹಲವು ವರ್ಷಗಳಿಂದ ಕೊಳಚೆ ನೀರು ಸಂಗ್ರಹ ವಾಗಿದ್ದು ಇಲ್ಲಿಯ ಜನರಿಗೆ ಈ ಸ್ಥಳದಲ್ಲಿ ವಾಸಮಾಡಲು ತೀರಾ ತೊಂದರೆ ಉಂಟಾಗುತ್ತಿದ್ದು ಅದೇ ರೀತಿ ಈ ನಗರದ ಜನರಿಗೆ ಕಾಯಿಲೆಗಳು ಸಹ ಹೇಚ್ಚಾಗುತ್ತಿದ್ದು ಜನರು ಪರದಾಡುವಂತಾಗುತ್ತಿದೇ.ವಿಪರ್ಯಾಸವೆಂದರೆ ಇಲ್ಲಿಯ ಜನರಿಗೆ ದುಡಿದು ತಿನ್ನಬೇಕೆಂದರೆ ಕೆಲಸಗಳಿಲ್ಲ ತಮ್ಮ ಕುಟುಂಬ ನಡೇಸುವುದು ತೀರಾ ಕಷ್ಟವಾಗಿದ್ದು ಇಂತಹದರಲ್ಲಿ ಕೊಳಚೆ ನೀರಿನಿಂದ ಆಗುವ ಪರಿಣಾಮಕ್ಕೆ ಕಾಯಿಲೆಗಳು ಬಂದರೆ ಅಂತು ಮುಗಿದೇ ಹೋಯಿತು, ಜೀವ ಉಳಿಸಿಕೊಳ್ಳಲು ಹೋರಾಟ ಮಾಡಬೇಕು ! ಇಲ್ಲ ಅಂದರೆ ಸಾಲ ಸೂಲ ಮಾಡಿ ಜೀವ ರಕ್ಷಸಿಕೊಳಬೇಕು .ಅಷ್ಟೇ ಅಲ್ಲದೆ ಈ ಪಟ್ಟಣದಲ್ಲಿ ಸರಿಯಾದ ಆಸ್ಪತ್ರೆ ಇಲ್ಲದ ಕಾರಣ ನೆರೆಯ ಗ್ರಾಮಗಳಿಗೆ ತೆರಳಿ ಚಿಕಿತ್ಸೆ ಪಡೇಯುವ ಸಂಗತಿ ಉಂಟಾಗುತ್ತಿದೇ.ಈ ಎಲ್ಲಾ ವಿಷಯದ ಬಗ್ಗೆ ಪಟ್ಟಣ ಪಂಚಾಯತ್ ಗೆ ಹಾಗೂ ತಹಶಿಲ್ದಾರ ಹಾಗೂ ಶಾಸಕರಿಗೆ ಮಾಹಿತಿ ನೀಡಿದರು ಯಾರೊಬ್ಬರೂ ಇತ್ತಕಡೇ ಗಮನ ಹರಿಸುತ್ತಿಲ್ಲ ಎಂದು ಶೇಡಬಾಳ ಗ್ರಾಮದ ಜನರು ಆರೋಪ ಮಾಡಿದ್ದಾರೆ.
ಈ ಎಲ್ಲಾ ಸಮಸ್ಯಗಳಿಂದಾ ಯಾವಾಗ ಮುಕ್ತರಾಗುತ್ತೆವೇಂದು ಶೇಡಬಾಳ ಗ್ರಾಮದ ಗ್ರಾಮಸ್ಥರು ಬೇಸರಗೊಂಡಿದ್ದಾರೆ.