
Super User
ಮಂಡ್ಯ: ಬೈಕ್ ಮತ್ತು ಕಾರ್ ಮುಖಾ ಮುಖಿ ಡಿಕ್ಕಿ ಸ್ಥಳದಲ್ಲೇ ಬೈಕ್ ಸವಾರ ಸಾವು ಇಬ್ಬರ ಸ್ಥಿತಿ ಚಿಂತಾಜನಕ
ಪ್ರಜಾಪ್ರಭುತ್ವದಲ್ಲಿ ಕಾನೂನು ಎಲ್ಲಾರಿಗೂ ಒಂದೆ ನಳೀನ್ ಕುಮಾರ್
ಪ್ರಜಾಪ್ರಭುತ್ವದಲ್ಲಿ ಕಾನೂನು ಎಲ್ಲಾರಿಗೂ ಒಂದೆ ನಳೀನ್ ಕುಮಾರ್
ಹಾಸನ: ಪ್ರಜಾಪ್ರಭುತ್ವದಲ್ಲಿ ಕಾನೂನು ಎಂಬುದು ಎಲ್ಲಾರಿಗೂ ಒಂದೆ ಎಂದು ಡಿ.ಕೆ. ಶಿವಕುಮಾರ್ ಬಂಧನದ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ತಿಳಿಸಿದರು.
ನಗರದ ಎಂ.ಜಿ. ರಸ್ತೆ ಬಳಿ ಇರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಯಾರೇ ತಪ್ಪು ಮಾಡಿದರೂ ಕಾನೂನಡಿ ಶಿಕ್ಷೆ ಆಗಲೇಬೇಕು. ಆ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ರವರನ್ನು ಬಂಧಿಸಲಾಗಿದೆ. ಅಧಿಕಾರಿಗಳಿಗೆ ಸೂಕ್ತ ದಾಖಲೆ ನೀಡಿದ್ದರೇ ನಿರ್ದೋಷಿ ಆಗಬೇಕಾಗಿತ್ತು. ಯಾವ ದಾಖಲೆ ನೀಡದ ಕಾರಣ ಪೊಲೀಸರು ಬಂಧಿಸಿದ್ದಾರೆ ಎಂದರು. ಬೀದಿಗೆ ಬಂದು ಕಲ್ಲು ಎಸೆಯುವುದು, ಬೆಂಕಿ ಹಾಕುವುದು ಇದು ಯಾವ ಮಾರ್ಗವಾಗಿದೆ ಎಂದು ಪ್ರಶ್ನಿಸಿದರು. ಶಿವಕುಮಾರ್ ವಿರುದ್ಧ ಎರಡು ವರ್ಷಗಳ ಹಿಂದೆ ಪ್ರಕರಣವನ್ನು ದಾಖಲು ಮಾಡಲಾಗಿದೆ ವರತು ಇದು ಹೊಸ ಪ್ರಕರಣವಲ್ಲ. ಇಲ್ಲಿವರೆಗೂ ಕೆಳಿದ ದಾಖಲೆ ಕೊಡದ ಕಾರಣ ಪೊಲೀಸರು ಬಂಧಿಸಲು ಮುಂದಾಗಿದ್ದಾರೆ. ಯಾವ ಕಾರಣಕ್ಕೂ ಏಕಾಏಕಿ ಬಂಧಿಸಲು ಮುಂದಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಡಿ.ಕೆ. ಶಿವಕುಮಾರ್ ಮತ್ತು ಬಿಜೆಪಿ ಪಕ್ಷಕ್ಕೂ ಈ ವಿಚಾರದಲ್ಲಿ ಯಾವ ಸಂಬಂಧವಿರುವುದಿಲ್ಲ. ಕಾರ್ಯಕರ್ತರು ಬಿಜೆಪಿ ಸಂಘಟನೆಗೆ ಮುಂದಾಗಿ ಸಂಘಟಿಸುವಂತೆ ಕರೆ ಕೊಟ್ಟರು.
ಈಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನವೀಲೆ ಅಣ್ಣಪ್ಪ, ಶಾಸಕ ಪ್ರೀತಮ್ ಜೆ. ಗೌಡ, ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್, ಎ. ಮಂಜು, ಹೆಚ್.ಎಂ. ವಿಶ್ವನಾಥ್, ಬಸವರಾಜು ಇತರರು ಪಾಲ್ಗೊಂಡಿದ
ಡಿಕೆಶಿ ಬಂಧನ ವಿರೋಧಿಸಿ ಕೆ.ಆರ್.ಪೇಟೆಯಲ್ಲಿ ಮೈತ್ರಿಪಕ್ಷಗಳ ಮುಖಂಡರಿಂದ ರಸ್ತೆ ತಡೆ.
ಡಿಕೆಶಿ ಬಂಧನ ವಿರೋಧಿಸಿ ಕೆ.ಆರ್.ಪೇಟೆಯಲ್ಲಿ ಮೈತ್ರಿಪಕ್ಷಗಳ ಮುಖಂಡರಿಂದ ರಸ್ತೆ ತಡೆ..ಟಯರ್ ಸುಟ್ಟು ಆಕ್ರೋಶ...ರಾಜಕೀಯ ದುರುದ್ಧೇಶದ ಮೊಕದ್ದಮೆ ಹಿಂಪಡೆಯಲು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ ಮಾಜಿಶಾಸಕ ಕೆ.ಬಿ.ಚಂದ್ರಶೇಖರ್....
ಕರ್ನಾಟಕ ರಾಜ್ಯದ ಮಾಜಿಸಚಿವ ಶಾಸಕ ಡಿ.ಕೆ.ಶಿವಕುಮಾರ್ ಅವರನ್ನು ಕೇಂದ್ರದ ಆದಾಯ ತೆರಿಗೆ ಇಲಾಖೆಯು ಹವಾಲಾ ಹಣ ಪ್ರಕರಣದಲ್ಲಿ ದುರುದ್ದೇಶಪೂರ್ವಕವಾಗಿ ಬಂಧಿಸಿ ತನಿಖೆಗೆ ಸಹಕಾರ ನೀಡಲಿಲ್ಲವೆಂದು ಸುಳ್ಳು ದೂರನ್ನು ದಾಖಲಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು... ಪಟ್ಟಣದ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆ ನಡೆಸಿದ ಮೈತ್ರಿ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಟಯರ್ ಗಳನ್ನು ಸುಟ್ಟು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಷಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು... ಕೇಂದ್ರ ಸರ್ಕಾರವು ಕೂಡಲೇ ಇಡಿ ಇಲಾಖೆಗೆ ನಿರ್ದೇಶನ ನೀಡಿ ಡಿ.ಕೆ.ಶಿವಕುಮಾರ್ ಅವರನ್ನು ಬಿಡುಗಡೆಗೊಳಿಸಿ ರಾಜಕೀಯ ದುರುದ್ಧೇಶದಿಂದ ದಾಖಲಿಸಿರುವ ಪ್ರಕರಣವನ್ನು ಕೈಬಿಡಬೇಕು ಎಂದು ಮಾಜಿಶಾಸಕ ಕೆ.ಬಿ.ಚಂದ್ರಶೇಖರ್ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಜಿ.ಪಂ ಉಪಾಧ್ಯಕ್ಷೆ ಗಾಯತ್ರಿ, ಮಾಜಿಶಾಸಕ ಬಿ.ಪ್ರಕಾಶ್, ಜಿ.ಪಂ ಸದಸ್ಯರಾದ ಹೆಚ್.ಟಿ.ಮಂಜು, ಬಿ.ಎಲ್.ದೇವರಾಜು, ರಾಮದಾಸು, ಮಾಜಿ ಜಿ.ಪಂ ಸದಸ್ಯರಾದ ಬೇಲದಕೆರೆ ಪಾಪೇಗೌಡ, ಬಿ.ನಾಗೇಂದ್ರಕುಮಾರ್, ವಿ.ಮಂಜೇಗೌಡ, ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್, ರವೀಂದ್ರಬಾಬು, ಮುಖಂಡರಾದ ಹರಳಹಳ್ಳಿ ವಿಶ್ವನಾಥ, ಪ್ರೇಮಕುಮಾರ್, ಕೆ.ಬಿ.ಮಹೇಶ್ ಮತ್ತಿತರರು ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರಿ...
ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಮಕ್ಕಳ ಬೈಸಿಕಲ್ ವಿತರಣಾ ಕಾರ್ಯಕ್ರಮ...
ಕೃಷ್ಣರಾಜಪೇಟೆ ತಾಲ್ಲೂಕಿನ ಹರಿಹರಪುರ ಗ್ರಾಮದಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಮಕ್ಕಳ ಬೈಸಿಕಲ್ ವಿತರಣಾ ಕಾರ್ಯಕ್ರಮ...ಮಕ್ಕಳ ಸುಪ್ತ ಪ್ರತಿಭೆಯ ಅನಾವರಣಕ್ಕೆ ಪ್ರತಿಭಾ ಕಾರಂಜಿ ಕಾರ್ಯಕ್ರಮ ಸೂಕ್ತ ವೇದಿಕೆಯಾಗಿದೆ.. ಮಕ್ಕಳು ತಮ್ಮಲ್ಲಿ ಸುಪ್ತವಾಗಿರುವ ಕಲಾ ಚಟುವಟಿಕೆಗಳನ್ನು ಶ್ರದ್ಧಾ ಭಕ್ತಿಯಿಂದ ಕಲಿತು ಪ್ರದರ್ಶನ ಮಾಡಿ ಸಾಧನೆ ಮಾಡಬೇಕು ಎಂದು ಕರೆ ನೀಡಿದ ಜಿಲ್ಲಾ ಪಂಚಾಯತ ಉಪಾಧ್ಯಕ್ಷೆ ಗಾಯತ್ರಿರೇವಣ್ಣ...ಕಾರ್ಯಕ್ರಮದಲ್ಲಿ ಬಿಇಓ ರೇವಣ್ಣ, ತಾ.ಪಂ ಸ್ಥಾಯಿಸಮಿತಿ ಅಧ್ಯಕ್ಷ ರಾಜು, ಜಿ.ಪಂ ಸದಸ್ಯರಾದ ಬಿ.ಎಲ್.ದೇವರಾಜು, ಮುಖ್ಯಶಿಕ್ಷಕ ಅನಂತು, ಗೋವಿಂದರಾಜು, ಪಿ.ಜೆ.ಕುಮಾರ್, ಎಸ್.ಕೆ.ರವಿಕುಮಾರ್, ಕ್ಷೇತ್ರಸಮನ್ವಯಾಧಿಕಾರಿ ಲಿಂಗರಾಜು ಸೇರಿದಂತೆ ಮಕ್ಕಳ ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು...
ಡಿ.ಕೆ.ಶಿವಕುಮಾರ್ ಇಡಿ ಕುಣಿಕೆಯಿಂದ ಹೊರ ಬರ್ತಾರೆ...
ಡಿ.ಕೆ.ಶಿವಕುಮಾರ್ ಇಡಿ ಕುಣಿಕೆಯಿಂದ ಹೊರ ಬರ್ತಾರೆ... ಅವರ ಮೇಲಿರುವ ಆರೋಪಗಳಿಂದ ಮುಕ್ತರಾಗಿ ಸಧ್ಯವೇ ಹೊರ ಬರ್ತಾರೆ..
.ಡಿ.ಕೆ.ಶಿವಕುಮಾರ್ ನನ್ನ ಆತ್ಮೀಯ ಸ್ನೇಹಿತರು..ಅವರಿಗೆ ಶುಭವಾಗಲಿ ಎಂದು ದಯಾಮಯನಾದ ಭಗವಂತನನ್ನು ಪ್ರಾರ್ಥಿಸುತ್ತೇನೆ...ಅನರ್ಹ ಶಾಸಕ ಡಾ.ನಾರಾಯಣಗೌಡ ವಿಶ್ವಾಸ...ಎಲ್ಲವೂ ಒಳ್ಳೇದಾಗ್ತದೆ...ಶಿವಕುಮಾರ್ ಹವಾಲಾ ಹಣ ಪ್ರಕರಣದಿಂದ ಮುಕ್ತರಾಗ್ತಾರೆ...
ಮಳವಳ್ಳಿ: ವಿದ್ಯುತ್ ತಂತಿ ತಗಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ ಘಟನೆ
ಮಳವಳ್ಳಿ: ವಿದ್ಯುತ್ ತಂತಿ ತಗಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ ಘಟನೆ ಮಳವಳ್ಳಿತಾಲ್ಲೂಕಿನ ಕಂಸಾಗರ ಗ್ರಾಮದಲ್ಲಿ ನಡೆದಿದೆ
ಮಳವಳ್ಳಿ ತಾಲ್ಲೂಕಿನ ಕಂಸಾಗರ ಗ್ರಾಮದ ಹಾಡ್ಲಿ ಗ್ರಾಮ ಪಂಚಾಯಿತಿ ವಾಟರ್ ಮೆನ್ ಆಗಿ ಕೆಲಸಮಾಡುತ್ತಿದ ಸಿದ್ದರಾಜು(48)ಎಂಬವರು ಮೃತಪಟ್ಟ ದುದೈವಿ
ಇಂದುಬೆಳಗ್ಗೆ ನಿತ್ಯ ಕರ್ಮ ಗಳನ್ನು ಮಾಡಲೆಂದು ಜಮೀನಿನ ಬಳಿ ಬಂದಾಗ ವಿದ್ಯುತ್ ತಂತಿ ತಗಲಿ ಸ್ಥಳದಲ್ಲಿ ಸಾವುನಪ್ಪಿದ್ದಾನೆ.
ದುರಂತವೆಂದರೆ ಮೃತ ನ ತಾಯಿ ಕೆಂಪಮ್ಮನವರ ಉತ್ತರಕ್ರಿಯ ಅಧಿಕಾರಿ ಕಾರ್ಯವು ಇಂದೂ ನಡೆಯುತ್ತಿದೆ ಆದರಿಂದ ಇಂದು ಬೆಳಗ್ಗೆ ಜನಗಳನ್ನು ಅಡಿಗೆ ಮನೆ ಹತ್ತಿರ ಬರುವಂತೆ ತಿಳಿಸಿ ಬಯಲು ಶೌಚಾಲಯ ಎಂದು ತೆರಳಿದ್ದಾಗ ಈ ಅವಘಡ ಸಂಭವಿಸಿದೆ. ಈ ವಿಚಾರವಾಗಿ ಜಿಲ್ಲಾ ಪಂಚಾಯತ್ ಸದಸ್ಯ ರವಿ ಮಾತನಾಡಿ ಚೆಸ್ಕಾಂ ಅಧಿಕಾರಿಗಳಿಗೆ ಗ್ರಾಮದಲ್ಲಿ ವಿದ್ಯುತ್ ಕಂಬ ಹಾಗೂ ತಂತಿಗಳು ತುಂಡಾಗಿ ಎಂದು ತಿಳಿಸಿದರು ಇದುವರೆಗೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಅವರ ನಿರ್ಲಕ್ಷ್ಯತೆಯಿಂದ ಈ ಒಂದು ಘಟನೆ ನಡೆದಿದೆ ಆದುದರಿಂದ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದ್ದಾರೆ
ಈ ಸಂಬಂದ ಹಲಗೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಪೊಲೀಸ್ ಠಾಣೆ ಎದುರೇ ಹಿಂದೂ ಜಾಗರಣ ವೇದಿಕೆ ತಾಲೂಕು ಕಾರ್ಯದರ್ಶಿಯ ಭರ್ಭರ ಹತ್ಯೆ.
ಪುತ್ತೂರು: ಹಿಂದೂ ಜಾಗರಣ ವೇದಿಕೆ ತಾಲೂಕು ಕಾರ್ಯದರ್ಶಿಯ ಭರ್ಭರ ಹತ್ಯೆ: ಸಂಪ್ಯ ಪೋಲೀಸ್ ಠಾಣೆಯ ಎದುರಿನ ಗಣೇಶೋತ್ಸವ ಪೆಂಡಲ್ ನಲ್ಲಿ ದುರ್ಘಟನೆ ಪುತ್ತೂರು ಸೆ.4: ಪುತ್ತೂರು ತಾಲೂಕಿನ ಗ್ರಾಮಾಂತರ ಪೋಲೀಸ್ ಠಾಣೆಯಾದ ಸಂಪ್ಯ ಪೋಲೀಸ್ ಠಾಣೆಯ ಎದುರಿನ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿ ಭರ್ಭರ ಹತ್ಯೆ ನಡೆದಿದೆ. ಕೊಲೆಯಾದವರನ್ನು ಪುತ್ತೂರು ಹಿಂದೂ ಜಾಗರಣ ವೇದಿಕೆ ತಾಲೂಕು ಕಾರ್ಯದರ್ಶಿ ಕಾರ್ತಿಕ್ ಮೇರ್ಲ ಎಂದು ಗುರುತಿಸಲಾಗಿದೆ. ಸೆ.3 ರಂದು ಮಧ್ಯರಾತ್ರಿ ಅಂದಾಜು 12 ಗಂಟೆಯ ಸುಮಾರಿಗೆ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದಲ್ಲಿಗೆ ನುಗ್ಗಿದ ದುಷ್ಕರ್ಮಿಗಳು ಕಾರ್ತಿಕ್ ಮೇರ್ಲರ ಎದೆಗೆ ಚೂರಿ ಹಾಕಿದ್ದರೆ. ಕೊಲೆಗೆ ಈ ಹಿಂದಿನ ವೈಷಮ್ಯವೇ ಕಾರಣ ಎಂದು ತಿಳಿದುಬಂದಿದೆ. ಆರೋಪಿಗಳಲ್ಲಿ ಒಬ್ಬನನ್ನು ಬಂದಿಸಿದ್ದು, ಪೋಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಎಸ್ಪಿ ಲಕ್ಷ್ಮೀ ಪ್ರಸಾದ್ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.
ಕೆ ಆರ್ ಪೇಟೆ:ಹೇಮಾವತಿ ಎಡದಂಡೆನಾಲೆಯಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆ....

ಮಳವಳ್ಳಿ: ದೇಶ ವ್ಯಾಪ್ತಿ ಸ್ವಚ್ಚಭಾರತ್ ಸ್ವಚ್ಚ ಆಂದೋಲನ ಮಾಡಲು ಹೊರಟಿದೆ ಆದರೆ..
ಮಳವಳ್ಳಿತಾಲ್ಲೂಕಿನ ಹಲಗೂರು ಗ್ರಾಮ ವ್ಯಾಪಾರ ವಹಿವಾಟು ಗಳಿಗೆ ಹೆಸರುವಾಸಿ ಸ್ಥಳವಾಗಿ ಆದರೆ ಈ ವಿಲೇವಾರಿಗೆ ನಿರ್ಧಿಷ್ಟ ಜಾಗ ಗುರುತಿಸದ ಮತ್ತು ಎಲ್ಲೆಂದರಲ್ಲಿ ಕಸ ಸುರಿಯುವ ಕಾರಣ ತಾಲೂಕಿನ ಹಲಗೂರು ಗ್ರಾಮ ಮತ್ತು ಸುತ್ತಲಿನ ಪ್ರದೇಶ ಅನೈರ್ಮಲ್ಯದ ತಾಣವಾಗಿವೆ. ಎನ್ನುವುದಕ್ಕೆಈ ಸ್ಥಳವನ್ನು ಕಾಣಬಹುದು
ಕಸ ವಿಲೇವಾರಿಗೆ ಸ್ಥಳವಕಾಶ ಕೋರಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಇನ್ನೂ ಭೂಮಿ ಕೊಟ್ಟಿಲ್ಲ. ಸಾರ್ವಜನಿಕರು ಕೆರೆ ಮತ್ತು ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದ ಜಾಗಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹಲಗೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದರು.
ಸ್ವಚ್ಚತಾ ಬಗ್ಗೆ ಸಾಕಷ್ಟು ಪ್ರಚಾರ ಮಾಡಿದ್ದರೂ ಸಾರ್ವಜನಿಕರು ಹಾಗೂ ಅಂಗಡಿ ಮಾಲೀಕರು ಸಹಕಾರ ನೀಡುತ್ತಿಲ್ಲ ದಯವಿಟ್ಟು ನಮ್ಮ ಗ್ರಾ.ಪಂ ವಾಹನಕ್ಕೆ ಕಸವನ್ನು ಹಾಕುವಂತೆ ಗ್ರಾ.ಪಂ ಪಿಡಿಒ ಸಾರ್ವಜನಿಕರಿಗರ ಮನವಿ ಮಾಡಿಕೊಂಡಿದ್ದಾರೆ
ಇನ್ನಾದರೂ ಸಂಬಂಧಪಟ್ಟವರು ಹಲಗೂರು ಗ್ರಾಮದಲ್ಲಿ ಸ್ವಚ್ಛ ಕಾರ್ಯ ಕೈಗೊಳ್ಳುವ ಕಡೆಗೆ ಗಮನ ನೀಡುವರೇ ಕಾದು ನೋಡಬೇಕಿದೆ.
ಮಳವಳ್ಳಿ: ಸರ್ಕಾರಿ ಆಸ್ತಿಯನ್ನು ಬೇರೆಯವರಿಗೆ ಖಾತೆ ಮಾಡಿರುವ ಅಧಿಕಾರಗಳ ವಿರುದ್ದ ಹೋರಾಟ
ಮಳವಳ್ಳಿ: ಸರ್ಕಾರಿ ಆಸ್ತಿಯನ್ನು ಬೇರೆಯವರಿಗೆ ಖಾತೆ ಮಾಡಿರುವ ಅಧಿಕಾರಗಳ ವಿರುದ್ದ ಹೋರಾಟ ನಡೆಸುತ್ತಿರುವ ಹೋರಾಟಕ್ಕೆ ಸರಿಯಾಗಿ ಕ್ರಮಕೈಗೊಳ್ಳದೇ ಇರುವುದನ್ನು ಮನನೊಂದು ದಯಾಮರಣ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಉಪವಿಭಾಗಾಧಿಕಾರಿಗಳಿಗೆ ಮತ್ತು ತಹಸೀಲ್ದಾರ್ ಗೆ ಮನವಿ ಸಲ್ಲಿಸಿರುವ ಘಟನೆ ಮಳವಳ್ಳಿ ಪಟ್ಟಣದಲ್ಲಿ ನಡೆದಿದೆ.
ಪತ್ರಕರ್ತ ಕೆ.ಎಸ್ ಶಿವಶಂಕರ್ ಎಂಬುವವರೇ ದಯಾಮರಣ ಕೋರಿರುವ ವ್ಯಕ್ತಿ
150 ಕೋಟಿ ಗಿಂತಲೂ ಹೆಚ್ಚು ಸರ್ಕಾರದ ಆಸ್ತಿಗಳು ಅಕ್ರಮಖಾತೆ ಪುರಸಭೆ ಮಾಡಿದೆ. ಉಪವಿಭಾಗಾಧಿಕಾರಿಗಳ ಅನ್ಯಕ್ರಾಂತ ಪ್ರತಿಯನ್ನೇ ತಿದ್ದಿ ಖಾತೆ ಮಾಡಿಸಿರುವ ಆಳತೆಗಿಂತಲೂ ಹೆಚ್ಚು ಮಾರಾಟ ಮಾಡಿರುವ ಬಗ್ಗೆ ದಾಖಲಾತಿ ಸಲ್ಲಿಸಿದ್ದರೂ ಸಹ ಪುರಸಭೆ ಕ್ರಮವಹಿಸದೆ ಕಿರುಕುಳ ನೀಡುತ್ತಿರುವ ಬಗ್ಗೆ ಕ್ರಮ ಕೈಗೊಂಡು 5309/4036 ರ ಅಕ್ರಮ ಖಾತೆಯನ್ನು ರದ್ದು ಮಾಡುವಂತೆ ಕೋರಿದ್ದರೂ ಅಧಿಕಾರಿಗಳು ಪಟ್ಟ ಭದ್ರ ಹಿತಾಸಕ್ತಿಗಳ ಜೊತೆ ಸೇರಿಕೊಂಡು ಕಾನೂನು ಕ್ರಮ ಜರುಗಿಸದೆ ನಮಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿರುವ ಕೆ.ಎಸ್ ಶಿವಶಂಕರ್, ಈ ಬಗ್ಗೆ ಕ್ರಮಕೈಗೊಳ್ಳುವಂತೆ ಇಲ್ಲದಿದ್ದರೆ ನನಗೆ ದಯಾಮರಣ ನೀಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
ಸುಮಾರು 4 ಪುಟಗಳ ವಿಸ್ಕೃತ ಮಾಹಿತಿ ಹಾಗೂ ಅಕ್ರಮಗಳ ಬಗ್ಗೆ ಸಂಕ್ಷೀಪ್ತವಾಗಿ ದೂರು ಬರೆದು ಜಿಲ್ಲಾಧಿಕಾರಿಗಳಿಗೆ ಉಪವಿಭಾಗಾಧಿಕಾರಿಗಳಿಗೆ ,ತಹಸೀಲ್ದಾರ್ ಗಳಿಗೆ ಹಾಗೂ ಸ್ಥಳೀಯ ಪೊಲೀಸಠಾಣೆಗೂ ದೂರು ನೀಡಿರುವ ಅವರು ಕೂಡಲೇ ಕ್ರಮಕೈಗೊಂಡು ನ್ಯಾಯ ಒದಸುವಂತೆ ಅವರು ಮನವಿಯಲ್ಲಿ ಕೋರಿದ್ದು ಇಲ್ಲವಾದಲ್ಲಿ ನನಗೆ ದಯಾಮರಣ ನೀಡುವಂತೆ ಅವರು ಕೋರಿದ್ದಾರೆ.