Super User

Super User

ತಪ್ಪಿದ ಭಾರೀ ಅನಾಹುತ ಕ್ಷಣಾರ್ಧದಲ್ಲಿ ಪಾಸಾದ ಕೆಎಸ್ಆರ್ಟಿಸಿ ಬಸ್ ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ

ಕೆ.ಆರ್.ಪೇಟೆ ಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಯಿತು.

ಅಧಿಕಾರಿಗಳು ಬದ್ಧತೆಯಿಂದ ಶ್ರೀಸಾಮಾನ್ಯನ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಸೂಚನೆ...  ಕೃಷ್ಣರಾಜಪೇಟೆ ಪಟ್ಟಣದ ಪ್ರವಾಸಿಮಂದಿರದ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಮಂಡ್ಯ ಜಿಲ್ಲಾ ಲೋಕಾಯುಕ್ತ ಹಿರಿಯ ಇನ್ಸ್ ಪೆಕ್ಟರ್ ಶಶಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ  ಅಹವಾಲು ಸ್ವೀಕಾರ ಮತ್ತು ಕುಂದುಕೊರತೆಗಳ ನಿವಾರಣಾ ಸಭೆಯು ನಡೆಯಿತು.

ಅಧಿಕಾರಿಗಳು ನಿಗಧಿತ ಅವಧಿಯೊಳಗೆ ಜನಸಾಮಾನ್ಯರ ಕೆಲಸ ಕಾರ್ಯಗಳನ್ನು ಕಾನೂನಿನ ಪರಿಮಿತಿಯೊಳಗೆ ಮಾಡಿಕೊಡುವ ಮೂಲಕ ಬದ್ಧತೆಯನ್ನು ಪ್ರದರ್ಶನ ಮಾಡಬೇಕು. ಲಂಚದ ಹಣಕ್ಕೆ ಒತ್ತಾಯಿಸಿ ಸಂವಿಧಾನಬದ್ಧವಾದ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಸತಾಯಿಸಿದರೆ ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಿದರು. ವಿವಿಧ ಕಛೇರಿಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ನೀಡಿದರೆ ಖಾಲಿ ಹುದ್ದೆಗಳ ಭರ್ತಿಗೆ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಶಶಿಕುಮಾರ್ ತಿಳಿಸಿದರು.

ಸಭೆಯಲ್ಲಿ ಲೋಕಾಯುಕ್ತ ಇನ್ಸ್ ಪೆಕ್ಟರ್ ರವಿಕಿರಣ್, ಬಿಇಓ ಎಸ್.ರೇವಣ್ಣ, ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್, ತಾ.ಪಂ ಇ.ಓ., ಚಂದ್ರಮೌಳಿ, ಕಾರ್ಮಿಕ ನಿರೀಕ್ಷಕ ಮಹೇಶ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಹಾಸನ: ಶ್ರವಣಬೆಳಗೊಳದಲ್ಲಿ ಸಿನಿಮೀಯ ರೀತಿಯಲ್ಲಿ ವೃದ್ಧೆಯ 50 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾದ ಖದೀಮರು.

ಹೋಬಳಿಯ ದಮ್ಮನಿಂಗಳ ಗ್ರಾಮದ ಕೆಂಗಮ್ಮ ಚಿನ್ನದ ಸರ ಕಳೆದುಕೊಂಡ ವೃದ್ಧೆ.

ಅಪರಿಚಿತ ಓರ್ವ ಮಹಿಳೆ ಹಾಗೂ ಓರ್ವ ಯುವಕನಿಂದ ಕೃತ್ಯ. ಈ ಗ್ಯಾಂಗ್ ನಲ್ಲಿ ಇನ್ನೂ ನಾಲ್ಕೈದು ಜನರಿರುವುದು ಸಿಸಿ ಕ್ಯಾಮೆರಾದಲ್ಲಿ ಪತ್ತೆಯಾಗಿದೆ.

ರಸ್ತೆಯಲ್ಲಿ ಪರ್ಸ್ ಸಿಕ್ಕಿದೆ ಇಬ್ಬರು ಹಂಚಿಕೊಳ್ಳೋಣ ಎಂದು ಅಪರಿಚಿತ ಮಹಿಳೆ ವೃದ್ಧೆಯನ್ನು ಸಮೀಪದ ಪಾರ್ಕ್ ಗೆ ಕರೆದೊಯ್ದಿದ್ದಾರೆ.

ಆಗ ಅಲ್ಲಿಗೆ ಬಂದ ಅಪರಿಚಿತ ಯುವಕ ನನ್ನ ಪರ್ಸ್ ನಿಮಗೆ ಸಿಕ್ಕಿದೆಯಾ ಎಂದು ಕೇಳಿಕೊಂಡು ಬಂದಿದ್ದಾನೆ. ಆ ಮಾಂಗಲ್ಯದ ಆಣೆ ಮಾಡುವ ನೆಪದಲ್ಲಿ ಚಿನ್ನದ ಸರವನ್ನು ಬಿಚ್ಚಿಸಿಕೊಂಡು ಪರಾರಿಯಾಗಿದ್ದಾರೆ.

ಶ್ರವಣಬೆಳಗೊಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಖದೀಮರ ಪತ್ತೆಗೆ ಬಲೆ ಬಿಸಿದ್ದಾರೆ.

ಚನ್ನರಾಯಪಟ್ಟಣ : ವಿದ್ಯುತ್ ಶಾಕ್ ಹೊಡೆದು ಒಂದೇ ಕುಟುಂಬದ ಮೂವರ ಸಾವು.
ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಹೋಬಳಿಯ. ಅಗಸರಹಳ್ಳಿಯಲ್ಲಿ ಇಂದು ಮುಂಜಾನೆ 6.30 ರ ಸುಮಾರಿನಲ್ಲಿ ಘಟನೆ ನಡೆದಿದೆ.

ಮೃತರು ತಾಯಿ ಭಾಗ್ಯಮ್ಮ, ಮಗಳು ದಾಕ್ಷಾಯಿಣಿ, ಮಗ ದಯಾನಂದ. ಮಗಳು ದಾಕ್ಷಾಯಿಣಿ ಬೆಳಗ್ಗೆ ಹೊಗೆದ ಬಟ್ಟೆಗಳನ್ಮು ಮನೆಯಿಂದ ವಿದ್ಯುತ್ ಕಂಬಕ್ಕೆ ಕಟ್ಟಲಾಗಿದ್ದ ತಂತಿಗೆ ಬಟ್ಟೆ ಒಣ ಹಾಕಲು ಹೋದಾಗ ತಂತಿಯಲ್ಲಿ ಪ್ರಸರಿಸುತ್ತಿದ್ದ ವಿದ್ಯುತ್ ಮೊದಲಿಗೆ ದಾಕ್ಷಾಯಣಿಯನ್ನು ಹಿಡಿದುಕೊಂಡಿದೆ. ಇದನ್ನು ನೋಡಿ ಗಾಬರಿಯಿಂದ ತಾಯಿ ಮಗ ಅವಳನ್ನು ಬಿಡಿಸಲು ಹೋಗಿದ್ದಾರೆ. ಅವಳನ್ನು ಮುಟ್ಟಿದ ಈರ್ವರಿಗೂ ವಿದ್ಯುತ್ ಶಾಕ್ ಹೊಡೆದು ಮೂವರೂ ಸಾವನ್ನಪಿದ್ದಾರೆ.
ಗ್ರಾಮಾಂತರ ಠಾಣೆ ವ್ಯಾಪ್ತಿ.

 ಅರಳುಕುಪ್ಪೆ ಗ್ರಾಮದಲ್ಲಿ ಸವಿತಾ ಸಮಾಜದ ನಮಫಲಕ ಮತ್ತು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ಕುಲದವರು ಶೌರ್ಯ ಪುತ್ರರು ಎಂದು ತಿಳಿಸಿದ ಮೈಸೂರು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎನ್ ಆರ್ ನಾಗೇಶ್ ಹಾಗೂ ಸವಿತಾ ಸಮಾಜದ ಚಲನಚಿತ್ರ ಹಿರಿಯ ಹಾಸ್ಯ ಕಲಾವಿದರಾದ ಮುತ್ತುರಾಜ್..

ಪಾಂಡುಪುರ: ತಾಲೂಕಿನ ಅರಳುಕುಪ್ಪೆ ಗ್ರಾಮದಲ್ಲಿ ಸವಿತಾ ಸಮಾಜ ನಮಫಲಕ ಮತ್ತು ಧ್ವಜಾರೋಹಣ ಕಾರ್ಯಕ್ರಮವನ್ನು ವಿಜ್ರಂಭಣೆಯಿಂದ ಗ್ರಾಮದ ರಾಜಬೀದಿಯಲ್ಲಿ ವೀರಗಾಸೆ ಮಂಗಳವಾದ್ಯದೊಂದಿಗೆ ಶ್ರೀ ಸವಿತಾ ಸಮಾಜದ ಜ್ಞಾನಭಂಡಾರ ಹಡಪದ ಅಪ್ಪಣ್ಣನವರ ಭಾವಚಿತ್ರದ ಮೆರವಣಿಗೆ ಮೂಲಕ ಕರೆತಂದು ಪೂಜ್ಯ ಶ್ರೀ ಶ್ರೀ ಶ್ರೀ ಗುರು ಸಿದ್ದಲಿಂಗೇಶ್ವರ ಬೇಬಿ ಮಠ ಘನ ಅಧ್ಯಕ್ಷತೆಯಲ್ಲಿ ಗ್ರಾಮದ ಹೆದ್ದಾರಿಯಲ್ಲಿ ಸ್ಥಾಪಿಸಿದ ನಾಮಫಲಕ ಉದ್ಘಾಟಿಸಿ ಗ್ರಾಮದ ಜಯಲಕ್ಷ್ಮಿ ಸಮುದಾಯ ಭವನದಲ್ಲಿ ಸಮಾಜದ ರಾಜ್ಯ ನಾಯಕರಾದ ಎನ್ ಆರ್ ನಾಗೇಶ್ ಮತ್ತು ಚಲನಚಿತ್ರಗಳ ಹಿರಿಯ ಹಾಸ್ಯ ಕಲಾವಿದರಾದ ಮುತ್ತುರಾಜ್ ಜ್ಯೋತಿ ಬೆಳಗುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸವಿತಾ ಸಮಾಜದ ಕುಲದವರು ಸರ್ವ ಜನಾಂಗಕ್ಕೂ ಅತಿಮುಖ್ಯ ಬೇಕಾದ ಸಮಾಜವಾಗಿದ್ದು ಈ ಚಿಕ್ಕ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ಮುಖೇನ ಬೆಳೆಸಿ ಎಂದು ಸ್ಥಳೀಯ ಪತ್ರಕರ್ತರಿಗೆ ಮನವಿ ಮಾಡಿದರು. 

ಘನ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕೆಂಪುಗೌಡ ಸಮಾಜದ ನಾಯಕರಾದ ಶಿಕ್ಷಣ ಇಲಾಖೆ ಬಸವರಾಜಪ್ಪ ಮನು ಮಾಕವಳ್ಳಿಮತ್ತು ಅರಳಕುಪ್ಪೆ ಸವಿತಾ ಸಮಾಜದ ಘಟಕ ಗೌರವಅಧ್ಯಕ್ಷರಾದ ಕುಮಾರ್ ಬಿ ಎಂ. ಅಧ್ಯಕ್ಷರಾದ ಎ ಎನ್ ಮಹೇಶ್ . ಉಪಾಧ್ಯಕ್ಷರಾದ ಹೆಚ್ ಆರ್ ಗೋವಿಂದರಾಜು. ಖಜಾಂಚಿ ಎಸ್ ಎನ್ ನಂದೀಶ್ .ಆರ್ ಶಿವಕುಮಾರ್ ಪ್ರಧಾನ ಕಾರ್ಯದರ್ಶಿ .ಹಾಗೂ ಕೆಆರ್ ಪೇಟೆ ತಾಲೂಕಿನ ತಾಲೂಕು ಅಧ್ಯಕ್ಷರಾದ ಸುರೇಶ್ ಮತ್ತು ಸಮಾಜದ ಗಣ್ಯಾತಿಗಣ್ಯರು ಯುವಕರು ಕಾರ್ಯಕ್ರಮಕ್ಕೆ ಭಾಗಿಯಾಗಿ ಮೆರುಗು ತುಂಬಿದರು..

 ಗಣೇಶ ವಿಸರ್ಜನೆ ಮಾಡಲು ಹೋಗಿ 6 ಮಕ್ಕಳು ನೀರು ಪಾಲು..ಹೃದಯ ಒಡೆದು ಹೋಗುವ ಘಟನೆ...

ಕೋಲಾರ:  ಜಿಲ್ಲೆಯ ಕೆ.ಜಿ.ಎಪ್. ನ ಕ್ಯಾಸಂಬಳ್ಳಿ ಸಮೀಪದ ಮರದಗಟ್ಟ ಗ್ರಾಮದಲ್ಲಿ  ಗಣೇಶ ಮೂರ್ತಿ ವಿಸರ್ಜನೆ ಮಾಡಲು ಹೋಗಿ ಅರು ಮಕ್ಕಳು ಜಲಸಮಾದಿಯಾದ ಘಟನೆ ನೆಡೆದಿದೆ.
ಮೂವರು ಮಕ್ಕಳು ಕೊಳದ ಬಳಿಯೇ ಸಾವು. ಇನ್ನೂಳಿದ ಮುವರು ಮಕ್ಕಳು ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾವು.ಮುಗಿಲು ಮುಟ್ಟಿದ ಪೋಷಕರು ಅಕ್ರಂದನ..

ನಿಮ್ಮ ಮನೆಯಲ್ಲೇ ಸಿಗುವ ಈ ನುಗ್ಗೆ ಸೊಪ್ಪನ್ನು ತಿನ್ನೋದರಿಂದ 300 ಕ್ಕೂ ಹೆಚ್ಚು ರೋಗ ನಿಮ್ಮ ಹತ್ತಿರ ಸುಳಿಯಲ್ಲಾ..!!!!! ಡಾಕ್ಟರ್ ಬಳಿ ಹೋಗುವ ಕಷ್ಟವೇ ಇಲ್ಲಾ.!!!

 ನಾವು ಜ್ವರ, ನೆಗಡಿ ಬಂತು ಅಂದ ತಕ್ಷಣ ನಾವು ಡಾಕ್ಟರ್ ಬಳಿ ಹೋಗಿ ಕೆಲವು ಮಾತ್ರೆಗಳುಹಾಗು ಟಾನಿಕ್ ಗಳನ್ನೂ ತಂದು ಊಟದ ನಂತರ ಸೇವಿಸುತ್ತೇವೆ, ಇದರಿಂದ ನಿಮಗೆ ಬಂದಿರುವ ಜ್ವರವೇನೋ ಕಡಿಮೆ ಆಗುತ್ತದೆ ಆದರೆ ನಿಮ್ಮ ದೇಹದ ಮೇಲೆ ಪ್ರಭಾವ ಬಿರುವ ಅಂಶಗಳು ಅದರಲ್ಲಿರುತ್ತದೆ.ಈಗ ನಾವು ಹೇಳುವ ಈ ಸೊಪ್ಪನ್ನ ನೀವು ಸೇವಿಸುವುದರಿಂದ ಅನೇಕ ರೋಗಗಳನ್ನೂ ನೀವು ಕಡಿಮೆ ಮಾಡಿಕೊಳ್ಳಬಹುದು, ಹಾಗಾದರೆ ಆ ಸೊಪ್ಪು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ನುಗ್ಗೆ ಸೋಪ್ಪು, ನೀವೂ ನುಗ್ಗೆ ಸೊಪ್ಪನ್ನು ದಿನ ತಿನ್ನೋದರಿಂದ ನೀವು 300 ತರಹದ ರೋಗವನ್ನು ನಿವಾರಿಸಿಕೊಳ್ಳಬಹುದು, ನಿಮಗೆ ಈ ನುಗ್ಗೆ ಸೊಪ್ಪನ್ನ ದಿನ ತಿನ್ನಲು ಕಷ್ಟವಾದರೆ ವಾರಕ್ಕೆ ಒಮ್ಮೆಯಾದರೂ ನುಗ್ಗೆ ಸೊಪ್ಪಿನ ಪದಾರ್ಥ ಮಾಡಿ ತಿನ್ನಿ. ಈ ಸೊಪ್ಪಿನಲ್ಲಿ ಇರುವ ರೋಗ ನಿರೋಧಕ ಶಕ್ತಿಯಿಂದ ನಿಮ್ಮ ದೇಹದಲ್ಲಿರುವ ವಿಷ ಪದಾರ್ಥಗಳನ್ನುಇದು ಹೊರಗೆ ತೆಗೆದು ಹಾಕುತ್ತದೆ,.

ಇನ್ನು ಇದರ ಜೊತೆಗೆ ನಿಮ್ಮ ಹೊಟ್ಟೆಯ ಬಗೆಗಿನ ಎಲ್ಲ ಸಮಸ್ಯೆಗಳಿಗೂ ನುಗ್ಗೆ ಸೊಪ್ಪು ರಾಮಬಾಣವಾಗಿದೆ.ಅಲ್ಸರ್, ಗ್ಯಾಸ್ಟ್ರಿಕ್ ಹಾಗೆ ಇನ್ನಿತರ ಹೊಟ್ಟೆಯ ಸಮಸ್ಯೆ ಗಳು ಬರದಂತೆ ನುಗ್ಗೆ ಸೊಪ್ಪು ಸಹಾಯಕವಾಗಿದೆ, ಇನ್ನು ಇದನ್ನು ಮಕ್ಕಳಿಗೆ ತಿನಿಸಿದರೆ ತುಂಬಾ ಒಳ್ಳೆಯದು ಯಾಕೆಂದರೆ ಹೆಚ್ಚಿನ ಮಕ್ಕಳು ಊಟ ಮಾಡಲು ಹಿಂಜರಿಯುತ್ತಾರೆ ಅಂಥವರಿಗೆ ಇದನ್ನು ತಿನಿಸೋದರಿಂದ ನುಗ್ಗೆ ಸೊಪ್ಪು ಹೆಚ್ಚು ಹಸಿವಾಗುವಂತೆ ಮಾಡುತ್ತದೆ.

ಇನ್ನು ನಿಮ್ಮ ಕೂದಲು ಉದುರುತ್ತಿದ್ದರೆ ಇದನ್ನು ಹಾಕಿಕೊಳ್ಳುವುದರಿಂದ ನಿಮ್ಮ ಕೂದಲು ಬಲವಾಗಿ ಬೆಳೆಯುತ್ತದೆ ಹಾಗೆ ಯಾವುದೇ ಕೂದಲು ಉದುರುವಿಕೆ ಸಮಸ್ಯೆ ಎದುರಾಗಲ್ಲ ಹಾಗೆ ನಿಮ್ಮ ಮುಖದ ಕಾಂತಿ ಕೂಡ ಹೆಚ್ಚಿರುತ್ತೆ.ನಿಮ್ಮ ದೇಹದಲ್ಲಿ ಉಂಟಾಗುವ 300 ರಕ್ಕೂ ಹೆಚ್ಚುರೋಗಗಳಿಗೆ ಈ ನುಗ್ಗೆ ಸೊಪ್ಪು ರಾಮಬಾಣವಾಗಿದೆ, ಆ 300 ರೋಗಗಳಲ್ಲಿ ಭಯಾನಕ ರೋಗಗಳಾದ ಕ್ಯಾನ್ಸರ್ ಅನ್ನು ಸೆದೆ ಬಡಿಯುವ ಶಕ್ತಿ ಈ ನುಗ್ಗೆ ಸೊಪ್ಪಿಗೆ ಇರುತ್ತದೆ..

ಕೆ.ಆರ್.ಪೇಟೆ ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯ ಸಂಭ್ರಮ... ವಿದ್ಯಾರ್ಥಿಗಳೊಂದಿಗೆ ನೃತ್ಯಕ್ಕೆ ಹೆಜ್ಜೆ ಹಾಕಿದ ಪ್ರಾಧ್ಯಾಪಕರು.. ‌ಮುಗಿಲು ಮುಟ್ಟಿದ ವಿದ್ಯಾರ್ಥಿನಿಯರ ಸಂಭ್ರಮ...
 ಕೃಷ್ಣರಾಜಪೇಟೆ ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ರಾಷ್ಟ್ರೀಯ ಸೇವಾಯೋಜನೆ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ...ಗುರುನಮನ ಸಲ್ಲಿಸಿದ ವಿದ್ಯಾರ್ಥಿಗಳು... ವಿದ್ಯಾರ್ಥಿಗಳೊಂದಿಗೆ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ ಶಿಕ್ಷಕರು..ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರಾಧ್ಯಾಪಕರಿಗೆ ಬಹುಮಾನಗಳನ್ನು ವಿತರಿಸಿದ ವಿದ್ಯಾರ್ಥಿಗಳು ಅರ್ಥಪೂರ್ಣ ಶಿಕ್ಷಕರ ದಿನಾಚರಣೆ...ಆರೋಗ್ಯವಂತ ಸಮಾಜದ ನಿರ್ಮಾಣ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ನಿರ್ಣಾಯಕವಾಗಿದೆ...ಕನ್ನಡ ಪ್ರಾಧ್ಯಾಪಕ ಸಂಪತ್ ಕುಮಾರನ್ ಅಭಿಮತ...ಶಿಕ್ಷಕರು ಸಮಾಜದ ಪರಿವರ್ತಕರಾಗಿದ್ದಾರೆ.‌.ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಕಂಡು ಹೆಮ್ಮೆಪಡುವ ಶಿಕ್ಷಕರು...ವಿದ್ಯಾರ್ಥಿಗಳು ಸರ್ವಶ್ರೇಷ್ಠ ಸಾಧನೆ ಮಾಡಿ ಗುರುಕಾಣಿಕೆ ನೀಡಲು ಸಂಪತ್ ಕುಮಾರನ್ ಮನವಿ...ಕಾಲೇಜಿನ ಪ್ರಾಂಶುಪಾಲ ಡಾ.ಸಿ.ರಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು... ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ.ಟಿ.ಎಂ.ದೇವರಾಜು, ಡಾ.ಜಿ.ಪಿ.ಗಾಯಿತ್ರಮ್ಮ, ನಂಜುಂಡಯ್ಯ, ಮಂಜುನಾಥ, ಶಿವಕುಮಾರ್, ಡಾ.ಪ್ರಮೋಧಿನಿ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಕೆ.ಆರ್.ನೀಲಕಂಠ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗಿ...ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ರಂಜಿಸಿದ ವಿದ್ಯಾರ್ಥಿನಿಯರು….

ಕಾಂಗ್ರೇಸ್ ನಾಯಕ ಡಿಕೆ ಶಿವಕುಮಾರ್ ಬಂಧನ ಖಂಡಿಸಿ ನಾಗಮಂಗಲ ಕಾಂಗ್ರೇಸ್  ಮುಖಂಡ ಪಟ್ಚಣದ ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪಟ್ಚಣದ ಕಾಂಗ್ರೇಸ್ ಕಛೇರಿಯಿಂದ ಮೆರವಣಿಗೆ ಬಂದ ಯುತ್ ಕಾಂಗ್ರೇಸ್ ಮುಖಂಡರು ಟಿ ಮರಿಯಪ್ಪ ವೃತ್ತದಲ್ಲಿ  ನಿಂತು ಪ್ರತಿಭಟಿಸಿ ಇಡಿ ಮತ್ತು ಐಟಿ ಅಧಿಕಾರಿಗಳ ವಿರುದ್ದ ದಿಕ್ಕಾರ ಕೂಗಿದರು.
ಈ ವೇಳೆ ಮಾತನಾಡಿದ ಕಾಂಗ್ರೇಸ್ ಮುಖಂಡ ಎಂ.ಪ್ರಸನ್ನ ಬಿಜೆಪಿ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡು ಡಿ ಕೆ ಶಿವಕುಮಾರ್ ವಿರುದ್ದ ದ್ವೇಷ ರಾಜಕಾರಣ ಮಾಡುತ್ತಿದೆ.
 ಐಟಿ ಮತ್ತು ಇಡಿ ಅಧಿಕಾರಿಗಳ ಮೂಲಕ ಬಿಜೆಪಿ ನೀಚ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 ಹಾಗೂ  ನಮ್ಮ  ನಾಯಕರಾದ ಡಿಕೆ ಶಿವಕುಮಾರ್  ಬಿಜೆಪಿಯವರ ಷಡ್ಯಂತರಕ್ಕೆ ಕುಗ್ಗುವವರಲ್ಲ ಅವರಿಗೆ ಕೋರ್ಟ್ ನಲ್ಲಿ ನ್ಯಾಯ ಸಿಗಲಿದೆ ಶೀಘ್ರವೇ ಅವರನ್ನು ಬಿಡುಗಡೆ ಮಾಡದಿದ್ದರೆ ಉಗ್ರ  ಪ್ರತಿಭಟೆ ಮಾಡುತ್ತೆವೆ ಎಂದು ಹೇಳಿದರು
ಪ್ರತಿಭಟನೆಯಲ್ಲಿ ಮುಖಂಡರಾದ ನಾಗನಹಳ್ಳಿ ರಾಜೇಶ್.ತುರಬನಹಳ್ಳಿ ರಾಜೇಗೌಡ.ಕೃಷ್ಣೇಗೌಡ.ರವಿಕಾಂತ. ವಸಂತ್ ಮರಿಸ್ವಾಮಿ,ಶರತ್,
ಡಿ ಕೆ ಶಿವಕುಮಾರ್ ಬಂಧನ ವಿರೋಧಿಸಿ ಕಿಕ್ಕೇರಿ ಪಟ್ಟಣದಲ್ಲಿ  ಮೈತ್ರಿಪಕ್ಷಗಳ ಮುಖಂಡರಿಂದ ರಸ್ತೆ ತಡೆ..ಟಯರ್ ಸುಟ್ಟು ಆಕ್ರೋಶ...ರಾಜಕೀಯ ದುರುದ್ಧೇಶದ ಮೊಕದ್ದಮೆ ಹಿಂಪಡೆಯಲು ಕೇಂದ್ರ ಸರ್ಕಾರಕ್ಕೆ ಆಗ್ರಹ
ಕರ್ನಾಟಕ ರಾಜ್ಯದ ಮಾಜಿಸಚಿವ ಶಾಸಕ ಡಿ.ಕೆ.ಶಿವಕುಮಾರ್ ಅವರನ್ನು ಕೇಂದ್ರದ ಆದಾಯ ತೆರಿಗೆ ಇಲಾಖೆಯು ಹವಾಲಾ ಹಣ ಪ್ರಕರಣದಲ್ಲಿ ದುರುದ್ದೇಶಪೂರ್ವಕವಾಗಿ ಬಂಧಿಸಿ ತನಿಖೆಗೆ ಸಹಕಾರ ನೀಡಲಿಲ್ಲವೆಂದು ಸುಳ್ಳು ದೂರನ್ನು ದಾಖಲಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು...
ಪಟ್ಟಣದ ಕೆಂಪೇಗೌಡ ವೃತ್ತದಲ್ಲಿ  ಕೆಲ ಕಾಲ ರಸ್ತೆ ತಡೆ ನಡೆಸಿದ ಮೈತ್ರಿ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಟಯರ್ ಗಳನ್ನು ಸುಟ್ಟು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಷಾ ಹಾಗೂ ಬಿ ಜೆ ಪಿ ಪಕ್ಷದ  ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು...

ಕೇಂದ್ರ ಸರ್ಕಾರವು ಕೂಡಲೇ ಇಡಿ ಇಲಾಖೆಗೆ ನಿರ್ದೇಶನ ನೀಡಿ ಡಿ.ಕೆ.ಶಿವಕುಮಾರ್ ಅವರನ್ನು ಬಿಡುಗಡೆಗೊಳಿಸಿ ರಾಜಕೀಯ ದುರುದ್ಧೇಶದಿಂದ ದಾಖಲಿಸಿರುವ ಪ್ರಕರಣವನ್ನು ಕೈಬಿಡಬೇಕು ಎಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಕಿಕ್ಕೇರಿ ಸುರೇಶ್ ಒತ್ತಾಯಿಸಿದರು.
ದುರುದ್ದೇಶಪೂರ್ವಕವಾಗಿ ಬಂಧಿಸಿ ತನಿಖೆಗೆ ಸಹಕಾರ ನೀಡಲಿಲ್ಲವೆಂದು ಸುಳ್ಳು ದೂರನ್ನು ದಾಖಲಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು...
ಪಟ್ಟಣದ ಕೆಂಪೇಗೌಡ ವೃತ್ತದಲ್ಲಿ  ಕೆಲ ಕಾಲ ರಸ್ತೆ ತಡೆ ನಡೆಸಿದ ಮೈತ್ರಿ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಟಯರ್ ಗಳನ್ನು ಸುಟ್ಟು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಷಾ ಹಾಗೂ ಬಿ ಜೆ ಪಿ ಪಕ್ಷದ  ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು...
ಪಿ ಎಲ್ ಡಿ ಬ್ಯಾಂಕ್ ಮಾಜಿ ಅದ್ಯಕ್ಷ ಹರಳಹಳ್ಳಿ ವಿಶ್ವನಾಥ್ ಮಾತನಾಡಿ ರಾಜ್ಯದ ಒಬ್ಬ ಉತ್ತಮ ನಾಯಕರ ಮೇಲೆ  ಬಿ ಜೆ ಪಿ ಸರ್ಕಾರ ದ್ವೇಷ ರಾಜಕಾರಣ ಮಾಡುವುದನ್ನು ಬಿಟ್ಟು ಸರ್ಕಾರವನ್ನು ಉತ್ತಮ‌ ರೀತಿಯಲ್ಲಿ ನೆಡೆಸಲಿ ಎಂದು  ಮೋದಿ ಮತ್ತು ಅಮಿತ್ ಷಾ ವಿರುದ್ದ ಆಕ್ರೋಷ ವ್ಯೆಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಜಿ.ಪಂ ಮಾಜಿ ಉಪಾದ್ಯಕ್ಷ ಕೆ ಎಸ್ ಪ್ರಭಾಕರ್, ತಾಲ್ಲೂಕು ಪಂಚಾಯಿತಿ ಉಪಾದ್ಯಕ್ಷ ವಡ್ಡರಹಳ್ಳಿ ರವಿ,  ಪಿ ಎಲ್ ಡಿ ಬ್ಯಾಂಕ್ ಮಾಜಿ ಅದ್ಯಕ್ಷ ಅರಳಹಳ್ಳಿ ವಿಶ್ವನಾಥ್, ಸಮಾಜ ಸೇವಕ ಮೊಟ್ಟೆ ಮಂಜು ಮುಖಂಡರಾದ ಕಾಯಿ ಮಂಜೇಗೌಡ, ಶೇಖರ್, ಏಜಸ್ ಪಾಷ, ಕಾಯಿ ಸುರೇಶ್,  ಮತ್ತು ನೂರಾರು ಕಾರ್ಯಕರ್ತರು ಅಭಿಮಾನಿಗಳು  ಪ್ರತಿಭಟನೆಯಲ್ಲಿ ಭಾಗವಹಿಸಿದ್ದರಿ...
ಪ್ರತಿಭಟನೆಯಲ್ಲಿ ಯಾವುದೇ ತರ ಅಹಿತರಕ ಘಟನೆ ನೆಡೆಯದಂದೆ ಕಿಕ್ಕೇರಿ ಪೋಲೀಸರು
ಸೂಕ್ತ ಬಂದೂ ಬಸ್ತ್  ನೀಡಲಾಗಿತ್ತು.
Page 1 of 10

Visitors Counter

255719
Today
Yesterday
This Week
This Month
Last Month
All days
57
95
219
1401
5243
255719

Your IP: 34.239.150.167
2024-10-08 12:23

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles