Rate this item
(0 votes)

ಪೆಟ್ರೋಲ್, ಡೀಸೆಲ್ ಬೆಲೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ  ಕೇಂದ್ರ ಸರ್ಕಾರದ ವಿರುದ್ದ ಕೆ.ಆರ್.ಪೇಟೆ ತಾಲ್ಲೂಕು ಕಾಂಗ್ರೆಸ್ ಮತ್ತು ವಿವಿಧ ಸಂಘಟನೆಗಳ ವತಿಯಿಂದ ಪ್ರತಿಭಟನೆ.

ಕೆ.ಆರ್.ಪೇಟೆ : ಪೆಟ್ರೋಲ್, ಡೀಸೆಲ್ ಬೆಲೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ಪಕ್ಷವು ಇಂದು ಭಾರತ್ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ತಾಲ್ಲೂಕು ಕಾಂಗ್ರೆಸ್ ಮತ್ತು ವಿವಿಧ ಸಂಘಟನೆಗಳ ವತಿಯಿಂದ. ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ನೇತೃತ್ವದಲ್ಲಿ  ಕೆ.ಆರ್.ಪೇಟೆ ಪಟ್ಟಣದಲ್ಲಿ  ಪ್ರತಿಭಟನೆ ನಡೆಸಲಾಯಿತು.ಪಟ್ಟಣದ ತಾಲ್ಲೂಕು ಪಂಚಾಯಿತಿ ವೃತ್ತದಿಂದ ಹೊರಟ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕರವೇ, ಜಯಕರ್ನಾಟಕ ಸಂಘಟನೆ, ಆಟೋ, ಟ್ಯಾಕ್ಸಿ ಚಾಲಕರ ಸಂಘದ  ಪ್ರಮುಖ ಬೀದಿಗಳಲ್ಲಿ ಪಾದಾಯಾತ್ರೆ ಮೂಲಕ ತಾಲ್ಲೂಕು ಕಚೇರಿಯ ವರೆಗೆ ಮೆರವಣಿಗೆ ನಡೆಸಿದರು.  ಪ್ರವಾಸಿ ಮಂದಿರ ವೃತ್ತ ದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರವಿರುದ್ದ ಘೋಷಣೆ ಕೂಗಿದರು. ಈ ವೇಳೆ ಪ್ರತಿಭಟನಾಕಾರರನ್ನು ಕುರಿತು ಮಾತನಾಡಿದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರು ಈ ಹಿಂದೆ ಯುಪಿಎ ಸರ್ಕಾರ ವಿದ್ದಾಗ ಸ್ವಲ್ಪ ಬೆಲೆ ಹೆಚ್ಚಳ ಮಾಡಿದರೂ ಸಹ ಇದೇ ಬಿಜೆಪಿ ಪಕ್ಷ  ನಮ್ಮ ಕಾಂಗ್ರೆಸ್ ಪಕ್ಷ ದ ವಿರುದ್ದ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿತ್ತು. ಈಗ ತಮ್ಮದೇ ಸರಕಾರ ಇದ್ದರೂ ಸಹ ಬೆಲೆ ಏರಿಕೆ ತಡೆಯುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಫಲರಾಗಿದ್ದಾರೆ. ಆಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಉತ್ಪನ್ನ ಬೆಲೆಏರಿಕೆ ಹೆಚ್ಚಾಗಿತ್ತುಆದರೆ ಈಗ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಉತ್ಪನ್ನ ಬೆಲೆ ಕಡಿಮೆ ಇದ್ದರೂ ಪೆಟ್ರೋಲ್ ಡಿಸೇಲ್ ದರ ಗಗನಕ್ಕೆ ಏರಿಕೆ ಮಾಡಿದ್ದಾರೆ ಎಂದು ಆರೋಪಿಸಿದರು. ಇನ್ನಾದರೂ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಬೇಕು ಇಲ್ಲದಿದ್ದರೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ತಂತಾನೆ ಹೆಚ್ಚಾಗಲಿವೆ. ಹಾಗಾಗಿ ತಕ್ಷಣ ಡೀಸೆಲ್, ಪೆಟ್ರೋಲ್ ಬೆಲೆ ಇಳಿಕೆ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ  ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಕೆ.ಬಿ.ಚಂದ್ರಶೇಖರ್ ಎಚ್ಚರಿಕೆ ನೀಡಿದರು.ಪ್ರತಿಭಟನೆಯ ನಂತರ ತಾಲ್ಲೂಕು ತಹಸೀಲ್ದಾರ್ ಎಂ.ಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್, ಕರವೇ ಅಧ್ಯಕ್ಷ ಹೊನ್ನೇನಹಳ್ಳಿ ವೇಣು, ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಕೆ.ಎಸ್.ಕುಮಾರ್, ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘದ  ಎಸ್.ವಿ.ವಿನಯ್, ಪಿ.ಕೆ.ಜಿ.ಮಹೇಶ್, ಕರವೇ ಉಪಾಧ್ಯಕ್ಷ ಕೆ.ಟಿ.ಶ್ರೀನಿವಾಸ್, ತಾಲ್ಲೂಕು ಕಾರ್ಯದರ್ಶಿ ಟೆಂಪೋ ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿ.ಡಿ.ಹರೀಶ್, ಕಾಂಗ್ರೆಸ್ ಮುಖಂಡರಾದ ಕೆ.ಸಿ.ರಾಮಚಂದ್ರೇಗೌಡ, ಪುರಸಭಾ ಮಾಜಿ ಸದಸ್ಯ ಕೆ.ಸಿ.ಮಂಜುನಾಥ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜಯರಂಗ,  ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಉಪಾಧ್ಯಕ್ಷ ಎಸ್.ರವಿ, ಮಹಿಳಾ ಘಟಕದ ಅಧ್ಯಕ್ಷೆ ಮಧು, ಕಾರ್ಯಾಧ್ಯಕ್ಷೆ ಸರಸ್ವತಿ, ನಗರ ಘಟಕದ ಅಧ್ಯಕ್ಷೆ ಮಂಗಳಾ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Rate this item
(0 votes)

ಭಾರತ್ ಬಂದ್ ಹಿನ್ನೆಲೆಯಲ್ಲಿ  ಮಳವಳ್ಳಿ ಪಟ್ಟಣದ ಅಂಗಡಿ ಮುಂಗಟ್ಟುಗಳು ಬಂದ್, ಮಾಜಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ .

ಮಳವಳ್ಳಿ:   ಕೇಂದ್ರ ಸರ್ಕಾರದ ವಿರುದ್ದ ಇಂದು ಭಾರತ್ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವತಿಯಿಂದ. ಮಾಜಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ನೇತೃತ್ವದಲ್ಲಿ   ಮಳವಳ್ಳಿ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ತಾಲ್ಲೂಕು ಪಂಚಾಯಿತಿಯಿಂದ ಕಾಂಗ್ರೆಸ್ ಕಾರ್ಯಕರ್ತರು ಪ್ರಮುಖ ಬೀದಿಗಳಲ್ಲಿ  ಬೈಕ್ ಜಾಥ ನಡೆಸಿ ನಂತರ ಅನಂತರಾಂ ವೃತ್ತ ದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರವಿರುದ್ದ ಘೋಷಣೆ ಕೂಗಿದರು ನಂತರ. ಮಾಜಿ ಶಾಸಕ ನರೇಂದ್ರಸ್ವಾಮಿ ಮಾತನಾಡಿ ಈ ಹಿಂದೆ ಯುಪಿಎ ಸರ್ಕಾರ ವಿದ್ದಾಗ ಇದೇ ಬಿಜೆಪಿ ಪಕ್ಷ  ನಮ್ಮ ಕಾಂಗ್ರೆಸ್ ಪಕ್ಷ ದ ವಿರುದ್ದ ಹರಿಹಾಯ್ದದಿದ್ದರು ಆಗ ತೈಲ ಉತ್ಪನ್ನ ಬೆಲೆಏರಿಕೆ ಹೆಚ್ಚಾಗಿತ್ತು ಆದರೆ ಈಗ. ಕಡಿಮೆ ಇದ್ದರೂ ಪೆಟ್ರೋಲ್ ಡಿಸೇಲ್ ದರ ಗಗನಕ್ಕೆ ಏರಿಕೆ ಮಾಡಿದೆ ಎಂದು ಆರೋಪಿಸಿದರು.ಮುಂದಿನ ದಿನಗಳಲ್ಲಿ ನಮ್ಮ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ  ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಿಜೆಪಿಪಕ್ಷದ ವಿರುದ್ಧ.  ಹೋರಾಟ ನಡೆಸುವುದಾಗಿ ತಿಳಿಸಿದರು. 

ಪ್ರತಿಭಟನೆಯಲ್ಲಿ  ತಾ.ಪಂ ಅಧ್ಯಕ್ಷ.  ವಿಶ್ವಾಸ್. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ಪುಟ್ಟರಾಮು, ಜಿ.ಪಂ ಸದಸ್ಯರಾದ ಹನುಮಂತ, ಚಂದ್ರಕುಮಾರ, ಸುಜಾತಸುಂದೃಪ್ಪ, ಸುಷ್ಮಾರಾಜು, ಸೇರಿದಂತೆ ಮತ್ತಿತ್ತರರು ಹಾಜರಿದ್ದರು.

Rate this item
(0 votes)

ಅಘಲಯ ಸರ್ಕಾರಿ ಪ್ರೌಢಶಾಲೆ ಯಲ್ಲಿ  ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ವತಿಯಿಂದ "ವಚನ ದಿನ' ವನ್ನು ಅಚರಿಸಲಾಯಿತು.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಅಘಲಯ ಸರ್ಕಾರಿ ಪ್ರೌಢಶಾಲೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ವತಿಯಿಂದ "ವಚನ ದಿನ' ವನ್ನು ಅಚರಿಸಲಾಯಿತು.ಗ್ರಾಮ ಪಂಚಾಯತ್ ಅಧ್ಯಕ್ಷರೂ ಅದಾ ಭಾರತಿ ಶ್ರೀಧರ್ ದೀಪ ಬೇಳೆಗಿಸುವ ಮೂಲಕ ಕಾರ್ಯವನ್ನು ಉದ್ಘಾಟನೆ ಮಾಡಿದರು. ನಂತರ ಶರಣ ಸಾಹಿತ್ಯ ಪರಿಷತ್ತು ನ ಅಧ್ಯಕ್ಷರಾದ ಸುಬ್ರಮಣ್ಯ ಮಾತನಾಡಿ ಬಸವಣ್ಣನವರು ೧೨ನೇ ಶತಮಾನದಲ್ಲೇ ಸಮಾಜದ ಅಂಕು ಡೊಂಕುಗಳನ್ನು ತಮ್ಮ ವಚನಗಳಲ್ಲಿ ತಿದ್ದಲು ಪ್ರಯತ್ನಿಸಿದರು ಎಂದರು ,ನಂತರ ಶಾಲ ಮುಖ್ಯ ಶಿಕ್ಷಕರರಾದ ಸೋಮನಾಥ್ ಮಾತನಾಡಿ ಬಸವಣ್ಣನವರು ಎಲ್ಲಾ ಜಾತಿಗಳು ಒಂದೇ ಎಂದು ಎಲ್ಲಾ ಜನಾಂಗದವರನ್ನು ಸಮಾನಾಂತರವಾಗಿ ಕಂಡರು ಎಂದು ಮಕ್ಕಳಿಗೆ ಬಸವಣ್ಣನವರ ವಚನಗಳ ಪರಿಚಯಮಾಡಿ ಕೊಟ್ಟರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರರಾದ ಎ.ಎಲ್.ನಂಜಪ್ಪ, ನಾರಯಣಪುರ ಶಾಲೆಯ ಮು.ಶಿಕ್ಷಕರರಾದ ಚನ್ನರಾಜು ಮತ್ತು ಸುತ್ತಮುತ್ತಲಿನ ಶಾಲೆಗಳ ಶಿಕ್ಷಕರು ಮತ್ತು ಮಕ್ಕಳು ಪೋಷಕರು ಹಾಜರಿದ್ದರು.

Rate this item
(0 votes)

 ಆಕಸ್ಮಿಕವಾಗಿ ಕಾಲು ಜಾರಿ ಕೃಷಿಹೊಂಡಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಹೋಟೆಲ್ ಮಾಲೀಕ ಅಕ್ರಂಪಾಶ(45) ಸಾವು.

    ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ಜಾಮಿಯಾ ಮಸೀದಿ ಹಿಂಭಾಗದಲ್ಲಿ ಮುಲ್ಟ್ರಿ ಹೋಟೆಲ್ ನಡೆಸುತ್ತಿದ್ದ ಅಕ್ರಂಪಾಶ(45) ಆಕಸ್ಮಿಕವಾಗಿ ಕಾಲು ಜಾರಿ ಕೃಷಿಹೊಂಡಕ್ಕೆ ಬಿದ್ದು ಮೃತ ದುರ್ದೈವಿಯಾಗಿದ್ದಾರೆ. ಪಟ್ಟಣದ ಹೇಮಾವತಿ ಬಡಾವಣೆಯ ನಿವಾಸಿಯಾಗಿರುವ ಅಕ್ರಂಪಾಶ ಎಂದಿನಂತೆ ಮುಂಜಾನೆ ಚಿಕ್ಕೋನಹಳ್ಳಿಯ ರೇಷ್ಮೆ ಫಾರಂ ಬಳಿ ವಾಕಿಂಗ್ ಮಾಡಲು ಹೋಗಿದ್ದಾಗ ಶೌಚಕ್ಕೆ ಹೋಗಿ ಅಲ್ಲಿಯೇ ಮೀಸೆ ದೇವೇಗೌಡರ ಜಮೀನಿನಲ್ಲಿರುವ ಕೃಷಿಹೊಂಡದಲ್ಲಿ ನೀರಿಗಾಗಿ ಹೋದಾಗ ಕಾಲುಜಾರಿ ನೀರಿಗೆ ಬಿದ್ದು ಮೃತರಾಗಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಎ.ಎಸ್.ಐ ಈರೇಗೌಡ ಮತ್ತು ಸಿಬ್ಬಂಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಅಕ್ರಂಪಾಶ ಅವರ ಸಾವಿನ ಸುದ್ದಿ ತಿಳಿದ ಮುಸ್ಲಿಂ ಬಾಂಧವರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.

Rate this item
(0 votes)

ಕೆ .ಆರ್.ಪೇಟೆ ಪಟ್ಟಣದ ಹಳೆ ಕಿಕ್ಕೆರಿ ರಸ್ತೆಯಲ್ಲಿರುವ ಬಜಾಜ್ ಬೈಕ್ ಷೊರೂಂ ನ ಬೀಗ ಮೂರಿದು ಕಳ್ಳತನ ಲಕ್ಷಾಂತರ ಹಣ ಕಳವು .

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ಪಟ್ಟಣದ ಹೃದಯ ಭಾಗದಲ್ಲಿ ಇರುವ ಬಜಾಜ್ ಬೈಕ್ ಷೊರೂಂ ನ ಕಬ್ಬಿಣ ದ ರೋಲಿಂಗ್ ಸೆಟ್ಟರ್  ಮೂರಿದು ಲಕ್ಷಾಂತರ ರೂ ಹಣ ಕಳ್ಳತನ ಮಾಡಿರುವ ಘಟನೆ ನೆಡೆದಿದೆ .ಇದು ಪಟ್ಟಣದ ಮಧ್ಯಭಾಗದಲ್ಲಿ ಇದ್ದು ಪೊಲೀಸ್ ಅಧಿಕಾರಿಗಳು ರಾತ್ರಿ ಸಮಯದಲ್ಲಿ ಗಸ್ತು ತಿರುಗುತ್ತಿದ್ದರು ಈ ಘಟನೆ ನಡೆದಿರುವುದು ಸಾರ್ವಜನಿಕರಿಗೆ ಅಂತಕ ಮೂಡಿಸಿದೆ.ರೋಲಿಂಗ್ ಶೆಟರ್ ಅನ್ನು ಕಬ್ಬಿಣದ ಹಾರೆಯಿಂದ ಎತ್ತಿ ಒಳಕ್ಕೆ ನುಗ್ಗಿ ಕಳ್ಳತನ ಮಾಡಿರುವ ಕಿಡಿಗೇಡಿಗಳು.ಪಟ್ಟಣ ಪೋಲಿಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಹೆಚ್.ಎಸ್.ವೆಂಕಟೇಶ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ.

Last modified on Monday, 10 September 2018 08:50
Rate this item
(0 votes)

ರಂಗನಾಥಪುರ ಗೇಟ್ ಬಳಿ ನಿಯಂತ್ರಣಾ ತಪ್ಪಿ ಬೈಕಿನಿಂದ ಬಿದ್ದು ಲೈನ್ ಮ್ಯಾನ್  ಅಭಿಷೇಕ್(25) ಸ್ಥಳದಲ್ಲೇ ಸಾವು.

ಮಂಡ್ಯ: ಕೃಷ್ಣರಾಜಪೇಟೆ ತಾಲ್ಲೂಕು ಬೂಕನಕೆರೆ ಹೋಬಳಿ ರಂಗನಾಥಪುರ ಗೇಟ್ ನ ಬಳಿ ಬೈಕಿನಿಂದ ಆಯತಪ್ಪಿಬಿದ್ದು ಸೆಸ್ಕ್ ಲೈನ್ ಮ್ಯಾನ್ ಸ್ಥಳದಲ್ಲಿಯೇ ಸಾವು.ಶೀಳನೆರೆ ಸೆಕ್ಷನ್ ಜೂನಿಯರ್ ಲೈನ್ ಮೈನ್  ಕೆಲಸ ಮಾಡುತ್ತಿರುವ ಅಭಿಷೇಕ್(25) ಮೃತ ದುರ್ದೈವಿಯಾಗಿದ್ದಾನೆ.ಬೂಕನಕೆರೆ ಗ್ರಾಮದ ನಿವಾಸಿಯಾಗಿರುವ ಅಭಿಷೇಕ್ ಕೆ.ಆರ್.ಪೇಟೆ ಪಟ್ಟಣದಲ್ಲಿ ಸ್ನೇಹಿತನ ಮದುವೆ ರಿಸೆಪ್ಷನ್ ಮುಗಿಸಿಕೊಂಡು ಬರುವಾಗ ರಂಗನಾಥಪುರ ಗೇಟಿನಲ್ಲಿರುವ ರಸ್ತೆ ಉಬ್ಬಿನ ಬಳಿ ಬೈಕಿನಿಂದ ಆಯತಪ್ಪಿ ಕೆಳಗೆ ಬಿದ್ದು ಸಾವಿಗೆ ಶರಣಾಗಿದ್ದಾರೆ. ಗ್ರಾಮಾಂತರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಕೆ.ಎನ್.ಗಿರೀಶ್ ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿದ್ದು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಮೃತನ ಬಂಧುಗಳ ಆಕ್ರಂದನವು ಮುಗಿಲು ಮುಟ್ಟಿತ್ತು.

 

.ದಿನೆ ದಿನೆ ಹೇಚ್ಚುತ್ತಿರುವ ವರದಿಗಾರ ಮೇಲೆ ಹಲ್ಲೆ ,ಖಾಸಗಿ ವಾಹಿನಿ(TV5) ಕ್ಯಾಮರಾಮನ್ ಸುರೇಶ ಚಿನಗುಂಡಿ ಮೇಲೆ ಪೊಲೀಸರ ದರ್ಪ ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ.

ವಿಜಯಪುರ: ನಗರದ ಭೂತನಾಳ ಕೆರೆ ರಸ್ತೆಯಲ್ಲಿ ನಾಲ್ವರು ಪೊಲೀಸ್ ಪೇದೆಗಳು ಖಾಸಗಿ ವಾಹಿನಿ(TV5) ಕ್ಯಾಮರಾಮನ್ ಸುರೇಶ ಚಿನಗುಂಡಿ ಮೇಲೆ ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.ಭೂತನಾಳ ರಸ್ತೆಯಲ್ಲಿ ಮನೆಯಿಂದ ಕಚೇರಿಗೆ ತೆರಳುತ್ತಿದ್ದ ವೇಳೆ ಕ್ಯಾಮರಾಮನ್ ಇಕ್ಕಟ್ಟಾದ ರಸ್ತೆಯಲ್ಲಿ ಬೈಕ್ ಮೇಲೆ ತೆರಳುತ್ತಿದ್ದಾಗ ಐ.ಆರ್.ಬಿ ವ್ಯಾನ್ ಮೈಮೇಲೆ ಹತ್ತಿಸಲು ಯತ್ನಿಸಿದ ಚಾಲಕ,ಈ ಕುರಿತು ಪ್ರಶ್ನಿಸಿದ ಸುರೇಶ ಮೇಲೆ ನಾಲ್ವರು ಪೊಲೀಸ್ ಪೇದೆಗಳು ಐ.ಆರ್.ಬಿ ವ್ಯಾನ್ನೊಳಗೆ ಎಳೆದೊಯ್ದು ಹಲ್ಲೆ ನಡೆಸಿ ದರ್ಪ ತೋರಿದ ಪೊಲೀಸರು.ಮುಖಕ್ಕೆ ಹಾಗೂ ಬೆನ್ನಿನ ಮೇಲೆ ಹಲ್ಲೆ, ಮೂಗಿನಿಂದ ರಕ್ತಸ್ರಾವ ಗಾಯಗೊಂಡ ಕ್ಯಾಮರಾಮನ್ ಗೆ ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ.ವಿಜಯಪುರ ಗ್ರಾಮೀಣ ಠಾಣೆ ವ್ಯಾಪ್ತಿ ಘಟನೆ.

Rate this item
(0 votes)

ಕೆ.ಆರ್.ಪೇಟೆ ಮತ್ತು ಹೊಸಹೊಳಲು ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿಗೆ ಹೆದರಿದ ಜನಸಾಮಾನ್ಯರ.ಕೂಡಲೇ ನಾಯಿಗಳನ್ನು ಹಿಡಿಯದ್ದಿದರೆ ಉಗ್ರವಾಗಿ ಪ್ರತಿಭಟನೆಯ ಎಚ್ಚರಿಕೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಹಾಗೂ ಹೊಸಹೊಳಲು ಗ್ರಾಮದಲ್ಲಿ ಬೀದಿ ನಾಯಿಗಳ   ಹಾವಳಿ ಹೆಚ್ಚಾಗಿ ಹೊಸಹೊಳಲು ಗ್ರಾಮದ ಪಿಗ್ಮಿ ಕಲೆಕ್ಟರ್ ರಾಜು ಅವರ ಪುತ್ರನಿಗೆ, ಹೂವು ಮಾರುವ ಕಮಲಮ್ಮಗೆ, ಧನಂಜಯ ಹಾಗೂ ರಾಮಯ್ಯ ಎಂಬುವವರಿಗೆ ನಾಯಿ ಕಡಿದ ಪರಿಣಾಮವಾಗಿ ಕೂಡಲೇ ನಾಯಿಗಳನ್ನು ಹಿಡಿದು ಮಕ್ಕಳನ್ನು ರಕ್ಷಣೆ ಮಾಡುವಂತೆ ರಾಜು ಮತ್ತು ಗೆಳೆಯರು ಆಗ್ರಹಿಸಿ ಪುರಸಭೆಯ ಮುಂದೆ ಪ್ರತಿಭಟನೆ ಮಾಡಿದರು. ಕೂಡಲೇ ನಾಯಿಗಳನ್ನು ಹಿಡಿಯದ್ದಿದರೆ ಉಗ್ರವಾಗಿ ಪ್ರತಿಭಟನೆ  ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು .ಕೂಡಲೇ ನಾಯಿಗಳನ್ನು ಹಿಡಿದು ಸಾರ್ವಜನಿಕರನ್ನು ರಕ್ಷಿಸುವಂತೆ ಪುರಸಭೆ ಸದಸ್ಯ ಹೆಚ್.ಆರ್.ಲೋಕೇಶ್ ಆಗ್ರಹಿಸಿದ್ದಾರೆ. 

Rate this item
(0 votes)

 130 ಚಂದ್ರಿಕೆಯಲ್ಲಿ ಬೆಳೆದ ರೇಷ್ಮೆಗೂಡುನ್ನು ಮಾರಿ ಕೊಡುಗು ಹಾಗೂ ಕೇರಳದಜನತಯೆ ಮುಖ್ಯ ಮಂತ್ರಿ ಪರಿಹಾರ ನಿಧಿ 28860ರೂ ನೀಡದ ಮಳವಳ್ಳಿ ರೈತ ಹೆಚ್ ಬಸವರಾಜು. 

ಮಳವಳ್ಳಿ: ತಾನು ಕಷ್ಟಪಟ್ಟು ಬೆಳೆದ ರೇಷ್ಮೆಗೂಡುನ್ನು ಮಾರಿ  ಮಹಾಮಳೆಯಿಂದ ಕಂಗಾಲಾಗಿ ನಿರಾಶ್ರಿತರರಾಗಿರುವ ಕೊಡುಗು ಹಾಗೂ ಕೇರಳದಜನತಯೆ ಮುಖ್ಯ ಮಂತ್ರಿ ಪರಿಹಾರ ನಿಧಿಗಾಗಿ ರೈತನೊಬ್ಬ ತಹಸೀಲ್ದಾರ್  ಮೂಲಕ  ಡಿಡಿ ನೀಡಿ ಮಾನವೀಯತೆ ಮೆರೆದರು .ಕಳೆದ ಒಂದು ವಾರದ ಹಿಂದೆ ಮಳವಳ್ಳಿಪಟ್ಟಣದ ಪೇಟೆ ಬೀದಿ ಹೆಚ್.ಬಸವರಾಜು ರವರು  130 ಚಂದ್ರಿಕೆಯಲ್ಲಿ ಬೆಳೆದ ರೇಷ್ಮೆಗೂಡುನ್ನು  ನೆರೆಪರಿಹಾರ ನೀಡಲಾಗುವುದು ಎಂದು ಘೋಷಣೆ ಮಾಡಿದ್ದರು. ಇಂದು ಕೊಡುಗು ನಿರಾಶ್ರಿತರಿಗೆ  ಮುಖ್ಯಮಂತ್ರಿ ಪರಿಹಾರ ನಿಧಿಗಳ ಮೂಲಕ 28860ರೂ ಗಳನ್ನು  ಹಾಗೂ ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿ 2000 ರೂ ಡಿಡಿ ಯನ್ನು  ತಹಸೀಲ್ದಾರ್ ದಿನೇಶ್ ಚಂದ್ರರವರ ಮೂಲಕ ನೀಡಲಾಯಿತು.

ಈ ಸಂದರ್ಭದಲ್ಲಿ   ಮಹದೇವ,ಮಧು, ನಾಗರಾಜು,  ಸೇರಿದಂತೆ ಮತ್ತಿತರರು ಇದ್ದರು.

ಜಿಲ್ಲಾಡಳಿತದಿಂದ ನಾಡಹಬ್ಬ ಮೈಸೂರು ದಸರಾ 2018ರ ಅಧಿಕೃತ ಲಾಂಛನ ಬಿಡುಗಡೆ.

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ 2018 ನೇ ಸಾಲಿನ ದಸರಾ ಮಹೋತ್ಸವದ ಲಾಂಛನ ಜಿಲ್ಲಾಡಳಿತದಿಂದ ಬಿಡುಗಡೆ ಮಾಡಿದೆ 'MysuruDasara2018' ಟ್ವಿಟರ್ ಖಾತೆ ಮೂಲಕ ಪ್ರಕಟಣೆ ಮೈಸೂರು ದಸರಾವನ್ನು ಈ ಬಾರಿ ಸರಳ ವ್ಯಕ್ತಿ ಸುಧಾಮೂರ್ತಿಯವರು ಚಾಲನೆ ನೀಡಲ್ಲಿದ್ದಾರೆ ಅ.10ರಿಂದ 19 ರವರೆಗೆ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ.

Page 17 of 27

Visitors Counter

228055
Today
Yesterday
This Week
This Month
Last Month
All days
29
270
809
4456
6704
228055

Your IP: 18.191.17.12
2024-05-15 09:02

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles