35 ವರ್ಷದ ಮಹಿಳೆಯೊಬ್ಬಳನ್ನು ದುಷ್ಕರ್ಮಿಗಳು ಕೊಲೆ ಮಾಡಿ ರಸ್ತೆ ಬದಿಯಲ್ಲಿ

ಮಳವಳ್ಳಿ: 35 ವರ್ಷದ ಮಹಿಳೆಯೊಬ್ಬಳನ್ನು ದುಷ್ಕರ್ಮಿಗಳು ಕೊಲೆ ಮಾಡಿ ರಸ್ತೆ ಬದಿಯಲ್ಲಿ ಬಿಸಾಡಿ ಹೋಗಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಹುಲ್ಲಂಬಳ್ಳಿ ಗ್ರಾಮದ ಬಳಿ ನಡೆದಿದೆ.

ಟಿ.ನರಸೀಪುರಕ್ಕೆ ತೆರಳುವ ಮುಖ್ಯರಸ್ತೆ ಬದಿಯಲ್ಲಿ ಮೃತದೇಹದ ಮೇಲೆ ಒಕ್ಕಣೆ ಮಾಡಿದ ರಾಗಿ ಸಂಡು ಸುರಿದು ಹೋಗಿದ್ದು. ರಸ್ತೆಬದಿಯಲ್ಲಿ ಮೃತಳ ವೇಲ್ ಸಹ ಇದ್ದು , ಇದಲ್ಲದೆ ಶವದ ಪಕ್ಕ ಎರಡು ಕಲ್ಲುಗಳನ್ನು ಸಹ ಇಟ್ಟಿದ್ದು, ಯಾವರೀತಿ ನಡೆದಿದೆ ಎಂಬ ಸತ್ಯಾಂಶ ಪೊಲೀಸರ ತನಿಖೆಯಿಂದಲೇ ಹೊರಬೀಳಬೇಕಾಗಿದೆ . ಈ ಹಿಂದೆ ಚಿಕ್ಕಬಾಗಿಲು ಗ್ರಾಮದಲ್ಲಿ ವ್ಯಕ್ತಿನೊಬ್ಬನ ತಲೆಕಡಿದು ಪೊಲೀಸ್ ಠಾಣೆ ಗೆ ಬಂದಿದ್ದ ಆರೋಪಿಯ ಗ್ರಾಮದ ಪಕ್ಕದ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿದ್ದು, ಬೆಳಕವಾಡಿ ಪೊಲೀಸ ಸಬ್ ಇನ್ಸ್ ಪೆಕ್ಟರ್ ಉಮಾವತಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ

Share this article

About Author

Super User
Leave a comment

Write your comments

Visitors Counter

285088
Today
Yesterday
This Week
This Month
Last Month
All days
73
219
1461
4530
3051
285088

Your IP: 18.118.147.65
2025-05-09 06:34

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles