ಮಹಾ ಶಿವರಾತ್ರಿ ಹಬ್ಬದ ಮಹತ್ವ ..

 ಹಿಂದೂ ಧರ್ಮದಲ್ಲಿ ಶಿವರಾತ್ರಿಗೆ ಅದರದ್ದೇ ಆದ ಮಹತ್ವವಿದೆ. ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯಂದು ಪರಿಗಣಿಸಲಾಗುತ್ತದೆ. ಕೈಲಾಸನಾಥನು ಈ ದಿನದಂದು ಭೂಮಿಗೆ ಆಗಮಿಸಿ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆಂಬ ನಂಬಿಕೆ ಹಿಂದೂ ಭಕ್ತರಲ್ಲಿದೆ. ಶಿವರಾತ್ರಿಗೆ ಹೆಚ್ಚು ಪಾವಿತ್ರ್ಯತೆ ಪ್ರಾಮುಖ್ಯತೆ ಇರುವುದು ಅಂದು ಆಚರಿಸುವ ಉಪವಾಸದಲ್ಲಿ.

ಮಹಾ ಶಿವರಾತ್ರಿ: ಈ ವರ್ಷ ಶಿವರಾತ್ರಿ ಮಾರ್ಚ್ 4 ರಂದು ಬಂದಿದೆ ಕೈಲಾಸವಾಸಿ ಶಿವನಿಗೆ ಇದು ಮಂಗಳಕರ ರಾತ್ರಿ! ಶುಚಿರ್ಭೂತರಾಗಿ ಶಿವನನ್ನು ಧ್ಯಾನಿಸುತ್ತಾ ದಿನಪೂರ್ತಿ ಭಕ್ತರು ಆಹಾರ ನೀರು ಮುಟ್ಟದೆ ಉಪವಾಸ ಕೈಗೊಳ್ಳುತ್ತಾರೆ. ಅಲ್ಲದೆ, ಉಪವಾಸವು ಹಗಲಿನಿಂದ ಪ್ರಾರಂಭಗೊಂಡು ರಾತ್ರಿ ಪೂರ್ತಿ ನಡೆದು ಮರುದಿನ ಪ್ರಾತಃ ಕಾಲಕ್ಕೆ ಕೊನೆಗೊಳ್ಳುತ್ತದೆ. ವ್ರತದ ಸಮಯದಲ್ಲಿ ಆಹಾರವಿಲ್ಲದೆ ಕಟ್ಟುನಿಟ್ಟಾಗಿ ದೇವರಲ್ಲಿ ಐಕ್ಯಗೊಳ್ಳಬೇಕು. ವ್ರತಾಧಾರಿಯು ಹಣ್ಣಿನ ರಸ, ಹಣ್ಣುಗಳು ಮತ್ತು ವಿಶೇಷ ವ್ರತ ಆಹಾರಗಳಾದ ವ್ರತದ ಅನ್ನ, ಬೀಜಗಳು, ಈರುಳ್ಳಿ ಬೆಳ್ಳುಳ್ಳಿ ಇಲ್ಲದ ಪದಾರ್ಥಗಳನ್ನು ಸೇವಿಸಬಹುದು. ಸೂರ್ಯಾಸ್ತದ ನಂತರವಷ್ಟೇ ಊಟವನ್ನು ಸೇವಿಸಬೇಕು.  ಮರುದಿನ ಮುಂಜಾನೆ ಲಿಂಗಕ್ಕೆ ಅಭಿಷೇಕವನ್ನು ಪೂರೈಸಿ ಪ್ರಾರ್ಥನೆಗಳನ್ನು ಸಲ್ಲಿಸಿದ ನಂತರವಷ್ಟೇ ವ್ರತವನ್ನು ಸಂಪನ್ನಗೊಳಿಸಬೇಕು. ವ್ರತ ಸಂಪನ್ನಗೊಳಿಸುವಾಗ ಪ್ರಸಾದ ಇಲ್ಲವೇ, ಶಿವನಿಗೆ ಅರ್ಪಿಸಿದ ಆಹಾರವನ್ನು ಮೊದಲು ತೆಗೆದುಕೊಳ್ಳಬೇಕು,

ಬನ್ನಿ ಇಂದಿನ ಲೇಖನದಲ್ಲಿ ಶಿವರಾತ್ರಿ ಆಚರಣೆಗೆ ಸಂಬಂಧ ಪಡೆದಿರುವ ಕೆಲವೊಂದು ಐತಿಹಾಸಿಕ ಕಥೆಗಳನ್ನು ತಿಳಿಸಿಕೊಡಲಿದ್ದೇವೆ. ಶಿವರಾತ್ರಿ ಏಕೆ ಅತಿ ಮಹತ್ವದ್ದು ಮತ್ತು ಪವಿತ್ರವಾದುದು ಎಂಬುದನ್ನು ನಿಮಗಿಲ್ಲಿ ತಿಳಿದುಕೊಳ್ಳಬಹುದಾಗಿದೆ. ಬ್ರಹ್ಮ ಮತ್ತು ವಿಷ್ಣುವಿಗೆ ಸಂಬಂಧಿಸಿದ ಕಥೆ ಹೆಚ್ಚು ಜನಜನಿತವಾಗಿರುವ ಶಿವರಾತ್ರಿಯ ಕಥೆಯು ಬ್ರಹ್ಮ ಮತ್ತು ವಿಷ್ಣುವಿಗೆ ಸಂಬಂಧಿಸಿದ್ದಾಗಿದೆ. ತಮ್ಮಲ್ಲಿ ಯಾರು ಶ್ರೇಷ್ಠರು ಎಂಬುದಾಗಿ ಇಬ್ಬರಲ್ಲಿ ಸಂಘರ್ಷ ನಡೆಯುತ್ತಿತ್ತು. ಈ ರೀತಿ ಜಗಳ ಮುಂದುವರಿಯುತ್ತಿದ್ದರೆ ಇದು ವಿನಾಶಕ್ಕೆ ಕಾರಣವಾಗಬಹುದು ಎಂದು ಭಾವಿಸಿದ ದೇವತೆಗಳು ಬ್ರಹ್ಮ ಮತ್ತು ವಿಷ್ಣುವಿನ ವಿರಸದ ಕುರಿತಾಗಿ ಶಿವನಲ್ಲಿ ಮನವಿ ಮಾಡಿಕೊಳ್ಳುತ್ತಾರೆ. ಇಬ್ಬರು ದೇವರನ್ನು ಸಂತೈಸಲು ಶಿವ ಆಗಮಿಸುತ್ತಾರೆ.ಬ್ರಹ್ಮ, ವಿಷ್ಣು, ಮಹೇಶ್ವರ - ಈ ತ್ರಿಮೂರ್ತಿಗಳಲ್ಲಿ ಯಾರು ಸಮರ್ಥರು? ಬ್ರಹ್ಮ ಮತ್ತು ವಿಷ್ಣುವಿಗೆ ಸಂಬಂಧಿಸಿದ ಕಥೆ ಶಿವನು ಬೆಂಕಿಯಿಂದ ಕೂಡಿದ ಲಿಂಗಧಾರಣೆಯನ್ನು ಮಾಡಿಕೊಂಡು ಲಿಂಗದ ಮೇಲ್ಭಾಗ ಮತ್ತು ತಳಭಾಗವನ್ನು ಹೋಗಿ ಯಾರು ಶ್ರೇಷ್ಠರು ಎಂಬುದನ್ನು ನೋಡಲು ಇಬ್ಬರಲ್ಲೂ ತಿಳಿಸುತ್ತಾರೆ. ಬ್ರಹ್ಮನು ಬಾತುಕೋಳಿಯ ರೂಪದಲ್ಲಿ ಮೇಲ್ಭಾಗಕ್ಕೂ ವಿಷ್ಣುವು ಹಂದಿಯ ರೂಪದಲ್ಲಿ ಲಿಂಗದ ಕೆಳಭಾಗವನ್ನು ಗುರುತಿಸಲು ಮುಂದಾಗುತ್ತಾರೆ. ಆದರೆ ಇವರಿಬ್ಬರಿಗೂ ಕೊನೆ ಮತ್ತು ಆರಂಭ ದೊರೆಯುವುದೇ ಇಲ್ಲ.  ಸ್ಪರ್ಧೆಯಲ್ಲಿ ಸೋಲಲು ಇಷ್ಟಪಡದ ಬ್ರಹ್ಮನು ಕೇತಕಿ ಪುಷ್ಪವನ್ನು ತೆಗೆದುಕೊಂಡು ಬಂದು ಬೆಂಕಿಯ ಮೇಲ್ಭಾಗದಲ್ಲಿ ಇದು ದೊರಕಿತು ಎಂದಾಗಿ ಸುಳ್ಳು ಹೇಳುತ್ತಾರೆ. ಕೇತಕಿ ಪುಷ್ಪ ಕೂಡ ಬ್ರಹ್ಮನನ್ನು ಬೆಂಬಲಿಸುತ್ತದೆ. ಇದರಿಂದ ಕೋಪಗೊಂಡ ಶಿವನು ಬ್ರಹ್ಮನು ಸುಳ್ಳು ಹೇಳಿದ್ದಕ್ಕಾಗಿ ಬ್ರಹ್ಮನನ್ನು ಯಾರೂ ಪೂಜಿಸಬಾರದು ಎಂದಾಗಿ ಶಪಿಸುತ್ತಾರೆ. ಅಂತೆಯೇ ಪೂಜೆ ಸಮಯದಲ್ಲಿ ಕೇತಕಿ ಹೂವನ್ನು ಯಾರೂ ಬಳಸಬಾರದು ಎಂಬುದಾಗಿ ಶಾಪವನ್ನೀಯುತ್ತಾರೆ. ಶಿವ-ಸರಸ್ವತಿ ಶಾಪಕ್ಕೆ 'ಬ್ರಹ್ಮನಿಗೆ' ಪೂಜೆಯೇ ನಿಂತು ಹೋಯಿತು! ಮಹಾಶಿವರಾತ್ರಿ ಹಬ್ಬದ ಮಹತ್ವ ಮಹಾಶಿವರಾತ್ರಿಯ ಮಧ್ಯರಾತ್ರಿಯಂದು ಮಹಾದೇವನು ಲಿಂಗ ಸ್ವರೂಪವನ್ನು ಧರಿಸುತ್ತಾರೆ. ಫಲ್ಗಣ ಮಾಸದ 14 ನೇ ಗಾಢ ಮಾಸದಂದು ಇದು ಸಂಭವಿಸುತ್ತದೆ. ಶಿವನು ಪ್ರಥಮ ಬಾರಿ ಲಿಂಗ ರೂಪವನ್ನು ಧರಿಸುವುದು ಎಂಬುದಾಗಿ ಇದನ್ನು ಕಾಣಲಾಗುತ್ತದೆ. ಆ ದಿನವನ್ನೇ ಮಹಾಶಿವರಾತ್ರಿಯಾಗಿ ಆಚರಿಸಲಾಗುತ್ತದೆ. ಈ ದಿನಂದು ಶಿವನನ್ನು ಪೂಜಿಸುವುದು ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿದೆ ಮತ್ತು ಸುಖ ಸಂತೋಷವನ್ನು ತರಲಿದೆ ಎಂಬುದು ಪ್ರತೀತಿಯಾಗಿದೆ. 


Share this article

About Author

Madhu
Leave a comment

Write your comments

Visitors Counter

252201
Today
Yesterday
This Week
This Month
Last Month
All days
306
143
608
3126
5621
252201

Your IP: 44.220.247.152
2024-09-19 13:47

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles