Rate this item
(0 votes)

ಸಮಾಜ ಸೇವಕ ಹೆಚ್ ಬಿ ಮಂಜುನಾಥ್ ಮತ್ತು ಜಯ ಕರ್ನಾಟಕ, ಅಟೊ ಚಾಲಕರು ಮತ್ತು ಇನ್ನಿತರ ಸಂಘಟನೆಗಳಿಂದ ಪ್ರತಿಭಟನೆ

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ಶತಮಾನದ ಶಾಲೆಯ ದುರಸ್ತಿ ಕಾಮಗಾರಿಯಲ್ಲಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಸಮಾಜ ಸೇವಕ ಹೆಚ್ ಬಿ ಮಂಜುನಾಥ್ ಮತ್ತು ಜಯ ಕರ್ನಾಟಕ, ಅಟೊ ಚಾಲಕರು ಮತ್ತು ಇನ್ನಿತರ ಸಂಘಟನೆ ಮತ್ತು ಸಂಘಟನೆಗಳಿಂದ ಪ್ರತಿಭಟನೆ .ಒಂದೇ ಕಾಮಗಾರಿ ಎರಡು ಕಡೆಗಳಿಂದ ಹಣ ಬಿಡುಗಡೆ ಮಾಡಿರುವ ಆರೋಪ.ಮಕ್ಕಳ ಪೋಷಕರಿಂದ ಸಹ ಹಣ ವಸೂಲಿ ಮಾಡಿರುವ ಆರೋಪ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿ ಹಣ ದುರುಪಯೋಗ ಮಾಡಿದ್ದಾರೆ ಎಂದು ಆರೋಪ.ಒಟ್ಟು ಐದು ಲಕ್ಷದ ಐವತ್ತು ಸಾವಿರ ರೂಪಾಯಿ ದುರ್ಬಳಕೆ ಮಾಡಿಕೊಂಡದ್ದಾರೆ ಎಂದು ಸಮಾಜ ಸೇವಕ ಹೆಚ್ ಬಿ ಮಂಜುನಾಥ್  ನೇರವಾಗಿ ಆರೋಪ ಮಾಡಿದರು.ಅವರ ಏಕಾಂಗಿಯಾದ ಹೋರಾಟಕ್ಕೆ ಜಯ ಕರ್ನಾಟಕ, ಅಟೊ ಚಾಲಕರು ಮತ್ತು ಇನ್ನಿತರ ಸಂಘಟನೆಗಳು ಬೆಂಬಲ ನೀಡಿವೆ.ಅಕ್ರಮವಾಗಿ ಹಣ ದುರುಪಯೋಗ ಮಾಡಿಕೊಂಡಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಶಾಂತಿಯುತ ದರಣಿ ಮಾಡಿದರು.ಅ ವ್ಯಕ್ತಿ ಗಳ ಮೇಲೆ ಕ್ರಮಜರುಗಿಸತ್ತಾರ ಕಾದು ನೋಡಬೇಕಿದೆ‌.

Last modified on Monday, 06 August 2018 10:14
Rate this item
(0 votes)

ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ನಿಲ್ಲದ ಚಿರತೆದಾಳಿ ಹಸುವನ್ನು ತಿಂದ ಚಿರತೆ...

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಗೊರವಿಯಲ್ಲಿ ಘಟನೆ.ಗೊರವಿ ಗ್ರಾಮದ ಹರಿಗೌಡರ ಮಗ ಬಲರಾಮೇಗೌಡರಿಗೇ ಸೇರಿದ ಹಸುವನ್ನು ತಿಂದು ಹಾಕಿರುವ ಚಿರತೆ.ಇವರು ತೋಟದ ಮನೆಯಲ್ಲಿ ವಾಸಮಾಡುತ್ತಿದ್ದು ಹಸುವನ್ನು ಹೊರಭಾಗದಲ್ಲಿ ಕಟ್ಟಿಹಾಕ್ಕಿದ್ದರು.ರಾತ್ರಿ ಹನ್ನೆರಡು ಗಂಟೆ ಸಮಯದಲ್ಲಿ ಚಿರತೆ ಕೂಗುವ ದ್ವನಿ ಕೇಳಿ ಭಯಬೀತರಾಗಿ ಮಲಗಿದ್ದಾರೆ. ಬೆಳ್ಳಿಗೆ ನೋಡಿದರೆ ಹಸುವನ್ನು ತಿಂದು ಹಾಕಿರುವ ಚಿರತೆ ,ರಾತ್ರಿ ಮನೆಯಿಂದ ಹಸುವನ್ನು ಎಳೆದ್ಯೊದಿರುವ ಚಿರತೆ ಜಮೀನಿನ ಪಕ್ಕದಲ್ಲಿ ಹಸುವನ್ನು ತಿಂದು ಹಾಕಿದೆ.

ಗ್ರಾಮಸ್ಥರಲ್ಲಿ ಭಯದವಾತವರಣ ಚಿರತೆಯನ್ನು ಸೇರೆ ಹೀಡಿಯುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಇನ್ನೂ ಸ್ಥಳಕ್ಕೆ ಭೇಟಿ ನೀಡದ ಅರಣ್ಯಧಿಕಾರಿಗಳು.ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 ‌

 

 

 

 

 

Last modified on Monday, 06 August 2018 02:39

ಕೂದಲು ಉದುರುವುದು, ಸೀಳು ಕೂದಲು, ಕೂದಲು ತುಂಡಾಗುವಿಕೆ ಮೊದಲಾದ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ .

ದಟ್ಟವಾದ ಕಪ್ಪಗಿನ ಹೊಳೆಯುವ ಕೂದಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಪ್ರತಿಯೊಬ್ಬ ಮಹಿಳೆಯ ಕನಸೂ ಕೂಡ ಉದ್ದನೆಯ ದಪ್ಪನೆಯ ಕೂದಲನ್ನು ಪಡೆಯುವುದಾಗಿದೆ. ಹೊಳಪಿನ ಕೂದಲು ಪಡೆಯ ಬೇಕೆಂದು ಎಲ್ಲ ಹೆಂಗಸರೂ ಕಸರತ್ತು ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಬರುವ ವಿಧ ವಿಧ ಕೇಶ ತೈಲಗಳು ಆಯುರ್ವೇದಿಕ್ ಮನೆ ಮದ್ದುಗಳನ್ನು ಬಳಸಿ ದಪ್ಪನೆಯ ಕೂದಲು ಪಡೆಯುವ ಮಹದಾಸೆಯನ್ನು ಹೊಂದಿರುತ್ತಾರೆ. ಆದರೆ ಎಷ್ಟೇ ಕರಾಮತ್ತು ಮಾಡಿದರೂ ಧೂಳು, ವಾಯುಮಾಲಿನ್ಯ ಮೊದಲಾದ ಕಾರಣಗಳಿಂದ ಕೂದಲು ತನ್ನ ಸ್ವಾಸ್ಥ್ಯವನ್ನು ಕಳೆದುಕೊಳ್ಳುತ್ತದೆ.

ಕೂದಲು ಉದುರುವುದು, ಸೀಳು ಕೂದಲು, ಕೂದಲು ತುಂಡಾಗುವಿಕೆ ಮೊದಲಾದ ಸಮಸ್ಯೆಗಳಿಗೆ ಇಂದಿನ ಹೆಚ್ಚಿನ ಮಹಿಳೆಯರು ಒಳಗಾಗುತ್ತಿದ್ದಾರೆ. ಅದರಲ್ಲೂ ಒಣ ಕೂದಲು ಪ್ರತಿಯೊಬ್ಬ ಮಹಿಳೆಯರನ್ನು ಕಾಡುತ್ತಿರುವ ಸಮಸ್ಯೆಯಾಗಿದ್ದು ವಾತಾವರಣದಲ್ಲಿರುವ ಧೂಳು, ರಾಸಾಯನಿಕಗಳಿಂದ ಈ ಸಮಸ್ಯೆಗಳು ಹೆಚ್ಚಾಗಿ ತಲೆದೋರುತ್ತಿದೆ. ಸೂರ್ಯನ ಬಿಸಿಲಿಗೆ ಹೆಚ್ಚು ಓಡಾಡುವುದು, ರಾಸಾಯನಿಕಗಳ ಬಳಕೆ, ರಾಸಾಯನಿಕ ಪರಿಕರಗಳಾದ ಸ್ಟ್ರೇಟನರ್, ಕೂದಲು ಒಣಗಿಸುವ ಯಂತ್ರ, ಕೂದಲನ್ನು ನೇರವಾಗಿಸುವ ಇಲ್ಲವೇ ಗುಂಗುರಾಗಿಸುವ ಯಂತ್ರಗಳ ಬಳಕೆ ಇದರಿಂದ ಕೂದಲು ಬೇಗನೇ ಹಾನಿಗೆ ಒಳಗಾಗುತ್ತದೆ. ಕಚೇರಿಗೆ ಹೋಗುತ್ತಿರುವ ಸ್ತ್ರೀಯರಾಗಿದ್ದಲ್ಲಿ ಯಾವಾಗಲೂ ಕೂದಲಿಗೆ ಪೋಷಣೆ ಮಾಡುವುದು ಕಷ್ಟದ ಕೆಲಸವೇ. ಅದಾಗ್ಯೂ ವಾರಾಂತ್ಯದಲ್ಲಿ ನಿಮ್ಮ ಕೂದಲಿನ ಪೋಷಣೆಗಾಗಿ ನೀವು ಸಮಯವನ್ನು ವಿನಿಯೋಗಿಸಬೇಕು.

ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಹೇರ್ ಪ್ಯಾಕ್ ನಿಮ್ಮ ಒಣ ಮತ್ತು ಶುಷ್ಕ ಕೂದಲಿನ ಸಮಸ್ಯೆಯನ್ನು ಚಿಟಿಕೆಯಲ್ಲಿ ನಿವಾರಿಸಲಿದೆ. ಬಾಳೆಹಣ್ಣು ಮತ್ತು ಲಿಂಬೆ ಬೆರೆಸಿ ಮಾಡುವ ಈ ಹೇರ್ ಪ್ಯಾಕ್ ಸಾಕಷ್ಟು ಪ್ರಮಾಣದ ಪ್ರೊಟೀನ್ ಮತ್ತು ವಿಟಮಿನ್‌ಗಳನ್ನು ಒಳಗೊಂಡಿದ್ದು ನಿಮ್ಮ ಕೂದಲನ್ನು ನಯ ಮತ್ತು ಮೃದುವಾಗಿಸುತ್ತದೆ. ಈ ಎರಡೂ ಸಾಮಾಗ್ರಿಗಳನ್ನು ಬಳಸಿಕೊಂಡು ಅತ್ಯದ್ಭುತವಾದ ಹೇರ್ ಮಾಸ್ಕ್ ಅನ್ನು ತಯಾರಿಸುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.

ಬೇಕಾಗಿರುವ ಸಾಮಾಗ್ರಿಗಳೇನು?

1 ಬಾಳೆಹಣ್ಣು
1 ಲಿಂಬೆ
1 ಚಮಚ ತೆಂಗಿನೆಣ್ಣೆ

ಸಿದ್ಧಪಡಿಸುವುದು ಹೇಗೆ?

ಮೊದಲಿಗೆ ಬಾಳೆಹಣ್ಣನ್ನು ಮೃದುವಾಗಿಸಿ ಪೇಸ್ಟ್ ತಯಾರಿಸಿಕೊಳ್ಳ

ಇದಕ್ಕೆ ಲಿಂಬೆ ರಸವನ್ನು ಸೇರಿಸಿ ಮಿಶ್ರ ಮಾಡಿ

ಈ ಮಿಶ್ರಣಕ್ಕೆ ತೆಂಗಿನೆಣ್ಣೆಯನ್ನು ಸೇರಿಸಿ

ತೆಂಗಿನೆಣ್ಣೆ ಗಟ್ಟಿಯಾಗಿದ್ದರೆ ಅದನ್ನು ಬಿಸಿ ಮಾಡಿಕೊಂಡು ದ್ರವರೂಪವನ್ನಾಗಿ ಮಾಡಿ.

ಹಚ್ಚುವುದು ಹೇಗೆ?

1. ಮೊದಲಿಗೆ ಕೂದಲನ್ನು ದೈನಂದಿನ ಶಾಂಪೂ ಬಳಸಿ ತೊಳೆದುಕೊಳ್ಳಿ

2. ಈಗ ಕೂದಲನ್ನು ಭಾಗಗಳನ್ನಾಗಿ ಮಾಡಿಕೊಂಡು ಕೂದಲಿನ ಬುಡದಿಂದ ತುದಿಯವರೆಗೆ ಮಾಸ್ಕ್ ಹಚ್ಚಿ

3. 45 ನಿಮಿಷಗಳ ಕಾಲ ಹಾಗೆಯೇ ಬಿಡಿ

4. ಶವರ್ ಕ್ಯಾಪ್ ಬಳಸಿಕೊಂಡು ಕೂದಲನ್ನು ಕವರ್ ಮಾಡಿ

5. 45 ನಿಮಿಷದ ನಂತರ ಕೂದಲನ್ನು ತೊಳೆದುಕೊಳ್ಳಿ

6. ವಾರದಲ್ಲಿ 2-3 ಬಾರಿ ಈ ಮಾಸ್ಕ್ ಹಚ್ಚಿಕೊಂಡು ಉತ್ತಮ ಫಲಿತಾಂಶ ಪಡೆದುಕೊಳ್ಳಬಹುದಾಗಿದೆ.

ಬಾಳೆಹಣ್ಣಿನ ಪ್ರಯೋಜನ

ನಿಸರ್ಗ ಪ್ರತಿ ಹಣ್ಣು ತರಕಾರಿಯಲ್ಲಿಯೂ ಪ್ರತ್ಯೇಕವಾದ ಪೋಷಕಾಂಶಗಳನ್ನು ನೀಡಿದೆ. ಆದರೆ ನಮ್ಮ ಆರೋಗ್ಯಕ್ಕೆ ಪೂರಕವಾಗುವಂತಹ ಬಹುತೇಕ ಎಲ್ಲವನ್ನೂ ಕೆಲವು ಹಣ್ಣು ತರಕಾರಿಗಳಲ್ಲಿ ಮಾತ್ರ ಇರಿಸಿದೆ. ಬಾಳೆಹಣ್ಣು ಕೂಡ ಇಂತಹ ಒಂದು ಹಣ್ಣಾಗಿದ್ದು ಇದರಲ್ಲಿ ಉತ್ತಮ ಪ್ರಮಾಣದ ವಿಟಮಿನ್ನುಗಳು, ಪೊಟ್ಯಾಶಿಯಂ, ಕರಗುವ ನಾರು ಮತ್ತು ನೈಸರ್ಗಿಕ ಸಕ್ಕರೆ ಇದೆ. ಇಷ್ಟೆಲ್ಲಾ ಗುಣಗಳನ್ನು ಹೊಂದಿರುವ ಬಾಳೆಹಣ್ಣು, ಕೇವಲ ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯದ ವಿಷಯದಲ್ಲೂ ತಾನೂ ಏನು ಕಡಿಮೆ ಇಲ್ಲ ಎಂಬುದನ್ನು ಈಗಾಗಲೇ ಸಾಬೀತು ಪಡಿಸಿದೆ! ಹೌದು, ಬಾಳೆಹಣ್ಣಿನಿಂದ ಕೂಡ ಕೂದಲು ಹಾಗೂ ತ್ವಚೆಯ ಸೌಂದರ್ಯವನ್ನು ವೃದ್ಧಿಸಬಹುದು... ಕೂದಲು ಉತ್ತಮವಾಗಿ ಬೆಳೆಯಲು ಬಾಳೆಹಣ್ಣು ಸಹಕಾರಿಯಾಗಲಿದೆ. ಕೂದಲಿನ ಸೀಳು ತುದಿಯನ್ನು ನಿವಾರಿಸಿ ನಿಮ್ಮ ಕೂದಲನ್ನು ರೇಷ್ಮೆಯಂತೆ ಮೃದುವಾಗಿಸಲಿದೆ. ವಿಟಮಿನ್ ಎ, ಸಿ ಮತ್ತು ಇ ಬಾಳೆಹಣ್ಣಿನಲ್ಲಿದ್ದು 75% ನೀರನ್ನು ಬಾಳೆಹಣ್ಣು ಹೊಂದಿದೆ. ಇದು ಉತ್ಕರ್ಷಣ ನಿರೋಧಿ ಅಂಶಗಳಿಂದ ಸಮೃದ್ಧವಾಗಿದ್ದು ಪೊಟಾಶಿಯಂ ಅನ್ನು ಒಳಗೊಂಡಿದೆ. ನೀವು ನಿಯಮಿತವಾಗಿ ಬಾಳೆಹಣ್ಣನ್ನು ಕೂದಲಿಗೆ ಹಚ್ಚಿಕೊಂಡರೆ ನಿಮ್ಮ ಕೂದಲು ನಯವಾಗಿ ನುಣುಪಾಗುತ್ತದೆ.

ತೆಂಗಿನೆಣ್ಣೆಯ ಪ್ರಯೋಜನ

ನಮಗೆಲ್ಲರಿಗೂ ಗೊತ್ತಿರುವ ಹಾಗೆ ತಲತಲಾಂತರದಿಂದ ನಮ್ಮ ದೇಶದ ಹೆಂಗಸರು ತೆಂಗಿನೆಣ್ಣೆ ಮೇಲೆ ವಿಶ್ವಾಸವಿಟ್ಟು ಸೌಂದರ್ಯ ಸಾಧನವಾಗಿ ಬಳಸುತ್ತಾ ಬಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ದೇಶದವರೂ ಕೂಡ ಇದರ ಬಳಕೆಯನ್ನು ಶುರು ಮಾಡಿಕೊಂಡಿದ್ದಾರೆ. ಆದರೆ ನಮ್ಮಲ್ಲಿ ಹುಟ್ಟಿದಾಗಿನಿಂದ ಇದರ ಬಳಕೆಯನ್ನು ಕಾಣುತ್ತಾ ಬಂದಿದ್ದೇವೆ. ಪ್ರತಿಯೊಬ್ಬ ಭಾರತೀಯನ ಮನೆಯಲ್ಲೂ ಒಂದು ಜಾರಿನಲ್ಲಿ ಕೊಬ್ಬರಿ ಎಣ್ಣೆಯು ಅವಶ್ಯವಾಗಿ ಕಂಡು ಬರುತ್ತದೆ. ಅದರಲ್ಲಿಯೂ ಹೆಚ್ಚಿನ ಕೂದಲಿಗೆ ಸಂಬಂಧಿತ ಸಮಸ್ಯೆಗಳಿಗೆ ತೆಂಗಿನೆಣ್ಣೆ ಉಪಯೋಗಕಾರಿ. ಇದು ಲ್ಯಾರಿಕ್ ಆ್ಯಸಿಡ್ ಅನ್ನು ಒಳಗೊಂಡಿದ್ದು ತಲೆಹೊಟ್ಟನ್ನು ನಿವಾರಿಸುತ್ತದೆ. ಇದು ಕೂದಲು ಬೆಳವಣಿಗೆಗೆ ಮಾಡಲು ಸಹಕಾರಿಯಾಗಿದೆ. ಮತ್ತು ಕೂದಲನ್ನು ಗಟ್ಟಿಯಾಗಿಸಿ ಕೂದಲಿಗೆ ಕಾಂತಿಯನ್ನು ನೀಡುತ್ತದೆ.

ಲಿಂಬೆ ರಸದ ಪ್ರಯೋಜನ

ನೈಸರ್ಗಿಕವಾಗಿ ದೊರೆಯುವ ತರಕಾರಿ ಹಣ್ಣುಗಳು ಒಂದಿಲ್ಲೊಂದು ವಿಸ್ಮಯಕಾರಿ ಅಂಶಗಳಿಂದ ಸಮ್ಮಿಳಿತವಾಗಿದೆ. ಬರೀ ಸಿಹಿಯಾದ ಹಣ್ಣು ಮತ್ತು ತರಕಾರಿಯಿಂದ ಮಾತ್ರ ಆರೋಗ್ಯವಲ್ಲ. ಹುಳಿ, ಒಗರು, ಕಹಿ ಇರುವ ತರಕಾರಿ ಹಣ್ಣುಗಳೂ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇಂತಹ ತರಕಾರಿ ಹಣ್ಣುಗಳ ದಿನನಿತ್ಯದ ಸೇವನೆಯಿಂದ ನಮಗೆ ಲಾಭವೇ ಹೆಚ್ಚು ಹೊರತು ನಷ್ಟವಲ್ಲ. ಇಂದು ನಾವು ಹೇಳಹೊರಟಿರುವ ಅಂತಹ ತರಕಾರಿ ಹಣ್ಣು ಲಿಂಬೆ ಹಣ್ಣಾಗಿದೆ. ಇದು ಸಿಹಿ ಅಂಶದಿಂದ ಕೂಡಿಲ್ಲದಿದ್ದರೂ ತನ್ನ ಚಮತ್ಕಾರಿ ಆರೋಗ್ಯ ಸುಧಾರಕ ಅಂಶಗಳಿಂದ ಶ್ರೀಮಂತವಾಗಿದೆ. ವಿಟಮಿನ್ ಸಿ ಮತ್ತು ವಿಟಮಿನ್ ಇ ಅನ್ನು ಲಿಂಬೆಯು ಪಡೆದುಕೊಂಡಿದ್ದು ಕೊಲಜನ್ ಉತ್ಪಾದನೆಯು ನಿಮ್ಮ ಕೂದಲನ್ನು ಮೃದುವಾಗಿಸುತ್ತದೆ. ಮತ್ತು ಶುಷ್ಕತೆಯನ್ನು ನಿವಾರಿಸುತ್ತದೆ. ಇದು ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿಫಂಗಲ್ ಎಂದೆನಿಸಿದ್ದು ಯಾವುದೇ ರೀತಿಯ ತಲೆ ತುರಿಕೆ ಇಲ್ಲವೇ ತಲೆಹೊಟ್ಟನ್ನು ನಿವಾರಿಸುತ್ತದೆ. ನಿಮ್ಮ ತಲೆಬುಡವು ಒಮ್ಮೊಮ್ಮೆ ಹೆಚ್ಚುವರಿ ಎಣ್ಣೆಯನ್ನು ಉತ್ಪಾದಿಸುತ್ತದೆ. ಲಿಂಬೆ ರಸ ಈ ಎಣ್ಣೆ ಉತ್ಪಾದನೆಯನ್ನು ನಿಯಂತ್ರಣದಲ್ಲಿರಿಸುತ್ತದೆ.

ನಿಮ್ಮ ಕೂದಲಿಗೆ ಈ ಮಾಸ್ಕ್‌ನಿಂದ ಪ್ರಯೋಜನವೇನು?

ಬಾಳೆಹಣ್ಣು ಮತ್ತು ಲಿಂಬೆಯ ಮಾಸ್ಕ್ ಯಾವುದೇ ರೀತಿಯ ಕೂದಲಿನ ಹಾನಿಯನ್ನು ತಡೆಯುತ್ತದೆ ಮತ್ತು ಕೂದಲಿಗೆ ಪೋಷಣೆಯನ್ನು ಮಾಡಿ ಹೆಚ್ಚುವರಿಯಾಗಿ ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಸಾಕಷ್ಟು ಪ್ರಮಾಣದ ಆ್ಯಮಿನೊ ಆ್ಯಸಿಡ್‌ನ ಸಹಾಯದಿಂದ ಕೂದಲಿನ ಬೆಳವಣಿಗೆಯನ್ನು ಇದು ನಿಯಂತ್ರಿಸುತ್ತದೆ ಮತ್ತು ಕೂದಲು ಉದುರುವುದನ್ನು ತಡೆಯುತ್ತದೆ. ತಲೆಗೂದಲಿನ ನೆರೆತದಂತಹ ಸಮಸ್ಯೆಯಿಂದ ಕೂಡ ಈ ಹೇರ್ ಪ್ಯಾಕ್ ರಕ್ಷಣೆಯನ್ನು ನೀಡುತ್ತದೆ.

Rate this item
(0 votes)

ಬಂಡೂರು ಗ್ರಾಮಪಂಚಾಯಿತಿ ಹಾಗೂ ನರೇಗಾ ಕೂಲಿಗಾರರ ತಂಡ ವತಿಯಿಂದ  ಸ್ವಚ್ಚತಾ ಕಾರ್ಯಕ್ರಮ

ಮಂಡ್ಯ ಜಿಲ್ಲೆಯ ಮಳವಳ್ಳಿಯ ಬಂಡೂರು ಗ್ರಾಮಪಂಚಾಯಿತಿ ಹಾಗೂ ನರೇಗಾ ಕೂಲಿಗಾರರ ತಂಡ ವತಿಯಿಂದ  ಸ್ವಚ್ಚತಾ ಕಾರ್ಯಕ್ರಮವನ್ನು ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮ ಹಾಗೂ ಗಟ್ಟಿಕೊಪ್ಪಲು ಗ್ರಾಮದಲ್ಲಿ ನಡೆಸಲಾಯಿತು.  ಕಾರ್ಯಕ್ರಮವನ್ನು ಬಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ. ನಾಗರಾಜು ಉದ್ಘಾಟಿಸಿದರು  ನಂತರ ಪಿಡಿಒ ಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ಗಳನ್ನು ಪ್ರತಿಯೊಬ್ಬರು  ಕಟ್ಟಿಸಿಕೊಳ್ಳುವಂತೆ  ತಿಳಿಸಿದ ಅವರು ಗ್ರಾಮದ ಪ್ರತಿಯೊಬ್ಬರು ಮನೆ ಮುಂದೆ ಸ್ವಚ್ಚತೆ ಮಾಡಿಕೊಳ್ಳಬೇಕು ಎಂದರು.

ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ  ಹಲವು ಕೂಲಿ ಕೆಲಸಗಳನ್ನು ಮಾಡಿದರೆ  ಹಣವನ್ನು ನೀಡುತ್ತೇವೆ ಎಂದರು.ಕಾರ್ಯಕ್ರಮ ದಲ್ಲಿ ಕೂಲಿಕಾರರ ಸಂಘದ ಅಧ್ಯಕ್ಷ ಶಿವಮಲ್ಲಯ್ಯ, ಮಹದೇವಮ್ಮ. ಸೇರಿದಂತೆ ಮತ್ತಿತ್ತರರು ಇದ್ದರು.

Last modified on Saturday, 04 August 2018 19:20
Rate this item
(0 votes)

ಮಳವಳ್ಳಿ ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಹೊಂಬೇಗೌಡ(65) ಮಂಜಮ್ಮ(55) ಸಾವಿನಲ್ಲೂ ಒಂದಾದ ದಂಪತಿಗಳು

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಅಪರೂಪದ ಒಂದು ಘಟನೆ ನೆಡೆದಿದೆ. ಏನೆಂದರೆ ಪ್ರೀತಿಸುವ ಪ್ರೇಮಿಗಳ ಕೆಲವೊಮ್ಮೆ ಒಟ್ಟಾಗಿ ಮರಣಹೊಂದಿದ ಪ್ರಕರಣಗಳನ್ನು ನೊಡಿರುತ್ತೆವೆ .ಅದರೆ ಇಲ್ಲಿ ತಮ್ಮ ಜೀವನದಲ್ಲಿ ಕಷ್ಟ ಸುಖ ಗಳಲ್ಲಿ ಜೊತೆಯಾಗಿ ಬಾಳಿದ ಆದರ್ಶದಂಪತಿಗಳು ಸಾವಿನ್ನಲು ಸಹ ಜೊತೆಯಾಗಿದ್ದಾರೆ. 

 ಮಳವಳ್ಳಿ ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಹೊಂಬೇಗೌಡ(65) ಮಂಜಮ್ಮ(55) ಸಾವಿನಲ್ಲೂ ಒಂದಾದ ದಂಪತಿಗಳು

ಗ್ರಾಮದ ಹೊಂಬೇಗೌಡ(65) ಮಂಜಮ್ಮ(55) ಸಾವಿನಲ್ಲೂ ಒಂದಾದ ದಂಪತಿಗಳು.ಕಳೆದ ರಾತ್ರಿ 1 ಗಂಟೆ ಸಮಯದಲ್ಲಿ ಹೊಂಬೇಗೌಡ ರವರಿಗೆ ಹೊಟ್ಟೆನೋವು ಕಾಣಿಸಿಕೊಂಡು ತಕ್ಷಣ ಹೊಂಬೇಗೌಡರನ್ನ ಮಳವಳ್ಳಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಕುಟುಂಬದವರು, ಈ ವೇಳೆ ಬಾಯಾರಿಕೆಯಿಂದ ನೀರು ಕೇಳಿದ ಹೊಂಬೇಗೌಡರವರಿಗೆ ಪತ್ನಿಮಂಜಮ್ಮ ನೀರು ಕುಡಿಸಿದತಕ್ಷಣ ಪ್ರಾಣ ಪಕ್ಷಿ ಹಾರಿಹೋಗಿದ್ದು, , ಇದನ್ನು ನೋಡಿದ ಆತನ ಪತ್ನಿ ಮಂಜಮ್ಮ ಸಹ ಎದೆನೋವು ಕಾಣಿಸಿಕೊಂಡು ಸ್ಥಳದಲ್ಲೇಸಾವನ್ನಪ್ಪಿದಾಳೆ.

ಈ ವೇಳೆ ಮಾರ್ಗ ಮಧ್ಯದಲ್ಲೇ ಹೊಂಬೇಗೌಡ ಸಾವು. ಪತಿ ಸತ್ತ ಐದೇ ನಿಮಿಷದಲ್ಲಿ ಪತ್ನಿ ಮಂಜಮ್ಮನೂ ಸಾವು.ಆದರ್ಶ ದಂಪತಿಗಳ ಸಾವಿನಿಂದ ಕಣ್ಣೀರು ಹಾಕುತ್ತಿರುವ ಕುಟುಂಬ. ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ನಡೆದ ಘಟನೆ

ಮದುವೆ ಅನ್ನುವ ಋಣಾನುಬಂಧ ಎನ್ನುತ್ತಾರೆ ಅದು ಎಷ್ಟು ಸತ್ಯವೋ ಗೊತ್ತಿಲ್ಲ ಆದರೆ ಸಾವಿನಲ್ಲೂ  ಒಂದಾದ ದಂಪತಿಗಳ ಆತ್ಮಕ್ಕೆ ಶಾಂತಿಯನ್ನು ಅ ಭಗವಂತ ಕರುಣಿಸಲಿ .

Last modified on Saturday, 04 August 2018 19:19

ಮೂಡ ನಂಬಿಕೆಯನ್ನು ತೂಲಗೀಸಬೇಕೆಂದು ವಿಚಿತ್ರವಾಗಿ ಹಬ್ಬ ಆಚರಣೆ

ನೀವು ಹುಟ್ಟು ಹಬ್ಬವನ್ನು ಹೊಟೇಲ್, ಪ್ಯಾಲೇಸ್, 5ಸ್ಟಾರ್ ಹೊಟೇಲ್ , ಇಲ್ಲವೇ ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಆಚರಣೆ ಮಾಡುವುದು ನೋಡಿರ್ತಿರಾ ಅದರೆ ಇಲ್ಲೊಬ್ಬರೂ ತಮ್ಮ ಹುಟ್ಟು ಹಬ್ಬವನ್ನು ವಿಚಿತ್ರವಾಗಿ ಸ್ಮಶಾನದಲ್ಲಿ ಸಮಾಧಿಗಳ ಮಧ್ಯೆ ಅಚರಿಸಿಕೊಂಡಿದ್ದಾರೆ

ವಿಜಯಪುರದ ಸಿಂದಗಿ ತಾಲೂಕೀನ ಮಲಘಾಣ ಗ್ರಾಮದ ಶರಣು ಬರಗಾಲ್ ಏಂಬ ವ್ಯಕ್ತಿ ಮೂಡನಂಬಿಕೆಯನ್ನೂ ತೊಲಗೀಸಲು ತನ್ನ ಹುಟ್ಟು ಹಬ್ಬವನ್ನ ಸುಡುಗಾಡು ( ಸ್ಮಶಾನ) ದಲ್ಲಿ ಆಚರಿಸಿಕೊಂಡಿದ್ದಾನೆ.ಈ ಕಾರ್ಯಕ್ರಮದಲ್ಲಿ ಸಿಂದಗಿ ತಾಲೂಕಿನ ದಲಿತ ಮುಖಂಡರು ಹಾಗೂ ಮಲಘಾಣ ತಾಲೂಕು ಪಂಚಾಯತ್ ಸದಸ್ಯರಾದ ಶಾಂತಗೌಡ ಬಾಗವಹಿಸಿದ್ದರು.

 ನಮ್ಮ ದೇಶದಲ್ಲಿ ಮೂಡ ನಂಬಿಕೆಯನ್ನು ತೂಲಗೀಸಬೇಕೆಂಬುದು ಸ್ಮಶಾನದಲ್ಲಿಯೆ ಅಡುಗೆ ಮಾಡಿ ಊಟ ಮಾಡಿದರು.

 

Rate this item
(0 votes)

ಕೃಷ್ಣರಾಜಪೇಟೆ ಪಟ್ಟಣದಲ್ಲಿ ನೇಕಾರ ತೊಗಟವೀರ ಕುಲಬಾಂಧವರಿಂದ 8ನೇ ವರ್ಷದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವ.

 ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಇಂದು ವಿಜೃಂಭಣೆಯಿಂದ ತಾಯಿ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವ ನಡೆಯಿತು.ಶ್ರೀ ದೇವಿರಮ್ಮಣ್ಣಿ ಕೆರೆಯಿಂದ ಗಂಗಾಪೂಜೆ ಮಾಡಿ ನಂತರ ಸಕಲ ಪೂಜಾ ವಿಧಿ ವಿಧಾನಗಳೊಂದಿಗೆ ಆರಂಭವಾದ ಕರಗ ಉತ್ಸವ. ಜಾನಪದ ಕಲಾ ಜನಪದ ವೈಭವ ದೊಂದಿಗೆ,ಡೊಳ್ಳು ಕುಣಿತ, ಪೂಜಾ ಮತ್ತು ಪಟ ಕುಣಿತ, ದೇವರಗುಡ್ಡರ ಆಕರ್ಷಕ ನೃತ್ಯದೊಂದಿಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಾಗಿದ ಮೆರವಣಿಗೆಯು ಶ್ರೀ ಚನ್ನಬಸವೇಶ್ವರ ದೇವಸ್ಥಾನದ ಪಕ್ಕದ ರಾಮಮಂದಿರದ ಬಳಿ ಅಂತ್ಯಗೊಂಡಿತು.

ನೇಕಾರ ತೊಗಟವೀರ ಸಮಾಜದ ಜಿಲ್ಲಾಧ್ಯಕ್ಷ ಹಂಸರಮೇಶ್, ರಾಜ್ಯ ತೊಗಟವೀರ ಸಂಘದ ನಿರ್ದೇಶಕ ಕೆ.ಜೆ.ರಾಜಶೇಖರ್, ರಾಜ್ಯ ಯುವಘಟಕದ ಅಧ್ಯಕ್ಷ ಗಜಪಡೆ ಶ್ರೀಧರ್, ಪುರಸಭೆ ಸದಸ್ಯ ಕೆ.ಆರ್.ಹೇಮಂತ್ ಕುಮಾರ್, ತಾ.ಪಂ ಸದಸ್ಯ ರಾಜಾಹುಲಿ ದಿನೇಶ್, ಮುಖಂಡರಾದ ಕೆ.ಆರ್.ಪುಟ್ಟಸ್ವಾಮಿ, ಎಸ್.ಜೆ.ಕುಮಾರಸ್ವಾಮಿ, ಹೊನ್ನಾವರ ಚಂದ್ರಶೇಖರ್, ಕೈಗೋನಹಳ್ಳಿ ಈರಪ್ಪ, ಮಾಸ್ಟರ್ ರಾಮಕೃಷ್ಣ, ಸೇರಿದಂತೆ ಸಾವಿರಾರು ಜನರು ಕರಗ ಮಹೋತ್ಸವದಲ್ಲಿ ಭಾಗವಹಿಸಿದ್ದರು.

Last modified on Saturday, 04 August 2018 19:17
Rate this item
(0 votes)

ಕೆ.ಆರ್.ಪೇಟೆ ತಹಶೀಲ್ದಾರ್ ಮಹೇಶ್ಚಂದ್ರ ಅಪಹರಣ ಶಂಕೆ

ಮಂಡ್ಯ ಜಿಲ್ಲೆಯ, ಕೆಆರ್ ಪೇಟೆ ತಹಸಿಲ್ದಾರ್‌‌ ಮಹೇಶ್ ಚಂದ್ರ ಅಪಹರಣವಾಗಿರುವ ತಹಸಿಲ್ದಾರ್ . ಮೈಸೂರು ಜಿಲ್ಲೆ ಕೆ ಆರ್ ನಗರ ತಾಲೂಕಿನ ಚಿಕ್ಕವಡ್ಡರಗುಡಿ ಗ್ರಾಮದ ಬಳಿ ಘಟನೆ‌. ನಿನ್ನೆ ಎಂದಿನಂತೆ ಕೆ ಆರ್ ಪೇಟೆಯಲ್ಲಿ ಕರ್ತವ್ಯ ಮುಗಿಸಿ ತಮ್ಮ ಗ್ರಾಮಕ್ಕೆ ತೆರಳುವಾಗ ನಿನ್ನೆ ರಾತ್ರಿ ನಡೆದಿರುವ ಘಟನೆ.ತಮ್ಮ ಸ್ವಂತ ಮಾರುತಿ ಓಮಿನಿ( ಕೆ ಎ 41 Ź 1581) ಕಾರಿನಲ್ಲಿ ಮನೆಗೆ ತೆರಳುತ್ತಿರುವಾಗ ಘಟನೆ‌ ,ಮಾರ್ಗ ಮದ್ಯದಲ್ಲಿ ಅವರ ಓಮಿನಿ ಕಾರ್ ಮತ್ತೆ ಷೂಗಳು ಪತ್ತೆಯಾಗಿವೆ.

ಒಂದು ವಾರದಿಂದಷ್ಟೇ ಕೆ.ಆರ್.ಪೇಟೆ ತಹಶೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದ್ದರು ಈ ಹಿಂದೆ ಕೆ.ಆರ್.ನಗರದಲ್ಲಿ ತಹಸಿಲ್ದಾರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.ಕುಟುಂಬದವರು ಕೆ.ಆರ್.ನಗರದಲ್ಲೇ ನೆಲೆಸಿದ್ರು ಹೀಗಾಗಿ ನಿನ್ನೆ ಸಂಜೆ ಕೆ.ಆರ್.ನಗರಕ್ಕೆ ಹೊರಟಿದ್ರು.

 ಸ್ಥಳಕ್ಕೆ ವೃತ್ತ ನಿರೀಕ್ಷಕ ಕೆ,ರಘು, ಸಾಲಿಗ್ರಾಮ ಎಸ್ ಐ ಮಹೇಶ್ ಬೇಟಿ ನೀಡಿ ಸ್ಥಳ ಪರಿಶೀಲಿಸಿದರು.ಸಾಲಿಗ್ರಾಮ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Last modified on Saturday, 04 August 2018 19:16
Rate this item
(0 votes)

ಇಂದು ಕೇಂದ್ರ ರೇಷ್ಮೆ ಮಂಡಳಿಯ ಅಧ್ಯಕ್ಷರೂ  ಕೆ.ಆರ್.ಪೇಟೆಯ ಗವಿಮಠದ ಕೇಂದ್ರ ರೇಷ್ಮೆ ಫಾರಂಗೆ ಬೇಟಿ. 

ಮಂಡ್ಯ ಜಿಲ್ಲೆಯ  ಕೃಷ್ಣರಾಜಪೇಟೆ ತಾಲ್ಲೂಕಿನ ಗವಿಮಠದ ಕೇಂದ್ರ ರೇಷ್ಮೆ ಫಾರಂಗೆ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಅವರು ಇಂದು ಬೇಟಿನೀಡಿದರು.ನಂತರ ಮಾತನಾಡಿ ರೇಷ್ಮೆ ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭವನ್ನು ತಂದುಕೊಡುವ ಬಂಗಾರದ ಬೆಳೆಯಾಗಿದೆ. ರೈತರು ಕಬ್ಬು ಮತ್ತು ಭತ್ತ ಬೆಳೆಯುವುದನ್ನೇ ಬೇಸಾಯವೆನ್ನದೇ ರೇಷ್ಮೆ ಬೆಳೆ ಬೇಸಾಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಿ ಮುನ್ನಡೆಯಬೇಕು ಎಂದು ಮನವಿ ಮಾಡಿದರು.

ನಂತರ ರೇಷ್ಮೆ ಗೂಡಿನ ಬೆಲೆ ಕುಸಿತವು ರೈತರಿಗೆ ತಾತ್ಕಾಲಿಕ ತೊಂದರೆಯಷ್ಟೇ,ಸಧ್ಯದಲ್ಲಿಯೇ ರೇಷ್ಮೆ ಬೆಲೆಯು ಚೇತರಿಕೆಯಾಗುತ್ತಿದ್ದು ರೈತರಿಗೆ ಯಾವುದೇ ನಷ್ಠವಾಗುವುದಿಲ್ಲ.ರೇಷ್ಮೆ ಬೆಳೆಯ ಬೇಸಾಯಕ್ಕೆ ಮಂಡ್ಯ ಜಿಲ್ಲೆಯ ಹವಾಮಾನವು ಸೂಕ್ತವಾಗಿದೆ. ರೇಷ್ಮೆ ಬೇಸಾಯವು ಈಗ ಹೆಚ್ಚು ಸರಳವಾಗಿದ್ದು ಸರ್ಕಾರವು ನೀಡುತ್ತಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಮುನ್ನಡೆಯಬೇಕು ಎಂದು ಹನುಮಂತರಾಯಪ್ಪ ಕರೆ ನೀಡಿದರು.

ಮೈಸೂರು ವಲಯದ ಜಂಟಿನಿರ್ದೇಶಕ ಡಾ.ನಾಯಕ್ ಹಾಗೂ ಮಂಡಳಿಯ ಸದಸ್ಯರು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು...

Last modified on Saturday, 04 August 2018 19:15
Rate this item
(0 votes)

ಕೆ.ಆರ್.ಪೇಟೆ ತಾಲೂಕಿನ ಮಂಡಲಿಕ್ಕನಹಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿ ಚಿರತೆ ದಾಳಿ ನಡೆದಿದೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೆರಿ ಹೋಬಳಿಯ ಮಂಡಲಿಕ್ಕನಹಳ್ಳಿಯಲ್ಳಿ ಘಟನೆ.ರಾಜೇಗೌಡ ಎಂಬುವರಿಗೇ ಸೇರಿದ ಎಮ್ಮೆ ಕರುವನ್ನು ತಿಂದು ಹಾಕಿದೆ.ಅವರ ಫಾರಂ ಹೌಸ್ ಗೇ ನುಗ್ಗಿ ಎಮ್ಮೆ ಕರುವನ್ನು ಎಳೆದೊಯದ್ದ ಚಿರತೆ ಎಮ್ಮೆ ಕರುವನ್ನು ತಿಂದು ಹಾಕಿದೆ.ಚಿರತೆ ದಾಳಿಯಿಂದ ಆತಂಕಕ್ಕೊಳಗಾದ ಗ್ರಾಮಸ್ಥರು,ಚಿರತೆ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಚಿರತೆ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಇನ್ನೂ ಸ್ಥಳಕ್ಕೆ ಭೇಟಿ ನೀಡಿಲ್ಲಾ ಎಂದು ಗ್ರಾಮಸ್ಥರ ಅಕ್ರೊಸ‌..

 

 

Last modified on Saturday, 04 August 2018 19:13
Page 22 of 27

Visitors Counter

225573
Today
Yesterday
This Week
This Month
Last Month
All days
11
304
839
1974
6704
225573

Your IP: 13.58.244.216
2024-05-08 03:14

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles