ಪಟ್ಟಣದ ಶತಮಾನ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಬಿ.ಎಲ್ ದೇವರಾಜ್ ಗೆ ಶಿಷ್ಟಚಾರ ಪಾಲಿಸದ ಹಿನ್ನಲೆ ಶಿಕ್ಷಣ ಇಲಾಖೆಯ ಬಿಇಒಗೆ ನೀವು ಬಿಇಒ ನೇ ಅಲ್ಲ ಎಂದು ಜಿಪಂ ಸದಸ್ಯ ದೇವರಾಜು ಕಿಡಿಕಾರಿದರು.
ಸುದ್ದಿಜಾಲ ಕೆ.ಆರ್.ಪೇಟೆ :ಪಟ್ಟಣದ ಶತಮಾನ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಬುಧವಾರ ೧೦:೩೦ ಕ್ಕೆ ಕಾರ್ಯಕ್ರಮದ ಉದ್ಘಾಟನೆ ಹಮ್ಮಿಕೊಂಡು ಶಾಸಕ ನಾರಾಯಣಗೌಡರನ್ನು ಉದ್ಘಾಟಕರಾಗಿ, ಜಿಪಂ ಸದಸ್ಯರು ಸೇರಿದಂತೆ ಶಿಷ್ಟಚಾರದ ಪ್ರಕಾರ ಹಲವು ಗಣ್ಯರನ್ನು ಅಹ್ವಾನಿಸಲಾಗಿತ್ತು. ಕಾರ್ಯಕ್ರಮಕ್ಕೆ ಜಿ.ಪಂ ಸದಸ್ಯ ದೇವರಾಜು ಸರಿಯಾದ ಸಮಯಕ್ಕೆ ಆಗಮಿಸಿದ್ದರು. ಶಾಸಕ ನಾರಾಯಣಗೌಡ ಬೇರೆ ಕಾರ್ಯಕ್ರಮಗಳ ಹಿನ್ನಲೆ ಸ್ವಲ್ಪ ತಡವಾಗಿ ಬಂದಿದ್ದರಿಂದ ಸ್ವಲ್ಪ ತಡವಾಗಿ ಆಗಮಿಸಿದ್ದರು. ಇದರಿಂದ ದೇವರಾಜು ಕಾರ್ಯಕ್ರಮದಲ್ಲಿ ಸ್ವಲ್ಪ ಸಮಯ ಕಾದಿದ್ದರು. ಶಾಸಕರು ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ನಿರೂಪಣೆ ಮಾಡುತ್ತಿದ್ದ ಶಿಕ್ಷಣ ಸಂಯೋಜಕ ಚಂದ್ರಶೇಖರ್ ಶಾಸಕರನ್ನು ಕಾರ್ಯಕ್ರಮ ಉದ್ದೇಶಿಸಿ ಮಾತನಾಡುವಂತೆ ಕೋರಿದರು. ಶಾಸಕರು ಮಾತನಾಡಿ ಬೇರೆ ಕಾರ್ಯಕ್ರಮವಿದೆ ಎಂದು ವೇದಿಕೆಯಿಂದ ತೆರಳಿದರು. ಶಾಸಕರ ಜತೆಯಲ್ಲಿ ವೇದಿಕೆಯಲ್ಲಿದ್ದ ಹಲವರು ಶಾಸಕರೊಂದಿಗೆ ವೇದಿಕೆಯಿಂದ ನಿರ್ಗಮಿಸಿದರು. ವೇದಿಕೆ ಖಾಲಿ ಆದಂತೆ ಕಂಡ ಪೋಷಕರು ಎದ್ದು ಹೋಗಲು ಆರಂಭಿಸಿದರು. ಇದರಿಂದ ಕುಪಿತಗೊಂಡ ಜಿಪಂ ಸದಸ್ಯ ದೇವರಾಜು ವೇದಿಕೆಯಿಂದ ಕೋಪದಿಂದ ನಿರ್ಗಮಿಸಿದರು. ಬಿಇಒ ರೇವಣ್ಣ ಅವರನ್ನು ತಡಗಟ್ಟಿ ಸಮಾಧಾನ ಮಾಡಲು ಪ್ರಯತ್ನಸಿದರು. ಕೆಲ ಸಮಯ ಇವರಿಬ್ಬರ ನಡುವೆ ಮಾತಿನ ಚಕಾಮುಕಿ ನಡೆಯಿತು. ಬಿಇಒ ಅವರನ್ನು ನೀವು ನನ್ನಾ ಪ್ರಕಾರ ಬಿಇಒ ನೇ ಅಲ್ಲಾ. ಒಂದು ಕಾರ್ಯಕ್ರಮ ಹೇಗೆ ನಡೆಸಬೇಕು ಎಂಬುದು ಗೊತ್ತಿಲ್ಲ. ಕಾರ್ಯಕ್ರಮಕ್ಕೆ ಕರಸಿ ಗಂಟಾನುಗಂಟೆ ಕಾಯಿಸಿ ಸುಮ್ನೇ ಕಳಿಸೊದಾದ್ರೆ. ನಮ್ಮನ್ನ ಏಕೆ ಕರೆಯಬೇಕು ಎಂದು ಪ್ರಶ್ನಿಸಿದರು. ಇದು ನಿರೂಪಕರಿಂದ ತಪ್ಪಾಗಿದೆ ಎಂದು ಹೇಳಿದಾಗ. ದೇವರಾಜು ನಿರೂಪಕ ಶಿಕ್ಷಣ ಸಂಯೋಜಕ ಚಂದ್ರಶೇಖರ್ ವಿರುದ್ಧ ಏಕವಚನದಲ್ಲಿ ಹರಿಹಾಯ್ದರು. ಇದೊಂದು ಬಾರಿಯಲ್ಲ. ಹಲವು ಬಾರಿ ಚಂದ್ರಶೇಖರ್ ಹೀಗೆ ಮಾಡಿದ್ದಾನೆ ಎಂದು ತರಾಟೆಗೆ ತೆಗೆದುಕೊಂಡರು. ಕೆಲ ಸಮಯದ ಬಳಿಕ ಅವರ ಮನವೊಲಿಸಿ ವೇದಿಕೆಯಲ್ಲಿ ಮಾತನಾಡುವಂತೆ ಮನವಿ ಮಾಡಿದರು. ಕಡೆಗೆ ಮಾತನಾಡಿ ಮಕ್ಕಳಿಗೆ ಶುಭಹಾರೈಸಿ ವೇದಿಕೆಯಿಂದ ನಿರ್ಗಮಿಸಿದರು.