ರಾಜ್ಯಸುದ್ದಿ

Rate this item
(0 votes)

ಖಾಸಗಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವು.

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಖಾಸಗಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ  ಮಳವಳ್ಳಿ ಪಟ್ಟಣದ ಶಾಂಭವಿ ಗ್ಯಾಸ್ ಏಜೆನ್ಸಿ  ಬಳಿ ಇಂದು ಮುಂಜಾನೆ ನಡೆದಿದೆ. ಮೂಲತಃ ಮಳವಳ್ಳಿ ತಾಲ್ಲೂಕಿನ ಹೂವಿನಕೊಪ್ಪಲು ಗ್ರಾಮದ ರಾಚಯ್ಯರವರ ಪುತ್ರ ಪ್ರವೀಣ್ (21) ಮೃತಪಟ್ಟ ದುದೈವಿ .

 

 

ಮೃತ ಪ್ರವೀಣ್  ಮಳವಳ್ಳಿ ಪಟ್ಟಣದ ಅವರ ಅಜ್ಜಿ ಮನೆ ವಾಸವಾಗಿದ್ದನು ಎನ್ನಲಾಗಿದೆ. ಈತ ಇಂದು ಬೆಳಿಗ್ಗೆ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ  ಮಳವಳ್ಳಿಯಿಂದ ಕನಕಪುರಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ಚಾಲಕ ನಿಯಂತ್ರಣ ತಪ್ಪಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ  ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ .ಶವವನ್ನು ಮಳವಳ್ಳಿ ಸಾರ್ವಜನಿಕ ಆಸ್ವತ್ರೆ ಗೆ ಸಾಗಿಸಲಾಗಿದೆ. 

 ಸ್ಥಳಕ್ಕೆ ಇನ್ಸ್ ಪೆಕ್ಟರ್ ಗಂಗಾಧರ್ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ .

Last modified on 04/08/2018
Rate this item
(0 votes)

ಕೆ.ಆರ್.ಪೇಟೆ ತಾಲೂಕಿನ ಮಂಡಲಿಕ್ಕನಹಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿ ಚಿರತೆ ದಾಳಿ ನಡೆದಿದೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೆರಿ ಹೋಬಳಿಯ ಮಂಡಲಿಕ್ಕನಹಳ್ಳಿಯಲ್ಳಿ ಘಟನೆ.ರಾಜೇಗೌಡ ಎಂಬುವರಿಗೇ ಸೇರಿದ ಎಮ್ಮೆ ಕರುವನ್ನು ತಿಂದು ಹಾಕಿದೆ.ಅವರ ಫಾರಂ ಹೌಸ್ ಗೇ ನುಗ್ಗಿ ಎಮ್ಮೆ ಕರುವನ್ನು ಎಳೆದೊಯದ್ದ ಚಿರತೆ ಎಮ್ಮೆ ಕರುವನ್ನು ತಿಂದು ಹಾಕಿದೆ.ಚಿರತೆ ದಾಳಿಯಿಂದ ಆತಂಕಕ್ಕೊಳಗಾದ ಗ್ರಾಮಸ್ಥರು,ಚಿರತೆ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಚಿರತೆ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಇನ್ನೂ ಸ್ಥಳಕ್ಕೆ ಭೇಟಿ ನೀಡಿಲ್ಲಾ ಎಂದು ಗ್ರಾಮಸ್ಥರ ಅಕ್ರೊಸ‌..

 

 

Last modified on 04/08/2018
Rate this item
(0 votes)

ಇಂದು ಕೇಂದ್ರ ರೇಷ್ಮೆ ಮಂಡಳಿಯ ಅಧ್ಯಕ್ಷರೂ  ಕೆ.ಆರ್.ಪೇಟೆಯ ಗವಿಮಠದ ಕೇಂದ್ರ ರೇಷ್ಮೆ ಫಾರಂಗೆ ಬೇಟಿ. 

ಮಂಡ್ಯ ಜಿಲ್ಲೆಯ  ಕೃಷ್ಣರಾಜಪೇಟೆ ತಾಲ್ಲೂಕಿನ ಗವಿಮಠದ ಕೇಂದ್ರ ರೇಷ್ಮೆ ಫಾರಂಗೆ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಅವರು ಇಂದು ಬೇಟಿನೀಡಿದರು.ನಂತರ ಮಾತನಾಡಿ ರೇಷ್ಮೆ ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭವನ್ನು ತಂದುಕೊಡುವ ಬಂಗಾರದ ಬೆಳೆಯಾಗಿದೆ. ರೈತರು ಕಬ್ಬು ಮತ್ತು ಭತ್ತ ಬೆಳೆಯುವುದನ್ನೇ ಬೇಸಾಯವೆನ್ನದೇ ರೇಷ್ಮೆ ಬೆಳೆ ಬೇಸಾಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಿ ಮುನ್ನಡೆಯಬೇಕು ಎಂದು ಮನವಿ ಮಾಡಿದರು.

ನಂತರ ರೇಷ್ಮೆ ಗೂಡಿನ ಬೆಲೆ ಕುಸಿತವು ರೈತರಿಗೆ ತಾತ್ಕಾಲಿಕ ತೊಂದರೆಯಷ್ಟೇ,ಸಧ್ಯದಲ್ಲಿಯೇ ರೇಷ್ಮೆ ಬೆಲೆಯು ಚೇತರಿಕೆಯಾಗುತ್ತಿದ್ದು ರೈತರಿಗೆ ಯಾವುದೇ ನಷ್ಠವಾಗುವುದಿಲ್ಲ.ರೇಷ್ಮೆ ಬೆಳೆಯ ಬೇಸಾಯಕ್ಕೆ ಮಂಡ್ಯ ಜಿಲ್ಲೆಯ ಹವಾಮಾನವು ಸೂಕ್ತವಾಗಿದೆ. ರೇಷ್ಮೆ ಬೇಸಾಯವು ಈಗ ಹೆಚ್ಚು ಸರಳವಾಗಿದ್ದು ಸರ್ಕಾರವು ನೀಡುತ್ತಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಮುನ್ನಡೆಯಬೇಕು ಎಂದು ಹನುಮಂತರಾಯಪ್ಪ ಕರೆ ನೀಡಿದರು.

ಮೈಸೂರು ವಲಯದ ಜಂಟಿನಿರ್ದೇಶಕ ಡಾ.ನಾಯಕ್ ಹಾಗೂ ಮಂಡಳಿಯ ಸದಸ್ಯರು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು...

Last modified on 04/08/2018

ದೇವರಹಿಪ್ಪರಗಿ ಬಳಿ ಜೆ.ಸಿ.ಬಿ ಯಂತ್ರದ ಮೇಲೆ ಬಂಡೆ ಕುಸಿದು ವ್ಯಕ್ತಿ ಸಾವು

ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಬಳಿ ಇರುವ ಪಡಗಾನೂರ ಗ್ರಾಮದ ವ್ಯಾಪ್ತಿಯ ಬಳಿ ಗಣಿಯಲ್ಲಿ ಕಲ್ಲು ತೆಗೆಯುವ ಸಂದರ್ಭದಲ್ಲಿ ಬಂಡೆಯೊಂದು ಉರುಳಿ ಜೆ ಸಿ ಬಿ ಯಂತ್ರದ ಮೇಲೆ ಬಿದ್ದು ಕಾರ್ಮಿಕ ಸ್ಥಳದಲ್ಲಿಯೇ ಸಾವು.ಕಲ್ಲು ತೆಗೆಯುವ ಸಂದರ್ಭದಲ್ಲಿ ಪಕ್ಕದಲ್ಲಿ ಇದ್ದ ದೊಡ್ಡ ಬಂಡೆಯೊಂದು ಕುಸಿದ ಪರಿಣಾಮವಾಗಿ ಯಂತ್ರ ಸಂಪೂರ್ಣ ನುಜ್ಜುಗುಜ್ಜಾಗಿದೆ .ಚಾಲಕ ಯಂತ್ರ ದಲ್ಲೇ ಸಿಕ್ಕಿ ಜಾರ್ಖಂಡ್ ರಾಜ್ಯದ ಹಜಾರಿಭಾಗ ಜಿಲ್ಲೆಯ ಕೆಂದವಾಡಿ ಗ್ರಾಮದ ಚೇತಲಾಲ ಶನಿಛರ ಮಾತೋ (24) ಎಂಬ ಕಾರ್ಮಿಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ದೇವರಹಿಪ್ಪರಗಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Rate this item
(0 votes)

ಜಯಕರ್ನಾಟಕ ಸಂಘಟನೆ ವತಿಯಿಂದ ಮಳವಳ್ಳಿಯಲ್ಲಿ ಇಂದು ಗ್ರಾಮೀಣ ಕ್ರೀಡೆಯಾದ ರಾಗಿಮುದ್ದೆ ಸ್ವರ್ಧೆ ಆಯೋಜಿಸಿದ್ದರು.

 ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಇಂದು ಗ್ರಾಮೀಣ ಕ್ರೀಡೆಗಳಲ್ಲಿ ಒಂದಾದ ರಾಗಿಮುದ್ದೆ ಸ್ವರ್ಧೆಯನ್ನು ತಾಲ್ಲೂಕು ಜಯಕರ್ನಾಟಕ ಸಂಘಟನೆ ವತಿಯಿಂದ ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜು   ಮುಂದೆ ಇರುವ ಮೈದಾನದಲ್ಲಿ ನಡೆಯಿತು .ಕಾರ್ಯಕ್ರಮವನ್ನು ಪುರಸಭೆ ಸದಸ್ಯ ರಾಜಣ್ಣ ಉದ್ಘಾಟಿಸಿದರು. ಚಿತ್ರದುರ್ಗದಿಂದಲೂ ಸ್ವರ್ಧಾಳು ಭಾಗವಹಿಸಿದ್ದು ವಿಶೇಷವಾಗಿತ್ತು.

ಈ ಸ್ವರ್ಧೆಯಲ್ಲಿ 21 ಮಂದಿ ಸ್ವರ್ಧಾಳುಗಳು ಭಾಗವಹಿಸಿದ್ದು.ಅರ್ಥ ಕೆಜಿ ಯ ರಾಗಿಮುದ್ದೆಯುಳ್ಳ ಒಂದು ಮುದ್ದೆ ಯಂತೆ,ಮುದ್ದೆಜೊತೆ ನಾಟಿಕೋಳಿ ಸಾಂಬಾರು ನೀಡಲಾಯಿತು. ಚಿಕ್ಕಅರಸಿಕೆರೆ ಗ್ರಾಮದ ಸುರೇಶ ಎಂಬುವರು ಎಂಟು ಮುದ್ದೆ ತಿನ್ನುವ ಮೂಲಕ  ನಾಲ್ಕು ಕೆಜಿ ಮುದ್ದೆ ತಿಂದು ಪ್ರಥಮ ಬಹುಮಾನ 5000 ರೂ ಪಡೆದುಕೊಂಡರೆ  ಇನ್ನೂ ಟಿ.ನರಸೀಪುರ ತಾಲ್ಲೂಕಿನ ಹುಣಸೂರು ಗ್ರಾಮದ ಶಂಕರ್ ರವರು ಏಳೂವರೆ ಮುದ್ದೆ  ತಿಂದು ದ್ವಿತೀಯ ಬಹುಮಾನ 3000 ರೂ  , ಮಳವಳ್ಳಿ ತಾಲ್ಲೂಕಿನ ನೆಲಮಾಕನಹಳ್ಳಿ ಗ್ರಾಮ ದ ಶಿವು ಎಂಬುವರು ಏಳು ಮುದ್ದೆ ತಿಂದು  2000 ರೂ ನಗದು ಪಡೆದಕೊಂಡರು.   

 ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರಾದ ಜಯಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷ ನಾಗೇಶ್ ಮಾತನಾಡಿ  ಗ್ರಾಮೀಣ ಕ್ರೀಡೆಗಳನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಜಯಕರ್ನಾಟಕ ಸಂಘಟನೆ ಮುಂದಾಗಿದ್ದು  ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರೀಡೆಗಳನ್ನು ಮಾಡಲಿದ್ದೇವೆ ಎಂದರು.   ಕಾರ್ಯಕ್ರಮ ದಲ್ಲಿ ಜೆಡಿಎಸ್ ಮುಖಂಡರಾದ ಆನಂದ, ಸಿದ್ದರಾಜು, ಪ್ರಶಾಂತ್ ,ವೆಂಕಟೇಶ್, ಶ್ರೀರಂಗಪಟ್ಟಣದ ಜಯಕರ್ನಾಟಕ ಸಂಘಟನೆ ಜಿಲ್ಲಾ ಮಹಿಳಾ ಉಪಾಧ್ಯಕ್ಷ ಪ್ರಿಯಾರಮೇಶ್, ರಮೇಶ್ ಕಲ್ಲೇಶ್, ರಾಜಕುಮಾರ್ , ಶಿವಾನಂದ, ಕುಮಾರ್ ಸೇರಿದಂತೆ ಮತ್ತಿತ್ತರರು ಇದ್ದರು.

Last modified on 04/08/2018
Rate this item
(0 votes)

ಅಕ್ಕಿಹೆಬ್ಬಾಳು ಹೋಬಳಿಯ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಸಮಗ್ರ ಕೃಷಿ ಅಭಿಯಾನ

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ನಡೆದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಲ್.ದೇವರಾಜು ಚಾಲನೆ ನೀಡಿದರು.ಬಳಿಕ ಮಾತನಾಡಿದ ದೇವರಾಜು ಅವರು ರೈತರು ತಮ್ಮ ಭೂಮಿಯ ಮಣ್ಣನ್ನು ತಪ್ಪದೇ ಪರೀಕ್ಷೆ ಮಾಡಿಸಿ ಕೊಳ್ಳಬೇಕು. ಮಣ್ಣಿನ ಗುಣಕ್ಕೆ ತಕ್ಕಂತೆ ಬೆಳೆಗಳನ್ನು ಭಿತ್ತನೆ ಮಾಡಬೇಕು. ರಸಾಯನಿಕ ಗೊಬ್ಬರ ಬಳಕೆಯನ್ನು ಕಡಿಮೆ ಮಾಡಬೇಕು. ಸಾವಯವ ಬೇಸಾಯ ಮಾಡುವ ಮೂಲಕ ಮಣ್ಣಿನ ಆರೋಗ್ಯವನ್ನು ಕಾಪಾಡಬೇಕು ಎಂದು ಮನವಿ ಮಾಡಿದರು. ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯ ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ಹೋಗಿ ರೈತರಿಗೆ ಮಾಹಿತಿ ನೀಡಬೇಕು ಎಂದು ದೇವರಾಜು ಸಲಹೆ ನೀಡಿದರು.

ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ನಿಂಗೇಗೌಡ, ವಿನೂತಸುರೇಶ ಸತ್ಯಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಕನ್ಯಾ, ಉಪಾಧ್ಯಕ್ಷ ಎ.ಜೆ.ಕುಮಾರ್, ಕೃಷಿ ವಿಜ್ಞಾನಿಗಳಾದ ಡಾ.ಪ್ರವೀಣ್, ಡಾ.ಶ್ರೀನಿವಾಸ್ ಶೆಟ್ಟಿ, ಕೃಷಿಕ ಸಮಾಜದ ನಿರ್ದೇಶಕರಾದ ಎ.ಆರ್.ರಘು, ರಾಮಸ್ವಾಮಿ, ಲಕ್ಷ್ಮೇಗೌಡ, ಪ್ರಗತಿಪರ ರೈತರಾದ ನಾಗರಾಜು, ತಿಮ್ಮೇಗೌಡ, ಕೃಷಿ ಅಧಿಕಾರಿಗಳಾದ ಆನಂದ್ ಕುಮಾರ್, ಶ್ರೀಧರ್, ನಾಗರಾಜು, ಮಾನಸ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

Last modified on 04/08/2018
Rate this item
(0 votes)

ಮಳವಳ್ಳಿಯಲ್ಲಿ ಕೇಂದ್ರ ಸರ್ಕಾರದ ಜನವಿರೋಧಿ ಆರ್ಥಿಕ ನೀತಿಗಳ ವಿರೋಧಿಸಿ ರೈತ ಮಹಿಳಾ,ಕೂಲಿಕಾರ ,ಕಾರ್ಮಿಕರ ಜಾಥ ನಡೆಸಲಾಯಿತು.

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಕೇಂದ್ರ ಸರ್ಕಾರದ ಜನವಿರೋಧಿ ಆರ್ಥಿಕ ನೀತಿಗಳ ವಿರೋಧಿಸಿ  ಕರ್ನಾಟಕ ಪ್ರಾಂತ ರೈತ ಸಂಘ, ಎಐಡಿಟ್ಯೂ ಎ , ಸಿಐಟಿಯು, ಡಿವೈಎಫ್ ಐ , ಎಸ್ಎಫ್ ಐ ಸಂಘಟನೆಗಳ ವತಿಯಿಂದ ರೈತ, ಮಹಿಳಾ ,ಕೂಲಿಕಾರ, ಕಾರ್ಮಿಕರ ಜಾಥ ಮಳವಳ್ಳಿ ಪಟ್ಟಣದಲ್ಲಿ ನಡೆಯಿತು.

ಕಾರ್ಯಕ್ರಮ ವನ್ನು ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ದೇವಿ ಉದ್ಘಾಟಿಸಿ ಮಾತನಾಡಿ , ರೈತ ವಿರೋದಿಗಳಾಗಿ ಸರ್ಕಾರ ಕೆಲಸ ಮಾಡುತ್ತಿದೆ. ಜಾಗೃತಿ ಮೂಡಿಸಲು ಆಗಸ್ಟ್ 9 ರಂದು ಜೈಲ್ ಭರೋ ಚಳುವಳಿ ಅಂಗವಾಗಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಿವು ವಿನ ಜಾಥ ನಡೆಸಲಾಗುವುದು , ಪ್ರಣಾಳಿಕೆಯಲ್ಲಿ ಸುಳ್ಳು ಭರವಸೆ ನೀಡಿದ ಸರ್ಕಾರಗಳ ವಿರುದ್ಧ  ರೈತ, ಕಾರ್ಮಿಕರು , ಕೂಲಿಕಾರರು ,  ಹೋರಾಟ ಮಾಡುತ್ತಿದ್ದು, ಸೆ 5 ರಂದು  ಪಾರ್ಲಿಮೆಂಟ್ ಚಲೋ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಎಲ್ಲಾ ರೈತರು ಜೊತೆಗೂಡಿ ಬೃಹತ್ ಚಲೋ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಕಾರ್ಯಕ್ರಮ ದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಜಿ.ರಾಮಕೃಷ್ಣ, ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಭರತ್ ರಾಜ್, ಸುನೀತಾ, ಮಂಜುಳ, ಗುರುಸ್ವಾಮಿ, ಸೇರಿದಂತೆ ಮತ್ತಿತ್ತರರು ಇದ್ದರು.

 

Last modified on 04/08/2018
Rate this item
(0 votes)

ಶ್ರೀರಂಗಪಟ್ಟಣದ ಮಂಜು ರೆಸಾರ್ಟ್ ಬಳಿ ಅಪರಿಚಿತ ಗಂಡಸಿನ ಶವ ಪತ್ತೆ ಯಾಗಿದೆ

Last modified on 04/08/2018
Page 35 of 41

Visitors Counter

225161
Today
Yesterday
This Week
This Month
Last Month
All days
188
239
427
1562
6704
225161

Your IP: 3.12.71.237
2024-05-06 09:35

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles