Rate this item
(0 votes)

ಶಹರಿ ಉತ್ಸವ ಜಾಗೃತಿ ಕಾರ್ಯಕ್ರಮಕ್ಕೆ ಪುರಸಭೆ ಅಧ್ಯಕ್ಷೆ ಉಪಾಧ್ಯಕ್ಷೆಗೆ ಆಹ್ವಾನ ನಿರಾಕರಣೆ ಸದಸ್ಯರ ಆಕ್ರೋಶ.ಮುಖ್ಯಾಧಿಕಾರಿ ಮತ್ತು ಶಹರಿ ರೋಜ್ಗಾರ್ ಯೋಜನಾಧಿಕಾರಿ ತರಾಟೆಗೆ.

ಕೃಷ್ಣರಾಜಪೇಟೆ: ಪಟ್ಟಣದಲ್ಲಿ ಶಹರಿ ರೋಜ್ ಗಾರ್ ಯೋಜನೆಯ ವತಿಯಿಂದ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳಿಗೆ "ಶಹರಿ ಉತ್ಸವ" ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಹಿಳಾ ಅಭಿವೃದ್ಧಿ ಯೋಜನೆಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು.ಪುರಸಭೆಯ ಮುಖ್ಯಾಧಿಕಾರಿ ಮೂರ್ತಿ ಅವರು ಮಹಿಳೆಯರ ಕಾರ್ಯಕ್ರಮಕ್ಕೆ ಮಹಿಳಾ ಅಧ್ಯಕ್ಷ ಉಪಾಧ್ಯಕ್ಷರನ್ನು ಆಹ್ವಾನಿಸದೇ ಮನಸೋ ಇಚ್ಛೆ ಕಾರ್ಯಕ್ರಮ ನಡೆಸುವುದು ಎಷ್ಟರಮಟ್ಟಿಗೆ ಸರಿ ಎಂದು ಸ್ಥಾಯಿಸಮಿತಿ ಅಧ್ಯಕ್ಷ ಡಿ.ಪ್ರೇಮಕುಮಾರ್ ಪ್ರಶ್ನೆ ಮಾಡಿದಾಗಲೂ ಉಡಾಫೆತನದಿಂದ ವರ್ತಿಸಿದ ಮೂರ್ತಿ ಮತ್ತು ಸ್ವರ್ಣಜಯಂತಿ ಯೋಜನೆಯ ಯೋಜನಾಧಿಕಾರಿ ನಾಗೇಂದ್ರ ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರದ ಜಿಲ್ಲಾ ಸಂಯೋಜಕ ಯೋಗೇಶ್ ಕಾರ್ಯಕ್ರಮ ನಡೆಸುತ್ತಿರುವುದು ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳಿಗೆ ಈ ಕಾರ್ಯಕ್ಕೆ ಚುನಾಯಿತ ಜನಪ್ರತಿನಿಧಿಗಳನ್ನುಕರೆಯಬೇಕಾಗಿಲ್ಲ ಎಂದಾಗ ಕೆರಳಿದ ಸ್ಥಾಯಿಸಮಿತಿ ಅಧ್ಯಕ್ಷ ಡಿ.ಪ್ರೇಮಕುಮಾರ್ ಪುರಸಭೆ ಕಾರ್ಯಾಲಯದ ವತಿಯಿಂದ ನಡೆಯುತ್ತಿರುವ ಶಹರಿ ಉತ್ಸವ ಕಾರ್ಯಕ್ರಮದ ಆಯೋಜಕರು ಅಧ್ಯಕ್ಷೆ-ಉಪಾಧ್ಯಕ್ಷೆ ಮತ್ತು ಆಡಳಿತ ಮಂಡಳಿ. ಆದ್ದರಿಂದ ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಜನಪ್ರತಿನಿಧಿಗಳ ಗಮನಕ್ಕೆ ತಂದು ಜಾರಿಗೊಳಿಸಬೇಕು ಇಲ್ಲದಿದ್ದರೆ ನಿಮ್ಮಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸದಸ್ಯರಾದ ಕೆ.ಟಿ.ಚಕ್ರಪಾಣಿ, ಕೆ.ಪುರುಷೋತ್ತಮ್, ಕೆ.ಬಿ.ನಂದೀಶ್ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ರವೀಂದ್ರಬಾಬು ಅಧಿಕಾರಿಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡರು.ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಉತ್ಸಾಹದಿಂದ ಶಹರೀ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿದ್ದರು.

Rate this item
(0 votes)

ಮಳವಳ್ಳಿ ನಾಡಹಬ್ಬ ಸಿಡಿಹಬ್ಬ ಮೈಸೂರು ದಸರ ನೆನಪಿಸುವ ರೀತಿ ಸಡಗರ ಸಂಭ್ರಮದಿಂದ ನಡೆಯಿತು.

ಮಳವಳ್ಳಿ: ಮಳವಳ್ಳಿ ಪಟ್ಟಣದ ನಾಡಹಬ್ಬವಾದ ಸಿಡಿಹಬ್ಬ ಅದ್ದೂರಿ ಹಾಗೂ ಸಡಗರದಿಂದ ಮೈಸೂರು ದಸರ ನೆನಪಿಸುವ ರೀತಿ ನಡೆಯಿತು. ಶುಕ್ರವಾರ ಹಾಗೂ ಶನಿವಾರ ಎರಡು ದಿನಗಳ ನಡೆದ ಸಿಡಿಹಬ್ಬವೂ ಪಟ್ಟಣದ ಎಲ್ಲಾ ಮುಖ್ಯರಸ್ತೆ ವಿದ್ಯುತ್ ಅಲಂಕಾರ ಮಾಡಿದ್ದು  ನೋಡಲು ಮೈಸೂರು ದಸರಾ ನಡೆಯುತ್ತಿದೆಯೋ ಏನೋ ಎನ್ನುವ ರೀತಿ  ಪಟ್ಟಣ ಕಂಗಲಿಸುತ್ತಿತ್ತು. ಇನ್ನೂ  ಶುಕ್ರವಾರ. ಮಧ್ಯಾಹ್ನ. 2ಗಂಟೆ ಗೆ ತಮ್ಮಡಹಳ್ಳಿ ಗ್ರಾಮ ನಾಡಗೌಡ ಮನೆತನದಿಂದ ಸಿಡಿಹಬ್ಬ ದ ಕೊಂಡಕ್ಕೆ ಮೊದಲ ಸೌದೆ ಕೊಡುವ ಪದ್ದತಿ ಈಗಲೂ ರೂಡಿಯಲ್ಲಿದ್ದು  ಅವರು ಜೋಡಿಎತ್ತುಗಳಲ್ಲಿ ನೋಗ ಕಟ್ಟಿಕೊಂಡು ಅದಕ್ಕೆ ಸೌದೆ ಕಟ್ಟಿ ಪೂಜೆ ಸಲ್ಲಿಸಿ ನಂತರ ಅವರ ಹಿಂದೆ ನೂರಾರು ಜೋಡಿ ಎತ್ತುಗಳಲ್ಲಿ  ತಮ್ಮಡಹಳ್ಳಿ ಯಿಂದ ಅಂಚೆದೊಡ್ಡಿ, ಕ್ಯಾತೇಗೌಡನದೊಡ್ಡಿ, ಮೂಲಕ  ಪೇಟೆ ಬೀದಿಗೆ ತಲುಪಿ ಅಲ್ಲಿ ಸೌದೆ ಒತ್ತು ತಂದು ಜೋಡಿ ಎತ್ತುಗಳಿಗೆ ಪ್ರತಿ ಮನೆಯಲ್ಲೂ ಪೂಜೆ ಸಲ್ಲಿಸುತ್ತಾರೆ ಅಲ್ಲಿಗೆ ಎಲ್ಲಾ ಕೋಮಿನ ಮುಖಂಡರು ಗಳು ಬಂದು ಡೋಳ್ಳು ವಾದ್ಯ ದೊಂದಿಗೆ  ಮೆರವಣಿಗೆ ಮೂಲಕ‌ ಪಟ್ಟಲದಮ್ಮ ದೇವಸ್ಥಾನಕ್ಕೆ ತಲುಪಿ ಅಲ್ಲಿ ಕೊಂಡಕ್ಕೆ ಸಿದ್ದಪಡಿಸಿದ ಹಳ್ಳಕ್ಕೆ ಹಾಕಲಾಗುವುದು.

ನಂತರ ಪೇಟೆ ಬೀದಿಯ ಒಕ್ಕಲಿಗ ಜನಾಂಗದವದರು ರಾತ್ರಿ 8 ಗಂಟೆಗೆ ಮಹಿಳೆಯರು ದಬ್ಬಿಟ್ಟು ಆರತಿಯೊಂದಿಗೆ ಹಾಗೂ ಹರಕೆ ಹೊತ್ತ ಮಹಿಳೆಯರು ಬಾಯಿಬೀಗವನ್ನು ಹಾಕಿಸಿಕೊಂಡು ಮೆರವಣಿಗೆ ಮೂಲಕ ಪಟ್ಟಲದಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇದೇ ರೀತಿ ಕ್ರಮವಾಗಿ  ಸಿದ್ದಾರ್ಥನಗರದ ಜನರು  ನಂತರ ಕೀರ್ತಿ ನಗರ , ಗಂಗಾಮಂತ ಜನಾಂಗದವರು, ಅನಂತರ ಆಶೋಕನಗರ ಕೊನೆಗೆ ಬಸವಲಿಂಗಪ್ಪನಗರ  ಜನಾಂಗದವರು  ಸರದಿಯಂತೆ  ಮೆರವಣಿಗೆ ಮೂಲಕ ಪೂಜೆಸಲ್ಲಿಸಿದರು. ಈ ಮಧ್ಯೆ ಗಂಗಾಮತ ಜನಾಂಗದವರು ತೆರಳುವಾಗ ಮನುಷ್ಯನ ಪ್ರತಿಬಿಂಬ ಗೊಂಬೆಯನ್ನು ಪೂಜೆ ಸಲ್ಲಿಸಿ ನಂತರ ಮೆರವಣಿಗೆ ಮೂಲಕ ಕೋಟೆಯ ಪಟೇಲ್ ಚಿಣ್ಣೇಗೌಡ ಮನೆಯಮುಂದೆ ನಿಂತಿರುವ  108 ಅಡಿಯ ಒಂದೇ ಮರ ಅದು ತಾಮರಸಮರ ಎಂಬ ಜಾತಿ ಮರಕ್ಕೆ ಸಿಡಿರಣ್ಣ ನನ್ನು ಬಲೂನ್ ನಿಂದ ಸಿಂಗರಸಿ  ಅದು ಕೋಟೆಯ ಬೀದಿಗಳಲ್ಲಿ ಸಂಚಾರ ಮಾಡಿ ನಂತರ ಪೇಟೆ ಹಾಗೂ ಗಂಗಾ ಮತ ಬೀದಿಯ ಮೂಲಕ.  ಸಿಡಿ ಹೊತ್ತ ರಥ ಪಟ್ಟಲದಮ್ಮ ದೇವಸ್ಥಾನದ ಬಳಿ ಬರುತ್ತಿದ್ದಂತೆ  ಹರಕೆ ಹೊತ್ತ ಭಕ್ತರು ಕೊಂಡವನ್ನು ಹಾಯ್ದ ಹರಕೆ ತಿರಿಸಿದರು. 

ಈ ಸಂದರ್ಭದಲ್ಲಿ ಶಾಸಕ ಡಾ.ಅನ್ನದಾನಿ , ತಹಸೀಲ್ದಾರ್ ಚಂದ್ರಮೌಳಿ  ಸೇರಿದಂತೆ ಅನೇಕ ಮುಖಂಡರು ಇದ್ದರು.

 

Last modified on Saturday, 16 February 2019 14:38
Rate this item
(0 votes)

ವೀರ ಯೋಧ ಮಂಡ್ಯದ ಗುರು ಪಾರ್ಥಿವ ಶರೀರ ಬೆಂಗಳೂರಿಗೆ ಆಗಮನ .ಮಂಡ್ಯದ ಹುಟ್ಟೂರು ಗುಡಿಗೆರೆಗೆ ಕೊಂಡೊಯ್ಯಲಾಗುತ್ತದೆ.

ಬೆಂಗಳೂರು: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಗುರುವಾರ ಸಂಭವಿಸಿದ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧ ಮಂಡ್ಯದ ಗುರು ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಎಚ್​ಎಎಲ್​ ವಿಮಾನ ನಿಲ್ದಾಣಕ್ಕೆ ತರಲಾಯಿತು.ಗುರು ಅವರ ಶರೀರವನ್ನು ಹೊತ್ತ ವಾಯುಪಡೆಯ ವಿಶೇಷ ವಿಮಾನವು ಮಧ್ಯಾಹ್ನ ಒಂದು ಗಂಟೆಗೆ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಮೊದಲಿಗೆ ಪಾರ್ಥಿವ ಶರೀರಕ್ಕೆ ಗೌರವ ನಮನ ಸಲ್ಲಿಸಿದರು.ಇದಾದ ನಂತರ ಗುರು ಅವರ ಶರೀರವನ್ನು ರಸ್ತೆ ಮಾರ್ಗವಾಗಿ ಮಂಡ್ಯದ ಹುಟ್ಟೂರು ಗುಡಿಗೆರೆಗೆ ಕೊಂಡೊಯ್ಯಲಾಗುತ್ತದೆ. ಸದ್ಯ ಗುಡಿಗೆರೆಯಲ್ಲಿ ಯೋಧ ಗುರು ಅವರ ಅಂತ್ಯ ಸಂಸ್ಕಾರಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ  ಅವರ ಅಂತ್ಯಕ್ರಿಯೆ ಮಂಡ್ಯ ಜಿಲ್ಲೆಯ ಗೂಡಿಗೆರೆಯಲ್ಲಿ ಇಂದು ಸಂಜೆ 6.10ಕ್ಕೆ ನಡೆಯಲಿದೆ.ಅಲ್ಲಿನ ಕೆ.ಎಂ. ದೊಡ್ಡಿ ಸಮೀಪದ ಮೆಳ್ಳಹಳ್ಳಿ ಬಳಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಮಾರು 10 ಗುಂಟೆ ಸರ್ಕಾರಿ ಜಾಗದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಪೂರ್ವ-ಪಶ್ಚಿಮಕ್ಕೆ 6 ಅಡಿ, ಉತ್ತರ-ದಕ್ಷಿಣಕ್ಕೆ 9 ಅಡೊ ಅಳತೆಯ ವೇದಿಕೆ ನಿರ್ಮಾಣ ಮಾಡಲಾಗಿದೆ.ಸಿಮೆಂಟ್ ಇಟ್ಟಿಗೆಯಿಂದ ವೇದಿಕೆ ನಿರ್ಮಿಸಲಾಗಿದೆ. ಅದೇ ವೇದಿಕೆಯಲ್ಲಿ ಅಂತ್ಯಕ್ರಿಯೆ ಹಿಂದೂ ಸಂಪ್ರದಾಯದಂತೆ ನೆರವೇರಲಿದೆ. ಹುತಾತ್ಮ ಯೋಧ ಗುರು ಅವರ ಪಾರ್ಥಿವ ಶರೀರಕ್ಕೆ ಸಹೋದರರು ಅಗ್ನಿ ಸ್ಪರ್ಶ ಮಾಡಲಿದ್ದಾರೆ. 


Last modified on Saturday, 16 February 2019 09:59
Rate this item
(0 votes)

ಹುತಾತ್ಮ ಯೋಧ ಗುರು ಪತ್ನಿಗೆ ಸರ್ಕಾರಿ ಉದ್ಯೋಗದ ಭರವಸೆ.ಕುಟುಂಬಕ್ಕೆ ವಿಳಂಬ ಮಾಡದೆ ಜೀವ ವಿಮಾ ಹಣ ನೀಡಿದ ಎಲ್​ಐಸಿ.

 
 ಮಂಡ್ಯ: ನಿನ್ನೆ ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮನಾದ ಮಂಡ್ಯದ ಯೋಧ ಗುರು ಅವರ ಪತ್ನಿಗೆ ಸರ್ಕಾರಿ ನೌಕರಿಯ ಭರವಸೆಯನ್ನು ಸಚಿವ ಪುಟ್ಟರಾಜು ನೀಡಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸರ್ಕಾರದ ಜೊತೆ ಮಾತನಾಡಿ ಯೋಧ ಗುರು ಅವರ ಪತ್ನಿ ಕಲಾವತಿ ಅವರಿಗೆ ಸರ್ಕಾರಿ ಉದ್ಯೋಗದ ಜೊತೆಗೆ ಆರ್ಥಿಕ ಸಹಾಯ ಕೊಡಿಸುವುದಾಗಿ ಅವರು ಹೇಳಿದ್ದಾರೆ. ಪುಟ್ಟರಾಜು ಅವರು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ.ಈಗಾಗಲೇ ಜಿಲ್ಲಾಧಿಕಾರಿಗಳು ಗುರು ಅವರ ಹುಟ್ಟೂರು ಮಂಡ್ಯದ ಮದ್ದೂರು ತಾಲ್ಲೂಕಿನ ಗುಡಿಗೆರೆ ಗ್ರಾಮಕ್ಕೆ ತೆರಳಿ ಹುತಾತ್ಮ ಯೋಧನ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಮತ್ತು ಗುರು ಮೃತ ದೇಹವನ್ನು ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ಮಾಡಿದ್ದಾರೆ ಎಂದು ಪುಟ್ಟರಾಜು ಹೇಳಿದ್ದಾರೆ.
 
ಗುರು ಅವರಿಗೆ ಸಂಬಂಧಿಸಿದ ಯಾವ ದಾಖಲೆಗಳನ್ನೂ ಪರಿಶೀಲನೆ ನಡೆಸದೆ, ವಿಳಂಬ ಮಾಡದೇ ಅವರ ಕುಟುಂಬಕ್ಕೆ ಸೇರಬೇಕಾದ ಹಣವನ್ನು ಎಲ್​ಐಸಿ ಪಾವತಿಸಿದೆ.ಹುತಾತ್ಮ ಯೋಧ ಗುರು ನಿವಾಸಕ್ಕೆ ತೆರಳಿದ ಮಂಡ್ಯದ ಎಲ್ಐಸಿ ವ್ಯವಸ್ಥಾಪಕ ನಾಗರಾಜ್ ರಾವ್, ಸಚಿವ ಡಿ.ಸಿ ತಮ್ಮಣ್ಣ ಅವರ ಸಮ್ಮುಖದಲ್ಲಿ ವಿಮಾ ಹಣದ ಚೆಕ್​ ಅನ್ನು ಹಸ್ತಾಂತರ‌ ಮಾಡಿದರು. ಗುರು ಅವರ ವಿಮೆ ಮೊತ್ತ 3,82,000 ರೂಪಾಯಿಗಳ ಚೆಕ್ ಅನ್ನು ಗುರು ತಂದೆ ಹೊನ್ನಯ್ಯ ಅವರಿಗೆ ನೀಡಿದರು.ಯೋಧ ಗುರು ಅವರು ಕಲಾವತಿ ಅವರನ್ನು ಆರು ತಿಂಗಳ ಹಿಂದಷ್ಟೆ ವಿವಾಹವಾಗಿದ್ದರು. ರಜೆ ಹಾಕಿ ಬಂದಿದ್ದ ಅವರು ಫೆಬ್ರವರಿ 10 ರಂದು ಪುನಃ ಸೇವೆಗೆ ತೆರಳಿದ್ದರು. ಆದರೆ ಗುರು ಇನ್ನೆಂದೂ ಮರಳುವುದಿಲ್ಲವೆಂದು ಗೊತ್ತಾದ ಗುರು ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.
Rate this item
(0 votes)

ಜಮ್ಮುಕಾಶ್ಮೀರದ ಫುಲ್ವಾಮದಲ್ಲಿ ಉಗ್ರರು ನಡೆಸಿದ ನರಮೇಧವನ್ನು ಖಂಡಿಸಿದ ಕೃಷ್ಣರಾಜಪೇಟೆ ತಾಲ್ಲೂಕು ಕರವೇ ಅಧ್ಯಕ್ಷ ಹೊನ್ನೇನಹಳ್ಳಿ ವೇಣು ನೇತೃತ್ವದಲ್ಲಿ ಮೌನಾಚರಣೆ ಮೂಲಕ ಶ್ರದ್ಧಾಂಜಲಿ .

ಕೆ.ಆರ್.ಪೇಟೆ :ಜಮ್ಮುಕಾಶ್ಮೀರದ ಫುಲ್ವಾಮದಲ್ಲಿ ಉಗ್ರರು ನಡೆಸಿದ ನರಮೇಧವನ್ನು ಖಂಡಿಸಿದ ಕೃಷ್ಣರಾಜಪೇಟೆ ತಾಲ್ಲೂಕು ಕರವೇ ಅಧ್ಯಕ್ಷ ಹೊನ್ನೇನಹಳ್ಳಿ ವೇಣು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದ ಕರವೇ ಕಾರ್ಯಕರ್ತರು.ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮದ್ದೂರು ತಾಲ್ಲೂಕಿನ ಕೆ.ಎಂ ದೊಡ್ಡಿ ಕಾಲೋನಿಯ ಗುಡಗೇರಿಯ ಗುರು(33)ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಉಗ್ರರ ದಾಳಿಯಿಂದ ವೀರಮರಣವನ್ನಪ್ಪಿ ಹುತಾತ್ಮರಾದ ಸೈನಿಕರ ಆತ್ಮಕ್ಕೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಮರ್ಪಿಸಿದರು.ಬಳಿಕ ಮಾತನಾಡಿದ ತಾಲ್ಲೂಕು ಕರವೇ ಅಧ್ಯಕ್ಷ ಹೊನ್ನೇನಹಳ್ಳಿ ವೇಣು ಜಮ್ಮುವಿನ ಪುಲ್ವಾಮಾ ಪ್ರದೇಶದಲ್ಲಿ ಉಗ್ರರ ದಾಳಿಗೆ ಸಿಆರ್‌ಪಿಎಫ್‌ನ 42 ಯೋಧರು ಹುತಾತ್ಮರಾಗಿರುವುದು ಬಹಳ ವಿಷಾದನೀಯ. ಭಾರತ ದೇಶದಲ್ಲಿ ಪುನಃ ಆತಂಕಕಾರಿ ಭಯೋತ್ಪಾದಕ ಚಟುವಟಿಕೆ ನಡೆಯುತ್ತಿರುವುದು ಕಳವಳಕಾರಿ ಸಂಗತಿ ಎಂದರು. ಪಾಪಿ ಪಾಕಿಸ್ತಾನದ ಕೆಟ್ಟ ಕೃತ್ಯವನ್ನು ಖಂಡಿಸಿ ಭಾರತ ಸರ್ಕಾರವು ಉಗ್ರರ ಸಂಹಾರಕ್ಕೆ ಮುಂದಾಗುವ ಮೂಲಕ ಜಮ್ಮುಕಾಶ್ಮೀರದಲ್ಲಿ ಶಾಂತಿ ಕಾಪಾಡಬೇಕು ಎಂದು ಒತ್ತಾಯಿಸಿದರು.

 

Rate this item
(0 votes)

ಉಗ್ರರ ಕೃತ್ಯಕ್ಕೆ ತಾಲೂಕು ಪ್ರೆಸ್ ಕ್ಲಬ್ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತೀವ್ರವಾಗಿ ಖಂಡಿಸಿ.ಉಗ್ರರನ್ನು ಸದೆಬಡೆಯಲು ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ತಹಸೀಲ್ದಾರ್ ಶಿವಮೂರ್ತಿ ಮೂಲಕ ಕೇಂದ್ರಕ್ಕೆ ಮನವಿ. 

 ಕೆ.ಆರ್.ಪೇಟೆ: ತಾಲೂಕು ಪ್ರೆಸ್ ಕ್ಲಬ್ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಉಗ್ರರನ್ನು ಸದೆಬಡೆಯಲು ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ತಹಸೀಲ್ದಾರ್ ಶಿವಮೂರ್ತಿ ಮೂಲಕ ಕೇಂದ್ರಕ್ಕೆ ಮನವಿ ಮಾಡಿ. ಬಳಿಕ ಮಾತನಾಡಿ ಜಮ್ಮುವಿನ ಪುಲ್ವಾಮಾ ಪ್ರದೇಶದಲ್ಲಿ ಉಗ್ರರ ದಾಳಿಗೆ ಸಿಆರ್‌ಪಿಎಫ್‌ನ 42 ಯೋಧರು ಹುತಾತ್ಮರಾಗಿರುವುದು ಬಹಳ ವಿಷಾದನೀಯ. ಭಾರತ ದೇಶದಲ್ಲಿ ಪುನಃ ಆತಂಕಕಾರಿ ಭಯೋತ್ಪಾದಕ ಚಟುವಟಿಕೆ ನಡೆಯುತ್ತಿರುವುದು ಕಳವಳಕಾರಿ ಸಂಗತಿ ಎಂದರು.ಕೇಂದ್ರ ಸರ್ಕಾರವು ಕೃತ್ಯವೆಸಗಿದವರನ್ನು ಶೀಘ್ರ ಪತ್ತೆ ಹಚ್ಚಿ ಭಯೋತ್ಪಾದಕ ಸಂಘಟನೆಯ ಉಗ್ರರನ್ನು ಸದೆಬಡೆಯುವ ಕೆಲಸ ಮಾಡಬೇಕು. ದೇಶದ ರಕ್ಷಣೆ ವಿಚಾರದಲ್ಲಿ ಯಾವುದೇ ರಾಜೀ ಮಾಡಿಕೊಳ್ಳದೆ ತ್ವರಿತಗತಿಯಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ದೇಶದ ಅದ್ಭುತ ಶಕ್ತಿಗಳು ಅನ್ನ ನೀಡುವ ರೈತ ಮತ್ತು ದೇಶ ಕಾಯುವ ಸೈನಿಕರು. ಇವರೀರ್ವರ ರಕ್ಷಣೆಯ ಜವಾಬ್ದಾರಿಯೇ ಶ್ರೇಷ್ಠ ಕಾರ್ಯ. ಜೀವದ ಹಂಗು ತೊರೆದು ದೇಶದ ಗಡಿ ಕಾಯುವ ಸೈನಿಕರಿಗೆ ವಿಶೇಷವಾಗಿ ಈ ರೀತಿಯ ಕೃತ್ಯಗಳು ಮನೋಸ್ಥೈರ್ಯ ಕಂಗೆಡಿಸುವಂತಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ತ್ವರಿತಗತಿಯಲ್ಲಿ ದಿಟ್ಟ ಸಂದೇಶ ನೀಡಬೇಕು. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು.ಕರ್ನಾಟದ ಒಬ್ಬ ಯೋಧ ಸೇರಿ 42 ಜನ ವೀರ ಮರಣವನ್ನಪ್ಪಿದ ಯೋಧರಿಗೆ ಚಿರಶಾಂತಿ ಕೋರುತ್ತಿರುವುದಾಗಿ ತಿಳಿಸಿದರು.

ತಾಪಂ ಮಾಜಿ ಉಪಾಧ್ಯಕ್ಷ ಜಾನಕಿರಾಂ, ಪ್ರೆಸ್ ಕ್ಲಬ್ ಗೌರವಾಧ್ಯಕ್ಷ ಆನಂದ್, ಅಧ್ಯಕ್ಷ ಸಿಂಕಾ ಸುರೇಶ್, ಪತ್ರಕರ್ತರಾದ ದಿನೇಶ್, ಪ್ರವೀಣ್, ಪ್ರದೀಪ್, ಕಿರಣ್, ಕುಮಾರ್, ಉಮೇಶ್ ಸೇರಿದಂತೆ ಹಲವರು ತಹಸೀಲ್ದಾರ್ಗೆ ಮನವಿ ನೀಡಿದರು.

 

Rate this item
(0 votes)

ಸಂಪೂರ್ಣ ಸಾಕ್ಷರತೆ ಸಾಧಿಸಲು ಕರಾರುವಕ್ಕಾದ ಯೋಜನೆ ಹಾಕಿಕೊಂಡು ಕೆಲಸ ಮಾಡುವಂತೆ ರಾಜ್ಯ ಲೋಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ವಿಜಯ್ ಖಡಕ್ ಸೂಚನೆ.

ಮಂಡ್ಯ: ಮಂಡ್ಯದ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಜ್ಯ ಲೋಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ವಿಜಯ್ ನಿಮಗೆ ನೀಡುತ್ತಿರುವ ಹಣ ಸಾರ್ವಜನಿಕರ ತೆರಿಗೆಯ ಹಣವಾಗಿದ್ದು ಒಂದೊಂದು ರೂಪಾಯಿ ಯನ್ನು ಅನಕ್ಷರಸ್ಥರ ಕಲಿಕೆಯ ಉಪಯೋಗಕ್ಕೆ ಬಳಸಬೇಕು. ಶೇಕಡಾ 100 ಗುರಿಯನ್ನು ಸಾಧಿಸಲು ಅಗತ್ಯವಾದ ಯೋಜನೆಯನ್ನು ಹಾಕಿಕೊಂಡು ಕಾರ್ಯಕ್ರಮದ ಸಾಧನೆಗಾಗಿ ತಾಲ್ಲೂಕು ಹಂತದ ಅಧಿಕಾರಿಗಳ ಸಹಕಾರದಿಂದ ಸಾಧಿಸಬೇಕಾದ ಗ್ತಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಗತಿ ಸಾಧಿಸುವ ಮೂಲಕ ಸಂಪೂರ್ಣ ಸಾಕ್ಷರತಾ ಗ್ರಾಮ /ಪಂಚಾಯತಿ ಎಂದು ಘೋಷಿಸಿ ಕಾರ್ಯ ಸಾಧನೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ನುಖರಾಗಬೇಕು ಎಂದು ತಿಳಿಸಿದರು. ಈಗಾಗಲೇ ಮೊದಲ ಹಂತದಲ್ಲಿ ಹಣಕಾಸನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಬಿಡುಗಡೆ ಮಾಡಿದ್ದು ತಾಲ್ಲೂಕು ಹಂತಕ್ಕೂ ಹಣ ನೀಡಲಾಗಿದೆ ಸಮೀಕ್ಷೆಯಂತೆ ಮ್ಯಾಚಿಂಗ್ ಬ್ಯಾಚಿಂಗ್ ಪಟ್ಟಿ ಬೋಧಕರ ಪಟ್ಟಿ. ಮುಖ್ಯ ತರಬೇತುದಾರರಿಗೆ ತರಬೇತಿ. ಬೋಧಕರ ತರಬೇತಿ ಕಲಿಕಾ ಕೇಂದ್ರಗಳ ಪ್ರಾರಂಭ ಹೀಗೆ ಶಿಸ್ತು ಬದ್ದವಾಗಿ ಕೆಲಸ ಮಾಡಿ ಅನಕ್ಷರಸ್ಥರನ್ನು ನವ ಸಾಕ್ಷರರನ್ನಾಗಿ ಮಾಡುವ ಮೂಲಕ ಪುಣ್ಯದ ಕೆಲಸ ಮಾಡಬೇಕು ಎಂದು ತಿಳಿಸಿದರು.

ಸಮಾರಂಭದಲ್ಲಿ ರಾಜ್ಯ ಸಂಪನ್ಮೂಲ ಅಧಿಕಾರಿ ವೆಂಕಟೇಶ್. ಅಕೌಂಟ್ ಆಫೀಸರ್ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ರಿಜ್ವಾನಾ ಕೌಸರ್ ಜಿಲ್ಲಾ ಕಾರ್ಯಕ್ರಮ ಸಹಾಯಕ ರಮೇಶ್ ಹಾಗೂ ಎಲ್ಲಾ ತಾಲ್ಲೂಕಿನ ಸಂಯೋಜಕರು ಹಾಜರಿದ್ದರು.

Rate this item
(0 votes)

ಕೆ.ಆರ್.ಪೇಟೆ ಹಿಂದೂಪರ ಸಂಘಟನೆಗಳಿಂದ ಉಗ್ರರ ದುಷ್ಕೃತ್ಯವನ್ನು ಖಂಡಿಸಿ ಪಂಜಿನ ಮೆರವಣಿಗೆ . ಮಾನವಸರಪಳಿ ರಚಿಸಿ ರಸ್ತೆ ತಡೆ.ಪಾಪಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ದೇಶಭಕ್ತರು. 

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದಲ್ಲಿ ಹಿಂದೂ ಪರಸಂಘಟನೆಗಳಿಂದ ಹುತಾತ್ಮ ಯೋಧರ ಪರವಾಗಿ ಪಂಜಿನ ಮೆರವಣಿಗೆ ನಡೆಸಿ ಪಾಕಿಸ್ತಾನದ ಪಾಪಿ ಕೃತ್ಯದ ವಿರುದ್ಧ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ದೇಶಭಕ್ತರು.ಶಿಖಂಡಿಯಂತೆ ಮೋಸದಿಂದ ಆರ್ ಡಿ ಎಕ್ಸ್ ಸ್ಪೋಟಕಗಳಿಂದ ತುಂಬಿದ್ದ ವಾಹನವನ್ನು ಸಿಆರ್ ಪಿಎಫ್ ಯೋಧರು ಸಾಗುತ್ತಿದ್ದ ಬಸ್ಸಿಗೆ ಢಿಕ್ಕಿ ಹೊಡಿಸಿ 50ಕ್ಕೂ ಹೆಚ್ಚಿನ ಯೋಧರ ಮಾರಣ ಹೋಮ ನಡೆಸಿದ ಪಾಕಿಸ್ತಾನದ ಕೃತ್ಯವನ್ನು ಹಿಂದೂಪರ ಸಂಘಟನೆಗಳ ಕಾರ್ಯಕರ್ತರಾದ ಬಾಲು, ನಟರಾಜು, ಹೆಚ್.ಬಿ. ಮಂಜುನಾಥ ಮತ್ತು ಡಾ. ಕೆ.ಆರ್.ನೀಲಕಂಠ ಖಂಡಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.ಪಟ್ಟಣದ ಮುಖ್ಯ ರಸ್ತೆಯಲ್ಲಿ ಪಂಜನ್ನು ಕೈಯ್ಯಲ್ಲಿ ಹಿಡಿದುಕೊಂಡು ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ದುರ್ಗಾಭವನ್ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ನೂರಾರು ಯುವಜನರು ಹಾಗೂ ದೇಶಭಕ್ತರು ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿ ಪಾಕಿಸ್ತಾನದ ಪಾಪಿಕೃತ್ಯವನ್ನು ಖಂಡಿಸಿದರು. ಪಟ್ಟಣ ಪೋಲಿಸರು ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಿದ್ದರು.

Rate this item
(0 votes)

ಸಂತೇಬಾಚಹಳ್ಳಿ ಹೋಬಳಿಯ ಸೊಮೇನಹಳ್ಳಿ ಗ್ರಾಮದಲ್ಲಿ ವೃದನ ಮೇಲೆ ಚಿರತೆ ದಾಳಿ ಗಂಭೀರ ಗಾಯ.ಅರಣ್ಯ ಇಲಾಖೆಯ ಅಧಿಕಾರಿಗಳು ವಿರುದ್ಧ ಕಿಡಿಕಾರಿದ ಗ್ರಾಮಸ್ಥರು.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ  ಸೋಮೇನಹಳ್ಳಿ ಗ್ರಾಮದ ಶಿವಣ್ಣ (೬೨) ಎಂಬ ವೃದನ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ಗಂಭೀರವಾಗಿ ಗಾಯಗಾಳಾಗಿದ್ಧು ತುಂಬ ರಕ್ತಸ್ರಾವ ವಾಗಿದ್ದು ತಾಲ್ಲೂಕು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ .ರವಿ ಮತ್ತು ಶಿವಣ್ಣ ಎಂಬ ಇಬ್ಬರೂ ರೈತರು ತಮ್ಮ ಜಮೀನಲ್ಲಿ ಮೇಕೆ ಮೆಯುಸುತ್ತಿದ್ದಾಗ ಮೇಕೆಗಳ ಮೇಲೆ ಎರಡು ಚಿರತೆಗಳು ದಾಳಿಮಾಡಿದ್ದು ರವಿ ತಕ್ಷಣ ಮಚ್ಚಿನಿಂದ ಹೊಡೆಯಲು ಹೋದಾಗ ರವಿ ಮೇಲೆ ಎರಗಿದ ಚಿರತೆ ಕೈಮತ್ತು ಕಾಲುಗಳಿಗೆ ಪರಚಿ ಹೊಡಿಹೊಗಿದೆ ಇನ್ನೊಂದು ಚಿರತೆ ಅಲ್ಲೆ ಪಕ್ಕ ಪಕ್ಕದಲ್ಲಿ ಇದ್ದ ವೃದ ಶಿವಣ್ಣನ ಮೇಲೆ ಎರಗಿ ಕಾಲು ಕುತ್ತಿಗೆ ಕೈ ತೊಡೆಯ ಭಾಗಕ್ಕೆ ಹಲ್ಲೆಮಾಡಿ ವೃದನನ್ನು ಎಳೆದುಕೊಂಡು ಹೊಗತ್ತಿದ್ದಾಗ ಪಕ್ಕದಲ್ಲಿ ಇದ್ದ ರವಿ ಅಕ್ಕಪಕ್ಕದ ಜನರನ್ನು ಕೂಗಿ ಕರೆದು ಚಿರತೆಯನ್ನು ದೊಣ್ಣೆ ಮತ್ತು ಮಚ್ಚುಗಳಿಂದ ಎದುರಿಸಿ ಹೊಡಿಸಿದ್ದಾರೆ ನಂತರ ವೃದನನ್ನು ಅಂಬೂಲೆನ್ಸ್ ಮೂಲಕ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರೆ ಇನ್ನಾದರೂ ಎಚ್ಚೆತ್ತು ಕೊಳ್ಳುತ್ತಾ ಅರಣ್ಣ ಇಲಾಖೆ ಇಷ್ಟು ದಿನ ದನಕರುಗಳ ಮೇಲೆ ಹಲ್ಲೆ ಮಾಡುತ್ತಿದ್ದ ಚಿರತೆಗಳು ಇಂದು ನರಮಾನವರ ಮೇಲೆ ಹಲ್ಲೆಗೆ ಮುಂದಾಗಿ .ಚಿರತೆ ಗಳನ್ನು ಹಿಡಿಯುವ ಅರಣ್ಯ ಅಧಿಕಾರಿಗಳು ಕ್ರಮ ಕೈಗೋಳತ್ತಾರ ಕಾದು ನೊಡಬೇಕಿದೆ.

ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ದನಕರುಗಳ ಮೇಲೆ ದಾಳಿ ಮಾಡಿದರು ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಧಿಕಾರಿಗಳು ವಿರುದ್ಧ ಗ್ರಾಮಸ್ಥರು ಕಿಡಿಕಾರಿದ್ದಾರೆ

Rate this item
(0 votes)

ತಾಲ್ಲೂಕು ಕಾರ್ಯನಿರತ ಪತ್ರಕರ್ತರು ಮತ್ತು ಪ್ರೆಸ್ ಕ್ಲಬ್ ವತಿಯಿಂದ ಜಮ್ಮುಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರ ದಾಳಿಗೆ ಬಲಿಯಾದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ .

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರು ಮತ್ತು ಪ್ರೆಸ್ ಕ್ಲಬ್ ವತಿಯಿಂದ ಜಮ್ಮುಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರ ದಾಳಿಗೆ ಬಲಿಯಾದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಮರ್ಪಿಸಿ. ನಂತರ ತಹಶೀಲ್ದಾರ್ ಕಛೇರಿಗೆ ತೆರಳಿ ದೇಶದ್ರೋಹಿಗಳಾದ ಉಗ್ರರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಭಾರತ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಪತಹಶೀಲ್ದಾರ್ಮ ಹದೇವೇಗೌಡ, ಪತ್ರಕರ್ತರಾದ ಮಾಕವಳ್ಳಿರವಿ, ಸಿಂಕಸುರೇಶ್, ಕೆ.ಆರ್.ನೀಲಕಂಠ, ಹೆಚ್.ಬಿ.ಮಂಜುನಾಥ್, ಹೊಸಹೊಳಲು ರಾಜೇಶ್, ಸಯ್ಯದ್ ಖಲೀಲ್ ಸೇರಿದಂತೆ ರೈತಮುಖಂಡರು, ಪ್ರಗತಿಪರ ಚಿಂತಕರು ಉಪಸ್ಥಿತರಿದ್ದರು.

Last modified on Friday, 15 February 2019 13:21
Page 12 of 27

Visitors Counter

223025
Today
Yesterday
This Week
This Month
Last Month
All days
207
163
370
6130
4244
223025

Your IP: 3.16.70.101
2024-04-29 12:07

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles