ತಾಲ್ಲೂಕಿನ ಪುರಾಣ ಪ್ರಸಿದ್ಧ ಹೇಮಗಿರಿ ದನಗಳ ಜಾತ್ರೆಯ ರಾಸುಗಳ ಸುಂಕ ಮನ್ನಾ ಮಾಡಿದ ತಾಲ್ಲೂಕು ಆಡಳಿತ.
ಕೃಷ್ಣರಾಜಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಹೇಮಗಿರಿ ದನಗಳ ಜಾತ್ರೆಯ ಸುಂಕಹರಾಜು ಪ್ರಕ್ರಿಯೆಯಲ್ಲಿ ಆಸಕ್ತಿಯಿಂದ ಬಾಗವಹಿಸಿದ್ದ ಬಿಡ್ ದಾರರು.ತೀವ್ರ ಬರಗಾಲದ ಹಿನ್ನೆಲೆಯಲ್ಲಿ ರಾಸುಗಳ ಸುಂಕಹರಾಜು ನಿಲ್ಲಿಸಿ ರಾಸುಗಳಿಗೆ ಸುಂಕ ಮನ್ನಾ ಮಾಡಿದ ತಾಲ್ಲೂಕು ಆಡಳಿತ. ಜಾತ್ರಾ ಕಾಲದ ಅಂಗಡಿ ಮುಂಗಟ್ಟುಗಳು, ಗೊಬ್ಬರ ಮತ್ತು ವಾಹನಗಳ ಸುಂಕವನ್ನು ಮಾತ್ರ ಹರಾಜು ಮೂಲಕ ಅಂತಿಮಗೊಳಿಸಿದ ತಹಶೀಲ್ದಾರ್ ಎಂ.ಶಿವಮೂರ್ತಿ.ಉಪತಹಶೀಲ್ದಾರ್ ಚಂದ್ರಶೇಖರ್, ರಾಜಶ್ವನಿರೀಕ್ಷಕಿ ಚಂದ್ರಕಲಾ ಪ್ರಕಾಶ್, ಗ್ರಾಮಲೆಕ್ಕಾಧಿಕಾರಿ ಹರೀಶ್, ಮುಜರಾಯಿ ಗುಮಾಸ್ತೆ ಚಂದ್ರಕಲಾ ಸೇರಿದಂತೆ ಬಂಡಿಹೊಳೆ, ಕುಪ್ಪಹಳ್ಳಿ, ನಾಟನಹಳ್ಳಿ, ಲಕ್ಷ್ಮೀಪುರ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.