ದೇವಾಲಯಗಳ ಮಾಹಿತಿ

ಸಂಕಲ್ಪ ಮಾಡಿ ಇಲ್ಲಿನ ಮಣ್ಣನ್ನು ತೆಗೆದುಕೊಂಡು ಪೂಜಿಸಿದರೇ  ಸಾಕು. ಸಂತಾನ ಭಾಗ್ಯ, ವಿದ್ಯಾಭ್ಯಾಸ, ಮದುವೆ ಆಗದವರಿಗೆ ಮದುವೆ ಭಾಗ್ಯ, ಮನೆಕಟ್ಟೆದವರಿಗೆ ಮನೆ ಕಟ್ಟುವ ಶಕ್ತಿ ಸೇರಿದಂತೆ ಸಕಲ ಕಷ್ಟಗಳನ್ನು ದೂರಮಾಡಿ ಇಷ್ಠಾರ್ಥಗಳನ್ನು ನೆರವೇರಿಸಿಕೊಡುತ್ತಾನೆ ಭೂವರಹನಾಥ.

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಗಂಜಿಗೆರೆ ಸಮೀಪದ ಭೂವರಹನಾಥ ಕಲ್ಲಹಳ್ಳಿಯಲ್ಲಿ ಹೇಮಾವತಿ ನದಿ ದಡೆಯಲ್ಲಿ ಭೂವರಹನಾಥಸ್ವಾಮಿ ನೆಲೆನಿಂತಿದ್ದಾನೆ. ಭೂವರಹನ ದೇಹ ಮನುಷ್ಯನದು, ಮುಖ ಪ್ರಾಣಿಯದಾಗಿದೆ. ಅಜಾನುಬಾವಾಗಿರುವ ಭೂವರಹ ಭಕ್ತರು ಕಷ್ಟ ಆಲಿಸಿ, ಕ್ಷಣಾರ್ಧದಲ್ಲಿ ದೂರಮಾಡತ್ತಾನೆ, ಸಂತಾನ ಭಾಗ್ಯ, ವಿದ್ಯಾಭ್ಯಾಸ, ಮದುವೆ ಆಗದವರಿಗೆ ಮದುವೆ ಭಾಗ್ಯ, ಮನೆಕಟ್ಟೆದವರಿಗೆ ಮನೆ ಕಟ್ಟುವ ಶಕ್ತಿ ಸೇರಿದಂತೆ ಸಕಲ ಕಷ್ಟಗಳನ್ನು ದೂರಮಾಡಿ ಇಷ್ಠಾರ್ಥಗಳನ್ನು ಸಿದ್ಧಿಸುತ್ತದೆ. ದೇವಸ್ಥಾನದ ಪಕ್ಕದಲ್ಲಿ ನದಿಯಿದೆ. ಇಲ್ಲಿ ಜ್ಯೋತಷ್ಯದಲ್ಲಿ ಹೇಳಿರುವಂತೆ ರಾಹು, ಕೇತು ದೋಷಗಳು ನಿವಾರಣೆ ಆಗುತ್ತವೆ. ಯಾವ ವ್ಯಕ್ತಿ ದೋಷಗಳಿಂದ ಬಳಲುತ್ತಿರುತ್ತಾನೆ, ಆತ ದೇವಸ್ಥಾನದಲ್ಲಿ ಸಂಕಲ್ಪ ಮಾಡಿಸಿ ಕರಿ ಉದ್ದಿನ ಕಾಳನ್ನು ನದಿ ಎದರು ನಿಂತು ಮೈಮೇಲಿಂದ 17 ಬಾರಿ ನಿವ್ವಳಿಸಿ(ದೃಷ್ಟಿ ತಕ್ಕೊಂಡು) ನದಿಗೆ ಹಾಕಿ, ದೇವಸ್ಥಾನವನ್ನು 11 ಪ್ರದಕ್ಷಿಣೆ ಹಾಕಿದ ನಂತರ ದೋಷ ನಿವಾರಣೆ ಆಗುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ. ಭೂಮಿಗೆ ಸಂಬಂಧಿಸಿದ ಮನೆ ಕಟ್ಟಲಾಗದಿರುವುದು, ನಿವೇಶನ ಖರೀದಿಗೆ, ಜಮೀನು ಖರೀದಿ, ನ್ಯಾಯಾಲಯದಲ್ಲಿ ಜಮೀನು ಸಂಬಂಧ ತೊಂದರೆ ಅನುಭವಿಸುತ್ತಿರುವವರು ಇಲ್ಲಿಗೆ ಬಂದು ಇಲ್ಲಿನ ಮಣ್ಣನ್ನು ಅರಿಸಿನ ಬಟ್ಟೆಯಲ್ಲಿ ಹಾಖಿಕೊಂಡು ಮಣ್ಣಿಗೆ ದೇವರನ್ನು ಆಹ್ವಾನೆ ಮಾಡಿಸಿಕೊಂಡು ಮನೆಯಲ್ಲಿಟ್ಟು ಪೂಜೆ ಸಲ್ಲಿಸಿ ಭೂಮಿ ಸಮಸ್ಯೆ ನಿವಾರಣೆ ಆದ ಮೇಲೆ ದೇವರಿಗೆ ಹರಿಕೆ ತೀರಿಸಿ ಬಂದು ಮನೆಯಲ್ಲಿರುವ ತುಳಿಸಿ ಗಿಡಕ್ಕೆ ಮಣ್ಣನ್ನು ವಿಸಜರ್ಿಸುತ್ತಾರೆ.ಭೂಮಿ ಕಾರ್ಯಕ್ಕೆ ನಿವಿಘ್ರ್ನವಾಗಿ ಏನೇ ಸಂಕಲ್ಪ ಮಾಡಿದರೇ ನೆರವೇರಿಸಿಕೊಡುತ್ತಾನೆ. ಇಲ್ಲಿ ಪೂಜಿಸಿ ಒಂದು ಮಣ್ಣಿನ ಇಟ್ಟಿಗೆಯನ್ನು ತೆಗೆದುಕೊಂಡು ಹೋಗಿ ಮನೆ ಕಟ್ಟುವ ಜಾಗದ ಈಶಾನ್ಯ ಮೂಲೆಗೆ ಕಟ್ಟುವುದರಿಂದ ಮನೆ ಬೇಗ ನಿಮರ್ಾಣಗೊಳ್ಳತ್ತದೆ ಎಂಬುದು ಇಲ್ಲಿನ ಭಕ್ತರ ನಂಬಿಕೆ. ಈ ದೇವಸ್ಥಾನದ ದರ್ಶನ ಪಡೆದ ಭಕ್ತರಿಗೆ ವೈಬ್ರೇಷನ್ ಅನುಭವ ಆಗುತ್ತದೆ. ಇದು ದೇವರು ಇರುವುದಕ್ಕೆ ಸಾಕ್ಷಿ ಎನ್ನುತ್ತಾರೆ. ಇಲ್ಲಿನ ಭಕ್ತರು.

ಸ್ಥಳ ಪುರಾಣ : ದೇವಸ್ಥಾನದ ಪಕ್ಕದಲ್ಲಿರುವ ನದಿಗೆ ಹಿಂದೆ ಪ್ರಹಾವ ಬರುತ್ತದೆ. ಈ ಪ್ರದೇಶ ಜಲಾವೃತಗೊಂಡು ಇಲ್ಲಿನ ಜನರು ಊರನ್ನು ಖಾಲಿ ಮಾಡುತ್ತಾರೆ. ಆದರೇ ದೇವರು ಮಾತ್ರ ಉಳಿಯುತ್ತಾನೆ. ತನ್ನ ಶಕ್ತಿಯಿಂದ ನೀರಿಂದ ಎದ್ದು ಬಂದು ಭೂಮಿಯ ಮೇಲೆ ನೆಲೆ ನಿಲ್ಲುತ್ತಾನೆ. ಪ್ರವಾಹ ನಿಂತ ನಂತರ ಕಣ್ಮರೆ ಆಗುತ್ತಾನೆ. ಗಿಡ, ಮರ ಬೆಳೆದು ಕಾಡಾಗುತ್ತದೆ. ವಿಷ್ಣವರ್ಧನನ ಮಗ ವೀರ ಬಲ್ಲಾಳ ಭೇಟೆಗೆಂದು ಇಲ್ಲಿಗೆ ಬರುತ್ತಾನೆ. ಇವನ ಭೇಟೆ ನಾಯಿಗಳು ಮೊಲಗಳನ್ನು ಅಟ್ಟಿಸಿಕೊಂಡು ಹೋಗುತ್ತವೆ. ಇಲ್ಲಿ ದಿಣ್ಣೆ ಕಾಣುತ್ತದೆ. ಅಲ್ಲಿ ಮೊಲಗಳು ಉಗ್ರ ಸ್ವರೂಪ ತಾಳಿ ಭೇಟೆ ನಾಯಿಗಳನ್ನ ಬೆನ್ನಟ್ಟಿ ಹೊಡಿಸಿ ಕಳಿಸುತ್ತವೆ. ಆಗ ವೀರಬಲ್ಲಾಳನಿಗೆ ಅಲ್ಲಿ ಏನೋ ದೈವ ಶಕ್ತಿಯಿದೆ ಎಂದು ಅರಿತು ಆ ಜಾಗವನ್ನು ಅಗೆಸುತ್ತಾನೆ. ಆಗ ಅಲ್ಲಿ ಮನುಷ್ಯ ದೇಹ, ಪ್ರಾಣಿ ಮುಖ ಇರುವ ಬರಹನಾಥನ ವಿಗ್ರಹ ಸಿಗುತ್ತದೆ. ಆತ ಅಲ್ಲೇ ದೇವಸ್ಥಾನ ಕಟ್ಟಿಸಿ ವರಹನಾಥಸ್ವಾಮಿಗೆ ಪೂಜೆ ಶುರು ಮಾಡಿಸಿದನಂತೆ.

ಈ ದೇವಸ್ತಾನವನ್ನು 2500 ವರ್ಷಗಳ ಹಿಂದೆ ಗೌತಮ ಋಷಿಗಳು ಮಾಡಿದ್ದಾರೆ. ಭೂವರಹನ ಮೂತರ್ಿಯ ಎಡೆತೊಡೆಯ ಮೇಲೆ ಭೂದೇವಿ ಕುಳಿತ್ತಿದ್ದಾಳೆ. ಹಸ್ತದಲ್ಲಿ ಕಮಲದ ಹೂವಿದೆ. ಮಧ್ಯೆ ಸುದರ್ಶನ ಚಕ್ರವಿದ್ದು, ಏಕಶಿಲೆಯ ಸಾಲಿಗ್ರಾಮ ಶಿಲೆಯಾಗಿದೆ. ಪಾದದಿಂದ ಕಿರೀಟ 15 ಅಡಿ, ಪೀಠ 3 ಅಡಿಯಿದೆ. ಹಿಂದೆ ವಿಜಯನಗರದ ಸಾಮ್ರಾಜ್ಯದ ರಾಜರು ಸ್ವಾಮಿಯ ಶಕ್ತಿ ಅರಿತು, ರಾಜ ಲಾಂಛನವನ್ನಾಗಿ ಮಾಡಿಕೊಂಡಿದ್ದರು. ರಾಜರ ಗುರುಗಳ, ಋಷಿಗಳ ಮಾತಿನಂತೆ ಲಾಂಚನವನ್ನ, ಆ ಸಮಯದಲ್ಲಿ ನಾಣ್ಯದ ಮೇಲೆ ವರಹನಾಥನ ಚುಹ್ನೆ ಹಾಕುತ್ತಿದ್ದರು. ಅಲ್ಲದೆ ನಾಣ್ಯವನ್ನು ವರಹ ಎಂದು ಕರೆಯುತ್ತಿದ್ದರು ಎಂಬ ಇತಿಹಾಸವಿದೆ.

ಭೂವರಹ ಅಂದರೇ ಭೂಮಿಯ ಒಡೆಯ.ಭೂಮಿಯ ಮೇಲೆ ಇರುವ ಸಕಲ ಕಷ್ಟಗಳನ್ನು ನಿವಾರಣೆ ಮಾಡಿ ಭಕ್ತರನ್ನ ಕಾಪಾಡುತ್ತಿರುವ ಭೂವರಹನಿಗೆ ಪ್ರತಿದಿನ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಅರಿದು ಬರುತ್ತಿದ್ದಾರೆ. ಅಮಾವಸೆಯಲ್ಲಿ ಪೂಜೆ ಸಲ್ಲಿಸಿದರೇ ಹೆಚ್ಚಿನ ಫಲ ಸಿಗುತ್ತದೆ ಎಂಬುದು ಭಕ್ತರ ನಂಬಿಕೆ. ಅಂದು ಭಕ್ತರ ಸಂಖ್ಯೆ ಹೆಚ್ಚಿರುತ್ತದೆ.

 ಹಿಂದೂ ಧರ್ಮದಲ್ಲಿ ಶಿವರಾತ್ರಿಗೆ ಅದರದ್ದೇ ಆದ ಮಹತ್ವವಿದೆ. ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯಂದು ಪರಿಗಣಿಸಲಾಗುತ್ತದೆ. ಕೈಲಾಸನಾಥನು ಈ ದಿನದಂದು ಭೂಮಿಗೆ ಆಗಮಿಸಿ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆಂಬ ನಂಬಿಕೆ ಹಿಂದೂ ಭಕ್ತರಲ್ಲಿದೆ. ಶಿವರಾತ್ರಿಗೆ ಹೆಚ್ಚು ಪಾವಿತ್ರ್ಯತೆ ಪ್ರಾಮುಖ್ಯತೆ ಇರುವುದು ಅಂದು ಆಚರಿಸುವ ಉಪವಾಸದಲ್ಲಿ.

ಮಹಾ ಶಿವರಾತ್ರಿ: ಈ ವರ್ಷ ಶಿವರಾತ್ರಿ ಮಾರ್ಚ್ 4 ರಂದು ಬಂದಿದೆ ಕೈಲಾಸವಾಸಿ ಶಿವನಿಗೆ ಇದು ಮಂಗಳಕರ ರಾತ್ರಿ! ಶುಚಿರ್ಭೂತರಾಗಿ ಶಿವನನ್ನು ಧ್ಯಾನಿಸುತ್ತಾ ದಿನಪೂರ್ತಿ ಭಕ್ತರು ಆಹಾರ ನೀರು ಮುಟ್ಟದೆ ಉಪವಾಸ ಕೈಗೊಳ್ಳುತ್ತಾರೆ. ಅಲ್ಲದೆ, ಉಪವಾಸವು ಹಗಲಿನಿಂದ ಪ್ರಾರಂಭಗೊಂಡು ರಾತ್ರಿ ಪೂರ್ತಿ ನಡೆದು ಮರುದಿನ ಪ್ರಾತಃ ಕಾಲಕ್ಕೆ ಕೊನೆಗೊಳ್ಳುತ್ತದೆ. ವ್ರತದ ಸಮಯದಲ್ಲಿ ಆಹಾರವಿಲ್ಲದೆ ಕಟ್ಟುನಿಟ್ಟಾಗಿ ದೇವರಲ್ಲಿ ಐಕ್ಯಗೊಳ್ಳಬೇಕು. ವ್ರತಾಧಾರಿಯು ಹಣ್ಣಿನ ರಸ, ಹಣ್ಣುಗಳು ಮತ್ತು ವಿಶೇಷ ವ್ರತ ಆಹಾರಗಳಾದ ವ್ರತದ ಅನ್ನ, ಬೀಜಗಳು, ಈರುಳ್ಳಿ ಬೆಳ್ಳುಳ್ಳಿ ಇಲ್ಲದ ಪದಾರ್ಥಗಳನ್ನು ಸೇವಿಸಬಹುದು. ಸೂರ್ಯಾಸ್ತದ ನಂತರವಷ್ಟೇ ಊಟವನ್ನು ಸೇವಿಸಬೇಕು.  ಮರುದಿನ ಮುಂಜಾನೆ ಲಿಂಗಕ್ಕೆ ಅಭಿಷೇಕವನ್ನು ಪೂರೈಸಿ ಪ್ರಾರ್ಥನೆಗಳನ್ನು ಸಲ್ಲಿಸಿದ ನಂತರವಷ್ಟೇ ವ್ರತವನ್ನು ಸಂಪನ್ನಗೊಳಿಸಬೇಕು. ವ್ರತ ಸಂಪನ್ನಗೊಳಿಸುವಾಗ ಪ್ರಸಾದ ಇಲ್ಲವೇ, ಶಿವನಿಗೆ ಅರ್ಪಿಸಿದ ಆಹಾರವನ್ನು ಮೊದಲು ತೆಗೆದುಕೊಳ್ಳಬೇಕು,

ಬನ್ನಿ ಇಂದಿನ ಲೇಖನದಲ್ಲಿ ಶಿವರಾತ್ರಿ ಆಚರಣೆಗೆ ಸಂಬಂಧ ಪಡೆದಿರುವ ಕೆಲವೊಂದು ಐತಿಹಾಸಿಕ ಕಥೆಗಳನ್ನು ತಿಳಿಸಿಕೊಡಲಿದ್ದೇವೆ. ಶಿವರಾತ್ರಿ ಏಕೆ ಅತಿ ಮಹತ್ವದ್ದು ಮತ್ತು ಪವಿತ್ರವಾದುದು ಎಂಬುದನ್ನು ನಿಮಗಿಲ್ಲಿ ತಿಳಿದುಕೊಳ್ಳಬಹುದಾಗಿದೆ. ಬ್ರಹ್ಮ ಮತ್ತು ವಿಷ್ಣುವಿಗೆ ಸಂಬಂಧಿಸಿದ ಕಥೆ ಹೆಚ್ಚು ಜನಜನಿತವಾಗಿರುವ ಶಿವರಾತ್ರಿಯ ಕಥೆಯು ಬ್ರಹ್ಮ ಮತ್ತು ವಿಷ್ಣುವಿಗೆ ಸಂಬಂಧಿಸಿದ್ದಾಗಿದೆ. ತಮ್ಮಲ್ಲಿ ಯಾರು ಶ್ರೇಷ್ಠರು ಎಂಬುದಾಗಿ ಇಬ್ಬರಲ್ಲಿ ಸಂಘರ್ಷ ನಡೆಯುತ್ತಿತ್ತು. ಈ ರೀತಿ ಜಗಳ ಮುಂದುವರಿಯುತ್ತಿದ್ದರೆ ಇದು ವಿನಾಶಕ್ಕೆ ಕಾರಣವಾಗಬಹುದು ಎಂದು ಭಾವಿಸಿದ ದೇವತೆಗಳು ಬ್ರಹ್ಮ ಮತ್ತು ವಿಷ್ಣುವಿನ ವಿರಸದ ಕುರಿತಾಗಿ ಶಿವನಲ್ಲಿ ಮನವಿ ಮಾಡಿಕೊಳ್ಳುತ್ತಾರೆ. ಇಬ್ಬರು ದೇವರನ್ನು ಸಂತೈಸಲು ಶಿವ ಆಗಮಿಸುತ್ತಾರೆ.ಬ್ರಹ್ಮ, ವಿಷ್ಣು, ಮಹೇಶ್ವರ - ಈ ತ್ರಿಮೂರ್ತಿಗಳಲ್ಲಿ ಯಾರು ಸಮರ್ಥರು? ಬ್ರಹ್ಮ ಮತ್ತು ವಿಷ್ಣುವಿಗೆ ಸಂಬಂಧಿಸಿದ ಕಥೆ ಶಿವನು ಬೆಂಕಿಯಿಂದ ಕೂಡಿದ ಲಿಂಗಧಾರಣೆಯನ್ನು ಮಾಡಿಕೊಂಡು ಲಿಂಗದ ಮೇಲ್ಭಾಗ ಮತ್ತು ತಳಭಾಗವನ್ನು ಹೋಗಿ ಯಾರು ಶ್ರೇಷ್ಠರು ಎಂಬುದನ್ನು ನೋಡಲು ಇಬ್ಬರಲ್ಲೂ ತಿಳಿಸುತ್ತಾರೆ. ಬ್ರಹ್ಮನು ಬಾತುಕೋಳಿಯ ರೂಪದಲ್ಲಿ ಮೇಲ್ಭಾಗಕ್ಕೂ ವಿಷ್ಣುವು ಹಂದಿಯ ರೂಪದಲ್ಲಿ ಲಿಂಗದ ಕೆಳಭಾಗವನ್ನು ಗುರುತಿಸಲು ಮುಂದಾಗುತ್ತಾರೆ. ಆದರೆ ಇವರಿಬ್ಬರಿಗೂ ಕೊನೆ ಮತ್ತು ಆರಂಭ ದೊರೆಯುವುದೇ ಇಲ್ಲ.  ಸ್ಪರ್ಧೆಯಲ್ಲಿ ಸೋಲಲು ಇಷ್ಟಪಡದ ಬ್ರಹ್ಮನು ಕೇತಕಿ ಪುಷ್ಪವನ್ನು ತೆಗೆದುಕೊಂಡು ಬಂದು ಬೆಂಕಿಯ ಮೇಲ್ಭಾಗದಲ್ಲಿ ಇದು ದೊರಕಿತು ಎಂದಾಗಿ ಸುಳ್ಳು ಹೇಳುತ್ತಾರೆ. ಕೇತಕಿ ಪುಷ್ಪ ಕೂಡ ಬ್ರಹ್ಮನನ್ನು ಬೆಂಬಲಿಸುತ್ತದೆ. ಇದರಿಂದ ಕೋಪಗೊಂಡ ಶಿವನು ಬ್ರಹ್ಮನು ಸುಳ್ಳು ಹೇಳಿದ್ದಕ್ಕಾಗಿ ಬ್ರಹ್ಮನನ್ನು ಯಾರೂ ಪೂಜಿಸಬಾರದು ಎಂದಾಗಿ ಶಪಿಸುತ್ತಾರೆ. ಅಂತೆಯೇ ಪೂಜೆ ಸಮಯದಲ್ಲಿ ಕೇತಕಿ ಹೂವನ್ನು ಯಾರೂ ಬಳಸಬಾರದು ಎಂಬುದಾಗಿ ಶಾಪವನ್ನೀಯುತ್ತಾರೆ. ಶಿವ-ಸರಸ್ವತಿ ಶಾಪಕ್ಕೆ 'ಬ್ರಹ್ಮನಿಗೆ' ಪೂಜೆಯೇ ನಿಂತು ಹೋಯಿತು! ಮಹಾಶಿವರಾತ್ರಿ ಹಬ್ಬದ ಮಹತ್ವ ಮಹಾಶಿವರಾತ್ರಿಯ ಮಧ್ಯರಾತ್ರಿಯಂದು ಮಹಾದೇವನು ಲಿಂಗ ಸ್ವರೂಪವನ್ನು ಧರಿಸುತ್ತಾರೆ. ಫಲ್ಗಣ ಮಾಸದ 14 ನೇ ಗಾಢ ಮಾಸದಂದು ಇದು ಸಂಭವಿಸುತ್ತದೆ. ಶಿವನು ಪ್ರಥಮ ಬಾರಿ ಲಿಂಗ ರೂಪವನ್ನು ಧರಿಸುವುದು ಎಂಬುದಾಗಿ ಇದನ್ನು ಕಾಣಲಾಗುತ್ತದೆ. ಆ ದಿನವನ್ನೇ ಮಹಾಶಿವರಾತ್ರಿಯಾಗಿ ಆಚರಿಸಲಾಗುತ್ತದೆ. ಈ ದಿನಂದು ಶಿವನನ್ನು ಪೂಜಿಸುವುದು ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿದೆ ಮತ್ತು ಸುಖ ಸಂತೋಷವನ್ನು ತರಲಿದೆ ಎಂಬುದು ಪ್ರತೀತಿಯಾಗಿದೆ. 


ಬಯಲು ಸೀಮೆಯ ಸುಬ್ರಹ್ಮಣ್ಯ ಎಂದೇ ಪ್ರಖ್ಯಾತವಾಗಿರುವ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಸಾಸಲು ಶಂಭುಲಿಂಗೇಶ್ವರ-ಸೋಮೇಶ್ವರ ನಾಗಕ್ಷೇತ್ರದಲ್ಲಿ ಭಕ್ತಸಾಗರವೇ ಹರಿದು ಬಂದಿತ್ತು ಸರ್ಪಸುತ್ತು, ಚರ್ಮವ್ಯಾಧಿ, ಬಂಜೆತನ ನಿವಾರಣೆಗೆ ನಾಗರಹೊನಕ್ಕೆ ಪೂಜೆ ಸಲ್ಲಿಸಿಸಿದರು.

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಬಯಲುಸೀಮೆಯ ಕುಕ್ಕೆ’ ಎಂದೇ ಕರೆಯುವ ಸಾಸಲು ಕ್ಷೇತ್ರದಲ್ಲಿ ಭಕ್ತಸಾಗರವೇ ಹರಿದು ಬಂದಿತ್ತು  ಪವಿತ್ರಕೊಳದಲ್ಲಿ ಮಿಂದು ಸರತಿಯ ಸಾಲಿನಲ್ಲಿ ನಿಂತು ಶಂಭುಲಿಂಗೇಶ್ವರನ ದರ್ಶನ ಭಾಗ್ಯ ಪಡೆದು ನಾಗರಹೊನಕ್ಕೆ ಪೂಜೆ ಸಲ್ಲಿಸಿಸಿದರು.ಈ ಕ್ಷೇತ್ರದಲ್ಲಿ ಭಕ್ತಿ ಹಾಗೂ ಮಹಿಮೆಯ ಆಗರವಾಗಿದೆ. ಸರ್ಪಸುತ್ತು, ಚರ್ಮವ್ಯಾಧಿ, ಬಂಜೆತನ ನಿವಾರಣೆಗೆ ನಂಬುಗೆಯ ದೇವರ ಕ್ಷೇತ್ರ ಇದು. ರಾಜ್ಯವಲ್ಲದೇ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುವುದು ಕ್ಷೇತ್ರದ ಮಹಿಮೆಗೆ ಸಾಕ್ಷಿ.ಚರ್ಮವ್ಯಾಧಿಗೆ ಸಿದ್ಧೌಷಧ ಸಾಸಲು ಕ್ಷೇತ್ರ.

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯುವ ಕಾರ್ತೀಕ ಮಾಸದ ಜಾತ್ರೆ, ಮಹಾಶಿವರಾತ್ರಿ ಪೂಜೆ, ಜೋಡಿ ರಥೋತ್ಸವ, ದೀಪಾವಳಿ ಹಬ್ಬದಲ್ಲಿ ಜರಗುವ ಸಗಣಿ ಹಬ್ಬ, ಕೈಲಾಸ ಬಸವೇಶ್ವರ, ನಿರ್ಮಾಣದ ಹಂತದಲ್ಲಿರುವ ಭೈರವರಾಜರ ಗುಡಿ ಕ್ಷೇತ್ರದ ಪ್ರಮುಖ ಆಕರ್ಷಣೆಗಳಾಗಿವೆ.ಎಲ್ಲ ಧರ್ಮದವರು ದೇಗುಲಕ್ಕೆ ಆಗಮಿಸುವುದು ಇಲ್ಲಿನ ವಿಶೇಷ.ಕ್ಷೇತ್ರದಲ್ಲಿ ದುರ್ಮುಖಿನಾಮನಾಮ ಸಂವತ್ಸರ, ವಸಂತ ಋತುವಿನ ಚೈತ್ರಮಾಸದ ತದಿಗೆ ಯಂದು ಸೋಮೇಶ್ವರ, ಶಂಭುಲಿಂಗೇಶ್ವರ, ಸೋಹೋದರಿ ಕುದುರೆ ಮಂಡಮ್ಮನವರ ಜೋಡಿ ಬ್ರಹ್ಮರಥೋತ್ಸವ ನಡೆಯಲಿದೆ. ರಥದ ಹಿಂದೆ ಸಾಗುವ ಕುರಿಗಳ ಮಂದೆಯ ಸಾಲು, ಹರಕೆ ಹೊತ್ತ ಬಾಯಿಬೀಗ ಭಕ್ತರ ಸಂಗಮ ಜಾತ್ರೆಗೆ ಮತ್ತಷ್ಟು ಮೆರಗು ನೀಡುತ್ತದೆ.

ಸೌರಾಷ್ಟ್ರದಿಂದ ಬಂದು ನೆಲೆಸಿರುವ ಸೋಮೇಶ್ವರ, ಶಂಭುಲಿಂಗೇಶ್ವರ ದೇವರು ಲಿಂಗರೂಪಿಯಾಗಿದ್ದು, ದೇವಾಲಯವು ಕ್ರಿ.ಶ. 1043ರಲ್ಲಿ ಹೊಯ್ಸಳ ದೊರೆ ತ್ರಿಭುವನ ಮಲ್ಲನ ಕಾಲದಲ್ಲಿ ನಿರ್ಮಾನವಾಗಿದೆ.ವರ್ತಕರಾದ ಆದಿಶೆಟ್ಟಿ ಹಾಗೂ ಕೋರಿಶೆಟ್ಟಿ ಮುತ್ತಿನ ವ್ಯಾಪಾರ ಮಾಡುತ್ತಾ ಇಲ್ಲಿಗೆ ಆಗಮಿಸಿದ್ದರು. ಸೌದೆ ಕಡಿಯುವಾಗ ಉದ್ಭವಲಿಂಗಕ್ಕೆ ಪೆಟ್ಟು ಬಿದ್ದು ವರ್ತಕರ ಪರಿವಾರದವರು ಮರಣ ಹೊಂದಿದರು. ನಂತರ ವರ್ತಕರ ಕನಸಿನಲ್ಲಿ ಕಾಣಿಸಿಕೊಂಡ ಶಿವನ ನುಡಿಯಂತೆ ಗುಡಿಯನ್ನುನಿರ್ಮಿಸಿ ಪೂಜಿಸಲು ಮುಂದಾದರು


 

ಪವಾಡ ಸದೃಶ: ದೇಗುಲದ ಬಳಿಯೇ ನಿರ್ಮಿತವಾಗಿರುವ ಕಲ್ಯಾಣಿಯಲ್ಲಿ ಸ್ನಾನ ಮಾಡುವ ಜತೆಗೆ ದೇವಾಲಯದಲ್ಲಿ ನೀಡುವ ಪವಿತ್ರ ವಿಭೂತಿ ಪ್ರಸಾದ ಸ್ವೀಕರಿಸಿದರೆ ಕಜ್ಜಿ, ತುರಿಯಂತಹ ಹಲವು ಚರ್ಮವ್ಯಾಧಿಗಳು ನಿವಾರಣೆಯಾಗಲಿವೆ. ಭೈರವರಾಜ ಜಂಗಮರು ಕೈಲಾಸಕ್ಕೆ ಹೋಗುವಾಗ ಸೋಮೇಶ್ವರ ದೇವಾಲಯದಲ್ಲಿ ಬಿಟ್ಟು ಹೋಗಿರುವ ವಿಭೂತಿ ಘಟ್ಟಿಯನ್ನು ಹಾವು ಕಚ್ಚಿದ ಸ್ಥಳಕ್ಕೆ ಇಟ್ಟಲ್ಲಿ ವಿಷ ನಿವಾರಣೆಯಾಗಲಿದೆ ಎಂಬುದು ನಂಬಿಕೆ.ದೇಗುಲದ ಲಿಂಗದ ಮುಂದೆ ಜೋಡಿ ಬಸವಣ್ಣ ಮೂರ್ತಿ ಇರುವುದು ದೇಗುಲದ ವಿಶೇಷತೆಗಳಲ್ಲಿ ಒಂದು. ಮೇಲುಗಡೆ ದೇವಾಲಯ ಎನ್ನುವ ಶಂಭುಲಿಂಗೇಶ್ವರ ದೇಗುಲದ ಬಳಿ ಇರುವ ನಾಗಬನ, ನಾಗರಕಲ್ಲುಗಳಿವೆ.

ಕೆಲ ಗ್ರಾಮಸ್ಥರು ಮಾತನಾಡಿ ಈ ದೇವಾಲಯು ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು ಇಲ್ಲಿ ಆದಾಯವನ್ನು ಮಾತ್ರ ನೀರಿಕ್ಷೆ ಮಾಡುವ ಮುಜರಾಯಿ ಇಲಾಖೆ ಇಲ್ಲಿಗೆ ಬರುವ ಭಕ್ತರಿಗೆ  ರಾಜಗೋಪುರ, ಸ್ನಾನಘಟ್ಟ, ಯಾತ್ರಿ ನಿವಾಸ, ಉದ್ಯಾನವನ, ನಿತ್ಯ ಅನ್ನದಾಸೋಹ ಕಾರ್ಯಕ್ಕೆಸೂಕ್ತ ವ್ಯವಸ್ತೆ ಕುಡಿಯು ನೀರುಗಳನ್ನು ಒದಗಿಲ್ಲ ಎಂದು ಅಸಕ್ರೋಷ ವ್ಯಕ್ತಪಡಿಸಿದರು.ದೇವಾಲಯಕ್ಕೆ ಬಂದ ಭಕ್ತರಿಗೆ ದಾಸೋಹ ಸಮಿತಿ ವತಿಂದ ಗ್ರಾಮಸ್ಥರಿದ ಸುಮಾರು 50 ಕ್ವೀಟಲ್ ಅನ್ನ ಸಾಂಬಾರ್ ಮಜ್ಜಿಗೆ ತಯಾರಿಸಿ ಭಕ್ತರ ಅಸಿವು ನೀಗಿಸಲಾಯಿತು.

ಯಾವುದೇ ದುರ್ಘಟನೆಗಳು ನೆಡೆಯದಂತೆ ಸರ್ಕಲ್ ಇನ್ಸ್ ಪೆಕ್ಟರ್ ಹೆಚ್.ಬಿ.ವೆಂಕಟೇಶಯ್ಯ, ಕಿಕ್ಕೇರಿ ಪೋಲಿಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಚಂದ್ರಶೇಖರ್, ಸಿಬ್ಬಂದಿ ನಿಂಗರಾಜು ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಿದ್ದರು.ಬಯಲು ಸೀಮೆಯ ಸುಬ್ರಹ್ಮಣ್ಯನ ದರುಶಣ ಪಡೆಯು ಸುಮಾರು 70 ರಂದ 80 ಸಾವಿರ ಜನರು ಭಾಗವಹಿಸಿದ್ದರು.

 

ಇತಿಹಾಸ ಪ್ರಸಿದ್ಧ ಮೇಲುಕೋಟೆಯ ಶ್ರೀಚೆಲುವನಾರಯಣ ಸ್ವಾಮಿಗೆ ವೈರಮುಡಿ ಉತ್ಸವ ,ವೈರಮುಡಿ ಎಂಬುವುದು ವಜ್ರ ಖಚಿತ ಕಿರೀಟವಾಗಿದೆ

Visitors Counter

222487
Today
Yesterday
This Week
This Month
Last Month
All days
273
251
1742
5592
4244
222487

Your IP: 18.117.142.128
2024-04-26 16:31

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles