ಡಿ.ಕೆ.ಶಿವಕುಮಾರ್ ಇಡಿ ಕುಣಿಕೆಯಿಂದ ಹೊರ ಬರ್ತಾರೆ... ಅವರ ಮೇಲಿರುವ ಆರೋಪಗಳಿಂದ ಮುಕ್ತರಾಗಿ ಸಧ್ಯವೇ ಹೊರ ಬರ್ತಾರೆ..

.ಡಿ.ಕೆ.ಶಿವಕುಮಾರ್ ನನ್ನ ಆತ್ಮೀಯ ಸ್ನೇಹಿತರು..ಅವರಿಗೆ ಶುಭವಾಗಲಿ ಎಂದು ದಯಾಮಯನಾದ ಭಗವಂತನನ್ನು ಪ್ರಾರ್ಥಿಸುತ್ತೇನೆ...ಅನರ್ಹ ಶಾಸಕ ಡಾ.ನಾರಾಯಣಗೌಡ ವಿಶ್ವಾಸ...ಎಲ್ಲವೂ ಒಳ್ಳೇದಾಗ್ತದೆ...ಶಿವಕುಮಾರ್ ಹವಾಲಾ ಹಣ ಪ್ರಕರಣದಿಂದ ಮುಕ್ತರಾಗ್ತಾರೆ...

Rate this item
(0 votes)

ಮಳವಳ್ಳಿ: ವಿದ್ಯುತ್ ತಂತಿ ತಗಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ ಘಟನೆ ಮಳವಳ್ಳಿತಾಲ್ಲೂಕಿನ ಕಂಸಾಗರ ಗ್ರಾಮದಲ್ಲಿ ನಡೆದಿದೆ

ಮಳವಳ್ಳಿ ತಾಲ್ಲೂಕಿನ ಕಂಸಾಗರ ಗ್ರಾಮದ ಹಾಡ್ಲಿ ಗ್ರಾಮ ಪಂಚಾಯಿತಿ ವಾಟರ್ ಮೆನ್ ಆಗಿ ಕೆಲಸಮಾಡುತ್ತಿದ ಸಿದ್ದರಾಜು(48)ಎಂಬವರು  ಮೃತಪಟ್ಟ ದುದೈವಿ
ಇಂದುಬೆಳಗ್ಗೆ  ನಿತ್ಯ ಕರ್ಮ ಗಳನ್ನು ಮಾಡಲೆಂದು ಜಮೀನಿನ ಬಳಿ ಬಂದಾಗ ವಿದ್ಯುತ್ ತಂತಿ ತಗಲಿ ಸ್ಥಳದಲ್ಲಿ  ಸಾವುನಪ್ಪಿದ್ದಾನೆ.

 ದುರಂತವೆಂದರೆ  ಮೃತ ನ ತಾಯಿ ಕೆಂಪಮ್ಮನವರ ಉತ್ತರಕ್ರಿಯ ಅಧಿಕಾರಿ ಕಾರ್ಯವು ಇಂದೂ ನಡೆಯುತ್ತಿದೆ ಆದರಿಂದ ಇಂದು ಬೆಳಗ್ಗೆ ಜನಗಳನ್ನು ಅಡಿಗೆ ಮನೆ ಹತ್ತಿರ ಬರುವಂತೆ ತಿಳಿಸಿ ಬಯಲು ಶೌಚಾಲಯ ಎಂದು ತೆರಳಿದ್ದಾಗ ಈ ‌ಅವಘಡ ಸಂಭವಿಸಿದೆ. ಈ ವಿಚಾರವಾಗಿ ಜಿಲ್ಲಾ ಪಂಚಾಯತ್ ಸದಸ್ಯ ರವಿ ಮಾತನಾಡಿ ಚೆಸ್ಕಾಂ ಅಧಿಕಾರಿಗಳಿಗೆ ಗ್ರಾಮದಲ್ಲಿ ವಿದ್ಯುತ್ ಕಂಬ ಹಾಗೂ ತಂತಿಗಳು ತುಂಡಾಗಿ ಎಂದು ತಿಳಿಸಿದರು ಇದುವರೆಗೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಅವರ ನಿರ್ಲಕ್ಷ್ಯತೆಯಿಂದ ಈ ಒಂದು ಘಟನೆ ನಡೆದಿದೆ ಆದುದರಿಂದ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದ್ದಾರೆ

ಈ ಸಂಬಂದ ಹಲಗೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಪುತ್ತೂರು: ಹಿಂದೂ ಜಾಗರಣ ವೇದಿಕೆ ತಾಲೂಕು ಕಾರ್ಯದರ್ಶಿಯ ಭರ್ಭರ ಹತ್ಯೆ: ಸಂಪ್ಯ ಪೋಲೀಸ್ ಠಾಣೆಯ ಎದುರಿನ ಗಣೇಶೋತ್ಸವ ಪೆಂಡಲ್ ನಲ್ಲಿ ದುರ್ಘಟನೆ ಪುತ್ತೂರು ಸೆ.4: ಪುತ್ತೂರು ತಾಲೂಕಿನ ಗ್ರಾಮಾಂತರ ಪೋಲೀಸ್ ಠಾಣೆಯಾದ ಸಂಪ್ಯ ಪೋಲೀಸ್ ಠಾಣೆಯ ಎದುರಿನ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿ ಭರ್ಭರ ಹತ್ಯೆ ನಡೆದಿದೆ. ಕೊಲೆಯಾದವರನ್ನು ಪುತ್ತೂರು ಹಿಂದೂ ಜಾಗರಣ ವೇದಿಕೆ ತಾಲೂಕು ಕಾರ್ಯದರ್ಶಿ ಕಾರ್ತಿಕ್ ಮೇರ್ಲ ಎಂದು ಗುರುತಿಸಲಾಗಿದೆ. ಸೆ.3 ರಂದು ಮಧ್ಯರಾತ್ರಿ ಅಂದಾಜು 12 ಗಂಟೆಯ ಸುಮಾರಿಗೆ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದಲ್ಲಿಗೆ ನುಗ್ಗಿದ ದುಷ್ಕರ್ಮಿಗಳು ಕಾರ್ತಿಕ್ ಮೇರ್ಲರ ಎದೆಗೆ ಚೂರಿ ಹಾಕಿದ್ದರೆ. ಕೊಲೆಗೆ ಈ ಹಿಂದಿನ ವೈಷಮ್ಯವೇ ಕಾರಣ ಎಂದು ತಿಳಿದುಬಂದಿದೆ. ಆರೋಪಿಗಳಲ್ಲಿ ಒಬ್ಬನನ್ನು ಬಂದಿಸಿದ್ದು, ಪೋಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಎಸ್ಪಿ ಲಕ್ಷ್ಮೀ ಪ್ರಸಾದ್ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.

Rate this item
(1 Vote)
ಕೆ ಆರ್ ಪೇಟೆ:ಹೇಮಾವತಿ ಎಡದಂಡೆನಾಲೆಯಲ್ಲಿ ಅಪರಿಚಿತ  ಗಂಡಸಿನ ಶವ ಪತ್ತೆ....
 
ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಮಾಚಹಳ್ಳಿ ಬಳಿಯ ನಾಲೆಯಲ್ಲಿ ಸುಮಾರ ನಲವತ್ತು ವರ್ಷದ ಗಂಡಸಿನ ಶವ ತೆಲಿ ಬರುವುದನ್ನು ಕಂಡ ಗ್ರಾಮಸ್ಥರು ಕೂಡಲೇ ಪಟ್ಟಣ ಪೋಲಿಸ್ ಠಾಣೆ ಗೆ ಸುದ್ದಿ ತಿಳಿಸಿದ್ದಾರೆ..
 
ನಂತರ ಪೊಲಿಸ್ ಅಧಿಕಾರಿಗಳು ಶವವನ್ನು ಹೊರತೆಗೆದು ಪಟ್ಟಣದ ಶವಗಾರದಲ್ಲಿ ಇರಿಸಲಾಗಿದೆ..
ಕಪ್ಪು ಬಣ್ಣದ ಪ್ಯಾಂಟ್ ಮತ್ತು ನೀಲಿ ಅಂಗಿಯನ್ನು ದರಿಸಿದ್ದಾರೆ ..
 
Rate this item
(0 votes)
ಮಳವಳ್ಳಿ: ದೇಶ ವ್ಯಾಪ್ತಿ ಸ್ವಚ್ಚಭಾರತ್ ಸ್ವಚ್ಚ ಆಂದೋಲನ ಮಾಡಲು ಹೊರಟಿದೆ  ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ  ಕಸ ವಿಲೇವಾರಿ ಮಾಡುತ್ತಿದ್ದು, ಇದರಿಂದ ಅನೈರ್ಮಲ್ಯ ಉಂಟಾಗುತ್ತದೆ ಅಂದ ಹಾಗೆ ಇದು ಎಲ್ಲಿ ಅಂತಿರಾ ಬನ್ನಿ ನೋಡೋಣ ಈ ಸ್ಟೋರಿಯಾ

ಮಳವಳ್ಳಿತಾಲ್ಲೂಕಿನ ಹಲಗೂರು ಗ್ರಾಮ ವ್ಯಾಪಾರ ವಹಿವಾಟು ಗಳಿಗೆ ಹೆಸರುವಾಸಿ ಸ್ಥಳವಾಗಿ ಆದರೆ ಈ‌ ವಿಲೇವಾರಿಗೆ ನಿರ್ಧಿಷ್ಟ ಜಾಗ ಗುರುತಿಸದ ಮತ್ತು ಎಲ್ಲೆಂದರಲ್ಲಿ ಕಸ ಸುರಿಯುವ ಕಾರಣ ತಾಲೂಕಿನ ಹಲಗೂರು ಗ್ರಾಮ ಮತ್ತು ಸುತ್ತಲಿನ ಪ್ರದೇಶ ಅನೈರ್ಮಲ್ಯದ ತಾಣವಾಗಿವೆ. ಎನ್ನುವುದಕ್ಕೆಈ ಸ್ಥಳವನ್ನು ಕಾಣಬಹುದು
 
 ತೆರವು ಮಾಡಿದ ಕಟ್ಟಡ ಸಾಮಾಗ್ರಿಗಳು, ಚರಂಡಿ ಹೂಳು ಮಣ್ಣು, ಬೇಡವಾದ ನಾಡ ಹೆಂಚು, ಹಾಸಿಗೆ, ಕಲ್ನಾರ್‌ಶೀಟ್‌, ರುಬ್ಬುವ ಕಲ್ಲು, ಪ್ಯಾಕಿಂಗ್‌ ಬಳಸುವ ಥರ್ಮಾಕೋಲ್‌ ಇತರೆ ತ್ಯಾಜ್ಯಗಳನ್ನು ಮನಸೋ ಇಚ್ಚೆ ಬಿಸಾಡಲಾಗಿದೆ
ತ್ಯಾಜ್ಯ ಸುರಿಯುವ ಕಾರಣ ಗ್ರಾಮದ ನಡುವೆ ಹಾದು ಹೋಗಿರುವ ಹಳ್ಳದಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವುದಿಲ್ಲ. ಇಲ್ಲಿ ಗಿಡಗಂಟಿಗಳು ಕಾಡಿನಂತೆ ಬೆಳೆದು ನಿಂತಿವೆ. ಹಂದಿ, ನಾಯಿ ಮತ್ತು ಹಾವು, ಚೇಳುಗಳ ಆಶ್ರಯ ತಾಣವಾಗಿದೆ.
ಗ್ರಾಮದಲ್ಲಿ ಪೌರಕಾರ್ಮಿಕರು ನೆಲೆಸಿದ್ದಾರೆ. ಇವರು ಸ್ವಚ್ಛ ಕಾರ್ಯಕ್ಕಾಗಿ ದುಡಿಯಲು ಸಿದ್ದರಿದ್ದರೂ ಅಗತ್ಯಾನುಸಾರ ನೇಮಕಾತಿ ಮಾಡಿಕೊಳ್ಳಲು ತಾಂತ್ರಿಕ ಕಾರಣ ಅಡ್ಡಿಯಾಗಿದೆ. ನೇಮಕ ಮಾಡಿಕೊಂಡವರಿಗೂ ಗ್ರಾ.ಪಂ ನವರು ಸಕಾಲದಲ್ಲಿ ವೇತನ ಇತರೆ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂಬ ಆರೋಪ ಇದೆ.
 
ಹಲಗೂರು ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಹಾಗೂ ಕೆರೆಯಲ್ಲಿ  ಕಸ ವಿಲೇವಾರಿಯದ್ದೆ ದೊಡ್ಡ ಸಮಸ್ಯೆ. ಗ್ರಾಮದ ಪ್ರವೇಶದ್ವಾರಗಳಲ್ಲಿ ಕಸ ರಾಶಿಯಾಗಿ  ಕೊಳೆತಿರುವ ಕಾರಣ ಮೂಗು ಮುಚ್ಚಿಕೊಂಡು ಓಡಾಡಬೇಕಿದೆ. ಎಲ್ಲ ಕಡೆಗಳಲ್ಲೂ ಕೊಳಕು ವಾತಾವರಣ ಬೇಸರ ಉಂಟುಮಾಡಿದೆ. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ವಿಲೇವಾರಿ ಮಾಡುತ್ತಿರುವುದು ಬೆಸರದ  ವಿಷಯವಾಗಿದೆ ಹಾಗಾಗಿ ಸಂಬಂಧ ಪಟ್ಟ ಅಧಿಕಾರಿಗಳು ,ಜನಪ್ರತಿನಿಧಿಗಳು ಇತ್ತ ಗಮನ ಹರಿಸದಿರುವುದು ತುಂಬಾ ಶೋಚನೀಯ, ಮತ್ತು ಹಲಗೂರು ಕೆರೆಯ ಹೂಳು ತೆಗೆದು ಕೆರೆಯನ್ನು ಅಭಿವೃದ್ಧಿ ಪಡಿಸಿದರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುತ್ತದೆ  ಕೆರೆ ಅಭಿವೃದ್ಧಿ ಪಡಿಸಿ ಈ ಭಾಗದ ರೈತರಿಗೆ ನೆರೆವಾಗಿ ಎಂದು ಕರ್ನಾಟಕ ಬೌದ್ಧ ಸಮಾಜದ ಮುಖಂಡರಾದ ಹೆಚ್ ,ಎನ್.ವೀರಭದ್ರಯ್ಯ ಒತ್ತಾಯಿಸಿದ್ದಾರೆ

ಕಸ ವಿಲೇವಾರಿಗೆ ಸ್ಥಳವಕಾಶ ಕೋರಿ ತಹಸೀಲ್ದಾರ್‌ ಅವರಿಗೆ ಮನವಿ ಸಲ್ಲಿಸಲಾಗಿದೆ. ಇನ್ನೂ ಭೂಮಿ ಕೊಟ್ಟಿಲ್ಲ. ಸಾರ್ವಜನಿಕರು   ಕೆರೆ ಮತ್ತು ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದ  ಜಾಗಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹಲಗೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದರು.
ಸ್ವಚ್ಚತಾ ಬಗ್ಗೆ ಸಾಕಷ್ಟು ಪ್ರಚಾರ ಮಾಡಿದ್ದರೂ ಸಾರ್ವಜನಿಕರು ಹಾಗೂ ಅಂಗಡಿ ಮಾಲೀಕರು ಸಹಕಾರ ನೀಡುತ್ತಿಲ್ಲ ದಯವಿಟ್ಟು ನಮ್ಮ ಗ್ರಾ.ಪಂ ವಾಹನಕ್ಕೆ ಕಸವನ್ನು ಹಾಕುವಂತೆ ಗ್ರಾ.ಪಂ ಪಿಡಿಒ ಸಾರ್ವಜನಿಕರಿಗರ ಮನವಿ ಮಾಡಿಕೊಂಡಿದ್ದಾರೆ

 ಇನ್ನಾದರೂ ಸಂಬಂಧಪಟ್ಟವರು ಹಲಗೂರು ಗ್ರಾಮದಲ್ಲಿ ಸ್ವಚ್ಛ ಕಾರ್ಯ ಕೈಗೊಳ್ಳುವ ಕಡೆಗೆ ಗಮನ ನೀಡುವರೇ ಕಾದು ನೋಡಬೇಕಿದೆ.
Last modified on Tuesday, 03 September 2019 13:28
Rate this item
(0 votes)

ಮಳವಳ್ಳಿ: ಸರ್ಕಾರಿ ಆಸ್ತಿಯನ್ನು ಬೇರೆಯವರಿಗೆ ಖಾತೆ ಮಾಡಿರುವ ಅಧಿಕಾರಗಳ ವಿರುದ್ದ ಹೋರಾಟ ನಡೆಸುತ್ತಿರುವ ಹೋರಾಟಕ್ಕೆ ಸರಿಯಾಗಿ ಕ್ರಮಕೈಗೊಳ್ಳದೇ ಇರುವುದನ್ನು ಮನನೊಂದು ದಯಾಮರಣ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಉಪವಿಭಾಗಾಧಿಕಾರಿಗಳಿಗೆ ಮತ್ತು ತಹಸೀಲ್ದಾರ್ ಗೆ ಮನವಿ ಸಲ್ಲಿಸಿರುವ ಘಟನೆ ಮಳವಳ್ಳಿ ಪಟ್ಟಣದಲ್ಲಿ ನಡೆದಿದೆ.

ಪತ್ರಕರ್ತ ಕೆ.ಎಸ್ ಶಿವಶಂಕರ್ ಎಂಬುವವರೇ ದಯಾಮರಣ ಕೋರಿರುವ ವ್ಯಕ್ತಿ
150 ಕೋಟಿ ಗಿಂತಲೂ ಹೆಚ್ಚು ಸರ್ಕಾರದ ಆಸ್ತಿಗಳು ಅಕ್ರಮಖಾತೆ ಪುರಸಭೆ ಮಾಡಿದೆ. ಉಪವಿಭಾಗಾಧಿಕಾರಿಗಳ ಅನ್ಯಕ್ರಾಂತ ಪ್ರತಿಯನ್ನೇ ತಿದ್ದಿ ಖಾತೆ ಮಾಡಿಸಿರುವ ಆಳತೆಗಿಂತಲೂ ಹೆಚ್ಚು ಮಾರಾಟ ಮಾಡಿರುವ ಬಗ್ಗೆ ದಾಖಲಾತಿ ಸಲ್ಲಿಸಿದ್ದರೂ ಸಹ ಪುರಸಭೆ ಕ್ರಮವಹಿಸದೆ ಕಿರುಕುಳ ನೀಡುತ್ತಿರುವ ಬಗ್ಗೆ ಕ್ರಮ ಕೈಗೊಂಡು 5309/4036 ರ ಅಕ್ರಮ ಖಾತೆಯನ್ನು ರದ್ದು ಮಾಡುವಂತೆ ಕೋರಿದ್ದರೂ ಅಧಿಕಾರಿಗಳು ಪಟ್ಟ ಭದ್ರ ಹಿತಾಸಕ್ತಿಗಳ ಜೊತೆ ಸೇರಿಕೊಂಡು ಕಾನೂನು ಕ್ರಮ ಜರುಗಿಸದೆ ನಮಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿರುವ ಕೆ.ಎಸ್ ಶಿವಶಂಕರ್, ಈ ಬಗ್ಗೆ ಕ್ರಮ‌ಕೈಗೊಳ್ಳುವಂತೆ ಇಲ್ಲದಿದ್ದರೆ ನನಗೆ ದಯಾಮರಣ ನೀಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

ಸುಮಾರು 4 ಪುಟಗಳ ವಿಸ್ಕೃತ ಮಾಹಿತಿ ಹಾಗೂ ಅಕ್ರಮಗಳ ಬಗ್ಗೆ ಸಂಕ್ಷೀಪ್ತವಾಗಿ ದೂರು ಬರೆದು ಜಿಲ್ಲಾಧಿಕಾರಿಗಳಿಗೆ ಉಪವಿಭಾಗಾಧಿಕಾರಿಗಳಿಗೆ ,ತಹಸೀಲ್ದಾರ್ ಗಳಿಗೆ ಹಾಗೂ ಸ್ಥಳೀಯ ಪೊಲೀಸಠಾಣೆಗೂ ದೂರು ನೀಡಿರುವ ಅವರು ಕೂಡಲೇ ಕ್ರಮಕೈಗೊಂಡು ನ್ಯಾಯ ಒದಸುವಂತೆ ಅವರು ಮನವಿಯಲ್ಲಿ ಕೋರಿದ್ದು ಇಲ್ಲವಾದಲ್ಲಿ ನನಗೆ ದಯಾಮರಣ ನೀಡುವಂತೆ ಅವರು ಕೋರಿದ್ದಾರೆ.Last modified on Sunday, 01 September 2019 13:12
Rate this item
(0 votes)

ಮಳವಳ್ಳಿ: ರಾಜ್ಯದಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡುತ್ತಿರುವ ಹಿನ್ನಲೆಯಲ್ಲಿ ಮಳವಳ್ಳಿ ತಾಲ್ಲೂಕಿನ ಮತದಾರರು ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳುವಂತೆ ತಹಸೀಲ್ದಾರ್ ಚಂದ್ರಮೌಳಿ ತಿಳಿಸಿದರು.

ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿಕಚೇರಿ ಮುಂಭಾಗದಲ್ಲಿ ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮದ ಅರಿವು ಜಾಥ ವನ್ನು ಚಾಲನೆ ನೀಡಿ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಹೆಸರು ಕೈ ಬಿಟ್ಟಿದ್ದು, ಅಥವಾ ಹೊಸದಾಗಿ ಸೇರ್ಪಡೆ, ತಿದ್ದುಪಡಿಗಳು ಇದ್ದರೆ ಅದನ್ನು ಪರಿಶೀಲನೆಗೆ ಅರ್ಜಿಯನ್ನು ಸಲ್ಲಿಸಲು ಒಂದು ತಿಂಗಳ ಕಾಲ ಕಾಲಾವಕಾಶವಿದ್ದು, ಇದಲ್ಲದೆ ಬಿಎಲ್ ಓ ಗಳು ಮನೆಮನೆಗೂ ಬೇಟಿ ನೀಡಲಿದ್ದು ಆ ಸಂದರ್ಭದಲ್ಲಿ ಮತದಾರರ ಪರಿಷ್ಕರಣೆ ನಡೆಯಲಿದ್ದು ಇದಕ್ಕೆ ತಾಲ್ಲೂಕಿನ ಎಲ್ಲಾ ಮತದಾರರು ಸಹಕಾರ ನೀಡಬೇಕೆಂದು ಮನವಿ ಮಾಡಿದರು . ಬಳಿಕ ಪಟ್ಟಣದ ಪ್ರಮುಖಬೀದಿಗಳಲ್ಲಿ ಮತದಾರ ಪರಿಷ್ಕರಣೆ ಬಗ್ಗೆ ಭೀತಿಪತ್ರ ಪ್ರದರ್ಶನ ನಡೆಸಿ ಜಾಥ ನಡೆಸಲಾಯಿತು.

ಇನ್ನೂ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಇಒ ಸತೀಸ್, ಶಿರಸ್ತೇದಾರ್ ಚನ್ನ ವೀರಭದ್ರಯ್ಯ,ಕುಮಾರ್, ಪುರಸಭೆ ಮುಖ್ಯಾಧಿಕಾರಿ ಗಂಗಾಧರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಸೇರಿದಂತೆ ತಾಲ್ಲೂಕಿನ ಗ್ರಾಮಲೆಕ್ಕಿಗರು, ರಾಜಸ್ಥ ನಿರೀಕ್ಷಕರು, ಪಿಡಿಒ, ಶಿಕ್ಷಕರವೃಂದ, ಪುರಸಭೆ ನೌಕರರು, ತಾಲ್ಲೂಕು ಕಚೇರಿಯ ಸಿಬ್ಬಂದಿಗಳು ಸೇರಿದಂತೆ ಮತ್ತಿತ್ತರರು ಇದ್ದರು.

Last modified on Sunday, 01 September 2019 12:42
Rate this item
(0 votes)

18ವರ್ಷ ತುಂಬಿರುವ ಯುವಕ ಯುವತಿಯರು ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ತಹಶೀಲ್ದಾರ್ ಎಂ. ಶಿವಮೂರ್ತಿ ಮನವಿ...ಕೆ.ಆರ್.ಪೇಟೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಜಾಗೃತಿ ಜಾಥಾ ನಡೆಸಿ ಜನಸಾಮಾನ್ಯರಿಗೆ ಅರಿವು ಮೂಡಿಸಿದ ಬೂತ್ ಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕು ಕಛೇರಿಯ ಸಿಬ್ಬಂಧಿಗಳು...

ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಕೃಷ್ಣರಾಜಪೇಟೆ ತಾಲ್ಲೂಕು ಆಡಳಿತದ ವತಿಯಿಂದ ಮತದಾರರ ಪಟ್ಟಿಯ ಪರಿಷ್ಜರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ 18ವರ್ಷ ತುಂಬಿರುವ ಯುವಕ, ಯುವತಿಯರು ಹೊಸದಾಗಿ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ನೊಂದಾಯಿಸಲು ಹಾಗೂ ಮತದಾರರ ಪಟ್ಟಿಯಲ್ಲಿನ ವಿಳಾಸದ ವ್ಯತ್ಯಾಸ, ತಿದ್ದುಪಡಿ ಸೇರಿದಂತೆ ಇತರೆ ವಿಚಾರಗಳಿಗೆ ತಮ್ಮ ಸಮೀಪದ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಅಥವಾ ಬೂತ್ ಮಟ್ಟದ ಅಧಿಕಾರಿಗಳಿಗೆ ಅಗತ್ಯ ದಾಖಲಾತಿಗಳೊಂದಿಗೆ ಮನವಿ ಸಲ್ಲಿಸಬೇಕು ಎಂದು ತಹಶೀಲ್ದಾರ್ ಎಂ. ಶಿವಮೂರ್ತಿ ಮನವಿ ಮಾಡಿದರು... ಕೃಷ್ಣರಾಜಪೇಟೆ ಪಟ್ಟಣದ ಪ್ರವಾಸಿ ಮಂದಿರದ ಬಳಿಯಿಂದ ಎಂ.ಕೆ.ಬೊಮ್ಮೇಗೌಡ ವೃತ್ತದವರೆಗೆ ನಡೆದ ಜಾಗೃತಿ ಜಾಥಾದಲ್ಲಿ ತಹಶೀಲ್ದಾರ್ ಎಂ. ಶಿವಮೂರ್ತಿ, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಮೌಳಿ, ಪುರಸಭೆ ಮುಖ್ಯಾಧಿಕಾರಿ ಸತೀಶಕುಮಾರ್, ಸಿಡಿಪಿಓ ದೇವಕುಮಾರ್, ಬಿಇಓ ಎಸ್.ರೇವಣ್ಣ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು , ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೇಲ್ವಿಚಾರಕರು, ಬೂತ್ ಮಟ್ಟದ ಅಧಿಕಾರಿಗಳು, ಶಿಕ್ಷಕರು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಪುರಸಭೆ ಸಿಬ್ಬಂಧಿಗಳು ಹಾಗೂ ಕಂದಾಯ ಇಲಾಖೆಯ ನೌಕರರು ಜಾಥಾದಲ್ಲಿ ಭಾಗವಹಿಸಿದ್ದರು.. ‌‌

Last modified on Sunday, 01 September 2019 12:42
Rate this item
(0 votes)

ಮತ್ತೆ 'ಹುಚ್ಚಾ' ವೆಂಕಟ್​​ ರಂಪಾಟ... ಮಂಡ್ಯ ಜನರಿಂದ ಬಿತ್ತು ಗೂಸಾ!

ಹುಚ್ಚ ವೆಂಕಟ್ ಮಂಡ್ಯದಲ್ಲಿ ಮತ್ತೆ ತನ್ನ ರಂಪಾಟ ಮುಂದುವರಿಸಿದ್ದು ,ಸಾರ್ವಜನಿಕರಿಂದ ಗೂಸಾ ತಿಂದಿದ್ದಾನೆ.
ಮಂಡ್ಯ: ನಟ ಹುಚ್ಚ ವೆಂಕಟ್ ಪುಂಡಾಟ ಇಂದೂ ಮುಂದುವರೆದಿದ್ದು, ನಗರ ಹೊರವಲಯದ ಹೋಟೆಲ್ ಮುಂಭಾಗ ಹುಚ್ಚಾಟ ಮುಂದುವರೆಸಿ ಕಾರಿನ ಗಾಜು ಪುಡಿಪುಡಿ ಮಾಡಿದ್ದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಗೂಸಾ ಕೊಟ್ಟಿದ್ದಾರೆ.ಮಂಡ್ಯದ ಜ್ಯೋತಿ ಇಂಟರ್ ನ್ಯಾಷನಲ್ ಹೋಟೆಲ್ ಮುಂಭಾಗ ಘಟನೆ‌ ನಡೆದಿದ್ದು, ಹೋಟೆಲ್ ಮುಂಭಾಗ ನಿಂತಿದ್ದ ಕಾರ್ ಮೇಲೆ ಕಲ್ಲು ಎತ್ತು ಹಾಕಿ ಹುಚ್ಚಾಟ ಮುಂದುವರೆಸಿದ್ದಾನೆ. ಪಾಂಡವಪುರ, ಕೊಡುಗು, ಮೈಸೂರಿನಲ್ಲಿ ರಂಪಾಟ ನಡೆಸಿ ಇದೀಗ ಮತ್ತೆ ನಿನ್ನೆ ರಾತ್ರಿ ಕಂಠಪೂರ್ತಿ ಕುಡಿದು ಜ್ಯೋತಿ ಇಂಟರ್ ನ್ಯಾಷನಲ್ ಹೋಟೆಲ್​ನಲ್ಲೇ ಉಳಿದುಕೊಂಡಿದ್ದ ಎನ್ನಲಾಗಿದೆ.ಹುಚ್ಚ ವೆಂಕಟ್​ಗೆ ಮಂಡ್ಯ ಜನರಿಂದ ಗೂಸಾಇಂದು ಬೆಳಗ್ಗೆ ಹೋಟೆಲ್ ಮುಂಭಾಗ ಮತ್ತೆ ಪುಂಡಾಟ ಮಾಡಿ ಕಾರಿನ ಗಾಜು ಒಡೆದು ರಂಪಾಟ ಮಾಡಿದ್ದರಿಂದ ಸ್ಥಳೀಯರು, ಸಾರ್ವಜನಿಕರು ಗೂಸಾ ಕೊಟ್ಟಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಹುಚ್ಚ ವೆಂಕಟ್ ರಕ್ಷಣೆ ಮಾಡಿ ಬಳಿಕ ಕಾರಿನಲ್ಲಿ ಬೆಂಗಳೂರಿಗೆ ಕಳುಹಿಸಿ ಕೊಟ್ಟಿದ್ದಾರೆ.

Last modified on Sunday, 01 September 2019 12:42
Rate this item
(0 votes)

ಹೇಮಾವತಿ ಎಡದಂಡ ನಾಲಾ ಕಾಮಗಾರಿಯಲ್ಲಿ ಭಾರೀ ಗೋಲ್ ಮಾಲ್.. ಕಳಪೆ ಕೆಲಸ ನಡೆಸಿ ಸರ್ಕಾರದ ಹಣವನ್ನು ಕೊಳ್ಳೆ ಹೊಡೆದಿರುವ ಉಪ್ಪಾರ್ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತು ಮಾಡುವಂತೆ ಮಾಜಿಶಾಸಕ ಡಾ.ನಾರಾಯಣಗೌಡ ಆಗ್ರಹ.... ಹೇಮಾವತಿ ಎಡದಂಡ ನಾಲಾ ಆಧುನೀಕರಣ ಕಾಮಗಾರಿಯಲ್ಲಿ ಭಾರೀ ಗೋಲ್ ಮಾಲ್... ಕಳಪೆ ಕಾಮಗಾರಿ ನಡೆಸಿ ಕೋಟ್ಯಾಂತರ ರೂಪಾಯಿ ಹಣ ಗುಳುಂ ಮಾಡಿರುವ ಎಂಜಿನಿಯರ್ ಗಳು ಮತ್ತು ಗುತ್ತಿಗೆದಾರರು... ಗುಣಮಟ್ಟದ ಕಾಮಗಾರಿ ನಡೆಸದೇ ಕಳಪೆ ಗುಣಮಟ್ಟದ ಕಾಮಗಾರಿ ನಡೆಸಿ  400ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣವನ್ನು ನುಂಗಿಹಾಕಿರುವ ಗುತ್ತಿಗೆದಾರರು...

ಈ ಹಿಂದೆ ಕೃಷ್ಣರಾಜಪೇಟೆ ನಂ.3 ವಿಭಾಗದ ಕಾರ್ಯಪಾಲಕ ಅಭಿಯಂತರರಾಗಿ ಪ್ರಭಾರದಲ್ಲಿದ್ದ ಚನ್ನರಾಯಪಟ್ಟಣ ಸೂಪರಿಂಟೆಂಡೆಂಟ್ ಎಂಜಿನಿಯರ್ ಮೋಹನರಾಜ ಅರಸ್ ಹಗರಣದ ಸೂತ್ರದಾರಿ...800ಕೋಟಿ ರೂಪಾಯಿಗಳ ವೆಚ್ಚದ ನಾಲಾ ಆಧುನೀಕರಣ ಕಾಮಗಾರಿ ಗುತ್ತಿಗೆಯನ್ನು ಪಡೆದಿರುವ ಉಪ್ಪಾರ್ ಕಂಪನಿಯೇ ಅಧಿಕಾರಿಗಳನ್ನು ಒಳಹಾಕಿಕೊಂಡು ಕಳಪೆ ಕಾಮಗಾರಿ ನಡೆಸಿ ಹಗರಣ ನಡೆಸಿರುವ ಬಗ್ಗೆ ಸ್ಥಳೀಯ ರೈತಮುಖಂಡರು ಮತ್ತು ಜನಪ್ರತಿನಿಧಿಗಳ ಆಕ್ರೋಶ.... ಕಳಪೆ ಗುಣಮಟ್ಟದ ಮರಳು, ಎಂ ಸ್ಯಾಂಡ್, ಜಲ್ಲಿ, ಸಿಮೆಂಟ್ ಬಳಸಿಕೊಂಡು ವೈಬರೇಟರ್ ಅನ್ನು ಬಳಸದೇ ಕಾಂಕ್ರೀಟ್ ಹಾಕಿ ನಾಲಾ ಲೈನಿಂಗ್ ಮತ್ತು ತಳಪಾಯ ಹಾಕಿರುವ ಉಪ್ಪಾರ್ ಕಂಪನಿ...ತನಗೆ ಬೇಕಾದ, ಕಳಪೆ ಕೆಲಸವನ್ನು ಬೆಂಬಲಿಸುವ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿಕೊಂಡು ತನ್ನ ಕಂಪನಿಯ ಎಂಜಿನಿಯರ್ ಗಳಿಂದ ಎಂಬಿ ಬರೆಸಿ ಸಹಿ ಮಾಡಿಸಿಕೊಂಡು ಹಣವನ್ನು ಕೊಳ್ಳೆ ಹೊಡೆಯುತ್ತಿರುವ ಉಪ್ಪಾರ್ ಕಂಪನಿ ಹಾಗೂ ಇ.ಇ ಗಳಾಗಿದ್ದ ಜಯರಾಜ್ ಮತ್ತು ಮೋಹನರಾಜ ಅರಸ್ ಅವರ ವಿರುದ್ಧ ಕಾನೂನು ಕ್ರಮಜರುಗಿಸಿ ಸೇವೆಯಿಂದ ಅಮಾನತ್ತು ಮಾಡಿ ಸರ್ಕಾರದ ಹಣವನ್ನು ಕೊಳ್ಳೆ ಹೊಡೆಯುತ್ತಿರುವ ಉಪ್ಪಾರ್ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲು ಮಾಜಿಶಾಸಕ ಡಾ.ನಾರಾಯಣಗೌಡ ಆಗ್ರಹ....

Last modified on Sunday, 01 September 2019 12:12
Page 2 of 27

Visitors Counter

238011
Today
Yesterday
This Week
This Month
Last Month
All days
213
101
639
6247
8165
238011

Your IP: 34.239.170.244
2024-06-19 07:27

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles