ಪಾದಚಾರಿಗೆ ಟ್ಯಾಂಕರ್ ಡಿಕ್ಕಿ ಪಾದಚಾರಿ ಸ್ಥಳದಲ್ಲೆ ಸಾವು.

ವಿಜಯಪುರ: ವಿಜಯಪುರ ನಗರದ ವಜ್ರಹನುಮಾನ ರಸ್ತೆಯ ಬಳಿ ಪಾದಚಾರಿಗೆ ಟ್ಯಾಂಕರ್ ವಾಹನ ಡಿಕ್ಕಿ ಪಾದಚಾರಿ ಸ್ಥಳದಲ್ಲೆ ಸಾವು .ವಿಜಯಪುರದ ಜಿಲ್ಲೆಯ ಕಾರಜೋಳ ಗ್ರಾಮದ ನಿವಾಸಿ ಪರಸಪ್ಪ ಹೊನ್ನಿಹಳ್ಳಿ 37 ಸ್ಥಳದಲ್ಲೆ ಸಾವು.ಟ್ಯಾಂಕರ್ ಬಿಟ್ಟು ಚಾಲಕ ಪರಾರಿ.ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Rate this item
(0 votes)

ಖಾಸಗಿ ಶಾಲೆಗಳು ನಿಗದಿತ ಶುಲ್ಕ ಕ್ಕಿಂತ ಹೆಚ್ಚು ಶುಲ್ಕವನ್ನು ವರ್ಷಪೂರ್ತಿ ವಸೂಲಿ ಮಾಡುತ್ತಿದ್ದಾರೆ. ಶೀಘ್ರವೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾ ಮತ್ತು ತಾಲ್ಲೂಕು ಜಯಕರ್ನಾಟಕ  ಸಂಘಟನೆ ವತಿಯಿಂದ ಪ್ರತಿಭಟನೆ. 

ಮಳವಳ್ಳಿ: ಪಟ್ಟಣದಲ್ಲಿ ಜಿಲ್ಲಾ ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಯೋಗಣ್ಣ ನೇತೃತ್ವದಲ್ಲಿ ಖಾಸಗಿ ಶಾಲೆಗಳು ನಿಗದಿತ ಶುಲ್ಕ ಕ್ಕಿಂತ ಹೆಚ್ಚು ಶುಲ್ಕವನ್ನು ವರ್ಷಪೂರ್ತಿ ವಸೂಲಿ ಮಾಡುತ್ತಿದ್ದಾರೆ ಎಂದು ಜಿಲ್ಲಾ ಮತ್ತು ತಾಲ್ಲೂಕು ಜಯಕರ್ನಾಟಕ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಖಾಸಗಿ ಶಾಲೆಗಳು ವಿರುದ್ಧ ಘೋಷಣೆ ಕೂಗುತ್ತ ತಾಲ್ಲೂಕು  ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ತೆರಳಿ  ಕ್ಷೇತ್ರಾ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ನಂತರ ಯೋಗಣ್ಣ ಮಾತನಾಡಿ ಮಳವಳ್ಳಿ ತಾಲ್ಲೂಕಿನ ಎಲ್ಲಾ ಖಾಸಗಿ ಶಾಲೆಗಳಲ್ಲಿ  10 ತಿಂಗಳ ಶಾಲೆ ನಡೆದರೂ ವರ್ಷಪೂರ್ತಿವಿಡಿ ಹಣವನ್ನೂ ವಸೂಲಿ ಮಾಡುತ್ತಿದ್ದು ಜೊತೆಗೆ  ಶುಲ್ಕ ವಸೂಲಿ ಬಗ್ಗೆ ಪೋಷಕರಿಗೆ ಯಾವುದೇ  ಮಾಹಿತಿ ನೀಡದೆ ಪ್ರತಿ ತಿಂಗಳ  ನಿರ್ದಿಷ್ಟ ಶುಲ್ಕದ ಮಾಹಿತಿ ನೀಡದೆ ಸುಲಿಗೆ ಮಾಡುತ್ತಿದ್ದಾರೆ.ಎಂದು ಆರೋಪಿಸಿದರು. ಮನವಿ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಟಿ ಶಿವಲಿಂಗಯ್ಯ ಮಾತನಾಡಿ , ನಿಮ್ಮ ಮನವಿಯಲ್ಲಿರುವ ದೂರುಗಳನ್ನು  ಪರಿಶೀಲನೆ ನಡೆಸಿ  ಮುಂದಿನ ಶೈಕ್ಷಣಿಕ ವರ್ಷದಿಂದ. ಖಾಸಗಿ ಶಾಲೆಗಳಿಗೆ ಈ ಕೂಡಲೇ ನೋಟಿಸ್ ನೀಡುವುದಾಗಿ ಜೊತೆಗೆ  ಖಾಸಗಿ ಶಾಲೆಗಳ ಮುಖ್ಯ ಶಿಕ್ಷಕರ ಸಭೆ ಕರೆದು  ತಿಳಿಸಲಾಗುವುದು, ಮುಂದಿನ ವರ್ಷದಿಂದ ಪೋಷಕರಿಗೆ ಹೊರೆ ಆಗದಂತೆ ಕ್ರಮವಹಿಸುವುದಾಗಿ ಭರವಸೆ ನೀಡಿದರು.

ನಂತರ  ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರಕ್ಕೆ ಜಯಕರ್ನಾಟಕ ಸಂಘಟನೆ  ಸಭೆಯನ್ನು ಕರೆದು ನೂತನ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಿಗೆ ಅನುಮತಿ ಪತ್ರಗಳನ್ನು ಜಿಲ್ಲಾಧ್ಯಕ್ಷ ಯೋಗಣ್ಣ ರವರು ನೀಡಿದರು. ಈ ಸಂದರ್ಭದಲ್ಲಿ  ತಾಲ್ಲೂಕು ಜಯಕರ್ನಾಟಕ ಸಂಘಟನೆ ಅಧ್ಯಕ್ಷ  ರಮೇಶ್,ತಾಲ್ಲೂಕು ಕಾರ್ಯಾದ್ಯಕ್ಷ ತೇಜೆಂದ್ರಕುಮಾರ್ ,ಜಿಲ್ಲಾ ಉಪಾಧ್ಯಕ್ಷ  ನಾಗೇಶ್, ಕಲ್ಲೇಶ್,ಜಯಶಂಕರೇಗೌಡ,  ಸೇರಿದಂತೆ ಮತ್ತಿತ್ತರು ಇದ್ದರು.

 

Rate this item
(0 votes)

  ಜಿಲ್ಲೆಯ ವಿವಿಧ ಕಾಮಗಾರಿ ಶಂಕುಸ್ಥಾಪನೆ ಹಾಗೂ ಉದ್ಘಾಟನೆ  ಸಮಾರಂಭ ಮಂಡ್ಯದಲ್ಲಿ ನಡೆಯಲಿದ್ದು ಕಾರ್ಯಕ್ರಮ ಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ಆಗಮಿಸುತ್ತಿರುವ ಹಿನ್ನಲೆಯಲ್ಲಿ  ಶಾಸಕ ಡಾ.ಕೆ ಅನ್ನದಾನಿ ರವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ.

ಮಳವಳ್ಳಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಡಾ.ಕೆ ಅನ್ನದಾನಿ ರವರ ನೇತೃತ್ವದಲ್ಲಿ ಇದೇ ಫೆ.27ರಂದು ಜಿಲ್ಲೆಯ ವಿವಿಧ ಕಾಮಗಾರಿ ಶಂಕುಸ್ಥಾಪನೆ ಹಾಗೂ ಉದ್ಘಾಟನೆ  ಸಮಾರಂಭ ಮಂಡ್ಯದಲ್ಲಿ ನಡೆಯಲಿದ್ದು  ಕಾರ್ಯಕ್ರಮ ಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಪೂರ್ವಭಾವಿ ಸಭೆ ನಡೆಸಲಾಯಿತು. ಸಭೆಯನ್ನು ಉದ್ದೇಶಿಸಿ ಶಾಸಕ ಡಾ.ಕೆ ಅನ್ನದಾನಿ ಮಾತನಾಡಿ ಜಿಲ್ಲೆಯ ಅಭಿವೃದ್ಧಿಗೆ  ಮುಖ್ಯಮಂತ್ರಿ ಕುಮಾರಸ್ವಾಮಿ ರವರು ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ ಅದರಲ್ಲೂ ಮಳವಳ್ಳಿ ಕ್ಷೇತ್ರಕ್ಕೆ  ಸುಮಾರು 1200 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ.  ಮಳವಳ್ಳಿ ಜನತೆಯ ಮೇಲೆ ಕುಮಾರಸ್ವಾಮಿ ರವರು ಅಪಾರ ಪ್ರೀತಿಇದ್ದು ನಮ್ಮತಾಲ್ಲೂಕಿಗೆ  ಕೇವಲ 9 ತಿಂಗಳ ಆಡಳಿತದಲ್ಲಿ  ಪ್ರಥಮ ಬಜೆಟ್ ನಲ್ಲಿ ನಮ್ಮ ಕ್ಷೇತ್ರವನ್ನು ಗುರುತಿಸಿ ಅನುದಾನ ಬಿಡುಗಡೆ ಮಾಡಿದ್ದಾರೆ. ಫೆ.27 ರಂದು ನಡೆಯಲಿರುವ ಸಮಾರಂಭಕ್ಕೆ ಕನಿಷ್ಟ 10 ಸಾವಿರ ಮಂದಿಯಷ್ಟು ಕಾರ್ಯಕರ್ತರು ತೆರಳಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರಿಗೆ ಕೃತಜ್ಞತೆ ಸಲ್ಲಿಸಬೇಕಾಗಿದೆ ಅದಕ್ಕಾಗಿ ಮುಖಂಡರುಗಳು  ಕಾರ್ಯಕರ್ತರನ್ನು ಸಂಘಟಿಸಬೇಕು ಅಂದು ಗ್ರಾಮಗಳಿಗೆ ಬಸ್ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು. 

ಈ ಸಂದರ್ಭದಲ್ಲಿ  ಜೆಡಿಎಸ್ ತಾಲ್ಲೂಕು ಅಧ್ಯಕ್ಷ  ಹಾಗೂ ಜಿ.ಪಂ ರವಿ , ಜೆಡಿಎಸ್ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಡಿ ಜಯರಾಮು. ಮಾಲೇಗೌಡ, ಆನಂದಕಲ್ಕುಣಿ, ನಂದಕುಮಾರ್, ಕಾರ್ಯಾಧ್ಯಕ್ಷ ಪುಟ್ಟಬುದ್ದಿ, ಸೇರಿದಂತೆ ಮತ್ತಿತ್ತರು ಇದ್ದರು.

Rate this item
(0 votes)

ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಪ್ರತಿಭಟನೆ.

ಕೆ.ಆರ್.ಪೇಟೆ:  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ವತಿಯಿಂದ ಅದ್ಯಕ್ಷ ಜಯರಾಮುರವರ ನೇತೃತ್ವದಲ್ಲಿ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ನೂರಾರು ಎನ್.ಪಿ.ಎಸ್ ನೌಕರರು ಒಂದು ದಿನದ ಸಾಂಕೇತಿಕ ಧರಣಿ ನಡೆಸಿದರು.ಸಂಘದ ಕಛೇರಿ ಯಿಂದ ಹೊರಟು ನಂತರ ತಾಲ್ಲೂಕು ಕಛೇರಿ ತಲುಪಿ ತಹಶಿಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಅದ್ಯಕ್ಷ ಜಯರಾಮು ನೂತನ ಪಿಂಚಣಿ ವ್ಯವಸ್ಥೆಯಲ್ಲಿ ಹಲವಾರು ಲೋಪದೋಷಗಳು ಇದ್ದು ಅದು ನೌಕರರಿಗೆ ಮಾರಕವಾಗಿ ಪರಿಣಮಿಸಿದೆ. ಹೀಗೆ ನೌಕರರಿಗೆ ತೊಂದರೆಯಾಗಿರುವ ಈ ವ್ಯವಸ್ಥೆಯನ್ನು ಈ ಕೂಡಲೇ ಕೈ ಬಿಟ್ಟು 2006 ರ  ಹಿಂದಿನ ಹಿಂದಿನ ವ್ಯವಸ್ಥೆಯನ್ನು ಜಾರಿಗೆ ತಂದು ನೌಕರರು ಉತ್ತಮ ವಾತಾವರಣದಲ್ಲಿ ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕು ಎಂದರು. ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ಈ ಕೂಡಲೇ ಅತ್ಯಂತ ಗಂಭೀರವಾದ ಈ ವಿಷಯದಲ್ಲಿ ಉತ್ತಮ ನಿರ್ದಾರ ಕೈಗೊಳ್ಳಬೇಕು ಎಂದು ಸರ್ಕಾರಿ ನೌಕರರ ಪದಾಧಿಕಾರಿಗಳು ಮನವಿ ಮಾಡಿದರು.

ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಪದ್ಮೇಶ್. ಖಜಾಂಚಿ ವೆಂಕಟೇಶ್. ತಾ. ಪ್ರಾ.ಶಾಶಿ ಸಂಘದ ಅದ್ಯಕ್ಷ ಶಿವರಾಮೇಗೌಡ.ಕಾರ್ಯದರ್ಶಿ ರವಿಕುಮಾರ್. ಮೋಹನ್ ಕುಮಾರಿ ಪೂರ್ಣ ಚಂದ್ರ ತೇಜಸ್ವಿ ಗ್ರಾ.ಶಿ.ಸಂಘ ದ ಜಿಲ್ಲಾದ್ಯಕ್ಷ  ಹೇಮಣ್ಣ.ಉಪನ್ಯಾಸಕರ ಸಂಘದ ಅದ್ಯಕ್ಷ ಗಿರೀಶ್. ಪದವೀಧರ ಶ.ಸಂ ಅದ್ಯಕ್ಷ ಮಹೇಶ್.ಕಾರ್ಯದರ್ಶಿ ಧನೇಂದ್ರಗೌಡ.ಜಿಲ್ಲಾ ಉಪಾಧ್ಯಕ್ಷ ಮಂಜೇಗೌಡ.ಸೇರಿದಂತೆ ನೂರಾರು ಸಂಖ್ಯೆಯ ಎನ್.ಪಿ.ಎಸ್.ನೌಕರರು ಹಾಜರಿದ್ದರು.

 

Last modified on Monday, 25 February 2019 09:03
Rate this item
(0 votes)
 
ವಿಜಯಪುರ ನಗರದ ಜಯ ಕರ್ನಾಟಕ ಕಾಲೋನಿಯಲ್ಲಿ ಅಣ್ಣನ ಕೊಲೆ. ವಿಜಯಪುರ ನಗರದ ಸರ್ಕಾರಿ ಪ್ರೌಡ ಶಾಲಾ ಆವರಣದಲ್ಲಿ ತಮ್ಮನ ಕೊಲೆ.
 
ಸಲೀಮ್ ಕುಚಬಲ್, ಜಯ ಕರ್ನಾಟಕ ಕಾಲೋನಿಯಲ್ಲಿ ಕೊಲೆಯಾದ ಅಣ್ಣ. ತಮ್ಮ ರಜಾಕ್ ಕುಚಬಲ್ ಸರ್ಕಾರಿ ಪ್ರೌಡ ಶಾಲಾ ಆವರಣದಲ್ಲಿ ಕೊಲೆ.
 
ನಿನ್ನೆ ತಡರಾತ್ರಿ ಅಣ್ಣ ತಮ್ಮರಿಬ್ಬರ ಭರ್ಭರ ಕೊಲೆ.
 
ನಗರದ ಗಾಂಧಿ ಚೌಕ್ ಹಾಗೂ ಗೋಲ ಗುಮ್ಮಟ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
 
Rate this item
(0 votes)

 ಮಳವಳ್ಳಿ ತಾಲ್ಲೂಕು ಹಾಗೂ ಕನಕಪುರ ಮತ್ತು ಟಿ.ನರಸೀಪುರ ತಾಲ್ಲೂಕಿನ ವೀರಶೈವ ಮಠಾಧೀಶರ ತಂಡ ಗುಡಿಗೆರೆ ಗ್ರಾಮಕ್ಕೆ ಬೇಟಿ ನೀಡಿ ಹುತಾತ್ಮ ಯೋಧ ಗುರು ಕುಟುಂಬಕ್ಕೆ ಸಾಂತ್ವನ ಹೇಳಿದರು.

ಮಳವಳ್ಳಿ: ಗುಡಿಗೆರೆ ಕಾಲೋನಿಯ ಗುರು ನಿವಾಸಕ್ಕೆ ಕನಕಪುರ ದೇಗುಲ ಮಠದ ಮಠಾಧಿಪತಿ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ನೇತೃತ್ವದಲ್ಲಿ ಮಠಾಧೀಶರ ತಂಡ ಭೇಟಿ ನೀಡಿ ಸಾಂತ್ವನ ಹೇಳಿದರು ತಾಲೂಕಿನ ಬಿಜಿಪುರ ಹೊರಮಠದ ಚಂದ್ರಶೇಖರಸ್ವಾಮೀಜಿ,,ಕುಂದೂರುಬೆಟ್ಟದ ರಸ ಸಿದ್ದೇಶ್ವರ ಮಠದನಂಜುಂಡಸ್ವಾಮಿಜೀ. ಹಣಕೊಳ, ರಾಗಿಬೊಮ್ಮನಹಳ್ಳಿಮಠ,ಸರಗೂರುಮಠ, ಬ್ರಹ್ಮನ್ ಮಠ, , ಗವಿ ಮಠ, ಧನಗೂರು ಷಡಕ್ಷರ ದೇವರ ಮಠ ಸೇರಿದಂತೆ ಹಲವು ಮಠಾಧಿಪತಿಗಳಿಂದ ಗುರು ಪತ್ನಿ ಕಲಾವತಿ, ತಾಯಿ ಚಿಕ್ಕತಾಯಮ್ಮ, ತಂದೆ ಹೊನ್ನಯ್ಯ ಸೇರಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಗುರು ಅಂತ್ಯ ಸಂಸ್ಕಾರ ಸ್ಥಳಕ್ಕೆ ತೆರಳಿ ವೀರ ಯೋದ ಗುರು ಸಮಾಧಿಗೆ ಪೂಜೆ ಸಲ್ಲಿಸಿದರು.ಇದೇ ವೇಳೆ ಒಂದು ಲಕ್ಷ ರೂ ಹಣವನ್ನು ನೀಡುವ ಮೂಲಕ ಕುಟುಂಬಕ್ಕೆ ನೆರವು ನೀಡಲಾಯಿತು. ನಂತರ ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ಮಾತನಾಡಿ , ದೇಶಕ್ಕಾಗಿ ವೀರಮರಣ ಹೊಂದಿದ ಗುರುರವರ ಕುಟುಂಬದವರಿಗೆ ದೇವರು ಧೈರ್ಯ ಹಾಗೂ ದುಃಖ ಭರಿಸುವಂತಹ ಶಕ್ತಿ ನೀಡಲಿ, ಒಂದು ಬಡಕುಟುಂಬದಿಂದ ಹೋಗಿ ದೇಶ ಕಾಯುವ ಇಂತಹ ಯೋದನಿಗೆ ನಮ್ಮನಮನ ಎಂದರು. ಯೋಧಗುರು ಜೊತೆ ಇನ್ನೂ 48 ಮಂದಿ ಸಹ ವೀರಮರಣ ಹೊಂದಿದ್ದಾರೆ. ಇಡೀ ಸರ್ಕಾರವೇ ಗುರುರವರ ಅಂತ್ಯಕ್ರಿಯೆ ಯಲ್ಲಿ ಭಾಗವಹಿಸಿದ್ದು , ನಮ್ಮೆಲ್ಲರ ಭಾಗ್ಯ, ನಮ್ಮರಾಜ್ಯದಲ್ಲೂ ಅನೇಕರು ದೇಶವನ್ನು ಕಾಯುವ ಕಾಯಕ ಮಾಡುತ್ತಿದ್ದಾರೆ ಎನ್ನುವುದು ಹೆಮ್ಮಯ ಸಂಗತಿ ಎಂದರು ಇದೇ ವೇಳೆ ಗುರು ಕುಟುಂಬದವರಿಗೆ ರಾಜ್ಯದ ಮೂಲೆಮೂಲೆಯಿಂದ ಜನರ ಹಿಂಡೆ ಬರುತ್ತಿದ್ದು , ಯೋಧಗುರು ದೇಶಭಕ್ತಿ ಯನ್ನು ತೋರಿಸುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಮಳವಳ್ಳಿ ತಾಲ್ಲೂಕಿನ ವೀರಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷ ಕುಂದೂರು ಮೂರ್ತಿ , ಮಾಜಿ ತಾ.ಪಂ ಅಧ್ಯಕ್ಷ ವಿಶ್ವಾಸ್ , ವೀರಶೈವ ನೌಕರರ ಸಂಘದ ತಾಲ್ಲೂಕುಅಧ್ಯಕ್ಷ ಗಂಗಾಧರ್, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Rate this item
(0 votes)

 ಶಾಸಕ ನಾರಾಯಣಗೌಡರ ವಿರುದ್ಧ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರ ಆಕ್ರೋಶ. ಟೀಕೆ ಮಾಡಿದರೆ ತಕ್ಕಪಾಠ ಕಲಿಸುವ ಎಚ್ಚರಿಕೆ ನೀಡಿದ ಜಿ.ಪಂ ಸದಸ್ಯ ಬಿ.ಎಲ್.ದೇವರಾಜು.

ಕೃಷ್ಣರಾಜಪೇಟೆ: ಶಾಸಕ ಡಾ.ನಾರಾಯಣಗೌಡ ಅವರ ಕಾರ್ಯವೈಖರಿ ಕುರಿತು ಜೆಡಿಎಸ್ ಭಿನ್ನಮತೀಯ ಮುಖಂಡರು ಡಿಸಿಸಿ ಬ್ಯಾಂಕಿನ ಮಾಜಿಅಧ್ಯಕ್ಷ, ಜಿ.ಪಂ ಸದಸ್ಯ ಬಿ.ಎಲ್.ದೇವರಾಜು ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ತಪ್ಪಿದರೂ ಜೆಡಿಎಸ್ ಅಭ್ಯರ್ಥಿ ನಾರಾಯಣಗೌಡ ಅವರ ಪರವಾಗಿ ನಾನು ಮತ್ತು ನನ್ನ ಬೆಂಬಲಿಗರು ಪ್ರಾಮಾಣಿಕವಾಗಿ ಕೆಲಸ ಮಾಡಿ ಜೆಡಿಎಸ್ ಪಕ್ಷಕ್ಕೆ ಗೆಲುವು ತಂದುಕೊಟ್ಟಿದ್ದೇವೆ. ನಾವು ಪಕ್ಷದ್ರೋಹ ಮಾಡಿರುವುದಕ್ಕೆ ಏನಾದರೂ ದಾಖಲೆಗಳಿದ್ದರೆ ನಮ್ಮ ವಿರುದ್ಧ ಪಕ್ಷದ ಮುಖಂಡರಿಗೆ ದೂರು ನೀಡಿ ನಮ್ಮನ್ನು ಹೊರಹಾಕಿಸಲಿ, ಅದನ್ನು ಬಿಟ್ಟು ನಮ್ಮ ವಿರುದ್ಧ ಅಪಪ್ರಚಾರ ಮಾಡಿ ತೇಜೋವಧೆ ಮಾಡಿದರೆ ಶಾಸಕರಿಗೆ ತಕ್ಕ ಪಾಠವನ್ನು ಕಲಿಸಬೇಕಾಗುತ್ತದೆ. ಕಳೆದ ಬಜೆಟ್ ಅಧಿವೇಶನಕ್ಕೆ ಹಾಜರಾಗದೇ ಅನಾರೋಗ್ಯದ ನಾಟಕವಾಡಿದ್ದು ತಾಲೂಕಿನ ಜನತೆಗೆ ಗೊತ್ತಿದೆ, ಇಷ್ಟಾದರೂ ನಮ್ಮ ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರು ಶಾಂತವಾಗಿದ್ದಾರೆ. ನಾರಾಯಣಗೌಡ ರಿಗೆ ತಾಖತ್ತಿದ್ದರೆ ರಾಜೀನಾಮೆ ನೀಡಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿ ನಾನೂ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ. ಯಾರ ಬಳಿ ಮತಗಳಿವೆ ಎಂಬುದು ಗೊತ್ತಾಗಲಿದೆ. ಶಾಸಕರು ವಿನಾಕಾರಣ ಟೀಕೆ ಟಿಪ್ಪಣಿ ಮಾಡುವುದನ್ನು ಬಿಟ್ಟು ತಾಲ್ಲೂಕಿನ ಅಭಿವೃದ್ಧಿಗೆ ದುಡಿಯಲಿ, ತಾಲ್ಲೂಕಿನ ಅಭಿವೃದ್ಧಿಗೆ ಯಾರೇ ಅನುದಾನ ತಂದರೂ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುವುದು ನಮ್ಮ ತಾಲೂಕಿನಲ್ಲಿ ಎಂಬ ಸತ್ಯವನ್ನು ಶಾಸಕರು ತಿಳಿಯಬೇಕು ಎಂದು ಕಿವಿಮಾತು ಹೇಳಿದ ದೇವರಾಜು. ಕಳೆದ 40ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಈ ಬಾರಿ ಟಿಕೆಟ್ ವಂಚಿತನಾಗಿದ್ದರೂ ಪಕ್ಷದ್ರೋಹ ಮಾಡದೇ ಪಕ್ಷದ ಅಭ್ಯರ್ಥಿಯ ಗೆಲುವಿಗೆ ದುಡಿದಿದ್ದೇನೆ. ಸಚಿವ ರೇವಣ್ಣ ಅವರು ಕೆ.ಆರ್.ಪೇಟೆಗೆ ಬಂದಿದ್ದಾಗ ಅವರೊಂದಿಗೆ ರೋಡ್ ಷೋನಲ್ಲಿ ಭಾಗವಹಿಸಿದ್ದೇನೆ. ನಾನು ಮತ್ತು ನನ್ನ ಬೆಂಬಲಿಗರ ಊರಿನ ಬೂತ್ ಗಳಲ್ಲಿ ಜೆಡಿಎಸ್ ಪಕ್ಷಕ್ಕೆ ಅತೀ ಹೆಚ್ಚು ಮತಗಳು ಬಂದಿವೆ. ನಾವು ಪಕ್ಷದ್ರೋಹ ಮಾಡಿದ್ದರೆ ನಮ್ಮ ಬೂತ್ ಗಳಲ್ಲಿ ಜೆಡಿಎಸ್ ಅಭ್ಯರ್ಥಿಗೆ ಹೆಚ್ಚು ಮತಗಳು ಬರುತ್ತಿದ್ದವೇ ಎಂಬುದನ್ನು ಯೋಚಿಸಿ ಶಾಸಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ದೇವರಾಜು ಗುಟುರು ಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ನೋಟರಿ ಎಂ.ಎಲ್‌.ಸುರೇಶ್, ಜಿ.ಪಂ ಸದಸ್ಯ ರಾಮದಾಸು, ಮುಖಂಡ ಬಸ್ ಕೃಷ್ಣೇಗೌಡ, ಗದ್ದೇಹೊಸೂರು ದರ್ಶನ್, ಕಂಠಿಕುಮಾರ್, ಆಲಂಬಾಡಿ ಕಾವಲು ರಾಜು, ಹರೀಶ್ ಮತ್ತಿತರರು ಭಾಗವಹಿಸಿದ್ದರು.

Rate this item
(0 votes)

ಡಾ.ಬಿ ಆರ್ ಅಂಬೇಡ್ಕರ್ ವಿಚಾರ ವೇದಿಕೆ ಹಾಗೂ ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ವೀರಯೋದ ದಿ.ಹೆಚ್ ಗುರು ಹಾಗೂ 48 ಯೋಧರಿಗೆ ಶ್ರದ್ಧಾಂಜಲಿ ಹಾಗೂ  ಜಮ್ಮು ಕಾಶ್ಮೀರ ಕ್ಕೆ ಸಂವಿಧಾನ ದ 370 ರ ಅಧಿಸೂಚನೆ ಯಲ್ಲಿರುವ ವಿಶೇಷ ಸ್ಥಾನಮಾನ ವನ್ನು ರದ್ದು ಪಡಿಸುವಂತೆ   ಮಳವಳ್ಳಿ ಪಟ್ಟಣದಲ್ಲಿ ಮೌನ ಮೆರವಣಿಗೆ ನಡೆಸಲಾಯಿತು.       

ಮಳವಳ್ಳಿ:  ಪಟ್ಟಣದ ಡಾ.ಬಿ ಆರ್ ಅಂಬೇಡ್ಕರ್ ವಿಚಾರ ವೇದಿಕೆ ಹಾಗೂ ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ವೀರಯೋದ ದಿ.ಹೆಚ್ ಗುರು ಹಾಗೂ 48 ಯೋಧರಿಗೆ ಶ್ರದ್ಧಾಂಜಲಿ ಹಾಗೂ  ಜಮ್ಮು ಕಾಶ್ಮೀರ ಕ್ಕೆ ಸಂವಿಧಾನ ದ 370 ರ ಅಧಿಸೂಚನೆ ಯಲ್ಲಿರುವ ವಿಶೇಷ ಸ್ಥಾನಮಾನ ವನ್ನು ರದ್ದು ಪಡಿಸುವಂತೆ  ಮೌನ ಮೆರವಣಿಗೆ ನಡೆಸಲಾಯಿತು. ತಾಲ್ಲೂಕು ಪಂಚಾಯಿತಿ ಯಿಂದ ಹೊರಟ ಪ್ರತಿಭಟನಾಕಾರರು  ಪ್ರಮುಖಬೀದಿಗಳಲ್ಲಿ  ಮೌನ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿಗೆ ತಲುಪಿ. ನಂತರ ಬೌದ್ಧ ಮಹಾಸಭಾ ಮುಖಂಡ ಹಾಗೂ ಜಿ.ಪಂ ಮಾಜಿ ಸದಸ್ಯ ಎಂ .ಎನ್ ಜಯರಾಜು ಮಾತನಾಡಿ,  ಕೇಂದ್ರಸರ್ಕಾರವು ಸಂವಿಧಾನದ 370  ಅಧಿಸೂಚನೆ ಯಲ್ಲಿ  ವಿಶೇಷ ಸ್ಥಾನ ಮಾನವನ್ನು ಜಾರಿಗೆ ತರುವಾಗ  ಡಾ.ಬಿ.ಆರ್ ಅಂಬೇಡ್ಕರ್ ರವರು 70 ವರ್ಷಗಳ ಹಿಂದೆಯೇ  ಮುಂದಿನ ದಿನಗಳಲ್ಲಿ ಈ ರೀತಿ ಆಗಬಹುದು ಅದಕ್ಕಾಗಿ ಈ ಅಧಿಸೂಚನೆ ಮಾಡಬಾರದು ಎಂದು ವಿರೋಧಿಸಿದರೂ ಸಹ  ಅಂಬೇಡ್ಕರ್ ಮಾತಿಗೆ   ಬೆಲೆ ಕೊಡದೆ  ಈಗ ಈ ಪರಿಣಾಮ ಎದುರಿಸಬೇಕಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಈ ಕೂಡಲೇ  ಸಂವಿಧಾನ 370 ಅಧಿಸೂಚನೆ ಯನ್ನು  ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು  ಶಿರೆಸ್ತೆದ್ದಾರ್  ಚನ್ನವೀರಭದ್ರಯ್ಯ ರವರಿಗೆ  ಮನವಿ ಸಲ್ಲಿಸಿದರು.   

ಪ್ರತಿಭಟನೆಯಲ್ಲಿ ಅಂಬೇಡ್ಕರ್ ವಿಚಾರ ವೇದಿಕೆ  ದುಗ್ಗನಹಳ್ಳಿನಾಗರಾಜು, ಡಾ.ಪ್ರಸಾದ  ಬೌದ್ಧ ಮಹಾಸಭಾದ ಅಧ್ಯಕ್ಷ ರಾಚಯ್ಯ, ಪುರಸಭೆ ಸದಸ್ಯ ಮಹೇಶ್,  ಸಾಹಿತಿ ಮ.ಸಿ ನಾರಾಯಣ, ನಿವೃತ್ತ ನೌಕರರ ಸಂಘದ ಮಾಜಿ ಅಧ್ಯಕ್ಷ ಶಿವನಂಜು,  ಮಂಚಯ್ಯ,  ದೊಡ್ಡಬೂವಳ್ಳಿ ನಾಗರಾಜು ಸೇರಿದಂತೆ ಮತ್ತಿತ್ತರು ಇದ್ದರು.

 

Last modified on Friday, 22 February 2019 16:42

ಮನೆಗೆ ಆಕಸ್ಮಿಕ ಬೆಂಕಿ ಹತ್ತಿದ ಪರಿಣಾಮ ಮನೆ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ 2 ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ವಸ್ತುಗಳು ಭಸ್ಮ.

ವಿಜಯಪುರ: ಜಿಲ್ಲೆ ಸಿಂದಗಿ ತಾಲೂಕಿನ ತಾರಾಪುರ ಗ್ರಾಮದ ಸಂಪತಕುಮಾರ ಅಫಜಲಪುರ ಎಂಬುವರ ಮನೆಗೆ ಆಕಸ್ಮಿಕ ಬೆಂಕಿ ಹತ್ತಿದ ಪರಿಣಾಮ ಮನೆ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ನಡೆದಿದೆ. ಇನ್ನು ಮನೆಯಲ್ಲಿದ್ದ 10 ಸಾವಿರ ನಗದು, 10 ಗ್ರಾಂ ಚಿನ್ನ ಸೇರಿದಂತೆ ವಿವಿಧ ವಸ್ತುಗಳು ಸಂಪೂರ್ಣ ಭಸ್ಮವಾಗಿದ್ದು, ಸುಮಾರು 2 ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ವಸ್ತುಗಳು ಭಸ್ಮವಾಗಿವೆ. ಈ ಕುರಿತು ಆಲಮೇಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Rate this item
(0 votes)

ಧರ್ಮದ ಮಾರ್ಗದಿಂದ ಮಾತ್ರ ಮನಸ್ಸಿಗೆ ಶಾಂತಿ ನೆಮ್ಮದಿ.ಸಮಾಜದಲ್ಲಿ ತುಳಿತಕ್ಕೊಳಗಾದವರು ಶಿಕ್ಷಣದ ಶಕ್ತಿ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬಂದು ಸಾಧನೆ ಮಾಡಬೇಕು.ವರುಣ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ಧರಾಮಯ್ಯ.

ಕೃಷ್ಣರಾಜಪೇಟೆ: ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಆದಿಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಲಕ್ಕಮ್ಮ ಲಕ್ಷ್ಮೀದೇವಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭವು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು. ಕನಕಗುರು ಪೀಠದ ಕೆ.ಆರ್.ನಗರ ಶಾಖಾ ಮಠದ ಶ್ರೀ ಶಿವಾನಂದ ಪುರಿ ಶ್ರೀಗಳ ದಿವ್ಯಸಾನಿಧ್ಯದಲ್ಲಿ  ವರುಣ ಕ್ಷೇತ್ರದ ಶಾಸಕ ಯತೀಂದ್ರ ಸಿದ್ಧರಾಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ. ಇಂದಿನ ಒತ್ತಡದ ಜೀವನದಲ್ಲಿ ದೇವರು  ಮತ್ತು ಧರ್ಮದ ಹಾದಿಯಲ್ಲಿ ಸಾಗಿದರೆ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ಪಡೆಯಬಹುದು. ಹಾಲುಮತ ಕುರುಬ ಸಮಾಜದ ಬಂಧುಗಳು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ವಿದ್ಯಾವಂತರನ್ನಾಗಿ ಮಾಡುವ ಜೊತೆಗೆ ಉನ್ನತ ಶಿಕ್ಷಣವನ್ನು ಕೊಡಿಸಿ ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡಿ ಮುನ್ನಡೆಯುವಂತೆ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯದ ಸಮ್ಮಿಶ್ರ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ರಾಜ್ಯದ ಯಾವುದೇ ಹಳ್ಳಿಗಳಿಗೆ ಹೋದರೂ ನಮ್ಮ ತಂದೆಯವರನ್ನು ಗೌರವಿಸುತ್ತಾರೆ. ಅವರೂ ರಾಜ್ಯದ ಮುಖ್ಯಮಂತ್ರಿ ಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಕೃಷ್ಣರಾಜಪೇಟೆ ತಾಲ್ಲೂಕಿನ ಜನತೆಯ ಪ್ರೀತಿ ವಿಶ್ವಾಸ ಕಂಡು ಹೃದಯ ತುಂಬಿ ಬಂದಿದೆ ಎಂದು ಯತೀಂದ್ರ ಅಭಿಮಾನದಿಂದ ಹೇಳಿದರು.

 ಶಾಸಕ ಡಾ.ನಾರಾಯಣಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಆದಿಹಳ್ಳಿ ಗ್ರಾಮವು ಪುಟ್ಟಗ್ರಾಮವಾಗಿದ್ದರೂ ಇಲ್ಲಿನ ಜನರ ಧಾರ್ಮಿಕ ಜಾಗೃತಿ ಹಾಗೂ ಶ್ರದ್ಧಾ ಭಕ್ತಿಯು ಎಲ್ಲರಿಗೂ ಮಾದರಿಯಾಗಿದೆ.ಗ್ರಾಮದಲ್ಲಿ ಮೂರು ದೇವಸ್ಥಾನಗಳನ್ನು ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಲಾಗುತ್ತಿದೆ. ಮಳೆಯಾಶ್ರಿತ ಪ್ರದೇಶವಾದ ಸಂತೇಬಾಚಹಳ್ಳಿ ಹೋಬಳಿಯ ಜನರು ಕಷ್ಠಜೀವಿಗಳಾಗಿದ್ದು ದುಡಿಮೆಯನ್ನೇ ದೇವರೆಂದು ನಂಬಿದ್ದಾರೆ. ಅಲ್ಲದೇ ಈ ನೆಲಕ್ಕೆ ಅದ್ಭುತವಾದ ಶಕ್ತಿಯಿದೆ. ಆದ್ದರಿಂದಲೇ ನಾನು ಕ್ಷೇತ್ರದ ಶಾಸಕನಾಗಿ ಎರಡನೇ ಅವಧಿಗೆ ಆಯ್ಕೆಯಾಗಿದ್ದೇನೆ. ಹೋಬಳಿಯ ಜನರು ಕಷ್ಟಜೀವಿಗಳಾಗಿದ್ದು. ಇಡೀ ನಾಗರಿಕ ಸಮಾಜವೇ ಮೆಚ್ಚುವಂತಹ ಕೆಲಸ ಮಾಡಿದ್ದಾರೆ ಎಂದು ಶಾಸಕರು ಆದಿಹಳ್ಳಿ ಗ್ರಾಮಸ್ಥರನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ  ಕೆ.ಬಿ.ಚಂದ್ರಶೇಖರ್, ಜಿ.ಪಂ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ತಾ.ಪಂ ಉಪಾಧ್ಯಕ್ಷ ಜಾನಕೀರಾಂ, ಸದಸ್ಯ ಮೋಹನ್, ಡಾಲು ರವಿ , ಕೆ.ಶ್ರೀನಿವಾಸ್, ರವೀಂದ್ರಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಮೀನಾಕ್ಷಿರಮೇಶ್ ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.

Last modified on Friday, 22 February 2019 13:54
Page 10 of 27

Visitors Counter

237979
Today
Yesterday
This Week
This Month
Last Month
All days
181
101
607
6215
8165
237979

Your IP: 34.239.170.244
2024-06-19 06:53

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles