ನಕಲಿ ವೈದ್ಯ ಅಯುತ್ತು ನಕಲಿ ಶಿಕ್ಷಕ ಅಯುತ್ತು ಇವಾಗ ನಕಲಿ ಲಾಯರ್ ಕಥೆ! ನೀವು ನಕಲು ದಾಖಲೆ ಸೃಷ್ಟಿ ಮಾಡೊ ವಕೀಲರನ್ನು ನೊಡಿರತ್ತಿರಾ ಅದರೆ ಇಲ್ಲಿ ಬರಿ ದಾಖಲೆಗಳು ಮಾತ್ರವಲ್ಲ ವಕೀಲ ನೇ ನಕಲಿ !!!!
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ವಕೀಲರೊಬ್ಬರ ಕಥೆ ಇದು ಮಡವಿನಕೋಡಿ ಗ್ರಾಮದ ಗ್ರಾ.ಪಂ.ನಿವೃತ್ತ ಕಾರ್ಯದರ್ಶಿ ಚಂದ್ರಶೇಖರ್ ಮಗ ಎಂ.ಸಿ. ಪ್ರವೀಣ್ ಕುಮಾರ್ ನಕಲಿ ವಕೀಲ ಅಂತಿಮ ವರ್ಷದ ಪರೀಕ್ಷೆ ಬರೆಯದೆ ಅಂಕಪಟ್ಟಿ ಪಡೆದಿರುವ ಆರೋಪ ಮೈಸೂರು ವಿವಿಯಿಂದ ನಕಲಿ ಪದವಿ ದಾಖಲೆ ವಿತರಣೆ ಮಾಡಲಾಗಿದೆ. ನಕಲಿ ಪದವಿ ಪಡೆದು ತಾಲೂಕಿನ ನ್ಯಾಯಾಲಯದಲ್ಲಿ ವಕೀಲಗಿರಿ ನಡೆಸುತ್ತಿದ್ದರು.ಇವರ ಸಹದ್ಯೋಗಿ ವಕೀಲರಗಳೇ ನಕಲಿ ಪದವಿ ಬಯಲಿಗೆಳೆದಿದ್ದಾರೆ. ಇವರು ೧೯೯೮ ರಲ್ಲಿ ಕಾನೂನು ಪದವಿಗೆ ಸೇರ್ಪಡೆಗೊಂಡಿದ್ದಾರೆ. ನಂತರದಲ್ಲಿ ೨೦೧೫ ರಲ್ಲಿ ಕಾನೂನು ಪದವಿ ಮುಗಿದಿದೆ ಎಂದು ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದಾರೆ ಎಂದು ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ರಾಜೇಶ್ ಆರೋಪಿಸಿದ್ದಾರೆ.ಇವರ ಕಾನೂನು ಪದವಿ ದಾಖಲೆಗಳನ್ನೂ ರಾಜೇಶ್ ನೇತೃತ್ವದಲ್ಲಿ ಹಲವು ವಕೀಲರು ಕಾಲೇಜು ಮತ್ತು ವಿಶ್ವವಿದ್ಯಾನಿಲಯದಲ್ಲಿ ಪಡೆದು ನಂತರ ಇವರು ನಕಲಿ ಕಾನೂನು ಪದವಿ ಅಂಕಪಟ್ಟಿಗಳು ಎಂದು ತಿಳಿದು ಬಂದಿದೆ.
ಇವರ ಮೇಲೆ ಇನ್ನೊಂದು ಆರೋಪ ಸಹ ಇದೆ ನಕಲಿ ದಾಖಲೆ ಜೊತೆಗೆ ಎಸ್.ಸಿ.ಜಾತಿ ಸುಳ್ಳು ದೃಢಿಕರಣ ಪತ್ರ ಪಡೆದಿರುವ ವಕೀಲ ಮೂಲತಃ ಒಕ್ಕಲಿಗ ಜಾತಿಗ ಸೇರಿದ ಇವರು, ಕಾನೂನು ಪದವಿಗೆ ಸೇರಲು ಸುಳ್ಳು ಜಾತಿ ದೃಡಿಕರಣ ಪತ್ರ ನೀಡಿ ದಾಖಲಾಗಿದ್ದಾರೆ ಎಂದು ವಕೀಲ ಜಿ.ಜೆ.ಲೋಕೇಶ್ ಆರೋಪಿಸಿದ್ದಾರೆ. ಈ ಸಂಬಂಧ ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ೪೨೦ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ.ನ್ಯಾಯ ಎಲ್ಲಿದೆ ನ್ಯಾಯ ಕೂಡಿಸುವ ವಕೀಲರೇ ನಕಲಿ ಇನ್ನೂ ನ್ಯಾಯದ ಕಥೆ ದೇವರೆ ಗತಿ....