Super User

Super User

ಕೆ ಆರ್ ಪೇಟೆ: ಶಾಲ ಮಕ್ಕಳಿಗೆ ಅವಶ್ಯವಿರುವ ಟೇಬಲ್ ಚೇರ್ ಮತ್ತು ಪುಸ್ತಕಗಳನ್ನು ಸಮಾಜ ಸೇವಕ ಅಮಚಹಳ್ಳಿ ಮಹೇಶ್ ವಿತರಣೆ ಮಾಡಿದರು.

ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಅಮಚಹಳ್ಳಿ ಗ್ರಾಮದಲ್ಲಿ 73 ಸ್ವತಂತ್ರ ದಿನವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಯಿತು..

ಶಾಲಾಸಮಿತಿ ಅದ್ಯಕ್ಷ ಮೋಹನ್ ಧ್ವಜಾರೋಹಣ ಮಾಡಿ ನಂತರ ಮಕ್ಕಳಿಗೆ ದೇಶದ ಬಗ್ಗೆ ಮತ್ತು ಸ್ವತಂತ್ರ ಹೋರಾಟಗಾರರ ಬಗ್ಗೆ ಮಾಹಿತಿ ತಿಳಿಸಿಕೊಟ್ಟರು..

ನಂತರ ಶಾಲ ಮುಖ್ಯ ಶಿಕ್ಷಕ ಮೋಹನ್ ಮಾತನಾಡಿ ಮಕ್ಕಳಿಗೆ ದೇಶ ಪ್ರೇಮದ ಬಗ್ಗೆ ತಿಳಿಹೇಳಿದರು.

ನಂತರ ಸಮಾಜ ಸೇವಕ ಮಹೇಶ್ ಶಾಲಾಮಕ್ಕಳಿಗೆ ಉಪಯುಕ್ತ ಬೆಂಚ್ ಮತ್ತು ಟೇಬಲ್ ವಿತರಣೆ ಮಾಡಿದರು..

ಆನಂತರ ಗ್ರಾಮದ ಬಸವೇಶ್ವರ ಯುವಕ ಮಂಡಳಿ ವತಿಯಿಂದ ಮಕ್ಕಳಿಗೆ ಬುಕ್, ಪೆನ್ ವಿತರಣೆ ಮಾಡಲಾಯಿತು. ಮತ್ತು ಗ್ರಾಮದ ಮಂಜೇಗೌಡ ಎಲ್ಲಾ ಮಕ್ಕಳಿಗೆ ಸಿಹಿ ತಿಂಡಿ ಹಂಚಿದರು ..

ಕಾರ್ಯಕ್ರಮದಲ್ಲಿ ,ಶ್ರೀಮತಿ ರೇಖಾ,ರಂಜನ್ ,ಮಂಜೇಗೌಡ,ಗೀರಿಶ್ ,ಅನಿತ ಮತ್ತು ಶಾಲಮಕ್ಕಳು ಗ್ರಾಮಸ್ಥರು ಹಾಜರಿದ್ದರು...

ಗ್ರಾಮ ಪಂಚಾಯಿತಿಯ ನೂತನ ಅದ್ಯಕ್ಷರಾಗಿ ರಾಮನಹಳ್ಳಿ ಶುಭಾರವೀಂದ್ರ ಆಯ್ಕೆ.

ಕೃಷ್ಣರಾಜಪೇಟೆ ತಾಲ್ಲೂಕಿನ ಚೌಡೇನಹಳ್ಳಿ ಗ್ರಾಮ ಪಂಚಾಯಿತಿಯ ಸಾಮಾನ್ಯ ಮಹಿಳೆ ಅದ್ಯಕ್ಷರ ಸ್ಥಾನ ತೆರವು ಆಗಿದ್ದ ಕಾರಣ ಇಂದು ಚುನಾವಣೆ ನಿಗಧಿಯಾಗಿತ್ತು.

ಚುನಾವಣೆ ಶುಭ ರವೀಂದ್ರ ರವರನ್ನು ವರತುಪಡಿಸಿ ಮತ್ಯಾರು ನಾಮ ಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿ ಶುಭಾ ರವೀಂದ್ರ ರವನ್ನು ಅವಿರೋಧವಾಗಿ ಅದ್ಯಕ್ಷರು ಎಂದು ಘೋಷಿಸಿದರು.

ಈ ಸಂದರ್ಭದಲ್ಲಿ ಶುಭಾರವೀಂದ್ರ ರವರ ಬೆಂಬಲಿಗರು ಅದ್ಯಕ್ಷರಾದ ಇನ್ನಲೆಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಗ್ರಾಮ ಪಂಚಾಯತಿ ಉಪಾದ್ಯಕ್ಷ ಮಾಣಿಕನಹಳ್ಳಿ ಕೃಷ್ಣೇಗೌಡ, ಸದಸ್ಯರಾದ ಶೆಟ್ಟಹಳ್ಳಿ ಕೃಷ್ಣೇಗೌಡ, ಸಿದ್ದಾಪುರ ನಾರಾಯಣ್, ಕೃಷ್ಣಾಪುರ ಗಿರೀಶ್, ಕಾರಿಗನಹಳ್ಳಿ ಜಯರಾಮು, ಮತ್ತು ಮಹಿಳಾ ಸದಸ್ಯರುಗಳು ನೂತನ ಅದ್ಯಕ್ಷರಿಗೆ ಶುಭಕೋರಿದರು.

ವರುಣನ ಕೋಪವು ಕೇರಳದಲ್ಲಿ 76 ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು ಸುಮಾರು 2.87 ಲಕ್ಷ ಜನರು ರಾಜ್ಯದಾದ್ಯಂತ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇನ್ನೂ ಐವತ್ತೆಂಟು ಜನರು ಕಾಣೆಯಾಗಿದ್ದಾರೆ, ಅವರಲ್ಲಿ 50 ಮಂದಿ ಮಲಪ್ಪುರಂನಲ್ಲಿದ್ದಾರೆ,

ಆಗಸ್ಟ್ 8 ರಿಂದ ಕೇರಳದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ 76 ಜನರು ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ ಪ್ರವಾಹದಿಂದ ಇದುವರೆಗೆ 42 ಜನರು ಸಾವನ್ನಪ್ಪಿದ್ದಾರೆ

'ಪ್ರವಾಹ ಪೀಡಿತ ರಾಜ್ಯಗಳನ್ನು ಬೆಂಬಲಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ವಯನಾಡಿನ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು.

“ಇದು ವಯನಾಡಕ್ಕೆ ಮಾತ್ರವಲ್ಲ, ಕೇರಳ ಮತ್ತು ಇತರ ಕೆಲವು ದಕ್ಷಿಣ ರಾಜ್ಯಗಳಿಗೂ ಒಂದು ದುರಂತ. ಕೇಂದ್ರ ಸರ್ಕಾರವು ಈ ರಾಜ್ಯಗಳ ಜನರನ್ನು ಗಮನ ಹರಿಸಬೇಕು ಮತ್ತು ಪರಿಹಾರ ಬೆಂಬಲಿಸಬೇಕು ಎಂದು ನಾನು ಭಾವಿಸುತ್ತೇನೆ, ”ಎಂದು ಅವರು ಹೇಳಿದರು.


ಕರ್ನಾಟಕ ಸಿಎಂ ಬಿ.ಎಸ್.ಯಡಿಯುರಪ್ಪ ದಕ್ಷಿಣ ಕನ್ನಡದ ಬೆಲ್ತಂಗಡಿ ಭೇಟಿ ನೀಡಿ ಅಲ್ಲಿನ ಪ್ರವಾಹ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.

"ಜಿಲ್ಲೆಯ ಪ್ರವಾಹದಲ್ಲಿ ಐದು ಸೇತುವೆಗಳು ಮತ್ತು 300 ಮನೆಗಳು ಹಾನಿಗೊಳಗಾದ ಅಥವಾ ಸಂಪೂರ್ಣವಾಗಿ ನಾಶವಾಗಿವೆ. ಈ ಕುಟುಂಬಗಳಿಗೆ ತಲಾ 5 ಲಕ್ಷ ರೂ. ತುರ್ತು ಪರಿಹಾರವಾಗಿ ಸಂತ್ರಸ್ತರಿಗೆ 10,000 ರೂ. ವಿತರಿಸಲಾಗುವುದು ”ಎಂದು ಅವರು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು.

ಕರ್ನಾಟಕದ ಬೆಳಗಾವಿಯಲ್ಲಿ ಪ್ರವಾಹ ಪೀಡಿತ ರಾಯ್ ಭಾಗ್ ತಾಲ್ಲೂಕಿನ ಮನೆಯ ಛಾಾವಣಿಯಲ್ಲಿ ಮೊಸಳೆಯನ್ನು ಗುರುತಿಸಲಾಗಿದೆ.

ಕರ್ನಾಟಕ ಪ್ರವಾಹದಲ್ಲಿ ಸೋಮವಾರ ಸಾವನ್ನಪ್ಪಿದವರ ಸಂಖ್ಯೆ 42 ಕ್ಕೆ ಏರಿದೆ. ಕನಿಷ್ಠ 12 ಜನರು ಇನ್ನೂ ಕಾಣೆಯಾಗಿದ್ದಾರೆ ಮತ್ತು ಈವರೆಗೆ ಸುಮಾರು 5.8 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.

ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿ ಸೋಮವಾರ ಬಲವಾದ ನೀರಿನ ಪ್ರವಾಹದಿಂದಾಗಿ ದೋಣಿ ಡಿಕ್ಕಿ ಹೊಡೆದ ಪರಿಣಾಮ ಪ್ರವಾಹ ರಕ್ಷಣಾ ತಂಡದ ಕನಿಷ್ಠ ನಾಲ್ವರು ಸದಸ್ಯರು ಕೊಚ್ಚಿಹೋಗಿದ್ದು, ಓರ್ವ ಸದಸ್ಯನನ್ನು ರಕ್ಷಿಸಲಾಗಿದೆ. ಹೆಲಿಕಾಪ್ಟರ್ ಅನ್ನು ಬಳಸಿ ಅವರನ್ನು ಉಳಿಸುವ ಪ್ರಯತ್ನಗಳು ನಡೆಯುತ್ತಿವೆ.

ಕಾರವಾರ ಬಳಿಯ ಭೂಕುಸಿತದಿಂದಾಗಿ ಕರ್ನಾಟಕದ ಎಲ್ಲಾ ಕೊಂಕಣ ರೈಲ್ವೆಯ ರೈಲುಗಳನ್ನು ರದ್ದು ಮಾಡಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.

ಸಂತೇಬಾಚಹಳ್ಳಿ : ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಂತೇಬಾಚಹಳ್ಳಿಯಲ್ಲಿ ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು.

ಮಸೀದಿ ಆವರಣದಿಂದ ಸಾಮೂಹಿಕ ಮೆರವಣೆಗೆ ಹೊರಟ ಮುಸಲ್ಮಾನ್ ಬಾಂಧವರು ಸರ್ಕಾರಿ ಪದವಿ ಪೂರ್ವ ಕಾಲೇಜು ಎದುರು ಇರುವ ಈದ್ಗಾ ಮೈಧಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪರಸ್ಪರ ಬಕ್ರೀದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.

ಜಲಾ ಪ್ರವಾಹದಿಂದ ನಲುಗುತ್ತಿರುವ ನಾಡಿನ ಜನರನ್ನು ರಕ್ಷಿಸಬೇಕು. ಮುಂದೆ ಯಾವುದೇ ಅನಾಹುತ ಸಂಭವಿಸದಿರಲೆಂದು ಅಲ್ಲಾನಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಮುಸಲ್ಮಾನ್ ಬಾಂಧವರು ಬಕ್ರೀದ್ ಶುಭಾಶಯ ಕೋರಿದರು.

ನಿಮಿರುವಿಕೆಯ ದುರ್ಬಲತೆಯನ್ನು ನಿವಾರಿಸಲು ವಯಾಗ್ರವನ್ನು ಮರೆತು, ದಾಳಿಂಬೆ ರಸವನ್ನು ಕುಡಿಯಿರಿ

ದಾಳಿಂಬೆ ವ್ಯಾಪಕವಾಗಿ ತಿನ್ನುವ ಹಣ್ಣಾಗಿದ್ದು, ಇದು ದಪ್ಪ ಚರ್ಮ ಮತ್ತು ಮಾಣಿಕ್ಯ-ಕೆಂಪು ರತ್ನದಂತಹುಗಳನ್ನು ಒಳಗೊಂಡಿದೆ. ದಾಳಿಂಬೆಯ ರುಚಿ ಮತ್ತು ಆರೋಗ್ಯದ ಪ್ರಯೋಜನಗಳಿಗಾಗಿ ಇದನ್ನು ಪ್ರಶಂಸಿಸಲಾಗುತ್ತದೆ. ದಾಳಿಂಬೆಯು ಉತ್ಕರ್ಷಣ ನಿರೋಧಕಗಳು ಮತ್ತು ಅನೇಕ ಪ್ರಯೋಜನಕಾರಿ ಜೈವಿಕ ಸಕ್ರಿಯ ಸಂಯುಕ್ತಗಳೊಂದಿಗಿದೆ. ನಿಮಿರುವಿಕೆಯ ಕ್ರಿಯೆ ಮತ್ತು ದುರ್ಬಲತೆಯ ವಿರುದ್ಧ ಹೋರಾಡಲು ದಾಳಿಂಬೆಯು ಬಹಳ ಸಹಕಾರಿಯಾಗಿದೆ ಎಂದು ನಿಮಗೆ ತಿಳಿದಿದೆಯೇ? ದಿನಕ್ಕೆ ಒಂದು ಲೋಟ ದಾಳಿಂಬೆ ರಸವು ನಿಮಿರುವಿಕೆಯ ಕ್ರಿಯೆಗೆ ಸಹಾಯ ಮಾಡುತ್ತದೆ. ಪುರುಷ ಲೈಂಗಿಕ ಕ್ರಿಯೆಯನ್ನು ಸರಿಪಡಿಸಲು ಹಣ್ಣು ಹೇಗೆ ಸಹಾಯ ಮಾಡುತ್ತದೆ ಎಂದು ನೀವು ತಿಳಿದುಕೊಳ್ಳಲು ಬಯಸಿದರೆ, ಮುಂದೆ ಓದಿ...

 

ನಿಮಿರುವಿಕೆ ಆಗದಿರುವುದು ಪುರುಷ ದುರ್ಬಲತೆ ಎಂದೂ ಕರೆಯುತ್ತಾರೆ, ಇದು ಲೈಂಗಿಕ ಸಮಸ್ಯೆಯಾಗಿದ್ದು, ಅಲ್ಲಿ ಮನುಷ್ಯನು ನಿಮಿರುವಿಕೆಯನ್ನು ಪಡೆಯಲು ವಿಫಲನಾಗುತ್ತಾನೆ. ಇದು ಮಾನಸಿಕ ಸಮಸ್ಯೆ ಅಥವಾ ದೈಹಿಕ ಸಮಸ್ಯೆಯಾಗಿರಬಹುದು. ಇದು ಮುಖ್ಯವಾಗಿ ಪುರುಷರ ಜನನಾಂಗಗಳ ಕಡೆಗೆ ರಕ್ತದ ಹರಿಯುವಿಕೆಯಿಂದಾಗಿ ಉಂಟಾಗುತ್ತದೆ. ರಕ್ತವು ಶಿಶ್ನದ ಅಂಗಾಂಶಗಳ ಕಡೆಗೆ ಹರಿಯದಿದ್ದಾಗ, ಪುರುಷರು ನಿಮಿರುವಿಕೆಯನ್ನು ಸಾಧಿಸುವಲ್ಲಿ ವಿಫಲರಾಗುತ್ತಾರೆ. ಹೃದಯ ಸಮಸ್ಯೆ ಅಥವಾ ಮಧುಮೇಹದಂತಹ ಆರೋಗ್ಯ ಪರಿಸ್ಥಿತಿಗಳಿಂದ ನಿಮಿರುವಿಕೆಯ ಈ ಸಾಮಾನ್ಯ ಕ್ರಿಯೆ ಉಂಟಾಗದಿದ್ದರೆ, ಪುರುಷರಲ್ಲಿ ಲೈಂಗಿಕ ಕಾರ್ಯಕ್ಷಮತೆಯನ್ನು ಸುಧಾರಿಸಲು ದಾಳಿಂಬೆಯನ್ನು ಬಳಸಬಹುದು.

ದಾಳಿಂಬೆಯನ್ನು ನೈಸರ್ಗಿಕ ವಯಾಗ್ರ ಎಂದು ಕರೆಯಲಾಗುತ್ತದೆ, ಅಂದರೆ, ಇದನ್ನು ನಿಮಿರುವಿಕೆಯ ಸಾಮಾನ್ಯ ಕ್ರಿಯೆಗೆ ಚಿಕಿತ್ಸೆ ನೀಡಲು ಬಳಸಬಹುದು. ದಿನಕ್ಕೆ ಒಂದು ಲೋಟ ದಾಳಿಂಬೆ ರಸವು ಪುರುಷರಿಗೆ ದುರ್ಬಲತೆಯನ್ನು ಸೋಲಿಸಲು ಮತ್ತು ಲೈಂಗಿಕ ಜೀವನವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ದಾಳಿಂಬೆ ರಸವನ್ನು ಕುಡಿಯುವುದರಿಂದ ಕೆಲವು ಸ್ಪಷ್ಟ ಪ್ರಯೋಜನಗಳಿವೆ ಎಂದು ಅಧ್ಯಯನಗಳು ತೋರಿಸಲು ಸಾಧ್ಯವಾಗಿದೆ.

ದಾಳಿಂಬೆಯಲ್ಲಿರುವ ಸಮೃದ್ಧ ಉತ್ಕರ್ಷಣ ನಿರೋಧಕ ಅಂಶಗಳು ದೇಹದಲ್ಲಿನ ಸ್ವತಂತ್ರ ರಾಡಿಕಲ್ ಗಳು ರಕ್ತ ಪರಿಚಲನೆಗೆ ಅಡ್ಡಿಯಾಗದಂತೆ ತಡೆಯುತ್ತದೆ ಎಂದು ಸಂಶೋಧಕರು ನಂಬಿದ್ದಾರೆ. ದಾಳಿಂಬೆ ರಕ್ತದ ಹರಿವನ್ನು ಸುಧಾರಿಸುತ್ತದೆ ಮತ್ತು ಅಪಧಮನಿಗಳಿಂದ ಪ್ಲೇಕ್ ರಚನೆಯನ್ನು ತೆಗೆದುಹಾಕುತ್ತದೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ. ನಿಮಿರುವಿಕೆಯನ್ನು ಸಾಧಿಸಲು ಉತ್ತಮ ರಕ್ತಪರಿಚಲನೆಯು ಮುಖ್ಯವಾದ ಕಾರಣ, ನಿಮಿರುವಿಕೆಯ ಸಾಮಾನ್ಯ ಕ್ರಿಯೆಗೆ ದಾಳಿಂಬೆ ಏಕೆ ಒಂದು ಉತ್ತಮ ಪರಿಹಾರವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ದಾಳಿಂಬೆ ರಸವು ರಕ್ತದಲ್ಲಿನ ನೈಟ್ರಿಕ್ ಆಕ್ಸೈಡ್ ಸಿಂಥೇಸ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ನೈಟ್ರೇಟ್‌ಗಳ ಮೂಲವಲ್ಲದಿದ್ದರೂ, ಇದು ಮಾನವನ ದೇಹದಲ್ಲಿ ನೈಟ್ರೇಟ್‌ಗಳ ಸಾಂದ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮತ್ತು ನೈಟ್ರೇಟ್‌ಗಳು ನೈಟ್ರಿಕ್ ಆಕ್ಸೈಡ್ ಅನ್ನು ರಚಿಸುತ್ತವೆ, ಇದು ರಕ್ತನಾಳಗಳ ಹಿಗ್ಗುವಿಕೆ ಮತ್ತು ರಕ್ತದ ಸರಿಯಾದ ಹರಿವಿಗೆ ಸಹಾಯ ಮಾಡುತ್ತದೆ.

ಹೇಮಾವತಿ ನದಿಯ ನಡದಲ್ಲಿ ಗುಡಿಸಲು ಹಾಕಿಕೊಂಡು ವಾಸವಾಗಿದ್ದ ಮೀನುಗಾರರ ಕುಟುಂಬವನ್ನು ಹೇಮಾವತಿ ನದಿಯ ಪ್ರವಾಹದ ಭೀತಿಯ ಹಿನ್ನೆಲೆಯಲ್ಲಿ ತಹಶೀಲ್ದಾರ್ ಎಂ.ಶಿವಮೂರ್ತಿ ಅವರು ಸ್ಥಳಾಂತರಗೊಳಿಸಿದರು...ಹೇಮಾವತಿ ನದಿಗೆ 1,0008ಸಾವಿರ ಕ್ಯೂಸೆಕ್ಸ್ ನೀರನ್ನು ಗೊರೂರು ಜಲಾಶಯದಿಂದ ಹರಿಯಬಿಟ್ಟಿರುವುದರಿಂದ ಮುಂಜಾಗ್ರತಾ ಕ್ರಮದ ಹಿನ್ನೆಲೆಯಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸಲಾಯಿತು...

ಈ ದಿನ ಮಂಡ್ಯ ಜಿಲ್ಲಾಧಿಕಾರಿಗಳಾದ ಶ್ರೀ ವೆಂಕಟೇಶ್ ಅವರು ಕಿಕ್ಕೇರಿ ಪೊಲೀಸ್ ಠಾಣಾ ಸರಹದ್ದಿನ ಮಂದಗೆರೆ ಹಾಗೂ ಸುತ್ತಮುತ್ತಲ ಗ್ರಾಮದ ಹೇಮಾವತಿ ನದಿ ಪಾತ್ರದ ಗ್ರಾಮಗಳಿಗೆ ಭೇಟಿ‌ ನೀಡಿ ವೀಕ್ಷಣೆ ಮಾಡಿ ಗೊರೂರು ಅಣೆಕಟ್ಟೆಯಿಂದ ಸುಮಾರು 1 ಲಕ್ಷ ಕ್ಯೂಸೆಕ್ಸ್ ಕ್ಕಿಂತ ಅಧಿಕ ನೀರನ್ನು ಹೇಮಾವತಿ ನದಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ನದಿಗೆ ಇಳಿಯಬಾರದು. ಮೀನುಗಾರರು ಮೀನು ಹಿಡಿಯಲು ನದಿಗೆ ಹೋಗಬಾರದು. ಜಾನುವಾರುಗಳನ್ನು ನದಿ ಕಡೆ ಬಿಡಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಾಗಮಂಗಲ ಉಪ ವಿಭಾಗದ ಡಿ.ವೈ.ಎಸ್. ಪಿ ರವರಾದ ಶ್ರೀ ‌ವಿಶ್ವನಾಥ್ ರವರು, ಕಿಕ್ಕೇರಿ‌ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವರಾದ ಶ್ರೀ ಚಂದ್ರಶೇಖರ್ ರವರು ಹಾಜರಿದ್ದರು.

ಸತತವಾಗಿ ಸುರಿಯುತ್ತಿರುವ ಮಳೆಗೆ ಧರೆಗೆ ಉರುಳಿದ ಮನೆ...

ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ದೊಡ್ಡಸೋಮನಹಳ್ಳಿ ಗ್ರಾಮದ ಜಯಲಕ್ಷ್ಮಿ ಎಂಬುವವರಿಗೆ ಸೇರಿದ ಮನೆ...

ಸತತವಾಗಿ ಮಳೆ ಸುರಿಯುತ್ತಿರವ ಮಳೆಗೆ ಮನೆ ಗೊಡೆ ಕುಸಿದು ಪರಿಣಾಮ ಮನೆಯಲ್ಲಿ ಇದ್ದ ರಾಗಿ ಅಕ್ಕಿ ದಿನಸಿ ಮತ್ತು ಅಡುಗೆ ಪಾತ್ರೆ ಗಳು ಹಾಳಗಿವೆ..

ಮನೆಯಲ್ಲಿ ತಾಯಿ ಮಗಳು ಇಬ್ಬರೆ ಇದ್ದರು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ...


ಅಕ್ಕಪಕ್ಕದ ಮನೆಯವರು ಕೂಡಲೇ ಸಹಾಯ ಮಾಡಿ ತಾಯಿ ಮತ್ತು ಮಗಳನ್ನು ರಕ್ಷಿಸಿದ್ದಾರೆ..

ಇವರು ಅದಿಕರ್ನಾಟಕ ಜನಾಂಗಕ್ಕೆ ಸೇರಿದ್ದ ಇವರ ಗಂಡ ಅನಾರೋಗ್ಯದ ಕಾರಣ ತಿರಿಹೊಗಿದ್ದು ,ಇವರ ಸಹಾಯ ಮಾಡಲು ಯಾರು ಇಲ್ಲದ ಕಾರಣ ತಾಲೂಕು ಅಡಳಿತ ಇತ್ತ ಗಮನಹರಿಸಿ ಪರಿಹಾರ ಕೊಡಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡರು..

ಪತ್ನಿ ಶೀಲ ಶಂಕಿಸಿ ತಲೆ ಮೇಲೆ ಗುಂಡುಕಲ್ಲು ಎತ್ತಿಹಾಕಿ ಹತ್ಯೆ... ಪಾಂಡವಪುರ ಪಟ್ಟಣದ ಉರ್ದು ಸರ್ಕಾರಿ ಶಾಲೆ ಬಳಿ ನಡೆದಿರೋ ಘಟನೆ... ಇಂದಿರಾ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದ ಮಂಗಳ (33) ಹತ್ಯೆಗೊಳಗಾದ ಗೃಹಿಣಿ....

ಆರೋಪಿ ಪತಿ ನಾರಾಯಣ (40) ಎಂಬಾತನನ್ನು ಬಂಧಿಸಿರುವ ಪೊಲೀಸರು...

ಇಂದಿರಾ ಕ್ಯಾಂಟೀನ್ ನಲ್ಲಿ ಕೆಲಸ ಮುಗಿಸಿಕೊಂಡು ಮನೆಯಲ್ಲಿ ಮಲಗಿದ್ದ ವೇಳೆ ಗುಂಡು ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿರುವ ಪತಿ...

ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಮಂಗಳ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಗೃಹಿಣಿ ಕೊನೆಯುಸಿರು...

ಗೃಹಿಣಿ ಸಹೋದರನಿಂದ ಪೊಲೀಸರಿಗೆ ದೂರು...ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ...

ಪಟ್ಟಣದ ಪುರಸಭಾ ಮುಖ್ಯ ಅಧಿಕಾರಿಯಾದ ಸತೀಶ್ ಕುಮಾರ್ ಅವರ ನೇತೃತ್ವದಲ್ಲಿ ಅಂಗಡಿಗಳು ಮೇಲೆ ದಾಳಿ 220 ಕೆಜಿಗೂ ಹೆಚ್ಚು ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ ..

ನಂತರ ಮಾತನಾಡಿದ ಸತೀಶ್ ಕುಮಾರ್ ಅವರು ಬೆಳಿಗ್ಗೆ ಎರಡು ಅಂಗಡಿಯ ಮೇಲೆ ದಾಳಿ ಮಾಡಿದ್ದೇವೆ . ಪರಿಸರ ಹಾಳಾಗುತ್ತಿದ್ದು ದಿನನಿತ್ಯ ಪ್ಲಾಸ್ಟಿಕನ್ನು ಬಳಕೆಯಿಂದ ಹಲವಾರು ಕಾಯಿಲೆಗಳು ಬರುತ್ತಿದ್ದು , ದಿನೇ ದಿನೆ ಮಳೆ ಬರುತ್ತಿದ್ದು ಪ್ಲಾಸ್ಟಿಕ್ ಬಳಕೆಯಿಂದ ಮಲೇರಿಯಾ ಕಾಯಿಲೆಗಳು ಉಂಟಾಗುತ್ತದೆ , ಪರಿಸರ ಸಮೃದ್ಧಿ ಅಧಿಕಾರಿಯಾದ ರಕ್ಷಿತ್, ಆರೋಗ್ಯ ನಿರೀಕ್ಷಕರಾದ ನರಸಿಂಹಯ್ಯ H.R, ಹಾಗೂ ಪುರಸಭ ಸಿಬ್ಬಂದಿಗಳ ಸಮ್ಮುಖದಲ್ಲಿ ಆಲೆ ಕಳೆದ ಎರಡು ದಿನಗಳಿಂದಲೂ ಪ್ಲಾಸ್ಟಿಕ್ ಗಳನ್ನು ವಶಪಡಿಸಿಕೊಂಡಿದ್ದೇವೆ  ಪೊಲೀಸ್ ಅಧಿಕಾರಿಗಳ ಸಹಾಯದಿಂದ ಸಮುದಾಯ ಭವನದ ಮೇಲೆ ದಾಳಿ ಮಾಡಿ ದಂಡ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.ಈ ಕಾರ್ಯಕ್ಕೆ ಸಾರ್ವಜನಿಕರ ಸಹಕಾರ ಬೇಕಾಗುತ್ತದೆ ಎಂದು ಮನವಿಯನ್ನು ಮಾಡಿದರು

Page 4 of 10

Visitors Counter

278364
Today
Yesterday
This Week
This Month
Last Month
All days
503
125
1497
857
6128
278364

Your IP: 18.220.25.158
2025-04-05 23:31

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles