ಆಕಸ್ಮಿಕವಾಗಿ ಕಾಲು ಜಾರಿ ಕೃಷಿಹೊಂಡಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಹೋಟೆಲ್ ಮಾಲೀಕ ಅಕ್ರಂಪಾಶ(45) ಸಾವು.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ಜಾಮಿಯಾ ಮಸೀದಿ ಹಿಂಭಾಗದಲ್ಲಿ ಮುಲ್ಟ್ರಿ ಹೋಟೆಲ್ ನಡೆಸುತ್ತಿದ್ದ ಅಕ್ರಂಪಾಶ(45) ಆಕಸ್ಮಿಕವಾಗಿ ಕಾಲು ಜಾರಿ ಕೃಷಿಹೊಂಡಕ್ಕೆ ಬಿದ್ದು ಮೃತ ದುರ್ದೈವಿಯಾಗಿದ್ದಾರೆ. ಪಟ್ಟಣದ ಹೇಮಾವತಿ ಬಡಾವಣೆಯ ನಿವಾಸಿಯಾಗಿರುವ ಅಕ್ರಂಪಾಶ ಎಂದಿನಂತೆ ಮುಂಜಾನೆ ಚಿಕ್ಕೋನಹಳ್ಳಿಯ ರೇಷ್ಮೆ ಫಾರಂ ಬಳಿ ವಾಕಿಂಗ್ ಮಾಡಲು ಹೋಗಿದ್ದಾಗ ಶೌಚಕ್ಕೆ ಹೋಗಿ ಅಲ್ಲಿಯೇ ಮೀಸೆ ದೇವೇಗೌಡರ ಜಮೀನಿನಲ್ಲಿರುವ ಕೃಷಿಹೊಂಡದಲ್ಲಿ ನೀರಿಗಾಗಿ ಹೋದಾಗ ಕಾಲುಜಾರಿ ನೀರಿಗೆ ಬಿದ್ದು ಮೃತರಾಗಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಎ.ಎಸ್.ಐ ಈರೇಗೌಡ ಮತ್ತು ಸಿಬ್ಬಂಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಅಕ್ರಂಪಾಶ ಅವರ ಸಾವಿನ ಸುದ್ದಿ ತಿಳಿದ ಮುಸ್ಲಿಂ ಬಾಂಧವರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.