
Madhu
ಅಶ್ರಯ ಯೋಜನೆಯಡಿ ನಿವೇಶನ ಹಕ್ಕು ಪತ್ರ ವಿತರಣಾ ಸಮಾರಂಭ.
ಬೀರೇಶ್ವರ ದೇವಸ್ಥಾನದ ಹತ್ತಿರ ಸರ್ವೇ ನಂ 26,27 ರ ಆಶ್ರಯ ಯೋಜನೆಯಡಿ ಹಕ್ಕು ಪತ್ರ ನೀಡಿರುವ ಫಲಾನುಭವಿಗಳಿಗೆ ಪುರಸಭೆಯಿಂದ ಹಕ್ಕು ದಾಖಲಿಸಿ ನಮೂನೆ 3 ರನ್ನು ನೀಡುವ ಸಮಾರಂಭ .
ಮಳವಳ್ಳಿ: ಪಟ್ಟಣದ ಪುರಸಭೆ ಆವರಣದಲ್ಲಿ ಸರ್ವೇ ನಂ 26,27 ರ ಆಶ್ರಯ ಯೋಜನೆಯಡಿ ಹಕ್ಕು ಪತ್ರ ನೀಡಿರುವ ಫಲಾನುಭವಿಗಳಿಗೆ ಪುರಸಭೆಯಿಂದ ಹಕ್ಕು ದಾಖಲಿಸಿ ನಮೂನೆ 3 ರನ್ನು ನೀಡುವ ಸಮಾರಂಭ ಕಾರ್ಯಕ್ರಮವನ್ನು ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ನಿಗಮಮಂಡಳಿ ಅಧ್ಯಕ್ಷ ಹಾಗೂ ಶಾಸಕ ಡಾ. ಕೆ. ಅನ್ನದಾನಿ ಉದ್ಘಾಟಿಸಿ ಮಾತನಾಡಿ, ಕುಮಾರಸ್ವಾಮಿ ರವರನ್ನು ಮಂತ್ರಿ ಕೊಡಿ ಎಂದು ಕೇಳಿದೆ ಆದರೆ ಅವರು ದೇವರಾಜು ಅರಸು ನಿಗಮಮಂಡಳಿ ಅಧ್ಯಕ್ಷ ನೀಡಿದರು ಇದರಿಂದ ತಾಲ್ಲೂಕಿನಲ್ಲಿರುವ ಹಿಂದುಳಿದ ವರ್ಗಗಳ ಜನರನ್ನು ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು. ಕಳೆದ 10 ವರ್ಷಗಳ ಹಿಂದೆ ನಾನು ಶಾಸಕನಾಗಿದ್ದ ವೇಳೆಯಲ್ಲಿ ಹಂಚಿದ್ದ ಹಕ್ಕುಪತ್ರದ ಬಗ್ಗೆ ಯಾವುದೇ ಕ್ರಮಗೊಂಡಿಲ್ಲದ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು ಈ ದಿನ ನಿವೇಶನ ನೀಡುವುದಾಗಿ ನಮೂನೆ 3 ರನ್ನು ನೀಡುತ್ತಿದ್ದು, ಸದುಪಯೋಗ ಪಡಿಸಿಕೊಳ್ಳುವಂತೆ ಫಲಾನುಭವಿಗಳಿಗೆ ಕರೆ ನೀಡಿದರು. ನಮ್ಮ ದೋಸ್ತಿ ಕಾಂಗ್ರೆಸ್ ಪಕ್ಷದವರು ಮಂಡ್ಯದಲ್ಲಿ ನಡೆದ ಮುಖ್ಯಮಂತ್ರಿರವರು ಮಾಡಿದ 1300 ಕೋಟಿ ಚಾಲನೆ ಬೋಗಸ್ ಅಂತ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜನರಿಗೆ ಗೊತ್ತಿದೆ ನಾವು ಏನು ಕೆಲಸ ಮಾಡುತ್ತಿದ್ದೇವೆ, ನಾನು ಮೇಟಿ ಅಷ್ಟೇ ಸರ್ಕಾರದ ಅನುದಾನ ಬಂದೆ ಬರುತ್ತೆ ಅದನ್ನು ಜನರಿಗೆ ತಲುಪಿಸುತ್ತೇವೆ ಎಂದರು. ಮುಂದಿನದಿನಗಳಲ್ಲಿ ಸ್ಲಂ ಬೋರ್ಡ್ ನಿಂದ ಮನೆ ಕಟ್ಟಲು 500 ಮನೆಗಳ ನಿರ್ಮಾಣ ಮಾಡಲು ಮಂಜೂರುಯಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ 33 ಎಕರೆ ಜಮೀನನ್ನು ಫಲಾನುಭವಿಗಳಿಗೆ ಹಂಚಲಾಗುತ್ತದೆ ಪಟ್ಟಣದಲ್ಲಿ ಇನ್ನೂ ಎರಡುವರ್ಷಗಳಲ್ಲಿಪ್ರತಿಯೊಬ್ಬರಿಗೂ ನಿವೇಶನ ಹಂಚಿ, ನಿವೇಶನರಹಿತ ಪಟ್ಟಣ ಮಾಡಲಾಗುವುದು ಎಂದರು ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಶಾಸಕರು ಹಂಚಿದರು .ಇನ್ನೂ ಪುರಸಭೆ ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷ ರಿಯಾಜಿನ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯರು ಬಹುತೇಕ ಪಕ್ಷೇತರ ಸದಸ್ಯರ ಗೈರುಹಾಜರಿ ಎದ್ದುಕಾಣುತ್ತಿತ್ತು.
ಕಾರ್ಯಕ್ರಮ ದಲ್ಲಿ ಪುರಸಭೆ ಉಪಾಧ್ಯಕ್ಷೆ ಸುಮನಾಗೇಶ್,ಮುಖ್ಯಾಧಿಕಾರಿ ಗಂಗಾಧರ್,ಪುರಸಭೆ ಸದಸ್ಯರಾದ ಮೆಹಬೂಬ್ ಪಾಷ, ಚಿಕ್ಕರಾಜು, ಮಹೇಶ , ಸರೋಜಮ್ಮ, ರಾಜಣ್ಣ, ಸವಿತರಾಜು ನಾಗೇಶ ಸೇರಿದಂತೆ ಮತ್ತಿತ್ತರು ಇದ್ದರು
ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮ ಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ.
ನಮ್ಮ ಸರ್ಕಾರ ರೈತರ ಪರ ಸರ್ಕಾರ ರೈತರಿಗೆ ಸಕಾಲದಲ್ಲಿ ಸವಲತ್ತುಗಳ ಸಿಗುವಂತಾಗಬೇಕು ಅದಕ್ಕಾಗಿ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಸರಿಯಾಗಿ ಕೆಲಸ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಶಾಸಕ ಡಾ.ಕೆ ಅನ್ನದಾನಿ ಎಚ್ಚರಿಸಿದರು
ಮಳವಳ್ಳಿ: ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮ ಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ ರವರು ತಾಲ್ಲೂಕಿನ ರೈತರ ಆತ್ಮಹತ್ಯೆಯ ವಿವರವನ್ನು ಸಭೆ ಮಂಡಿಸಿದರು, ಇದೇ ಸಂದರ್ಭದಲ್ಲಿ ಚೊಟ್ಟನಹಳ್ಳಿ ಜಿ.ಪಂ ಸದಸ್ಯೆ ಸುಷ್ಮಾರಾಜು ರವರು ನಮ್ಮ ತಾಲ್ಲೂಕಿನ ಮಳೆ ಇಲ್ಲದೆ ಇದ್ದರೂ ಇನ್ನೂ ಸರ್ಕಾರ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿಲ್ಲ ಏಕೆ ಎಂದು ಪ್ರಶ್ನಿಸಿದರು ಇದಕ್ಕೂ ಉತ್ತರಿಸಿದ ಅಧಿಕಾರಿ ನಾವು ವರದಿ ನೀಡಿದ್ದೇವೆ ಆದರೂ ನಮ್ಮ ವರದಿಗೆ ಮನ್ನಣೆಯನ್ನು ನೀಡುವುದಿಲ್ಲ ಅವರು ಸೆಟಲೈಟ್ ವರದಿ ಆಧಾರದ ಮೇಲೆ ಬರಪೀಡಿತ ಘೋಷಣೆ ಮಾಡುತ್ತಾರೆ ಎಂದರು. ಶಾಸಕರು ಸಹ ನಾನು ಸರ್ಕಾರದ ಜೊತೆ ಮಾತನಾಡುವುದಾಗಿ ಭರವಸೆ ನೀಡಿದರು, ಇನ್ನೂ ಅಬಕಾರಿ ಇಲಾಖೆ ಅಧಿಕಾರಿಗೆ ಶಾಸಕರು ತರಾಟೆ ತೆಗೆದುಕೊಂಡು ನೀವು ತಾಲ್ಲೂಕಿನಲ್ಲಿ ಏನು ಕೆಲಸ ಮಾಡುತ್ತಿಲ್ಲ ತಾಲ್ಲೂಕಿನ ಹಳ್ಳಿಹಳ್ಳಿಯಲ್ಲೂ ಅಂಗಡಿಗಳಲ್ಲೂ ಮಧ್ಯ ಮಾರಾಟ ನಡೆಯುತ್ತಿದೆ ಇದನ್ನು ಕೂಡಲೇ ನಿಲ್ಲಿಸಬೇಕು ಇಲ್ಲದಿದ್ದರೆ ನಿಮ್ಮ ಮೇಲೆ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು. ಇನ್ನೂ ಶುದ್ದ ಕುಡಿಯುವ ನೀರು ವಿಷಯಕ್ಕೆ ಬರುತ್ತಿದ್ದಂತೆ ಜಿ.ಪಂ ಸದಸ್ಯೆ ಸುಷ್ಮಾರಾಜು ರವರು ಒಂದು ಕುಡಿಯುವ ನೀರಿನ ಘಟಕವನ್ನು ಎಷ್ಷು ಭಾರಿ ಉದ್ಘಾಟನೆ ಮಾಡುತ್ತಾರೆ ತಿಳಿಸಿದರು. ಮದ್ಯಪ್ರವೇಶ ಮಾಡಿದ ಶಾಸಕರು ಯಾವುದು ಆ ರೀತಿಯಾಗಿಲ್ಲ ಎಂದರು ಈ ಮಧ್ಯೆ ತಾ.ಪಂ ಅಧ್ಯಕ್ಷ. ನಾಗೇಶರವರು ಗುಂಡಾಪುರದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟನೆ ಗೆ ನನ್ನ ಆಹ್ವಾನಸಿಲ್ಲ ಏಕೆ ಎಂದಾಗ. ಇಂಜಿನಿಯರ್ ಸೋಮಶೇಖರ್ ರವರು ರಾತ್ರಿ ಕಾರ್ಯಕ್ರಮ ನಿಗದಿಯಾಯಿತು ಎಂದಾಗ. ನನಗೆ ಪೋನ್ ಮಾಡಬೇಕಾಗಿತ್ತು, ಶಿಷ್ಟಾಚಾರದ ಬಗ್ಗೆ ತಿಳಿದುಕೊಳ್ಳಿ ಎಂದು ತರಾಟೆ ತೆಗೆದುಕೊಂಡರು. ಶಾಸಕರು ಇನ್ನೂ ಮುಂದೆ ಈ ರೀತಿಯಾಗದೆ ನಾನು ನೋಡಿಕೊಳ್ಳತ್ತೇನೆ ಎಂದು ತಾ.ಪಂ ಅಧ್ಯಕ್ಷರನ್ನು ಸಮಾದಾನಪಡಿಸಿದರು.
ಸಭೆಯಲ್ಲಿ ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅದ್ಯಕ್ಷ ರವಿ, ಜಿ.ಪಂ ಸದಸ್ಯರಾದ ಚಂದ್ರಕುಮಾರ, ಸುಜಾತಸುಂದ್ರಪ್ಪ, ಜಯಕಾಂತ, ಸುಷ್ಮಾರಾಜು, ಸುಜಾತಪುಟ್ಟು, ತಾ.ಪಂ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ಮಾಧು, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ, ತಾ.ಪಂ ಇಒ ಸತೀಸ್, ತಹಸೀಲ್ದಾರ್ ಚಂದ್ರಮೌಳಿ ಸೇರಿದಂತೆ ಎಲ್ಲಾ ಇಲಾಖೆ ಅಧಿಕಾರಿಗಳು ಇದ್ದರು
ಪಾಕಿಸ್ತಾನದ ಬಾವುಟಕ್ಕೆ ಮುತ್ತಿಡುವ ಫೋಟೋ ಫೇಸ್ ಬುಕ್ ನಲ್ಲಿ ಶೇರ್.ಕಾನೂನಿನ ಕ್ರಮಕ್ಕೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ.
ಪಾಕಿಸ್ತಾನದ ಬಾವುಟಕ್ಕೆ ಮುತ್ತಿಡುವ ಫೋಟೋವನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ ಮುಸ್ಲಿಂ ಯುವಕ. ಕಾನೂನಿನ ಕ್ರಮಕ್ಕೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ.
ಕೃಷ್ಣರಾಜಪೇಟೆ : ಪಟ್ಟಣದ ಗುಜರಿ ವ್ಯಾಪಾರಿ ಆದ ಶಫಿ ಎಂಬ ಮುಸ್ಲಿಂ ಯುವಕ ಪಾಕಿಸ್ತಾನದ ಬಾವುಟಕ್ಕೆ ಮುತ್ತಿಡುವ ಫೋಟೋವನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡುವ ಮೂಲಕ ಪಟ್ಟಣದ ಅಶಾಂತಿ ನಿರ್ಮಾಣ ಮಾಡಿದ್ದಾನೆ ಎಂದು ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡಲಾಯಿತು .ಇದೇ ಸಮಯದಲ್ಲಿ ಮಾತನಾಡಿದ ಡಾಕ್ಟರ್ ಕೃಷ್ಣಮೂರ್ತಿ ಭಾರತ ಪಾಕಿಸ್ತಾನ ನಡುವೆ ಯುದ್ಧ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಆದರೆ ನಮ್ಮ ಭಾರತ ದೇಶದಲ್ಲಿ ಇದ್ದು ಈ ಶಫಿ ಎಂಬ ಹುಡುಗ ನೀಚ ಕೆಲಸ ಮಾಡಿದ್ದಾನೆ. ಪಾಕಿಸ್ತಾನದ ಧ್ವಜಕ್ಕೆ ಮುತ್ತನ್ನು ಕೊಡುವ ಫೋಟೋವನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿ ಪಟ್ಟಣದಲ್ಲಿ ಅಶಾಂತಿಯನ್ನು ಉಂಟು ಮಾಡಿದ್ದಾನೆ. ಇಂತಹ ವ್ಯಕ್ತಿಗಳನ್ನು ನಮ್ಮ ದೇಶದಿಂದ ಗಡಿಪಾರು ಮಾಡಿ ಪಾಕಿಸ್ತಾನಕ್ಕೆ ಕಳುಹಿಸಬೇಕು ಇಂತಹ ವ್ಯಕ್ತಿಯ ಮೇಲೆ ಕಾನೂನಿನ ಕ್ರಮ ಕೈಗೊಂಡಿ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಹೇಳಿದರು.
ನಂತರ ಮಾತನಾಡಿದ ಜಯ ಕರ್ನಾಟಕ ಅಧ್ಯಕ್ಷ ರಾದ ಕುಮಾರ್ ಅವರು ಕುಡಿಯಲು ನೀರು ತಿನ್ನಲು ಅನ್ನ ಬದುಕಲು ಭಾರತ ದೇಶ ಬೇಕು . ಇಂತಹ ವ್ಯಕ್ತಿಗಳನ್ನು ಭಾರತ ದೇಶದಿಂದ ಗಡಿಪಾರು ಮಾಡಬೇಕು ಎಂದು ನರೇಂದ್ರ ಮೋದಿಯವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ .ಎಂದು ಆಕ್ರೋಶ ವ್ಯಕ್ತಪಡಿಸಿದರು .10ನಿಮಿಷಗಳ ಕಾಲ ಠಾಣೆಯ ಮುಂದೆ ಕುಳಿತು ಪಾಕಿಸ್ತಾನ ವಿರುದ್ಧ ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಆಟೋ ಚಾಲಕರ ಅಧ್ಯಕ್ಷರಾದ ವಾಸು , ಅವರು ಜಯ ಕರ್ನಾಟಕ ಅಧ್ಯಕ್ಷರಾದ ಕುಮಾರ್ ,ಡಾಕ್ಟರ್ ಕೃಷ್ಣಮೂರ್ತಿ , ಇನ್ನು ನೂರಾರು ಪ್ರತಿಭಟನಾಕಾರರು ಹಾಜರಿದ್ದರು ..
ಕಾಂಗ್ರೆಸ್-ಜೆಡಿಎಸ್ ಮೈತ್ರಿಯ 23-24 ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಕನ್ನಡಿಗರು ಪ್ರಧಾನಿ.... ಸಿ.ಎಂ. ಕುಮಾರಸ್ವಾಮಿ.
ಮಂಡ್ಯ: ನಗರದ ಬಾಲಕರ ಸರ್ಕಾರಿ ಕಾಲೇಜು ಮೈದಾನದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅಸಮಾಧಾನ ಹೊರಹಾಕಿದರು. ಸಾಂಸ್ಕೃತಿಕ ಕಾರ್ಯಕ್ರಮ ಬಿಟ್ಟು ಇಷ್ಟು ದೊಡ್ಡ ಅಭಿವೃದ್ಧಿ ಆಗಲಿಲ್ಲ. ಅಂದು ನಾನೂ ಕಾರ್ಯಕ್ರಮಕ್ಕೆ ಬಂದಿದ್ದೆ. ಆದರೆ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿಲ್ಲ ಎಂದರು.ನಿಮ್ಮಗಳ ಋಣ ನಮ್ಮ ಮೇಲೆ ಇದೆ. ಹಾಗಾಗಿ ಜಿಲ್ಲೆಯ ಅಭಿವೃದ್ಧಿಗೆ ನಾನು ಸಿದ್ಧ. ಇನ್ನೂ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸುವುದಾಗಿ ತಿಳಿಸಿದರು. ಮೈಶುಗರ್ ವಿಚಾರವಾಗಿ 450 ಕೋಟಿ ವೆಚ್ಚದಲ್ಲಿ ಹೊಸ ಕಾರ್ಖಾನೆ ಮಾಡಲಾಗುವುದು. ಏಪ್ರಿಲ್- ಮೇ ತಿಂಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.ಪ್ರಧಾನಿ ಬೆಳಗ್ಗೆ ಎದ್ದ ತಕ್ಷಣ ಬಣ್ಣದ ಮಾತುಗಳನ್ನು ಬಿಡ್ತಾರಲ್ಲ, ಹಾಗೇ ನಾನು ಬಿಡೋದಿಲ್ಲ. ಸಾಲ ಮನ್ನಾ ಹಣ ಬಿಡುಗಡೆಯಾಗಿದೆ. ಖಜಾನೆಯಲ್ಲಿ ಇನ್ನೂ 6 ಸಾವಿರ ಕೋಟಿ ಇಟ್ಟಿದ್ದೇನೆ. ಬ್ಯಾಂಕ್‌ಗಳಲ್ಲಿ ರೈತರು ಅಡಮಾನ ಇಟ್ಟಿರುವ ಆಭರಣಗಳ ರಕ್ಷಣೆ ಹಾಗೂ ವಾಪಸ್ ರೈತರಿಗೆ ಸಿಗುವಂತೆ ಮಾಡಲು ರಾಜ್ಯ ಸರ್ಕಾರದಿಂದ ಹೊಸ ಯೋಜನೆ ರೂಪಿಸಲಾಗಿದೆ. ಈ ವರ್ಷದಿಂದ ಯೋಜನೆ ಜಾರಿಗೆ ಬರಲಿದೆ ಎಂದು ಸಿಎಂ ಘೋಷಣೆ ಮಾಡಿದರು.ಮುಂದಿನ ಲೋಕಸಭಾ ಚುನಾವಣೆ ಅಷ್ಟು ಸುಲಭದ ಚುನಾವಣೆ ಅಲ್ಲ. ನೀವು ಕೊಟ್ಟ ಶಕ್ತಿಯಿಂದ ದೇವೇಗೌಡರು ಪ್ರಧಾನಿ ಆದರು. ಈ ನಾಡಿನಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ 23-24 ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಕನ್ನಡಿಗರು ಮತ್ತೆ ಪ್ರಧಾನಿ ಆಗುವ ಸಾಧ್ಯತೆ ಇದೆ ಎಂದರು.
ಉಗ್ರರನ್ನು ಮಟ್ಟಹಾಕಿದ್ದಕ್ಕೆ ಜಯಕರ್ನಾಟಕ ಸಂಘಟನೆ ವತಿಯಿಂದ ಸಿಹಿಹಂಚುವ ಮೂಲಕ ಸಂಭ್ರಮಾಚರಣೆ.
ಪುಲ್ವಾಮ ದಾಳಿಗೆ ಪ್ರತಿಕಾರವಾಗಿ ನಮ್ಮಭಾರತೀಯ ಸೈನಿಕರು ಪ್ರತಿದಾಳಿ ಉಗ್ರರನ್ನು ಮಟ್ಟಹಾಕಿದ್ದಕ್ಕೆ ಜಯಕರ್ನಾಟಕ ಸಂಘಟನೆ ವತಿಯಿಂದ ಸಿಹಿಹಂಚುವ ಮೂಲಕ ಸಂಭ್ರಮಾಚರಣೆ.
ಮಳವಳ್ಳಿ: ಪಟ್ಟಣದಲ್ಲಿ ಜಯಕರ್ನಾಟಕ ಸಂಘಟನೆ ವತಿಯಿಂದ ಪುಲ್ವಾಮ ದಾಳಿಗೆ ಪ್ರತಿಕಾರವಾಗಿ ನಮ್ಮಭಾರತೀಯ ಸೈನಿಕರು ಪ್ರತಿದಾಳಿ ಉಗ್ರರನ್ನು ಮಟ್ಟಹಾಕಿದ್ದಕ್ಕೆ ಸಂಭ್ರಮಾಚರಣೆ ಮಾಡಲಾಯಿತು. ಮಳವಳ್ಳಿ ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಮುಂಭಾಗ ದಿ. ಯೋಧಗುರು ರವರ ಭಾವಚಿತ್ರವಿಟ್ಟು ಭಾರತ್ ಮಾತೆಗೆ ಜೈಕಾರ ಹಾಗೂ ಪ್ರದಾನಿ ಮೋದಿ ರವರ ದಿಟ್ಟ ನಿರ್ದಾರಕ್ಕೆ ಸಲಾಮ್ ಹೊಡೆದರು . ಇದೇ ಸಂದರ್ಭದಲ್ಲಿ ಪುರಸಭೆ ಸದಸ್ಯ ಮೆಹಬೂಬ್ ಪಾಷ ಮಾತನಾಡಿ, ದೇಶದ 125 ಕೋಟಿ ಜನರು ಒಗ್ಗಾಟಿನ ದೇಶವನ್ನು ಉಳಿಸಿಕೊಳ್ಳುತ್ತೇವೆ. ಪಾಕಿಸ್ತಾನ ನಮ್ಮದೇಶವನ್ನು ಕೆಣಕಿದರೆ ಪಾಕಿಸ್ತಾನವನ್ನು ಸಂಪೂರ್ಣ ನಾಶ ಪಡಿಸುವುದಾಗಿ ಎಚ್ಚರಿಸಿದರು . ಇನ್ನೂ ತಾಲ್ಲೂಕು ಅಧ್ಯಕ್ಷ ರಮೇಶ, ಮಾತನಾಡಿ, ದೇಶ ವನ್ನು ಕಾಯುತ್ತಿರುವ ನಮ್ಮ ಯೋದರಿಗೆ ನಮ್ಮಸಲಾಮ್ ಪಾಕಿಸ್ತಾನದ ಉಗ್ರರ ಯಾವುದೇ ಮುನ್ಸೂಚನೆ ನೀಡದೆ ನಮ್ಮ ಯೋದರನ್ನು ಬಲಿ ತೆಗೆದುಕೊಂಡು ಇದಕ್ಕೆ ಪ್ರತಿಕಾರವಾಗಿ ನಮ್ಮಯೋದರು 450 ಕ್ಕೂ ಹೆಚ್ಚು ಉಗ್ರರನ್ನು ನಾಶ ಮಾಡಿದ್ದಾರೆ. ಇದಲ್ಲದೆ ನಮ್ಮ ಪ್ರದಾನ ಮಂತ್ರಿ ನರೇಂದ್ರಮೋದಿರವರ ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಿಹಿಹಂಚುವ ಮೂಲಕ ಸಂಭ್ರಮ ಪಟ್ಟರು .
ಈ ಸಂಧರ್ಬದಲ್ಲಿ ಉಪಾಧ್ಯಕ್ಷ ರಾದ ಕಲ್ಲೇಶ್, ವೆಂಕಟೇಶ್, ಚಂದ್ರಶೇಖರ್, ತಾಲ್ಲೂಕು ಕಾರ್ಯದರ್ಶಿ ಗುರುಸಿದ್ದಯ್ಯ, ಪ್ರಧಾನಕಾರ್ಯದರ್ಶಿ,ತೇಜೇಂದ್ರಕುಮಾರ್, ಪ್ರಸನ್ನ, ಪ್ರದೀಪ್ , ತಾಲ್ಲೂಕು ಯುವಜೆಡಿಎಸ್ ಅಧ್ಯಕ್ಷ ಶ್ರೀಧರ್, ರಾಜು ಸಂಚಾಲಕ ಶಶಿ, ಮುಹಿನ್ ಶರೀಷ್ , ಆಟೋಘಟಕದ ಎಲ್ಲಾ ಸದಸ್ಯರು ಹಾಜರಿದ್ದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಗ್ಗ ಜಗ್ಗಾಟ ಸ್ಫರ್ದೆ .
ನಮ್ಮಕಾವೇರಿ ಟಿವಿ ಜನವಾದಿ ಮಹಿಳಾ ಸಂಘಟನೆ ಮತ್ತು ಪ್ರಗತಿ ಪರ ಎಲ್ಲಾ ಮಹಿಳಾ ಸಂಘಟನೆ ಇವರ ಸಂಯುಕ್ತಾಶ್ರಯದಲ್ಲು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ತಾಲ್ಲೂಕು ಮಟ್ಟದ ಹಗ್ಗ ಜಗ್ಗಾಟ ಸ್ಫರ್ದೆ ಕಾರ್ಯಕ್ರಮ.
ಮಳವಳ್ಳಿ: ಪಟ್ಟಣದ ಭಕ್ತಕನಕದಾಸ ಕ್ರೀಡಾಂಗಣ ದಲ್ಲಿ ನಮ್ಮಕಾವೇರಿ ಟಿವಿ ಜನವಾದಿ ಮಹಿಳಾ ಸಂಘಟನೆ ಮತ್ತು ಪ್ರಗತಿ ಪರ ಎಲ್ಲಾ ಮಹಿಳಾ ಸಂಘಟನೆ ಇವರ ಸಂಯುಕ್ತಾಶ್ರಯದಲ್ಲು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ತಾಲ್ಲೂಕು ಮಟ್ಟದ ಹಗ್ಗ ಜಗ್ಗಾಟ ಸ್ಫರ್ದೆ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮ ವನ್ನು ತಹಸೀಲ್ದಾರ್ ಚಂದ್ರಮೌಳಿ ಚಾಲನೆ ನೀಡಿ ಮಾತನಾಡಿ , ಗ್ರಾಮೀಣ ಕ್ರೀಡೆಗಳು ಇತ್ತೀಚೆಗೆ ಪ್ರಗತಿಯಾಗುತ್ತಿದೆ ಅದರಲ್ಲೂ ಕ್ರೀಡೆಗಳಲ್ಲಿ ಆಸಕ್ತಿ ತೋರುತ್ತಿರುವುದು ಸಂತೋಷ ಸಂಗತಿ, ಮಹಿಳೆಯರು ಮನೆ ಕೆಲಸಕ್ಕೆ ಮಾತ್ರ ಸೀಮಿತ ವಾಗಿರದೆ ಇಂತಹ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದರು . ತಾಲ್ಲೂಕಿನ ವಿವಿದ ಗ್ರಾಮಗಳಿಂದ ಸುಮಾರು10 ತಂಡಗಳು ಭಾಗವಹಿಸಿದ್ದೆವು.
ಕಾರ್ಯಕ್ರಮದಲ್ಲಿ ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ದೇವಿ, ಸುಶೀಲ , ಸುನೀತಾ,ಮಂಜುಳ .ಎನ್ .ಎಲ್ ಭರತ್ ರಾಜ್, ನಾಗರಾಜು ಸೇರಿದಂತೆ ಮತ್ತಿತ್ತರು ಇದ್ದರು.
ಮಳವಳ್ಳಿ ಕ್ಷೇತ್ರದ ಅಭಿವೃದ್ದಿ ಗೆ 1300 ಕೋಟಿ ಅನುದಾನ ಸುಳ್ಳು... ಕಾಂಗ್ರೆಸ್ ಅಧ್ಯಕ್ಷ ಕೆ.ಜೆ ದೇವರಾಜು ಆರೋಪ..
ಮಂಡ್ಯದಲ್ಲಿ ನಾಳೆ ನಡೆಯಲಿರುವ ಮುಖ್ಯಮಂತ್ರಿ ಕಾರ್ಯಕ್ರಮ ದಲ್ಲಿ ಮಳವಳ್ಳಿ ಕ್ಷೇತ್ರದ ಅಭಿವೃದ್ದಿ ಗೆ 1300 ಕೋಟಿ ಅನುದಾನ ಕಾಮಗಾರಿ ಮಾಡುತ್ತಿರುವುದು ಡೋಳ್ಳು ಹಾಗೂ ಸಣ್ಣತನದ ರಾಜಕೀಯವನ್ನು ಶಾಸಕರು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮಳವಳ್ಳಿ: ಪಟ್ಟಣದ ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜೆ ದೇವರಾಜು ನಾಳೆ ನಡೆಯಲಿರುವ ಈ ಕ್ಷೇತ್ರ ಕಾಮಗಾರಿಯೂ ಬಹುತೇಕ ಶೇ 80 ಭಾಗ ಈಗಾಗಲೇ ಶಂಕುಸ್ಥಾಪನೆಯಾಗಿದ್ದು ಮತ್ತೆ ಅದನ್ನೇ ಇನ್ನೊಂದು ಬಾರಿ ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಇದು ಮುಖ್ಯಮಂತ್ರಿ ಗಳಿಗೆ ಶೋಭೆತರುವುದಿಲ್ಲ ಎಂದರು. ಇನ್ನೂ ಶಾಸಕರಿಗೆ ಡಿಪಿಆರ್ ಎನ್ನುವ ಅರ್ಥವೇ ಗೊತ್ತಿಲ್ಲದ ರೀತಿ ನಡೆದುಕೊಳ್ಳುತ್ತಿದ್ದಾರೆ ಡಿಟೇಲ್ ಪ್ರಾಜೆಕ್ಟ್ ರಿಪೋರ್ಟ್ ಎಂದು ಹಲಗೂರು ಹೋಬಳಿಗೆ ನೀರಾವರಿ ಯೋಜನೆಗೆ 600 ಕೋಟಿ ರೂ ಯೋಜನೆ ಡಿ.ಪಿ.ಆರ್ ಹಂತದಲ್ಲಿದೆ ಎಂದು ಹೇಳಿದ್ದು ಅದನ್ನು ಚಾಲನೆ ಮಾಡುವುದಾಗಿ ಜನತೆಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ . ಇದಲ್ಲದೆ ಲೋಕೋಪಯೋಗಿ ಇಲಾಖೆಯಲ್ಲಿ ಕ್ಷೇತ್ರಕ್ಕೆ ರಸ್ತೆಗೆ 111ಕೋಟಿ ಹಣ ಬಿಡುಗಡೆ ಎಂದು ಹೇಳಿದ್ದಾರೆ ಯಾವ ರಸ್ತೆ ಗೆ ಎಂಬುದು ಇದಕ್ಕೆ ಅಪ್ರುವಲ್ ತೆಗೆದುಕೊಂಡಿದ್ದಾರೆ ಎಂಬುವುದನ್ನು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿ ದರು. ಇನ್ನೂ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಾಗೇಶ್ ಮಾತನಾಡಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ನನಗೂ ಸಹ ಕಾರ್ಯಕ್ರಮದ ಅಹ್ವಾನ ಪತ್ರಿಕೆ ನೀಡಲಿಲ್ಲ ಎಂದು ಆರೋಪಿಸಿದರು ಹೆಸರಿಗೆ ದೋಸ್ತಿ ಸರ್ಕಾರ ಎಂದು ಹೇಳುವ ಇವರು ದೋಸ್ತಿ ಗಳಾದ ಕಾಂಗ್ರೆಸ್ ಪಕ್ಷವನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮಾಧು, ಪುರಸಭೆ ಸದಸ್ಯ ಕಿರಣ್ ಶಂಕರ್, ಡಿ.ಶಿವಕುಮಾರ್,ಮೆಕದೂಬ್ ಪಾಷ, ದೊಡ್ಡಯ್ಯ, ತಾ.ಪಂ ಮಾಜಿ ಅದ್ಯಕ್ಷ ಕುಂದೂರುಪ್ರಕಾಶ,ಬಸವರಾಜು ಸೇರಿದಂತೆ ಮತ್ತಿತ್ತರು ಇದ್ದರು.
ಹುತಾತ್ಮ ಯೋಧ ರ ಪುಣ್ಯ ಸ್ಮರಣೆ.ಸಾವಿರಾರು ಜನರಿಗೆ ಅನ್ನಸಂತರ್ಪಣೆ.
ಹುತಾತ್ಮ ಯೋಧರ ಪುಣ್ಯ ಸ್ಮರಣೆ ಸಾವಿರಾರು ಜನರಿಗೆ ಅನ್ನಸಂತರ್ಪಣೆ.
ಮಳವಳ್ಳಿ: ಇತ್ತೀಚಿಗೆ ಜಮ್ಮು ಕಾಶ್ಮೀರದ ಬಳಿ 48 ಯೋಧ ಹುತಾತ್ಮ ರಲ್ಲಿ ಮಂಡ್ಯ ಜಿಲ್ಲೆ ಯ ಗುಡಿಗೆರೆ ಗ್ರಾಮದ ಹೆಚ್ ಗುರು ರವರ 11 ದಿನದ ಕಾರ್ಯವನ್ನು ಮಡಿವಾಳ ಜನಾಂಗದವತಿಯಿಂದ ಮಳವಳ್ಳಿ ಪಟ್ಟಣದ ಅನಂತರಾಂ ವೃತ್ತ ದಲ್ಲಿ ನಡೆಸಲಾಯಿತು .ಗುರು ರವರು ಆತ್ಮಕ್ಕೆ ಶಾಂತಿಕೋರಿ ಮೌನ ಅಚರಣೆ ಮಾಡಿ ನಂತರ ಸಾರ್ವಜನಿಕ ರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಮಡಿವಾಳ ಜನಾಂಗ ಸಂಘದ ಅಧ್ಯಕ್ಷ ಪ್ರಸನ್ನ ಮಾತನಾಡಿ , ನಮ್ಮ ಜಿಲ್ಲೆಯವರು ದೇಶ ಕ್ಕಾಗಿ ಪ್ರಾಣತ್ಯಾಗ ಮಾಡಿದ್ದು , ಜಿಲ್ಲೆಯ ಪ್ರತಿಯೊಬ್ಬರು ಇವರಂತೆ ಆದರ್ಶವನ್ನು ರೂಡಿಸಿಕೊಳ್ಳುವಂತೆ ಕರೆ ನೀಡಿದರು . ಇದೇ ಸಂದರ್ಭದಲ್ಲಿ ಸಾರ್ವಜನಿಕ ರಿಗೆ ಸಿಹಿ ಹಂಚುವ ಜೊತೆಗೆ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಸಲಾಯಿತು .
ಕಾರ್ಯಕ್ರಮ ದಲ್ಲಿ ಪುರಸಭೆ ಸದಸ್ಯ ಕೃಷ್ಣ,, ಸಿದ್ದಾಪ್ಪಾಜಿ, ಶಿವಶಂಕರ, ಮರಿಸ್ವಾಮಿ, ಶಿವಲಿಂಗು ಸೇರಿದಂತೆ ಮತ್ತಿತ್ತರು ಇದ್ದರು.
ಜೆಡಿಎಸ್ ನ 9 ಶಾಸಕರಿಗೆ ನಿಗಮ ಮಂಡಳಿ . ಮಳವಳ್ಳಿ ಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಂಭ್ರಮ
ಜೆಡಿಎಸ್ ನ 9 ಶಾಸಕರಿಗೆ ನಿಗಮ ಮಂಡಳಿ . ಮಳವಳ್ಳಿ ಯಲ್ಲಿ ಕಾರ್ಯಕರ್ತರ ಪಟಾಕಿ ಸಿಡಿಸಿ ಸಂಭ್ರಮ .
ಮಳವಳ್ಳಿ: ಜೆಡಿಎಸ್ ನ 9 ಶಾಸಕರಿಗೆ ನಿಗಮ ಮಂಡಳಿಗಳಿಗೆ ನೇಮಕ ಮಾಡಿದ ಹಿನ್ನೆಲೆ. ಮಳವಳ್ಳಿ ಕ್ಷೇತ್ರದ ಶಾಸಕ ಡಾ.ಕೆ ಅನ್ನದಾನಿ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕವಾದ ಹಿನ್ನಲೆಯಲ್ಲಿ ಮಳವಳ್ಳಿ ಪಟ್ಟಣದ ಅನಂತಾ ರಾಂ ವೃತ್ತ ದಲ್ಲಿ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿದರು. ಇದೇ ಸಂದರ್ಭದಲ್ಲಿ ಶಾಸಕ ಡಾ.ಕೆ ಅನ್ನದಾನಿ ರವರನ್ನು ಕಾರ್ಯಕರ್ತರು ಹಾರ ಹಾಕಿ ಸಿಹಿ ತಿನ್ನಿಸುವ ಮೂಲಕ ಅಭಿನಂದಿಸಿದರು. ಅಭಿನಂದನೆ ಸ್ವೀಕರಿಸಿದ ಶಾಸಕ ಡಾ. ಕೆ ಅನ್ನದಾನಿ ಮಾತನಾಡಿ, ಮಾಧ್ಯಮ ಮೂಲಕ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ರಾಗಿ ನೇಮಕ ವಾಗಿರುವ ಬಗ್ಗೆ ತಿಳಿದಿದ್ದು ,ಈ ಕ್ಷೇತ್ರ ಸಾಕಷ್ಟು ಹಿಂದುಳಿದ ತಾಲ್ಲೂಕಾಗಿದೆ ಇದಲ್ಲದೆ ನೀರಾವರಿಯಲ್ಲೂ ಸಾಕಷ್ಟು ಹಿಂದುಳಿದ್ದಿದ್ದು. ಈ ಹಿನ್ನಲೆಯಲ್ಲಿ ನಾಳೆ ಜಿಲ್ಲೆಯಲ್ಲಿ ನಡೆಯಲಿರುವ ಮುಖ್ಯಮಂತ್ರಿಗಳ ಕಾರ್ಯಕ್ರಮ ದಲ್ಲಿ ಜಿಲ್ಲೆಗೆ ಹೆಚ್ಚು ಅದರಲ್ಲೂ ಮಳವಳ್ಳಿ ಕ್ಷೇತ್ರಕ್ಕೆ ನೀಡಿದ್ದು, ಮುಖ್ಯಮಂತ್ರಿ ಗೆ ಅಭಿನಂದನೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಹಿಂದುಳಿದ ತಾಲ್ಲೂಕುಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು.
ಉಳಿದ ಜೆಡಿಎಸ್ ಶಾಸಕರು: ಶಿವಲಿಂಗೇಗೌಡ - ಗೃಹಮಂಡಳಿ ,ಸತ್ಯನಾರಾಯಣ-ರಾಜ್ಯ ರಸ್ತೆಸಾರಿಗೆ ನಿಗಮ ,ಗೌರಿಶಂಕರ್-ಎಂಎಸ್ಐಎಲ್ ,ನಾಗನಗೌಡ- ಕೊಳಗೇರಿ ಮಂಡಳಿ ,ವೆಂಕಟಪ್ಪನಾಯಕ - ಪ್ರವಾಸೋದ್ಯಮ ಮಹದೇವ್ - ಕೈಗಾರಿಕಾ ನಿಗಮ ,ಅನ್ನದಾನಿ - ಅರಸು ಅಭಿವೃದ್ಧಿ ನಿಗಮ ,ಜಪ್ರೂಲ್ ಖಾನ್ - ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ,ನಿಸರ್ಗ ನಾರಾಯಣಸ್ವಾಮಿ - ವಿಮಾನ ನಿಲ್ದಾಣ ಪ್ರಾಧಿಕಾರ
ಟ್ಯಾಂಕರ್ ಡಿಕ್ಕಿ ಪಾದಚಾರಿ ಸ್ಥಳದಲ್ಲೆ ಸಾವು.
ಪಾದಚಾರಿಗೆ ಟ್ಯಾಂಕರ್ ಡಿಕ್ಕಿ ಪಾದಚಾರಿ ಸ್ಥಳದಲ್ಲೆ ಸಾವು.
ವಿಜಯಪುರ: ವಿಜಯಪುರ ನಗರದ ವಜ್ರಹನುಮಾನ ರಸ್ತೆಯ ಬಳಿ ಪಾದಚಾರಿಗೆ ಟ್ಯಾಂಕರ್ ವಾಹನ ಡಿಕ್ಕಿ ಪಾದಚಾರಿ ಸ್ಥಳದಲ್ಲೆ ಸಾವು .ವಿಜಯಪುರದ ಜಿಲ್ಲೆಯ ಕಾರಜೋಳ ಗ್ರಾಮದ ನಿವಾಸಿ ಪರಸಪ್ಪ ಹೊನ್ನಿಹಳ್ಳಿ 37 ಸ್ಥಳದಲ್ಲೆ ಸಾವು.ಟ್ಯಾಂಕರ್ ಬಿಟ್ಟು ಚಾಲಕ ಪರಾರಿ.ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.