ರಾಜ್ಯಸುದ್ದಿ

Rate this item
(0 votes)

ದೇವರಾಜ್ ಅರಸು ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯ ಪರಿಕರಗಳನ್ನು ವಿತರಿಸದೇ ಶಾಸಕರು ಬಂದು ಫಲಾನುಭವಿಗಳಿಗೆ ವಿತರುಸುತ್ತಾರೆ ಎಂದು ಬಡ ರೈತರನ್ನು ಕಾಯುಸುತ್ತಿದ್ದಾರೆ

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಮೂರು ದಿನಗಳಿಂದ ಗಂಗಾ ಕಲ್ಯಾಣ ಯೋಜನೆಯ ಅಡಿಯ ಪರಿಕರಗಳನ್ನು ವಿತರಿಸದೆ ಪ್ರವಾಸಿ ಮಂದಿರದ ಬಳಿ ಕಾಯಿಸಿದ ಘಟನೆ ನಡೆಯಿತು.ಶಾಸಕರು ಬಂದು ಫಲಾನುಭವಿಗಳಿಗೆ ವಿತರುಸುತ್ತಾರೆ ಎಂದು ಬಡ ರೈತರನ್ನು ಬಕ ಪಕ್ಷಿಗಳು ರೀತಿ ಕಾಯುತ್ತಿದ್ದಾರೆ.

ಒಟ್ಟು 27ಜನ ಫಲಾನುಭವಿಗಳಿಗೆ ದೇವರಾಜ್ ಅರಸು ಅಭಿವೃದ್ಧಿ ನಿಗಮದಿಂದ ವಿತರಿಸಬೇಕಿದ್ದ ಪಂಪ್ ಸೆಟ್,ಕೇಬಲ್, ಪೈಪ್ ಮತ್ತು ಬೋರ್ಡ್ ಗಳನ್ನು ವಿತರುಸುತ್ತಾರೆ ಎಂದು ಒಟ್ಟು 27ಜನ ಫಲಾನುಭವಿಗಳು ಅವರ ವಸ್ತುಗಳನ್ನು ಕೊಂಡುಹೊಗಲು ಅಟೊ ,ಚಾಲಕರು ಸಹ ಮೂರು ದಿನಗಳಿಂದಲೂ ಕಾಯತ್ತಿದ್ದಾರೆ.

ಅಧಿಕಾರಿಗಳು ಫಲಾನುಭವಿಗಳ ಮನೆಗಳ ಬಳಿ ಇಳಿಸಬೇಕಿದ್ದ ವಸ್ತುಗಳನ್ನು ಪ್ರವಾಸಿ ಮಂದಿರದಲ್ಲಿ ಇಳಿಸಿ ಬಡ ರೈತರನ್ನು ಕಾಯುಸುತ್ತಿದ್ದಾರೆ.ಕೂಡಲೇ ವಿತರಿಸಬೇಕು ಎಂದು ಫಲಾನುಭವಿಗಳು ಅಧಿಕಾರಿಗಳು ವಿರುದ್ಧ ಗುಡುಗ್ಗಿದ್ದರೆ.

 

 

Last modified on 08/08/2018
Rate this item
(0 votes)

ಶಾಸಕ ಡಾ.ಕೆ ಅನ್ನದಾನಿರವರು ರಾಜಕೀಯ ಮಾಡದೆ ಅಭಿವೃದ್ಧಿ ಕೆಲಸವನ್ನು ಮಾಡಿ ಇಲ್ಲದಿದ್ದರೆ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಪಿಡಿಒಗಳು ರಾಜಕೀಯ ಮಾಡದೆ ಅಭಿವೃದ್ಧಿ ಕೆಲಸವನ್ನು ಮಾಡಿ ಇಲ್ಲದಿದ್ದರೆ ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕ ಡಾ.ಕೆ ಅನ್ನದಾನಿ ರವರು ಪಿಡಿಒಗಳಿಗೆ ಎಚ್ಚರಿಕೆ ನೀಡಿದರು. ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಡಾ.ಕೆ ಅನ್ನದಾನಿ ಅಧ್ಯಕ್ಷತೆಯಲ್ಲಿ ಪಿಡಿಒ ಗಳ ಸಭೆ ಕರೆದು ಮಾತನಾಡಿ , ಪ್ರತಿಯೊಂದು ಗ್ರಾಮದಲ್ಲೂ ಸ್ವಚ್ಚತೆ ಇಲ್ಲದೆ ಚರಂಡಿಗಳು ಗಬ್ಬುನಾರುತ್ತಿದೆ. ಏಕೆ ಉದಾಸೀನಾ ನಿಮಗೆ  ಇದು ಕೊನೆ ಎಚ್ಚರಿಕೆ ,ಇನ್ನೂ ಮುಂದೆ ಸಾರ್ವಜನಿಕ ರಿಂದ ಯಾವುದೇ ತೊಂದರೆಯಾದರೆ  ಕೂಡಲೇ ಕ್ರಮಕೈಗೊಳ್ಳುತ್ತೇನೆ , ಸಾರ್ವಜನಿಕರನ್ನು ಏಕೆ ಅಲೆಸುತ್ತೀರಾ, ನಿಮ್ಮ ಕೈಯಲ್ಲಿ ಕೆಲಸವಾಗಿದ್ದರೆ ಅದನ್ನು ತಿಳಿಸಿ, ಇನ್ನೂ ಮುಂದೆ ಈ ರೀತಿ ನಡೆಯಬಾರದು ಎಂದು ಎಚ್ಚರಿಸಿದರು. ನಿಮ್ಮ ಸಮಸ್ಯೆ ಇದ್ದರೆ ನನಗೆ ತಿಳಿಸಿ ಎಂದರು. ಇದಕ್ಕೂ ಉತ್ತರಿಸಿದ ಪಿಡಿಒ ಸಂಘದ ಅಧ್ಯಕ್ಷ  ರುದ್ರಯ್ಯ ಮಾತನಾಡಿ, ನಾವು ಚರಂಡಿಗಳ ಸ್ವಚ್ಚತಾ ಮಾಡಿಸುತ್ತಿದ್ದೇವೆ. ಇದಲ್ಲದೆ ಚರಂಡಿ ಮಾಡಲು ಸರಿಯಾಗಿ ಎಂ ಸೆಂಡ್  ಸರಜರಾಜುಯಾಗುತ್ತಿಲ್ಲ, ಎಂದು ದೂರಿದರು.

 ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯಾನಿರ್ವಾಹಣಾಧಿಕಾರಿ ಸತೀಸ್ ಹಾಗೂ ತಾಲ್ಲೂಕಿನ ಎಲ್ಲಾ ಪಂಚಾಯಿತಿ ಪಿಡಿಒಗಳು ಹಾಜರಿದ್ದರು

Rate this item
(0 votes)

  ದುಗ್ಗನಹಳ್ಳಿ ಗ್ರಾಮ ಸೇರಿದಂತೆ ಹಲವು ಹಳ್ಳಿಗಳ ಸಾರಿಗೆ ಸಂಪರ್ಕಕ್ಕೆ ಶಾಸಕ ಡಾ.ಕೆ ಅನ್ನದಾನಿರವರು ಚಾಲನೆ

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮಳವಳ್ಳಿ ತಾಲ್ಲೂಕಿನ ದುಗ್ಗನಹಳ್ಳಿ ಗ್ರಾಮ ಸೇರಿದಂತೆ ಹಲವು ಹಳ್ಳಿಗಳ ಸಾರಿಗೆ ಸಂಪರ್ಕಕ್ಕೆ ಶಾಸಕ ಡಾ.ಕೆ ಅನ್ನದಾನಿ ರವರು ಚಾಲನೆ ನೀಡಿ. ನಂತರ ಮಾತನಾಡಿ,  ಮುಖ್ಯಮಂತ್ರಿ ಕುಮಾರಸ್ವಾಮಿ ರವರು ನೇತೃತ್ವದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಬಸ್ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ , ಈಗಾಗಲೇ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ರವರ ಜೊತೆ ಚರ್ಚೆ ನಡೆಸಿದ್ದು, ಮಳವಳ್ಳಿ ತಾಲ್ಲೂಕು  ಹಿಂದುಳಿದ ತಾಲ್ಲೂಕು ಆದುದ್ದರಿಂದ  ಪ್ರತಿ ಹಳ್ಳಿಗೂ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ. ಮೊದಲ ಹಂತವಾಗಿ ಇಂದು ದುಗ್ಗನಹಳ್ಳಿ , ಹಂಚಿಪುರ, ಕೋರೆಗಾಲ, ಮಾರ್ಗವಾಗಿ ಬರಲಿದೆ, ನಂತರ ಹಂತ ಹಂತವಾಗಿ  ಕಲ್ಪಿಸಲಾಗುವುದು. ಸಾರಿಗೆ ಬಸ್ ಎಂದರೆ ನಮ್ಮ ಬಸ್ ಎಂದು ಸಾರ್ವಜನಿಕರು ತಿಳಿದುಕೊಂಡು  ಸಾರಿಗೆ ಈಗಾಗಲೇ 500 ಕೋಟಿ ನಷ್ಠದಲ್ಲಿದ್ದು  ಸಾರ್ವಜನಿಕರು ಸಹ ಸಾರಿಗೆ ಇಲಾಖೆಗೆ ಆದಾಯ ಬರುವ ನಿಟ್ಟಿನಲ್ಲಿ  ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.  ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆ ಡಿಪೋ ಮ್ಯಾನೇಜರ್ ಶಾಂತಕುಮಾರ್, ದುಗ್ಗನಹಳ್ಳಿನಾಗರಾಜು, ಹನುಮಂತ, ಸೇರಿದಂತೆ ಮತ್ತಿತ್ತರರು ಇದ್ದರು

 

Rate this item
(0 votes)

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಗಂಗಾಕಲ್ಯಾಣ ಫಲಾನುಭವಿಗಳಿಗೆ ಶಾಸಕ ನಾರಾಯಣಗೌಡ ಕೊಳವೆಬಾವಿ ಸಾಮಗ್ರಿಗಳನ್ನು ವಿತರಣೆ ಮಾಡಿದರು.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಗಂಗಾಕಲ್ಯಾಣ ಫಲಾನುಭವಿಗಳಿಗೆ ಶಾಸಕ ನಾರಾಯಣಗೌಡ ಕೊಳವೆಬಾವಿ ಸಾಮಗ್ರಿಗಳನ್ನು ವಿತರಣೆ ಮಾಡಿದರು.ಬಳಿಕ ಮಾತನಾಡಿದ ಅವರು ದಲಿತ ಬಂಧುಗಳು ಸರಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿಯ ದಿಕ್ಕಿನಲ್ಲಿ ಸಾಗಬೇಕು. ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸುವ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.


ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು, ಉಪಾಧ್ಯಕ್ಷೆ ಗಾಯಿತ್ರಿರೇವಣ್ಣ, ಜೆಡಿಎಸ್ ಮುಖಂಡರಾದ ಕೆಟಿ.ಗಂಗಾಧರ್, ಕೃಷ್ಣೇಗೌಡ, ಮರೀಗೌಡ, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಹೇಮಂತ್ ಕುಮಾರ್, ಉಪಾಧ್ಯಕ್ಷ ಹನುಮಂತು, ಜಿಲ್ಲಾ ಯುವ ಜೆಡಿಎಸ್ ಉಪಾಧ್ಯಕ್ಷ ಶ್ರೀಧರ್ ಸಿರಿವಂತ, ಬಂಡಿಹೊಳೆ ಕೃಷ್ಣಮೂರ್ತಿ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ಸಂಯೋಜಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Rate this item
(0 votes)

ಕೆ.ಆರ್.ಪೇಟೆ ತಾಲ್ಲೂಕಿನ ಗೊರವಿ ಗ್ರಾಮದಲ್ಲಿ ನೆನ್ನೆ ದಾಳಿಮಾಡಿದ ಚಿರತೆ ಇಂದು ಸಹ ಅದೆ ಹಸುವನ್ನು ಎಳೆದುಕೊಂಡು ಹೋಗಿ ತಿಂದ ಘಟನೆ ನೆಡದಿದೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಗೊರವಿ ಗ್ರಾಮದಲ್ಲಿ ಹಸುವಿನ ಮೇಲೆ ಚಿರತೆ ದಾಳಿ ಮಾಡಿ ಹಸುವನ್ನು ತಿಂದ ಘಟನೆ ನೆನ್ನೆ ನಡೆದಿತ್ತು. ಅದರೆ ರಾತ್ರಿ ಕೂಡಾ ಚಿರತೆ ಅಲ್ಲೆ ಇದ್ದ ಹಸುವಿನ ದೇಹವನ್ನು ಸ್ವಲ್ಪ ದೂರ ಎಳೆದುಕೊಂಡು ಹೋಗಿ ನಂತರ ತಿಂದಿದೆ.

ನೆನ್ನೆ ಸಂಜೆ ವರೆಗೂ ಅಲ್ಲೆ ಕಾದುಕುಳಿತ್ತಿದ್ದ ಗ್ರಾಮಸ್ಥರು ಅರಣ್ಯದಿಕಾರಿಗಳು ಬಾರದ ಹಿನ್ನೆಲೆ ಮನೆಗೆ ತೆರಳಿದರು. ನಂತರ ಬೆಳ್ಳಿಗೆ ನೋಡಿದರೆ ಮತ್ತೆ ಚಿರತೆ ಹಸುವಿನ ದೇಹವನ್ನು ಸ್ವಲ್ಪ ದೂರ ಎಳೆದುಕೊಂಡು ಹೊಗಿ ನಂತರ ಕತ್ತಿನ ಭಾಗವನ್ನು ತಿಂದು ಹಾಕಿದೆ ಇದರಿಂದ ಗ್ರಾಮಸ್ಥರಲ್ಲಿ ಮತ್ತಷ್ಟು ಭಯ ಮನೆಮಾಡಿದೆ.

ಕೇವಲ ಬಂದು ನೋಡಿಕೊಂಡು ಹೊದ ಅಧಿಕಾರಿಗಳು ಚಿರತೆ ಹಿಡಿಯುವ ಯಾವುದೇ ಬೋನ್ ಕೂಡಾ ಅಳವಡಿಸಿಲ್ಲ ಕೇಳಿದರೆ ನಾಳೆ ಅಳವಡಿಸುತ್ತೆವೆ ಎಂದು ಉತ್ತರ ನೀಡುತ್ತಾರೆ.ಅದರೆ ಇಂದು ಹಸುವಿಗೆ ಹಾದ ಪರಿಸ್ಥಿತಿ ನಾಳೆ ಯಾರಾದರೂ ಗ್ರಾಮಸ್ಥರ ಅಥವಾ ಮಕ್ಕಳ ಮೇಲೆ ಚಿರತೆ ಅಲ್ಲೆ ಮಾಡಿದ್ದಾರೆ ಎನು ಗತಿ ಎಂದು ಗ್ರಾಮಸ್ಥರ ಭಯ ವ್ಯಕ್ತಪಡಿಸಿದ್ದಾರೆ.

ಕೂಡಲೆ ಚಿರತೆಯನ್ನು ಸೆರೆಹಿಡಿಯದಿದ್ದರೆ ತಾಲ್ಲೂಕಿನ ಅರಣ್ಯ ಇಲಾಖೆಯ ಕಛೇರಿಗೆ ಮುತ್ತಿಗೆ ಹಾಕುತ್ತವೆ ಎಂದು ಅಧಿಕಾರಿಗಳು ಮೇಲೆ ಅಕ್ರೊಸ ವ್ಯಕ್ತಪಡಿಸಿದ್ದಾರೆ.ಅಧಿಕಾರಿಗಳು ಇತ್ತ ಗಮನಹರಿಸುತ್ತಾರಾ ಕಾದು ನೋಡಬೇಕಿದೆ‌.

Rate this item
(0 votes)

ಹುಲ್ಲು ತುಂಬಿದ ಲಾರಿ ಡಿಕ್ಕಿ ಹೊಡೆದು ಒಂದು ಗೂಡ್ಸ್ ಆಟೋ ಸೇರಿದಂತೆ ನಾಲ್ಕು ಬೈಕ್‌ಗಳು, ಒಂದು ಅಂಗಡಿ ಜಖಂ
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿ  ಹುಲ್ಲು ತುಂಬಿದ ಲಾರಿ ಡಿಕ್ಕಿ ಹೊಡೆದು ಒಂದು ಗೂಡ್ಸ್ ಆಟೋ ಸೇರಿದಂತೆ ನಾಲ್ಕು ಬೈಕ್‌ಗಳು ಮತ್ತು ಒಂದು ಅಂಗಡಿ ಜಖಂಗೊಂಡ ಘಟನೆ ನಡೆದಿದೆ.ಮಧ್ಯಾಹ್ನ ಮೇವು ತುಂಬಿದ್ದ ಲಾರಿಯ ಚಾಲಕನ ಅಜಾಗರೂಕತೆಯಿಂದ ಘಟನೆ ನಡೆದಿದ್ದು, ಅಂಗಡಿಯಲ್ಲಿದ್ದ ಗ್ರಾಹಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಲಾರಿಯ ಹಿಂಭಾಗ ಗೂಡ್ಸ್ ಆಟೋಗೆ ಡಿಕ್ಕಿ ಹೊಡೆಯಲಾಗಿ, ಆಟೋ ರಸ್ತೆ ಬದಿಯಲ್ಲಿ ನಿಂತಿದ್ದ ಬೈಕ್‌ಗಳಿಗೆ ಗುದ್ದಿದೆ. ಈ ಸಂದರ್ಭದಲ್ಲಿ ಬೈಕ್, ಆಟೋ ಸೇರಿದಂತೆ ಅಂಗಡಿಯೂ ಜಖಂ ಆಗಿದೆ. ಎನ್ನಲಾಗಿದೆ.ಯಾವುದೇ ಪ್ರಾಣ ಹಾನಿಯಾಗಿಲ್ಲಾ.ಕಿರುಗಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು,ಕಿರುಗಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ನಾಳೆ ದೇಶವ್ಯಾಪಿ ಬಂದ್ ,ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗುವ ಸಾಧ್ಯತೆ ಪರಿಸ್ಥಿತಿ ನೋಡಿಕೊಂಡು ಶಾಲಾ ಕಾಲೇಜಿಗೆ ರಜೆ.

ಬೆಂಗಳೂರು : ಕೇಂದ್ರ ಸರ್ಕಾರದ ಮೋಟಾರು ವಾಹನ (ತಿದ್ದುಪಡಿ) ಮಸೂದೆ -2017 ಹಿಂಪಡೆಯುವಂತೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ನಾಳೆ ದೇಶವ್ಯಾಪಿ ಬಂದ್​ಗೆ ಕರೆ ನೀಡಿವೆ. ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳ ಹಲವು ಸಾರಿಗೆ ಸಂಘಟನೆಗಳು ಬಂದ್​ಗೆ ಬೆಂಬಲ ನೀಡಿರುವುದರಿಂದ ನಾಳೆ ಬಸ್, ಆಟೋ, ಟ್ಯಾಕ್ಸಿ ಹಾಗೂ ಸರಕು-ಸಾಗಣೆ ವಾಹನಗಳ ಸಂಚಾರ ಸ್ಥಗಿತಗೊಳ್ಳಲಿದೆ. ಹೀಗಾಗಿ ನಾಳೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗುವ ಸಾಧ್ಯತೆ ಹೆಚ್ಚಿದೆ.ಎಐಆರ್ಟಿಡಬ್ಲ್ಯುಎಫ್, ಎನ್ಎಫ್ಐಆರ್ಟಿಡಬ್ಲ್ಯು, ಎಚ್ಎಂಎಸ್, ಟಿಯುಸಿಐ, ಕೇಂದ್ರ ಕಾರ್ಮಿಕ ಸಂಘಟನೆಗಳು ಬಂದ್ಗೆ ಕರೆ ನೀಡಿದ್ದು, ರಾಜ್ಯದಲ್ಲೂ ಹತ್ತಾರು ಸಂಘಟನೆಗಳು ಜಂಟಿಯಾಗಿ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬೃಹತ್ ಪ್ರತಿಭಟನೆ ಮಾಡುವ ಮೂಲಕ ಕೇಂದ್ರ ಸರ್ಕಾರ ಮಸೂದೆ ವಾಪಸ್ ಪಡೆಯುವಂತೆ ಒತ್ತಡ ಹೇರಲಾಗುತ್ತದೆ.

ಮಸೂದೆಗೆ ವಿರೋಧ ಏಕೆ?:

  • ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಮೋಟಾರು ವಾಹನ (ತಿದ್ದುಪಡಿ) ಮಸೂದೆ-2107 ಯೂ ರಸ್ತೆ ಸಂಚಾರ ಮಾನದಂಡಗಳನ್ನು ಉಲ್ಲಂಘಿಸುವವರಿಗೆ ವಿಪರೀತ ದಂಡ ವಿಧಿಸುತ್ತದೆ.
  • “ರಸ್ತೆ ಸುರಕ್ಷತೆ ಮತ್ತು ಅಪಘಾತಗಳನ್ನು ಕಡಿಮೆ ಮಾಡಬೇಕು ಎಂಬ ಉದ್ದೇಶಕ್ಕಿಂತ ವಿಪರೀತ ದಂಡ ವಸೂಲಿ ಮಾಡುವ ಸಲುವಾಗಿ ಮಸೂದೆ ಜಾರಿಗೆ ತಂದು, ಬಡ ಸಾರಿಗೆ ಕಾರ್ಮಿಕರ ಜೀವನದ ಮೇಲೆ ಕೇಂದ್ರ ಸರ್ಕಾರ ಬರೆ ಎಳೆಯುತ್ತಿದೆ,” ಎಂಬುದು ಸಾರಿಗೆ ಕಾರ್ಮಿಕ ಸಂಘಟನೆಗಳ ಪ್ರಮುಖ ವಿರೋಧವಾಗಿದೆ.

    ಮಸೂದೆಯಲ್ಲಿನ ಪ್ರಸ್ತಾವಿತ ದಂಡ, ಯಾವುದಕ್ಕೆ ಎಷ್ಟು?:  ಸಾಮಾನ್ಯ ತಪ್ಪಿಗೆ ಈಗ ಇರುವ 100 ರೂ.ನಿಂದ 500ರಿಂದ 1,500 ರೂ.ವರೆಗೆ ದಂಡ ,ರಸ್ತೆ ನಿಯಂತ್ರಣ ನಿಯಮಗಳ ಉಲ್ಲಂಘನೆಗೆ 100 ರೂ.ಯಿಂದ 500ರಿಂದ 1000 ರೂ.ವರೆಗೆ    ದಂಡ.ಅಧಿಕಾರಿಗಳ ಆದೇಶ ಪಾಲಿಸದೆ ಇರುವುದಕ್ಕೆ 500 ರೂ.ಯಿಂದ 2000 ರೂ.ವರೆಗೆ ದಂಡ.ಅತಿ ವೇಗ ಚಾಲನೆಗೆ 400 ರೂ.ನಿಂದ 1000 ರೂ.ವರೆಗೆ ದಂಡ.ಪರ್ಮಿಟ್ ಇಲ್ಲದ ವಾಹನಕ್ಕೆ 5,000 ರೂ.ಯಿಂದ 10,000 ರೂ.ವರೆಗೆ ದಂಡ 

ಇತರೆ ಸಾಮಾಜಿಕ ಕ್ಷೇತ್ರಗಳನ್ನು ಖಾಸಗೀಕರಣ ಮಾಡಿದ ರೀತಿಯಲ್ಲಿ ಸಾರಿಗೆ ಕ್ಷೇತ್ರವನ್ನು ದೇಶಿ ಮತ್ತು ವಿದೇಶಿ ಕಾರ್ಪೊರೇಟ್​ ಕಂಪನಿಗಳಿಗೆ ವರ್ಗಾಹಿಸಲು ಕೇಂದ್ರ ಸರ್ಕಾರ ಈ ಮಸೂದೆ ಜಾರಿಗೆ ಮುಂದಾಗಿದೆ. ರಾಷ್ಟ್ರೀಯ ಸಾರಿಗೆ ನೀತಿ ಎಂಬ ಹೊಸ ಅಂಶವನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ ಇದರಿಂದ ವಾಹನಗಳ ಪರ್ಮಿಟ್ ನೀಡುವಿಕೆ, ರಾಜ್ಯಗಳ ಸಾರಿಗೆ ನೀತಿ-ನಿರೂಪಣೆ, ತೆರಿಗೆ ಸಂಗ್ರಹ ಮುಂತಾದ ವಿಷಯಗಳಲ್ಲಿ ರಾಜ್ಯದ ಅಧಿಕಾರ ಸಂಪೂರ್ಣ ಕೇಂದ್ರದ ಪಾಲಾಗಲಿದೆ,” ಎಂಬುದು ಸಾರಿಗೆ ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದ.

ಪರಿಸ್ಥಿತಿ ನೋಡಿಕೊಂಡು ಶಾಲಾ ಕಾಲೇಜಿಗೆ ರಜೆ ನೀಡುವ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಪಿಯು ಮಂಡಳಿ ನಿರ್ದೇಶಕಿ ಸಿ.ಶಿಖಾ ತಿಳಿಸಿದ್ದಾರೆ.ಖಾಸಗಿ ಶಾಲೆಗಳು ಯಥಾಸ್ಥಿತಿಯಾಗಿ ನಡೆಯಲಿವೆ ಎಂದು ಖಾಸಗಿ ಶಾಲಾ ಒಕ್ಕೂಟದ ಕಾರ್ಯದರ್ಶಿ ಶಿವಕುಮಾರ್ ಮಾಹಿತಿ ನೀಡಿದ್ದಾರೆ. 

ಸಿಐಟಿಯು ಕರೆ ಕೊಟ್ಟ ಬಂದ್ ಗೆ ಸಾರಿಗೆ ನಿಗಮದ ನೌಕರರ ಸಂಘದಲ್ಲಿಯೇ ಅಪಸ್ವರ ಮೂಡಿದೆ. ಮಸೂದೆಗೆ ವಿರೋಧವಿದ್ದರೂ ಬಂದ್ ನಲ್ಲಿ ಪಾಲ್ಗೊಳ್ಳದೇ ಇರದಂತೆ ಎಐಟಿಯುಸಿ ಸಾರಿಗೆ ನೌಕರರಿಗೆ ಸೂಚನೆ ನೀಡಿದೆ. ಎಐಟಿಯುಸಿ ಸಂಘಟನೆ ಬೆಂಬಲ ನೀಡದ ಹಿನ್ನೆಲೆಯಲ್ಲಿ ಕೆಲ ಬಿಎಂಟಿಸಿ ಬಸ್ ಗಳು ರಸ್ತೆಗಳಿಯೋ ಸಾಧ್ಯತೆ ಇದೆ.ಓಲಾ, ಊಬರ್, ಅಸಂಘಟಿತ ಆಟೋ ನೌಕರರಷ್ಟೇ ಬೆಂಬಲ ನೀಡಲಿದ್ದು, ಸಂಘಟಿತ ಆಟೋ ನೌಕರರು ಕೂಡ ಬೆಂಬಲ ವಾಪಸ್ ಪಡೆದಿದ್ದಾರೆ. ಮೇಘ ಮೇರು ಕ್ಯಾಬ್ ಗಳ ಬೆಂಬಲ ನೀಡಿದ್ದು, ಮೊದಲೇ ಬುಕಿಂಗ್ ಆಗಿರೋ ಕ್ಯಾಬ್ಗಳು ಸೇವೆ ನೀಡಲಿವೆ.

ಇತರೆ ಸಾಮಾಜಿಕ ಕ್ಷೇತ್ರಗಳನ್ನು ಖಾಸಗೀಕರಣ ಮಾಡಿದ ರೀತಿಯಲ್ಲಿ ಸಾರಿಗೆ ಕ್ಷೇತ್ರವನ್ನು ದೇಶಿ ಮತ್ತು ವಿದೇಶಿ ಕಾರ್ಪೊರೇಟ್​ ಕಂಪನಿಗಳಿಗೆ ವರ್ಗಾಹಿಸಲು ಕೇಂದ್ರ ಸರ್ಕಾರ ಈ ಮಸೂದೆ ಜಾರಿಗೆ ಮುಂದಾಗಿದೆ. ರಾಷ್ಟ್ರೀಯ ಸಾರಿಗೆ ನೀತಿ ಎಂಬ ಹೊಸ ಅಂಶವನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ ಇದರಿಂದ ವಾಹನಗಳ ಪರ್ಮಿಟ್ ನೀಡುವಿಕೆ, ರಾಜ್ಯಗಳ ಸಾರಿಗೆ ನೀತಿ-ನಿರೂಪಣೆ, ತೆರಿಗೆ ಸಂಗ್ರಹ ಮುಂತಾದ ವಿಷಯಗಳಲ್ಲಿ ರಾಜ್ಯದ ಅಧಿಕಾರ ಸಂಪೂರ್ಣ ಕೇಂದ್ರದ ಪಾಲಾಗಲಿದೆ,” ಎಂಬುದು ಸಾರಿಗೆ ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದ.

Rate this item
(0 votes)

 ಕೃಷಿ ಅಭಿಯಾನ ಅನುಷ್ಠಾನ ಸಮಿತಿ ಹಾಗೂ ಕೃಷಿ ಇಲಾಖೆ ವತಿಯಿಂದ ಸಮಗ್ರ ಕೃಷಿ ಅಭಿಯಾನ 2018  ಸಂಚಾರಿ ಮಾಹಿತಿಕೃಷಿರಥಕ್ಕೆ ಶಾಸಕ ಡಾ.ಕೆ ಅನ್ನದಾನಿ ಚಾಲನೆ  ನೀಡಿದರು

ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಸಂಚಾರಿ ಮಾಹಿತಿ ಕೃಷಿರಥಕ್ಕೆ ಶಾಸಕ ಡಾ.ಕೆ ಅನ್ನದಾನಿ ಚಾಲನೆ ನೀಡಿ ನಂತರ ಮಾತನಾಡಿ, ರೈತರು ಬೆಳೆಯುವ ಬೆಳೆಗೆ ಸರಿಯಾದ  ಬೆಂಬಲ ಬೆಲೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ ಅವರು,  ಮುಖ್ಯಮಂತ್ರಿ ಕುಮಾರಣ್ಣ ರವರು ರೈತರ ಬಗ್ಗೆ  ಅಪಾರ ಕಾಳಜಿವಿದ್ದು, ರೈತರಿಗಾಗಿ ಹಲವು ಯೋಜನೆಗಳನ್ನು ತರಲು ಹೊರಟಿದ್ದಾರೆ. ಈಗಾಗಲೇ ಕೃಷಿ ಬಗ್ಗೆ ರೈತರಿಗೆ  ಸಂಪೂರ್ಣ ಮಾಹಿತಿ ತಲುಪಬೇಕು ಈ ನಿಟ್ಟಿನಲ್ಲಿ  ರಥವನ್ನು ಗ್ರಾಮಗಳಿಗೆ ಬೇಟಿ ಕೃಷಿ ಸಂಬಂಧಿಸಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಅರಿವು ಮೂಡಿಸಲಾಗುವುದು ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳುವಂತೆ ತಿಳಿಸಿದರು.       

ನಂತರ ಮಕ್ಕಳು ಕಳಸ ಹೊತ್ತು ಮೆರವಣಿಗೆ ಹಾಗೂ ಪೂಜಾ ಕುಣಿತದೊಂದಿಗೆ ಮೆರವಣಿಗೆ ನಡೆಸಲಾಯಿತು  ಇದು ಪಟ್ಟಣದ ಮೂಲಕ ಬುಗತಹಳ್ಳಿ,ಟಿ ಕಾಗೇಪುರ, ನೆಲಮಾಕನಹಳ್ಳಿ, ನೆಲ್ಲೂರು ಮೂಲಕ ಮಾರೇಹಳ್ಳಿ, ವಾಸ್ತವ್ಯ ಹೂಡಲಿದೆ. ಈ ಬಾರಿ ಕಸಭಾ ರೈತರಿಗೆ ಎರಡು ದಿನ ಕಾರ್ಯಕ್ರಮ ಹಮ್ಮಿಕೊಂಡಿದ್ದು,  ಆ 8  ರಂದು ಎಪಿಎಂಸಿ ಆವರಣ ಹೋಬಳಿ ಮಟ್ಟದ ವೇದಿಕೆ ಕಾರ್ಯಕ್ರಮ ಮತ್ತು ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮ ನಡೆಸಲಾಗುವುದು ತಾಲ್ಲೂಕಿನ ಎಲ್ಲಾ ರೈತರು ಆಗಮಿಸುವಂತೆ ಶಾಸಕರು ಮನವಿಮಾಡಿಕೊಂಡರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ  ಆರ್. ಎನ್ ವಿಶ್ವಾಸ್, ಸದಸ್ಯ ನಟೇಶ್, ಜಿ.ಪಂ ಸದಸ್ಯ ಹಾಗೂ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ರವಿ, ತಹಸೀಲ್ದಾರ್ ದಿನೇಶ್ ಚಂದ್, ತಾಲ್ಲೂಕು ಪಂಚಾಯಿತಿ ಇಒ ಸತೀಶ್ ,ಕೃಷಿ ಸಹಾಯ ನಿರ್ದೇಶಕ ಪರಮೇಶ್, ಅಧಿಕಾರಿ ರಮೇಶ್, ಸೇರಿದಂತೆ ಮತ್ತಿತ್ತರರು ಇದ್ದರು.

Page 33 of 41

Visitors Counter

225016
Today
Yesterday
This Week
This Month
Last Month
All days
43
239
282
1417
6704
225016

Your IP: 18.221.222.47
2024-05-06 03:12

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles