ಪುತ್ತೂರು: ಹಿಂದೂ ಜಾಗರಣ ವೇದಿಕೆ ತಾಲೂಕು ಕಾರ್ಯದರ್ಶಿಯ ಭರ್ಭರ ಹತ್ಯೆ: ಸಂಪ್ಯ ಪೋಲೀಸ್ ಠಾಣೆಯ ಎದುರಿನ ಗಣೇಶೋತ್ಸವ ಪೆಂಡಲ್ ನಲ್ಲಿ ದುರ್ಘಟನೆ ಪುತ್ತೂರು ಸೆ.4: ಪುತ್ತೂರು ತಾಲೂಕಿನ ಗ್ರಾಮಾಂತರ ಪೋಲೀಸ್ ಠಾಣೆಯಾದ ಸಂಪ್ಯ ಪೋಲೀಸ್ ಠಾಣೆಯ ಎದುರಿನ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿ ಭರ್ಭರ ಹತ್ಯೆ ನಡೆದಿದೆ. ಕೊಲೆಯಾದವರನ್ನು ಪುತ್ತೂರು ಹಿಂದೂ ಜಾಗರಣ ವೇದಿಕೆ ತಾಲೂಕು ಕಾರ್ಯದರ್ಶಿ ಕಾರ್ತಿಕ್ ಮೇರ್ಲ ಎಂದು ಗುರುತಿಸಲಾಗಿದೆ. ಸೆ.3 ರಂದು ಮಧ್ಯರಾತ್ರಿ ಅಂದಾಜು 12 ಗಂಟೆಯ ಸುಮಾರಿಗೆ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದಲ್ಲಿಗೆ ನುಗ್ಗಿದ ದುಷ್ಕರ್ಮಿಗಳು ಕಾರ್ತಿಕ್ ಮೇರ್ಲರ ಎದೆಗೆ ಚೂರಿ ಹಾಕಿದ್ದರೆ. ಕೊಲೆಗೆ ಈ ಹಿಂದಿನ ವೈಷಮ್ಯವೇ ಕಾರಣ ಎಂದು ತಿಳಿದುಬಂದಿದೆ. ಆರೋಪಿಗಳಲ್ಲಿ ಒಬ್ಬನನ್ನು ಬಂದಿಸಿದ್ದು, ಪೋಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಎಸ್ಪಿ ಲಕ್ಷ್ಮೀ ಪ್ರಸಾದ್ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.
Article content
ಪೊಲೀಸ್ ಠಾಣೆ ಎದುರೇ ಹಿಂದೂ ಜಾಗರಣ ವೇದಿಕೆ ತಾಲೂಕು ಕಾರ್ಯದರ್ಶಿಯ ಭರ್ಭರ ಹತ್ಯೆ.
- Post by: Super User
- 03/09/2019
- 472 views
Leave a comment
Write your comments