ಕಪ್ಪಗಿನ ದಟ್ಟವಾದ ಕೂದಲಿಗಾಗಿ ಇಲ್ಲಿದೆ ಸುಲಭವಾದ ಮನೆ ಮದ್ದು

ಕೂದಲು ಉದುರುವುದು, ಸೀಳು ಕೂದಲು, ಕೂದಲು ತುಂಡಾಗುವಿಕೆ ಮೊದಲಾದ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ .

ದಟ್ಟವಾದ ಕಪ್ಪಗಿನ ಹೊಳೆಯುವ ಕೂದಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಪ್ರತಿಯೊಬ್ಬ ಮಹಿಳೆಯ ಕನಸೂ ಕೂಡ ಉದ್ದನೆಯ ದಪ್ಪನೆಯ ಕೂದಲನ್ನು ಪಡೆಯುವುದಾಗಿದೆ. ಹೊಳಪಿನ ಕೂದಲು ಪಡೆಯ ಬೇಕೆಂದು ಎಲ್ಲ ಹೆಂಗಸರೂ ಕಸರತ್ತು ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಬರುವ ವಿಧ ವಿಧ ಕೇಶ ತೈಲಗಳು ಆಯುರ್ವೇದಿಕ್ ಮನೆ ಮದ್ದುಗಳನ್ನು ಬಳಸಿ ದಪ್ಪನೆಯ ಕೂದಲು ಪಡೆಯುವ ಮಹದಾಸೆಯನ್ನು ಹೊಂದಿರುತ್ತಾರೆ. ಆದರೆ ಎಷ್ಟೇ ಕರಾಮತ್ತು ಮಾಡಿದರೂ ಧೂಳು, ವಾಯುಮಾಲಿನ್ಯ ಮೊದಲಾದ ಕಾರಣಗಳಿಂದ ಕೂದಲು ತನ್ನ ಸ್ವಾಸ್ಥ್ಯವನ್ನು ಕಳೆದುಕೊಳ್ಳುತ್ತದೆ.

ಕೂದಲು ಉದುರುವುದು, ಸೀಳು ಕೂದಲು, ಕೂದಲು ತುಂಡಾಗುವಿಕೆ ಮೊದಲಾದ ಸಮಸ್ಯೆಗಳಿಗೆ ಇಂದಿನ ಹೆಚ್ಚಿನ ಮಹಿಳೆಯರು ಒಳಗಾಗುತ್ತಿದ್ದಾರೆ. ಅದರಲ್ಲೂ ಒಣ ಕೂದಲು ಪ್ರತಿಯೊಬ್ಬ ಮಹಿಳೆಯರನ್ನು ಕಾಡುತ್ತಿರುವ ಸಮಸ್ಯೆಯಾಗಿದ್ದು ವಾತಾವರಣದಲ್ಲಿರುವ ಧೂಳು, ರಾಸಾಯನಿಕಗಳಿಂದ ಈ ಸಮಸ್ಯೆಗಳು ಹೆಚ್ಚಾಗಿ ತಲೆದೋರುತ್ತಿದೆ. ಸೂರ್ಯನ ಬಿಸಿಲಿಗೆ ಹೆಚ್ಚು ಓಡಾಡುವುದು, ರಾಸಾಯನಿಕಗಳ ಬಳಕೆ, ರಾಸಾಯನಿಕ ಪರಿಕರಗಳಾದ ಸ್ಟ್ರೇಟನರ್, ಕೂದಲು ಒಣಗಿಸುವ ಯಂತ್ರ, ಕೂದಲನ್ನು ನೇರವಾಗಿಸುವ ಇಲ್ಲವೇ ಗುಂಗುರಾಗಿಸುವ ಯಂತ್ರಗಳ ಬಳಕೆ ಇದರಿಂದ ಕೂದಲು ಬೇಗನೇ ಹಾನಿಗೆ ಒಳಗಾಗುತ್ತದೆ. ಕಚೇರಿಗೆ ಹೋಗುತ್ತಿರುವ ಸ್ತ್ರೀಯರಾಗಿದ್ದಲ್ಲಿ ಯಾವಾಗಲೂ ಕೂದಲಿಗೆ ಪೋಷಣೆ ಮಾಡುವುದು ಕಷ್ಟದ ಕೆಲಸವೇ. ಅದಾಗ್ಯೂ ವಾರಾಂತ್ಯದಲ್ಲಿ ನಿಮ್ಮ ಕೂದಲಿನ ಪೋಷಣೆಗಾಗಿ ನೀವು ಸಮಯವನ್ನು ವಿನಿಯೋಗಿಸಬೇಕು.

ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಹೇರ್ ಪ್ಯಾಕ್ ನಿಮ್ಮ ಒಣ ಮತ್ತು ಶುಷ್ಕ ಕೂದಲಿನ ಸಮಸ್ಯೆಯನ್ನು ಚಿಟಿಕೆಯಲ್ಲಿ ನಿವಾರಿಸಲಿದೆ. ಬಾಳೆಹಣ್ಣು ಮತ್ತು ಲಿಂಬೆ ಬೆರೆಸಿ ಮಾಡುವ ಈ ಹೇರ್ ಪ್ಯಾಕ್ ಸಾಕಷ್ಟು ಪ್ರಮಾಣದ ಪ್ರೊಟೀನ್ ಮತ್ತು ವಿಟಮಿನ್‌ಗಳನ್ನು ಒಳಗೊಂಡಿದ್ದು ನಿಮ್ಮ ಕೂದಲನ್ನು ನಯ ಮತ್ತು ಮೃದುವಾಗಿಸುತ್ತದೆ. ಈ ಎರಡೂ ಸಾಮಾಗ್ರಿಗಳನ್ನು ಬಳಸಿಕೊಂಡು ಅತ್ಯದ್ಭುತವಾದ ಹೇರ್ ಮಾಸ್ಕ್ ಅನ್ನು ತಯಾರಿಸುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.

ಬೇಕಾಗಿರುವ ಸಾಮಾಗ್ರಿಗಳೇನು?

1 ಬಾಳೆಹಣ್ಣು
1 ಲಿಂಬೆ
1 ಚಮಚ ತೆಂಗಿನೆಣ್ಣೆ

ಸಿದ್ಧಪಡಿಸುವುದು ಹೇಗೆ?

ಮೊದಲಿಗೆ ಬಾಳೆಹಣ್ಣನ್ನು ಮೃದುವಾಗಿಸಿ ಪೇಸ್ಟ್ ತಯಾರಿಸಿಕೊಳ್ಳ

ಇದಕ್ಕೆ ಲಿಂಬೆ ರಸವನ್ನು ಸೇರಿಸಿ ಮಿಶ್ರ ಮಾಡಿ

ಈ ಮಿಶ್ರಣಕ್ಕೆ ತೆಂಗಿನೆಣ್ಣೆಯನ್ನು ಸೇರಿಸಿ

ತೆಂಗಿನೆಣ್ಣೆ ಗಟ್ಟಿಯಾಗಿದ್ದರೆ ಅದನ್ನು ಬಿಸಿ ಮಾಡಿಕೊಂಡು ದ್ರವರೂಪವನ್ನಾಗಿ ಮಾಡಿ.

ಹಚ್ಚುವುದು ಹೇಗೆ?

1. ಮೊದಲಿಗೆ ಕೂದಲನ್ನು ದೈನಂದಿನ ಶಾಂಪೂ ಬಳಸಿ ತೊಳೆದುಕೊಳ್ಳಿ

2. ಈಗ ಕೂದಲನ್ನು ಭಾಗಗಳನ್ನಾಗಿ ಮಾಡಿಕೊಂಡು ಕೂದಲಿನ ಬುಡದಿಂದ ತುದಿಯವರೆಗೆ ಮಾಸ್ಕ್ ಹಚ್ಚಿ

3. 45 ನಿಮಿಷಗಳ ಕಾಲ ಹಾಗೆಯೇ ಬಿಡಿ

4. ಶವರ್ ಕ್ಯಾಪ್ ಬಳಸಿಕೊಂಡು ಕೂದಲನ್ನು ಕವರ್ ಮಾಡಿ

5. 45 ನಿಮಿಷದ ನಂತರ ಕೂದಲನ್ನು ತೊಳೆದುಕೊಳ್ಳಿ

6. ವಾರದಲ್ಲಿ 2-3 ಬಾರಿ ಈ ಮಾಸ್ಕ್ ಹಚ್ಚಿಕೊಂಡು ಉತ್ತಮ ಫಲಿತಾಂಶ ಪಡೆದುಕೊಳ್ಳಬಹುದಾಗಿದೆ.

ಬಾಳೆಹಣ್ಣಿನ ಪ್ರಯೋಜನ

ನಿಸರ್ಗ ಪ್ರತಿ ಹಣ್ಣು ತರಕಾರಿಯಲ್ಲಿಯೂ ಪ್ರತ್ಯೇಕವಾದ ಪೋಷಕಾಂಶಗಳನ್ನು ನೀಡಿದೆ. ಆದರೆ ನಮ್ಮ ಆರೋಗ್ಯಕ್ಕೆ ಪೂರಕವಾಗುವಂತಹ ಬಹುತೇಕ ಎಲ್ಲವನ್ನೂ ಕೆಲವು ಹಣ್ಣು ತರಕಾರಿಗಳಲ್ಲಿ ಮಾತ್ರ ಇರಿಸಿದೆ. ಬಾಳೆಹಣ್ಣು ಕೂಡ ಇಂತಹ ಒಂದು ಹಣ್ಣಾಗಿದ್ದು ಇದರಲ್ಲಿ ಉತ್ತಮ ಪ್ರಮಾಣದ ವಿಟಮಿನ್ನುಗಳು, ಪೊಟ್ಯಾಶಿಯಂ, ಕರಗುವ ನಾರು ಮತ್ತು ನೈಸರ್ಗಿಕ ಸಕ್ಕರೆ ಇದೆ. ಇಷ್ಟೆಲ್ಲಾ ಗುಣಗಳನ್ನು ಹೊಂದಿರುವ ಬಾಳೆಹಣ್ಣು, ಕೇವಲ ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯದ ವಿಷಯದಲ್ಲೂ ತಾನೂ ಏನು ಕಡಿಮೆ ಇಲ್ಲ ಎಂಬುದನ್ನು ಈಗಾಗಲೇ ಸಾಬೀತು ಪಡಿಸಿದೆ! ಹೌದು, ಬಾಳೆಹಣ್ಣಿನಿಂದ ಕೂಡ ಕೂದಲು ಹಾಗೂ ತ್ವಚೆಯ ಸೌಂದರ್ಯವನ್ನು ವೃದ್ಧಿಸಬಹುದು... ಕೂದಲು ಉತ್ತಮವಾಗಿ ಬೆಳೆಯಲು ಬಾಳೆಹಣ್ಣು ಸಹಕಾರಿಯಾಗಲಿದೆ. ಕೂದಲಿನ ಸೀಳು ತುದಿಯನ್ನು ನಿವಾರಿಸಿ ನಿಮ್ಮ ಕೂದಲನ್ನು ರೇಷ್ಮೆಯಂತೆ ಮೃದುವಾಗಿಸಲಿದೆ. ವಿಟಮಿನ್ ಎ, ಸಿ ಮತ್ತು ಇ ಬಾಳೆಹಣ್ಣಿನಲ್ಲಿದ್ದು 75% ನೀರನ್ನು ಬಾಳೆಹಣ್ಣು ಹೊಂದಿದೆ. ಇದು ಉತ್ಕರ್ಷಣ ನಿರೋಧಿ ಅಂಶಗಳಿಂದ ಸಮೃದ್ಧವಾಗಿದ್ದು ಪೊಟಾಶಿಯಂ ಅನ್ನು ಒಳಗೊಂಡಿದೆ. ನೀವು ನಿಯಮಿತವಾಗಿ ಬಾಳೆಹಣ್ಣನ್ನು ಕೂದಲಿಗೆ ಹಚ್ಚಿಕೊಂಡರೆ ನಿಮ್ಮ ಕೂದಲು ನಯವಾಗಿ ನುಣುಪಾಗುತ್ತದೆ.

ತೆಂಗಿನೆಣ್ಣೆಯ ಪ್ರಯೋಜನ

ನಮಗೆಲ್ಲರಿಗೂ ಗೊತ್ತಿರುವ ಹಾಗೆ ತಲತಲಾಂತರದಿಂದ ನಮ್ಮ ದೇಶದ ಹೆಂಗಸರು ತೆಂಗಿನೆಣ್ಣೆ ಮೇಲೆ ವಿಶ್ವಾಸವಿಟ್ಟು ಸೌಂದರ್ಯ ಸಾಧನವಾಗಿ ಬಳಸುತ್ತಾ ಬಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ದೇಶದವರೂ ಕೂಡ ಇದರ ಬಳಕೆಯನ್ನು ಶುರು ಮಾಡಿಕೊಂಡಿದ್ದಾರೆ. ಆದರೆ ನಮ್ಮಲ್ಲಿ ಹುಟ್ಟಿದಾಗಿನಿಂದ ಇದರ ಬಳಕೆಯನ್ನು ಕಾಣುತ್ತಾ ಬಂದಿದ್ದೇವೆ. ಪ್ರತಿಯೊಬ್ಬ ಭಾರತೀಯನ ಮನೆಯಲ್ಲೂ ಒಂದು ಜಾರಿನಲ್ಲಿ ಕೊಬ್ಬರಿ ಎಣ್ಣೆಯು ಅವಶ್ಯವಾಗಿ ಕಂಡು ಬರುತ್ತದೆ. ಅದರಲ್ಲಿಯೂ ಹೆಚ್ಚಿನ ಕೂದಲಿಗೆ ಸಂಬಂಧಿತ ಸಮಸ್ಯೆಗಳಿಗೆ ತೆಂಗಿನೆಣ್ಣೆ ಉಪಯೋಗಕಾರಿ. ಇದು ಲ್ಯಾರಿಕ್ ಆ್ಯಸಿಡ್ ಅನ್ನು ಒಳಗೊಂಡಿದ್ದು ತಲೆಹೊಟ್ಟನ್ನು ನಿವಾರಿಸುತ್ತದೆ. ಇದು ಕೂದಲು ಬೆಳವಣಿಗೆಗೆ ಮಾಡಲು ಸಹಕಾರಿಯಾಗಿದೆ. ಮತ್ತು ಕೂದಲನ್ನು ಗಟ್ಟಿಯಾಗಿಸಿ ಕೂದಲಿಗೆ ಕಾಂತಿಯನ್ನು ನೀಡುತ್ತದೆ.

ಲಿಂಬೆ ರಸದ ಪ್ರಯೋಜನ

ನೈಸರ್ಗಿಕವಾಗಿ ದೊರೆಯುವ ತರಕಾರಿ ಹಣ್ಣುಗಳು ಒಂದಿಲ್ಲೊಂದು ವಿಸ್ಮಯಕಾರಿ ಅಂಶಗಳಿಂದ ಸಮ್ಮಿಳಿತವಾಗಿದೆ. ಬರೀ ಸಿಹಿಯಾದ ಹಣ್ಣು ಮತ್ತು ತರಕಾರಿಯಿಂದ ಮಾತ್ರ ಆರೋಗ್ಯವಲ್ಲ. ಹುಳಿ, ಒಗರು, ಕಹಿ ಇರುವ ತರಕಾರಿ ಹಣ್ಣುಗಳೂ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇಂತಹ ತರಕಾರಿ ಹಣ್ಣುಗಳ ದಿನನಿತ್ಯದ ಸೇವನೆಯಿಂದ ನಮಗೆ ಲಾಭವೇ ಹೆಚ್ಚು ಹೊರತು ನಷ್ಟವಲ್ಲ. ಇಂದು ನಾವು ಹೇಳಹೊರಟಿರುವ ಅಂತಹ ತರಕಾರಿ ಹಣ್ಣು ಲಿಂಬೆ ಹಣ್ಣಾಗಿದೆ. ಇದು ಸಿಹಿ ಅಂಶದಿಂದ ಕೂಡಿಲ್ಲದಿದ್ದರೂ ತನ್ನ ಚಮತ್ಕಾರಿ ಆರೋಗ್ಯ ಸುಧಾರಕ ಅಂಶಗಳಿಂದ ಶ್ರೀಮಂತವಾಗಿದೆ. ವಿಟಮಿನ್ ಸಿ ಮತ್ತು ವಿಟಮಿನ್ ಇ ಅನ್ನು ಲಿಂಬೆಯು ಪಡೆದುಕೊಂಡಿದ್ದು ಕೊಲಜನ್ ಉತ್ಪಾದನೆಯು ನಿಮ್ಮ ಕೂದಲನ್ನು ಮೃದುವಾಗಿಸುತ್ತದೆ. ಮತ್ತು ಶುಷ್ಕತೆಯನ್ನು ನಿವಾರಿಸುತ್ತದೆ. ಇದು ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿಫಂಗಲ್ ಎಂದೆನಿಸಿದ್ದು ಯಾವುದೇ ರೀತಿಯ ತಲೆ ತುರಿಕೆ ಇಲ್ಲವೇ ತಲೆಹೊಟ್ಟನ್ನು ನಿವಾರಿಸುತ್ತದೆ. ನಿಮ್ಮ ತಲೆಬುಡವು ಒಮ್ಮೊಮ್ಮೆ ಹೆಚ್ಚುವರಿ ಎಣ್ಣೆಯನ್ನು ಉತ್ಪಾದಿಸುತ್ತದೆ. ಲಿಂಬೆ ರಸ ಈ ಎಣ್ಣೆ ಉತ್ಪಾದನೆಯನ್ನು ನಿಯಂತ್ರಣದಲ್ಲಿರಿಸುತ್ತದೆ.

ನಿಮ್ಮ ಕೂದಲಿಗೆ ಈ ಮಾಸ್ಕ್‌ನಿಂದ ಪ್ರಯೋಜನವೇನು?

ಬಾಳೆಹಣ್ಣು ಮತ್ತು ಲಿಂಬೆಯ ಮಾಸ್ಕ್ ಯಾವುದೇ ರೀತಿಯ ಕೂದಲಿನ ಹಾನಿಯನ್ನು ತಡೆಯುತ್ತದೆ ಮತ್ತು ಕೂದಲಿಗೆ ಪೋಷಣೆಯನ್ನು ಮಾಡಿ ಹೆಚ್ಚುವರಿಯಾಗಿ ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಸಾಕಷ್ಟು ಪ್ರಮಾಣದ ಆ್ಯಮಿನೊ ಆ್ಯಸಿಡ್‌ನ ಸಹಾಯದಿಂದ ಕೂದಲಿನ ಬೆಳವಣಿಗೆಯನ್ನು ಇದು ನಿಯಂತ್ರಿಸುತ್ತದೆ ಮತ್ತು ಕೂದಲು ಉದುರುವುದನ್ನು ತಡೆಯುತ್ತದೆ. ತಲೆಗೂದಲಿನ ನೆರೆತದಂತಹ ಸಮಸ್ಯೆಯಿಂದ ಕೂಡ ಈ ಹೇರ್ ಪ್ಯಾಕ್ ರಕ್ಷಣೆಯನ್ನು ನೀಡುತ್ತದೆ.

Share this article

About Author

Madhu
Leave a comment

Write your comments

Visitors Counter

195936
Today
Yesterday
This Week
This Month
Last Month
All days
192
211
1048
3028
3587
195936

Your IP: 44.200.117.166
2023-09-29 19:47

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles