Rate this item
(0 votes)

ಮಾವಿನಕಟ್ಟೆ ಕೊಪ್ಪಲು ಗ್ರಾಮದ ಮಹಿಳಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಭಾಗ್ಯಮ್ಮ ಉಪಾಧ್ಯಕ್ಷರಾಗಿ ಸುಜಾತ ಆಯ್ಕೆಯಾದರು.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಮಾವಿನಕಟ್ಟೆ ಕೊಪ್ಪಲು ಗ್ರಾಮದ ಮಹಿಳಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಭಾಗ್ಯಮ್ಮ ರಂಗಸ್ವಾಮಿ ಅವಿರೊದವಾಗಿ ಆಯ್ಕೆಯಾದರು.ಒಟ್ಟು ಎಂಟು ಜನ ನಿರ್ದೇಶಕರು ಗಳಲ್ಲಿ ಯಾರು ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ ಕಾರಣ ಭಾಗ್ಯಮ್ಮ ಅವಿರೊದವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸುಜಾತ ಆಯ್ಕೆಯಾದರು ಮತ್ತು ನಿರ್ದೇಶಕರಾಗಿ ಸಣ್ಣತಾಯಮ್ಮ, ಸುನಂದಮ್ಮ, ರಂಗಮ್ಮ , ದೇವಮ್ಮ,ನೀಲಮ್ಮ, ಸಾವಿತ್ರಮ್ಮ ಆಯ್ಕೆಯಾದರು.

Last modified on Tuesday, 28 August 2018 11:54
Rate this item
(0 votes)

 ಗ್ರಾಮ ವಾಸ್ತವ್ಯ ಹೂಡುವುದರಿಂದ  ಜನರ ನಿಜಜೀವನ ಕಷ್ಟಸುಖಗಳನ್ನು ಹತ್ತಿರದಿಂದ ನೋಡುವುದಕ್ಕಾಗಿ ಮಾಡುತ್ತಿದ್ದೇನೆ ಬುಟಾಟಿಕೆಯಿಂದಲ್ಲ ಎಂದು ಶಾಸಕ ಡಾ.ಅನ್ನದಾನಿ ತಿಳಿಸಿದರು. 

ಮಳವಳ್ಳಿ: ತಾಲ್ಲೂಕಿನ ಹೂವಿನಕೊಪ್ಪಲು ಗ್ರಾಮದ ಸಿದ್ದಮ್ಮ ಎಂಬು ಬಡವರ ಮನೆಯಲ್ಲಿ ವಾಸ್ತವ್ಯ ಹೂಡಿ ನಂತರ ಪತ್ರಕರ್ತರ ಜೊತೆ ಮಾತನಾಡಿದ ಶಾಸಕ ಡಾ.ಅನ್ನದಾನಿ  ಇದುವರೆಗೂ ನಾನು ಶಾಸಕನಾದ ನಂತರ ನಾಲ್ಕು ಗ್ರಾಮಗಳಲ್ಲಿ ವಾಸ್ತವ್ಯ ಹೂಡಿದ್ದು  ಬೀದಿಬೀದಿಗಳ ಜನರ ಕಷ್ಟಗಳನ್ನು ತಿಳಿಯಬಹುದು,  ನಮ್ಮ ನಾಯಕ ಹೆಚ್.ಡಿ ಕುಮಾರಸ್ವಾಮಿರವರು ತಾಯಿ ಹೃದಯ ವುಳ್ಳವರು ಅದಕ್ಕಾಗಿಯೇ ಕಾಂಗ್ರೆಸ್ ಪಕ್ಷದವರು ತಮ್ಮ ಸಹೋದರರಂತೆ ಕಾಣುತ್ತಾರೆ.  ಕಾಂಗ್ರೆಸ್ ರವರು ಸೇರಿ ಸಂಮಿಶ್ರ ಸರ್ಕಾರವನ್ನು ರಚಿಸಿದ್ದಾರೆ ಎಂದರು.  ಸಿದ್ದರಾಮಯ್ಯರವರು ಮುಂದಿನ ಮುಖ್ಯ ಮಂತ್ರಿಯಾಗುವ ಹೇಳಿಕೆಗೆ ಬಗ್ಗೆ ಕೇಳಿದ  ಪ್ರಶ್ನೆಗೆ ಉತ್ತರಿಸಿದ ಶಾಸಕ ಅನ್ನದಾನಿರವರು ಈಗಾಗಲೇ ರಾಹುಲ್ ಗಾಂಧಿರವರು  ಮುಂದಿನ 5 ವರ್ಷಗಳ ಕಾಲ ಕುಮಾರಸ್ವಾಮಿ ರವರು ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದ್ದಾರೆ  ಸಿದ್ದರಾಮಯ್ಯ ಹೇಳಿಕೆಗೆ ಉತ್ತರ ಕೊಡುವ ಮಟ್ಟಕ್ಕೆ ನಾನು ಬೆಳೆದಿಲ್ಲ , ಅವರಿಗೆ ಮೇಲೆಮಟ್ಟದ ನಾಯಕರಾದ ದೇವೇಗೌಡಜೀ, ಕುಮಾರಣ್ಣ ಉತ್ತರ ನೀಡುತ್ತಾರೆ. ಸಮನ್ವಯ ಸಮಿತಿಯಲ್ಲಿ  ಮೂಡಿದರೆ ಎಂಬ ಪ್ರಶ್ನೆಗೆ ಸಮನ್ವಯ ಸಮಿತಿಯಲ್ಲಿ ಎರಡು ಪಕ್ಷದವರು ಇದ್ದಾರೆ ಎಂದಷ್ಟೇ ಹೇಳಿದರು.  ನಾಲೆಗಳಿಗೆ ನೀರು ಬಿಟ್ಟಿಲ್ಲ ಎಂಬ ಮಾತು ಕೇಳು ಬರುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ಅನ್ನದಾನಿರವರು ಸಮಸ್ಯೆಗಳನ್ನು ತಿಳಿದುಕೊಳ್ಳಲು  ಈ ಗ್ರಾಮ ವಾಸ್ತವ್ಯ  ಕೆಲವರು ಚುನಾವಣೆ ಸಂದರ್ಭದಲ್ಲಿ ಜನರ ಬಳಿ ಬರುತ್ತಾರೆ. ನಾನು ಗೆದ್ದ ನಂತರ ಪ್ರತಿ ಗ್ರಾಮಗಳಿಗೂ ತೆರಳಿ ನಮ್ಮ ಜನರ ಸಮಸ್ಯೆಗಳನ್ನು ತಿಳಿದುಕೊಂಡು ಸಾಧ್ಯವಾದರೆ ಸ್ಥಳದಲ್ಲಿಯೇ ಬಗೆಹರಿಸಲು ಅಧಿಕಾರಗಳ ತಂಡವನ್ನು ಕರೆದುಕೊಂಡು ಹೋಗುತ್ತಿದ್ದೇನೆ ಎಂದರು .    

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ನಟೇಶ್, ಮಾಜಿ ಸದಸ್ಯ ಪ್ರಕಾಶ್, ಜಯರಾಜು, ಕೃಷ್ಣಮೂರ್ತಿ, ಶೇಖರ್, ಹೂವಿನಕೊಪ್ಪಲು ಸ್ವಾಮಿ, ಸೇರಿದಂತೆ ಮತ್ತಿತ್ತರರು ಇದ್ದರು.

 

ಕೃಷ್ಣರಾಜಪೇಟೆ ತಾಲ್ಲೂಕು ತಹಶೀಲ್ದಾರ್ ಕೆ.ಮಹೇಶ್ಚಂದ್ರ ಅಪಹರಣ ಪ್ರಕರಣ ಬೇಧಿಸಿದ ಕೆ.ಆರ್.ನಗರ ಪೋಲಿಸರು

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕು ತಹಶೀಲ್ದಾರ್ ಕೆ.ಮಹೇಶ್ಚಂದ್ರ ಅಪಹರಣ ಪ್ರಕರಣ ಬೇಧಿಸಿದ ಕೆ.ಆರ್.ನಗರ ಪೋಲಿಸರು.ತಾಲೂಕಿನ ಶೀಳನೆರೆ ಗ್ರಾಮದವರಾದ ರೈಲ್ವೆ ಇಲಾಖೆಯಲ್ಲಿ ಸ್ಡೋರ್ ಕೀಪರ್ ಕೆಲಸ ಮಾಡುತ್ತಿದ್ದ ದಿ. ನಾಗಣ್ಣಗೌಡರ ಮಗ ಯೋಗೇಂದ್ರ ಕೆ.ಎನ್ (೩೦), ಶೀಳನೆರೆ ತಾ.ಪಂ ಸದಸ್ಯ ನಿಂಗರಾಜು ಎಸ್.ಕೆ. ಎಂಬುವರ ಮಗ ದೀಪು@ ದೀಪಕ್ ಎಸ್.ಎನ್. (೨೯), ದಿ.ಚಿಕ್ಕನಂಜೇಗೌಡರ ಮಗ ಚಂದು ಎಸ್.ಸಿ.(೨೪), ಪಟ್ಟಣದ ಮುಸ್ಲಿಂ ಬ್ಲಾಕ್ ನಿವಾಸಿ ನಾಗೇಗೌಡರ ಮಗ ಸೋಮಶೇಖರ್ (೩೧) ಮತ್ತು ಕಿಕ್ಕೇರಿ ಗ್ರಾಮದ ಲಕ್ಷ್ಮಣ ಎಂಬುವರ ಮಗ ಶ್ರೇಯಸ್ @ ಕರಿಯ್ಯ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ತಹಸೀಲ್ದಾರ್ ಕೆ.ಮಹೇಶ್ಚಂದ್ರ ಕೆಲಸ ಮುಗಿಸಿಕೊಂಡು ಕೆ.ಆರ್.ನಗರದ ಮನೆಗೆ ತೆರಳುವಾಗ ರಾತ್ರಿ ವೇಳೆ ಚಿಕ್ಕವಡ್ಡರಗುಡಿ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಇವರನ್ನು ಅಪಹರಣ ಮಾಡಿದ್ದರು. ಬೆಳಗ್ಗೆ ಅಪಹರಣ ಮಾಡಿದವರು ತಾಲೂಕಿನ ತೆಂಡೇಕೆರೆ ಬಳಿ ಬಿಟ್ಟು ಪ್ರಾಣ ಬೆದರಿಕೆ ಹೊಡ್ಡಿ ತೆರಳಿದ್ದರು. ಮಹೇಶ್ಚಂದ್ರ ಅವರು ಪಟ್ಟಣದ ಪೊಲೀಸರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿ ವಿಶ್ರಾಂತಿ ಪಡೆಯುತ್ತಿದ್ದರು. ಇವರನ್ನ ಡಿ.ಸಿ ರಾಧಿಕಾ ಧೀರ್ಘ ಕಾಲದ ರಜೆ ನೀಡಿ ಕಳಿಸಿದ್ದರು. ಕೆ.ಆರ್.ನಗರ ಪೊಲೀಸರು ಪ್ರಕರಣದ ಬೆನ್ನತ್ತಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಿದ್ದಾರೆ. ಆರೋಪಿಗಳೆಲ್ಲ ವಿದ್ಯಾವಂತರಾಗಿದ್ದು, ಎಲ್ಲಾ ರೈಲ್ವೆ ಇಲಾಖೆ ಸೇರಿದಂತೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಅದರಲ್ಲೂ ಮೂವರು ಶೀಳನೆರೆ ಗ್ರಾಮದವರಾಗಿದ್ದಾರೆ. ಎಲ್ಲರೂ ಸ್ನೇಹಿತರಾಗಿದ್ದಾರೆ‌. ರೈತರ ಸಾಲ ಮನ್ನಾಗೆ ಒತ್ತಾಯಿಸಿ ತಹಸೀಲ್ದಾರರನ್ನು ಒತ್ತಾಯಾಗಿಟ್ಟುಕೊಂಡು ಸರ್ಕಾರಕ್ಕೆ ಒತ್ತಡ ತರುವ ಸಲುವಾಗಿ ಅಪಹರಣ ಮಾಡಿದ್ದಾಗಿ ಆರೋಪಿಗಳು ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ಪೊಲೀಸರು ಕೆ.ಆರ್.ನಗರದ ಪಿ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

 

Rate this item
(0 votes)

ವಿವಿದ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಹಾಲು ಉತ್ಪಾದಕರು ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಮಳವಳ್ಳಿ ಪಟ್ಟಣದ ಮನ್ ಮುಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. 

ಮಳವಳ್ಳಿ: ವಿವಿದ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಹಾಲು ಉತ್ಪಾದಕರು ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಮಳವಳ್ಳಿ ಪಟ್ಟಣದ ಮನ್ ಮುಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ  ಎನ್.ಎಲ್ ಭರತ್ ರಾಜ್ ನೇತೃತ್ವದಲ್ಲಿ  ಪಟ್ಟಣದ ಕೆ.ಎಸ್.ಅರ್.ಟಿ.ಸಿ ಬಸ್ ನಿಲ್ದಾಣದಿಂದ ಹೊರಟ ಪ್ರತಿಭಟನಾಕಾರರು ಮನ್ ಮುಲ್ ವಿರುದ್ದ ಘೋಷಣೆ ಕೂಗುತ್ತಾ ಪಟ್ಟಣದ ಪ್ರಮುಖಬೀದಿಗಳ ಮೂಲಕ ಮನ್ ಮುಲ್ ಉಪಕಚೇರಿ ಮುಂದೆ  ಪ್ರತಿಭಟನೆ ನಡೆಸಿದರು. ಇದೇ ಸಂದರ್ಭದಲ್ಲಿ  ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ಎಲ್ ಭರತ್ ರಾಜ್ ಮಾತನಾಡಿ, ಪ್ರತಿ ಲೀಟರ್ ಹಾಲಿಗೆ 50 ರೂ ನೀಡಬೇಕು, ಇದಲ್ಲದೆ ಎರಡು ಸರ್ಕಾರಗಳು ತಲಾ 10 ರೂ ಸಬ್ಸಿಡಿ ನೀಡಬೇಕು , ಜೊತೆಗೆ  5 ರೂ ಪ್ರೋತ್ಸಾಹ ಧನವನ್ನು ನೀಡಬೇಕು  ಎಂದು ಒತ್ತಾಯಿಸಿದರು.  ಮನ್ ಮುಲ್  ಒಕ್ಕೂಟದಲ್ಲಿ ರುವ ಆಡಳಿತ ಮಂಡಳಿಯು ಪಕ್ಷಾತೀತವಾಗಿ ಲೂಟಿ ಮಾಡುತ್ತಿದ್ದಾರೆ, ಹಾಲು ಉತ್ಪಾದಕ ರ ಸಹಕಾರ ಸಂಘಗಳಲ್ಲಿ ದುಡಿಯುವ ನೌಕರರಿಗೆ ಸರಿಯಾದ ಸಂಬಳ, ಕೆಲಸದ ಗ್ಯಾರಂಟಿ ಮತ್ತು ಸರ್ಕಾರಿ ಸೌಲಭ್ಯ ಗಳನ್ಬು ನೀಡಬೇಕು ಎಂದು ಒತ್ತಾಯಿಸಿದರು  ಇದೇ ಸಂದರ್ಭದಲ್ಲಿ   ಕಚೇರಿ ಉಪ ವ್ಯವಸ್ಥಾಪಕ  ಡಾ.ಕೃಷ್ಣ ಮೂರ್ತಿರವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಟಿ.ಹೆಚ್ ಆನಂದ, ಸುಶೀಲ, ಲಿಂಗರಾಜು, ಟಿ ಸಿ ರವಿ,  ಮಹೇಶ್ ಸೇರಿದಂತೆ  ಮತ್ತಿತರರು ಇದ್ದರು.

Rate this item
(0 votes)

ಮೂರು ಲಕ್ಷ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಯುವಕ

ಮಳವಳ್ಳಿ: ಸಾಲ ತೀರಿಸುವುದಕ್ಕೆ ಹೆದರಿ ಯುವಕನೊಬ್ಬ ನೇಣಿಗೆ ಶರಣಾಗಿರುವ  ಘಟನೆ ಮಳವಳ್ಳಿ ತಾಲ್ಲೂಕಿನ ಗೌಡಗೆರೆ  ಗ್ರಾಮದಲ್ಲಿ ನಡೆದಿದೆ ಗ್ರಾಮದ ಚಿಕ್ಕಮೊಗ್ಗಣ್ಣ ಪುತ್ರ ಗುರುಮಲ್ಲಯ್ಯ (26). ಮೃತಪಟ್ಟ ದುದೈವಿ ಈತ  ಸುಮಾರು 3 ಲಕ್ಷ ರೂ ಸಾಲ ಮಾಡಿದ್ದು.  ನಿನ್ನೆ ಮನೆಯಲ್ಲಿ ತಾಯಿ ಹಾಗೂ ಮಗ ಜಗಳವಾಗಿದ್ದು. ಬೆಳಿಗ್ಗೆ ಮಗ ಕಾಣದೆ ಕಂಗಾಲಾಗಿದ್ದ ಪೋಷಕರು .ತನ್ನ ಜಮೀನಿನ ಮರ ಒಂದಕ್ಕೆ ನೇಣಿಗೆ ಶರಣಾಗಿದ್ದಾನೆ. ಶವವನ್ನು ಮಳವಳ್ಳಿ ಸಾರ್ವಜನಿಕ ಆಸ್ವತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಈ ಸಂಬಂಧ  ಗ್ರಾಮಾಂತರ ಪೊಲೀಸ ಠಾಣೆ  ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Rate this item
(0 votes)

ಭಾರತೀಪುರ ಕ್ರಾಸ್ ಗ್ರಾಮ ಪಂಚಾಯತಿ ಅಧ್ಯಕ್ಷೆ ದೇವಮ್ಮ ಶಂಕರೇಗೌಡ ಮತ್ತು ಅವರ ಪುತ್ರರಾದ ಮೊಟ್ಟೆಮಂಜು ಅವರು ಒಂದುಲಕ್ಷದ ಒಂದು ಸಾವಿರ ರೂ ಹಣವನ್ನು ವಯಕ್ತಿಕ ದೇಣಿಗೆಯಾಗಿ ನೀಡಿದರು.

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಭಾರತೀಪುರ ಕ್ರಾಸ್ ಗ್ರಾಮ ಪಂಚಾಯತಿ ಅಧ್ಯಕ್ಷೆ ದೇವಮ್ಮ ಶಂಕರೇಗೌಡ ಮತ್ತು ಅವರ ಪುತ್ರರಾದ ಮೊಟ್ಟೆಮಂಜು ಅವರು ಕೊಡಗು ನೆರೆ ಸಂತ್ರಸ್ತರಿಗೆ ಒಂದುಲಕ್ಷದ ಒಂದು ಸಾವಿರ ರೂ ಹಣವನ್ನು ವಯಕ್ತಿಕ ದೇಣಿಗೆಯಾಗಿ ನೀಡಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. ದೇವಮ್ಮ ಅವರು ಗ್ರಾಮದೇವತೆ ಹಬ್ಬವನ್ನು ಮಾಡಲು ಸಂಗ್ರಹಿಸಿ ಇಟ್ಟಿದ್ದ ಒಂದುಲಕ್ಷದ ಒಂದು ಸಾರವಿರ ರೂ ಹಣವನ್ನು ಕೊಡಗು ಸಂತ್ರಸ್ತರ ಪರಿಹಾರ ನಿಧಿಗೆ ತಹಶೀಲ್ದಾರ್ ಲಕ್ಷ್ಮೀಕಾಂತ್ ಅವರಿಗೆ ನೀಡುವ ಮೂಲಕ ಎಲ್ಲರಿಗೂ ಮಾದರಿಯಾದರು.

ಈ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷೆ ಜಯಲಕ್ಷ್ಮಿ, ಉಪಾಧ್ಯಕ್ಷ ಜಾನಕೀರಾಂ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಮೌಳಿ, ಬಿಇಓ ಎಸ್.ರೇವಣ್ಣ ಮತ್ತಿತರರು ಭಾಗವಹಿಸಿದ್ದರು.

Rate this item
(0 votes)

ರೈತ ತಾನು ಕಷ್ಟ ಪಟ್ಟು ಬೆಳೆದ ರೇಷ್ಮೆ ಬೆಳೆಯನ್ನು ಮಾರಿ ಕೊಡುಗು ಹಾಗೂ ಕೇರಳದ ಸಂತ್ರಸ್ತರಿಗೆ ಅರ್ಪಿಸಿ ಮಾನವೀಯತೆ ಮೇರೆದ ಮಂಡ್ಯದ ರೈತ.

ಮಳವಳ್ಳಿ  :ರಾಜ್ಯದಲ್ಲಿ  ಕಳೆದ. 4 ವರ್ಷದಿಂದಲೂ ಮಳೆ ಇಲ್ಲದೆ ರೈತರು ಕಂಗಾಲಾಗಿ  ಜೀವನ ನಡೆಸಲು ಸಂಕಷ್ಟದಲ್ಲಿದ್ದರೂ ಇಲ್ಲೊಬ್ಬ ರೈತ ತಾನು ಬೆಳೆದ ರೇಷ್ಮೆ ಬೆಳೆಯನ್ನು ಮಾರಿ ಕೊಡುಗು ಹಾಗೂ ಕೇರಳದ ಸಂತ್ರಸ್ತರಿಗೆ ಅರ್ಪಿಸಿ ಮಾನವೀಯತೆ ಮೆರೆದಿರುವ ಘಟನೆ ಮಳವಳ್ಳಿ ಪಟ್ಟಣದಲ್ಲಿ ನಡೆದಿದೆ. ಮಳವಳ್ಳಿ ಪಟ್ಟಣದ ಪೇಟೆ ನಿವಾಸಿ ಹೆಚ್. ಬಸವರಾಜು  ಎಂಬುವವರೆ  ಮಾನವೀಯತೆ ಮೆರೆದ ವ್ಯಕ್ತಿ, ಯಾಗಿದ್ದು,  ಆರು ತಿಂಗಳಿನಿಂದ  ಕಷ್ಟಪಟ್ಟು ಬೆಳೆದ  ಸುಮಾರು 130 ಕೆ.ಜಿ ಯಷ್ಟು ರೇಷ್ಮೆ ಬೆಳೆಯನ್ನು ಬಸವರಾಜು ರವರ ತೋಟದ ಮನೆಯಲ್ಲಿ  ಹರಾಜು ಮಾಡಲಾಗಿ ಕೆ.ಜಿ ಗೆ 302 ರೂ ರಂತೆ ಕೂಗಿದರು ಅದರಂತೆ  ಸುಮಾರು 30 ಸಾವಿರ ರೂ ರಷ್ಟು ಅಂದಾಜು ಮಾಡಲಾಗಿದೆ.

  ಇದೇ ಸಂದರ್ಭದಲ್ಲಿ  ರೈತ ಹೆಚ್. ಬಸವರಾಜು  ಮಾತನಾಡಿ,  ಮಂಡ್ಯ ಜಿಲ್ಲೆಯ ರೈತರಿಗೆ  ನೀರು ಪೂರೈಸುವ ಜಿಲ್ಲೆ ಕೊಡುಗು ಈಗ ಕೊಡಗಿನಲ್ಲಿ  ಮಳೆರಾಯನ ಅಟ್ಟಹಾಸಕ್ಕೆ ಅಲ್ಲಿನ ಜನ ಜೀವನ ಅಸ್ತವ್ಯಸ್ತ ವಾಗಿದ್ದು , ಅವರು ನಮ್ಮಂತೆಯೇ ಎಂದು ತಿಳಿದು ನಾನು ಅವರಿಗೆ ನನ್ನ ಕೈಯಲ್ಲಿ ಸಣ್ಣ ಕಿರುಸಹಾಯ ಮಾಡುತ್ತಿದ್ದೇನೆ. ಪ್ರತಿಯೊಬ್ವರು ಸಹ ಅಲ್ಲಿನ ಜನರು ನಮ್ಮವರು ಎಂದು ತಿಳಿದು ಸಹಾಯ ಮಾಡಿ  . ನಾಳೆ ಬೆಳಿಗ್ಗೆ  ತಹಸೀಲ್ದಾರ್ ಮೂಲಕ ಮುಖ್ಯ ಮಂತ್ರಿ  ಪರಿಹಾರ ನಿಧಿ ನೀಡುತ್ತೇವೆ ಎಂದರು. ಇದೇ ಸಂದರ್ಭದಲ್ಲಿ  ರೈತನ ಪತ್ನಿ  ಸುನೀತಾ ರವರು ಸಹ  ನನ್ನ ಗಂಡ ಇಂತಹ ಒಳ್ಳೆಯ ಕೆಲಸ ಮಾಡಿರುವುದಕ್ಕೆ ನನಗೂ ಸಂತೋಷವಾಗಿದೆ. ಎನ್ನುವ ಮೂಲಕ. ರೈತನಿಗೂ ಸಾಥ್ ನೀಡಿ ಮಾನವೀಯತೆ ಮೆರೆದಿದ್ದಾರೆ.

ಇದೇ ಸಂದರ್ಭದಲ್ಲಿ  ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ  ಪುಟ್ಟುಮಾದು, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ರವರು ರೈತ ಕುಟುಂಬಕ್ಕೆ  ಅಭಿನಂದನೆ ಸಲ್ಲಿಸಿದರು.

 

Rate this item
(0 votes)

ಮೂರು ಕಾಡಾನೆಗಳ ಹಿಂಡು ದಾಳಿಯಿಂದ ಭತ್ತದ ಗದ್ದೆ ನಾಶವಾಗಿರುವ  ಘಟನೆ ತಾಲ್ಲೂಕಿನ ಸೋಲಬ ಗ್ರಾಮದಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಸೋಲಬ ಗ್ರಾಮದಲ್ಲಿ ಮುನಿವೆಂಕಟಯ್ಯ ಎಂಬ ಬಡ ರೈತರ ಜಮೀನಿಗೆ  ಮೂರು ಕಾಡಾನೆಗಳ ಹಿಂಡುಗಳ ದಾಳಿಯಿಂದ ಭತ್ತದ ಗದ್ದೆ ನಾಶವಾಗಿರುವ  ಘಟನೆ ಸೋಲಬ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಮುನಿವೆಂಕಟಯ್ಯ ಎಂಬುವರಿಗೆ ಸೇರಿದ 7 ಗುಂಟೆ ಹಾಕಿದ ಭತ್ತದ ಗದ್ದೆ ನಾಶವಾಗಿದ್ದು , ಸುಮಾರು 30 ಸಾವಿರ ರೂ ನಷ್ಟವಾಗಿದ್ದು, ಮುನಿವೆಂಕಟಯ್ಯ ದೂರಿನ ಮೇರೆಗೆ  ಸ್ಥಳಕ್ಕೆ ಅರಣ್ಯಾಧಿಕಾರಿ ಪ್ರವೀಣ್ ಬೇಟಿ ಪರಿಶೀಲನೆ ನಡೆಸಿದ್ದರು.  ಈ ಕಾಡಾನೆಗಳು ಬಸವನಬೆಟ್ಟದ ಕಡೆಯಿಂದ ಬಂದಿದ್ದು  ಮೂರು ಕಾಡಾನೆಗಳಿದ್ದು ,   ಈಗಾಗಲೇ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಡಾನೆಗಳನ್ನು ಕಾಡಿಗೆ ಕಳುಹಿಸಲು ಹರಸಾಹಸ ಪಡುತ್ತಿದ್ದಾರೆ. ಇದಲ್ಲದೆ ಹಾನಿಗೊಳಗಾದ ರೈತ ಮುನಿವೆಂಕಟಯ್ಯ  ಕೂಡಲೇ ಬೆಳೆಹಾನಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇದಲ್ಲದೆ ಈ ಭಾಗದಲ್ಲಿ ಆಗಾಗ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ರೈತರು ಹಾಗೂ ಸಾರ್ವಜನಿಕರು ಆತಂಕಗೊಂಡಿದ್ದಾರೆ.

 

Rate this item
(0 votes)

ಕೆ ಶೆಟ್ಟಹಳ್ಳಿ ಅರಣ್ಯ ವಲಯದ ಬಳಿ ಕಬ್ಬಿನ ಟ್ರಾಕ್ಟರ್ ಗೆ ಕಾರು ಡಿಕ್ಕಿ-ಚಾಲಕ ಗಂಭೀರ ಗಾಯ...

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಶೆಟ್ಟಿಹಳ್ಳಿ ಅರಣ್ಯ ವಲಯದಲ್ಲಿ ಕಬ್ಬು ತುಂಬಿಕೊಂಡು ಸಾಗುತ್ತಿದ್ದ ಟ್ರಾಕ್ಟರ್ ಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿಯಾಗಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ನಡೆದಿದೆ. ಮೈಸೂರಿನ ಖಾಸಗಿ ಟ್ರಾವೆಲ್ಸ್ ಗೆ ಸೇರಿದ ಕಾರು ಇದಾಗಿದ್ದು, ಬೆಂಗಳೂರು ಕಡೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ.ಗಂಭೀರವಾಗಿ ಗಾಯಗೊಂಡಿರುವ ಕಾರಿನ ಚಾಲಕನನ್ನು ಮಂಡ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು,ಹಿಂಬದಿ ಕುಳಿತಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿರುವುದಾಗಿ ತಿಳಿದುಬಂದಿದೆ.

ಈ ಸಂಬಧ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Last modified on Saturday, 25 August 2018 07:52
Rate this item
(0 votes)

ಕೆ.ಆರ್.ಪೇಟೆ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಗವಿ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಜನಪ್ರಸಿದ್ದ ಶ್ರೀ ಗವಿರಂಗನಾಥಸ್ವಾಮಿ ದೇವಾಲಯದಲ್ಲಿ ಕಳ್ಳರು ಕೈಚಳಕ ತೊರಿದ್ದರೆ ನಿನ್ನೆ ರಾತ್ರಿ ದೇವಾಲಯದ ಮುಂಭಾಗದಲ್ಲಿ ಇರುವ ಬೃಹದಾಕಾರದ ಗಂಟೆಸೇರಿದಂತೆ ಹುಂಡಿಹಣವನ್ನು ಸಹ ದೊಚಿಹೊಗಿದ್ದರೆ ‌.ಈ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದು ಇಲಾಖೆ ದೇವಾಲಯದಿಂದ ಬರುತ್ತಿರುವ ಆದಾಯವನ್ನು ಮಾತ್ರವೇ ಪಡೆದು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಲು ವಿಫಲವಾಗಿದೆ ಎಂದು ಸ್ಥಳೀಯರು ಅಧಿಕಾರಿಗಳು ಮೇಲೆ ಕೆಂಡಕಾರಿದ್ದರೆ.

ಈ ದೇವಾಲಯ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು ಸ್ವಚ್ಛತೆ ಇಲ್ಲದೆ ನಾರುತ್ತಿದೆ ಇದು ರಂಗನಾಥಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಂದರು ಪಂಚಾಯತಿ ಅಧಿಕಾರಿಗಳು ನಮಗೂ ದೇವಾಲಯಕ್ಕೆ ಸಂಬಂಧವಿಲ್ಲ ಎಂಬಂತೆ ಮುಜರಾಯಿ ಇಲಾಖೆಯವರು ಅಭಿವೃದ್ಧಿ ಪಡಿಸಬೇಕು ಎಂದು ಕಥೆ ಹೇಳುತ್ತಾರೆ ಎಂದು ಗ್ರಾಮಸ್ಥರು ಮತ್ತು ಭಕ್ತರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.ಕಳ್ಳತನ ವಾಗಿ ಇಷ್ಟುವತ್ತು ಕಳೆದರು ಯಾವುದೇ ಪೋಲಿಸ್ ಅಧಿಕಾರಿಗಳು ಸಹ ಇನ್ನೂ ಬೇಟಿಕೊಟಿಲ್ಲ ಇದು ಪಟ್ಟಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನೆಡೆದಿರುವ ಘಟನೆ ಯಾಗಿದೆ.ಒಟ್ಟು ಎಂಟು ಬೃಹದಾಕಾರದ ಗಂಟೆಗಳು ಮತ್ತು ಹುಂಡಿಹಣದ  ಕಳ್ಳತನವಾಗಿದೆ.

 ಇವಾಗಲಾದರು ಅಭಿವೃದ್ಧಿ ಮಾಡತ್ತಾರ ಕಾದು ನೊಡಬೇಕಿದೆ.

Page 18 of 27

Visitors Counter

225387
Today
Yesterday
This Week
This Month
Last Month
All days
129
285
653
1788
6704
225387

Your IP: 13.59.100.42
2024-05-07 16:36

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles