ಮಹಾನ್ ಕ್ರಾಂತಿ ಕಾರಿ ಯುಗಪುರುಷ ಹಾಗೂ ಕಾಲ್ ೯ಮಾಕ್ಸ್ ೯ ರವರ ದ್ವಿಶತಮಾನೋತ್ಸವ ಹಾಗೂ ಅವರ ಮೇರುಕೃತಿ ಬಂಡವಾಳ ದ 150 ನೇ ವರ್ಷಾಚರಣೆ ಅಂಗವಾಗಿ ಸಿಪಿಐ(ಎಂ) ವತಿಯಿಂದ ದುಡಿಯುವ ವರ್ಗ ಮತ್ತು ಮಾಕ್ಸ್೯ ಸಿದ್ದಾಂತ ಕುರಿತು ವಿಚಾರ ಸಂಕಿರಣ ಮಳವಳ್ಳಿ ಪಟ್ಟಣದಲ್ಲಿ ನಡೆಸಲಾಯಿತು.
ಮಂಡ್ಯ: ಜಿಲ್ಲೆಯ ಮಳವಳ್ಳಿ ಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆದ ಕ್ರಾಂತಿ ಕಾರಿ ಯುಗಪುರುಷ ಹಾಗೂ ಕಾಲ್ ೯ಮಾಕ್ಸ್ ೯ ರವರ ದ್ವಿಶತಮಾನೋತ್ಸವ ಹಾಗೂ ಅವರ ಮೇರುಕೃತಿ ಬಂಡವಾಳ ದ 150 ನೇ ವರ್ಷಾಚರಣೆ ಸಂಕಿರಣವನ್ನು ಸಿಪಿಐ(ಎಂ) ರಾಜ್ಯ ಸಂಚಾಲಕ ಉಮೇಶ ಚಾಲನೆ ನೀಡಿ ಮಾತನಾಡಿ, ಮಾಕ್ಸ್ ೯ವಾದ ವನ್ನು ವಿದೇಶ ವಾದ ಎಂದು ಅಪಪ್ರಚಾರ ಮಾಡಿರುವುದನ್ನು ಖಂಡಿಸಿದ ಅವರು ಮಾಕ್ಸ್೯ರವರು ಸರಿ ತಪ್ಪು ಗಳ ಬಗ್ಗೆ ವಾದ ಮಾಡಿದರು ಅವರು ಕ್ರಾಂತಿಕಾರಿ ಯುಗಪುರುಷ. ಜಗತ್ತಿನಲ್ಲಿರುವವರು ಎಲ್ಲರೂ ಒಂದಾಗಬೇಕು ಎಂದು ಸಾರಿದರು ಎಂದರು .
ಕಾರ್ಯಕ್ರಮ ದಲ್ಲಿ ಜನವಾದಿ ಮಹಿಳಾ ಸಂಘಟನೆ ಜಿಲ್ಲಾದ್ಯಕ್ಷೆ ದೇವಿ, ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ಎಲ್ ಭರತ್ ರಾಜು, ಸುಶೀಲ, ಸುನೀತಾ .ತಿಮ್ಮೇಗೌಡ. ಮಂಜುಳ ಸೇರಿದಂತೆ ಮತ್ತಿತ್ತರರು ಇದ್ದರು.