Rate this item
(0 votes)

 ದುಷ್ಕರ್ಮಿಗಳ ಗುಂಪುಯೊಂದು ಯಾರು ಇಲ್ಲದ ಒಂಟಿ ಮನೆಯ ಬಾಗಿಲು ಮುರಿದು ಮನೆಯಲ್ಲಿದ್ದ 4 ಸಾವಿರ ನಗದು ಸೇರಿದಂತೆ 2 ಲಕ್ಷ ರೂ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವ ಘಟನೆ ಮಳವಳ್ಳಿ ಪಟ್ಟಣದ ಎನ್.ಇ ಎಸ್ ಬಡಾವಣೆಯಲ್ಲಿ ಕಳೆದ ರಾತ್ರಿ ನಡೆದಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಎನ್.ಇ.ಎಸ್ ಬಡಾವಣೆಯ ಶೆಟ್ಟಿಹಳ್ಳಿ ರಸ್ತೆಯಲ್ಲಿರುವ  ಕಂದಾಯ ಇಲಾಖೆಯ ಮಹೇಶ ಎಂಬುವವರ ಮನೆಯ ಬಾಗಿಲು ಮುರಿದು ಕಳ್ಳತನ ಮಾಡಿರುವ ಘಟನೆ ಕಳೆದ ರಾತ್ರಿ ನಡೆದಿದೆ.  ಮನೆಯ ಮುಂದಿನ ಬಾಗಿಲು ಡೋರ್ ಲ್ಯಾಕ್ ಮುರಿದು, ಮನೆಯೊಳಗಿನ ಬೀರುನಲ್ಲಿದ್ದ 30 ಗ್ರಾಂ ಚೈನ್, 15 ಗ್ರಾ 2 ಉಂಗುರ, 6 ಗ್ರಾಂ ಡಾಲರ್ , ಅರ್ಥ ಕೆಜಿ ಬೆಳ್ಳಿ ಪದಾರ್ಥಗಳು ಹಾಗೂ ಸಿಲೆಂಡರ್ ಸಹ ಕಳ್ಳತನವಾಗಿದ್ದು,  ಸುಮಾರು ರಾತ್ರಿ 12 ರಿಂದ 1 ವೇಳೆಯಲ್ಲಿ ಕಳ್ಳತನ ವಾಗಿರಬಹುದು ಎಂದು ಪೊಲೀಸ್ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದರು. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳ್ಳಚ್ಚು ತಜ್ಞರು  ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶ್ವಾನವು  ಮನೆಯಿಂದ  ಮಂಡ್ಯ ರಸ್ತೆಯಲ್ಲಿರುವ ಕೆಎಸ್ ಆರ್ ಟಿ ಸಿ  ಚಾಲಕ ತರಬೇತಿ ಕಚೇರಿ ಬಳಿಯವರೆಗೂ ಹೋಗಿದ್ದು ,  ಬೆರಳ್ಳಚ್ಚು ತಜ್ಞರು ಸಹ ಬೆರಳುಗುರುತು ಸಂಗ್ರಹ ಮಾಡಿದ್ದಾರೆ.   

ಈ ಸಂಬಂದ ಮಳವಳ್ಳಿ ಪಟ್ಟಣದ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

 

Rate this item
(0 votes)

 ಮಹಾನ್  ಕ್ರಾಂತಿ ಕಾರಿ ಯುಗಪುರುಷ ಹಾಗೂ ಕಾಲ್ ೯ಮಾಕ್ಸ್ ೯ ರವರ ದ್ವಿಶತಮಾನೋತ್ಸವ ಹಾಗೂ ಅವರ ಮೇರುಕೃತಿ ಬಂಡವಾಳ ದ 150 ನೇ ವರ್ಷಾಚರಣೆ ಅಂಗವಾಗಿ  ಸಿಪಿಐ(ಎಂ) ವತಿಯಿಂದ  ದುಡಿಯುವ ವರ್ಗ ಮತ್ತು  ಮಾಕ್ಸ್೯ ಸಿದ್ದಾಂತ ಕುರಿತು ವಿಚಾರ ಸಂಕಿರಣ ಮಳವಳ್ಳಿ ಪಟ್ಟಣದಲ್ಲಿ ನಡೆಸಲಾಯಿತು.               

ಮಂಡ್ಯ: ಜಿಲ್ಲೆಯ ಮಳವಳ್ಳಿ ಪಟ್ಟಣದ ಪ್ರವಾಸಿಮಂದಿರದಲ್ಲಿ  ನಡೆದ ಕ್ರಾಂತಿ ಕಾರಿ ಯುಗಪುರುಷ ಹಾಗೂ ಕಾಲ್ ೯ಮಾಕ್ಸ್ ೯ ರವರ ದ್ವಿಶತಮಾನೋತ್ಸವ ಹಾಗೂ ಅವರ ಮೇರುಕೃತಿ ಬಂಡವಾಳ ದ 150 ನೇ ವರ್ಷಾಚರಣೆ ಸಂಕಿರಣವನ್ನು  ಸಿಪಿಐ(ಎಂ) ರಾಜ್ಯ ಸಂಚಾಲಕ ಉಮೇಶ ಚಾಲನೆ ನೀಡಿ ಮಾತನಾಡಿ,  ಮಾಕ್ಸ್ ೯ವಾದ ವನ್ನು ವಿದೇಶ ವಾದ ಎಂದು ಅಪಪ್ರಚಾರ ಮಾಡಿರುವುದನ್ನು ಖಂಡಿಸಿದ ಅವರು ಮಾಕ್ಸ್೯ರವರು  ಸರಿ ತಪ್ಪು ಗಳ ಬಗ್ಗೆ ವಾದ ಮಾಡಿದರು ಅವರು ಕ್ರಾಂತಿಕಾರಿ ಯುಗಪುರುಷ.  ಜಗತ್ತಿನಲ್ಲಿರುವವರು ಎಲ್ಲರೂ ಒಂದಾಗಬೇಕು ಎಂದು ಸಾರಿದರು ಎಂದರು .       

ಕಾರ್ಯಕ್ರಮ ದಲ್ಲಿ  ಜನವಾದಿ ಮಹಿಳಾ ಸಂಘಟನೆ ಜಿಲ್ಲಾದ್ಯಕ್ಷೆ ದೇವಿ,  ಪ್ರಾಂತ ರೈತ ಸಂಘದ  ತಾಲ್ಲೂಕು ಅಧ್ಯಕ್ಷ  ಎನ್.ಎಲ್ ಭರತ್ ರಾಜು, ಸುಶೀಲ, ಸುನೀತಾ .ತಿಮ್ಮೇಗೌಡ. ಮಂಜುಳ  ಸೇರಿದಂತೆ  ಮತ್ತಿತ್ತರರು ಇದ್ದರು.

Rate this item
(0 votes)

ಕೃಷ್ಣರಾಜಪೇಟೆ ತಾಲ್ಲೂಕಿನ ದಬ್ಬೇಘಟ್ಟ ಗ್ರಾಮದ ಭರತ್ ಎಂಬುವರ ತೋಟದಲ್ಲಿ ಕಾಯಿಲೆ ಇಂದ ಬಳಗುತ್ತಿದ್ದ ನವಿಲು ಪಕ್ಷಿ.ಗಮನಿಸಿದ ಭರತ್ ಪಕ್ಷಿಯನ್ನು ರಕ್ಷಿಸಿ ಪಶು ವೈದ್ಯರನ್ನು ಕರೆಸಿ ಸೂಕ್ತ ಚಿಕಿತ್ಸೆ ನೀಡಿಸಿ ಆರೈಕೆ ಮಾಡಿದರು

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ  ಕಿಕ್ಕೇರಿ ಹೋಬಳಿಯ ದಬ್ಬೇಘಟ ಗ್ರಾಮದ ಭರತ್ ಎಂಬುವರ ತೋಟದಲ್ಲಿ ಕಾಯಿಲೆ ಇಂದ ಬಳಗುತ್ತಿದ್ದ ನವಿಲು ಪಕ್ಷಿಯನ್ನು ಗಮನಿಸಿದ ಭರತ್ ಪಕ್ಷಯನ್ನು ರಕ್ಷಿಸಿ ಪಶು ವೈದ್ಯರನ್ನು ಕರೆಸಿ ಸೂಕ್ತ ಚಿಕಿತ್ಸೆ ನೀಡಿಸಿ ಆರೈಕೆ ಮಾಡಿದರು.ನಂತರ ಸ್ಥಳಕ್ಕೆ ಬೇಟಿ ನೀಡಿದ ಅರಣ್ಯ ಅಧಿಕಾರಿಗಳು  ಕಾಯಿಲೆಯಿಂದ ಬಳಗುತ್ತಿರು ನವಿಲು ಪಕ್ಷಿಯನ್ನು ವಶಕ್ಕೆ ತೆಗೆದುಕೊಂಡು ಹೆಚ್ಚಿನ ಚಿಕಿತ್ಸೆ ನೀಡಿಸಲು ಕೃಷ್ಣರಾಜಪೇಟೆ ತಾಲ್ಲೂಕಿನ ಅರಣ್ಯ ಇಲಾಖೆ ಕೊಂಡೈದರು.

ಸ್ಥಳದಲ್ಲಿ ಕಿಕ್ಕೇರಿ ವೈದ್ಯರಾದ ರಾಮಕೃಷ್ಣೇಗೌಡ. ಅರಣ್ಯ ಇಲಾಖೆಯ ಶಿವುಕುಮಾರ್, ರೈತ ಭರತ್ ಎಂ ಮಾಸ್ತಿ. ಮಂಜು ಮತ್ತಿತ್ತರು ಇದ್ದರು.

 

Last modified on Wednesday, 21 November 2018 12:47
Saturday, 17 November 2018 00:00

 

 Xavier Institute of Management and Entrepreneurship, Bangalore hosted a workshop on Waste Management Rules 2016 in collaboration with CII and the Ministry of Environment, Forests and Climate Change (MoEFCC), Government of India.

Bangalore: Xavier Institute of Management and Entrepreneurship, Bangalore hosted a workshop on Waste Management Rules 2016 in collaboration with CII and the Ministry of Environment, Forests and Climate Change (MoEFCC), Government of India.

The purpose of the workshop was to facilitate a discussion between Industry members  of the CII and the MoEFCC on compliance with the Plastic Waste Management Rules 2016 and the implementation of Extended Producer Responsibility.

Industry representation was strong with the 69 participants (amongst others) consisting of senior management representatives like Mr. Pradeep Banerjee, Executive Director-Supply Chain, Hindustan Unilever Limited, Mr. Nandan Bhatia, Head- Facilities Management, Brittania. Senior Managers from Tata Chemicals, Mondelex India Foods Pvt.Ltd, Hindustan Coca Cola,Toyota and other corporates actively engaged in the discussions. Other stakeholders in the waste management area like  Saahas Zero Waste, Binbag expressed their perspectives.

The MoEFCC was represented by the Joint Secretary, Mr. Ritesh Kumar Singh  and Mr. Thiru Shambhu Kallolikar, Principal Secretary, Govt of Tamil Nadu and Chairman, Tamil Nadu Pollution Control Board. Karnataka State Pollution Control Board and Puducherry Pollution Control Board had sent senior scientists for the workshop. XIME, Bangalore was represented by their Director, Dr. Rony Kurien,  and Provost, Dr. Anantharaman.

The 2 day program concluded with workshop in groups on suggesting a way forward on Extended Producer Responsibility and it’s implementation in compliance with the Waste Management Rules notified in 2016. XIME as the academic partner will be helping the MoEFCC undertake and outcome analytics of the workshop.

 

Rate this item
(0 votes)

ಪಟ್ಟಣದ ಶತಮಾನ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಬಿ.ಎಲ್ ದೇವರಾಜ್ ಗೆ ಶಿಷ್ಟಚಾರ ಪಾಲಿಸದ ಹಿನ್ನಲೆ ಶಿಕ್ಷಣ ಇಲಾಖೆಯ ಬಿಇಒಗೆ ನೀವು ಬಿಇಒ ನೇ ಅಲ್ಲ ಎಂದು ಜಿಪಂ ಸದಸ್ಯ ದೇವರಾಜು ಕಿಡಿಕಾರಿದರು.

ಸುದ್ದಿಜಾಲ ಕೆ.ಆರ್.ಪೇಟೆ :ಪಟ್ಟಣದ ಶತಮಾನ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಬುಧವಾರ ೧೦:೩೦ ಕ್ಕೆ ಕಾರ್ಯಕ್ರಮದ ಉದ್ಘಾಟನೆ ಹಮ್ಮಿಕೊಂಡು ಶಾಸಕ ನಾರಾಯಣಗೌಡರನ್ನು ಉದ್ಘಾಟಕರಾಗಿ, ಜಿಪಂ ಸದಸ್ಯರು ಸೇರಿದಂತೆ ಶಿಷ್ಟಚಾರದ ಪ್ರಕಾರ ಹಲವು ಗಣ್ಯರನ್ನು ಅಹ್ವಾನಿಸಲಾಗಿತ್ತು. ಕಾರ್ಯಕ್ರಮಕ್ಕೆ ಜಿ.ಪಂ ಸದಸ್ಯ ದೇವರಾಜು ಸರಿಯಾದ ಸಮಯಕ್ಕೆ ಆಗಮಿಸಿದ್ದರು. ಶಾಸಕ ನಾರಾಯಣಗೌಡ ಬೇರೆ ಕಾರ್ಯಕ್ರಮಗಳ ಹಿನ್ನಲೆ ಸ್ವಲ್ಪ ತಡವಾಗಿ ಬಂದಿದ್ದರಿಂದ ಸ್ವಲ್ಪ ತಡವಾಗಿ ಆಗಮಿಸಿದ್ದರು. ಇದರಿಂದ ದೇವರಾಜು ಕಾರ್ಯಕ್ರಮದಲ್ಲಿ ಸ್ವಲ್ಪ ಸಮಯ ಕಾದಿದ್ದರು. ಶಾಸಕರು ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ನಿರೂಪಣೆ ಮಾಡುತ್ತಿದ್ದ ಶಿಕ್ಷಣ ಸಂಯೋಜಕ ಚಂದ್ರಶೇಖರ್ ಶಾಸಕರನ್ನು ಕಾರ್ಯಕ್ರಮ ಉದ್ದೇಶಿಸಿ ಮಾತನಾಡುವಂತೆ ಕೋರಿದರು. ಶಾಸಕರು ಮಾತನಾಡಿ ಬೇರೆ ಕಾರ್ಯಕ್ರಮವಿದೆ ಎಂದು ವೇದಿಕೆಯಿಂದ ತೆರಳಿದರು. ಶಾಸಕರ ಜತೆಯಲ್ಲಿ ವೇದಿಕೆಯಲ್ಲಿದ್ದ ಹಲವರು ಶಾಸಕರೊಂದಿಗೆ ವೇದಿಕೆಯಿಂದ ನಿರ್ಗಮಿಸಿದರು. ವೇದಿಕೆ ಖಾಲಿ ಆದಂತೆ ಕಂಡ ಪೋಷಕರು ಎದ್ದು ಹೋಗಲು ಆರಂಭಿಸಿದರು. ಇದರಿಂದ ಕುಪಿತಗೊಂಡ ಜಿಪಂ ಸದಸ್ಯ ದೇವರಾಜು ವೇದಿಕೆಯಿಂದ ಕೋಪದಿಂದ ನಿರ್ಗಮಿಸಿದರು. ಬಿಇಒ ರೇವಣ್ಣ ಅವರನ್ನು ತಡಗಟ್ಟಿ ಸಮಾಧಾನ ಮಾಡಲು ಪ್ರಯತ್ನಸಿದರು. ಕೆಲ ಸಮಯ ಇವರಿಬ್ಬರ ನಡುವೆ ಮಾತಿನ ಚಕಾಮುಕಿ ನಡೆಯಿತು‌. ಬಿಇಒ ಅವರನ್ನು ನೀವು ನನ್ನಾ ಪ್ರಕಾರ ಬಿಇಒ ನೇ ಅಲ್ಲಾ. ಒಂದು ಕಾರ್ಯಕ್ರಮ ಹೇಗೆ ನಡೆಸಬೇಕು ಎಂಬುದು ಗೊತ್ತಿಲ್ಲ. ಕಾರ್ಯಕ್ರಮಕ್ಕೆ ಕರಸಿ ಗಂಟಾನುಗಂಟೆ ಕಾಯಿಸಿ ಸುಮ್ನೇ ಕಳಿಸೊದಾದ್ರೆ. ನಮ್ಮನ್ನ ಏಕೆ ಕರೆಯಬೇಕು ಎಂದು ಪ್ರಶ್ನಿಸಿದರು. ಇದು ನಿರೂಪಕರಿಂದ ತಪ್ಪಾಗಿದೆ ಎಂದು ಹೇಳಿದಾಗ. ದೇವರಾಜು ನಿರೂಪಕ ಶಿಕ್ಷಣ ಸಂಯೋಜಕ ಚಂದ್ರಶೇಖರ್ ವಿರುದ್ಧ ಏಕವಚನದಲ್ಲಿ ಹರಿಹಾಯ್ದರು. ಇದೊಂದು ಬಾರಿಯಲ್ಲ. ಹಲವು ಬಾರಿ ಚಂದ್ರಶೇಖರ್ ಹೀಗೆ ಮಾಡಿದ್ದಾನೆ ಎಂದು ತರಾಟೆಗೆ ತೆಗೆದುಕೊಂಡರು. ಕೆಲ ಸಮಯದ ಬಳಿಕ ಅವರ ಮನವೊಲಿಸಿ ವೇದಿಕೆಯಲ್ಲಿ ಮಾತನಾಡುವಂತೆ ಮನವಿ ಮಾಡಿದರು. ಕಡೆಗೆ ಮಾತನಾಡಿ ಮಕ್ಕಳಿಗೆ ಶುಭ‌ಹಾರೈಸಿ ವೇದಿಕೆಯಿಂದ ನಿರ್ಗಮಿಸಿದರು.

Last modified on Saturday, 17 November 2018 11:26
Saturday, 17 November 2018 00:00

Vaishnavi Group launched " Vaishnavi Serene"Bengaluru’s first compact luxury homes was launched in 27th October, 2018 Bangalore  Yelahanka,

Bangalore, : Vaishnavi Serene, Bengaluru’s first compact luxury homes was launched recently. This project by renowned developers, Vaishnavi Group is located at Yelahanka, adjacent to the CRPF Campus and is spread over 11 acres of land. It comprises of 896 compact luxury homes – 512 3BHK units (between 1060-1118sqft of super built up area), 300 2BHK units (between 900-950sqft of super built up area) and 84 1BHK units(between 635-640 sqft of super built-up area), placed in a Ground plus 4 setting. Over 60% is dedicated to open spaces and these homes are Vaastu-compliant as well. This is the first project in the city to be built using European off-site precast technology that enables modular construction - which further assures better quality and timely delivery.

Speaking at the launch of Vaishnavi Serene, C.N Govindraju, Managing Director, Vaishnavi Group said, “We wanted to create a project that is best suited for the current home buyers in the city – one which allows for a premium lifestyle at an optimal value. We created a new category in luxury which we christened Compact Luxury. The project is located strategically among green zones, is well connected to all parts of the city, has the best of educational, medical, entertainment and even work options in the vicinity and boasts of a host of amenities that will allow for a lifestyle that will improve your quality of life. The use of precast technology ensures that handover of homes is done on time with no compromise on the quality of construction”.

Speaking on the architecture of the project, Suresh Marthandan, Principal Architect, Destination Designs says, “The design of the space reflects the name – Serenity. Considering the location, the placement of homes is such that is plays to the natural strengths of the landscape. Tree-lined avenues, vast, open views from balconies and extensive landscaping ensure that there is a constant visual connect with nature. In a move to make the community pedestrian friendly, all vehicular traffic is also restricted to the outer periphery contributing to the peace of the residential space.

 

Amenities at Vaishnavi Serene include

·         20,000sqft Clubhouse

·         Indoor gym and sports

·         Outdoor gym

·         Gaming areas

·         Banquet Halls

·         Lawns

·         Water fountains

·         Tree plaza

·         Amphitheater

·         Space for weekend flea market

·         Senior citizen zone

About Vaishnavi Group

Vaishnavi Group is a real estate development company focussed on the urban luxury segment for both residential and commercial properties. With nearly two decades of experience in delivering exceptional value to residents and tenants, Vaishnavi is of the leading property developers in Bangalore. Vaishnavi vouches and acknowledges collective effort and teamwork.

In a span of two decades of its operations, Vaishnavi Group has built over 5 million sq.ft of commercial and residential space, over 4 million sq.ft is currently under development and over 2 million sq.ft in various stages of planning and are located in premium areas of the city, Bangalore with an ideology of intense sensitivity towards customer needs and satisfaction.


For more information log onto:  www.vaishnavigroup.com

 

 

 

 

 

   
Rate this item
(0 votes)

ತಾಲೂಕಿನ ಅಘಲಯ ಗ್ರಾಮ ಪಂಚಾಯಿತಿ ಗ್ರಾಮಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಸಭೆಗೆ ಬರದ ಕಾರಣ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಭೆಯನ್ನು ರದ್ದು ಪಡಿಸಿದರು.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಅಘಲಯ ಗ್ರಾಮದಲ್ಲಿ ಇಂದು ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ  ಹಮ್ಮಿಕೊಂಡಿದ್ದ ಗ್ರಾಮಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಗೈರಾದ ಹಿನ್ನಲೆ ಸಭೆಯಲ್ಲಿದ್ದ ಗ್ರಾಮಸ್ಥರು ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಒತ್ತಾಯಿಸಿದರು.ಅಲ್ಲದೆ ಸಭೆಗೆ ಪಂಚಾಯಿತಿ ಅಧ್ಯಕ್ಷೆ ಭಾರತಿಶ್ರೀಧರ್ ಕೂಡ ಬರದಿರುವುದು ಗ್ರಾಮಸ್ಥರು ಇನ್ನಷ್ಟು ಕೋಪಗೊಳ್ಳಲು ಕಾರಣವಾಯಿತು. ಬಳಿಕ ಮಾತನಾಡಿದ ಗ್ರಾಮದ ಯುವಮುಖಂಡ ಲಕ್ಷ್ಮೀಶ್, ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಚರಂಡಿ ವ್ಯವಸ್ಥೆ ಸರಿಯಿಲ್ಲ. ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡುತ್ತಿಲ್ಲ. ಗ್ರಾಮದಲ್ಲಿ ಕಳೆದ ಮೂರು ವರ್ಷದಿಂದ ಗ್ರಾಮದೊಳಗೆ ಸಿಮೆಂಟ್ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಸರ್ಕಾರದಿಂದ ಬಂದಿರುವ ಹಣ ಮಾತ್ರ ಖರ್ಚುಗಿದೆ. ಪಂಚಾಯಿತಿಯಲ್ಲಿ ಅವ್ಯವಹಾರ ನಡೆಯುತ್ತಿದ್ದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನಿನ ಕ್ರಮತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.ಬೀದಿ ದೀಪಗಳು ಸುಟ್ಟು ಹೋದರೆ ಬದಲಾವಣೆ ಮಾಡಲ್ಲ. ಲಕ್ಷಾಂತರ ರೂ ಖರ್ಚು ಮಾಡಿ ಕಳಪೆ ಗುಣಮಟ್ಟದ ಬೀದಿ ದೀಪಗಳನ್ನು ಖರೀದಿ ಮಾಡುತ್ತಿದ್ದಾರೆ. ದೀಪ ಬದಲಾವಣೆ ಆದ ಮೂರ್ನಾಲ್ಕು ದಿನದಲ್ಲಿ ದೀಪಗಳು ಮತ್ತೇ ಸುಟ್ಟು ಹೋಗುತ್ತವೆ. ಸರಿಯಾಗಿ ದೀಪಗಳ ಬದಲಾವಣೆ ಮಾಡದೆ. ರಾತ್ರಿ ಸಮಯ ಜನರು ಹೊರ ಬರಲು ಹೆದರುತ್ತಿದ್ದಾರೆ ಎಂದು ದೂರಿದರು.

ಕೃಷಿ ಇಲಾಖೆಯ ಅಧಿಕಾರಿ ಶ್ರೀಧರ್ ಸಭೆಗೆ ನೋಡಲ್ ಅಧಿಕಾರಿಯಾಗಿ ಬಂದಿದ್ದರು. ಸಭೆ ರದ್ದಾದರಿಂದ ಅವರು ಕೂಡ ನಿರ್ಗಮಿಸಿದರು. ಪಂಚಾಯಿತಿ ಸದಸ್ಯರು ಕೂಡ ಸಭೆಯಲ್ಲಾದ ಗದ್ದಲಗಳಿಂದ ನಿರ್ಗಮಿಸಿದರು. ಸಭೆಯಲ್ಲಿ ಕಾಲಭೈರವೇಶ್ವರ ಯುವಕರ ಸಂಘದ ಸದಸ್ಯರು, ಶಿವಲಿಂಗೇಗೌಡ, ವಿಜಯ್, ಗಣೇಶ್, ವಿಶ್ವನಾಥ್, ಸೇರಿದಂತೆ ಹಲವರಿದ್ದರು.

 

Rate this item
(0 votes)

ಪಾಂಡವಪುರ ತಾಲೂಕಿನ ಸುಂಕಾತೊಣ್ಣೂರು ಗ್ರಾಮದಲ್ಲಿ ಸಾಲಭಾದೆ ತಾಳಲಾರದೇ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಸಾಮೂಹಿಕ ಆತ್ಮಹತ್ಯೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಸುಂಕಾತೊಣ್ಣೂರು ಗ್ರಾಮದಲ್ಲಿ ಸಾಲಭಾದೆ ತಾಳಲಾರದೆ ರೈತ ಕುಟುಂಬ ಆತ್ಮಹತ್ಯೆಗೆ ಶರಣು.ಗ್ರಾಮದ ನಂದೀಶ್ ೩೭ ವರ್ಷ ಮತ್ತು ಹೆಂಡತಿ ಕೋಮಲ ೩೩ ವರ್ಷ. ಮಗ ಮನೋಜ್ ೧೩ ಮಗಳು ಚಂದನ ೧೫ ವರ್ಷ. ಮೂಲತ ಗ್ರಾಮದ ಹೊರಭಾಗದ ಸ್ವಂತ ಜಮೀನಿನಲ್ಲಿ ಮನೆ ನಿರ್ಮಿಸಿ ಅಲ್ಲೇ ವಾಸವಾಗಿದ್ದು, ರಾತ್ರಿ ನಂದೀಶ್ ಮಾಂಸಾಹಾರದಲ್ಲಿ ವಿಷ ಬೆರಸಿ ಎಲ್ಲಾರೂ ಸೇವಿಸಿದಾರೆ ಎಂದು ತಿಳಿದು ಬಂದಿದೆ.ಆಹಾರ ಸೇವಿಸಿದ ಮೇಲೆ ಹೊಟ್ಟೆ ನೋವು ತಾಳಲಾರದೆ ಮನೆಯಿಂದ ಆಚೆ ಬಂದು ನರಳಡಿ ಜೀವ ಬಿಟ್ಟಿದಾರೆ ಎಂದು ತಿಳಿದು ಬಂದಿದೆ.

ನಂದೀಶ್ ಲೇವಾದೇವಿದಾರರ ಬಳಿ ಸೇರಿ ಇತರ ಖಾಸಗಿ ಕಂಪನಿಯಲ್ಲಿ ಸಾಲ ಮಾಡಿ ಹಿಂತಿರುಗಿಸದ ಹಿನ್ನೇಲೆ ಆತ್ಮಹತ್ಯೆ ಮಾಡಿಕೊಂಡಿದಾರೆ ಎಂದು ಹೇಳಲಾಗುತ್ತಿದೆ.ಮುಖ್ಯಮಂತ್ರಿಗಳ ಜನತಾದರ್ಶನದಲ್ಲಿ ಸಾಲಗಾರರಿಂದ ಮುಕ್ತಿ ದೊರಕಿಸಿಕೊಡುವಂತೆ ನಂದೀಶ್ ಮನವಿ ಮಾಡಿದ್ರು.ಬಳಿಕ ಸಿಎಂ ಈ ಸಂಬಂಧ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ನಂತರ ಡಿಸಿ ತಹಸೀಲ್ದಾರ್ ಗೆ ಸೂಕ್ತ ಗಮನಹರಿಸುವಂತೆ ನಿರ್ದೇಶನ ನೀಡಿದ್ದರು. ನಂದೀಶ್ ೧ ಎಕರೆ ಮಾರಾಟ ಮಾಡಿ ಅಲ್ಪಸ್ವಲ್ಪ ಸಾಲ ತೀರಿಸಿದ್ದರು.ಉಳಿದ ಸಾಲಕ್ಕಾಗಿ ಲೇವಾದೇವಿದಾರರಿಂದ ಒತ್ತಡ ಹೆಚ್ಚಾದ ಹಿನ್ನೆಲೆ ಇಷ್ಟಾದರೂ ಪರಿಹಾರ ಸಿಗದ ಕಾರಣ ನಂದೀಶ್ ಕುಟುಂಬ ಊರಿನ ಹೊರಗಡೆ ಮಾಂಸಾಹಾರದಲ್ಲಿ  ವಿಷ ಮಿಶ್ರಣ ಮಾಡಿ ಸೇವಿಸಿ  ಆತ್ಮಹತ್ಯೆಗೆ ಶರಣು. ಗ್ರಾಮದಲ್ಲಿ ಆವರಿಸಿದ ಸೂತಕದ ಛಾಯೆ.ಇನ್ನು ಈ ಬಗ್ಗೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Rate this item
(0 votes)

ನಕಲಿ ವೈದ್ಯ ಅಯುತ್ತು ನಕಲಿ ಶಿಕ್ಷಕ ಅಯುತ್ತು ಇವಾಗ ನಕಲಿ ಲಾಯರ್ ಕಥೆ! ನೀವು ನಕಲು ದಾಖಲೆ ಸೃಷ್ಟಿ ಮಾಡೊ ವಕೀಲರನ್ನು ನೊಡಿರತ್ತಿರಾ ಅದರೆ ಇಲ್ಲಿ ಬರಿ ದಾಖಲೆಗಳು ಮಾತ್ರವಲ್ಲ ವಕೀಲ ನೇ ನಕಲಿ !!!!

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ವಕೀಲರೊಬ್ಬರ ಕಥೆ ಇದು ಮಡವಿನಕೋಡಿ ಗ್ರಾಮದ ಗ್ರಾ.ಪಂ.ನಿವೃತ್ತ ಕಾರ್ಯದರ್ಶಿ ಚಂದ್ರಶೇಖರ್ ಮಗ ಎಂ.ಸಿ. ಪ್ರವೀಣ್ ಕುಮಾರ್ ನಕಲಿ ವಕೀಲ ಅಂತಿಮ ವರ್ಷದ ಪರೀಕ್ಷೆ ಬರೆಯದೆ ಅಂಕಪಟ್ಟಿ ಪಡೆದಿರುವ ಆರೋಪ ಮೈಸೂರು ವಿವಿಯಿಂದ ನಕಲಿ ಪದವಿ ದಾಖಲೆ ವಿತರಣೆ ಮಾಡಲಾಗಿದೆ. ನಕಲಿ ಪದವಿ ಪಡೆದು ತಾಲೂಕಿನ ನ್ಯಾಯಾಲಯದಲ್ಲಿ ವಕೀಲಗಿರಿ ನಡೆಸುತ್ತಿದ್ದರು.ಇವರ ಸಹದ್ಯೋಗಿ ವಕೀಲರಗಳೇ ನಕಲಿ ಪದವಿ ಬಯಲಿಗೆಳೆದಿದ್ದಾರೆ. ಇವರು ೧೯೯೮ ರಲ್ಲಿ ಕಾನೂನು ಪದವಿಗೆ ಸೇರ್ಪಡೆಗೊಂಡಿದ್ದಾರೆ. ನಂತರದಲ್ಲಿ ೨೦೧೫ ರಲ್ಲಿ ಕಾನೂನು ಪದವಿ ಮುಗಿದಿದೆ ಎಂದು ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದಾರೆ ಎಂದು ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ರಾಜೇಶ್ ಆರೋಪಿಸಿದ್ದಾರೆ.ಇವರ ಕಾನೂನು ಪದವಿ ದಾಖಲೆಗಳನ್ನೂ ರಾಜೇಶ್ ನೇತೃತ್ವದಲ್ಲಿ ಹಲವು ವಕೀಲರು ಕಾಲೇಜು ಮತ್ತು ವಿಶ್ವವಿದ್ಯಾನಿಲಯದಲ್ಲಿ ಪಡೆದು ನಂತರ ಇವರು ನಕಲಿ ಕಾನೂನು ಪದವಿ ಅಂಕಪಟ್ಟಿಗಳು ಎಂದು ತಿಳಿದು ಬಂದಿದೆ. 

ಇವರ ಮೇಲೆ ಇನ್ನೊಂದು ಆರೋಪ ಸಹ ಇದೆ ನಕಲಿ ದಾಖಲೆ ಜೊತೆಗೆ ಎಸ್.ಸಿ.ಜಾತಿ ಸುಳ್ಳು ದೃಢಿಕರಣ ಪತ್ರ ಪಡೆದಿರುವ ವಕೀಲ ಮೂಲತಃ ಒಕ್ಕಲಿಗ ಜಾತಿಗ ಸೇರಿದ ಇವರು, ಕಾನೂನು ಪದವಿಗೆ ಸೇರಲು ಸುಳ್ಳು ಜಾತಿ ದೃಡಿಕರಣ ಪತ್ರ ನೀಡಿ ದಾಖಲಾಗಿದ್ದಾರೆ ಎಂದು ವಕೀಲ ಜಿ.ಜೆ.ಲೋಕೇಶ್ ಆರೋಪಿಸಿದ್ದಾರೆ. ಈ ಸಂಬಂಧ ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ೪೨೦ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ.ನ್ಯಾಯ ಎಲ್ಲಿದೆ ನ್ಯಾಯ ಕೂಡಿಸುವ ವಕೀಲರೇ ನಕಲಿ ಇನ್ನೂ ನ್ಯಾಯದ ಕಥೆ ದೇವರೆ ಗತಿ....

Rate this item
(0 votes)

ಅಪಘಾತ ದಿಂದ ಸಾವನ್ನಪ್ಪಿದ ಗುತ್ತಿಗೆದಾರ ಶ್ರೀನಿವಾಸ್ ರವರ ಪತ್ನಿ ಸವಿತಾ ರವರಿಗೆ ಗುತ್ತಿಗೆದಾರರ ಸಂಘದ ಕೇಂದ್ರ ಕರ್ಯಾಕಾರಿಣಿ ಸಮಿತಿ ಸದಸ್ಯರಾದ ಕೆಂಪರಾಜು.ಎನ್ ಮಳವಳ್ಳಿ ರವರು ಪರಿಹಾರದ ಚೆಕ್ ವಿತರಣೆ ಮಾಡಿದರು

ನಾಗಮಂಗಲ : ಶ್ರೀ ರಾಮಕೃಷ್ಣ ಎಲೆಕ್ಟ್ರಿಕಲ್ಸ್ ನ N R ಶ್ರೀನಿವಾಸ್ ವಾಹನ ಅಪಘಾತದಿಂದ ಮೃತಪಟ್ಟಿದ್ದರು ಇವರ ಕುಟುಂಬಕ್ಕೆ ವಿದ್ಯುತ್ ಗುತ್ತಿಗೆದಾರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿಯ ಸದ್ಯಸರಾದ ಕೆಂಪರಾಜು .ಎನ್ ಮಳವಳ್ಳಿ ರವರು ಪರಿಹಾರದ ಚೆಕ್ ವಿತರಣೆ ಮಾಡಿದರು.N R ಶ್ರೀನಿವಾಸ್ ರವರ ಮರಣ ಪರಿಹಾರ ಚೆಕ್ ನ್ನು ಅವರ ಪತ್ನಿಯಾದ H.K ಸವಿತಾ ರವರಿಗೆ ನಾಗಮಂಗಲದ ಅವರ ಮನೆಯೆಲ್ಲೇ ಕೆಂದ್ರ ಸಮಿತಿಯ ಸದಸ್ಯರಾದ ಸಂಪತ್ ಕುಮಾರ್ ಸಲಹಾಸಮಿತಿ ಸದಸ್ಯರಾದ ದೇವಿಪ್ರಸಾದ್ ಜಿಲ್ಲಾ ಅಧ್ಯಕ್ಷರಾದ ದಿನೇಶ್ ಎ.ಎನ್ ಹಾಗೂ ಮಂಡ್ಯ ಜಿಲ್ಲೆಯ ಪದಾಧಿಕಾರಿಗಳು ಮತ್ತು ನಾಗಮಂಗಲ ತಾಲ್ಲೂಕಿನ ಗುತ್ತಿಗೆದಾರರ ಸಮ್ಮುಖದಲ್ಲಿ ಕೆಂಪರಾಜ .ಎನ್ ಮಳವಳ್ಳಿ ರವರು ಪರಿಹಾರದ ಚೆಕ್ ಅನ್ನು ಅವರ ಪತ್ನಿ ಸವಿತಾ ರವರಿಗೆ ವಿತರಣೆ ಮಾಡಿದರು.

 

Last modified on Saturday, 15 September 2018 07:42
Page 16 of 27

Visitors Counter

228047
Today
Yesterday
This Week
This Month
Last Month
All days
21
270
801
4448
6704
228047

Your IP: 18.227.81.35
2024-05-15 07:24

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles