ಪಾಂಡವಪುರ ತಾಲೂಕಿನ ಸುಂಕಾತೊಣ್ಣೂರು ಗ್ರಾಮದಲ್ಲಿ ಸಾಲಭಾದೆ ತಾಳಲಾರದೇ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಸಾಮೂಹಿಕ ಆತ್ಮಹತ್ಯೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಸುಂಕಾತೊಣ್ಣೂರು ಗ್ರಾಮದಲ್ಲಿ ಸಾಲಭಾದೆ ತಾಳಲಾರದೆ ರೈತ ಕುಟುಂಬ ಆತ್ಮಹತ್ಯೆಗೆ ಶರಣು.ಗ್ರಾಮದ ನಂದೀಶ್ ೩೭ ವರ್ಷ ಮತ್ತು ಹೆಂಡತಿ ಕೋಮಲ ೩೩ ವರ್ಷ. ಮಗ ಮನೋಜ್ ೧೩ ಮಗಳು ಚಂದನ ೧೫ ವರ್ಷ. ಮೂಲತ ಗ್ರಾಮದ ಹೊರಭಾಗದ ಸ್ವಂತ ಜಮೀನಿನಲ್ಲಿ ಮನೆ ನಿರ್ಮಿಸಿ ಅಲ್ಲೇ ವಾಸವಾಗಿದ್ದು, ರಾತ್ರಿ ನಂದೀಶ್ ಮಾಂಸಾಹಾರದಲ್ಲಿ ವಿಷ ಬೆರಸಿ ಎಲ್ಲಾರೂ ಸೇವಿಸಿದಾರೆ ಎಂದು ತಿಳಿದು ಬಂದಿದೆ.ಆಹಾರ ಸೇವಿಸಿದ ಮೇಲೆ ಹೊಟ್ಟೆ ನೋವು ತಾಳಲಾರದೆ ಮನೆಯಿಂದ ಆಚೆ ಬಂದು ನರಳಡಿ ಜೀವ ಬಿಟ್ಟಿದಾರೆ ಎಂದು ತಿಳಿದು ಬಂದಿದೆ.
ನಂದೀಶ್ ಲೇವಾದೇವಿದಾರರ ಬಳಿ ಸೇರಿ ಇತರ ಖಾಸಗಿ ಕಂಪನಿಯಲ್ಲಿ ಸಾಲ ಮಾಡಿ ಹಿಂತಿರುಗಿಸದ ಹಿನ್ನೇಲೆ ಆತ್ಮಹತ್ಯೆ ಮಾಡಿಕೊಂಡಿದಾರೆ ಎಂದು ಹೇಳಲಾಗುತ್ತಿದೆ.ಮುಖ್ಯಮಂತ್ರಿಗಳ ಜನತಾದರ್ಶನದಲ್ಲಿ ಸಾಲಗಾರರಿಂದ ಮುಕ್ತಿ ದೊರಕಿಸಿಕೊಡುವಂತೆ ನಂದೀಶ್ ಮನವಿ ಮಾಡಿದ್ರು.ಬಳಿಕ ಸಿಎಂ ಈ ಸಂಬಂಧ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ನಂತರ ಡಿಸಿ ತಹಸೀಲ್ದಾರ್ ಗೆ ಸೂಕ್ತ ಗಮನಹರಿಸುವಂತೆ ನಿರ್ದೇಶನ ನೀಡಿದ್ದರು. ನಂದೀಶ್ ೧ ಎಕರೆ ಮಾರಾಟ ಮಾಡಿ ಅಲ್ಪಸ್ವಲ್ಪ ಸಾಲ ತೀರಿಸಿದ್ದರು.ಉಳಿದ ಸಾಲಕ್ಕಾಗಿ ಲೇವಾದೇವಿದಾರರಿಂದ ಒತ್ತಡ ಹೆಚ್ಚಾದ ಹಿನ್ನೆಲೆ ಇಷ್ಟಾದರೂ ಪರಿಹಾರ ಸಿಗದ ಕಾರಣ ನಂದೀಶ್ ಕುಟುಂಬ ಊರಿನ ಹೊರಗಡೆ ಮಾಂಸಾಹಾರದಲ್ಲಿ ವಿಷ ಮಿಶ್ರಣ ಮಾಡಿ ಸೇವಿಸಿ ಆತ್ಮಹತ್ಯೆಗೆ ಶರಣು. ಗ್ರಾಮದಲ್ಲಿ ಆವರಿಸಿದ ಸೂತಕದ ಛಾಯೆ.ಇನ್ನು ಈ ಬಗ್ಗೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.