ಎರಡೂ ವರ್ಷ ಕಳೆದರು ಬರಲಿಲ್ಲ ಅಂಗನವಾಡಿ ಶಿಕ್ಷಕಿ , ಸುಮ್ಮನೆ ಕೈ ಕಟ್ಟಿ ಕುಳಿತಾ ತಾಲ್ಲೂಕು ಆಡಳಿತ ಗ್ರಾಮಸ್ಥರು ರಿಂದ ಪ್ರತಿಭಟನೆ.
ಮಂಡ್ಯ ಜಿಲ್ಲೆಯ ಕೆ.ಅರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬಿಲ್ಲೆನಹಳ್ಳಿ ಗ್ರಾಮದಲ್ಲಿ ಸುಮಾರು ಇಪ್ಪತ್ತು ವರ್ಷಗಳಿಂದ ಅಂಗನವಾಡಿ ಕಾರ್ಯ ನಿರ್ವಹಿಸುತ್ತಿದೆ. ಅದರೆ ಈ ಅಂಗನವಾಡಿಗೆ ಎರಡೂ ವರ್ಷ ಗಳಿಂದ ಯಾವುದೇ ಅಂಗನವಾಡಿ ಕಾರ್ಯಕರ್ತೆ ಇಲ್ಲಾ .ಇದ್ದ ಹಳೆಯ ಶಿಕ್ಷಕಿ ರಜೆಮೇಲೆ ತೆರಳಿದ್ದಾರೆ ಎಂದು ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿಗಳು ಹೇಳಿಕೊಂಡು ಇತ್ತ ಪಕ್ಕದ ಗ್ರಾಮ ಗೊರವಿ ಅಂಗನವಾಡಿ ಶಿಕ್ಷಕಿಯನ್ನು ಪ್ರಭಾರವಾಗಿ ನಿಯೊಜಿಸಿದೇ. ಅದರೆ ಅವರು ತಮ್ಮ ಗ್ರಾಮದ ಅಂಗನವಾಡಿಯಲ್ಲಿ ಕೆಲಸ ಇರುವುದರಿಂದ ಮೂರು ದಿನಕ್ಕೊಮ್ಮೆ ಬರತ್ತಿದ್ದು ಮಕ್ಕಳಿಗೆ ಯಾವ ರೀತಿ ಪಾಠ ಕಲಿಸುತ್ತಾರೆ. ಬೇರೆ ಶಿಕ್ಷಕಿಯನ್ನು ಸಹ ನಿಯೋಜಿಸದೆ ಮಕ್ಕಳ ಭವಿಷ್ಯ ಹಾಳು ಮಾಡುತ್ತಿದ್ದಾರೆ ಎಂದು ಪೋಷಕರು ಮತ್ತು ಗ್ರಾಮಸ್ಥರು ಕಿಡಿಕಾರಿದರು.
ಅದೇ ಗ್ರಾಮದ ಹರೀಶ್ ಮಾತನಾಡಿ ನಾನೆ ಖುದ್ದಾಗಿ ಶಿಶು ಅಭಿವೃದ್ದಿ ಅದಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದರೆ ನಿಮ್ಮ ಗ್ರಾಮದ ಕೆಲಸವನ್ನು ತಡೆಹಿಡಿಯಾಲಗಿದೆ ಎಂದು ಉಡಾಪೆ ಉತ್ತರ ನೀಡುತ್ತಾರೆ. ಇ ಹಿಂದೆ ನಮ್ಮ ಗ್ರಾಮದ ಅಂಗನವಾಡಿಗೆ ಇಪ್ಪತ್ತುಕ್ಕೂ ಹೆಚ್ಚು ಮಕ್ಕಳ ಹಾಜರಾತಿ ಇತ್ತು ಇಂದು ಕೇವಲ ಎರಡು ಮೂರು ಮಕ್ಕಳಿಗೆ ಸೀಮಿತವಾಗಿದೆ ಅಲ್ಲದೇ ನಮ್ಮ ಗ್ರಾಮದ ಅಂಗನವಾಡಿಗೆ ಶಿಕ್ಷಕಿ ಇಲ್ಲದ ಕಾರಣ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಈಗಾಗಲೇ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿ ಇದೆ ಇಂತಹ ಪರಿಸ್ಥಿತಿಯಲ್ಲಿ ಈ ರೀತಿಯ ಘಟನೆ ಗಳು ಪೋಷಕರ ಮೇಲೆ ಪರಿಣಾಮ ಬಿರಿ ಸರ್ಕಾರಿ ಶಾಲೆಗಳು ಮುಚ್ಚುವುದರಲ್ಲಿ ಸಂದೇಹ ವಿಲ್ಲ ಎಂದರು.ಮತ್ತು ಕೊಠಡಿಯ ಕಿಟಕಿ ಬಾಗಿಲುಗಳ ಮುರಿದಿದ್ದು ಕಾಗದದ ಹಾಳೆಗಳಿಂದ ಮುಚ್ಚಲಾಗಿದೆ ಮಳೆ ಬಂದರೆ ಮಕ್ಕಳು ಮಳೆ ನೀರಿನಲ್ಲಿ ಸ್ನಾನ ಮಾಡು ಸ್ಥಿತಿ ಇದೆ ಕೂಡಲೆ ದುರಸ್ತಿ ಕೆಲಸಮಾಡಿಸಬೇಕು ಎಂದರು.
ನಂತರ ಮಾತನಾಡಿದ ವೆಂಕಟೇಶ ನಮ್ಮ ಗ್ರಾಮದಲ್ಲಿಯೇ ಅನೇಕ ವಿದ್ಯಾವಂತ ಹೆಣ್ಣು ಮಕ್ಕಳ ಇದ್ದು ಅವರಿಗೆ ಈ ಕೆಲಸ ನೀಡಿದರೆ ಮಕ್ಕಳ ಭವಿಷ್ಯ ಮತ್ತು ಸರ್ಕಾರಿ ಶಾಲೆಗಳನ್ನು ಉಳಿಸಿದಂತೆ ಅಗುತ್ತದೆ ಎಂದರು .ನಂತರ ಮಾತನಾಡಿದ ಮಂಜು ನಮ್ಮ ಗ್ರಾಮದ ಅಂಗನವಾಡಿಗೆ ಶಿಕ್ಷಕಿಯನ್ನು ನಿಯೋಜಿಸಿದ ಹೊದರೆ ಅಂಗನವಾಡಿಗೆ ಬೀಗ ಜಡಿದು ತಾಲೂಕು ಶಿಶು ಅಭಿವೃದ್ದಿ ಅಧಿಕಾರಿಗಳು ಮುಂದೆ ದರಣಿ ಕುರುತ್ತೆವೆ ಎಂದು ಎಚ್ಚರಿಕೆ ನೀಡಿದರು ಪ್ರತಿಭಟನೆ ಯಲ್ಲಿ ವೆಂಕಟೇಶ್, ವಾಸು, ಮಂಜು, ಶಶಿಕಲಾ ಮತ್ತಿತರು ಇದ್ದರು.