ಬಯಲುಸೀಮೆಯ ಕುಕ್ಕೆ ಸುಬ್ರಹ್ಮಣ್ಯ ಸಾಸಲು ಶಂಭುಲಿಂಗೇಶ್ವರ-ಸೋಮೇಶ್ವರ ನಾಗಕ್ಷೇತ್ರದಲ್ಲಿ ಭಕ್ತಸಾಗರ.

ಬಯಲು ಸೀಮೆಯ ಸುಬ್ರಹ್ಮಣ್ಯ ಎಂದೇ ಪ್ರಖ್ಯಾತವಾಗಿರುವ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಸಾಸಲು ಶಂಭುಲಿಂಗೇಶ್ವರ-ಸೋಮೇಶ್ವರ ನಾಗಕ್ಷೇತ್ರದಲ್ಲಿ ಭಕ್ತಸಾಗರವೇ ಹರಿದು ಬಂದಿತ್ತು ಸರ್ಪಸುತ್ತು, ಚರ್ಮವ್ಯಾಧಿ, ಬಂಜೆತನ ನಿವಾರಣೆಗೆ ನಾಗರಹೊನಕ್ಕೆ ಪೂಜೆ ಸಲ್ಲಿಸಿಸಿದರು.

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಬಯಲುಸೀಮೆಯ ಕುಕ್ಕೆ’ ಎಂದೇ ಕರೆಯುವ ಸಾಸಲು ಕ್ಷೇತ್ರದಲ್ಲಿ ಭಕ್ತಸಾಗರವೇ ಹರಿದು ಬಂದಿತ್ತು  ಪವಿತ್ರಕೊಳದಲ್ಲಿ ಮಿಂದು ಸರತಿಯ ಸಾಲಿನಲ್ಲಿ ನಿಂತು ಶಂಭುಲಿಂಗೇಶ್ವರನ ದರ್ಶನ ಭಾಗ್ಯ ಪಡೆದು ನಾಗರಹೊನಕ್ಕೆ ಪೂಜೆ ಸಲ್ಲಿಸಿಸಿದರು.ಈ ಕ್ಷೇತ್ರದಲ್ಲಿ ಭಕ್ತಿ ಹಾಗೂ ಮಹಿಮೆಯ ಆಗರವಾಗಿದೆ. ಸರ್ಪಸುತ್ತು, ಚರ್ಮವ್ಯಾಧಿ, ಬಂಜೆತನ ನಿವಾರಣೆಗೆ ನಂಬುಗೆಯ ದೇವರ ಕ್ಷೇತ್ರ ಇದು. ರಾಜ್ಯವಲ್ಲದೇ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುವುದು ಕ್ಷೇತ್ರದ ಮಹಿಮೆಗೆ ಸಾಕ್ಷಿ.ಚರ್ಮವ್ಯಾಧಿಗೆ ಸಿದ್ಧೌಷಧ ಸಾಸಲು ಕ್ಷೇತ್ರ.

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯುವ ಕಾರ್ತೀಕ ಮಾಸದ ಜಾತ್ರೆ, ಮಹಾಶಿವರಾತ್ರಿ ಪೂಜೆ, ಜೋಡಿ ರಥೋತ್ಸವ, ದೀಪಾವಳಿ ಹಬ್ಬದಲ್ಲಿ ಜರಗುವ ಸಗಣಿ ಹಬ್ಬ, ಕೈಲಾಸ ಬಸವೇಶ್ವರ, ನಿರ್ಮಾಣದ ಹಂತದಲ್ಲಿರುವ ಭೈರವರಾಜರ ಗುಡಿ ಕ್ಷೇತ್ರದ ಪ್ರಮುಖ ಆಕರ್ಷಣೆಗಳಾಗಿವೆ.ಎಲ್ಲ ಧರ್ಮದವರು ದೇಗುಲಕ್ಕೆ ಆಗಮಿಸುವುದು ಇಲ್ಲಿನ ವಿಶೇಷ.ಕ್ಷೇತ್ರದಲ್ಲಿ ದುರ್ಮುಖಿನಾಮನಾಮ ಸಂವತ್ಸರ, ವಸಂತ ಋತುವಿನ ಚೈತ್ರಮಾಸದ ತದಿಗೆ ಯಂದು ಸೋಮೇಶ್ವರ, ಶಂಭುಲಿಂಗೇಶ್ವರ, ಸೋಹೋದರಿ ಕುದುರೆ ಮಂಡಮ್ಮನವರ ಜೋಡಿ ಬ್ರಹ್ಮರಥೋತ್ಸವ ನಡೆಯಲಿದೆ. ರಥದ ಹಿಂದೆ ಸಾಗುವ ಕುರಿಗಳ ಮಂದೆಯ ಸಾಲು, ಹರಕೆ ಹೊತ್ತ ಬಾಯಿಬೀಗ ಭಕ್ತರ ಸಂಗಮ ಜಾತ್ರೆಗೆ ಮತ್ತಷ್ಟು ಮೆರಗು ನೀಡುತ್ತದೆ.

ಸೌರಾಷ್ಟ್ರದಿಂದ ಬಂದು ನೆಲೆಸಿರುವ ಸೋಮೇಶ್ವರ, ಶಂಭುಲಿಂಗೇಶ್ವರ ದೇವರು ಲಿಂಗರೂಪಿಯಾಗಿದ್ದು, ದೇವಾಲಯವು ಕ್ರಿ.ಶ. 1043ರಲ್ಲಿ ಹೊಯ್ಸಳ ದೊರೆ ತ್ರಿಭುವನ ಮಲ್ಲನ ಕಾಲದಲ್ಲಿ ನಿರ್ಮಾನವಾಗಿದೆ.ವರ್ತಕರಾದ ಆದಿಶೆಟ್ಟಿ ಹಾಗೂ ಕೋರಿಶೆಟ್ಟಿ ಮುತ್ತಿನ ವ್ಯಾಪಾರ ಮಾಡುತ್ತಾ ಇಲ್ಲಿಗೆ ಆಗಮಿಸಿದ್ದರು. ಸೌದೆ ಕಡಿಯುವಾಗ ಉದ್ಭವಲಿಂಗಕ್ಕೆ ಪೆಟ್ಟು ಬಿದ್ದು ವರ್ತಕರ ಪರಿವಾರದವರು ಮರಣ ಹೊಂದಿದರು. ನಂತರ ವರ್ತಕರ ಕನಸಿನಲ್ಲಿ ಕಾಣಿಸಿಕೊಂಡ ಶಿವನ ನುಡಿಯಂತೆ ಗುಡಿಯನ್ನುನಿರ್ಮಿಸಿ ಪೂಜಿಸಲು ಮುಂದಾದರು


 

ಪವಾಡ ಸದೃಶ: ದೇಗುಲದ ಬಳಿಯೇ ನಿರ್ಮಿತವಾಗಿರುವ ಕಲ್ಯಾಣಿಯಲ್ಲಿ ಸ್ನಾನ ಮಾಡುವ ಜತೆಗೆ ದೇವಾಲಯದಲ್ಲಿ ನೀಡುವ ಪವಿತ್ರ ವಿಭೂತಿ ಪ್ರಸಾದ ಸ್ವೀಕರಿಸಿದರೆ ಕಜ್ಜಿ, ತುರಿಯಂತಹ ಹಲವು ಚರ್ಮವ್ಯಾಧಿಗಳು ನಿವಾರಣೆಯಾಗಲಿವೆ. ಭೈರವರಾಜ ಜಂಗಮರು ಕೈಲಾಸಕ್ಕೆ ಹೋಗುವಾಗ ಸೋಮೇಶ್ವರ ದೇವಾಲಯದಲ್ಲಿ ಬಿಟ್ಟು ಹೋಗಿರುವ ವಿಭೂತಿ ಘಟ್ಟಿಯನ್ನು ಹಾವು ಕಚ್ಚಿದ ಸ್ಥಳಕ್ಕೆ ಇಟ್ಟಲ್ಲಿ ವಿಷ ನಿವಾರಣೆಯಾಗಲಿದೆ ಎಂಬುದು ನಂಬಿಕೆ.ದೇಗುಲದ ಲಿಂಗದ ಮುಂದೆ ಜೋಡಿ ಬಸವಣ್ಣ ಮೂರ್ತಿ ಇರುವುದು ದೇಗುಲದ ವಿಶೇಷತೆಗಳಲ್ಲಿ ಒಂದು. ಮೇಲುಗಡೆ ದೇವಾಲಯ ಎನ್ನುವ ಶಂಭುಲಿಂಗೇಶ್ವರ ದೇಗುಲದ ಬಳಿ ಇರುವ ನಾಗಬನ, ನಾಗರಕಲ್ಲುಗಳಿವೆ.

ಕೆಲ ಗ್ರಾಮಸ್ಥರು ಮಾತನಾಡಿ ಈ ದೇವಾಲಯು ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು ಇಲ್ಲಿ ಆದಾಯವನ್ನು ಮಾತ್ರ ನೀರಿಕ್ಷೆ ಮಾಡುವ ಮುಜರಾಯಿ ಇಲಾಖೆ ಇಲ್ಲಿಗೆ ಬರುವ ಭಕ್ತರಿಗೆ  ರಾಜಗೋಪುರ, ಸ್ನಾನಘಟ್ಟ, ಯಾತ್ರಿ ನಿವಾಸ, ಉದ್ಯಾನವನ, ನಿತ್ಯ ಅನ್ನದಾಸೋಹ ಕಾರ್ಯಕ್ಕೆಸೂಕ್ತ ವ್ಯವಸ್ತೆ ಕುಡಿಯು ನೀರುಗಳನ್ನು ಒದಗಿಲ್ಲ ಎಂದು ಅಸಕ್ರೋಷ ವ್ಯಕ್ತಪಡಿಸಿದರು.ದೇವಾಲಯಕ್ಕೆ ಬಂದ ಭಕ್ತರಿಗೆ ದಾಸೋಹ ಸಮಿತಿ ವತಿಂದ ಗ್ರಾಮಸ್ಥರಿದ ಸುಮಾರು 50 ಕ್ವೀಟಲ್ ಅನ್ನ ಸಾಂಬಾರ್ ಮಜ್ಜಿಗೆ ತಯಾರಿಸಿ ಭಕ್ತರ ಅಸಿವು ನೀಗಿಸಲಾಯಿತು.

ಯಾವುದೇ ದುರ್ಘಟನೆಗಳು ನೆಡೆಯದಂತೆ ಸರ್ಕಲ್ ಇನ್ಸ್ ಪೆಕ್ಟರ್ ಹೆಚ್.ಬಿ.ವೆಂಕಟೇಶಯ್ಯ, ಕಿಕ್ಕೇರಿ ಪೋಲಿಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಚಂದ್ರಶೇಖರ್, ಸಿಬ್ಬಂದಿ ನಿಂಗರಾಜು ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಿದ್ದರು.ಬಯಲು ಸೀಮೆಯ ಸುಬ್ರಹ್ಮಣ್ಯನ ದರುಶಣ ಪಡೆಯು ಸುಮಾರು 70 ರಂದ 80 ಸಾವಿರ ಜನರು ಭಾಗವಹಿಸಿದ್ದರು.

 

Share this article

About Author

Madhu
Leave a comment

Write your comments

Visitors Counter

221866
Today
Yesterday
This Week
This Month
Last Month
All days
231
682
1121
4971
4244
221866

Your IP: 3.16.81.94
2024-04-24 20:33

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles