Rate this item
(0 votes)

ಕೃಷಿ ಇಲಾಖೆಯು ರೈತ ಪರವಾಗಿ ಕೆಲಸ ಮಾಡಬೇಕು. ರೈತರಿಗೆ ರಿಯಾಯಿತಿ ದರದಲ್ಲಿ ಕೃಷಿ ಪರಿಕರಗಳು ಹಾಗೂ ಭಿತ್ತನೆ ಬೀಜಗಳ ವಿತರಣೆಗೆ ಕ್ರಮ - ಜಾನಕೀರಾಂ..

Last modified on Friday, 08 March 2019 10:40
Rate this item
(0 votes)

ಕೃಷ್ಣರಾಜಪೇಟೆ ತಾಲ್ಲೂಕಿನ ತ್ರೈಮಾಸಿಕ ಕಾರ್ಯಕ್ರಮಗಳ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯು ಶಾಸಕ ಡಾ.ನಾರಾಯಣಗೌಡ ರ ಅಧ್ಯಕ್ಷತೆಯಲ್ಲಿ

Last modified on Friday, 08 March 2019 10:36

 ಹಿಂದೂ ಧರ್ಮದಲ್ಲಿ ಶಿವರಾತ್ರಿಗೆ ಅದರದ್ದೇ ಆದ ಮಹತ್ವವಿದೆ. ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯಂದು ಪರಿಗಣಿಸಲಾಗುತ್ತದೆ. ಕೈಲಾಸನಾಥನು ಈ ದಿನದಂದು ಭೂಮಿಗೆ ಆಗಮಿಸಿ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆಂಬ ನಂಬಿಕೆ ಹಿಂದೂ ಭಕ್ತರಲ್ಲಿದೆ. ಶಿವರಾತ್ರಿಗೆ ಹೆಚ್ಚು ಪಾವಿತ್ರ್ಯತೆ ಪ್ರಾಮುಖ್ಯತೆ ಇರುವುದು ಅಂದು ಆಚರಿಸುವ ಉಪವಾಸದಲ್ಲಿ.

ಮಹಾ ಶಿವರಾತ್ರಿ: ಈ ವರ್ಷ ಶಿವರಾತ್ರಿ ಮಾರ್ಚ್ 4 ರಂದು ಬಂದಿದೆ ಕೈಲಾಸವಾಸಿ ಶಿವನಿಗೆ ಇದು ಮಂಗಳಕರ ರಾತ್ರಿ! ಶುಚಿರ್ಭೂತರಾಗಿ ಶಿವನನ್ನು ಧ್ಯಾನಿಸುತ್ತಾ ದಿನಪೂರ್ತಿ ಭಕ್ತರು ಆಹಾರ ನೀರು ಮುಟ್ಟದೆ ಉಪವಾಸ ಕೈಗೊಳ್ಳುತ್ತಾರೆ. ಅಲ್ಲದೆ, ಉಪವಾಸವು ಹಗಲಿನಿಂದ ಪ್ರಾರಂಭಗೊಂಡು ರಾತ್ರಿ ಪೂರ್ತಿ ನಡೆದು ಮರುದಿನ ಪ್ರಾತಃ ಕಾಲಕ್ಕೆ ಕೊನೆಗೊಳ್ಳುತ್ತದೆ. ವ್ರತದ ಸಮಯದಲ್ಲಿ ಆಹಾರವಿಲ್ಲದೆ ಕಟ್ಟುನಿಟ್ಟಾಗಿ ದೇವರಲ್ಲಿ ಐಕ್ಯಗೊಳ್ಳಬೇಕು. ವ್ರತಾಧಾರಿಯು ಹಣ್ಣಿನ ರಸ, ಹಣ್ಣುಗಳು ಮತ್ತು ವಿಶೇಷ ವ್ರತ ಆಹಾರಗಳಾದ ವ್ರತದ ಅನ್ನ, ಬೀಜಗಳು, ಈರುಳ್ಳಿ ಬೆಳ್ಳುಳ್ಳಿ ಇಲ್ಲದ ಪದಾರ್ಥಗಳನ್ನು ಸೇವಿಸಬಹುದು. ಸೂರ್ಯಾಸ್ತದ ನಂತರವಷ್ಟೇ ಊಟವನ್ನು ಸೇವಿಸಬೇಕು.  ಮರುದಿನ ಮುಂಜಾನೆ ಲಿಂಗಕ್ಕೆ ಅಭಿಷೇಕವನ್ನು ಪೂರೈಸಿ ಪ್ರಾರ್ಥನೆಗಳನ್ನು ಸಲ್ಲಿಸಿದ ನಂತರವಷ್ಟೇ ವ್ರತವನ್ನು ಸಂಪನ್ನಗೊಳಿಸಬೇಕು. ವ್ರತ ಸಂಪನ್ನಗೊಳಿಸುವಾಗ ಪ್ರಸಾದ ಇಲ್ಲವೇ, ಶಿವನಿಗೆ ಅರ್ಪಿಸಿದ ಆಹಾರವನ್ನು ಮೊದಲು ತೆಗೆದುಕೊಳ್ಳಬೇಕು,

ಬನ್ನಿ ಇಂದಿನ ಲೇಖನದಲ್ಲಿ ಶಿವರಾತ್ರಿ ಆಚರಣೆಗೆ ಸಂಬಂಧ ಪಡೆದಿರುವ ಕೆಲವೊಂದು ಐತಿಹಾಸಿಕ ಕಥೆಗಳನ್ನು ತಿಳಿಸಿಕೊಡಲಿದ್ದೇವೆ. ಶಿವರಾತ್ರಿ ಏಕೆ ಅತಿ ಮಹತ್ವದ್ದು ಮತ್ತು ಪವಿತ್ರವಾದುದು ಎಂಬುದನ್ನು ನಿಮಗಿಲ್ಲಿ ತಿಳಿದುಕೊಳ್ಳಬಹುದಾಗಿದೆ. ಬ್ರಹ್ಮ ಮತ್ತು ವಿಷ್ಣುವಿಗೆ ಸಂಬಂಧಿಸಿದ ಕಥೆ ಹೆಚ್ಚು ಜನಜನಿತವಾಗಿರುವ ಶಿವರಾತ್ರಿಯ ಕಥೆಯು ಬ್ರಹ್ಮ ಮತ್ತು ವಿಷ್ಣುವಿಗೆ ಸಂಬಂಧಿಸಿದ್ದಾಗಿದೆ. ತಮ್ಮಲ್ಲಿ ಯಾರು ಶ್ರೇಷ್ಠರು ಎಂಬುದಾಗಿ ಇಬ್ಬರಲ್ಲಿ ಸಂಘರ್ಷ ನಡೆಯುತ್ತಿತ್ತು. ಈ ರೀತಿ ಜಗಳ ಮುಂದುವರಿಯುತ್ತಿದ್ದರೆ ಇದು ವಿನಾಶಕ್ಕೆ ಕಾರಣವಾಗಬಹುದು ಎಂದು ಭಾವಿಸಿದ ದೇವತೆಗಳು ಬ್ರಹ್ಮ ಮತ್ತು ವಿಷ್ಣುವಿನ ವಿರಸದ ಕುರಿತಾಗಿ ಶಿವನಲ್ಲಿ ಮನವಿ ಮಾಡಿಕೊಳ್ಳುತ್ತಾರೆ. ಇಬ್ಬರು ದೇವರನ್ನು ಸಂತೈಸಲು ಶಿವ ಆಗಮಿಸುತ್ತಾರೆ.ಬ್ರಹ್ಮ, ವಿಷ್ಣು, ಮಹೇಶ್ವರ - ಈ ತ್ರಿಮೂರ್ತಿಗಳಲ್ಲಿ ಯಾರು ಸಮರ್ಥರು? ಬ್ರಹ್ಮ ಮತ್ತು ವಿಷ್ಣುವಿಗೆ ಸಂಬಂಧಿಸಿದ ಕಥೆ ಶಿವನು ಬೆಂಕಿಯಿಂದ ಕೂಡಿದ ಲಿಂಗಧಾರಣೆಯನ್ನು ಮಾಡಿಕೊಂಡು ಲಿಂಗದ ಮೇಲ್ಭಾಗ ಮತ್ತು ತಳಭಾಗವನ್ನು ಹೋಗಿ ಯಾರು ಶ್ರೇಷ್ಠರು ಎಂಬುದನ್ನು ನೋಡಲು ಇಬ್ಬರಲ್ಲೂ ತಿಳಿಸುತ್ತಾರೆ. ಬ್ರಹ್ಮನು ಬಾತುಕೋಳಿಯ ರೂಪದಲ್ಲಿ ಮೇಲ್ಭಾಗಕ್ಕೂ ವಿಷ್ಣುವು ಹಂದಿಯ ರೂಪದಲ್ಲಿ ಲಿಂಗದ ಕೆಳಭಾಗವನ್ನು ಗುರುತಿಸಲು ಮುಂದಾಗುತ್ತಾರೆ. ಆದರೆ ಇವರಿಬ್ಬರಿಗೂ ಕೊನೆ ಮತ್ತು ಆರಂಭ ದೊರೆಯುವುದೇ ಇಲ್ಲ.  ಸ್ಪರ್ಧೆಯಲ್ಲಿ ಸೋಲಲು ಇಷ್ಟಪಡದ ಬ್ರಹ್ಮನು ಕೇತಕಿ ಪುಷ್ಪವನ್ನು ತೆಗೆದುಕೊಂಡು ಬಂದು ಬೆಂಕಿಯ ಮೇಲ್ಭಾಗದಲ್ಲಿ ಇದು ದೊರಕಿತು ಎಂದಾಗಿ ಸುಳ್ಳು ಹೇಳುತ್ತಾರೆ. ಕೇತಕಿ ಪುಷ್ಪ ಕೂಡ ಬ್ರಹ್ಮನನ್ನು ಬೆಂಬಲಿಸುತ್ತದೆ. ಇದರಿಂದ ಕೋಪಗೊಂಡ ಶಿವನು ಬ್ರಹ್ಮನು ಸುಳ್ಳು ಹೇಳಿದ್ದಕ್ಕಾಗಿ ಬ್ರಹ್ಮನನ್ನು ಯಾರೂ ಪೂಜಿಸಬಾರದು ಎಂದಾಗಿ ಶಪಿಸುತ್ತಾರೆ. ಅಂತೆಯೇ ಪೂಜೆ ಸಮಯದಲ್ಲಿ ಕೇತಕಿ ಹೂವನ್ನು ಯಾರೂ ಬಳಸಬಾರದು ಎಂಬುದಾಗಿ ಶಾಪವನ್ನೀಯುತ್ತಾರೆ. ಶಿವ-ಸರಸ್ವತಿ ಶಾಪಕ್ಕೆ 'ಬ್ರಹ್ಮನಿಗೆ' ಪೂಜೆಯೇ ನಿಂತು ಹೋಯಿತು! ಮಹಾಶಿವರಾತ್ರಿ ಹಬ್ಬದ ಮಹತ್ವ ಮಹಾಶಿವರಾತ್ರಿಯ ಮಧ್ಯರಾತ್ರಿಯಂದು ಮಹಾದೇವನು ಲಿಂಗ ಸ್ವರೂಪವನ್ನು ಧರಿಸುತ್ತಾರೆ. ಫಲ್ಗಣ ಮಾಸದ 14 ನೇ ಗಾಢ ಮಾಸದಂದು ಇದು ಸಂಭವಿಸುತ್ತದೆ. ಶಿವನು ಪ್ರಥಮ ಬಾರಿ ಲಿಂಗ ರೂಪವನ್ನು ಧರಿಸುವುದು ಎಂಬುದಾಗಿ ಇದನ್ನು ಕಾಣಲಾಗುತ್ತದೆ. ಆ ದಿನವನ್ನೇ ಮಹಾಶಿವರಾತ್ರಿಯಾಗಿ ಆಚರಿಸಲಾಗುತ್ತದೆ. ಈ ದಿನಂದು ಶಿವನನ್ನು ಪೂಜಿಸುವುದು ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿದೆ ಮತ್ತು ಸುಖ ಸಂತೋಷವನ್ನು ತರಲಿದೆ ಎಂಬುದು ಪ್ರತೀತಿಯಾಗಿದೆ. 


Rate this item
(0 votes)

ಜ್ಞಾನದ ವಿಕಾಸವೆ ವಿಜ್ಞಾನ ಮತ್ತು ತಂತ್ರಜ್ಞಾನ. ನೂತನ ಆವಿಷ್ಕಾರಗಳಿಗೆ ತೆರೆದುಕೊಳ್ಳುವ ವಿಶಾಲ ಭೂಮಿಕೆ ಜ್ಞಾನ ಮತ್ತು ತಂತ್ರಜ್ಞಾನದಲ್ಲಿದೆ. ಆದ್ದರಿಂದ ಪ್ರತಿತೊಬ್ಬರೂ ಕೂಡಾ ವಿಜ್ಞಾನದ ಜೊತೆಯಾಗಿ ನಿಲ್ಲಬೇಕು ಎಂದು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಸಂಪತ್ಕುಮಾರನ್ ಹೇಳಿದರು.

ಕೆ.ಆರ್.ಪೇಟೆ : ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ಭಾರತ ದೇಶವು ಅತ್ಯಂತ ವೇಗವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಹೊಂದಿದೆ. ಇಡಿ ಜಗತ್ತು ಇಂದು ಭಾರತೀಯ ವಿಜ್ಞಾನಿಗಳ ಸಹಕಾರಕ್ಕಾಗಿ ತುದಿಗಾಲ ಮೇಲೆ ನಿಂತಿದೆ. ಭರತೀಯ ತಂತ್ರಜ್ಞಾನದ ಮೂಲಬೇರುಗಳು ವಿಜ್ಞಾನದ ವಿಕಾಸದಲ್ಲಿದೆ. ಇಂದು ದೇಶವು ಸಂದಿಗ್ಧತೆಯಲ್ಲಿದೆ. ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಇಂತಹ ಸಮಯದಲ್ಲಿ ಯುವಕರು ಹೆಚ್ಚು ವಿಜ್ಞಾನಕ್ಕೆ ಪ್ರೋತ್ಸಾಹವನ್ನು ನೀಡಬೇಕು. ಜನರಿಗಾಗಿ ವಿಜ್ಞಾನ-ವಿಜ್ಞಾನಕ್ಕಾಗಿ ಜನರು ಎಂಬ ಸತ್ಯವನ್ನು ಮನಗಾಣಬೇಕು ಎಂದು ಸಂಪತ್ಕುಮಾರನ್ ಕಿವಿಮಾತು ಹೇಳಿದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಡ್ಯ ಬಾಲಕರ ಸರಕಾರಿ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಡಾ.ಶಿವಕುಮಾರಸ್ವಾಮಿ ಮಾತನಾಡಿ ಇಡಿ ಜಗತ್ತಿಗೆ ಭಾರತ ದೇಶಧಲ್ಲಿನ ವಿಜ್ಞಾನದ ಆವಿಷ್ಕಾರವನ್ನು ತೋರಿಸಿಕೊಟ್ಟವರು ಸರ್.ಸಿ.ವಿ.ರಾಮನ್. ರಾಮನ್ ಅವರ ಆವಿಷ್ಕಾರವು ಇಂದು ವಿಜ್ಞಾನ ಕ್ಷೆತ್ರದಲ್ಲಿ ರಾಮನ್ ಎಫೆಕ್ಟ್ ಎಂದೆ ಖ್ಯಾತಿಯಾಗಿದೆ. ಬೆಳಕಿನ ಚಮತ್ಕಾರದಿಂದ ಸಾಧಿಸಬಹುದಾದ ಮಹತ್ಕಾರ್ಯಗಳನ್ನು ಜಗತ್ತಿಗೆ ತೋರಿಸಿಕೊಡುವ ಮೂಲಕ ನೊಬೆಲ್ ಪ್ರಶಸ್ತಿಯನ್ನು ಪಡೆಯುವ ಮೂಲಕ ಭಾರತಕ್ಕಷ್ಟೆ ಅಲ್ಲದೆ ಏಷ್ಯಾಖಂಡಕ್ಕೆ ಮೊದಲಿಗರಾಗಿ ಕೀತರ್ಿಯನ್ನು ತಂದಿದ್ದಾರೆ. ಆದ್ದರಿಂದಲೆ ಫೆಬ್ರವರಿ 28ರಂದು ರಾಮನ್ ಎಫೆಕ್ಟ್ ಜಗತ್ತಿಗೆ ತೋರಿಸಿದ್ದರಿಂದ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.ನಮ್ಮ ದೇಶದ ವಿಜ್ಞಾನ ಕ್ಷೇತ್ರದಲ್ಲಿ ಹೊಸಹೊಸ ಸಂಶೋಧನೆಗಳು ನಡೆಯುವ ಮೂಲಕ ಪ್ರಪಂಚವೆ ಗುರುತಿಸುವಂತಹ ಸಾಧನೆಯನ್ನು ಮಾಡಿದರೂ ಕೂಡಾ ಸರ್ ಸಿ.ವಿ.ರಾಮನ್ ಅವರನ್ನು ಹೊರತುಪಡಿಸಿ ಇದುವರೆವಿಗೂ ಬೇರೆ ಯಾರಿಗೂ ನೊಬೆಲ್ ಪ್ರಶಸ್ತಿಯು ದೊರಕಿಲ್ಲ. ಹಾಗೆಂದು ನಾವು ಸಾಧನೆಯನ್ನು ಮಾಡಿಲ್ಲವೆಂದಲ್ಲ. ಸಾಧನೆಯು ಅಪಾರವಾಗಿದೆ. ಮುಂದೊಂದು ದಿನ ಮತ್ತೊಮ್ಮೆ ಭಾರತಕ್ಕೆ ನೊಬೆಲ್ ಪ್ರಶಸ್ತಿಯು ಹುಡುಕಿಕೊಂಡು ಬರುತ್ತದೆ ಎಂಬ ವಿಶ್ವಾಸವಿದೆ. ಯುವಕರು ಹೆಚ್ಚಿನ ಆಸಕ್ತಿಯನ್ನು ವಿಜ್ಞಾನದ ಕಲಿಕೆಗೆ ತೋರಿಸಬೇಕು ಎಂದು ಡಾ.ಶಿವಕುಮಾರಸ್ವಾಮಿ ಒತ್ತಾಯಿಸಿದರು.


ಸಹಾಯಕ ಪ್ರಾಧ್ಯಾಪಕ ಡಾ.ರಾಜೀವ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೆಂಪಯ್ಯ ರಸಪ್ರಸ್ನೆ ವಿಜೇತ ವಿದ್ಯಾತರ್ಿಗಳಿಗೆ ಬಹುಮಾನವನ್ನು ವಿತರಣೆ ಮಾಡಿದರು. ಬೆಂಗಳೂರಿನ ಪ್ರೆಸಿಡೆನ್ಸಿಯಲ್ ಯೂನಿವಸರ್ಿಟಿ ಪ್ರಾಧ್ಯಾಪಕ ನ್ಯಾನೋ ತಂತ್ರಜ್ಞಾನದ ಬಗೆಗೆ ಉಪನ್ಯಾಸವನ್ನು ನೀಡಿದರೆ ಮಂಡ್ಯ ಸರಕಾರಿ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಶಿವಲಿಂಗಸ್ವಾಮಿ ಗುರುತ್ವ ಅಲೆಗಳನ್ನು ಕುರಿತು ಉಪನ್ಯಾಸ ನೀಡಿದರು.ವೇದಿಕೆಯಲ್ಲಿ ಐಕ್ಯುಎಸಿ ಸಂಚಾಲಕ ಎಂ.ಕೆ.ರಮೇಶ್, ಅಧೀಕ್ಷಕ ಬಿ.ಎ.ಮಂಜುನಾಥ್ ಸೇರಿದಂತೆ ವಿಜ್ಞಾನ ವಿಭಾಗದ ಉಪಸ್ಥಿತರಿದ್ದರು.

Rate this item
(0 votes)

35ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ ಸೇವೆಯಿಂದ ನಿವೃತ್ತರಾದ ಕೆ.ಆರ್.ಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡಾ.ಕೆ.ಕಾಳೇಗೌಡ ಅವರಿಗೆ ಅಭಿನಂದನೆ ಬೀಳ್ಕೊಡುಗೆ.

ಕೆ.ಆರ್.ಪೇಟೆ : ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕರಾಗಿ ಸೇವೆ ಆರಂಬಿಸಿದ ಕಾಲೇಜಿನಲ್ಲಿಯೇ ಪ್ರಾಂಶುಪಾಲರಾಗಿ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ನಿವೃತ್ತರಾಗುತ್ತಿರುವ ಡಾ.ಕಾಳೇಗೌಡ ಅವರಿಗೆ ಕಾಲೇಜು ಅಭಿವೃದ್ಧಿ ಸಮಿತಿಯ ವತಿಯಿಂದ ಆತ್ಮೀಯವಾಗಿ ಅಬಿನಂಧಿಸಿ ಬೀಳ್ಕೊಡಲಾಯಿತು.ಪ್ರಜಾವಾಣಿ ದಿನಪತ್ರಿಕೆಯ ವರದಿಗಾರರಾಗಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಸಾಹಿತಿಗಳಾಗಿ, ಲೇಖಕರಾಗಿ, ಜಿಲ್ಲಾ ಲೋಕಶಿಕ್ಷಣ ಇಲಾಖೆಯ ಅಧಿಕಾರಿಯಾಗಿ, ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾಗಿ ಸಮಾಜದ ಎಲ್ಲಾ ಸ್ತರಗಳಲ್ಲಿಯೂ ಕಾರ್ಯನಿರ್ವಹಿಸಿ ತಾಲೂಕಿನಾಧ್ಯಂತ ಮನೆ ಮಾತಾಗಿ‌ ಜನಪ್ರಿಯರಾಗಿರುವ ಕಾಳೇಗೌಡರು ತಮ್ಮ 35ವರ್ಷಗಳ ವೃತ್ತಿಬದುಕಿನಲ್ಲಿ ಒಂದೇ ಒಂದು‌ ಕಪ್ಪುಚುಕ್ಕಿಯಿಲ್ಲದಂತೆ ಕೆಲಸ ಮಾಡಿ ಕರ್ತವ್ಯಕ್ಕೆ ಸೇರಿದ್ದ ಕಾಲೇಜಿನಲ್ಲಿಯೇ ನಿವೃತ್ತರಾಗುತ್ತಿರುವುದು ಸಂತಸ ತಂದಿದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಡಾ.ಅಂ.ಚಿ.ಸಣ್ಣಸ್ವಾಮಿಗೌಡ ಅಭಿಮಾನದಿಂದ ಹೇಳಿದರು. ಶ್ರೀಯುತರ ವಿಶ್ರಾಂತ ಜೀವನವು ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಾ.ಎಸ್.ಕೃಷ್ಣಮೂರ್ತಿ, ಪ್ರಾಂಶುಪಾಲ ಲಿಂಗಣ್ಣಸ್ವಾಮಿ, ಸಮಿತಿಯ ಸದಸ್ಯರಾದ ಡಾ.ಕೆ.ಎಸ್.ರಾಜೇಶ್, ಎ.ಬಿ.ನಾಗೇಶ್, ವೆಂಕಟಗಿರಿಯಪ್ಪ, ಪ್ರಾಂಶುಪಾಲರಾದ ಎಂ.ಮಲ್ಲಿಕಾರ್ಜುನ, ಡಿ.ಬಿ.ಸತ್ಯ, ಜೆ.ಜಿ.ರಾಜೇಗೌಡ,ಉಪ ಪ್ರಾಂಶುಪಾಲ ಸೂರ್ಯನಾರಾಯಣ ಮತ್ತಿತರರು ಭಾಗವಹಿಸಿದ್ದರು.

Rate this item
(0 votes)

 ಬೀರೇಶ್ವರ ದೇವಸ್ಥಾನದ ಹತ್ತಿರ ಸರ್ವೇ ನಂ 26,27 ರ ಆಶ್ರಯ ಯೋಜನೆಯಡಿ ಹಕ್ಕು ಪತ್ರ ನೀಡಿರುವ ಫಲಾನುಭವಿಗಳಿಗೆ  ಪುರಸಭೆಯಿಂದ  ಹಕ್ಕು ದಾಖಲಿಸಿ ನಮೂನೆ 3 ರನ್ನು ನೀಡುವ ಸಮಾರಂಭ .

ಮಳವಳ್ಳಿ: ಪಟ್ಟಣದ  ಪುರಸಭೆ ಆವರಣದಲ್ಲಿ  ಸರ್ವೇ ನಂ 26,27 ರ ಆಶ್ರಯ ಯೋಜನೆಯಡಿ ಹಕ್ಕು ಪತ್ರ ನೀಡಿರುವ ಫಲಾನುಭವಿಗಳಿಗೆ  ಪುರಸಭೆಯಿಂದ  ಹಕ್ಕು ದಾಖಲಿಸಿ ನಮೂನೆ 3 ರನ್ನು ನೀಡುವ ಸಮಾರಂಭ  ಕಾರ್ಯಕ್ರಮವನ್ನು  ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ನಿಗಮಮಂಡಳಿ ಅಧ್ಯಕ್ಷ ಹಾಗೂ ಶಾಸಕ ಡಾ. ಕೆ. ಅನ್ನದಾನಿ  ಉದ್ಘಾಟಿಸಿ ಮಾತನಾಡಿ, ಕುಮಾರಸ್ವಾಮಿ ರವರನ್ನು ಮಂತ್ರಿ ಕೊಡಿ ಎಂದು ಕೇಳಿದೆ ಆದರೆ ಅವರು ದೇವರಾಜು ಅರಸು ನಿಗಮಮಂಡಳಿ ಅಧ್ಯಕ್ಷ ನೀಡಿದರು  ಇದರಿಂದ ತಾಲ್ಲೂಕಿನಲ್ಲಿರುವ  ಹಿಂದುಳಿದ ವರ್ಗಗಳ ಜನರನ್ನು ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು.  ಕಳೆದ 10 ವರ್ಷಗಳ ಹಿಂದೆ ನಾನು ಶಾಸಕನಾಗಿದ್ದ ವೇಳೆಯಲ್ಲಿ ಹಂಚಿದ್ದ ಹಕ್ಕುಪತ್ರದ ಬಗ್ಗೆ ಯಾವುದೇ ಕ್ರಮಗೊಂಡಿಲ್ಲದ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು ಈ ದಿನ ನಿವೇಶನ ನೀಡುವುದಾಗಿ ನಮೂನೆ 3 ರನ್ನು ನೀಡುತ್ತಿದ್ದು, ಸದುಪಯೋಗ ಪಡಿಸಿಕೊಳ್ಳುವಂತೆ  ಫಲಾನುಭವಿಗಳಿಗೆ  ಕರೆ ನೀಡಿದರು.   ನಮ್ಮ ದೋಸ್ತಿ ಕಾಂಗ್ರೆಸ್ ಪಕ್ಷದವರು  ಮಂಡ್ಯದಲ್ಲಿ ನಡೆದ ಮುಖ್ಯಮಂತ್ರಿರವರು ಮಾಡಿದ 1300 ಕೋಟಿ ಚಾಲನೆ ಬೋಗಸ್ ಅಂತ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.  ಜನರಿಗೆ ಗೊತ್ತಿದೆ ನಾವು ಏನು ಕೆಲಸ ಮಾಡುತ್ತಿದ್ದೇವೆ,   ನಾನು ಮೇಟಿ ಅಷ್ಟೇ   ಸರ್ಕಾರದ ಅನುದಾನ  ಬಂದೆ ಬರುತ್ತೆ  ಅದನ್ನು ಜನರಿಗೆ ತಲುಪಿಸುತ್ತೇವೆ  ಎಂದರು.  ಮುಂದಿನದಿನಗಳಲ್ಲಿ ಸ್ಲಂ ಬೋರ್ಡ್ ನಿಂದ ಮನೆ ಕಟ್ಟಲು 500 ಮನೆಗಳ ನಿರ್ಮಾಣ ಮಾಡಲು ಮಂಜೂರುಯಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ 33 ಎಕರೆ ಜಮೀನನ್ನು ಫಲಾನುಭವಿಗಳಿಗೆ ಹಂಚಲಾಗುತ್ತದೆ ಪಟ್ಟಣದಲ್ಲಿ ಇನ್ನೂ ಎರಡುವರ್ಷಗಳಲ್ಲಿಪ್ರತಿಯೊಬ್ಬರಿಗೂ ನಿವೇಶನ ಹಂಚಿ,   ನಿವೇಶನರಹಿತ ಪಟ್ಟಣ ಮಾಡಲಾಗುವುದು ಎಂದರು  ಇದೇ ಸಂದರ್ಭದಲ್ಲಿ  ಫಲಾನುಭವಿಗಳಿಗೆ ಸಾಂಕೇತಿಕವಾಗಿ  ಶಾಸಕರು ಹಂಚಿದರು .ಇನ್ನೂ ಪುರಸಭೆ ಕಾರ್ಯಕ್ರಮದಲ್ಲಿ  ಪುರಸಭಾಧ್ಯಕ್ಷ ರಿಯಾಜಿನ್ ಸೇರಿದಂತೆ  ಕಾಂಗ್ರೆಸ್ ಪಕ್ಷದ  ಪುರಸಭೆ ಸದಸ್ಯರು ಬಹುತೇಕ ಪಕ್ಷೇತರ ಸದಸ್ಯರ ಗೈರುಹಾಜರಿ ಎದ್ದುಕಾಣುತ್ತಿತ್ತು.         

ಕಾರ್ಯಕ್ರಮ ದಲ್ಲಿ ಪುರಸಭೆ ಉಪಾಧ್ಯಕ್ಷೆ ಸುಮನಾಗೇಶ್,ಮುಖ್ಯಾಧಿಕಾರಿ ಗಂಗಾಧರ್,ಪುರಸಭೆ ಸದಸ್ಯರಾದ   ಮೆಹಬೂಬ್ ಪಾಷ, ಚಿಕ್ಕರಾಜು, ಮಹೇಶ , ಸರೋಜಮ್ಮ, ರಾಜಣ್ಣ, ಸವಿತರಾಜು ನಾಗೇಶ ಸೇರಿದಂತೆ ಮತ್ತಿತ್ತರು ಇದ್ದರು

Rate this item
(0 votes)

 ನಮ್ಮ ಸರ್ಕಾರ ರೈತರ ಪರ ಸರ್ಕಾರ  ರೈತರಿಗೆ ಸಕಾಲದಲ್ಲಿ ಸವಲತ್ತುಗಳ ಸಿಗುವಂತಾಗಬೇಕು ಅದಕ್ಕಾಗಿ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಸರಿಯಾಗಿ ಕೆಲಸ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಶಾಸಕ ಡಾ.ಕೆ ಅನ್ನದಾನಿ ಎಚ್ಚರಿಸಿದರು       

ಮಳವಳ್ಳಿ: ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ  ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮ ಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ   ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ ರವರು  ತಾಲ್ಲೂಕಿನ ರೈತರ ಆತ್ಮಹತ್ಯೆಯ ವಿವರವನ್ನು ಸಭೆ ಮಂಡಿಸಿದರು,   ಇದೇ ಸಂದರ್ಭದಲ್ಲಿ ಚೊಟ್ಟನಹಳ್ಳಿ ಜಿ.ಪಂ ಸದಸ್ಯೆ ಸುಷ್ಮಾರಾಜು ರವರು ನಮ್ಮ ತಾಲ್ಲೂಕಿನ ಮಳೆ ಇಲ್ಲದೆ ಇದ್ದರೂ ಇನ್ನೂ ಸರ್ಕಾರ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿಲ್ಲ  ಏಕೆ ಎಂದು ಪ್ರಶ್ನಿಸಿದರು ಇದಕ್ಕೂ ಉತ್ತರಿಸಿದ ಅಧಿಕಾರಿ ನಾವು ವರದಿ ನೀಡಿದ್ದೇವೆ ಆದರೂ ನಮ್ಮ ವರದಿಗೆ ಮನ್ನಣೆಯನ್ನು ನೀಡುವುದಿಲ್ಲ ಅವರು ಸೆಟಲೈಟ್ ವರದಿ ಆಧಾರದ ಮೇಲೆ ಬರಪೀಡಿತ ಘೋಷಣೆ ಮಾಡುತ್ತಾರೆ ಎಂದರು. ಶಾಸಕರು ಸಹ ನಾನು ಸರ್ಕಾರದ ಜೊತೆ ಮಾತನಾಡುವುದಾಗಿ ಭರವಸೆ ನೀಡಿದರು, ಇನ್ನೂ ಅಬಕಾರಿ ಇಲಾಖೆ ಅಧಿಕಾರಿಗೆ ಶಾಸಕರು ತರಾಟೆ ತೆಗೆದುಕೊಂಡು ನೀವು ತಾಲ್ಲೂಕಿನಲ್ಲಿ ಏನು ಕೆಲಸ ಮಾಡುತ್ತಿಲ್ಲ ತಾಲ್ಲೂಕಿನ ಹಳ್ಳಿಹಳ್ಳಿಯಲ್ಲೂ ಅಂಗಡಿಗಳಲ್ಲೂ ಮಧ್ಯ ಮಾರಾಟ ನಡೆಯುತ್ತಿದೆ ಇದನ್ನು ಕೂಡಲೇ ನಿಲ್ಲಿಸಬೇಕು ಇಲ್ಲದಿದ್ದರೆ ನಿಮ್ಮ ಮೇಲೆ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು. ಇನ್ನೂ ಶುದ್ದ ಕುಡಿಯುವ ನೀರು  ವಿಷಯಕ್ಕೆ ಬರುತ್ತಿದ್ದಂತೆ   ಜಿ.ಪಂ ಸದಸ್ಯೆ ಸುಷ್ಮಾರಾಜು ರವರು ಒಂದು ಕುಡಿಯುವ ನೀರಿನ ಘಟಕವನ್ನು ಎಷ್ಷು ಭಾರಿ ಉದ್ಘಾಟನೆ ಮಾಡುತ್ತಾರೆ ತಿಳಿಸಿದರು. ಮದ್ಯಪ್ರವೇಶ ಮಾಡಿದ ಶಾಸಕರು  ಯಾವುದು ಆ ರೀತಿಯಾಗಿಲ್ಲ ಎಂದರು ಈ ಮಧ್ಯೆ ತಾ.ಪಂ ಅಧ್ಯಕ್ಷ. ನಾಗೇಶರವರು ಗುಂಡಾಪುರದಲ್ಲಿ ಶುದ್ದ ಕುಡಿಯುವ ನೀರಿನ ಘಟಕ  ಉದ್ಘಾಟನೆ ಗೆ ನನ್ನ ಆಹ್ವಾನಸಿಲ್ಲ ಏಕೆ  ಎಂದಾಗ. ಇಂಜಿನಿಯರ್ ಸೋಮಶೇಖರ್ ರವರು  ರಾತ್ರಿ ಕಾರ್ಯಕ್ರಮ ನಿಗದಿಯಾಯಿತು ಎಂದಾಗ. ನನಗೆ ಪೋನ್ ಮಾಡಬೇಕಾಗಿತ್ತು,  ಶಿಷ್ಟಾಚಾರದ ಬಗ್ಗೆ  ತಿಳಿದುಕೊಳ್ಳಿ ಎಂದು ತರಾಟೆ ತೆಗೆದುಕೊಂಡರು. ಶಾಸಕರು ಇನ್ನೂ ಮುಂದೆ ಈ ರೀತಿಯಾಗದೆ ನಾನು ನೋಡಿಕೊಳ್ಳತ್ತೇನೆ ಎಂದು ತಾ.ಪಂ ಅಧ್ಯಕ್ಷರನ್ನು ಸಮಾದಾನಪಡಿಸಿದರು.     

ಸಭೆಯಲ್ಲಿ  ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅದ್ಯಕ್ಷ ರವಿ, ಜಿ.ಪಂ ಸದಸ್ಯರಾದ ಚಂದ್ರಕುಮಾರ, ಸುಜಾತಸುಂದ್ರಪ್ಪ, ಜಯಕಾಂತ, ಸುಷ್ಮಾರಾಜು, ಸುಜಾತಪುಟ್ಟು,  ತಾ.ಪಂ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ಮಾಧು, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ, ತಾ.ಪಂ ಇಒ ಸತೀಸ್, ತಹಸೀಲ್ದಾರ್ ಚಂದ್ರಮೌಳಿ ಸೇರಿದಂತೆ ಎಲ್ಲಾ ಇಲಾಖೆ ಅಧಿಕಾರಿಗಳು ಇದ್ದರು

Rate this item
(0 votes)

ಪಾಕಿಸ್ತಾನದ ಬಾವುಟಕ್ಕೆ ಮುತ್ತಿಡುವ ಫೋಟೋವನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ ಮುಸ್ಲಿಂ ಯುವಕ.  ಕಾನೂನಿನ ಕ್ರಮಕ್ಕೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ.

ಕೃಷ್ಣರಾಜಪೇಟೆ : ಪಟ್ಟಣದ ಗುಜರಿ ವ್ಯಾಪಾರಿ ಆದ ಶಫಿ ಎಂಬ ಮುಸ್ಲಿಂ ಯುವಕ ಪಾಕಿಸ್ತಾನದ ಬಾವುಟಕ್ಕೆ ಮುತ್ತಿಡುವ ಫೋಟೋವನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡುವ ಮೂಲಕ ಪಟ್ಟಣದ ಅಶಾಂತಿ ನಿರ್ಮಾಣ ಮಾಡಿದ್ದಾನೆ ಎಂದು ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡಲಾಯಿತು .ಇದೇ ಸಮಯದಲ್ಲಿ ಮಾತನಾಡಿದ ಡಾಕ್ಟರ್ ಕೃಷ್ಣಮೂರ್ತಿ ಭಾರತ ಪಾಕಿಸ್ತಾನ ನಡುವೆ ಯುದ್ಧ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಆದರೆ ನಮ್ಮ ಭಾರತ ದೇಶದಲ್ಲಿ ಇದ್ದು ಈ ಶಫಿ ಎಂಬ ಹುಡುಗ ನೀಚ ಕೆಲಸ ಮಾಡಿದ್ದಾನೆ. ಪಾಕಿಸ್ತಾನದ ಧ್ವಜಕ್ಕೆ ಮುತ್ತನ್ನು ಕೊಡುವ ಫೋಟೋವನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿ ಪಟ್ಟಣದಲ್ಲಿ ಅಶಾಂತಿಯನ್ನು ಉಂಟು ಮಾಡಿದ್ದಾನೆ. ಇಂತಹ ವ್ಯಕ್ತಿಗಳನ್ನು ನಮ್ಮ ದೇಶದಿಂದ ಗಡಿಪಾರು ಮಾಡಿ ಪಾಕಿಸ್ತಾನಕ್ಕೆ ಕಳುಹಿಸಬೇಕು ಇಂತಹ ವ್ಯಕ್ತಿಯ ಮೇಲೆ ಕಾನೂನಿನ ಕ್ರಮ ಕೈಗೊಂಡಿ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಹೇಳಿದರು.

ನಂತರ ಮಾತನಾಡಿದ ಜಯ ಕರ್ನಾಟಕ ಅಧ್ಯಕ್ಷ ರಾದ ಕುಮಾರ್ ಅವರು ಕುಡಿಯಲು ನೀರು ತಿನ್ನಲು ಅನ್ನ ಬದುಕಲು ಭಾರತ ದೇಶ ಬೇಕು . ಇಂತಹ ವ್ಯಕ್ತಿಗಳನ್ನು ಭಾರತ ದೇಶದಿಂದ ಗಡಿಪಾರು ಮಾಡಬೇಕು ಎಂದು ನರೇಂದ್ರ ಮೋದಿಯವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ .ಎಂದು ಆಕ್ರೋಶ ವ್ಯಕ್ತಪಡಿಸಿದರು .10ನಿಮಿಷಗಳ ಕಾಲ ಠಾಣೆಯ ಮುಂದೆ ಕುಳಿತು ಪಾಕಿಸ್ತಾನ ವಿರುದ್ಧ ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಆಟೋ ಚಾಲಕರ ಅಧ್ಯಕ್ಷರಾದ ವಾಸು , ಅವರು ಜಯ ಕರ್ನಾಟಕ ಅಧ್ಯಕ್ಷರಾದ ಕುಮಾರ್ ,ಡಾಕ್ಟರ್ ಕೃಷ್ಣಮೂರ್ತಿ , ಇನ್ನು ನೂರಾರು ಪ್ರತಿಭಟನಾಕಾರರು ಹಾಜರಿದ್ದರು ..


ಮಂಡ್ಯ:  ನಗರದ ಬಾಲಕರ ಸರ್ಕಾರಿ ಕಾಲೇಜು ಮೈದಾನದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅಸಮಾಧಾನ ಹೊರಹಾಕಿದರು. ಸಾಂಸ್ಕೃತಿಕ ಕಾರ್ಯಕ್ರಮ ಬಿಟ್ಟು ಇಷ್ಟು ದೊಡ್ಡ ಅಭಿವೃದ್ಧಿ ಆಗಲಿಲ್ಲ. ಅಂದು ನಾನೂ ಕಾರ್ಯಕ್ರಮಕ್ಕೆ ಬಂದಿದ್ದೆ. ಆದರೆ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿಲ್ಲ ಎಂದರು.ನಿಮ್ಮಗಳ ಋಣ ನಮ್ಮ ಮೇಲೆ ಇದೆ. ಹಾಗಾಗಿ ಜಿಲ್ಲೆಯ ಅಭಿವೃದ್ಧಿಗೆ ನಾನು ಸಿದ್ಧ. ಇನ್ನೂ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸುವುದಾಗಿ ತಿಳಿಸಿದರು. ಮೈಶುಗರ್ ವಿಚಾರವಾಗಿ 450 ಕೋಟಿ ವೆಚ್ಚದಲ್ಲಿ ಹೊಸ ಕಾರ್ಖಾನೆ ಮಾಡಲಾಗುವುದು. ಏಪ್ರಿಲ್- ಮೇ ತಿಂಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.ಪ್ರಧಾನಿ ಬೆಳಗ್ಗೆ ಎದ್ದ ತಕ್ಷಣ ಬಣ್ಣದ ಮಾತುಗಳನ್ನು ಬಿಡ್ತಾರಲ್ಲ, ಹಾಗೇ ನಾನು ಬಿಡೋದಿಲ್ಲ. ಸಾಲ ಮನ್ನಾ ಹಣ ಬಿಡುಗಡೆಯಾಗಿದೆ. ಖಜಾನೆಯಲ್ಲಿ ಇನ್ನೂ ‌6 ಸಾವಿರ ಕೋಟಿ ಇಟ್ಟಿದ್ದೇನೆ. ಬ್ಯಾಂಕ್‌ಗಳಲ್ಲಿ ರೈತರು ಅಡಮಾನ ಇಟ್ಟಿರುವ ಆಭರಣಗಳ ರಕ್ಷಣೆ ಹಾಗೂ ವಾಪಸ್ ರೈತರಿಗೆ ‌ಸಿಗುವಂತೆ ಮಾಡಲು ರಾಜ್ಯ ಸರ್ಕಾರದಿಂದ ಹೊಸ ಯೋಜನೆ ರೂಪಿಸಲಾಗಿದೆ. ಈ ವರ್ಷದಿಂದ ಯೋಜನೆ ಜಾರಿಗೆ ಬರಲಿದೆ ಎಂದು ಸಿಎಂ ಘೋಷಣೆ ಮಾಡಿದರು.ಮುಂದಿನ ಲೋಕಸಭಾ ಚುನಾವಣೆ ಅಷ್ಟು ಸುಲಭದ ಚುನಾವಣೆ ಅಲ್ಲ. ನೀವು ಕೊಟ್ಟ ಶಕ್ತಿಯಿಂದ ದೇವೇಗೌಡರು ಪ್ರಧಾನಿ ಆದರು. ಈ ನಾಡಿನಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ 23-24 ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಕನ್ನಡಿಗರು ಮತ್ತೆ ಪ್ರಧಾನಿ ಆಗುವ ಸಾಧ್ಯತೆ ಇದೆ ಎಂದರು.
 
ನಂತರ ಮಾತನಾಡಿದ ಸಂಸದ ಶಿವರಾಮೇಗೌಡ ಮುಂದಿನ ಲೋಕಸಭಾ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಬೇಕು. ಅವರನ್ನು ಗೆಲ್ಲಿಸುವ ಜವಾಬ್ದಾರಿ ನನ್ನದು ಎಂದರು. ಕಾರ್ಯಕ್ರಮ ಹಲವು ವೈರುಧ್ಯಗಳಿಗೆ ಕಾರಣವಾಗಿದೆ. ಕಾಮಗಾರಿ ಹಂಚಿಕೆ ವಿಚಾರವಾಗಿ ಶ್ರೀರಂಗಪಟ್ಟಣ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಅಸಮಾಧಾನಗೊಂಡು‌ ಅದ್ದೂರಿ ಕಾರ್ಯಕ್ರಮದಿಂದ ಹೊರಗೆ ಉಳಿದರು ಎಂದು ಹೇಳಲಾಗಿದೆ. ಕೆ.ಆರ್.ಎಸ್.ನ ಶೇಷ ಗ್ರಾಮವನ್ನು ಕಂದಾಯ ಗ್ರಾಮ ಎಂದು ಘೋಷಣೆ ಮಾಡಲು ಸರ್ಕಾರ ಹಿಂದೇಟು ಹಾಕಿದೆ ಎಂದು ಗೈರಾಗಿದ್ದಾರೆ ಎಂದು ಹೇಳಲಾಗಿದೆ.


Rate this item
(0 votes)

ಪುಲ್ವಾಮ ದಾಳಿಗೆ ಪ್ರತಿಕಾರವಾಗಿ ನಮ್ಮಭಾರತೀಯ ಸೈನಿಕರು ಪ್ರತಿದಾಳಿ ಉಗ್ರರನ್ನು ಮಟ್ಟಹಾಕಿದ್ದಕ್ಕೆ ಜಯಕರ್ನಾಟಕ ಸಂಘಟನೆ ವತಿಯಿಂದ  ಸಿಹಿಹಂಚುವ ಮೂಲಕ  ಸಂಭ್ರಮಾಚರಣೆ.

ಮಳವಳ್ಳಿ:  ಪಟ್ಟಣದಲ್ಲಿ  ಜಯಕರ್ನಾಟಕ ಸಂಘಟನೆ ವತಿಯಿಂದ ಪುಲ್ವಾಮ ದಾಳಿಗೆ ಪ್ರತಿಕಾರವಾಗಿ ನಮ್ಮಭಾರತೀಯ ಸೈನಿಕರು ಪ್ರತಿದಾಳಿ ಉಗ್ರರನ್ನು ಮಟ್ಟಹಾಕಿದ್ದಕ್ಕೆ ಸಂಭ್ರಮಾಚರಣೆ ಮಾಡಲಾಯಿತು. ಮಳವಳ್ಳಿ ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಮುಂಭಾಗ  ದಿ. ಯೋಧಗುರು ರವರ ಭಾವಚಿತ್ರವಿಟ್ಟು ಭಾರತ್ ಮಾತೆಗೆ ಜೈಕಾರ ಹಾಗೂ  ಪ್ರದಾನಿ ಮೋದಿ ರವರ ದಿಟ್ಟ ನಿರ್ದಾರಕ್ಕೆ ಸಲಾಮ್ ಹೊಡೆದರು . ಇದೇ ಸಂದರ್ಭದಲ್ಲಿ  ಪುರಸಭೆ ಸದಸ್ಯ ಮೆಹಬೂಬ್ ಪಾಷ ಮಾತನಾಡಿ, ದೇಶದ 125 ಕೋಟಿ ಜನರು ಒಗ್ಗಾಟಿನ ದೇಶವನ್ನು ಉಳಿಸಿಕೊಳ್ಳುತ್ತೇವೆ. ಪಾಕಿಸ್ತಾನ ನಮ್ಮದೇಶವನ್ನು ಕೆಣಕಿದರೆ ಪಾಕಿಸ್ತಾನವನ್ನು ಸಂಪೂರ್ಣ ನಾಶ ಪಡಿಸುವುದಾಗಿ ಎಚ್ಚರಿಸಿದರು . ಇನ್ನೂ  ತಾಲ್ಲೂಕು ಅಧ್ಯಕ್ಷ ರಮೇಶ, ಮಾತನಾಡಿ, ದೇಶ ವನ್ನು ಕಾಯುತ್ತಿರುವ ನಮ್ಮ ಯೋದರಿಗೆ ನಮ್ಮಸಲಾಮ್ ಪಾಕಿಸ್ತಾನದ ಉಗ್ರರ ಯಾವುದೇ ಮುನ್ಸೂಚನೆ  ನೀಡದೆ ನಮ್ಮ ಯೋದರನ್ನು ಬಲಿ ತೆಗೆದುಕೊಂಡು ಇದಕ್ಕೆ ಪ್ರತಿಕಾರವಾಗಿ ನಮ್ಮಯೋದರು 450 ಕ್ಕೂ ಹೆಚ್ಚು ಉಗ್ರರನ್ನು ನಾಶ ಮಾಡಿದ್ದಾರೆ.  ಇದಲ್ಲದೆ ನಮ್ಮ ಪ್ರದಾನ ಮಂತ್ರಿ ನರೇಂದ್ರಮೋದಿರವರ ನಿರ್ಧಾರದ ಬಗ್ಗೆ  ಮೆಚ್ಚುಗೆ ವ್ಯಕ್ತಪಡಿಸಿದರು.   ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಿಹಿಹಂಚುವ ಮೂಲಕ ಸಂಭ್ರಮ ಪಟ್ಟರು .

ಈ ಸಂಧರ್ಬದಲ್ಲಿ  ಉಪಾಧ್ಯಕ್ಷ ರಾದ ಕಲ್ಲೇಶ್, ವೆಂಕಟೇಶ್, ಚಂದ್ರಶೇಖರ್, ತಾಲ್ಲೂಕು ಕಾರ್ಯದರ್ಶಿ ಗುರುಸಿದ್ದಯ್ಯ, ಪ್ರಧಾನಕಾರ್ಯದರ್ಶಿ,ತೇಜೇಂದ್ರಕುಮಾರ್, ಪ್ರಸನ್ನ, ಪ್ರದೀಪ್ , ತಾಲ್ಲೂಕು ಯುವಜೆಡಿಎಸ್ ಅಧ್ಯಕ್ಷ ಶ್ರೀಧರ್, ರಾಜು   ಸಂಚಾಲಕ ಶಶಿ, ಮುಹಿನ್ ಶರೀಷ್ , ಆಟೋಘಟಕದ ಎಲ್ಲಾ ಸದಸ್ಯರು ಹಾಜರಿದ್ದರು.

Page 9 of 27

Visitors Counter

238052
Today
Yesterday
This Week
This Month
Last Month
All days
254
101
680
6288
8165
238052

Your IP: 34.239.170.244
2024-06-19 08:13

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles