ಕೃಷ್ಣರಾಜಪೇಟೆ ತಾಲ್ಲೂಕು ಕೃಷಿಕ ಸಮಾಜದ ಸಭೆಯು ಪಟ್ಟಣದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿಯ ಸಭಾಂಗಣದಲ್ಲಿ ನಡೆಯಿತು..
ರೈತರ ಕೃಷಿ ಚಟುವಟಿಕೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯು ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಿ ಕೃಷಿ ಇಲಾಖೆಯನ್ನೇ ರೈತರ ಮನೆ ಬಾಗಿಲಿಗೆ ಕೊಂಡೊಯ್ಯಬೇಕು ಎಂದು ಕೃಷಿಕ ಸಮಾಜದ ಅಧ್ಯಕ್ಷ ಜಾನಕೀರಾಂ ಸಲಹೆ ನೀಡಿದರು.. ತಾಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗಿದ್ದು ತಾಲೂಕಿನಲ್ಲಿ ತೀವ್ರವಾದ ಬರದ ಛಾಯೆಯು ಆವರಿಸಿದೆ. ರೈತರಿಗೆ ರಿಯಾಯಿತಿ ದರದಲ್ಲಿ ಕೃಷಿ ಪರಿಕರಗಳು ಸೇರಿದಂತೆ ಬಿತ್ತನೆ ಬೀಜಗಳನ್ನು ವಿತರಿಸಲು ಅಗತ್ಯ ದಾಸ್ತಾನನ್ನು ಸಂಗ್ರಹಿಸಿ ಇಟ್ಟುಕೊಂಡಿರಬೇಕು. ಸಧ್ಯ ಒಳ್ಳೆಯ ಮಳೆಯಾಗುತ್ತಿದ್ದಂತೆ ಕೃಷಿ ಚಟುವಟಿಕೆಗಳು ಆರಂಭವಾಗುವುದರಿಂದ ಕೃಷಿ ಇಲಾಖೆಯು ಸಮಗ್ರವಾಗಿ ಸಜ್ಜುಗೊಂಡು ರೈತರ ಕೃಷಿ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದ ಜಾನಕೀರಾಂ ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಎಪಿಎಂಸಿ ಆವರಣದಲ್ಲಿ ಕೃಷಿಕ ಸಮಾಜದ ಭವನವನ್ನು ನಿರ್ಮಿಸಿ ರೈತರಿಗೆ ಅಗತ್ಯ ಕೃಷಿ ಮಾಹಿತಿಯನ್ನು ನೀಡಲು ಅನುಕೂಲವಾಗುವಂತೆ ಕೆಲಸ ಮಾಡಲು ಸೂಕ್ತವಾದ ನಿವೇಶನವನ್ನು ಪಡೆದುಕೊಂಡು ಭವನದ ನಿರ್ಮಾಣಕ್ಕೆ ಮುಂದಾಗೋಣ ಎಂಬ ಸಲಹೆಗೆ ಸದಸ್ಯರು ಸರ್ವ ಸಮ್ಮತಿ ನೀಡಿದರು. ಮಂಡ್ಯ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕೆ.ಬಿ.ಈಶ್ವರಪ್ರಸಾದ್, ತಾಲೂಕು ಘಟಕದ ಉಪಾಧ್ಯಕ್ಷ ವಿಠಲಾಪುರ ಸುಬ್ಬೇಗೌಡ, ಸಹಾಯಕ ಕೃಷಿನಿರ್ದೇಶಕ ಮಂಜುನಾಥ್, ನಿರ್ದೇಶಕರಾದ ನಾರಾಯಣಗೌಡ, ಚನ್ನೇಗೌಡ, ರಘು, ರಮೇಶ್, ನಾರಾಯಣ, ರಾಮಸ್ವಾಮಿ, ಕೃಷ್ಣೇಗೌಡ, ಎಪಿಎಂಸಿ ಕಾರ್ಯದರ್ಶಿ ಸತೀಶ್, ಕೃಷಿ ಅಧಿಕಾರಿ ಜಯಶಂಕರ ಆರಾಧ್ಯ ಸೇರಿದಂತೆ ತೋಟಗಾರಿಕೆ, ಸಾಮಾಜಿಕ ಅರಣ್ಯ, ಮೀನುಗಾರಿಕೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು...
Article content
ಕೃಷಿ ಇಲಾಖೆಯು ರೈತ ಪರವಾಗಿ ಕೆಲಸ ಮಾಡಬೇಕು
ಕೃಷಿ ಇಲಾಖೆಯು ರೈತ ಪರವಾಗಿ ಕೆಲಸ ಮಾಡಬೇಕು. ರೈತರಿಗೆ ರಿಯಾಯಿತಿ ದರದಲ್ಲಿ ಕೃಷಿ ಪರಿಕರಗಳು ಹಾಗೂ ಭಿತ್ತನೆ ಬೀಜಗಳ ವಿತರಣೆಗೆ ಕ್ರಮ - ಜಾನಕೀರಾಂ..
Leave a comment
Write your comments