ಮಳವಳ್ಳಿ: ದೇಶ ವ್ಯಾಪ್ತಿ ಸ್ವಚ್ಚಭಾರತ್ ಸ್ವಚ್ಚ ಆಂದೋಲನ ಮಾಡಲು ಹೊರಟಿದೆ ಆದರೆ..

ಮಳವಳ್ಳಿ: ದೇಶ ವ್ಯಾಪ್ತಿ ಸ್ವಚ್ಚಭಾರತ್ ಸ್ವಚ್ಚ ಆಂದೋಲನ ಮಾಡಲು ಹೊರಟಿದೆ  ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ  ಕಸ ವಿಲೇವಾರಿ ಮಾಡುತ್ತಿದ್ದು, ಇದರಿಂದ ಅನೈರ್ಮಲ್ಯ ಉಂಟಾಗುತ್ತದೆ ಅಂದ ಹಾಗೆ ಇದು ಎಲ್ಲಿ ಅಂತಿರಾ ಬನ್ನಿ ನೋಡೋಣ ಈ ಸ್ಟೋರಿಯಾ

ಮಳವಳ್ಳಿತಾಲ್ಲೂಕಿನ ಹಲಗೂರು ಗ್ರಾಮ ವ್ಯಾಪಾರ ವಹಿವಾಟು ಗಳಿಗೆ ಹೆಸರುವಾಸಿ ಸ್ಥಳವಾಗಿ ಆದರೆ ಈ‌ ವಿಲೇವಾರಿಗೆ ನಿರ್ಧಿಷ್ಟ ಜಾಗ ಗುರುತಿಸದ ಮತ್ತು ಎಲ್ಲೆಂದರಲ್ಲಿ ಕಸ ಸುರಿಯುವ ಕಾರಣ ತಾಲೂಕಿನ ಹಲಗೂರು ಗ್ರಾಮ ಮತ್ತು ಸುತ್ತಲಿನ ಪ್ರದೇಶ ಅನೈರ್ಮಲ್ಯದ ತಾಣವಾಗಿವೆ. ಎನ್ನುವುದಕ್ಕೆಈ ಸ್ಥಳವನ್ನು ಕಾಣಬಹುದು
 
 ತೆರವು ಮಾಡಿದ ಕಟ್ಟಡ ಸಾಮಾಗ್ರಿಗಳು, ಚರಂಡಿ ಹೂಳು ಮಣ್ಣು, ಬೇಡವಾದ ನಾಡ ಹೆಂಚು, ಹಾಸಿಗೆ, ಕಲ್ನಾರ್‌ಶೀಟ್‌, ರುಬ್ಬುವ ಕಲ್ಲು, ಪ್ಯಾಕಿಂಗ್‌ ಬಳಸುವ ಥರ್ಮಾಕೋಲ್‌ ಇತರೆ ತ್ಯಾಜ್ಯಗಳನ್ನು ಮನಸೋ ಇಚ್ಚೆ ಬಿಸಾಡಲಾಗಿದೆ
ತ್ಯಾಜ್ಯ ಸುರಿಯುವ ಕಾರಣ ಗ್ರಾಮದ ನಡುವೆ ಹಾದು ಹೋಗಿರುವ ಹಳ್ಳದಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವುದಿಲ್ಲ. ಇಲ್ಲಿ ಗಿಡಗಂಟಿಗಳು ಕಾಡಿನಂತೆ ಬೆಳೆದು ನಿಂತಿವೆ. ಹಂದಿ, ನಾಯಿ ಮತ್ತು ಹಾವು, ಚೇಳುಗಳ ಆಶ್ರಯ ತಾಣವಾಗಿದೆ.
ಗ್ರಾಮದಲ್ಲಿ ಪೌರಕಾರ್ಮಿಕರು ನೆಲೆಸಿದ್ದಾರೆ. ಇವರು ಸ್ವಚ್ಛ ಕಾರ್ಯಕ್ಕಾಗಿ ದುಡಿಯಲು ಸಿದ್ದರಿದ್ದರೂ ಅಗತ್ಯಾನುಸಾರ ನೇಮಕಾತಿ ಮಾಡಿಕೊಳ್ಳಲು ತಾಂತ್ರಿಕ ಕಾರಣ ಅಡ್ಡಿಯಾಗಿದೆ. ನೇಮಕ ಮಾಡಿಕೊಂಡವರಿಗೂ ಗ್ರಾ.ಪಂ ನವರು ಸಕಾಲದಲ್ಲಿ ವೇತನ ಇತರೆ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂಬ ಆರೋಪ ಇದೆ.
 
ಹಲಗೂರು ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಹಾಗೂ ಕೆರೆಯಲ್ಲಿ  ಕಸ ವಿಲೇವಾರಿಯದ್ದೆ ದೊಡ್ಡ ಸಮಸ್ಯೆ. ಗ್ರಾಮದ ಪ್ರವೇಶದ್ವಾರಗಳಲ್ಲಿ ಕಸ ರಾಶಿಯಾಗಿ  ಕೊಳೆತಿರುವ ಕಾರಣ ಮೂಗು ಮುಚ್ಚಿಕೊಂಡು ಓಡಾಡಬೇಕಿದೆ. ಎಲ್ಲ ಕಡೆಗಳಲ್ಲೂ ಕೊಳಕು ವಾತಾವರಣ ಬೇಸರ ಉಂಟುಮಾಡಿದೆ. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ವಿಲೇವಾರಿ ಮಾಡುತ್ತಿರುವುದು ಬೆಸರದ  ವಿಷಯವಾಗಿದೆ ಹಾಗಾಗಿ ಸಂಬಂಧ ಪಟ್ಟ ಅಧಿಕಾರಿಗಳು ,ಜನಪ್ರತಿನಿಧಿಗಳು ಇತ್ತ ಗಮನ ಹರಿಸದಿರುವುದು ತುಂಬಾ ಶೋಚನೀಯ, ಮತ್ತು ಹಲಗೂರು ಕೆರೆಯ ಹೂಳು ತೆಗೆದು ಕೆರೆಯನ್ನು ಅಭಿವೃದ್ಧಿ ಪಡಿಸಿದರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುತ್ತದೆ  ಕೆರೆ ಅಭಿವೃದ್ಧಿ ಪಡಿಸಿ ಈ ಭಾಗದ ರೈತರಿಗೆ ನೆರೆವಾಗಿ ಎಂದು ಕರ್ನಾಟಕ ಬೌದ್ಧ ಸಮಾಜದ ಮುಖಂಡರಾದ ಹೆಚ್ ,ಎನ್.ವೀರಭದ್ರಯ್ಯ ಒತ್ತಾಯಿಸಿದ್ದಾರೆ

ಕಸ ವಿಲೇವಾರಿಗೆ ಸ್ಥಳವಕಾಶ ಕೋರಿ ತಹಸೀಲ್ದಾರ್‌ ಅವರಿಗೆ ಮನವಿ ಸಲ್ಲಿಸಲಾಗಿದೆ. ಇನ್ನೂ ಭೂಮಿ ಕೊಟ್ಟಿಲ್ಲ. ಸಾರ್ವಜನಿಕರು   ಕೆರೆ ಮತ್ತು ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದ  ಜಾಗಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹಲಗೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದರು.
ಸ್ವಚ್ಚತಾ ಬಗ್ಗೆ ಸಾಕಷ್ಟು ಪ್ರಚಾರ ಮಾಡಿದ್ದರೂ ಸಾರ್ವಜನಿಕರು ಹಾಗೂ ಅಂಗಡಿ ಮಾಲೀಕರು ಸಹಕಾರ ನೀಡುತ್ತಿಲ್ಲ ದಯವಿಟ್ಟು ನಮ್ಮ ಗ್ರಾ.ಪಂ ವಾಹನಕ್ಕೆ ಕಸವನ್ನು ಹಾಕುವಂತೆ ಗ್ರಾ.ಪಂ ಪಿಡಿಒ ಸಾರ್ವಜನಿಕರಿಗರ ಮನವಿ ಮಾಡಿಕೊಂಡಿದ್ದಾರೆ

 ಇನ್ನಾದರೂ ಸಂಬಂಧಪಟ್ಟವರು ಹಲಗೂರು ಗ್ರಾಮದಲ್ಲಿ ಸ್ವಚ್ಛ ಕಾರ್ಯ ಕೈಗೊಳ್ಳುವ ಕಡೆಗೆ ಗಮನ ನೀಡುವರೇ ಕಾದು ನೋಡಬೇಕಿದೆ.

Share this article

About Author

Super User
Leave a comment

Write your comments

Visitors Counter

278456
Today
Yesterday
This Week
This Month
Last Month
All days
80
515
1589
949
6128
278456

Your IP: 3.139.64.42
2025-04-06 17:37

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles