ರಾಜ್ಯಸುದ್ದಿ
ಹುತಾತ್ಮ ಯೋಧರ ಪುಣ್ಯ ಸ್ಮರಣೆ ಸಾವಿರಾರು ಜನರಿಗೆ ಅನ್ನಸಂತರ್ಪಣೆ.
ಮಳವಳ್ಳಿ: ಇತ್ತೀಚಿಗೆ ಜಮ್ಮು ಕಾಶ್ಮೀರದ ಬಳಿ 48 ಯೋಧ ಹುತಾತ್ಮ ರಲ್ಲಿ ಮಂಡ್ಯ ಜಿಲ್ಲೆ ಯ ಗುಡಿಗೆರೆ ಗ್ರಾಮದ ಹೆಚ್ ಗುರು ರವರ 11 ದಿನದ ಕಾರ್ಯವನ್ನು ಮಡಿವಾಳ ಜನಾಂಗದವತಿಯಿಂದ ಮಳವಳ್ಳಿ ಪಟ್ಟಣದ ಅನಂತರಾಂ ವೃತ್ತ ದಲ್ಲಿ ನಡೆಸಲಾಯಿತು .ಗುರು ರವರು ಆತ್ಮಕ್ಕೆ ಶಾಂತಿಕೋರಿ ಮೌನ ಅಚರಣೆ ಮಾಡಿ ನಂತರ ಸಾರ್ವಜನಿಕ ರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಮಡಿವಾಳ ಜನಾಂಗ ಸಂಘದ ಅಧ್ಯಕ್ಷ ಪ್ರಸನ್ನ ಮಾತನಾಡಿ , ನಮ್ಮ ಜಿಲ್ಲೆಯವರು ದೇಶ ಕ್ಕಾಗಿ ಪ್ರಾಣತ್ಯಾಗ ಮಾಡಿದ್ದು , ಜಿಲ್ಲೆಯ ಪ್ರತಿಯೊಬ್ಬರು ಇವರಂತೆ ಆದರ್ಶವನ್ನು ರೂಡಿಸಿಕೊಳ್ಳುವಂತೆ ಕರೆ ನೀಡಿದರು . ಇದೇ ಸಂದರ್ಭದಲ್ಲಿ ಸಾರ್ವಜನಿಕ ರಿಗೆ ಸಿಹಿ ಹಂಚುವ ಜೊತೆಗೆ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಸಲಾಯಿತು .
ಕಾರ್ಯಕ್ರಮ ದಲ್ಲಿ ಪುರಸಭೆ ಸದಸ್ಯ ಕೃಷ್ಣ,, ಸಿದ್ದಾಪ್ಪಾಜಿ, ಶಿವಶಂಕರ, ಮರಿಸ್ವಾಮಿ, ಶಿವಲಿಂಗು ಸೇರಿದಂತೆ ಮತ್ತಿತ್ತರು ಇದ್ದರು.
ಪಾದಚಾರಿಗೆ ಟ್ಯಾಂಕರ್ ಡಿಕ್ಕಿ ಪಾದಚಾರಿ ಸ್ಥಳದಲ್ಲೆ ಸಾವು.
ವಿಜಯಪುರ: ವಿಜಯಪುರ ನಗರದ ವಜ್ರಹನುಮಾನ ರಸ್ತೆಯ ಬಳಿ ಪಾದಚಾರಿಗೆ ಟ್ಯಾಂಕರ್ ವಾಹನ ಡಿಕ್ಕಿ ಪಾದಚಾರಿ ಸ್ಥಳದಲ್ಲೆ ಸಾವು .ವಿಜಯಪುರದ ಜಿಲ್ಲೆಯ ಕಾರಜೋಳ ಗ್ರಾಮದ ನಿವಾಸಿ ಪರಸಪ್ಪ ಹೊನ್ನಿಹಳ್ಳಿ 37 ಸ್ಥಳದಲ್ಲೆ ಸಾವು.ಟ್ಯಾಂಕರ್ ಬಿಟ್ಟು ಚಾಲಕ ಪರಾರಿ.ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಪ್ರತಿಭಟನೆ.
ಕೆ.ಆರ್.ಪೇಟೆ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ವತಿಯಿಂದ ಅದ್ಯಕ್ಷ ಜಯರಾಮುರವರ ನೇತೃತ್ವದಲ್ಲಿ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ನೂರಾರು ಎನ್.ಪಿ.ಎಸ್ ನೌಕರರು ಒಂದು ದಿನದ ಸಾಂಕೇತಿಕ ಧರಣಿ ನಡೆಸಿದರು.ಸಂಘದ ಕಛೇರಿ ಯಿಂದ ಹೊರಟು ನಂತರ ತಾಲ್ಲೂಕು ಕಛೇರಿ ತಲುಪಿ ತಹಶಿಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಅದ್ಯಕ್ಷ ಜಯರಾಮು ನೂತನ ಪಿಂಚಣಿ ವ್ಯವಸ್ಥೆಯಲ್ಲಿ ಹಲವಾರು ಲೋಪದೋಷಗಳು ಇದ್ದು ಅದು ನೌಕರರಿಗೆ ಮಾರಕವಾಗಿ ಪರಿಣಮಿಸಿದೆ. ಹೀಗೆ ನೌಕರರಿಗೆ ತೊಂದರೆಯಾಗಿರುವ ಈ ವ್ಯವಸ್ಥೆಯನ್ನು ಈ ಕೂಡಲೇ ಕೈ ಬಿಟ್ಟು 2006 ರ ಹಿಂದಿನ ಹಿಂದಿನ ವ್ಯವಸ್ಥೆಯನ್ನು ಜಾರಿಗೆ ತಂದು ನೌಕರರು ಉತ್ತಮ ವಾತಾವರಣದಲ್ಲಿ ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕು ಎಂದರು. ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ಈ ಕೂಡಲೇ ಅತ್ಯಂತ ಗಂಭೀರವಾದ ಈ ವಿಷಯದಲ್ಲಿ ಉತ್ತಮ ನಿರ್ದಾರ ಕೈಗೊಳ್ಳಬೇಕು ಎಂದು ಸರ್ಕಾರಿ ನೌಕರರ ಪದಾಧಿಕಾರಿಗಳು ಮನವಿ ಮಾಡಿದರು.
ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಪದ್ಮೇಶ್. ಖಜಾಂಚಿ ವೆಂಕಟೇಶ್. ತಾ. ಪ್ರಾ.ಶಾಶಿ ಸಂಘದ ಅದ್ಯಕ್ಷ ಶಿವರಾಮೇಗೌಡ.ಕಾರ್ಯದರ್ಶಿ ರವಿಕುಮಾರ್. ಮೋಹನ್ ಕುಮಾರಿ ಪೂರ್ಣ ಚಂದ್ರ ತೇಜಸ್ವಿ ಗ್ರಾ.ಶಿ.ಸಂಘ ದ ಜಿಲ್ಲಾದ್ಯಕ್ಷ ಹೇಮಣ್ಣ.ಉಪನ್ಯಾಸಕರ ಸಂಘದ ಅದ್ಯಕ್ಷ ಗಿರೀಶ್. ಪದವೀಧರ ಶ.ಸಂ ಅದ್ಯಕ್ಷ ಮಹೇಶ್.ಕಾರ್ಯದರ್ಶಿ ಧನೇಂದ್ರಗೌಡ.ಜಿಲ್ಲಾ ಉಪಾಧ್ಯಕ್ಷ ಮಂಜೇಗೌಡ.ಸೇರಿದಂತೆ ನೂರಾರು ಸಂಖ್ಯೆಯ ಎನ್.ಪಿ.ಎಸ್.ನೌಕರರು ಹಾಜರಿದ್ದರು.
ಜಿಲ್ಲೆಯ ವಿವಿಧ ಕಾಮಗಾರಿ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಸಮಾರಂಭ ಮಂಡ್ಯದಲ್ಲಿ ನಡೆಯಲಿದ್ದು ಕಾರ್ಯಕ್ರಮ ಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಶಾಸಕ ಡಾ.ಕೆ ಅನ್ನದಾನಿ ರವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ.
ಮಳವಳ್ಳಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಡಾ.ಕೆ ಅನ್ನದಾನಿ ರವರ ನೇತೃತ್ವದಲ್ಲಿ ಇದೇ ಫೆ.27ರಂದು ಜಿಲ್ಲೆಯ ವಿವಿಧ ಕಾಮಗಾರಿ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಸಮಾರಂಭ ಮಂಡ್ಯದಲ್ಲಿ ನಡೆಯಲಿದ್ದು ಕಾರ್ಯಕ್ರಮ ಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಪೂರ್ವಭಾವಿ ಸಭೆ ನಡೆಸಲಾಯಿತು. ಸಭೆಯನ್ನು ಉದ್ದೇಶಿಸಿ ಶಾಸಕ ಡಾ.ಕೆ ಅನ್ನದಾನಿ ಮಾತನಾಡಿ ಜಿಲ್ಲೆಯ ಅಭಿವೃದ್ಧಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ ಅದರಲ್ಲೂ ಮಳವಳ್ಳಿ ಕ್ಷೇತ್ರಕ್ಕೆ ಸುಮಾರು 1200 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಮಳವಳ್ಳಿ ಜನತೆಯ ಮೇಲೆ ಕುಮಾರಸ್ವಾಮಿ ರವರು ಅಪಾರ ಪ್ರೀತಿಇದ್ದು ನಮ್ಮತಾಲ್ಲೂಕಿಗೆ ಕೇವಲ 9 ತಿಂಗಳ ಆಡಳಿತದಲ್ಲಿ ಪ್ರಥಮ ಬಜೆಟ್ ನಲ್ಲಿ ನಮ್ಮ ಕ್ಷೇತ್ರವನ್ನು ಗುರುತಿಸಿ ಅನುದಾನ ಬಿಡುಗಡೆ ಮಾಡಿದ್ದಾರೆ. ಫೆ.27 ರಂದು ನಡೆಯಲಿರುವ ಸಮಾರಂಭಕ್ಕೆ ಕನಿಷ್ಟ 10 ಸಾವಿರ ಮಂದಿಯಷ್ಟು ಕಾರ್ಯಕರ್ತರು ತೆರಳಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರಿಗೆ ಕೃತಜ್ಞತೆ ಸಲ್ಲಿಸಬೇಕಾಗಿದೆ ಅದಕ್ಕಾಗಿ ಮುಖಂಡರುಗಳು ಕಾರ್ಯಕರ್ತರನ್ನು ಸಂಘಟಿಸಬೇಕು ಅಂದು ಗ್ರಾಮಗಳಿಗೆ ಬಸ್ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಹಾಗೂ ಜಿ.ಪಂ ರವಿ , ಜೆಡಿಎಸ್ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಡಿ ಜಯರಾಮು. ಮಾಲೇಗೌಡ, ಆನಂದಕಲ್ಕುಣಿ, ನಂದಕುಮಾರ್, ಕಾರ್ಯಾಧ್ಯಕ್ಷ ಪುಟ್ಟಬುದ್ದಿ, ಸೇರಿದಂತೆ ಮತ್ತಿತ್ತರು ಇದ್ದರು.
ಖಾಸಗಿ ಶಾಲೆಗಳು ನಿಗದಿತ ಶುಲ್ಕ ಕ್ಕಿಂತ ಹೆಚ್ಚು ಶುಲ್ಕವನ್ನು ವರ್ಷಪೂರ್ತಿ ವಸೂಲಿ ಮಾಡುತ್ತಿದ್ದಾರೆ. ಶೀಘ್ರವೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾ ಮತ್ತು ತಾಲ್ಲೂಕು ಜಯಕರ್ನಾಟಕ ಸಂಘಟನೆ ವತಿಯಿಂದ ಪ್ರತಿಭಟನೆ.
ಮಳವಳ್ಳಿ: ಪಟ್ಟಣದಲ್ಲಿ ಜಿಲ್ಲಾ ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಯೋಗಣ್ಣ ನೇತೃತ್ವದಲ್ಲಿ ಖಾಸಗಿ ಶಾಲೆಗಳು ನಿಗದಿತ ಶುಲ್ಕ ಕ್ಕಿಂತ ಹೆಚ್ಚು ಶುಲ್ಕವನ್ನು ವರ್ಷಪೂರ್ತಿ ವಸೂಲಿ ಮಾಡುತ್ತಿದ್ದಾರೆ ಎಂದು ಜಿಲ್ಲಾ ಮತ್ತು ತಾಲ್ಲೂಕು ಜಯಕರ್ನಾಟಕ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಖಾಸಗಿ ಶಾಲೆಗಳು ವಿರುದ್ಧ ಘೋಷಣೆ ಕೂಗುತ್ತ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ತೆರಳಿ ಕ್ಷೇತ್ರಾ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ನಂತರ ಯೋಗಣ್ಣ ಮಾತನಾಡಿ ಮಳವಳ್ಳಿ ತಾಲ್ಲೂಕಿನ ಎಲ್ಲಾ ಖಾಸಗಿ ಶಾಲೆಗಳಲ್ಲಿ 10 ತಿಂಗಳ ಶಾಲೆ ನಡೆದರೂ ವರ್ಷಪೂರ್ತಿವಿಡಿ ಹಣವನ್ನೂ ವಸೂಲಿ ಮಾಡುತ್ತಿದ್ದು ಜೊತೆಗೆ ಶುಲ್ಕ ವಸೂಲಿ ಬಗ್ಗೆ ಪೋಷಕರಿಗೆ ಯಾವುದೇ ಮಾಹಿತಿ ನೀಡದೆ ಪ್ರತಿ ತಿಂಗಳ ನಿರ್ದಿಷ್ಟ ಶುಲ್ಕದ ಮಾಹಿತಿ ನೀಡದೆ ಸುಲಿಗೆ ಮಾಡುತ್ತಿದ್ದಾರೆ.ಎಂದು ಆರೋಪಿಸಿದರು. ಮನವಿ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಟಿ ಶಿವಲಿಂಗಯ್ಯ ಮಾತನಾಡಿ , ನಿಮ್ಮ ಮನವಿಯಲ್ಲಿರುವ ದೂರುಗಳನ್ನು ಪರಿಶೀಲನೆ ನಡೆಸಿ ಮುಂದಿನ ಶೈಕ್ಷಣಿಕ ವರ್ಷದಿಂದ. ಖಾಸಗಿ ಶಾಲೆಗಳಿಗೆ ಈ ಕೂಡಲೇ ನೋಟಿಸ್ ನೀಡುವುದಾಗಿ ಜೊತೆಗೆ ಖಾಸಗಿ ಶಾಲೆಗಳ ಮುಖ್ಯ ಶಿಕ್ಷಕರ ಸಭೆ ಕರೆದು ತಿಳಿಸಲಾಗುವುದು, ಮುಂದಿನ ವರ್ಷದಿಂದ ಪೋಷಕರಿಗೆ ಹೊರೆ ಆಗದಂತೆ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ನಂತರ ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರಕ್ಕೆ ಜಯಕರ್ನಾಟಕ ಸಂಘಟನೆ ಸಭೆಯನ್ನು ಕರೆದು ನೂತನ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಿಗೆ ಅನುಮತಿ ಪತ್ರಗಳನ್ನು ಜಿಲ್ಲಾಧ್ಯಕ್ಷ ಯೋಗಣ್ಣ ರವರು ನೀಡಿದರು. ಈ ಸಂದರ್ಭದಲ್ಲಿ ತಾಲ್ಲೂಕು ಜಯಕರ್ನಾಟಕ ಸಂಘಟನೆ ಅಧ್ಯಕ್ಷ ರಮೇಶ್,ತಾಲ್ಲೂಕು ಕಾರ್ಯಾದ್ಯಕ್ಷ ತೇಜೆಂದ್ರಕುಮಾರ್ ,ಜಿಲ್ಲಾ ಉಪಾಧ್ಯಕ್ಷ ನಾಗೇಶ್, ಕಲ್ಲೇಶ್,ಜಯಶಂಕರೇಗೌಡ, ಸೇರಿದಂತೆ ಮತ್ತಿತ್ತರು ಇದ್ದರು.
ಶಾಸಕ ನಾರಾಯಣಗೌಡರ ವಿರುದ್ಧ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರ ಆಕ್ರೋಶ. ಟೀಕೆ ಮಾಡಿದರೆ ತಕ್ಕಪಾಠ ಕಲಿಸುವ ಎಚ್ಚರಿಕೆ ನೀಡಿದ ಜಿ.ಪಂ ಸದಸ್ಯ ಬಿ.ಎಲ್.ದೇವರಾಜು.
ಕೃಷ್ಣರಾಜಪೇಟೆ: ಶಾಸಕ ಡಾ.ನಾರಾಯಣಗೌಡ ಅವರ ಕಾರ್ಯವೈಖರಿ ಕುರಿತು ಜೆಡಿಎಸ್ ಭಿನ್ನಮತೀಯ ಮುಖಂಡರು ಡಿಸಿಸಿ ಬ್ಯಾಂಕಿನ ಮಾಜಿಅಧ್ಯಕ್ಷ, ಜಿ.ಪಂ ಸದಸ್ಯ ಬಿ.ಎಲ್.ದೇವರಾಜು ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ತಪ್ಪಿದರೂ ಜೆಡಿಎಸ್ ಅಭ್ಯರ್ಥಿ ನಾರಾಯಣಗೌಡ ಅವರ ಪರವಾಗಿ ನಾನು ಮತ್ತು ನನ್ನ ಬೆಂಬಲಿಗರು ಪ್ರಾಮಾಣಿಕವಾಗಿ ಕೆಲಸ ಮಾಡಿ ಜೆಡಿಎಸ್ ಪಕ್ಷಕ್ಕೆ ಗೆಲುವು ತಂದುಕೊಟ್ಟಿದ್ದೇವೆ. ನಾವು ಪಕ್ಷದ್ರೋಹ ಮಾಡಿರುವುದಕ್ಕೆ ಏನಾದರೂ ದಾಖಲೆಗಳಿದ್ದರೆ ನಮ್ಮ ವಿರುದ್ಧ ಪಕ್ಷದ ಮುಖಂಡರಿಗೆ ದೂರು ನೀಡಿ ನಮ್ಮನ್ನು ಹೊರಹಾಕಿಸಲಿ, ಅದನ್ನು ಬಿಟ್ಟು ನಮ್ಮ ವಿರುದ್ಧ ಅಪಪ್ರಚಾರ ಮಾಡಿ ತೇಜೋವಧೆ ಮಾಡಿದರೆ ಶಾಸಕರಿಗೆ ತಕ್ಕ ಪಾಠವನ್ನು ಕಲಿಸಬೇಕಾಗುತ್ತದೆ. ಕಳೆದ ಬಜೆಟ್ ಅಧಿವೇಶನಕ್ಕೆ ಹಾಜರಾಗದೇ ಅನಾರೋಗ್ಯದ ನಾಟಕವಾಡಿದ್ದು ತಾಲೂಕಿನ ಜನತೆಗೆ ಗೊತ್ತಿದೆ, ಇಷ್ಟಾದರೂ ನಮ್ಮ ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರು ಶಾಂತವಾಗಿದ್ದಾರೆ. ನಾರಾಯಣಗೌಡ ರಿಗೆ ತಾಖತ್ತಿದ್ದರೆ ರಾಜೀನಾಮೆ ನೀಡಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿ ನಾನೂ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ. ಯಾರ ಬಳಿ ಮತಗಳಿವೆ ಎಂಬುದು ಗೊತ್ತಾಗಲಿದೆ. ಶಾಸಕರು ವಿನಾಕಾರಣ ಟೀಕೆ ಟಿಪ್ಪಣಿ ಮಾಡುವುದನ್ನು ಬಿಟ್ಟು ತಾಲ್ಲೂಕಿನ ಅಭಿವೃದ್ಧಿಗೆ ದುಡಿಯಲಿ, ತಾಲ್ಲೂಕಿನ ಅಭಿವೃದ್ಧಿಗೆ ಯಾರೇ ಅನುದಾನ ತಂದರೂ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುವುದು ನಮ್ಮ ತಾಲೂಕಿನಲ್ಲಿ ಎಂಬ ಸತ್ಯವನ್ನು ಶಾಸಕರು ತಿಳಿಯಬೇಕು ಎಂದು ಕಿವಿಮಾತು ಹೇಳಿದ ದೇವರಾಜು. ಕಳೆದ 40ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಈ ಬಾರಿ ಟಿಕೆಟ್ ವಂಚಿತನಾಗಿದ್ದರೂ ಪಕ್ಷದ್ರೋಹ ಮಾಡದೇ ಪಕ್ಷದ ಅಭ್ಯರ್ಥಿಯ ಗೆಲುವಿಗೆ ದುಡಿದಿದ್ದೇನೆ. ಸಚಿವ ರೇವಣ್ಣ ಅವರು ಕೆ.ಆರ್.ಪೇಟೆಗೆ ಬಂದಿದ್ದಾಗ ಅವರೊಂದಿಗೆ ರೋಡ್ ಷೋನಲ್ಲಿ ಭಾಗವಹಿಸಿದ್ದೇನೆ. ನಾನು ಮತ್ತು ನನ್ನ ಬೆಂಬಲಿಗರ ಊರಿನ ಬೂತ್ ಗಳಲ್ಲಿ ಜೆಡಿಎಸ್ ಪಕ್ಷಕ್ಕೆ ಅತೀ ಹೆಚ್ಚು ಮತಗಳು ಬಂದಿವೆ. ನಾವು ಪಕ್ಷದ್ರೋಹ ಮಾಡಿದ್ದರೆ ನಮ್ಮ ಬೂತ್ ಗಳಲ್ಲಿ ಜೆಡಿಎಸ್ ಅಭ್ಯರ್ಥಿಗೆ ಹೆಚ್ಚು ಮತಗಳು ಬರುತ್ತಿದ್ದವೇ ಎಂಬುದನ್ನು ಯೋಚಿಸಿ ಶಾಸಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ದೇವರಾಜು ಗುಟುರು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ನೋಟರಿ ಎಂ.ಎಲ್.ಸುರೇಶ್, ಜಿ.ಪಂ ಸದಸ್ಯ ರಾಮದಾಸು, ಮುಖಂಡ ಬಸ್ ಕೃಷ್ಣೇಗೌಡ, ಗದ್ದೇಹೊಸೂರು ದರ್ಶನ್, ಕಂಠಿಕುಮಾರ್, ಆಲಂಬಾಡಿ ಕಾವಲು ರಾಜು, ಹರೀಶ್ ಮತ್ತಿತರರು ಭಾಗವಹಿಸಿದ್ದರು.
ಮಳವಳ್ಳಿ ತಾಲ್ಲೂಕು ಹಾಗೂ ಕನಕಪುರ ಮತ್ತು ಟಿ.ನರಸೀಪುರ ತಾಲ್ಲೂಕಿನ ವೀರಶೈವ ಮಠಾಧೀಶರ ತಂಡ ಗುಡಿಗೆರೆ ಗ್ರಾಮಕ್ಕೆ ಬೇಟಿ ನೀಡಿ ಹುತಾತ್ಮ ಯೋಧ ಗುರು ಕುಟುಂಬಕ್ಕೆ ಸಾಂತ್ವನ ಹೇಳಿದರು.
ಮಳವಳ್ಳಿ: ಗುಡಿಗೆರೆ ಕಾಲೋನಿಯ ಗುರು ನಿವಾಸಕ್ಕೆ ಕನಕಪುರ ದೇಗುಲ ಮಠದ ಮಠಾಧಿಪತಿ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ನೇತೃತ್ವದಲ್ಲಿ ಮಠಾಧೀಶರ ತಂಡ ಭೇಟಿ ನೀಡಿ ಸಾಂತ್ವನ ಹೇಳಿದರು ತಾಲೂಕಿನ ಬಿಜಿಪುರ ಹೊರಮಠದ ಚಂದ್ರಶೇಖರಸ್ವಾಮೀಜಿ,,ಕುಂದೂರುಬೆಟ್ಟದ ರಸ ಸಿದ್ದೇಶ್ವರ ಮಠದನಂಜುಂಡಸ್ವಾಮಿಜೀ. ಹಣಕೊಳ, ರಾಗಿಬೊಮ್ಮನಹಳ್ಳಿಮಠ,ಸರಗೂರುಮಠ, ಬ್ರಹ್ಮನ್ ಮಠ, , ಗವಿ ಮಠ, ಧನಗೂರು ಷಡಕ್ಷರ ದೇವರ ಮಠ ಸೇರಿದಂತೆ ಹಲವು ಮಠಾಧಿಪತಿಗಳಿಂದ ಗುರು ಪತ್ನಿ ಕಲಾವತಿ, ತಾಯಿ ಚಿಕ್ಕತಾಯಮ್ಮ, ತಂದೆ ಹೊನ್ನಯ್ಯ ಸೇರಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಗುರು ಅಂತ್ಯ ಸಂಸ್ಕಾರ ಸ್ಥಳಕ್ಕೆ ತೆರಳಿ ವೀರ ಯೋದ ಗುರು ಸಮಾಧಿಗೆ ಪೂಜೆ ಸಲ್ಲಿಸಿದರು.ಇದೇ ವೇಳೆ ಒಂದು ಲಕ್ಷ ರೂ ಹಣವನ್ನು ನೀಡುವ ಮೂಲಕ ಕುಟುಂಬಕ್ಕೆ ನೆರವು ನೀಡಲಾಯಿತು. ನಂತರ ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ಮಾತನಾಡಿ , ದೇಶಕ್ಕಾಗಿ ವೀರಮರಣ ಹೊಂದಿದ ಗುರುರವರ ಕುಟುಂಬದವರಿಗೆ ದೇವರು ಧೈರ್ಯ ಹಾಗೂ ದುಃಖ ಭರಿಸುವಂತಹ ಶಕ್ತಿ ನೀಡಲಿ, ಒಂದು ಬಡಕುಟುಂಬದಿಂದ ಹೋಗಿ ದೇಶ ಕಾಯುವ ಇಂತಹ ಯೋದನಿಗೆ ನಮ್ಮನಮನ ಎಂದರು. ಯೋಧಗುರು ಜೊತೆ ಇನ್ನೂ 48 ಮಂದಿ ಸಹ ವೀರಮರಣ ಹೊಂದಿದ್ದಾರೆ. ಇಡೀ ಸರ್ಕಾರವೇ ಗುರುರವರ ಅಂತ್ಯಕ್ರಿಯೆ ಯಲ್ಲಿ ಭಾಗವಹಿಸಿದ್ದು , ನಮ್ಮೆಲ್ಲರ ಭಾಗ್ಯ, ನಮ್ಮರಾಜ್ಯದಲ್ಲೂ ಅನೇಕರು ದೇಶವನ್ನು ಕಾಯುವ ಕಾಯಕ ಮಾಡುತ್ತಿದ್ದಾರೆ ಎನ್ನುವುದು ಹೆಮ್ಮಯ ಸಂಗತಿ ಎಂದರು ಇದೇ ವೇಳೆ ಗುರು ಕುಟುಂಬದವರಿಗೆ ರಾಜ್ಯದ ಮೂಲೆಮೂಲೆಯಿಂದ ಜನರ ಹಿಂಡೆ ಬರುತ್ತಿದ್ದು , ಯೋಧಗುರು ದೇಶಭಕ್ತಿ ಯನ್ನು ತೋರಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಮಳವಳ್ಳಿ ತಾಲ್ಲೂಕಿನ ವೀರಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷ ಕುಂದೂರು ಮೂರ್ತಿ , ಮಾಜಿ ತಾ.ಪಂ ಅಧ್ಯಕ್ಷ ವಿಶ್ವಾಸ್ , ವೀರಶೈವ ನೌಕರರ ಸಂಘದ ತಾಲ್ಲೂಕುಅಧ್ಯಕ್ಷ ಗಂಗಾಧರ್, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ವಿಜಯಪುರ ಸಹೋದರಿಬ್ಬರ ಭರ್ಭರ ಕೊಲೆ. Featured
