ರಾಜ್ಯಸುದ್ದಿ

ಆಪರೇಷನ್ ಕಮಲ ಆಡಿಯೋ ಪ್ರಕರಣ ಹಿನ್ನೆಲೆ ರಾಯಚೂರಿನ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಶಾಸಕರಾದ ಶಿವನಗೌಡ ನಾಯಕ್, ಪ್ರೀತಂಗೌಡ ಮತ್ತು ಮರಂಕಲ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ರಾಯಚೂರು:ಗುರುಮಿಠಕಲ್ ಶಾಸಕ ನಾಗನಗೌಡ ಪುತ್ರ ಶರಣಗೌಡ ಇಂದು ಮಧ್ಯಾಹ್ನ ರಾಯಚೂರು ಎಸ್‍ಪಿ ಅವರಿಗೆ ದೂರು ನೀಡಿ ಬಳಿಕ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರಿನಲ್ಲಿ ಬಿ.ಎಸ್ ಯಡಿಯೂರಪ್ಪ ಎ-1 ಆರೋಪಿಯಾಗಿದ್ದು, ನಂತರದಲ್ಲಿ ಶಿವನಗೌಡ ನಾಯಕ್, ಪ್ರೀತಂಗೌಡ, ಪತ್ರಕರ್ತ ಮರಂಕಲ್ ಕ್ರಮವಾಗಿ ಆರೋಪಿಗಳಾಗಿದ್ದಾರೆ.ಭ್ರಷ್ಟಾಚಾರ ನಿಗ್ರಹ ಕಾಯ್ದೆ 19/2019 ಕಲಂ 8 ಮತ್ತು 12. ಭ್ರಷ್ಟಾಚಾರ ತಡೆಗಟ್ಟುವ ತಿದ್ದುಪಡಿ ಅಧಿನಿಯಮ 2018 ಮತ್ತು 120(ಬಿ), ಐಪಿಸಿ 506 ಕಾಯ್ದೆ ಅಡಿ ಎಫ್‍ಐಆರ್ ದಾಖಲಾಗಿದೆ. ಆಡಿಯೋ ಸಿಡಿ ದಾಖಲೆಯೊಂದಿಗೆ ಶರಣಗೌಡ ಪ್ರಕರಣ ದಾಖಲಿಸಿದ್ದಾರೆ. ಶಿವನಗೌಡ ನಾಯಕ್ ಅವರು ಫೆ.07 ರಂದು ಮೊಬೈಲ್ ಕರೆಮಾಡಿ ದೇವದುರ್ಗ ಪ್ರವಾಸಿ ಮಂದಿರಕ್ಕೆ ಕರೆಯಿಸಿ ಯಡಿಯೂರಪ್ಪರನ್ನ ಭೇಟಿ ಮಾಡಿಸಿದ್ದರು. ತಮ್ಮ ತಂದೆಗೆ ರಾಜೀನಾಮೆ ಕೊಡಲು ಒಪ್ಪಿಸು ಎಂದು 10 ಕೋಟಿ ರೂ. ಮುಂಗಡ ಹಣದ ಆಮಿಷದೊಂದಿಗೆ ಒತ್ತಾಯಿಸಿದ್ದರು ಎಂದು ಆಡಿಯೋ ತುಣುಕಿನಲ್ಲಿದ್ದ ಸಂಭಾಷಣೆಯನ್ನ ದೂರಿನಲ್ಲಿ ಶರಣಗೌಡ ವಿವರಿಸಿದ್ದಾರೆ. ಅಲ್ಲದೇ ಈ ದುಷ್ಕೃತ್ಯ ಮಾಡುವುದಿಲ್ಲ ಎಂದಾಗ ನಮ್ಮ ತಂದೆಯ ರಾಜಕೀಯ ಜೀವನ ಮುಗಿಸಿಬಿಡುತ್ತೇವೆ ಎಂದು ಹೆದರಿಸಿದರು. ಕಾರಣ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಪ್ರಕರಣವನ್ನ ದಾಖಲು ಮಾಡಲಾಗಿದೆ ಎಂದು ಶರಣಗೌಡ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Rate this item
(0 votes)

ಶಾಸಕ ನಾರಾಯಣಗೌಡರು ಜೆಡಿಎಸ್ ಪಕ್ಷದ ಶಿಸ್ತಿನ ಸಿಪಾಯಿ.ಅವರನ್ನು ಆಪರೇಷನ್ ಕಮಲ ಮಾಡಲು ಯಡಿಯೂರಪ್ಪ ಅವರಿಂದ ಸಾಧ್ಯವಿಲ್ಲ.ಯಡಿಯೂರಪ್ಪ ಮತ್ತೆ ಸಿಎಂ ಆಗಲು ಹಗಲುಗನಸು ಕಾಣುತ್ತಿದ್ದಾರೆ ಎಪಿಎಂಸಿ ಮಾಜಿಅಧ್ಯಕ್ಷ ಕೆ.ಎನ್.ಕೃಷ್ಣ ಆಕ್ರೋಶ.

ಕೆ.ಆರ್.ಪೇಟೆ : ಕೃಷ್ಣರಾಜಪೇಟೆ ಶಾಸಕ ಡಾ.ನಾರಾಯಣಗೌಡ ಜೆಡಿಎಸ್ ಪಕ್ಷದ ಶಿಸ್ತಿನ ಸಿಪಾಯಿ.ಅವರು ಅನಾರೋಗ್ಯದಿಂದಾಗಿ ಸದನಕ್ಕೆ ಹಾಜರಾಗಿಲ್ಲ.ಬಿಜೆಪಿ ಮುಖಂಡರು ಅಪಪ್ರಚಾರ ಮಾಡುತ್ತಿರುವಂತೆ ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ.ಬಿಜೆಪಿ ಮುಖಂಡರು ಶಾಸಕ ನಾರಾಯಣಗೌಡರ ವಿರುದ್ಧ ಅಪಪ್ರಚಾರ ಮಾಡಿದರೆ ತಕ್ಕ ಪಾಠವನ್ನು ಕಲಿಸಬೇಕಾಗುತ್ತದೆ ಎಚ್ಚರಿಕೆ. ತಂದೆ-ತಾಯಿಗಳನ್ನು ಕಳೆದುಕೊಂಡಿರುವ ಶಾಸಕ ನಾರಾಯಣಗೌಡರು ಮಾಜಿಪ್ರಧಾನಿ ದೇವೇಗೌಡರು ಮತ್ತು ಚನ್ನಮ್ಮ ಅವರನ್ನು ತಂದೆತಾಯಿಗಳ ರೂಪದಲ್ಲಿ ಕಾಣುತ್ತಿದ್ದಾರೆ ಎಂದು ಕೃಷ್ಣ ತಿಳಿಸಿದರು. ಕೆ.ಆರ್.ಪೇಟೆ ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರು ಅಪಪ್ರಚಾರಗಳಿಗೆ ಕಿವಿಗೊಡದೇ ಜೆಡಿಎಸ್ ಪಕ್ಷದ ಬಲವರ್ಧನೆ ಹಾಗೂ ಸಂಘಟನೆಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ನಾಗರಾಜೇಗೌಡ ನಿರ್ದೇಶಕರಾದ ಲೋಕೇಶ್, ಐನೋರಹಳ್ಳಿ ಮಲ್ಲೇಶ್ ಉಪಸ್ಥಿತರಿದ್ದರು.

 

Rate this item
(0 votes)

ಪುರಾಣ ಪ್ರಸಿದ್ಧ ಪೂಣ್ಯಕ್ಷೇತ್ರ ಗೋವುಗಳ ರಕ್ಷಕ ಭೃಗುಮಹರ್ಷಿಗಳ ತಪೋಭೂಮಿ ಹೇಮಗಿರಿ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆಯಿತು.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಪುರಾಣ ಪ್ರಸಿದ್ಧ ಪೂಣ್ಯಕ್ಷೇತ್ರ ಗೋವುಗಳ ರಕ್ಷಕ ಭೃಗುಮಹರ್ಷಿಗಳ ತಪೋಭೂಮಿ ಹೇಮಗಿರಿ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ಯವರ ರಥೋತ್ಸವವು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು. ರಾಜ್ಯಾದ್ಯಂತ ಭಕ್ತರು ಆಗಮಿಸಿದರು.ರಥೋತ್ಸವದ ಅಂಗವಾಗಿ ಶ್ರೀ ಕಲ್ಯಾಣವೆಂಕಟರಮಣಸ್ವಾಮಿ ಗೆ ಬೆಳಿಗ್ಗೆಯಿಂದಲೇ ಗಂಧದ ನೈವೇಧ್ಯ, ಹಾಲಿನ ಅಭಿಷೇಕ, ಅರಿಸಿನ ಕುಂಕುಮ ಅಭಿಷೇಕ ಸೇರಿದಂತೆ ಹಲವು ವಿಷೇಶ ಅಭಿಷೇಕಗಳನ್ನು ಮಾಡಿ ಹೋಮ ಹವನಗಳನ್ನು ನೆರವೇರಿದವು. ರಥೋತ್ಸವದ ಹಿನ್ನಲೆ ರಥವನ್ನು ವಿವಿಧ ಫಲಪುಷ್ಪಲಂಕಾರ, ತಳಿರು ತೋರಣಗಳಿಂದ ಅಲಂಕರಿಸಿಲಾಗಿತ್ತು.ಶಾಸಕ ನಾರಾಯಣಗೌಡ ಅವರ ಗೈರುಹಾಜರಿಯಲ್ಲಿ, ಶ್ರೀ ರಥದಲ್ಲಿ ವಿರಾಜಮಾನರಾಗಿ ಅಲಂಕೃತವಾಗಿದ್ದ ಶ್ರೀ ಕಲ್ಯಾಣವೆಂಕಟರಮಣಸ್ವಾಮಿಯ ಉತ್ಸವ ಮೂರ್ತಿಗೆ ಸಾಂಪ್ರದಾಯಿಕ ವಿಶೇಷ ಪೂಜೆ ಸಲ್ಲಿಸಿ ತಹಶೀಲ್ದಾರ್ ಎಂ.ಶಿವಮೂರ್ತಿ ದಂಪತಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ದೇವಸ್ಥಾನದಿಂದ ಚಾಲನೆಗೊಂಡ ರಥೋತ್ಸವ ರಥ ಬೀದಿಯಲ್ಲಿ ಸಂಚರಿಸಿತು. ಸಹಸ್ರಾರು ಸಂಖ್ಯೆಯಲ್ಲಿ ನೆರದಿದ್ದ ಭಕ್ತರು ಹಣ್ಣು, ಜವನ ಎಸೆದು ದೇವರ ಕೃಪೆಗೆ ಪಾತ್ರರಾದರು.ಉಘೇ ಗೋವಿಂದ... ಉಘೇ ವೆಂಕಟರಮಣ...ಉಘೇ ಗೋವಿಂದ ಎಂಬ ಜಯಘೋಷಗಳು ಮುಗಿಲು ಮುಟ್ಟಿದ್ದವು.ನಂತರ ಮಧ್ಯಾಹ್ನ 4 ಗಂಟೆಗೆ ಎರಡನೇ ಬಾರಿಗೆ ರಥವನ್ನು ನೆರದಿದ್ದ ಭಕ್ತರು ಎಳೆದರು. ನಂತರ ರಥವು ಉತ್ಸವ ಮೂತರ್ಿಯೊಂದಿಗೆ ಸುಸೂತ್ರವಾಗಿ ಸ್ವಸ್ಥಾನಕ್ಕೆ ಮರುಳಿತು.ನೆರದಿದ್ದ ಸಾವಿರಾರು ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ದೇವರಲ್ಲಿ ಹರಕೆ ಮತ್ತಿತರ ಬೇಡಿಕೆಗಳ ಈಡೇರಿಕೆಗಾಗಿ ಮೊರೆಯಿಟ್ಟರು.ದಾಂಪತ್ಯ ಜೀವನಕ್ಕೆ ಕಾಲಿರಿಸಿದ ದಂಪತಿಗಳು ರಥೋತ್ಸವಕ್ಕೆ ಆಗಮಿಸಿ ತೇರಿಗೆ ಹಣ್ಣು ದವನ ಎಸೆಯುವ ಮೂಲಕ ಭಕ್ತಿ ಮೆರೆದರು. ಹೇಮಗಿರಿಯಲ್ಲಿ ನಡೆಯುವ ರಥೋತ್ಸವದಲ್ಲಿ ನವ ದಂಪತಿಗಳು ಪಾಲ್ಗೋಂಡು ಹಣ್ಣು ದವನ ಎಸೆಯುವುದು ವಾಡಿಕೆ. ಹಾಗೇ ಮಾಡಿದರೇ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇಲ್ಲಿಯ ಜನರದ್ದು.

ಜಿಲ್ಲಾ ಪಂಚಾಯತಿ ಸದಸ್ಯ ರಾಮದಾಸು, ಸಮಾಜಸೇವಕರಾದ ಕೆ.ಎಸ್.ರಾಮೇಗೌಡ, ಶಬರಿಬುಕ್ ಹೌಸ್ ಮಾಲೀಕ ಕೆ.ವಿ.ರಾಮೇಗೌಡ, ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್, ರಾಜಶ್ವನಿರೀಕ್ಷಕಿ ಚಂದ್ರಕಲಾ ಪ್ರಕಾಶ್, ಪ್ರಧಾನ ಅರ್ಚಕ ರಾಮಭಟ್ಟ, ಸಬ್ ಇನ್ಸ್ ಪೆಕ್ಟರ್ ಚಂದ್ರಶೇಖರ್, ಆನಂದೇಗೌಡ, , ಕೋರಮಂಡಲ್ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ರವಿರೆಡ್ಡಿ, ಬಂಡಿಹೊಳೆ ಗ್ರಾಮಪಂಚಾಯಿತಿ ಅಧ್ಯಕ್ಷೆ ಮಹದೇವಮ್ಮ, ಮಾಜಿಅಧ್ಯಕ್ಷ ಶೇಷಾಧ್ರಿ,ಕಾಯಿ ಮಂಜೇಗೌಡ ಸೇರಿದಂತೆ ಸೇರಿದಂತೆ ಹಲವು ಮುಖಂಡರ ಪೂಜೆಯಲ್ಲಿ ಪಾಳ್ಗೊಂಡಿದ್ದರು.

ಜಾತ್ರೆಯಲ್ಲಿ ತಮ್ಮ ಅತ್ಯುತ್ತಮವಾದ ರಾಸುಗಳೊಂದಿಗೆ ಆಗಮಿಸಿ ದನಗಳ ಜಾತ್ರೆಯ ಸೌಂದರ್ಯವು ಇಮ್ಮಡಿಗೊಳ್ಳುವಂತೆ ಮಾಡಿದ್ದ ರಾಸುಗಳ ಮಾಲೀಕರಿಗೆ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಪ್ರಾಯೋಜಕತ್ವದಲ್ಲಿ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳನ್ನು ವಿತರಿಸಲಾಯಿತು.

 

Last modified on 12/02/2019
Rate this item
(0 votes)

ಮಳವಳ್ಳಿ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಸವಿತ ಸಮಾಜಮಹರ್ಷಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು

ಮಳವಳ್ಳಿ: ಮಂಡ್ಯ ಜಿಲ್ಲೆಯ  ಮಳವಳ್ಳಿ ತಾಲ್ಲೂಕು ಆಡಳಿತ ವತಿಯಿಂದ ಸವಿತ ಸಮಾಜಮಹರ್ಷಿ ಜಯಂತಿಯನ್ನು ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಸರಳವಾಗಿ ಆಚರಿಸಲಾಯಿತು.    ಕಾರ್ಯಕ್ರಮವನ್ನು  ತಹಸೀಲ್ದಾರ್  ಚಂದ್ರಮೌಳಿ ಉದ್ಘಾಟಿಸಿ, ನಂತರ ಮಾತನಾಡಿ ಸರ್ಕಾರವು ಎಲ್ಲಾ ಜನಾಂಗವನ್ನು ಸಮಾನವಾಗಿ ಕಾಣುವ ದೃಷ್ಟಿಯಿಂದ ಸವಿತ ಸಮಾಜದ ಮಹರ್ಷಿ ಜಯಂತಿ ಯನ್ನು ಆಚರಿಸಲಾಗುತ್ತಿದೆ. ಮಹರ್ಷಿಗಳ ಆದರ್ಶವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಹೋಗಬೇಕು ಎಂದರು. ಚುನಾವಣೆ ಹತ್ತಿರ ಬರುತ್ತಿದ್ದು ಅದಕ್ಕಾಗಿ ಈ ಬಾರಿ ಸರಳವಾಗಿ ಆಚರಣೆ ಮಾಡುತ್ತಿದ್ದೇವೆ. ಮುಂದಿನ ವರ್ಷ ನಿಮ್ಮ ಸಹಕಾರದಿಂದ ಅದ್ದೂರಿಯಾಗಿ ಆಚರಣೆ ಮಾಡೋಣ ಎಂದರು. ಸವಿತ ಸಮಾಜದವರು ಸರ್ಕಾರಿ ಸೌಲಭ್ಯಗಳನ್ನು  ಬಳಸಿಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮ ದಲ್ಲಿ ಸವಿತ ಸಮಾಜ ತಾಲ್ಲೂಕು ಅಧ್ಯಕ್ಷ ರಮೇಶ , ಕುನ್ನಯ್ಯ, ಸುಬ್ಬಣ್ಣ ಸೇರಿದಂತೆ  ಸವಿತ ಸಮಾಜ ಮುಖಂಡರು ಉಪಸ್ಥಿತಿ ದ್ದರು.

ಸರಕಾರಿ ಉರ್ದು ಶಾಲೆಯಲ್ಲಿ ಬೆಂಕಿ ಅವಘಡ ಪುಸ್ತಕಗಳು ಸೈಕಲ್ ಬೆಂಚುಗಳು ಸುಟ್ಟು ಭಸ್ಮ.

ವಿಜಯಪೂರ ಜಿಲ್ಲೆಯ ಇಂಡಿ ಪಟ್ಟಣದ ಸರಕಾರಿ ಉರ್ದು ಶಾಲೆಯಲ್ಲಿ ಬೆಂಕಿ ಅವಘಡ ಪುಸ್ತಕಗಳು ಸೈಕಲ್ ಬೆಂಚುಗಳು ಸುಟ್ಟು ಭಸ್ಮವಾದ ಘಟನೆ ಇಂಡಿ ಪಟ್ಟಣದಲ್ಲಿ ನಡೆದಿದೆ. ಯಾರೊ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದ್ದು. ವಿಜಯಪೂರ ಜಿಲ್ಲೆಯ ಇಂಡಿ ಪಟ್ಟಣದ ಬಸ್ ನಿಲ್ದಾಣದ ಹಿಬಾಗದಲ್ಲಿರುವ ಸರಕಾರಿ ಉರ್ದು ಬಾಲಕರ ಪ್ರಾಥಮಿಕ ಶಾಲೆಯಲ್ಲಿನ ಶಾಲೆಯ ಸ್ಟೊರ್ ರೂಂ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ.ಈ ಪ್ರಕರಣವು ಇಂಡಿ ನಗರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.

Rate this item
(0 votes)

ಮಳವಳ್ಳಿ ತಾಲ್ಲೂಕು ಅಖಿಲ ಭಾರತ ವೀರಶೈವ ಮಹಾಸಭಾ ನೂತನ ಮಳವಳ್ಳಿ ತಾಲ್ಲೂಕು ಅಧ್ಯಕ್ಷರಾಗಿ ಕುಂದೂರುಮೂರ್ತಿರವರು  115    ಮತಗಳ ಅಂತರದಿಂದ ಗೆಲ್ಲುವ ಸಾಧಿಸಿದ್ದಾರೆ. 

 ಮಳವಳ್ಳಿ: ರಾಜ್ಯದ ಅಖಿಲಭಾರತ ವೀರಶೈವ ಮಹಾಸಭಾ ರಾಜ್ಯ ಸಮಿತಿಯೂ ತಾಲ್ಲೂಕು ಮಟ್ಟದ  ಅಧ್ಯಕ್ಷರು ಹಾಗೂ 20 ಕಾರ್ಯನಿರ್ವಾಹಕ ಸದಸ್ಯರ ಆಯ್ಕೆಗಾಗಿ  ಚುನಾವಣೆಯನ್ನು ಫೆಬ್ರವರಿ 10 ರಂದು ನಿಗಧಿ ಮಾಡಿದ್ದರು. ಈ ಹಿನ್ನಲೆಯಲ್ಲಿ   ಕಾರ್ಯನಿರ್ವಾಹಕ ಸದಸ್ಯರು ಅವಿರೋಧವಾಗಿ ಹೋಬಳಿವಾರು 20 ಸದಸ್ಯರನ್ನು ಆಯ್ಕೆ ಮಾಡಲಾಯಿತು  ಅಧ್ಯಕ್ಷರ ಆಯ್ಕೆಯಲ್ಲಿ  ಒಮ್ಮತ ಬಾರದ ಕಾರಣ. ಇಬ್ಬರ ನಡುವೆ ಸ್ಪರ್ಧೆ ಏರ್ಪಟ್ಟಿತು. ಈ ಚುನಾವಣೆಯೂ  ವೀರಶೈವ ಜನಾಂಗದ ಚುನಾವಣೆಯಾದರೂ ಕಾಂಗ್ರೆಸ್  ಹಾಗೂ ಜೆಡಿಎಸ್ ಪಕ್ಷ ವಾಗಿ ಮಾರ್ಪಾಡಾಗಿ ಸ್ಪರ್ದೆ ನಡೆಯಿತು  ಕಾಂಗ್ರೆಸ್‌ ಬೆಂಬಲಿತರಾಗಿ ಕುಂದೂರು ಮೂರ್ತಿ ಹಾಗೂ ಜೆಡಿಎಸ್ ಬೆಂಬಲಿತರಾಗಿ ಚಿಕ್ಕಮೂಲಗೂಡು ಪುಟ್ಟಬುದ್ದಿ ರವರು ಸ್ಪರ್ಧೆ ನಡೆಯಿತು.  ಅಂತೆಯೇ ಇಂದು ನಿಗಧಿಯಂತೆ ಚುನಾವಣೆ ನಡೆಯಿತು  ಒಟ್ಟು 875 ಸದಸ್ಯರಿದ್ದು ಬೆಳಿಗ್ಗೆ 8 ಗಂಟೆಯಿಂದಲೇ  ವಿಧಾನಸಭಾ ಚುನಾವಣಾ ರೀತಿ ಈ ಚುನಾವಣೆ ಬಿರುಸಿನಿಂದ  ಸರದಿ ಸಾಲಿನಲ್ಲಿ ನಿಂತು  ಸದಸ್ಯರು ಅದರಲ್ಲೂ ಬಿಜಿಪುರ ಹೊರಮಠದ ಚಂದ್ರಶೇಖರಸ್ವಾಮಿಜೀ, ಹಾಗೂ ಸರಗೂರು ಮಠದ ಶ್ರೀಬಸವರಾಜೇಂದ್ರಸ್ವಾಮಿಗಳ ಸಹ  ಮತದಾನ ಮಾಡಿದರು.ಕೊನೆಯಲ್ಲಿ 875 ಮತ ಗಳ ಪೈಕಿ  670 ಮಂದಿ ಮತ ಚಲಾಯಿಸಿದ್ದರು ಅದರಲ್ಲಿ 11 ಮತ ತಿರಸ್ಕಾರವಾಗಿದ್ದು ಉಳಿದ 659 ಮತಗಳಲ್ಲಿ  387 ಮತಗಳನ್ನು ಕುಂದೂರು ಮೂರ್ತಿ ಪಡೆದರೆ  ಚಿಕ್ಕಮೂಲಗೂಡು ಪುಟ್ಟಬುದ್ದಿ 272 ಮತಗಳನ್ನುಪಡೆದಿದ್ದು  ಕುಂದೂರುಮೂರ್ತಿ ರವರು 115 ಮತಗಳ ಅಂತರದಿಂದ ಗೆಲವು ಸಾಧಿಸಿದರು.ಗೆಲುವು ಸಾಧಿಸಿದ ಕುಂದೂರು ಮೂರ್ತಿಗೆ  ವೀರಶೈವ ಮುಖಂಡರುಗಳು  ಇದೇ ಸಂದರ್ಭದಲ್ಲಿ  ಅಭಿನಂದಿಸಿದರು.

Rate this item
(0 votes)

 ಲಕ್ಷ್ಮೀಪುರ ಗ್ರಾಮ ಪಂಚಾಯಿತಿಯಲ್ಲಿ ಇಂದು ಸಾಮಾನ್ಯ ಸಭೆ.ಹೊಸ ಕಟ್ಟಡ ಕ್ಕಾಗಿ ಸದಸ್ಯರು ಹಾಗೂ ಸಾರ್ವಜನಿಕರಿಂದ ಆಗ್ರಹ.

ಕೃಷ್ಣರಾಜಪೇಟೆ ತಾಲ್ಲೂಕಿನ‌ ಕಿಕ್ಕೇರಿ ಹೋಬಳಿಯ ಈ ಲಕ್ಷ್ಮೀಪುರ ಗ್ರಾಮ ಪಂಚಾಯಿತಿಗೆ ತೊಳಸಿ, ಮಾದಿಹಳ್ಳಿ, ಬಸವನಹಳ್ಳಿ, ಬೂವನಹಳ್ಳಿ ಮರಿನಹೊಸರು, ಊಗಿನಹಳ್ಳಿ, ಬಸವನಹಳ್ಳಿ ಗಂಗೇನಹಳ್ಳಿ, ವಡರಳ್ಳಿ, ಇನ್ನೂ ಅಲವು ಗ್ರಾಮಗಳು ಸೇರುತ್ತವೆ. ಗ್ರಾಮ ಪಂಚಾಯತಿಯಲ್ಲಿ ಒಟ್ಟು 16 ಸದಸ್ಯರು ಇದ್ದು  ಇಂದು ನಿಗದಿಯಾದ ಸಾಮಾನ್ಯ ಸಭೆಯಲ್ಲಿ ಕೂರಲು ಜಾಗವಿಲ್ಲದೆ ನಿಂತು ಸಭೆಯಲ್ಲಿ ಪಾಲ್ಗೊಂಡ ಸದಸ್ಯರು ಮಾತನಾಡಿ ಸಭೆಯಲ್ಲಿ ಕೂರಲು ಜಾಗವಿಲ್ಲದೆ ನಿಂತು ಸಭೆ ನೆಡೆಸುವ ಸಂದರ್ಭ ಎದುರಾಗಿದೆ.ಕೂಡಲೇ ಹೊಸ ಕಟ್ಟಡ ನಿರ್ಮಾಣ ಮಾಡಬೇಕು ಎಂದು  ಪಂಚಾಯಿತಿ ಅಭಿವೃದ್ದಿ ಅಧಿಕಾರಿಗೆ ಮನವಿ ಮಾಡಿದರು.ಸಭೆಗೆ ಬಂದಿದ್ದಾ ಗ್ರಾಮಸ್ಥರು ಸದಸ್ಯರಿಗೆ ಜಾಗವಿಲ್ಲ ಇನ್ಯ ಸಾಮಾನ್ಯ ಜನಕ್ಕೆ ಜಾಗವಿನ್ನೆಲ್ಲಿ ಎಂಬ ಮಾತು ಕೇಳಿಬಂತು.

 

Rate this item
(0 votes)

ಹಳ್ಳದ ಗಣೇಶನ ಗುಡಿಯಲ್ಲಿ  ರಾತ್ರಿ ಕಳ್ಳತನ ಬೆಲೆ ಬಾಳುವ ಗಂಟೆಗಳು,ಹುಂಡಿಯ ಹಣ,ಇತರೆ ವಸ್ತುಗಳ ಕಳ್ಳತನ.

ಮಂಡ್ಯ ಜಿಲ್ಲೆಯ ಸಂತೇಬಾಚಹಳ್ಳಿ ಹೋಬಳಿಯ ಗವಿ ರಂಗನಾಥ ಸ್ವಾಮಿ ಅರಣ್ಯ ಪ್ರದೇಶದಲ್ಲಿ ಇರುವ ಗಣಪತಿ ದೇವಸ್ಥಾನಕ್ಕೆ ರಾತ್ರಿ ಕಳ್ಳರು ಕೈಚಳಕ ತೊರಿ ಗಣೇಶ ನ ಹುಂಡಿ ಮತ್ತು ಗಂಟೆಗಳು ಮತ್ತು ಪೂಜಾ ತಟ್ಟೆ ಮತ್ತಿತರ ವಸ್ತುಗಳನ್ನು ಕದ್ದು ಪರರಾರಿಯಾಗಿದ್ದರೆ ಇ ದೇವಲಯಕ್ಕೆ ಇದಕ್ಕೂ ಮೊದಲು ಒಂದು ಬಾರಿ ಕಳ್ಳತನ ನಡೆದಿತ್ತು. ಈ ದೇವಾಲಯ ಅರಣ್ಯ ಪ್ರದೇಶದಲ್ಲಿ ಇದ್ದು ಜನಸಂದಣಿ ಕಡಿಮೆ ಇರುವುದು ಕಳ್ಳತನ ನೆಡಯುವುದಕ್ಕೆ ಕಾರಣ. ಶ್ರೀ ಗವಿರಂಗನಾಥ ಸ್ವಾಮಿ ದೇವಸ್ಥಾನ ಬಳಿಯು ಕಳ್ಳತನ ನೆಡೆದಿದ್ದರು ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರಿಂದ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

 

Last modified on 11/02/2019
Page 19 of 41

Visitors Counter

286256
Today
Yesterday
This Week
This Month
Last Month
All days
230
384
2629
5698
3051
286256

Your IP: 3.15.7.20
2025-05-11 12:47

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles