ಅಪಘಾತ ದಿಂದ ಸಾವನ್ನಪ್ಪಿದ ಗುತ್ತಿಗೆದಾರ ಶ್ರೀನಿವಾಸ್ ರವರ ಪತ್ನಿ ಸವಿತಾ ರವರಿಗೆ ಗುತ್ತಿಗೆದಾರರ ಸಂಘದ ಕೇಂದ್ರ ಕರ್ಯಾಕಾರಿಣಿ ಸಮಿತಿ ಸದಸ್ಯರಾದ ಕೆಂಪರಾಜು.ಎನ್ ಮಳವಳ್ಳಿ ರವರು ಪರಿಹಾರದ ಚೆಕ್ ವಿತರಣೆ ಮಾಡಿದರು
ನಾಗಮಂಗಲ : ಶ್ರೀ ರಾಮಕೃಷ್ಣ ಎಲೆಕ್ಟ್ರಿಕಲ್ಸ್ ನ N R ಶ್ರೀನಿವಾಸ್ ವಾಹನ ಅಪಘಾತದಿಂದ ಮೃತಪಟ್ಟಿದ್ದರು ಇವರ ಕುಟುಂಬಕ್ಕೆ ವಿದ್ಯುತ್ ಗುತ್ತಿಗೆದಾರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿಯ ಸದ್ಯಸರಾದ ಕೆಂಪರಾಜು .ಎನ್ ಮಳವಳ್ಳಿ ರವರು ಪರಿಹಾರದ ಚೆಕ್ ವಿತರಣೆ ಮಾಡಿದರು.N R ಶ್ರೀನಿವಾಸ್ ರವರ ಮರಣ ಪರಿಹಾರ ಚೆಕ್ ನ್ನು ಅವರ ಪತ್ನಿಯಾದ H.K ಸವಿತಾ ರವರಿಗೆ ನಾಗಮಂಗಲದ ಅವರ ಮನೆಯೆಲ್ಲೇ ಕೆಂದ್ರ ಸಮಿತಿಯ ಸದಸ್ಯರಾದ ಸಂಪತ್ ಕುಮಾರ್ ಸಲಹಾಸಮಿತಿ ಸದಸ್ಯರಾದ ದೇವಿಪ್ರಸಾದ್ ಜಿಲ್ಲಾ ಅಧ್ಯಕ್ಷರಾದ ದಿನೇಶ್ ಎ.ಎನ್ ಹಾಗೂ ಮಂಡ್ಯ ಜಿಲ್ಲೆಯ ಪದಾಧಿಕಾರಿಗಳು ಮತ್ತು ನಾಗಮಂಗಲ ತಾಲ್ಲೂಕಿನ ಗುತ್ತಿಗೆದಾರರ ಸಮ್ಮುಖದಲ್ಲಿ ಕೆಂಪರಾಜ .ಎನ್ ಮಳವಳ್ಳಿ ರವರು ಪರಿಹಾರದ ಚೆಕ್ ಅನ್ನು ಅವರ ಪತ್ನಿ ಸವಿತಾ ರವರಿಗೆ ವಿತರಣೆ ಮಾಡಿದರು.